attack Archives - Good News 24x7 https://www.goodnews24x7.com/tag/attack/ Kannada Wed, 24 Jun 2026 07:49:48 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg attack Archives - Good News 24x7 https://www.goodnews24x7.com/tag/attack/ 32 32 ಏಕಾಏಕಿ ಚಿರತೆ ದಾಳಿ, ಆದಿವಾಸಿ ಮಹಿಳೆ ಬದುಕಿದ್ದೇ ಪವಾಡ! https://www.goodnews24x7.com/a-tribal-woman-miraculously-survived-a-leopard-attack/ Wed, 24 Jun 2026 07:49:48 +0000 https://www.goodnews24x7.com/?p=9652 ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಹಾಡಿಯಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿದ್ದು ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಜೂನ್​​ 24,ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳ ಉಪಟಳ ಮಿತಿ ಮೀರಿದ್ದು, ಕಾಡಂಚಿನ ಗ್ರಾಮಗಳ ಜನರ…

The post ಏಕಾಏಕಿ ಚಿರತೆ ದಾಳಿ, ಆದಿವಾಸಿ ಮಹಿಳೆ ಬದುಕಿದ್ದೇ ಪವಾಡ! appeared first on Good News 24x7.

]]>

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಹಾಡಿಯಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿದ್ದು ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಜೂನ್​​ 24,ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳ ಉಪಟಳ ಮಿತಿ ಮೀರಿದ್ದು, ಕಾಡಂಚಿನ ಗ್ರಾಮಗಳ ಜನರ ಬದುಕೇ ದುಸ್ತರವಾಗಿ ಮಾರ್ಪಟ್ಟಿದೆ. ಜನವಸತಿ ಪ್ರದೇಶಗಳಿಗೆ ಮೇಲಿಂದ ಮೇಲೆ ವನ್ಯ ಜೀವಿಗಳು ಲಗ್ಗೆ ಇಡುತ್ತಿರವ ಕಾರಣಕ್ಕೆ ಜೀವ ಭಯದಲ್ಲಿಯೇ ಜನ ಬದುಕುವಂತಾಗಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದ ಆನೆಹೊಲ ಹಾಡಿಯಲ್ಲಿ ಏಕಾಏಕಿ ಚಿರತೆ ದಾಳಿ ನಡೆಸಿದ್ದು, ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಪವಾಡ ಎಂಬಂತೆ ಜೀವ ಉಳಿಸಿಕೊಂಡಿದ್ದಾಳೆ.

ಕಳೆದ 6 ತಿಂಗಳಿಂದ ಮಲೆ ಮಹದೇಶ್ವರ ಬೆಟ್ಟದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಚಿರತೆ ದಾಳಿ ಪ್ರಕರಣಗಳು ನಡೆಯುತ್ತಿವೆ. ಘಟನೆಗಳಿಂದ ಹಾಡಿಯ ನಿವಾಸಿಗಳು ಮತ್ತು ಮಾದಪ್ಪನ ಭಕ್ತರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಮಲೆ ಮಹದೇಶ್ವರ ವನ್ಯಜೀವಿಧಾಮ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅರಣ್ಯ ಸಿಬ್ಬಂದಿಗೆ ಚೆಲ್ಲಾಟ ಆದಿವಾಸಿ ಸೋಲಿಗರಿಗೆ ಪ್ರಾಣ ಸಂಕಟ!

ಮಲೆ ಮಹದೇಶ್ವರ ವನ್ಯಜೀವಿಧಾಮ ಅರಣ್ಯ ಸಿಬ್ಬಂದಿ ನಡೆಗೆ ಭಾರಿ ಆಕ್ರೋಶ ಕೂಡ ಕೇಳಿಬಂದಿದೆ. ಬೇರೆಡೆ ಸೆರೆ ಹಿಡಿದ ಚಿರತೆಯನ್ನ ಪಾಲಾರ್ ಕಾಡಿಗೆ ತಂದು ಬಿಡಲಾಗುತ್ತಿದೆ. ಮಾದಪ್ಪನ ಬೆಟ್ಟದಲ್ಲಿ ಪಾದಯಾತ್ರಿಯನ್ನ ಕೊಂದು ಹಾಕಿದ್ದ ನರಭಕ್ಷಕ ಚಿರತೆಯನ್ನು ಸೆರೆ ಹಿಡಿದು ಕಾಲರ್ ಐಡಿ ಅಳವಡಿಸಿದ್ದ ಅರಣ್ಯ ಸಿಬ್ಬಂದಿ ಅದನ್ನು ಮತ್ತೆ ಪಾಲಾರ್ ಹಾಗೂ ಪೊನ್ನಾಚಿ ಕಾಡಿನ ಮಧ್ಯೆ ಬಿಟ್ಟಿದ್ದರು. ಇದೇ ಕಾಡು ಪ್ರದೇಶದಲ್ಲಿ ಹಾಡಿಗಳಿದ್ದು, ಹಸು, ಮೇಕೆ ಹಾಗೂ ಜಾನುವಾರುಗಳ ಮೇಲೆ ಪದೇ ಪದೆ ಚಿರತೆ ದಾಳಿ ನಡೆಯುತ್ತಿದೆ. ಪೊನ್ನಾಚಿ ಬಳಿಯ ಕಕ್ಕೆ ಹೊಲ ಗ್ರಾಮದ ಇಟ್ಟಿದ್ದ ಪಂಜರಕ್ಕೆ ಬಿದ್ದ ಚಿರತೆ ಕತ್ತಿನಲ್ಲಿಯೂ ಕಾಲರ್ ಐಡಿ ಪತ್ತೆಯಾಗಿರೋದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

The post ಏಕಾಏಕಿ ಚಿರತೆ ದಾಳಿ, ಆದಿವಾಸಿ ಮಹಿಳೆ ಬದುಕಿದ್ದೇ ಪವಾಡ! appeared first on Good News 24x7.

]]>
ಇರಾನ್ ಯುದ್ಧನೌಕೆಯನ್ನು ಮುಳುಗಿಸಿದ ಅಮೆರಿಕ! https://www.goodnews24x7.com/us-sinks-iranian-warship-leaving-india8679-2/ Thu, 05 Mar 2026 12:39:34 +0000 https://www.goodnews24x7.com/?p=8679 ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ದಾಳಿಯಿಂದ ಇರಾನ್‌ನ IRIS Dena ಯುದ್ಧನೌಕೆ ಮುಳುಗಿದ ಘಟನೆ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತದಿಂದ ಮರಳುತ್ತಿದ್ದ ಈ ಯುದ್ಧನೌಕೆಯ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 87ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.…

The post ಇರಾನ್ ಯುದ್ಧನೌಕೆಯನ್ನು ಮುಳುಗಿಸಿದ ಅಮೆರಿಕ! appeared first on Good News 24x7.

]]>

ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ದಾಳಿಯಿಂದ ಇರಾನ್‌ನ IRIS Dena ಯುದ್ಧನೌಕೆ ಮುಳುಗಿದ ಘಟನೆ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತದಿಂದ ಮರಳುತ್ತಿದ್ದ ಈ ಯುದ್ಧನೌಕೆಯ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 87ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. ದಾಳಿಯನ್ನು ಅಮೆರಿಕ ಅಧಿಕೃತವಾಗಿ ಒಪ್ಪಿಕೊಂಡಿರುವುದು ಇರಾನ್-ಅಮೆರಿಕ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದ್ದರ ಸಂಕೇತವಾಗಿದೆ.

ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿಯು ಇರಾನ್ ಯುದ್ಧನೌಕೆಯನ್ನು ಮುಳುಗಿಸಿದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 87 ಕ್ಕೆ ಏರಿಕೆಯಾಗಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಐಆರ್​ಐಎಸ್ ದೇನಾ  ಎಂಬ ಯುದ್ಧನೌಕೆ ಕೆಲವೇ ವಾರಗಳ ಹಿಂದೆ ಭಾರತದಲ್ಲಿ ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸಿ ಇರಾನ್​ಗೆ ಮರಳುತ್ತಿತ್ತು. ಯುದ್ಧನೌಕೆಯನ್ನು ಹೊಡೆದುರುಳಿಸಿದ್ದು ತಾನೇ ಎಂದು ಈಗಾಗಲೇ ಅಮೆರಿಕ ದೃಢಪಡಿಸಿದೆ. ಐಆರ್​ಐಎಸ್ ದೇನಾ 2024 ರಲ್ಲಿ ಭಾರತಕ್ಕೆ ಬಂದಿದ್ದು, ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸಿತ್ತು.ಮೃತರ ಸಂಖ್ಯೆಯನ್ನು ಅಮೆರಿಕ ದೃಢಪಡಿಸದಿದ್ದರೂ, ರಕ್ಷಣಾ ಸಚಿವ ಪೀಟ್ ಹೆಗ್ಸೆತ್, ಜಲಾಂತರ್ಗಾಮಿ ದಾಳಿಯನ್ನು ದೃಢಪಡಿಸಿದ್ದಾರೆ. ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಜಾಗತಿಕ ವ್ಯಾಪ್ತಿಗೆ ಇದು ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಅಂತರರಾಷ್ಟ್ರೀಯ ಜಲ ಪ್ರದೇಶದಲ್ಲಿ ಸುರಕ್ಷಿತವಾಗಿದೆ ಎಂದು ಭಾವಿಸಿದ ಇರಾನಿನ ಯುದ್ಧನೌಕೆಯನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಮುಳುಗಿಸಿದೆ ಎಂದು ಹೆಗ್ಸೆತ್ ತಿಳಿಸಿದ್ದಾರೆ.

 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದುರ್ಬುದ್ಧಿಯಿಂದಾಗಿ ಅಮೆರಿಕದ 500 ಯೋಧರು ಹತರಾಗಿದ್ದಾರೆ ಎಂದು ಇರಾನ್‌ ನ್ಯಾಷನಲ್‌ ಸೆಕ್ಯೂರಿಟಿ ಕೌನ್ಸಿಲ್‌ ಕಾರ್ಯದರ್ಶಿ ಅಲಿ ಪೋಸ್ಟ್‌ ಮಾಡಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಸೇರಿ ಟ್ರಂಪ್‌ ಇರಾನ್‌ ಮೇಲೆ ದಾಳಿ ನಡೆಸಿದರು. ಇರಾನ್‌ ನಡೆಸಿದ ಪ್ರತಿದಾಳಿಯಲ್ಲಿ ಅಮೆರಿಕದ 500 ಯೋಧರು ಸಾವಿಗೀಡಾಗಿದ್ದಾರೆ. ಇದೇನು ಟ್ರಂಪ್‌ ಅವರ ಅಮೆರಿಕ ಫಸ್ಟ್‌ ನೀತಿನಾ ಅಥವಾ ಇಸ್ರೇಲ್‌ ಫಸ್ಟ್‌ ನೀತಿಯಾ ಎಂದು ಅಲಿ ಪ್ರಶ್ನಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಅಮೆರಿಕದ ಜನತೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

The post ಇರಾನ್ ಯುದ್ಧನೌಕೆಯನ್ನು ಮುಳುಗಿಸಿದ ಅಮೆರಿಕ! appeared first on Good News 24x7.

]]>
ನಂಜನಗೂಡಿನಲ್ಲಿ ಭೀಕರ ಹಲ್ಲೆ , ನಾಲ್ವರ ಮೇಲೆ ಪ್ರಕರಣ​ ದಾಖಲು. https://www.goodnews24x7.com/a-case-has-been-registered-against-four-people-in-nanjangud/ Sun, 10 Aug 2025 11:15:24 +0000 https://www.goodnews24x7.com/?p=5700 ಮೈಸೂರು: ನಾಲ್ವರು ಯುವಕರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಮೈಸೂರಿನ ಮಂಡಿ ಮೊಹಲ್ಲಾದ ನಿವಾಸಿ ಅಭಿಲಾಷ್​ ಹಾಗೂ ರವಿ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆ ನಡೆಸಿದ ನಂಜನಗೂಡಿನ ಸುಭಾಷ್ ಅಲಿಯಾಸ್ ಸುಬ್ಬು, ಆಕಾಶ್ ಅಲಿಯಾಸ್ ಮಿಂಡ್ರಿ,…

The post ನಂಜನಗೂಡಿನಲ್ಲಿ ಭೀಕರ ಹಲ್ಲೆ , ನಾಲ್ವರ ಮೇಲೆ ಪ್ರಕರಣ​ ದಾಖಲು. appeared first on Good News 24x7.

]]>

ಮೈಸೂರು: ನಾಲ್ವರು ಯುವಕರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಮೈಸೂರಿನ ಮಂಡಿ ಮೊಹಲ್ಲಾದ ನಿವಾಸಿ ಅಭಿಲಾಷ್​ ಹಾಗೂ ರವಿ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆ ನಡೆಸಿದ ನಂಜನಗೂಡಿನ ಸುಭಾಷ್ ಅಲಿಯಾಸ್ ಸುಬ್ಬು, ಆಕಾಶ್ ಅಲಿಯಾಸ್ ಮಿಂಡ್ರಿ, ಸತ್ಯ, ಮಂಟಿ ಎಂಬವರ ಮೇಲೆ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಅಭಿಷೇಕ್ ನಂಜನಗೂಡಿನ ಶ್ರೀರಾಂಪುರದ ಯುವತಿಯನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ. ಪತ್ನಿಯ ದೊಡ್ಡಮ್ಮನ ಮಗ ಶಿವಕುಮಾರ್​ನನ್ನು ಸುಭಾಷ್, ಆಕಾಶ್, ಸತ್ಯ ಎಂಬವರು ಕಪಿ ಕಪಿ ಎಂದು ಛೇಡಿಸುತ್ತಿದ್ದರು. ಶಿವಕುಮಾರ್ ತಾಯಿ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಮೂವರು ಶಶಿಕುಮಾರ್ ಮೇಲೆ ದ್ವೇಷ ಬೆಳೆಸಿಕೊಂಡಿದ್ದರು. ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಅಭಿಷೇಕ್ ಪತ್ನಿ ಮನೆಗೆ ಬಂದಾಗ, ಶಶಿಕುಮಾರ್ ಅವರ ಅಣ್ಣನನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು.

ಇದೇ ವೇಳೆ ಹೊಂಚು ಹಾಕಿದ ಸುಭಾಷ್ ತಂಡ ಮಂಟಿಯ ಪ್ಯಾಸೆಂಜರ್ ಆಟೋದಲ್ಲಿ ಮಾರಕಾಸ್ತ್ರಗಳ ಸಮೇತ ಬಂದು ಲಾಂಗ್​ಗಳನ್ನು ಹಿಡಿದು ಭಯ ಸೃಷ್ಟಿಸಿ ಅಭಿಷೇಕ್ ಮೇಲೆ ದಾಳಿ ಮಾಡಿದ್ದಾರೆ. ಬಿಡಿಸಲು ಬಂದ ಶಶಿಕುಮಾರ್ ಅವರ ಅಣ್ಣ ರವಿ ಮೇಲೂ ದಾಳಿ ಮಾಡಿದ್ದಾರೆ. ಚಾಕು, ಕಬ್ಬಿಣದ ರಾಡ್, ರಿಪೀಸ್ ಪಟ್ಟಿಗಳಿಂದ ಹಲ್ಲೆ ನಡೆಸಿದ್ದಾರೆ. ಇವರಿಂದ ಅಭಿಷೇಕ್ ತಪ್ಪಿಸಿಕೊಂಡು ಓಡಿದರೂ, ಬೆನ್ನಟ್ಟಿಕೊಂಡು ಬಂದ ಆರೋಪಿಗಳು ಹಟ್ಟಿಮಾರಮ್ಮನ ದೇವಸ್ಥಾನದ ಬಳಿ ಹಿಡಿದು ಮತ್ತೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದಲೂ ಬೈದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ತೀವ್ರವಾಗಿ ಗಾಯಗೊಂಡ ಅಭಿಷೇಕ್ ಹಾಗೂ ರವಿ ಅವರನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ನಡೆಸಿದ ನಾಲ್ವರ ವಿರುದ್ದ ನಂಜನಗೂಡು ಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

The post ನಂಜನಗೂಡಿನಲ್ಲಿ ಭೀಕರ ಹಲ್ಲೆ , ನಾಲ್ವರ ಮೇಲೆ ಪ್ರಕರಣ​ ದಾಖಲು. appeared first on Good News 24x7.

]]>
ಹಾಸನದಲ್ಲಿ21 ವರ್ಷದ ಯುವಕನ ಜೀ*ವ ಕಸಿದ ಹೃದಯಾಘಾತ, ಜೀ*ವ ಕಳೆದುಕೊಂಡವರ ಸಂಖ್ಯೆ 34ಕ್ಕೆ ಏರಿಕೆ! https://www.goodnews24x7.com/heart-attack-claims-life-of-21-year-old-in-hassan-death-toll-rises-to-34/ Fri, 04 Jul 2025 07:54:19 +0000 https://www.goodnews24x7.com/?p=4889 ಹಾಸನ :  ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಮುಂದುವರಿದಿವೆ. ಇದೀಗ ಚಿಕ್ಕಕೊಂಡಗುಳ ಗ್ರಾಮದ 21 ವರ್ಷದ ಮದನ್ ಎಂಬಾತ ಹೃದಯಾಘಾತಕ್ಕೆ ಕಣ್ಮುಚ್ಚಿದ್ದಾನೆ. ಮದನ್ ಮೂಲತಃ ಹಾಸನ ತಾಲ್ಲೂಕಿನ ಚಿಟ್ನಳ್ಳಿ ಗ್ರಾಮದವರಾಗಿದ್ದರು. ಕಳೆದ ಎರಡು ದಿನಗಳಿಂದ ಚಿಕ್ಕಕೊಂಡಗುಳದ ಬಾವನ ಮನೆಗೆ ಬಂದಿದ್ದರು. ನಿನ್ನೆ ರಾತ್ರಿ…

The post ಹಾಸನದಲ್ಲಿ21 ವರ್ಷದ ಯುವಕನ ಜೀ*ವ ಕಸಿದ ಹೃದಯಾಘಾತ, ಜೀ*ವ ಕಳೆದುಕೊಂಡವರ ಸಂಖ್ಯೆ 34ಕ್ಕೆ ಏರಿಕೆ! appeared first on Good News 24x7.

]]>

ಹಾಸನ :  ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಮುಂದುವರಿದಿವೆ. ಇದೀಗ ಚಿಕ್ಕಕೊಂಡಗುಳ ಗ್ರಾಮದ 21 ವರ್ಷದ ಮದನ್ ಎಂಬಾತ ಹೃದಯಾಘಾತಕ್ಕೆ ಕಣ್ಮುಚ್ಚಿದ್ದಾನೆ. ಮದನ್ ಮೂಲತಃ ಹಾಸನ ತಾಲ್ಲೂಕಿನ ಚಿಟ್ನಳ್ಳಿ ಗ್ರಾಮದವರಾಗಿದ್ದರು. ಕಳೆದ ಎರಡು ದಿನಗಳಿಂದ ಚಿಕ್ಕಕೊಂಡಗುಳದ ಬಾವನ ಮನೆಗೆ ಬಂದಿದ್ದರು. ನಿನ್ನೆ ರಾತ್ರಿ ಮನೆಯಲ್ಲಿದ್ದ ವೇಳೆ ಮದನ್ಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ.


ಎದೆನೋವಿನಿಂದ ಮದನ್ ಕುಸಿದು ಬಿದ್ದಿದ್ದಾನೆ. ಕೂಡಲೇ ಸಂಬಂಧಿಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲೇ ಮದನ್ ಮೃಪಟ್ಟಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಹೃದಯಾಘಾತದಿಂದ ಜೀವ ಕಳೆದುಕೊಂಡವರ ಸಂಖ್ಯೆ 34ಕ್ಕೆ ಏರಿಕೆ ಆಗಿದೆ.

ಸಂಪತ್ಕುಮಾರ್ (53), ಸಿ.ಬಿ ವಿರೂಪಾಕ್ಷ (70), ಸಂತೋಷ್ (41), ದೇವಮ್ಮ (72) ಮೃತಪಟ್ಟವರು. ಹಾಸನ ನಗರದ ಕರಿಗೌಡ ಕಾಲೋನಿ ನಿವಾಸಿ ಸಂಪತ್ಕುಮಾರ್ಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಕುಟುಂಬಸ್ಥರು ಹಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಂಪತ್ಕುಮಾರ್ ಸಾವನ್ನಪ್ಪಿದ್ದಾರೆ.

 

 

 

ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ದುರಂತ
ಸಕಲೇಶಪುರ ತಾಲ್ಲೂಕಿನ, ಬೆಳಗೋಡು ಹೋಬಳಿ ಚಿಕ್ಕನಾಯಕನಹಳ್ಳಿ ಗ್ರಾಮದ ಸಿ.ಬಿ ವಿರೂಪಾಕ್ಷ ಅವರಿಗೆ ಕಳೆದ ರಾತ್ರಿ 11:30ರ ಸುಮಾರಿನಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಕುಟುಂಬಸ್ಥರು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದ್ರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ಮಲಗಿದ್ದಲ್ಲೇ ಸಾವು

ಗ್ರಾಪಂ ಸದಸ್ಯ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಆಲೂರು ತಾಲ್ಲೂಕಿನ, ಕಲ್ಲಾರೆ ಗ್ರಾಮದಲ್ಲಿ ನಡೆದಿದೆ. ಸಂತೋಷ್ (41) ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ. ರಾತ್ರಿ ಮಲಗಿದ್ದಲ್ಲಿಯೇ ಹೃದಯಾಘಾತವಾಗಿದೆ. ಬೆಳಗ್ಗೆ ಮೇಲೆಳದಿದ್ದಾಗ ಕುಟುಂಬಸ್ಥರು ನೋಡಿದ್ದು ಕೂಡಲೇ ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ಹೃದಯಾಘಾತದಿಂದ ಸಂತೋಷ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸಂತೋಷ್ ಕಾರಗೋಡು ಗ್ರಾ.ಪಂ. ಸದಸ್ಯರಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಚಿಕಿತ್ಸೆ ಪಡೆದು ವಾಪಸ್ ಬರುವಾಗ ಸಾವು
ಮತ್ತೊಂದು ಪ್ರಕರಣದಲ್ಲಿ ಹೃದಯಾಘಾತದಿಂದ ವೃದ್ದೆ ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಅರೆಕೆರೆ ಗ್ರಾಮದಲ್ಲಿ ನಡೆದಿದೆ. ದೇವಮ್ಮ (72) ಹೃದಯಾಘಾತಕ್ಕೆ ಬಲಿಯಾದ ವೃದ್ದೆ. ದೇವಮ್ಮ ಮನೆಯಲ್ಲಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಎದೆನೋವು ಹೆಚ್ಚಾಗುತ್ತಲೇ ಬೆಂಗಳೂರು ಜಯದೇವ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ, ಚಿಕಿತ್ಸೆ, ಔಷಧಿ ಪಡೆದು ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದರು. ಬೆಂಗಳೂರಿನಿಂದ ಗ್ರಾಮಕ್ಕೆ ವಾಪಸ್ಸಾಗುವ ಮಾರ್ಗ ಮಧ್ಯೆ ದೇವಮ್ಮ ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದ್ದು ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

The post ಹಾಸನದಲ್ಲಿ21 ವರ್ಷದ ಯುವಕನ ಜೀ*ವ ಕಸಿದ ಹೃದಯಾಘಾತ, ಜೀ*ವ ಕಳೆದುಕೊಂಡವರ ಸಂಖ್ಯೆ 34ಕ್ಕೆ ಏರಿಕೆ! appeared first on Good News 24x7.

]]>
ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೋರ್ವ ಬ*ಲಿ! https://www.goodnews24x7.com/another-victim-of-heart-attack-in-hassan/ Sat, 28 Jun 2025 05:54:18 +0000 https://www.goodnews24x7.com/?p=4744 ಹಾಸನ : ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಮುಂದುವರೆಯುತ್ತಿದ್ದು ಇದೀಗ ಆಟೋ ಚಾಲಕನೋರ್ವ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆ ಸಿದ್ದೇಶ್ವರ್ ನಗರ ನಿವಾಸಿ ಗೋವಿಂದ(37) ಮೃತಪಟ್ಟ ಆಟೋಚಾಲಕ. ಗೋವಿಂದ ಅವರು ಬೆಳಿಗ್ಗೆ 7 ಗಂಟೆ ಸುಮಾರಿಗೆ ಆಟೋ…

The post ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೋರ್ವ ಬ*ಲಿ! appeared first on Good News 24x7.

]]>

ಹಾಸನ : ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಮುಂದುವರೆಯುತ್ತಿದ್ದು ಇದೀಗ ಆಟೋ ಚಾಲಕನೋರ್ವ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆ ಸಿದ್ದೇಶ್ವರ್ ನಗರ ನಿವಾಸಿ ಗೋವಿಂದ(37) ಮೃತಪಟ್ಟ ಆಟೋಚಾಲಕ. ಗೋವಿಂದ ಅವರು ಬೆಳಿಗ್ಗೆ 7 ಗಂಟೆ ಸುಮಾರಿಗೆ ಆಟೋ ಚಲಾಯಿಸುವಾಗಲೇ ಎದೆನೋವು ಶುರುವಾಗಿದೆ. ಈ ವೇಳೆ ಗೋವಿಂದ ಆಟೋದಲ್ಲೇ ಹಾಸನ ಜಿಲ್ಲಾಸ್ಪತ್ರೆಗೆ ತೆರಳಿದ್ದಾರೆ. ಆದರೆ ಆಸ್ಪತ್ರೆಯಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಮೂಲಕ ಹಾಸನ ಜಿಲ್ಲೆಯಲ್ಲಿ ಒಂದೇ ತಿಂಗಳ ಅಂತರದಲ್ಲಿ ಹೃದಯಾಘಾತಕ್ಕೆ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

The post ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೋರ್ವ ಬ*ಲಿ! appeared first on Good News 24x7.

]]>
ಮೈಸೂರಿನ ಫುಟ್ಬಾಲ್ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ ಹೈಕೋರ್ಟ್. https://www.goodnews24x7.com/%e0%b2%ae%e0%b3%88%e0%b2%b8%e0%b3%82%e0%b2%b0%e0%b2%bf%e0%b2%a8-%e0%b2%ab%e0%b3%81%e0%b2%9f%e0%b3%8d%e0%b2%ac%e0%b2%be%e0%b2%b2%e0%b3%8d-%e0%b2%ae%e0%b3%88%e0%b2%a6%e0%b2%be%e0%b2%a8%e0%b2%a6%e0%b2%b2/ Mon, 24 Feb 2025 08:32:00 +0000 https://www.goodnews24x7.com/?p=2402 ಮೈಸೂರು, ಫೆಬ್ರವರಿ 24: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣ ಸಂಬಂಧ ಮೈಸೂರಿನ ಫುಟ್ಬಾಲ್ ಮೈದಾನದಲ್ಲಿ ಪ್ರತಿಭಟನೆಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಪ್ರತಿಭಟನೆಗೆ ಅವಕಾಶ ಕೋರಿ ರಾಷ್ಟ್ರೀಯ ಸುರಕ್ಷಾ ಜನಾಂದೋಲನ ಸಮಿತಿ ಪೊಲೀಸರಿಗೆ ಸಲ್ಲಿಸಿದ್ದ ಮನವಿಯನ್ನು…

The post ಮೈಸೂರಿನ ಫುಟ್ಬಾಲ್ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ ಹೈಕೋರ್ಟ್. appeared first on Good News 24x7.

]]>

ಮೈಸೂರು, ಫೆಬ್ರವರಿ 24: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣ ಸಂಬಂಧ ಮೈಸೂರಿನ ಫುಟ್ಬಾಲ್ ಮೈದಾನದಲ್ಲಿ ಪ್ರತಿಭಟನೆಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಪ್ರತಿಭಟನೆಗೆ ಅವಕಾಶ ಕೋರಿ ರಾಷ್ಟ್ರೀಯ ಸುರಕ್ಷಾ ಜನಾಂದೋಲನ ಸಮಿತಿ ಪೊಲೀಸರಿಗೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಮಿತಿಯು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಪ್ರತಿಭಟನೆಗೆ ಅವಕಾಶ ನೀಡುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ. ಜತೆಗೆ, 1 ಲಕ್ಷ ರೂಪಾಯಿ ಬಾಂಡ್ ನೀಡಲು ಆಯೋಜಕರಿಗೆ ನಿರ್ದೇಶನ ನೀಡಿದೆ.

ಹೈಕೋರ್ಟ್ ಷರತ್ತುಗಳೇನು?
1 ಲಕ್ಷ ರೂಪಾಯಿ ಬಾಂಡ್ ನೀಡಬೇಕು. ಪ್ರತಿಭಟನೆ ಶಾಂತಿಯುತವಾಗಿರಬೇಕು ಹಾಗೂ ಸಂಪೂರ್ಣ ಚಿತ್ರೀಕರಣ ಮಾಡಬೇಕು. ಶಾಂತಿಭಂಗವಾಗುವಂತಹ ಪ್ರಚೋದನಕಾರಿ ಹೇಳಿಕೆ ನೀಡಬಾರದು. ಅಹಿತಕರ ಘಟನೆಯಾದರೆ ಅರ್ಜಿದಾರರನ್ನೇ ಹೊಣೆ ಮಾಡಲಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಸಂಜೆ 3.30 ರಿಂದ ಪ್ರತಿಭಟನೆ ನಡೆಸಲು ಅವಕಾಶ ನೀಡಲು ಸೂಚನೆ ಮೈಸೂರಿನ ಪೊಲೀಸ್ ಆಯುಕ್ತರಿಗೆ ನ್ಯಾ.ಆರ್. ದೇವದಾಸ್ ಅವರಿದ್ದ ಪೀಠ ಸೂಚನೆ ನೀಡಿದೆ.
40 ಸಾವಿರ ಕೋಟಿ ಸಾಲದ ಹೊರೆ ಹೊರಿಸಿದ್ದಾರೆ!
ಸರ್ಕಾರದ ಪರ ವಕೀಲರ ವಾದ?
ಪ್ರತಿಭಟನೆಗೆ ಅವಕಾಶ ನೀಡಿದರೆ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗಬಹುದು. 8 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ, 9 ಮಂದಿ ಪೊಲೀಸರಿಗೆ ಗಾಯವಾಗಿದೆ. ಬೇರೆ ಸಂಘಟನೆಗಳು ಧರಣಿ ನಡೆಸಲು ಅನುಮತಿ ಕೋರಿದ್ದರು, ನೀಡಿಲ್ಲ. ಸೂಕ್ಷ್ಮತೆ ಪರಿಗಣಿಸಿ ಪ್ರತಿಭಟನೆ ನಿರ್ಬಂಧಿಸಿ ನಿಷೇಧಾಜ್ಞೆ ಹೇರಲಾಗಿದೆ ಎಂದು ಸರ್ಕಾರದ ಪರ ಹೆಚ್ಚುವರಿ ಎಜಿ ಭಾನು ಪ್ರಕಾಶ್ ಹೈಕೋರ್ಟ್ಗೆ ತಿಳಿಸಿದರು. ಜತೆಗೆ, ಫುಟ್ಬಾಲ್ ಮೈದಾನ, ಮಹಾರಾಜ ಕಾಲೇಜ್ ಗ್ರೌಂಡ್ನಲ್ಲಿ ಅವಕಾಶ ನೀಡಬಹುದು, ಆದರೆ 300ಕ್ಕಿಂತ ಹೆಚ್ಚಿನ ಜನರಿಗೆ ಅವಕಾಶ ನೀಡದಂತೆ ಮನವಿ ಮಾಡಿದರು.
ಅರ್ಜಿದಾರರ ವಾದ?
ರಾಷ್ಟ್ರೀಯ ಸುರಕ್ಷಾ ಜನಾಂದೋಲನ ಸಮಿತಿಯ ರಿಟ್ ಅರ್ಜಿ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಪ್ರತಿಭಟನೆಗೆ ಅನುಮತಿ ನೀಡಲು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಏನಾದರೂ ಅಹಿತಕರ ಘಟನೆ ನಡೆದರೆ ಯಾರು ಹೊಣೆ? ರಸ್ತೆ ಬಿಟ್ಟು ಬೇರೆ ಮೈದಾನದಲ್ಲಿ ಪ್ರತಿಭಟನೆ ನಡೆಸಿದರೆ ಪರಿಗಣಿಸುವುದಾಗಿ ತಿಳಿಸಿತು. ನಂತರ ಸೂಕ್ತ ಸ್ಥಳ ತಿಳಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಕೆಲಕಾಲ ಮುಂದೂಡಿತು. ನಂತರ ಸರ್ಕಾರದ ಪರ ವಕೀಲರ ವಾದ ಆಲಿಸಿ, ಪ್ರತಿಭಟನೆಗೆ ಷರತ್ತುಬದ್ಧ ಅನುಮತಿ ನೀಡಿತು.

The post ಮೈಸೂರಿನ ಫುಟ್ಬಾಲ್ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ ಹೈಕೋರ್ಟ್. appeared first on Good News 24x7.

]]>