College Archives - Good News 24x7 https://www.goodnews24x7.com/tag/college/ Kannada Sun, 21 Jun 2026 11:19:35 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg College Archives - Good News 24x7 https://www.goodnews24x7.com/tag/college/ 32 32 ಬೆಂಗಳೂರು ಶಾಲೆಗಳಲ್ಲಿ ಫುಡ್ ಡೆಲಿವರಿ ಆಪ್‌ಗಳಿಗೆ ನಿಷೇಧ ! https://www.goodnews24x7.com/food-delivery-apps-banned-in-bengaluru-schools/ Sun, 21 Jun 2026 11:19:35 +0000 https://www.goodnews24x7.com/?p=9616   ಬೆಂಗಳೂರು : ನಗರದ ಪ್ರತಿಷ್ಠಿತ ಶಾಲೆಗಳು ತಮ್ಮ ಆವರಣದಲ್ಲಿ ಸ್ವಿಗ್ಗಿ, ಜೊಮ್ಯಾಟೊ  ಸೇರಿದಂತೆ ಇತರೆ ಆನ್‌ಲೈನ್ ಆಪ್‌ಗಳ ಮೂಲಕ ಆಹಾರ ಆರ್ಡರ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸುತ್ತಿವೆ. ಇತ್ತೀಚೆಗಷ್ಟೇ ಬನಶಂಕರಿಯಲ್ಲಿರುವ ವಿದ್ಯಾಶಿಲ್ಪ ಶಾಲೆ ತನ್ನ ಪೋಷಕರಿಗೆ ಸುತ್ತೋಲೆ ಹೊರಡಿಸಿ ಈ ನಿಯಮವನ್ನು…

The post ಬೆಂಗಳೂರು ಶಾಲೆಗಳಲ್ಲಿ ಫುಡ್ ಡೆಲಿವರಿ ಆಪ್‌ಗಳಿಗೆ ನಿಷೇಧ ! appeared first on Good News 24x7.

]]>

  ಬೆಂಗಳೂರು : ನಗರದ ಪ್ರತಿಷ್ಠಿತ ಶಾಲೆಗಳು ತಮ್ಮ ಆವರಣದಲ್ಲಿ ಸ್ವಿಗ್ಗಿ, ಜೊಮ್ಯಾಟೊ  ಸೇರಿದಂತೆ ಇತರೆ ಆನ್‌ಲೈನ್ ಆಪ್‌ಗಳ ಮೂಲಕ ಆಹಾರ ಆರ್ಡರ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸುತ್ತಿವೆ. ಇತ್ತೀಚೆಗಷ್ಟೇ ಬನಶಂಕರಿಯಲ್ಲಿರುವ ವಿದ್ಯಾಶಿಲ್ಪ ಶಾಲೆ ತನ್ನ ಪೋಷಕರಿಗೆ ಸುತ್ತೋಲೆ ಹೊರಡಿಸಿ ಈ ನಿಯಮವನ್ನು ಪ್ರಕಟಿಸಿದ್ದು, ನಗರದ ಇನ್ನೂ ಹಲವು ಪ್ರಮುಖ ಶಾಲೆಗಳು ಈ ಹಾದಿ ಹಿಡಿದಿವೆ.

ಶಾಲಾ ಆಡಳಿತ ಮಂಡಳಿಗಳುಯ ಹೇಳುವಂತೆ ಹೊರಗಿನಿಂದ ಆರ್ಡರ್ ಮಾಡುವ ಜಂಕ್ ಫುಡ್‌ಗಳು ಆರೋಗ್ಯಕರವಾಗಿರುವುದಿಲ್ಲ. ಅವುಗಳಲ್ಲಿ ಅತಿಯಾದ ಎಣ್ಣೆ, ಉಪ್ಪು ಮತ್ತು ಪ್ರಿಸರ್ವೇಟಿವ್ಸ್‌ಗಳನ್ನು ಬಳಸಲಾಗಿರುತ್ತದೆ. ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಶಾಲೆಯೊಂದರ ಪ್ರಾಂಶುಪಾಲರು ಹೇಳುವಂತೆ, ಒಬ್ಬ ವಿದ್ಯಾರ್ಥಿ ಮನೆಯಿಂದ ತಂದ ಸಾಮಾನ್ಯ ಪಲಾವ್ ತಿನ್ನುವಾಗ, ಪಕ್ಕದ ಮಗು ಪಿಜ್ಜಾ ಆರ್ಡರ್ ಮಾಡಿ ತಿಂದರೆ ಅದು ಮಕ್ಕಳಲ್ಲಿ ಅನಗತ್ಯ ಆಕರ್ಷಣೆ ಮತ್ತು ತಾರತಮ್ಯ ಮೂಡಿಸುತ್ತದೆ. ಇದು ಪೋಷಕರ ಮೇಲೆ ಮತ್ತಷ್ಟು ಒತ್ತಡ ತರುತ್ತದೆ ಎಂದಿದ್ದಾರೆ. ಡೆಲಿವರಿ ಬಾಯ್‌ಗಳು ಪದೇ ಪದೇ ಶಾಲಾ ಆವರಣಕ್ಕೆ ಬರುವುದು ಭದ್ರತೆಯ ದೃಷ್ಟಿಯಿಂದ ಸರಿಯಲ್ಲ. ಪ್ರತಿದಿನ 4-5 ಪಾರ್ಸಲ್‌ಗಳನ್ನು ತರಗತಿಗಳಿಗೆ ತಲುಪಿಸುವುದು ಶಾಲೆಯ ಶಿಸ್ತು ಮತ್ತು ಸಮಯ ಪಾಲನೆಗೆ ಅಡ್ಡಿಪಡಿಸುತ್ತದೆ.

ಮನೆಯ ಊಟಕ್ಕೆ ಆದ್ಯತೆ
ಪೋಷಕರು ಅನಿವಾರ್ಯ ಕಾರಣಗಳಿಂದ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗದಿದ್ದರೆ, ಹೋಟೆಲ್‌ನಿಂದ ತರಿಸಿದ ಆರೋಗ್ಯಕರ ಆಹಾರವನ್ನೇ ಸಾಮಾನ್ಯ ಲಂಚ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಕಳುಹಿಸಬೇಕು ಎಂದು ಶಾಲೆಗಳು ವಿನಂತಿಸಿವೆ. ವಿದ್ಯಾರ್ಥಿಗಳಿಗೆ ಮಾದರಿಯಾಗಲು ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಕ್ಕೂ ಸಹ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವುದನ್ನು ನಿಷೇಧಿಸಲಾಗಿದೆ.

The post ಬೆಂಗಳೂರು ಶಾಲೆಗಳಲ್ಲಿ ಫುಡ್ ಡೆಲಿವರಿ ಆಪ್‌ಗಳಿಗೆ ನಿಷೇಧ ! appeared first on Good News 24x7.

]]>
ಗುರುಗಳಾದ KR ಸುಬ್ಬು ಕೃಷ್ಣ ಸ್ಮರಣಾರ್ಥ “ಲಾ ಗೈಡ್” ಸಂಸ್ಥೆಯಿಂದ ದತ್ತಿ ಪ್ರಶಸ್ತಿ https://www.goodnews24x7.com/in-memory-of-guru-kr-subbu-krishna-law-guide-institute-has-announced-an-endowment-award/ Fri, 22 May 2026 13:13:23 +0000 https://www.goodnews24x7.com/?p=9522 ಪ್ರೊ ಸಿ ಕೆ ಎನ್ ರಾಜಾ ಹಾಗೂ ಹಿರಿಯ ವಕೀಲರಾದ ದಿವಂಗತ ಕೆ ಅರ್ ಸುಬ್ಬಕೃಷ್ಣ ಅವರ ಸ್ಮರಣಾರ್ಥ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ವತಿಯಿಂದ ಭಾರತದ ಸಂವಿಧಾನ ವಿಷಯದಲ್ಲಿ ಹೆಚ್ಚು ಅಂಕ ಪಡೆದ ಕಾನೂನು ವಿದ್ಯಾರ್ಥಿಗೆ ಪ್ರತಿ ವರ್ಷ ನಗದು…

The post ಗುರುಗಳಾದ KR ಸುಬ್ಬು ಕೃಷ್ಣ ಸ್ಮರಣಾರ್ಥ “ಲಾ ಗೈಡ್” ಸಂಸ್ಥೆಯಿಂದ ದತ್ತಿ ಪ್ರಶಸ್ತಿ appeared first on Good News 24x7.

]]>

ಪ್ರೊ ಸಿ ಕೆ ಎನ್ ರಾಜಾ ಹಾಗೂ ಹಿರಿಯ ವಕೀಲರಾದ ದಿವಂಗತ ಕೆ ಅರ್ ಸುಬ್ಬಕೃಷ್ಣ ಅವರ ಸ್ಮರಣಾರ್ಥ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ವತಿಯಿಂದ ಭಾರತದ ಸಂವಿಧಾನ ವಿಷಯದಲ್ಲಿ ಹೆಚ್ಚು ಅಂಕ ಪಡೆದ ಕಾನೂನು ವಿದ್ಯಾರ್ಥಿಗೆ ಪ್ರತಿ ವರ್ಷ ನಗದು ಬಹುಮಾನವನ್ನು ಘೋಷಣೆ ಮಾಡಲಾಗಿದೆ.‌ ಇದಕ್ಕಾಗಿ ಒಂದು ಲಕ್ಷ ರೂಪಾಯಿಯನ್ನು ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕರು ಹಾಗೂ ಹಿರಿಯ ವಕೀಲರಾದ ಎಚ್ ಎನ್ ವೆಂಕಟೇಶ್ ಕಾಲೇಜು ಆಡಳಿತ ಮಂಡಳಿಗೆ ನೀಡಿದ್ದಾರೆ. 1 ಲಕ್ಷ ಠೇವಣಿ‌ ರೂಪದಲ್ಲಿ ಇಟ್ಟು ಅದರಿಂದ ಪ್ರತಿ ವರ್ಷವೂ ಬರುವ ಹಣವನ್ನು ಭಾರತದ ಸಂವಿಧಾನ ವಿಷಯದಲ್ಲಿ ಹೆಚ್ಚು ಅಂಕ ಪಡೆದ ಕಾನೂನು ವಿದ್ಯಾರ್ಥಿಗೆ ಪ್ರಶಸ್ತಿ ರೂಪದಲ್ಲಿ ನೀಡಲು ತಿಳಿಸಿದ್ದಾರೆ.

 

ಇಂದು ಶಾರದಾ ವಿಲಾಸ ಕಾನೂನು ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ (IQAC) ವತಿಯಿಂದ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಹಿರಿಯ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಘೋಷಣೆ ಮಾಡಿದರು.ಈ ವೇಳೆ ಕಾರ್ಯಕ್ರಮದಲ್ಲಿ ಕಾನೂನು ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಶ್ರೀ ಇ.ಎಸ್. ಇಂದ್ರೇಶ್, ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಹಾಗೂ ‘ಲಾ ಗೈಡ್’ ಕನ್ನಡ ಕಾನೂನು ಮಾಸಪತ್ರಿಕೆಯ ಗೌರವ ಸಂಪಾದಕರಾದ ಹಿರಿಯ ವಕೀಲರಾದ ಹೆಚ್.ಎನ್. ವೆಂಕಟೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಶಾರದಾವಿಲಾಸ ಶಿಕ್ಷಣ ಸಂಸ್ಥೆಯ ಹಿರಿಯ ಆಡಳಿತ ಮಂಡಳಿ ಸದಸ್ಯ ಶ್ರೀ ಎಸ್.ಎಲ್. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮೈಸೂರು ವಕೀಲರ ಸಂಘದ ಅಧ್ಯಕ್ಷ ಶ್ರೀ ಎಸ್. ಲೋಕೇಶ್, ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ಆರ್. ದಿನೇಶ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ಕಾನೂನು ವಿದ್ಯಾರ್ಥಿಗಳು ಹಾಗೂ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಚ್ ಎನ್ ವೆಂಕಟೇಶ್ ಶಾರದ ವಿಲಾಸ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಬಗ್ಗೆ ವಿವರವಾಗಿ ತಿಳಿಸಿದರು. ಇಲ್ಲಿ ಓದಿದ ವಿದ್ಯಾರ್ಥಿಗಳು ಇಂದು ದೇಶದ ಎಲ್ಲಾ‌ ಭಾಗದಲ್ಲೂ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ್ದಾರೆ. ಈ ಮೂಲಕ ದೇಶವನ್ನು ಮುನ್ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಕಾಲೇಜು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದವರಿದ ನಾನು ಸಹಾ ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಈ ಪರಂಪರೆ ಇದೇ ರೀತಿ ಮುಂದುವರಿಯಲಿ ಅನ್ನೋದು ನನ್ನ ಆಶಯ. ಹೀಗಾಗಿ ಸಂವಿಧಾನ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಒಬ್ಬ ವಿದ್ಯಾರ್ಥಿಗೆ ಲಾಗೈಡ್ ವತಿಯಿಂದ ನಗದು ದತ್ತಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಅದಕ್ಕಾಗಿ ಶಾರದ ವಿಲಾಸ ಕಾನೂನು ಕಾಲೇಜು ಮಂಡಳಿಗೆ ಒಂದು ಲಕ್ಷ ರೂಪಾಯಿ ಚೆಕ್‌ನ್ನು ದೇಣಿಗೆ ನೀಡಿರುವುದಾಗಿ ಅವರು ತಿಳಿಸಿದರು. ಪ್ರತಿ ವರ್ಷವೂ ಪ್ರೊ ಸಿ ಕೆ ಎನ್ ರಾಜಾ ಹಾಗೂ ಹಿರಿಯ ವಕೀಲರಾದ ದಿವಂಗತ ಕೆ ಅರ್ ಸುಬ್ಬಕೃಷ್ಣ ಅವರ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುವುದು ಎಂದು ಸಹಾ ಹೇಳಿದರು‌.

The post ಗುರುಗಳಾದ KR ಸುಬ್ಬು ಕೃಷ್ಣ ಸ್ಮರಣಾರ್ಥ “ಲಾ ಗೈಡ್” ಸಂಸ್ಥೆಯಿಂದ ದತ್ತಿ ಪ್ರಶಸ್ತಿ appeared first on Good News 24x7.

]]>
ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯ ಶಿರಚ್ಛೇದ ಮಾಡಿದ ಕ್ರೂರಿಗಳು ! https://www.goodnews24x7.com/the-brutality-of-the-beheading-of-a-college-studentthe-brutality-of-the-beheading-of-a-college-student/ Mon, 13 Apr 2026 09:38:58 +0000 https://www.goodnews24x7.com/?p=9259   ಹಿಮಾಚಲ ಪ್ರದೇಶ ಇಂದುನಡೆದ ಒಂದು ಪೈಶಾಚಿಕ ಕೃತ್ಯದಿಂದ ನಡುಗಿಹೋಗಿದೆ. ಕಾಲೇಜಿಗೆ ತೆರಳಿ ಉಜ್ವಲ ಭವಿಷ್ಯದ ಕನಸು ಕಾಣುತ್ತಿದ್ದ 19 ವರ್ಷದ ಯುವತಿಯನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಶಿರಚ್ಛೇದ ಮಾಡಿ ಹತ್ಯೆಮಾಡಿರುವ ಘಟನೆ ಮಂಡಿ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಸುಮಾರು 9.15ರ…

The post ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯ ಶಿರಚ್ಛೇದ ಮಾಡಿದ ಕ್ರೂರಿಗಳು ! appeared first on Good News 24x7.

]]>

 

ಹಿಮಾಚಲ ಪ್ರದೇಶ ಇಂದುನಡೆದ ಒಂದು ಪೈಶಾಚಿಕ ಕೃತ್ಯದಿಂದ ನಡುಗಿಹೋಗಿದೆ. ಕಾಲೇಜಿಗೆ ತೆರಳಿ ಉಜ್ವಲ ಭವಿಷ್ಯದ ಕನಸು ಕಾಣುತ್ತಿದ್ದ 19 ವರ್ಷದ ಯುವತಿಯನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಶಿರಚ್ಛೇದ ಮಾಡಿ ಹತ್ಯೆಮಾಡಿರುವ ಘಟನೆ ಮಂಡಿ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಸುಮಾರು 9.15ರ ಸಮಯ. ಮಂಡಿ ಜಿಲ್ಲೆಯ ಸರ್ಕಾಘಾಟ್ ಪ್ರದೇಶದಲ್ಲಿ ಜನಜಂಗುಳಿ ಆರಂಭವಾಗುತ್ತಿದ್ದಂತೆಯೇ ಈ ಘೋರ ದುರಂತ ಸಂಭವಿಸಿದೆ. ಎಂದಿನಂತೆ ಕಾಲೇಜಿಗೆಂದು ಮನೆಯಿಂದ ಹೊರಟಿದ್ದ ವಿದ್ಯಾರ್ಥಿನಿಯ ಮೇಲೆ ಅಪರಿಚಿತರು ರಸ್ತೆಯ ಮಧ್ಯದಲ್ಲೇ ಏಕಾಏಕಿ ದಾಳಿ ನಡೆಸಿದ್ದಾರೆ. ಕ್ರೌರ್ಯದ ಮಿತಿಯನ್ನೇ ಮೀರಿದ ಹಂತಕರು, ಆಕೆಯ ತಲೆಯನ್ನು ಕಡಿದು ಹಾಕಿ ಪರಾರಿಯಾಗಿದ್ದಾರೆ.

ಹಿಮಾಚಲ ಪ್ರದೇಶ ಇಂದು ನಡೆದ ಒಂದು ಪೈಶಾಚಿಕ ಕೃತ್ಯ ಜನತೆಯನ್ನು ಆತಂಕಕ್ಕೆ ದೂಡಿದೆ. ಕಾಲೇಜಿಗೆ ತೆರಳಿ ಉಜ್ವಲ ಭವಿಷ್ಯದ ಕನಸು ಕಾಣುತ್ತಿದ್ದ 19 ವರ್ಷದ ಯುವತಿಯನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಶಿರಚ್ಛೇದ ಮಾಡಿ ಹತ್ಯೆ ಮಾಡಿರುವ ಘಟನೆ ಮಂಡಿ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಸುಮಾರು 9.15ರ ಸಮಯ. ಮಂಡಿ ಜಿಲ್ಲೆಯ ಸರ್ಕಾಘಾಟ್ ಪ್ರದೇಶದಲ್ಲಿ ಜನಜಂಗುಳಿ ನಡುವೆಯೇ ಈ ಘೋರ ದುರಂತ ಸಂಭವಿಸಿದೆ. ಎಂದಿನಂತೆ ಕಾಲೇಜಿಗೆಂದು ಮನೆಯಿಂದ ಹೊರಟಿದ್ದ ವಿದ್ಯಾರ್ಥಿನಿಯ ಮೇಲೆ ಅಪರಿಚಿತರು ರಸ್ತೆಯ ಮಧ್ಯದಲ್ಲೇ ಏಕಾಏಕಿ ದಾಳಿ ನಡೆಸಿದ್ದಾರೆ. ಕ್ರೌರ್ಯದ ಮಿತಿಯನ್ನೇ ಮೀರಿದ ಹಂತಕರು, ಆಕೆಯ ತಲೆಯನ್ನು ಕಡಿದು ಹಾಕಿ ಪರಾರಿಯಾಗಿದ್ದಾರೆ.

ರಸ್ತೆಯ ತುಂಬೆಲ್ಲಾ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿನಿಯ ದೇಹವನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಕಂಡು ದಬಾಬಾಜಿ ಹೋಗಿದ್ದಾರೆ.

ಘಟನಾ ಸ್ಥಳಕ್ಕೆ ಮಂಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಬೈಕ್‌ನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.

 

ಘಟನೆಯ ಹಿಂದಿನ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಹಂತಕರನ್ನು ಪತ್ತೆಹಚ್ಚಲು ಈಗಾಗಲೇ ಹಲವು ತಂಡಗಳನ್ನು ರಚಿಸಲಾಗಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಎಂದು ಎಸ್‌ಪಿ ವಿನೋದ್ ಕುಮಾರ್ ತಿಳಿಸಿದ್ದಾರೆ.

ನಡುರಸ್ತೆಯಲ್ಲಿ, ಅದೂ ಹಗಲು ಹೊತ್ತಿನಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಇಷ್ಟು ಭೀಕರವಾಗಿ ಹತ್ಯೆ ಮಾಡಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶವನ್ನು ಮೂಡಿಸಿದೆ. ಇದು ವೈಯಕ್ತಿಕ ದ್ವೇಷದ ಹಿನ್ನೆಲೆಯೇ ಅಥವಾ ಪ್ರೀತಿಯ ವಿಷಯಕ್ಕೆ ಸಂಬಂಧಿಸಿದ್ದೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಸ್ತುತ, ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಈ ಘಟನೆಯಿಂದಾಗಿ ಇಡೀ ಸರ್ಕಾಘಾಟ್ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಜನರು ಭೀತಿಯಲ್ಲಿ ದಿನ ದೂಡುವಂತಾಗಿದೆ.

 

The post ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯ ಶಿರಚ್ಛೇದ ಮಾಡಿದ ಕ್ರೂರಿಗಳು ! appeared first on Good News 24x7.

]]>
ಬೀದಿ ನಾಯಿ ಕಚ್ಚಿದ್ದರಿಂದ ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ! https://www.goodnews24x7.com/students-face-gets-17-stitches-after-being-bitten-by-a-stray-dog/ Sun, 24 Aug 2025 10:44:38 +0000 https://www.goodnews24x7.com/?p=6676 ಕಾನ್ಪುರದಲ್ಲಿ ಭಯಾನಕ ಘಟನೆ ನಡೆದಿದೆ. ಬೀದಿ ನಾಯಿಗಳು 21 ವರ್ಷದ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಆಕೆಯ ಮುಖಕ್ಕೆ 17 ಹೊಲಿಗೆಗಳು ಬಿದ್ದಿವೆ. ಮೈ ತುಂಬ ಹಲವು ಗಾಯಗಳಾಗಿವೆ. 21 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬೀದಿ ನಾಯಿಗಳು…

The post ಬೀದಿ ನಾಯಿ ಕಚ್ಚಿದ್ದರಿಂದ ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ! appeared first on Good News 24x7.

]]>

ಕಾನ್ಪುರದಲ್ಲಿ ಭಯಾನಕ ಘಟನೆ ನಡೆದಿದೆ. ಬೀದಿ ನಾಯಿಗಳು 21 ವರ್ಷದ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಆಕೆಯ ಮುಖಕ್ಕೆ 17 ಹೊಲಿಗೆಗಳು ಬಿದ್ದಿವೆ. ಮೈ ತುಂಬ ಹಲವು ಗಾಯಗಳಾಗಿವೆ. 21 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬೀದಿ ನಾಯಿಗಳು ಅವಳ ಮುಖದ ಮೇಲೆ ತೀವ್ರವಾದ ದಾಳಿ ನಡೆಸಿವೆ. ಇದರಿಂದ ಆಕೆಯ ಮುಖಕ್ಕೆ 17 ಹೊಲಿಗೆಗಳನ್ನು ಹಾಕಲಾಗಿದೆ.
ಕಾನ್ಪುರ: ಕಾನ್ಪುರದಲ್ಲಿ 21 ವರ್ಷದ ಬಿಬಿಎ ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳು ಕ್ರೂರವಾಗಿ ದಾಳಿ ಮಾಡಿವೆ. ಆಕೆಯ ಮುಖಕ್ಕೆ ತೀವ್ರ ಗಾಯಗಳು ಉಂಟಾಗಿದ್ದು, 17 ಹೊಲಿಗೆಗಳನ್ನು ಹಾಕಲಾಗಿದೆ. ಕಾಲೇಜಿನಿಂದ ಮನೆಗೆ ಮರಳುತ್ತಿದ್ದ 21 ವರ್ಷದ ಯುವತಿಯ ಮೇಲೆ ಬೀದಿ ನಾಯಿಗಳು ಕ್ರೂರವಾಗಿ ದಾಳಿ ಮಾಡಿವೆ. ಈ ದಾಳಿಯಿಂದ ಆಕೆಯ ಮುಖದ ಮೇಲೆ ಆಳವಾದ ಗಾಯಗಳಾಗಿದ್ದು, ವೈದ್ಯರು ಆಕೆಯ ಕೆನ್ನೆಗೆ 17 ಹೊಲಿಗೆಗಳನ್ನು ಹಾಕಿದ್ದಾರೆ. ಬೀದಿ ನಾಯಿಗಳು ಅವಳನ್ನು ನೆಲಕ್ಕೆ ಎಳೆದುಕೊಂಡು ಮುಖ ಮತ್ತು ದೇಹದ ಮೇಲೆ ಕ್ರೂರವಾಗಿ ದಾಳಿ ಮಾಡಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ನಾಯಿ ಕಚ್ಚಿ ಎಳೆದಿದ್ದರಿಂದ ಆಕೆಯ ಬಲ ಕೆನ್ನೆ ಎರಡು ಭಾಗವಾಗಿದ್ದು, ಆಕೆಯ ಮೂಗಿನ ಮೇಲೆ, ದೇಹದ ಇತರ ಭಾಗಗಳ ಮೇಲೆ ಗಂಭೀರವಾದ ಗಾಯಗಳಾಗಿವೆ. ಆಗಸ್ಟ್ 20ರಂದು ಆಕೆ ಮನೆಗೆ ಹಿಂದಿರುಗುತ್ತಿದ್ದಾಗ ಬೀದಿ ನಾಯಿಗಳು ಆ 21 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದಾಳಿಯಲ್ಲಿ ಆಕೆಗೆ ಹಲವು ಬಾರಿ ಕಚ್ಚಿ ಗಾಯಗಳಾಗಿದ್ದು, ವೈದ್ಯರು ಆಕೆಯ ಕೆನ್ನೆ ಮತ್ತು ಮೂಗಿನ ಮೇಲೆ 17 ಹೊಲಿಗೆಗಳನ್ನು ಹಾಕಬೇಕಾಯಿತು. ಅಲೆನ್ ಹೌಸ್ ರುಮಾ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿನಿ ವೈಷ್ಣವಿ ಸಾಹು ಎಂದು ಗುರುತಿಸಲ್ಪಟ್ಟ ಯುವತಿ ಶ್ಯಾಮ್ ನಗರದ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ಬೀದಿ ನಾಯಿಗಳು ಮತ್ತು ಕೋತಿಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ಅವುಗಳ ಜಗಳದಲ್ಲಿ ಕೋಪಗೊಂಡಿದ್ದ ಮೂರು ನಾಯಿಗಳು ಇದ್ದಕ್ಕಿದ್ದಂತೆ ಆಕೆಯ ಮೇಲೆ ದಾಳಿ ಮಾಡಿದವು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರಾಣಿಗಳು ಆಕೆಯನ್ನು ನೆಲಕ್ಕೆ ಎಳೆದುಕೊಂಡು ಹೋಗಿ, ಆಕೆಯ ಮುಖ ಮತ್ತು ದೇಹವನ್ನು ಕಚ್ಚಿದವು. ಆಕೆಯ ಬಲ ಕೆನ್ನೆ ಎರಡು ಭಾಗಗಳಾಗಿ ಹರಿದುಹೋಗಿತ್ತು.ಆಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಆವೇಶದಲ್ಲಿದ್ದ ಬೀದಿ ನಾಯಿಗಳು ಮತ್ತೆ ಆಕೆಯ ಮೇಲೆ ದಾಳಿ ಮಾಡಿ ರಸ್ತೆಗೆ ಎಳೆದುಕೊಂಡು ಹೋದವು. ಆಕೆಯ ಕೂಗು ಕೇಳಿ, ಸ್ಥಳೀಯರು ಕೋಲುಳಿಂದ ಹೊಡೆದು ನಾಯಿಗಳನ್ನು ಓಡಿಸಿದರು. ಅಷ್ಟರಲ್ಲಿ ಆ ಯುವತಿಯ ದೇಹದಿಂದ ರಕ್ತಸ್ರಾವವಾಗುತ್ತಿತ್ತು. ವಿಷಯ ತಿಳಿದ ಕೂಡಲೆ ಆಕೆಯ ಕುಟುಂಬ ಸದಸ್ಯರು ತಕ್ಷಣ ಆಕೆಯನ್ನು ಕಾನ್ಶಿರಾಮ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಆಕೆಯ ಗಾಯಗಳನ್ನು ಹೊಲಿದರು.

ಸುಪ್ರೀಂ ಕೋರ್ಟ್ ಇತ್ತೀಚೆಗೆ ದೆಹಲಿಯ ಬೀದಿ ನಾಯಿಗಳನ್ನು ಸಂತಾನಹರಣ ಚಿಕಿತ್ಸೆ ನಡೆಸಬೇಕು ಮತ್ತು ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ಎಂಬ ಕುರಿತು ನೀಡಿದ ತೀರ್ಪಿನ ಕುರಿತು ದೇಶಾದ್ಯಂತ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿರುವ ನಡುವೆಯೇ ಈ ದಾಳಿ ನಡೆದಿದೆ.

The post ಬೀದಿ ನಾಯಿ ಕಚ್ಚಿದ್ದರಿಂದ ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ! appeared first on Good News 24x7.

]]>
ನಾಯಿ ಕಚ್ಚಿದ್ದರಿಂದ ಕಾಲೇಜು ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ! https://www.goodnews24x7.com/college-student-gets-17-stitches-on-face-after-dog-bite/ Sat, 23 Aug 2025 13:54:03 +0000 https://www.goodnews24x7.com/?p=6598 ಕಾನ್ಪುರ, ಆಗಸ್ಟ್ 23: ಕಾನ್ಪುರದಲ್ಲಿ (Kanpur) 21 ವರ್ಷದ ಬಿಬಿಎ ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳು ಕ್ರೂರವಾಗಿ ದಾಳಿ ಮಾಡಿವೆ. ಆಕೆಯ ಮುಖಕ್ಕೆ ತೀವ್ರ ಗಾಯಗಳು ಉಂಟಾಗಿದ್ದು, 17 ಹೊಲಿಗೆಗಳನ್ನು ಹಾಕಲಾಗಿದೆ. ಕಾಲೇಜಿನಿಂದ ಮನೆಗೆ ಮರಳುತ್ತಿದ್ದ 21 ವರ್ಷದ ಯುವತಿಯ ಮೇಲೆ…

The post ನಾಯಿ ಕಚ್ಚಿದ್ದರಿಂದ ಕಾಲೇಜು ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ! appeared first on Good News 24x7.

]]>

ಕಾನ್ಪುರ, ಆಗಸ್ಟ್ 23: ಕಾನ್ಪುರದಲ್ಲಿ (Kanpur) 21 ವರ್ಷದ ಬಿಬಿಎ ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳು ಕ್ರೂರವಾಗಿ ದಾಳಿ ಮಾಡಿವೆ. ಆಕೆಯ ಮುಖಕ್ಕೆ ತೀವ್ರ ಗಾಯಗಳು ಉಂಟಾಗಿದ್ದು, 17 ಹೊಲಿಗೆಗಳನ್ನು ಹಾಕಲಾಗಿದೆ. ಕಾಲೇಜಿನಿಂದ ಮನೆಗೆ ಮರಳುತ್ತಿದ್ದ 21 ವರ್ಷದ ಯುವತಿಯ ಮೇಲೆ ಬೀದಿ ನಾಯಿಗಳು (Stray Dog Attack) ಕ್ರೂರವಾಗಿ ದಾಳಿ ಮಾಡಿವೆ. ಈ ದಾಳಿಯಿಂದ ಆಕೆಯ ಮುಖದ ಮೇಲೆ ಆಳವಾದ ಗಾಯಗಳಾಗಿದ್ದು, ವೈದ್ಯರು ಆಕೆಯ ಕೆನ್ನೆಗೆ 17 ಹೊಲಿಗೆಗಳನ್ನು ಹಾಕಿದ್ದಾರೆ. ಬೀದಿ ನಾಯಿಗಳು ಅವಳನ್ನು ನೆಲಕ್ಕೆ ಎಳೆದುಕೊಂಡು ಮುಖ ಮತ್ತು ದೇಹದ ಮೇಲೆ ಕ್ರೂರವಾಗಿ ದಾಳಿ ಮಾಡಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

The post ನಾಯಿ ಕಚ್ಚಿದ್ದರಿಂದ ಕಾಲೇಜು ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ! appeared first on Good News 24x7.

]]>
ಚೀನಾ ನಿರ್ಮಿತ ಯುದ್ಧ ವಿಮಾನ ಢಾಕಾ ಕಾಲೇಜಿನ ಆವರಣದಲ್ಲಿ ಪತನ, ಹಲವು ಮಂದಿ ಸಾ*ವು https://www.goodnews24x7.com/chinese-made-fighter-jet-crashes-into-dhaka-college-campus-several-dead/ Mon, 21 Jul 2025 09:33:53 +0000 https://www.goodnews24x7.com/?p=5172 ಢಾಕಾ : ಬಾಂಗ್ಲಾದೇಶ ವಾಯುಪಡೆಯ ತರಬೇತಿ ನಿರತ ವಿಮಾನವು ಢಾಕಾದ ಉತ್ತರ ಪ್ರದೇಶದ ಮೈಲ್ಸ್ಟೋನ್ ಕಾಲೇಜು ಆವರಣಕ್ಕೆ ಅಪ್ಪಳಿಸಿದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಚೀನಾ ನಿರ್ಮಿತ ವಿಮಾನವಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಂತೆ ಸಾವಿನ ಸಂಖ್ಯೆ ಹೆಚ್ಚಾಗಬಹುದು…

The post ಚೀನಾ ನಿರ್ಮಿತ ಯುದ್ಧ ವಿಮಾನ ಢಾಕಾ ಕಾಲೇಜಿನ ಆವರಣದಲ್ಲಿ ಪತನ, ಹಲವು ಮಂದಿ ಸಾ*ವು appeared first on Good News 24x7.

]]>

ಢಾಕಾ : ಬಾಂಗ್ಲಾದೇಶ ವಾಯುಪಡೆಯ ತರಬೇತಿ ನಿರತ ವಿಮಾನವು ಢಾಕಾದ ಉತ್ತರ ಪ್ರದೇಶದ ಮೈಲ್ಸ್ಟೋನ್ ಕಾಲೇಜು ಆವರಣಕ್ಕೆ ಅಪ್ಪಳಿಸಿದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಚೀನಾ ನಿರ್ಮಿತ ವಿಮಾನವಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಂತೆ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

F-7 BGI ತರಬೇತಿ ಜೆಟ್ ಎಂದು ಗುರುತಿಸಲಾದ ವಿಮಾನವು, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಸುಮಾರು ಮಧ್ಯಾಹ್ನ 1.06 ಕ್ಕೆ ಡಯಾಬರಿ ಪ್ರದೇಶದ ಕಾಲೇಜು ಆವರಣಕ್ಕೆ ಅಪ್ಪಳಿಸಿತು. ಅಪಘಾತದ ಸ್ಥಳದಿಂದ ದಟ್ಟವಾದ ಹೊಗೆ ಏರುತ್ತಿರುವುದು ಕಂಡುಬಂದಿದೆ. ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಪ್ರಸ್ತುತ ಸ್ಥಳದಲ್ಲಿದೆ ಹುಡುಕಾಟ ನಡೆಸುತ್ತಿವೆ. ಘಟನೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

 

The post ಚೀನಾ ನಿರ್ಮಿತ ಯುದ್ಧ ವಿಮಾನ ಢಾಕಾ ಕಾಲೇಜಿನ ಆವರಣದಲ್ಲಿ ಪತನ, ಹಲವು ಮಂದಿ ಸಾ*ವು appeared first on Good News 24x7.

]]>
ಕೆಆರ್ಎಸ್ ಹಿನ್ನೀರಿನಲ್ಲಿ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಜಲಸ*ಮಾಧಿ https://www.goodnews24x7.com/three-nursing-students-drown-in-krs-backwater/ Mon, 21 Jul 2025 08:06:00 +0000 https://www.goodnews24x7.com/?p=5162 ಮೈಸೂರು : ಪ್ರವಾಸ ಕ್ಕೆಂದು ಬಂದಿದ್ದ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮೈಸೂರು ತಾಲೂಕಿನ ಮೀನಾಕ್ಷಿಪುರದ ಕೆಆರ್ಎಸ್ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಮಂಡ್ಯದ ಸರ್ಕಾರಿ ವೈದ್ಯಕೀಯ ಕಾಲೇಜಿನ (ಮಿಮ್ಸ್) ನರ್ಸಿಂಗ್ ವಿದ್ಯಾರ್ಥಿಗಳಾದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ…

The post ಕೆಆರ್ಎಸ್ ಹಿನ್ನೀರಿನಲ್ಲಿ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಜಲಸ*ಮಾಧಿ appeared first on Good News 24x7.

]]>

ಮೈಸೂರು : ಪ್ರವಾಸ ಕ್ಕೆಂದು ಬಂದಿದ್ದ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮೈಸೂರು ತಾಲೂಕಿನ ಮೀನಾಕ್ಷಿಪುರದ ಕೆಆರ್ಎಸ್ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಮಂಡ್ಯದ ಸರ್ಕಾರಿ ವೈದ್ಯಕೀಯ ಕಾಲೇಜಿನ (ಮಿಮ್ಸ್) ನರ್ಸಿಂಗ್ ವಿದ್ಯಾರ್ಥಿಗಳಾದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಅನವಾಲು ಗ್ರಾಮದ ಪ್ರಶಾಂತ್ (21), ಚಾಮ ರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಸಂತೇಮರಹಳ್ಳಿಯ ಸಿದ್ದೇಶ್(22), ಕೊಪ್ಪಳ ಜಿಲ್ಲೆಯ ಕೃಷ್ಣ(21) ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ನರ್ಸಿಂಗ್ ವಿದ್ಯಾರ್ಥಿಗಳು.
ತುಂಬಿ ತುಳುಕುತ್ತಿರುವ ಕೆಆರ್ಎಸ್ ಜಲಾ ಶಯದ ಹಿನ್ನೀರಿನ ಪ್ರದೇಶಗಳು ಪ್ರವಾಸಿತಾಣವಾಗಿ ಮಾರ್ಪಟ್ಟಿದ್ದು, ಪ್ರತಿ ದಿನ ನೂರಾರು ಮಂದಿ ಪ್ರವಾಸಿಗರು ಹಿನ್ನೀರಿನ ಪ್ರದೇಶಕ್ಕೆ ಬಂದು ವಿಹರಿಸಿ ವಾಪಸ್ಸಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನರ್ಸಿಂಗ್ ಕಾಲೇಜಿನ 6 ವಿದ್ಯಾರ್ಥಿಗಳು 3 ಬೈಕ್ ಗಳಲ್ಲಿ ಭಾನುವಾರ ಬೆಳಗ್ಗೆ ವಿದ್ಯಾರ್ಥಿನಿಲಯ ದಿಂದ ಮೈಸೂರು ತಾಲೂಕಿನ ಮೀನಾಕ್ಷಿಪುರದ ಕೆಆರ್ಎಸ್ ಹಿನ್ನೀರಿನ ಪ್ರದೇಶಕ್ಕೆ ಪಿಕ್ನಿಕ್ ಬಂದಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಐವರು ವಿದ್ಯಾರ್ಥಿಗಳು ಈಜಲು ಮುಂದಾಗಿ ದ್ದರೆ, ಓರ್ವ ವಿದ್ಯಾರ್ಥಿ ದಡದಲ್ಲಿಯೇ ನಿಂತಿದ್ದ ಎನ್ನಲಾಗಿದೆ. ಕೆಲ ಸಮಯದ ನಂತರ ಈಜುತ್ತಿದ್ದ ಐವರು ವಿದ್ಯಾರ್ಥಿ ಗಳು ನೀರಿನ ಸೆಳೆತಕ್ಕೆ ಒಳಗಾಗಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನು ದಡದಲ್ಲಿ ನಿಂತಿದ್ದ ರಕ್ಷಿಸಿದ್ದಾನೆ.
ಸ್ಥಳೀಯರು ಮತ್ತು ಇನ್ನಿತರ ಪ್ರವಾಸಿಗರು ನೆರವಿಗೆ ಬರುವ ವೇಳೆಗೆ ಮೂವರೂ ಹಿನ್ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದ್ದರು. ಇದರಿಂದ ಅವರನ್ನು ಸ್ಥಳೀಯರಿಗೆ ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ಮುಳುಗಿರುವ ವಿಷಯ ತಿಳಿಯುತ್ತಿದ್ದಂತೆ ಇಲವಾಲ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಹೇಂದ್ರ ಸಿಬ್ಬಂದಿಗಳೊಂದಿಗೆ ಆಗಮಿಸಿ ಪರಿಶೀಲಿಸಿದರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ನುರಿತ ಈಜುಗಾರರನ್ನು ಕರೆಸಿ ಸತತ 2 ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಸಂಜೆ 4 ಗಂಟೆಗೆ ಮೂವರು ವಿದ್ಯಾರ್ಥಿಗಳ ಮೃತದೇಹ ಪತ್ತೆಯಾ ಯಿತು.
ನಂತರ ಮಹಜರ್ ನಡೆಸಿ ಮೈಸೂರಿನ ಸರ್ಕಾರಿ ಮೆಡಿಕಲ್ ಕಾಲೇಜಿನ ಶವಾಗಾರಕ್ಕೆ ದೇಹಗಳನ್ನು ಸ್ಥಳಾಂತರಿಸ ಲಾಯಿತು. ಮೃತಪಟ್ಟ ವರು ವಿದ್ಯಾರ್ಥಿ ಗಳ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಸಂಜೆ ವೇಳೆಗೆ ಪಿರಿಯಾ ಪಟ್ಟಣದ ಪ್ರಶಾಂತ್ ಹಾಗೂ ಸಂತೇಮರ ಹಳ್ಳಿಯ ಸಿದ್ದೇಶ್ ಪೋಷಕರು ಶವಾ ಗಾರದ ಬಳಿ ಆಗಮಿಸಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಅವರ ಗೋಳಾಟ ಹೇಳತೀರದ್ದಾಗಿದೆ. ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸು ದಾರರಿಗೆ ದೇಹವನ್ನು ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಇಲವಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ.

The post ಕೆಆರ್ಎಸ್ ಹಿನ್ನೀರಿನಲ್ಲಿ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಜಲಸ*ಮಾಧಿ appeared first on Good News 24x7.

]]>
ಗಡಿ ಜಿಲ್ಲೆಯ ಯುವಕರಿಗೆ “ಬೋಸ್” “ಲಾ” ಭಾಗ್ಯ! https://www.goodnews24x7.com/mp-sunil-boses-request-granted-by-bar-council-of-india-new-delhi/ Thu, 05 Jun 2025 10:33:47 +0000 https://www.goodnews24x7.com/?p=4221   ಸಂಸದ ಸುನೀಲ್ ಬೋಸ್ ಮನವಿಗೆ ಮನ್ನಣೆ  ಚಾಮರಾಜನಗರಕ್ಕೆ ಲಾ ಕಾಲೇಜ್ ಮಂಜೂರು. ಬೇಸಿಕ್ ಪೆಸಲಿಟಿ ಕೊಟ್ಟು ಲಾ ಕಾಲೇಜ್ ಅಪ್ರೂಲ್ ಚಾಮರಾಜ ನಗರ ಸಂಸದ ಸುನೀಲ್ ಬೋಸ್ ಶ್ರಮಕ್ಕೆ ಸಿಕ್ಕ ಪ್ರತಿಫಲ   ಚಾಮರಾಜನಗರ : ಚಾಮರಾಜನಗರದ ಸರಕಾರಿ ಕಾನೂನು…

The post ಗಡಿ ಜಿಲ್ಲೆಯ ಯುವಕರಿಗೆ “ಬೋಸ್” “ಲಾ” ಭಾಗ್ಯ! appeared first on Good News 24x7.

]]>

 
  • ಸಂಸದ ಸುನೀಲ್ ಬೋಸ್ ಮನವಿಗೆ ಮನ್ನಣೆ 
  • ಚಾಮರಾಜನಗರಕ್ಕೆ ಲಾ ಕಾಲೇಜ್ ಮಂಜೂರು.
  • ಬೇಸಿಕ್ ಪೆಸಲಿಟಿ ಕೊಟ್ಟು ಲಾ ಕಾಲೇಜ್ ಅಪ್ರೂಲ್
  • ಚಾಮರಾಜ ನಗರ ಸಂಸದ ಸುನೀಲ್ ಬೋಸ್ ಶ್ರಮಕ್ಕೆ ಸಿಕ್ಕ ಪ್ರತಿಫಲ

 

ಚಾಮರಾಜನಗರ : ಚಾಮರಾಜನಗರದ ಸರಕಾರಿ ಕಾನೂನು ಕಾಲೇಜು ಆರಂಭಕ್ಕಾಗಿ ಅನುಮೋದನೆ ನೀಡುವಂತೆ ಲೋಕಸಭೆ ಸದಸ್ಯ ಸುನೀಲ್ ಬೋಸ್ ಹೊಸದಿಲ್ಲಿಯ బారా ಕೌನ್ಸಿಲ್ ಆಫ್ ಇಂಡಿಯಾಗೆ ಮಾಡಿದ್ದ ಮನವಿ ಪುರಸ್ಕೃತಗೊಂಡಿದ್ದು, ಪ್ರಸಕ್ತ ಸಾಲಿನಿಂದಲೇ ಮೂರು ವರ್ಷಗಳ ಪದವಿ ಕೋರ್ಸ್ ಪ್ರವೇಶಕ್ಕೆ ಅನುಮೋದನೆ ದೊರೆತಿದೆ.

 

 

 

 

ಮೂರು ವರ್ಷದ ಎಲ್‌ಎಲ್‌ಬಿ ಮತ್ತು ಐದು ವರ್ಷದ ಬಿಎ ಎಲ್ ಎಲ್‌ಬಿ ಕೋರ್ಸ್ಗೆ ಕರ್ನಾಟಕ ಸರಕಾರದ ಅನುಮತಿ ಪಡೆದುಕೊಂಡು ತಾತ್ಕಾಲಿಕವಾಗಿ ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಕಾನೂನು ಕಾಲೇಜು ಸ್ಥಾಪನೆಗೊಂಡಿತ್ತು.
ಹುಬ್ಬಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಸಂಯೋಜನೆ ಪಡೆದುಕೊಳ್ಳಲಾಗಿತ್ತು. ಭಾರತೀಯ ವಕೀಲರ ಪರಿಷತ್ (ಬಾರ್ ಕೌನ್ಸಿಲ್ ಆಫ್ ಇಂಡಿಯಾ) ಅನುಮೋದನೆಗಾಗಿ ಶುಲ್ಕವನ್ನು ಪಾವತಿಸಲಾಗಿತ್ತು.  ಕಳೆದ ಏ. 21ರಂದು ಸಂಸದ ಸುನೀಲ್ ಬೋಸ್ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಪತ್ರ ಬರೆದು ನಗರದಲ್ಲಿ ಸರಕಾರಿ ಕಾನೂನು ಕಾಲೇಜು ಸ್ಥಾಪನೆ ಮತ್ತು ಅನುಮೋದನೆಯ ತುರ್ತು ಅಗತ್ಯವನ್ನು ವಿವರವಾಗಿ ಮನದಟ್ಟು ಮಾಡಿದ್ದರು.

 

 

 

 

 

 

 

 

 

ಪ್ರಸ್ತುತ ಬಾರ್ ಕೌನ್ಸಿಲ್ ನಗರದ ಕಾನೂನು 2025-26 ಸರಕಾರಿ ಕಾಲೇಜಿಗೆ ಹಾಗೂ 2026-27ನೇ ಶೈಕ್ಷಣಿಕ ಅವಧಿಗೆ 60 ವಿದ್ಯಾರ್ಥಿಗಳ ಒಂದು ವಿಭಾಗದ ಪ್ರವೇಶ ದೊಂದಿಗೆ ಮೂರು ವರ್ಷಗಳ ಎಲ್‌ಎಲ್‌ ಬಿ ಪದವಿ ಕೋರ್ಸ್‌ಗೆ ಹೊಸ ಅನುಮೋದನೆ ನೀಡಲಾಗಿದೆ ಎಂದು ಜೂ. 2ರಂದು ಹುಬ್ಬಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ನಗರದ ಸರಕಾರಿ ಕಾನೂನು ಕಾಲೇಜು ಪ್ರಾಂಶುಪಾಲರಿಗೆ ಪತ್ರದ ಮೂಲಕ ತಿಳಿಸಿದೆ.

 

 

 

 

 

 

 

(ಲೋಕಸಭೆ ಸದಸ್ಯ ಸುನೀಲ್ ಬೋಸ್)

ಕಾನೂನು ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಸುನೀಲ್ ಬೋಸ್ ತಮ್ಮ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಯಿಂದ ಕಾನೂನು ಕಾಲೇಜಿನ ಗ್ರಂಥಾಲಯಕ್ಕೆ ಪುಸ್ತಕ ಖರೀದಿಗಾಗಿ ಲಕ್ಷ ರೂ. ಒದಗಿಸಲು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.

The post ಗಡಿ ಜಿಲ್ಲೆಯ ಯುವಕರಿಗೆ “ಬೋಸ್” “ಲಾ” ಭಾಗ್ಯ! appeared first on Good News 24x7.

]]>
ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೋರ್ವ ಯುವತಿ ಸಾ*ವು! https://www.goodnews24x7.com/another-young-woman-dies-of-heart-attack-in-hassan/ Thu, 29 May 2025 11:25:36 +0000 https://www.goodnews24x7.com/?p=4110 ಹಾಸನ: ಹೃದಯಾಘಾತದಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಕೊನೆಯುಸಿರೆಳೆದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.                 ಹಾಸನ ತಾಲೂಕಿನ ಕೆಲವತ್ತಿ ಗ್ರಾಮದ ಕವನ ಕೆ.ವಿ. (21) ಹೃದಯಾಘಾತಕ್ಕೊಳಗಾದ ಯುವತಿ. ಕೆಲವತ್ತಿ ಗ್ರಾಮದ…

The post ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೋರ್ವ ಯುವತಿ ಸಾ*ವು! appeared first on Good News 24x7.

]]>

ಹಾಸನ: ಹೃದಯಾಘಾತದಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಕೊನೆಯುಸಿರೆಳೆದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

 

 

 

 

 

 

 

 

ಹಾಸನ ತಾಲೂಕಿನ ಕೆಲವತ್ತಿ ಗ್ರಾಮದ ಕವನ ಕೆ.ವಿ. (21) ಹೃದಯಾಘಾತಕ್ಕೊಳಗಾದ ಯುವತಿ. ಕೆಲವತ್ತಿ ಗ್ರಾಮದ ಪಾಪಣ್ಣ ಹಾಗೂ ಗಾಯತ್ರಿ ದಂಪತಿ ಪುತ್ರಿ ಕವನಾ ಹಾಸನ ನಗರದ ಎಂ.ಜಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು. ಪದವಿ ಪರೀಕ್ಷೆ ನಡೆಯುತ್ತಿದ್ದು, ಈಗಾಗಲೇ ಆಕೆ 3 ವಿಷಯಗಳ ಪರೀಕ್ಷೆ ಬರೆದಿದ್ದಳು. ಉಳಿದ ಮೂರು ವಿಷಯದ ಪರೀಕ್ಷೆಗಳನ್ನು ಬರೆಯಬೇಕಿತ್ತು.
ನಿನ್ನೆ ಸಂಜೆ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದಾಳೆ. ತಾಯಿ ಕುಡಿಯುವ ನೀರು ತರಲು ಹೇಳಿದ್ದು, ಅದರಂತೆ ಆಕೆ ಶುದ್ಧ ಕುಡಿಯುವ ನೀರಿನ ಘಟಕದಿಂದ ಮನೆಗೆ ನೀರು ತರುವಾಗ ಕವನಾಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಕವನಾ ತಾಯಿ ಬಳಿ ಕುಡಿಯಲು ನೀರು ಕೇಳಿದ್ದಾಳೆ. ತಾಯಿ ನೀರು ತಂದು ಕೊಡುವಷ್ಟರಲ್ಲಿ ಮನೆಯಲ್ಲಿಯೇ ಕುಸಿದು ಬಿದ್ದಿದ್ದಳು. ಕೂಡಲೇ ಪೋಷಕರು ಆಕೆಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಾಗಲೇ ಕವನಾ ಕೊನೆಯುಸಿರೆಳೆದಿದ್ದಳು.

 

 

 

 

 

ಸದ್ಯ ಮದುವೆ ವಯಸ್ಸಿಗೆ ಬಂದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಹಪಾಠಿಗಳು ಹಾಗೂ ಕಾಲೇಜು ಉಪನ್ಯಾಸಕ ವರ್ಗದಲ್ಲಿಯೂ ಶೋಕ ಮಡುಗಟ್ಟಿದೆ. ಇಂದು ಪರೀಕ್ಷೆ ಇದ್ದರೂ ಕೂಡಾ ಕೆಲವು ಸ್ನೇಹಿತರು ಮತ್ತು ಪ್ರಾಧ್ಯಾಪಕ ವರ್ಗ ಕೆಲವತ್ತಿಗೆ ತೆರಳಿ ಆಕೆಯ ಅಂತಿಮ ದರ್ಶನ ಪಡೆದಿದ್ದಾರೆ.

 

 

 

 

 

 

 

 

 

1 ಹೃದಯಾಘಾತದಿಂದ ಯುವತಿ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ. ಸಂಧ್ಯಾ (19) ಮೃತ ಯುವತಿ. ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ನಿವಾಸಿಗಳಾದ ವೆಂಕಟೇಶ್-ಪೂರ್ಣಿಮ ದಂಪತಿ ಪುತ್ರಿ ಸಂಧ್ಯಾ ಅಂತಿಮ ವರ್ಷದ ಡಿಪ್ಲೊಮಾ ಮುಗಿಸಿದ್ದಳು. ಬಾತ್ರೂಂಗೆ ತೆರಳಿದ್ದ ವೇಳೆ ಸಂಧ್ಯಾ ಕುಸಿದು ಬಿದ್ದಿದ್ದಾಳೆ. ಕೂಡಲೇ ಬಾತ್ರೂಂ ಬಾಗಿಲು ಒಡೆದು ಪೋಷಕರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು. ಆದರೆ ಅಷ್ಟು ಹೊತ್ತಿಗೆ ಸಂಧ್ಯಾಳ ಜೀವ ನಿಂತಿತ್ತು.

 

 

 

 

 

2 ಬೆಂಗಳೂರಿನಲ್ಲಿ ಹಾಸನ ಯುವಕ ಸಾವು
ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅರಕಲಗೂಡು ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ. ಮೃತನನ್ನು ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಅಭಿಷೇಕ್ (19) ಎಂದು ಗುರುತಿಸಲಾಗಿದೆ. ಯುವಕ, ಗ್ರಾಮದ ಅನಸೂಯ ಹಾಗೂ ರಾಮಕೃಷ್ಣ ದಂಪತಿ ಪುತ್ರ ಎಂದು ತಿಳಿದು ಬಂದಿದೆ.

The post ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೋರ್ವ ಯುವತಿ ಸಾ*ವು! appeared first on Good News 24x7.

]]>