Bandipur Archives - Good News 24x7 https://www.goodnews24x7.com/tag/bandipur/ Kannada Fri, 26 Jun 2026 10:44:13 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Bandipur Archives - Good News 24x7 https://www.goodnews24x7.com/tag/bandipur/ 32 32 ಬಂಡೀಪುರ, ನಾಗರಹೊಳೆ ಸಫಾರಿ ಪುನರಾರಂಭ ​​ https://www.goodnews24x7.com/bandipur-nagarhole-safaris-resume/ Fri, 26 Jun 2026 10:44:13 +0000 https://www.goodnews24x7.com/?p=9671 ವನ್ಯಜೀವಿ ಪ್ರಿಯರಿಗೆ ಬಿಗ್ ನ್ಯೂಸ್ ಸಿಕ್ಕಿದ್ದು, ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ತಾಂತ್ರಿಕ ಸಮಿತಿಯ ವರದಿ ಆಧರಿಸಿ ಪೂರ್ಣ ಪ್ರಮಾಣದ ಜಂಗಲ್ ಸಫಾರಿ ಪುನರಾರಂಭಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ. ಮಾನವ ಮತ್ತು ವನ್ಯಜೀವಿ ಸಂಘರ್ಷದ ಕಾರಣದಿಂದಾಗಿ…

The post ಬಂಡೀಪುರ, ನಾಗರಹೊಳೆ ಸಫಾರಿ ಪುನರಾರಂಭ ​​ appeared first on Good News 24x7.

]]>

ವನ್ಯಜೀವಿ ಪ್ರಿಯರಿಗೆ ಬಿಗ್ ನ್ಯೂಸ್ ಸಿಕ್ಕಿದ್ದು, ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ತಾಂತ್ರಿಕ ಸಮಿತಿಯ ವರದಿ ಆಧರಿಸಿ ಪೂರ್ಣ ಪ್ರಮಾಣದ ಜಂಗಲ್ ಸಫಾರಿ ಪುನರಾರಂಭಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ. ಮಾನವ ಮತ್ತು ವನ್ಯಜೀವಿ ಸಂಘರ್ಷದ ಕಾರಣದಿಂದಾಗಿ ಜಂಗಲ್​​ ಸಫಾರಿಯನ್ನು 2025ರ ನವೆಂಬರ್ ತಿಂಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ 2026ರ ಫೆಬ್ರವರಿ 19ರಿಂದ ಶೇ.50ರ ಸಾಮರ್ಥ್ಯದಲ್ಲಿ ಮತ್ತು ಕಡಿಮೆ ಅವಧಿಯೊಂದಿಗೆ ಸಫಾರಿ ಪುನರಾರಂಭಕ್ಕೆ ಸರ್ಕಾರ ಅವಕಾಶ ನೀಡಿತ್ತು.

ಬಂಡೀಪುರ, ನಾಗರಹೊಳೆಯಲ್ಲಿ ಪೂರ್ಣ ಪ್ರಮಾಣದ ಸಫಾರಿ ಪುನರಾರಂಭ

ತಜ್ಞರು ಮತ್ತು ಅಧಿಕಾರಿಗಳ ತಾಂತ್ರಿಕ ಸಮಿತಿ ವರದಿ ಅನ್ವಯ ಮಹತ್ವದ ಕ್ರಮ ಸಮಿತಿ ಶಿಫಾರಸಿನ ಪ್ರಕಾರ ನಿಯಂತ್ರಿತ ರೀತಿಯಲ್ಲಿ ಸಫಾರಿ ನಡೆಸಲು ಸೂಚನೆ
ಜೂನ್​​ 26 ,ಬೆಂಗಳೂರು: ವನ್ಯಜೀವಿ ಪ್ರಿಯರಿಗೆ ಗುಡ್​​ನ್ಯೂಸ್​​ ಸಿಕ್ಕಿದ್ದು, ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಪೂರ್ಣ ಪ್ರಮಾಣದ ಸಫಾರಿ ಪುನರಾರಂಭಕ್ಕೆ ಸರ್ಕಾರ ನಿರ್ಧರಿಸಿದೆ. ತಜ್ಞರು, ಅಧಿಕಾರಿಗಳ ತಾಂತ್ರಿಕ ಸಮಿತಿ ವರದಿ ಅನ್ವಯ ಕ್ರಮ ಕೈಗೊಳ್ಳಲಾಗಿದ್ದು, ವೈಜ್ಞಾನಿಕ ಮೌಲ್ಯಮಾಪನ ಮತ್ತು ಸಾಗಣೆ ಸಾಮರ್ಥ್ಯ ಆಧರಿಸಿ ಹಸಿರು ನಿಶಾನೆ ನೀಡಲಾಗಿದೆ. ಈ ನಿರ್ಧಾರಿಂದ ಸ್ಥಳೀಯ ಉದ್ಯೋಗ, ಆರ್ಥಿಕತೆ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಸಮಿತಿಯ ಶಿಫಾರಸಿನ ಪ್ರಕಾರ ನಿಯಂತ್ರಿತ ರೀತಿಯಲ್ಲಿ ಜಂಗಲ್ ಸಫಾರಿ ನಡೆಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.

2025ರ ನವೆಂಬರ್​​ನಲ್ಲಿ ತಾತ್ಕಾಲಿಕ ಸ್ಥಗಿತಗೊಂಡಿದ್ದ ಸಫಾರಿ

ಮಾನವ ಮತ್ತು ವನ್ಯಜೀವಿ ಸಂಘರ್ಷದ ಕಾರಣದಿಂದಾಗಿ ಕರ್ನಾಟಕದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು 2025ರ ನವೆಂಬರ್ ತಿಂಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ 2026ರ ಫೆಬ್ರವರಿ 19ರಿಂದ ಶೇ.50ರ ಸಾಮರ್ಥ್ಯದಲ್ಲಿ ಮತ್ತು ಕಡಿಮೆ ಅವಧಿಯೊಂದಿಗೆ ಸಫಾರಿ ಪುನರಾರಂಭಕ್ಕೆ ಸರ್ಕಾರ ಅವಕಾಶ ನೀಡಿತ್ತು. ಸಫಾರಿ ತಾತ್ಕಾಲಿಕ ಸ್ಥಗಿತವಾದ ನಂತರ ರಚನೆ ಮಾಡಲಾಗಿದ್ದ ತಾಂತ್ರಿಕ ಸಮಿತಿ ಮಧ್ಯಂತರ ವರದಿ ನೀಡಿದ್ದು, ಈ ಸಂಬಂಧ ಜನವರಿ 2ರಂದು ಸಿಎಂ ನೇತೃತ್ವದ ಸಭೆ ನಡೆಸಿ ಚರ್ಚೆ ಮಾಡಲಾಗಿತ್ತು. ಸಫಾರಿ ಪುನರ್ ಪ್ರಾರಂಭಕ್ಕೆ ಬೇಡಿಕೆ ಇರುವ ಕಾರಣ ಶೇ.50ರಷ್ಟು ಸಫಾರಿ ಪುನರಾರಂಭಕ್ಕೆ ತೀರ್ಮಾನಿಸಲಾಗಿದೆ. ಪೂರ್ತಿ ವರದಿ ಬಂದ ಬಳಿಕ ಸಂಪೂರ್ಣ ಅನುಮತಿ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ಅಂದಿನ ಅರಣ್ಯ ಸಚಿವ ಈಶ್ವರ್​​ ಖಂಡ್ರೆ ತಿಳಿಸಿದ್ದರು.

ಈ ಮೊದಲು ಬಳಕೆ ಮಾಡ್ತಿದ್ದ ಶೇ.50ರಷ್ಟು ವಾಹನಗಳ ಬಳಕೆಗೆ ಮಾತ್ರ ಅವಕಾಶ ನೀಡುವ ಜೊತೆಗೆ, ಬಂಡೀಪುರದಲ್ಲಿ ಸಫಾರಿ ಅವಧಿಯನ್ನು 8 ಗಂಟೆಯಿಂದ 5ಕ್ಕೆ ಅವಧಿ ಇಳಿಕೆ ಮಾಡಲಾಗಿತ್ತಾದರೆ, ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿ ನೀಡಲಾಗಿತ್ತು. ಆದರೀಗ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು ಮೊದಲಿನಂತೆ ಪೂರ್ಣ ಪ್ರಮಾಣದ ಸಫಾರಿಗೆ ಅವಕಾಶ ನೀಡಿರೋದು ವನ್ಯಜೀವಿ ಪ್ರಿಯರಿಗೆ ಹರ್ಷ ತಂದಿದೆ.

The post ಬಂಡೀಪುರ, ನಾಗರಹೊಳೆ ಸಫಾರಿ ಪುನರಾರಂಭ ​​ appeared first on Good News 24x7.

]]>
ಬಂಡೀಪುರ – ನಾಗರಹೊಳೆ ಸಫಾರಿ ಬಂದ್ ! ರಾಷ್ಟ್ರೀಯ ಉದ್ಯಾನವನದ ಸಿ ಎಫ್ ಪ್ರಭಾಕರನ್ ಎತ್ತಂಗಡಿ. https://www.goodnews24x7.com/bandipur-nagarhole-safari-bandh-cf-prabhakaran-of-the-national-park-is-on-the-run/ Fri, 07 Nov 2025 13:48:40 +0000 https://www.goodnews24x7.com/?p=8061 ಮೈಸೂರು ಜಿಲ್ಲೆಯ ನಂಜನಗೂಡು ಮತ್ತು ಸರಗೂರು ತಾಲೂಕಿನ ಗಡಿ ಭಾಗಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನರಭಕ್ಷಕ ವ್ಯಾಘ್ರಗಳು ನಾಲ್ಕು ಜನರ ಮೇಲೆ ದಾಳಿ ಮಾಡಿ ಮೂವರು ಮೃತಪಟ್ಟಿದ್ದಾರೆ. ಸರಗೂರು ತಾಲೂಕಿನಲ್ಲಿ ಇಂದು ನಡೆದಿರುವ ಹುಲಿಯ ದಾಳಿಯಿಂದ ಜನರು ರೊಚ್ಚಿಗೆದ್ದಿದ್ದಾರೆ. ಬಂಡಿಪುರ ರಾಷ್ಟ್ರೀಯ…

The post ಬಂಡೀಪುರ – ನಾಗರಹೊಳೆ ಸಫಾರಿ ಬಂದ್ ! ರಾಷ್ಟ್ರೀಯ ಉದ್ಯಾನವನದ ಸಿ ಎಫ್ ಪ್ರಭಾಕರನ್ ಎತ್ತಂಗಡಿ. appeared first on Good News 24x7.

]]>

ಮೈಸೂರು ಜಿಲ್ಲೆಯ ನಂಜನಗೂಡು ಮತ್ತು ಸರಗೂರು ತಾಲೂಕಿನ ಗಡಿ ಭಾಗಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನರಭಕ್ಷಕ ವ್ಯಾಘ್ರಗಳು ನಾಲ್ಕು ಜನರ ಮೇಲೆ ದಾಳಿ ಮಾಡಿ ಮೂವರು ಮೃತಪಟ್ಟಿದ್ದಾರೆ.
ಸರಗೂರು ತಾಲೂಕಿನಲ್ಲಿ ಇಂದು ನಡೆದಿರುವ ಹುಲಿಯ ದಾಳಿಯಿಂದ ಜನರು ರೊಚ್ಚಿಗೆದ್ದಿದ್ದಾರೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಸಿಎಫ್ ಪ್ರಭಾಕರ್ ಎಂಬುವರನ್ನ ವರ್ಗಾವಣೆಗೊಳಿಸಿ ನೂತನ ಸಿಎಫ್ ಸಂಪತ್ ಕುಮಾರ್ ಎಂಬುವರನ್ನು ನಿಯೋಜನೆ ಮಾಡಿದ್ದಾರೆ.

ಹಳೆ ಹೆಗ್ಗುಡಿಲು ಗ್ರಾಮದ ದಂಡನಾಯಕ ಎಂಬ ರೈತನನ್ನು ಬಲಿ ಪಡೆದ ನರಭಕ್ಷಕ ವ್ಯಾಘ್ರವನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಅಗ್ರಹಿಸಿ ಸಾಕಷ್ಟು ಜನರ ತಂಡ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮುಗಿಬಿದ್ದಿದ್ದಾರೆ ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದಾರೆ. ಮೊಳೆಯೂರು ಮತ್ತು ಸರಗೂರು ಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೃತ ಎಂಬ ಮಹಿಳಾ ಆರ್ ಎಫ್ ಓ ಗೆ ಛೀಮಾರಿ ಹಾಕಿ ವಾಗ್ದಾಳಿ ನಡೆಸಿ ತಳ್ಳಾಟ ನೂಕಾಟ ನಡೆಸಲಾಗಿದೆ. ಹುಲಿಯ ದಾಳಿಯಿಂದ ಮೃತಪಟ್ಟಿರುವ ರೈತ ದಂಡ ನಾಯಕ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ದಂಡನಾಯಕನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲು ಗ್ರಾಮಸ್ಥರು ಮತ್ತು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಗಡಿಭಾಗದ ತಾಲೂಕಾಗಿರುವ ನಂಜನಗೂಡು ಮತ್ತು ಸರಗೂರು ಭಾಗದ ರೈತರು ಆತಂಕದಲ್ಲೇ ದಿನದೊಡುತ್ತಿದ್ದಾರೆ.

ಹುಲಿಗಳ ಸಂತತಿ ಹೆಚ್ಚಾಗಿರುವ ಹಿನ್ನೆಲೆ ಯಾವ ವೇಳೆಯಲ್ಲಿ ಯಾರ ಮೇಲೆ ದಾಳಿ ಮಾಡುತ್ತದೆ? ಯಾರ ಜೀವ ಬಲಿ ತೆಗೆದುಕೊಳ್ಳುತ್ತದೆ ಎಂದು ರೈತರಲ್ಲಿ ಜೀವ ಭಯ ಎದುರಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಎಂದು ಹಳೆ ಹೆಗ್ಗುಡಿಲು ಗ್ರಾಮದಲ್ಲಿ ಸಾರ್ವಜನಿಕರು ಮತ್ತು ರೈತರು ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದಾರೆ

The post ಬಂಡೀಪುರ – ನಾಗರಹೊಳೆ ಸಫಾರಿ ಬಂದ್ ! ರಾಷ್ಟ್ರೀಯ ಉದ್ಯಾನವನದ ಸಿ ಎಫ್ ಪ್ರಭಾಕರನ್ ಎತ್ತಂಗಡಿ. appeared first on Good News 24x7.

]]>
ಫೋಟೊ ತೆಗೆಯಲು ಹೋದ ವ್ಯಕ್ತಿ ಮೇಲೆ ಆನೆ ದಾಳಿ . https://www.goodnews24x7.com/elephant-attacks-man-who-went-to-take-a-photo/ Mon, 11 Aug 2025 05:04:54 +0000 https://www.goodnews24x7.com/?p=5727 ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಭಾನುವಾರ ಕಾಡಾನೆಯ ಫೋಟೊ ತೆಗೆಯಲು ಹೋದ ವ್ಯಕ್ತಿಯೊಬ್ಬರ ಮೇಲೆ ಆನೆ ದಾಳಿ ನಡೆದಿದೆ. ಮಧುಮಲೈ ಅರಣ್ಯದ ಕಡೆಯಿಂದ ಬಂಡೀಪುರದ ಕಡೆಗೆ ಬರುವ ಸಂದರ್ಭದಲ್ಲಿ ಕೆಕ್ಕನಹಳ್ಳ ಅರಣ್ಯ ಪ್ರದೇಶದ…

The post ಫೋಟೊ ತೆಗೆಯಲು ಹೋದ ವ್ಯಕ್ತಿ ಮೇಲೆ ಆನೆ ದಾಳಿ . appeared first on Good News 24x7.

]]>

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಭಾನುವಾರ ಕಾಡಾನೆಯ ಫೋಟೊ ತೆಗೆಯಲು ಹೋದ ವ್ಯಕ್ತಿಯೊಬ್ಬರ ಮೇಲೆ ಆನೆ ದಾಳಿ ನಡೆದಿದೆ.
ಮಧುಮಲೈ ಅರಣ್ಯದ ಕಡೆಯಿಂದ ಬಂಡೀಪುರದ ಕಡೆಗೆ ಬರುವ ಸಂದರ್ಭದಲ್ಲಿ ಕೆಕ್ಕನಹಳ್ಳ ಅರಣ್ಯ ಪ್ರದೇಶದ ಬಳಿ ಮರಿಯೊಂದಿಗೆ ಇದ್ದ ಆನೆಯ ಫೋಟೋ ತೆಗೆಯಲು ಹೋದಾಗ ದಾಳಿ ನಡೆದಿದೆ. ದಾಳಿಯಿಂದ ಪ್ರಜ್ಞೆತಪ್ಪಿ ರಸ್ತೆಯಲ್ಲಿಯೇ ಬಿದ್ದಿದ್ದ ವ್ಯಕ್ತಿಯನ್ನು ಸಂಬಂಧಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆನೆಯ ದಾಳಿ ಸುದ್ದಿ ತಿಳಿಯುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು.
ದಾಳಿಗೊಳಗಾದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಬಂಡೀಪುರ ಹುಲಿಯೋಜನೆ ನಿರ್ದೇಶಕ ಪ್ರಭಾಕರನ್ ತಿಳಿಸಿದರು. ಆನೆಗಳು ಮರಿಗಳೊಂದಿಗೆ ಇರುವಾಗ ಮನುಷ್ಯರನ್ನು ಕಂಡರೆ ದಾಳಿ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಮರಿಯ ರಕ್ಷಣೆ ಮಾಡಲು ಸಿಟ್ಟಿಗೇಳುವುದು ಸಹಜ. ಇಂತಹ ಸಂದರ್ಭದಲ್ಲಿ ಪ್ರವಾಸಿಗರು ಫೋಟೋ ತೆಗೆಯಲು ಮುಂದಾಗಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಕ್ತಿ ಮೇಲೆ ಕಾಡಾನೆ ದಾಳಿ ನಡೆಸಿರುವ ದೃಶ್ಯ.

ಘಟನೆ ವಿವರ :
ಬಂಡೀಪುರ- ಕೆಕ್ಕನಹಳ್ಳ ಚೆಕ್‌ಪೋಸ್ಟ್ ನಡುವಿನ ಕಾಡಿನ ರಸ್ತೆ ಬದಿಯಲ್ಲಿ ಕಾಡಾನೆ ನಿಂತುಕೊಂಡಿರುತ್ತದೆ. ಈ ವೇಳೆ ಬೈಕ್​, ಕಾರಿನಿಂದ ಇಳಿದ ಪ್ರವಾಸಿಗರು ಹುಚ್ಚಾಟ ಮಾಡುತ್ತಿರುತ್ತಾರೆ. ಆಗ ಕೇರಳದ ಓರ್ವ ಪ್ರವಾಸಿಗ ಆನೆ ಸಮೀಪಕ್ಕೆ ಹೋಗಿ ಫೋಟೋ ತೆಗೆಯಲು ಮುಂದಾಗಿದ್ದಾನೆ. ಜನ ಕಿರುಚಾಡಿದ್ದರಿಂದ ಆನೆ ಉದ್ವೇಗಗೊಂಡು ಫೋಟೋ ತೆಗೆಯುತ್ತಿದ್ದವನ ಮೇಲೆ ಅಟ್ಯಾಕ್ ಮಾಡಿದೆ.

ಆನೆ, ಪ್ರವಾಸಿಗನ ಬೆನ್ನು ಹತ್ತಿ ಗುಮ್ಮಲು ಹೋಗಿದೆ. ಆಗ ಓಡುತ್ತಿದ್ದ ಪ್ರವಾಸಿಗ ರಸ್ತೆ ಮೇಲೆ ಎಡವಿ ಬಿದ್ದಿದ್ದಾನೆ. ಅವನನ್ನು ಕಾಲಿನಿಂದ ಒದ್ದು ಆನೆ ಅರಣ್ಯದೊಳಕ್ಕೆ ಹೋಗಿದೆ. ಗಾಯಗೊಂಡ ಪ್ರವಾಸಿಗನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅದೃಷ್ಟವಶಾತ್ ಬದುಕುಳಿದಿದ್ದಾನೆ. ಕಾಡು ಪ್ರಾಣಿಗಳ ಜೊತೆ ಹುಷಾರ್​ ಆಗಿರಿ. ಮನುಷ್ಯರಂತೆ ವರ್ತಿಸಿ ಎಂದರೆ ಜನರೇ ಪ್ರಾಣಿಗಳಂತೆ ವರ್ತಿಸಿ ಇಂತಹ ಅನಾಹುತಕ್ಕೆ ಒಳಗಾಗುತ್ತಿದ್ದಾರೆ

The post ಫೋಟೊ ತೆಗೆಯಲು ಹೋದ ವ್ಯಕ್ತಿ ಮೇಲೆ ಆನೆ ದಾಳಿ . appeared first on Good News 24x7.

]]>