Constitution Archives - Good News 24x7 https://www.goodnews24x7.com/tag/constitution/ Kannada Mon, 29 Jun 2026 11:55:51 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Constitution Archives - Good News 24x7 https://www.goodnews24x7.com/tag/constitution/ 32 32 “ದನ ಕೊಂದವರು ಜೈಲಿಗೆ, ಮನುಷ್ಯರನ್ನು ಕೊಂದವರು ಪ್ರಧಾನಿ, ಸಿಎಂಗಳಾಗುತ್ತಾರೆ”: ಬಿ.ಕೆ. ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ https://www.goodnews24x7.com/those-who-kill-cows-go-to-jail-those-who-kill-humans-become-pms-and-cms-b-k-hariprasads-controversial-statement/ Mon, 29 Jun 2026 11:54:58 +0000 https://www.goodnews24x7.com/?p=9705 ಮೈಸೂರು :ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಯೊಂದು ಈಗ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ‘ನಿಮ್ಮೊಂದಿಗೆ ಕಾಂಗ್ರೆಸ್: ನಿಮ್ಮ ಮತವನ್ನು ರಕ್ಷಿಸುವ ಕಡೆಗೆ’ ಎಂಬ…

The post “ದನ ಕೊಂದವರು ಜೈಲಿಗೆ, ಮನುಷ್ಯರನ್ನು ಕೊಂದವರು ಪ್ರಧಾನಿ, ಸಿಎಂಗಳಾಗುತ್ತಾರೆ”: ಬಿ.ಕೆ. ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ appeared first on Good News 24x7.

]]>

ಮೈಸೂರು :ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಯೊಂದು ಈಗ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ‘ನಿಮ್ಮೊಂದಿಗೆ ಕಾಂಗ್ರೆಸ್: ನಿಮ್ಮ ಮತವನ್ನು ರಕ್ಷಿಸುವ ಕಡೆಗೆ’ ಎಂಬ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇಂದಿನ ದಿನಗಳಲ್ಲಿ ದನಗಳನ್ನು ಕೊಂದವರು ಜೈಲಿಗೆ ಹೋಗುತ್ತಾರೆ, ಆದರೆ ಮನುಷ್ಯರನ್ನು ಕೊಂದವರು ದೇಶದ ಪ್ರಧಾನಿ ಮತ್ತು ಮುಖ್ಯಮಂತ್ರಿಗಳಾಗುತ್ತಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ನಾವು ಸದ್ಯ ಮಹಾತ್ಮ ಗಾಂಧೀಜಿಯವರ ಅಹಿಂಸಾ ರಾಜಕೀಯವನ್ನು ಒಪ್ಪಬೇಕೋ ಅಥವಾ ಅವರನ್ನು ಕೊಂದ ಗೋಡ್ಸೆಯ ಹಿಂಸಾತ್ಮಕ ರಾಜಕೀಯವನ್ನು ಅಳವಡಿಸಿಕೊಳ್ಳಬೇಕೋ ಎಂಬುದನ್ನು ನಿರ್ಧರಿಸುವ ನಿರ್ಣಾಯಕ ಘಟ್ಟದಲ್ಲಿದ್ದೇವೆ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರ ಬಗ್ಗೆ ಸಾರ್ವಜನಿಕರು ಮತ್ತು ಕಾರ್ಯಕರ್ತರು ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದ ಹರಿಪ್ರಸಾದ್, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆಗಳಿಗೆ ದೇಶದ ಸಂವಿಧಾನ ಮತ್ತು ತ್ರಿವರ್ಣ ಧ್ವಜದ ಮೇಲೆ ನಂಬಿಕೆಯಾಗಲಿ, ಗೌರವವಾಗಲಿ ಇಲ್ಲ ಎಂದು ಟೀಕಿಸಿದರು. ಇದೇ ವೇಳೆ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (SIR) ಪ್ರಸ್ತಾಪಿಸಿದ ಅವರು, ಆಡಳಿತ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ತಮಗೆ ಬೇಡದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಸಂಚು ರೂಪಿಸುತ್ತಿವೆ ಎಂದು ದೂರಿದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಳಮಟ್ಟದಲ್ಲಿ ಸಕ್ರಿಯರಾಗಿ, ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷಗಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

The post “ದನ ಕೊಂದವರು ಜೈಲಿಗೆ, ಮನುಷ್ಯರನ್ನು ಕೊಂದವರು ಪ್ರಧಾನಿ, ಸಿಎಂಗಳಾಗುತ್ತಾರೆ”: ಬಿ.ಕೆ. ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ appeared first on Good News 24x7.

]]>
ಗುರುಗಳಾದ KR ಸುಬ್ಬು ಕೃಷ್ಣ ಸ್ಮರಣಾರ್ಥ “ಲಾ ಗೈಡ್” ಸಂಸ್ಥೆಯಿಂದ ದತ್ತಿ ಪ್ರಶಸ್ತಿ https://www.goodnews24x7.com/in-memory-of-guru-kr-subbu-krishna-law-guide-institute-has-announced-an-endowment-award/ Fri, 22 May 2026 13:13:23 +0000 https://www.goodnews24x7.com/?p=9522 ಪ್ರೊ ಸಿ ಕೆ ಎನ್ ರಾಜಾ ಹಾಗೂ ಹಿರಿಯ ವಕೀಲರಾದ ದಿವಂಗತ ಕೆ ಅರ್ ಸುಬ್ಬಕೃಷ್ಣ ಅವರ ಸ್ಮರಣಾರ್ಥ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ವತಿಯಿಂದ ಭಾರತದ ಸಂವಿಧಾನ ವಿಷಯದಲ್ಲಿ ಹೆಚ್ಚು ಅಂಕ ಪಡೆದ ಕಾನೂನು ವಿದ್ಯಾರ್ಥಿಗೆ ಪ್ರತಿ ವರ್ಷ ನಗದು…

The post ಗುರುಗಳಾದ KR ಸುಬ್ಬು ಕೃಷ್ಣ ಸ್ಮರಣಾರ್ಥ “ಲಾ ಗೈಡ್” ಸಂಸ್ಥೆಯಿಂದ ದತ್ತಿ ಪ್ರಶಸ್ತಿ appeared first on Good News 24x7.

]]>

ಪ್ರೊ ಸಿ ಕೆ ಎನ್ ರಾಜಾ ಹಾಗೂ ಹಿರಿಯ ವಕೀಲರಾದ ದಿವಂಗತ ಕೆ ಅರ್ ಸುಬ್ಬಕೃಷ್ಣ ಅವರ ಸ್ಮರಣಾರ್ಥ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ವತಿಯಿಂದ ಭಾರತದ ಸಂವಿಧಾನ ವಿಷಯದಲ್ಲಿ ಹೆಚ್ಚು ಅಂಕ ಪಡೆದ ಕಾನೂನು ವಿದ್ಯಾರ್ಥಿಗೆ ಪ್ರತಿ ವರ್ಷ ನಗದು ಬಹುಮಾನವನ್ನು ಘೋಷಣೆ ಮಾಡಲಾಗಿದೆ.‌ ಇದಕ್ಕಾಗಿ ಒಂದು ಲಕ್ಷ ರೂಪಾಯಿಯನ್ನು ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕರು ಹಾಗೂ ಹಿರಿಯ ವಕೀಲರಾದ ಎಚ್ ಎನ್ ವೆಂಕಟೇಶ್ ಕಾಲೇಜು ಆಡಳಿತ ಮಂಡಳಿಗೆ ನೀಡಿದ್ದಾರೆ. 1 ಲಕ್ಷ ಠೇವಣಿ‌ ರೂಪದಲ್ಲಿ ಇಟ್ಟು ಅದರಿಂದ ಪ್ರತಿ ವರ್ಷವೂ ಬರುವ ಹಣವನ್ನು ಭಾರತದ ಸಂವಿಧಾನ ವಿಷಯದಲ್ಲಿ ಹೆಚ್ಚು ಅಂಕ ಪಡೆದ ಕಾನೂನು ವಿದ್ಯಾರ್ಥಿಗೆ ಪ್ರಶಸ್ತಿ ರೂಪದಲ್ಲಿ ನೀಡಲು ತಿಳಿಸಿದ್ದಾರೆ.

 

ಇಂದು ಶಾರದಾ ವಿಲಾಸ ಕಾನೂನು ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ (IQAC) ವತಿಯಿಂದ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಹಿರಿಯ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಘೋಷಣೆ ಮಾಡಿದರು.ಈ ವೇಳೆ ಕಾರ್ಯಕ್ರಮದಲ್ಲಿ ಕಾನೂನು ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಶ್ರೀ ಇ.ಎಸ್. ಇಂದ್ರೇಶ್, ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಹಾಗೂ ‘ಲಾ ಗೈಡ್’ ಕನ್ನಡ ಕಾನೂನು ಮಾಸಪತ್ರಿಕೆಯ ಗೌರವ ಸಂಪಾದಕರಾದ ಹಿರಿಯ ವಕೀಲರಾದ ಹೆಚ್.ಎನ್. ವೆಂಕಟೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಶಾರದಾವಿಲಾಸ ಶಿಕ್ಷಣ ಸಂಸ್ಥೆಯ ಹಿರಿಯ ಆಡಳಿತ ಮಂಡಳಿ ಸದಸ್ಯ ಶ್ರೀ ಎಸ್.ಎಲ್. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮೈಸೂರು ವಕೀಲರ ಸಂಘದ ಅಧ್ಯಕ್ಷ ಶ್ರೀ ಎಸ್. ಲೋಕೇಶ್, ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ಆರ್. ದಿನೇಶ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ಕಾನೂನು ವಿದ್ಯಾರ್ಥಿಗಳು ಹಾಗೂ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಚ್ ಎನ್ ವೆಂಕಟೇಶ್ ಶಾರದ ವಿಲಾಸ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಬಗ್ಗೆ ವಿವರವಾಗಿ ತಿಳಿಸಿದರು. ಇಲ್ಲಿ ಓದಿದ ವಿದ್ಯಾರ್ಥಿಗಳು ಇಂದು ದೇಶದ ಎಲ್ಲಾ‌ ಭಾಗದಲ್ಲೂ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ್ದಾರೆ. ಈ ಮೂಲಕ ದೇಶವನ್ನು ಮುನ್ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಕಾಲೇಜು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದವರಿದ ನಾನು ಸಹಾ ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಈ ಪರಂಪರೆ ಇದೇ ರೀತಿ ಮುಂದುವರಿಯಲಿ ಅನ್ನೋದು ನನ್ನ ಆಶಯ. ಹೀಗಾಗಿ ಸಂವಿಧಾನ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಒಬ್ಬ ವಿದ್ಯಾರ್ಥಿಗೆ ಲಾಗೈಡ್ ವತಿಯಿಂದ ನಗದು ದತ್ತಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಅದಕ್ಕಾಗಿ ಶಾರದ ವಿಲಾಸ ಕಾನೂನು ಕಾಲೇಜು ಮಂಡಳಿಗೆ ಒಂದು ಲಕ್ಷ ರೂಪಾಯಿ ಚೆಕ್‌ನ್ನು ದೇಣಿಗೆ ನೀಡಿರುವುದಾಗಿ ಅವರು ತಿಳಿಸಿದರು. ಪ್ರತಿ ವರ್ಷವೂ ಪ್ರೊ ಸಿ ಕೆ ಎನ್ ರಾಜಾ ಹಾಗೂ ಹಿರಿಯ ವಕೀಲರಾದ ದಿವಂಗತ ಕೆ ಅರ್ ಸುಬ್ಬಕೃಷ್ಣ ಅವರ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುವುದು ಎಂದು ಸಹಾ ಹೇಳಿದರು‌.

The post ಗುರುಗಳಾದ KR ಸುಬ್ಬು ಕೃಷ್ಣ ಸ್ಮರಣಾರ್ಥ “ಲಾ ಗೈಡ್” ಸಂಸ್ಥೆಯಿಂದ ದತ್ತಿ ಪ್ರಶಸ್ತಿ appeared first on Good News 24x7.

]]>
ಮಾಧ್ಯಮಗಳು ಸಮಾಜ ಸುಧಾರಣೆಗೆ ಒತ್ತು ನೀಡಲಿ: ಊಹಾ ಪತ್ರಿಕೋದ್ಯಮದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ. https://www.goodnews24x7.com/media-should-focus-on-social-reform-cm-siddaramaiah-lashes-out-against-speculative-journalism/ Sat, 11 Apr 2026 12:00:24 +0000 https://www.goodnews24x7.com/?p=9218 ಬೀದರ್: “ಊಹಾ ಪತ್ರಿಕೋದ್ಯಮವು ಸಮಾಜಕ್ಕೆ ಅತ್ಯಂತ ಅಪಾಯಕಾರಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಬೀದರ್‌ನಲ್ಲಿ ಆಯೋಜಿಸಲಾಗಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮಗಳು ಕೇವಲ ಮಾಹಿತಿಯನ್ನು ನೀಡುವ ಕೆಲಸಕ್ಕೆ ಸೀಮಿತವಾಗದೆ, ಸಮಾಜದ ನ್ಯೂನ್ಯತೆಗಳನ್ನು ಹೋಗಲಾಡಿಸಿ ಸುಧಾರಣೆಗೆ ಒತ್ತು…

The post ಮಾಧ್ಯಮಗಳು ಸಮಾಜ ಸುಧಾರಣೆಗೆ ಒತ್ತು ನೀಡಲಿ: ಊಹಾ ಪತ್ರಿಕೋದ್ಯಮದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ. appeared first on Good News 24x7.

]]>

ಬೀದರ್: “ಊಹಾ ಪತ್ರಿಕೋದ್ಯಮವು ಸಮಾಜಕ್ಕೆ ಅತ್ಯಂತ ಅಪಾಯಕಾರಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಬೀದರ್‌ನಲ್ಲಿ ಆಯೋಜಿಸಲಾಗಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮಗಳು ಕೇವಲ ಮಾಹಿತಿಯನ್ನು ನೀಡುವ ಕೆಲಸಕ್ಕೆ ಸೀಮಿತವಾಗದೆ, ಸಮಾಜದ ನ್ಯೂನ್ಯತೆಗಳನ್ನು ಹೋಗಲಾಡಿಸಿ ಸುಧಾರಣೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಸಂವಿಧಾನದ ಆಶಯ ಮತ್ತು ಪತ್ರಿಕಾ ಧರ್ಮ:
ಪತ್ರಕರ್ತರು ತಮ್ಮ ವೃತ್ತಿ ಬದುಕಿನಲ್ಲಿ ಸಂವಿಧಾನದ ಆಶಯಗಳನ್ನು ಎಷ್ಟರಮಟ್ಟಿಗೆ ಜಾರಿಗೊಳಿಸುತ್ತಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರು ಧ್ವನಿ ಇಲ್ಲದವರ ಧ್ವನಿಯಾಗಿ ಪತ್ರಿಕೋದ್ಯಮವನ್ನು ಬಳಸಿಕೊಂಡಿದ್ದರು. ಆದರೆ, ಇಂದು ಕ್ಷುಲ್ಲಕ ವಿಚಾರಗಳನ್ನು ದಿನವಿಡೀ ಪ್ರಸಾರ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. “ಗಂಡ-ಹೆಂಡತಿ ಜಗಳವನ್ನು ತೋರಿಸುವುದರಿಂದ ಸಮಾಜಕ್ಕೆ ಯಾವ ಪ್ರಯೋಜನವಿದೆ?” ಎಂದು ಪ್ರಶ್ನಿಸಿದ ಸಿಎಂ, ಮಾಧ್ಯಮಗಳು ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣಕ್ಕೆ ಪೂರಕವಾದ ಅಂಶಗಳನ್ನು ಜನರಿಗೆ ತಲುಪಿಸಬೇಕು ಎಂದರು.

ಕಾರ್ಪೊರೇಟ್ ಹಿಡಿತದ ಬಗ್ಗೆ ಕಳವಳ:
ಇಂದಿನ ಮಾಧ್ಯಮ ಸಂಸ್ಥೆಗಳು ಕಾರ್ಪೊರೇಟ್ ಹಿತಾಸಕ್ತಿಗಳ ಹಿಡಿತಕ್ಕೆ ಸಿಲುಕಿರುವುದು ಬೇಸರದ ಸಂಗತಿ. ಪತ್ರಕರ್ತರು ಸತ್ಯವನ್ನು ಬರೆದರೂ, ಮಾಲೀಕರ ಒತ್ತಡದಿಂದಾಗಿ ಸಂಪಾದಕರು ಸುದ್ದಿಯನ್ನು ಬದಲಾಯಿಸುವ ಸ್ಥಿತಿ ನಿರ್ಮಾಣವಾಗಿದೆ. “ನಾನು ಮಂತ್ರಿಯಾಗಿ 40 ವರ್ಷಗಳಾದರೂ, ನಮ್ಮ ಸರ್ಕಾರದ ಪರ ಬರೆಯಿರಿ ಎಂದು ಇದುವರೆಗೂ ಯಾರನ್ನೂ ಕೇಳಿಲ್ಲ” ಎಂದು ಹೇಳಿದ ಅವರು, ಪತ್ರಿಕೆಗಳ ಮೇಲೆ ಜನಸಾಮಾನ್ಯರು ಇಟ್ಟಿರುವ ನಂಬಿಕೆಯನ್ನು ಪತ್ರಕರ್ತರು ಉಳಿಸಿಕೊಳ್ಳಬೇಕು ಎಂದು ಆಶಿಸಿದರು.

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ:
ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನು ತಮ್ಮ ಸರ್ಕಾರವೇ ಜಾರಿಗೆ ತಂದಿದೆ ಎಂದು ಸ್ಮರಿಸಿದ ಸಿಎಂ, ಈ ಸೌಲಭ್ಯವನ್ನು ಪಡೆಯುವಲ್ಲಿ ನಿಯಮಗಳ ಅಡಚಣೆ ಇದ್ದರೆ ಅವುಗಳನ್ನು ಚರ್ಚಿಸಿ ಶೀಘ್ರವೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

The post ಮಾಧ್ಯಮಗಳು ಸಮಾಜ ಸುಧಾರಣೆಗೆ ಒತ್ತು ನೀಡಲಿ: ಊಹಾ ಪತ್ರಿಕೋದ್ಯಮದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ. appeared first on Good News 24x7.

]]>
ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಿಸಿದ್ದರು:ಇತಿಹಾಸ ತಿರುಚಬೇಡಿ, ಸಿಎಂ ಸಿದ್ದರಾಮಯ್ಯ https://www.goodnews24x7.com/tipu-sultan-also-celebrated-dasara-dont-distort-history-cm-siddaramaiah/ Thu, 25 Sep 2025 08:19:12 +0000 https://www.goodnews24x7.com/?p=7624 ಮೈಸೂರು: ನಾಡಹಬ್ಬ ಮೈಸೂರು ದಸರಾಗೆ ಚಾಲನೆ ಸಿಕ್ಕಿದೆ. ಇಂದು ಲೇಖಕಿ ಬಾನು ಮುಷ್ತಾಕ್ ಅವರು ತಾಯಿ ಚಾಮುಂಡೇಶ್ವರಿ ಪುಷ್ಪಾರ್ಚನೆ ಮಾಡಲು ಮೂಲಕ ಉದ್ಘಾಟಿಸಿದರು. ಇನ್ನು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿಪ್ಪು ಸುಲ್ತಾನ್ ಕೂಡ…

The post ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಿಸಿದ್ದರು:ಇತಿಹಾಸ ತಿರುಚಬೇಡಿ, ಸಿಎಂ ಸಿದ್ದರಾಮಯ್ಯ appeared first on Good News 24x7.

]]>

ಮೈಸೂರು: ನಾಡಹಬ್ಬ ಮೈಸೂರು ದಸರಾಗೆ ಚಾಲನೆ ಸಿಕ್ಕಿದೆ. ಇಂದು ಲೇಖಕಿ ಬಾನು ಮುಷ್ತಾಕ್ ಅವರು ತಾಯಿ ಚಾಮುಂಡೇಶ್ವರಿ ಪುಷ್ಪಾರ್ಚನೆ ಮಾಡಲು ಮೂಲಕ ಉದ್ಘಾಟಿಸಿದರು. ಇನ್ನು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಿಸಿದ್ದರು ಇತಿಹಾಸ ತಿರುಚಬೇಡಿ ಎಂದರು.

ವಿಜಯನಗರ ಕಾಲದಲ್ಲಿ ದಸರಾ ಆಚರಣೆ ಮಾಡುತ್ತಿದ್ದರು. ಬಳಿಕ ವಿಜಯನಗರ ಸಾಮ್ರಾಜ್ಯ ಪತನವಾದ ಸಂದರ್ಭದಲ್ಲಿ ಮೈಸೂರು ಅರಸರು ಆಚರಣೆ ಮಾಡಿದರು. ನಂತರ ಶ್ರೀರಂಗಪಟ್ಟಣದಲ್ಲಿ ಹೈದರಾಲಿ ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಣೆ ಮಾಡಿದ್ದರು. ಎಲ್ಲರೂ ಇತಿಹಾಸವನ್ನ ತಿಳಿದುಕೊಳ್ಳಬೇಕು. ಆ ಕಾರಣಕ್ಕಾಗಿಯೇ ಸಂವಿಧಾನದ ಪೀಠಿಕೆಯನ್ನು ಪ್ರತಿಯೊಂದು ಶಾಲೆಯಲ್ಲೂ ಓದಬೇಕೆಂದು ಮಾಡಿದ್ದೇವೆ. ಇತಿಹಾಸವನ್ನ ತಿರುಚಿ ರಾಜಕೀಯಕ್ಕೋಸ್ಕರ ಮಾಡಬಾರದು. ರಾಜಕೀಯ ಮಾಡೋಣ ಅಂದ್ರೆ ಬಹಳಷ್ಟು ಇದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡೋಣ. ಇಲ್ಲ ಸಲ್ಲದ ದ್ವೇಷಕ್ಕೋಸ್ಕರ ರಾಜಕಾರಣ ಮಾಡಬಾರದು ಎಂದು ಹೇಳಿದರು.

ಈ ಮೂಲಕ ಟಿಪ್ಪು ಸುಲ್ತಾನ್ ಸಹ ದಸರಾ ಆಚಣೆ ಮಾಡಿದ್ದಾರಾ ಎನ್ನುವ ಚರ್ಚೆಗಳು ಶುರುವಾಗಿದ್ದು, ಈ ಬಗ್ಗೆ ಇತಿಹಾಸಕಾರರು ದಸರಾದ ನಿಜವಾದ ಇತಿಹಾಸವನ್ನು ಈಗಿನ ಪೀಳಿಗೆಗೆ ತಿಳಿಸಬೇಕಿದೆ.

The post ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಿಸಿದ್ದರು:ಇತಿಹಾಸ ತಿರುಚಬೇಡಿ, ಸಿಎಂ ಸಿದ್ದರಾಮಯ್ಯ appeared first on Good News 24x7.

]]>
ಸಂವಿಧಾನ ವಿರುದ್ಧ ಹೇಳಿಕೆ ನೀಡಿದ್ರೆ ಡಿಬೇಟ್ ಗೆ ಬನ್ನಿ ಸಚಿವ ಮಹದೇವಪ್ಪಗೆ ನೇರ ಸವಾಲು ಹಾಕಿದ ವಕೀಲ ಅರುಣ್ ಕುಮಾರ್. https://www.goodnews24x7.com/advocate-arun-kumar-directly-challenges-minister-mahadevappa-to-debate-if-he-makes-a-statement-against-the-constitution/ Fri, 20 Jun 2025 12:52:19 +0000 https://www.goodnews24x7.com/?p=4548 ಮೈಸೂರು : ಸಚಿವ ಹೆಚ್ ಸಿ ಮಹದೇವಪ್ಪ ತಮ್ಮ ಚೇಲಾಗಳ ಮೂಲಕ ನಮ್ಮ ಮೇಲೆ ಪ್ರಕರಣ ದಾಖಲು ಮಾಡಿಸುತ್ತಿದ್ದಾರೆ. ಸಚಿವ ಮಹದೇವಪ್ಪಗೆ ನೇರ ಸವಾಲು ಹಾಕುತ್ತೇವೆ. ನಾವು ನಿಮ್ಮ ಮೇಲೆ ಮತ್ತು ಸಂವಿಧಾನ ವಿರುದ್ಧ ಹೇಳಿಕೆ ನೀಡಿದ್ರೆ ಡಿಬೇಟ್ ಗೆ ಬನ್ನಿ…

The post ಸಂವಿಧಾನ ವಿರುದ್ಧ ಹೇಳಿಕೆ ನೀಡಿದ್ರೆ ಡಿಬೇಟ್ ಗೆ ಬನ್ನಿ ಸಚಿವ ಮಹದೇವಪ್ಪಗೆ ನೇರ ಸವಾಲು ಹಾಕಿದ ವಕೀಲ ಅರುಣ್ ಕುಮಾರ್. appeared first on Good News 24x7.

]]>

ಮೈಸೂರು : ಸಚಿವ ಹೆಚ್ ಸಿ ಮಹದೇವಪ್ಪ ತಮ್ಮ ಚೇಲಾಗಳ ಮೂಲಕ ನಮ್ಮ ಮೇಲೆ ಪ್ರಕರಣ ದಾಖಲು ಮಾಡಿಸುತ್ತಿದ್ದಾರೆ. ಸಚಿವ ಮಹದೇವಪ್ಪಗೆ ನೇರ ಸವಾಲು ಹಾಕುತ್ತೇವೆ. ನಾವು ನಿಮ್ಮ ಮೇಲೆ ಮತ್ತು ಸಂವಿಧಾನ ವಿರುದ್ಧ ಹೇಳಿಕೆ ನೀಡಿದ್ರೆ ಡಿಬೇಟ್ ಗೆ ಬನ್ನಿ ಎಂದು ವಕೀಲ ಅರುಣ್ ಕುಮಾರ್ ಸವಾಲು ಹಾಕಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಕರ್ನಾಟಕ ಸಾಮಾಜಿಕ ನ್ಯಾಯ ಪರ ವಕೀಲರ ವೇದಿಕೆ ಮತ್ತು ಒಳ ಮೀಸಲಾತಿ ಹೋರಾಟ ಸಮಿತಿಯಿಂದ ವಕೀಲ ಅರುಣ್ ಕುಮಾರ್, ಭಾಸ್ಕರ್ ಪ್ರಸಾದ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಸುದ್ದಿಗೋಷ್ಠಿ ಮಾತನಾಡಿದ ವಕೀಲ ಅರುಣ್ ಕುಮಾರ್, ಒಳ ಮೀಸಲಾತಿ ನೀಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶ ಬಂದು ಒಂದು ವರ್ಷ ಆಗಿದೆ. ಇತರೆ ರಾಜ್ಯಗಳು ಬೇಗ ಡಾಟಾ ಕಲೆಕ್ಟ್ ಮಾಡಿವೆ.ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರ ಮಾದಿಗರ ವಿರೋಧಿ ನೀತಿ ಅನುಸರಿಸುತ್ತಿದೆ. ಒಂದು ಸಮುದಾಯದ ಮತ ಬ್ಯಾಂಕ್ ಪಡೆಯಲು ಪಿತೂರಿ ಮಾಡುತ್ತಿದೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದ ಅಡಿಯಲ್ಲಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಡೋಂಗಿ ರಾಜಕಾರಣ ಅನುಸರಿಸುತ್ತಿದೆ. ಒಳ ಮೀಸಲಾತಿ ಕೊಡುವ ವೇಳೆ ಸಮೀಕ್ಷೆ ಅವಶ್ಯಕತೆ ಇಲ್ಲ. ಸರ್ಕಾರ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕೊಡುವ ನಿರ್ಧಾರ ಮಾಡಿಲ್ಲ. ಒಳ ಮೀಸಲಾತಿ ಕೊಡುವ ಮುನ್ನ ಸರ್ಕಾರಿ ಹುದ್ದೆ ಭರ್ತಿ ಮಾಡುವ ಹುನ್ನಾರ ಕಾಂಗ್ರೆಸ್ ನದ್ದು ಎಂದು ಕಿಡಿಕಾರಿದರು.

ಮಹದೇವಪ್ಪ ಏನು ದೊಡ್ಡ ವ್ಯಕ್ತಿ ಅಲ್ಲ. ನಮ್ಮ ಮೇಲೆ ಇನ್ನು ನೂರು ಕೇಸ್ ಹಾಕಲಿ. ಇಂತಹ ಎಷ್ಟೇ ಕೇಸ್ ಗಳನ್ನ ಹಾಕಿದರೂ ನಾವು ಹೆದರಲ್ಲ. ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದಾಗ ಮಹದೇವಪ್ಪ ತೀರ್ಥ ತೆಗೆದುಕೊಳ್ಳದೆ ಬಂದಿರಿ. ನಮ್ಮ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಆಗಿದೆ. ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ನಿಮ್ಮ ಮೇಲೂ ಕೇಸ್ ಹಾಕುತ್ತೇವೆ. ಗುಂಪು ಕಟ್ಟಿ ಎತ್ತಿ ಕಟ್ಟುವ ಕೆಲಸ ಮಾಡ್ತಿರೋದು ಮಹದೇವಪ್ಪ. ಮಹದೇವಪ್ಪನವರ ಮೇಲೆ ಹಾಕಿರುವ ಕೇಸ್ ಸ್ಟೇಟಸ್ ಬಗ್ಗೆ ಪೊಲೀಸ್ ಕಮಿಷನರ್ ನವರು ಮಾಹಿತಿ ನೀಡಬೇಕು ಎಂದು ವಕೀಲ ಅರುಣ್ ಕುಮಾರ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಳ ಮೀಸಲಾತಿ ಹೋರಾಟ ಸಮಿತಿ ಸದಸ್ಯ ಭಾಸ್ಕರ್ ಪ್ರಸಾದ್, ಒಳ ಮೀಸಲಾತಿ ಹಕ್ಕಿಗಾಗಿ ನಮ್ಮ ಹೋರಾಟ ನಡೆಯುತ್ತಿದೆ. ನಮ್ಮ ಹೋರಾಟಕ್ಕೆ ಹೆದರಿರುವ ಸರ್ಕಾರ ನಮ್ಮ ಸಮುದಾಯದವರನ್ನೇ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಎಂಎಲ್ ಸಿ ತಿಮ್ಮಯ್ಯ ಒಬ್ಬ ಪೇಮೆಂಟ್ ಗಿರಾಕಿ. ಇಂತಹವರು ನಮ್ಮ ಸಮುದಾಯದ ಕುಲಕಂಟಕರು ಎಂದು ವಾಗ್ದಾಳಿ ನಡೆಸಿದರು.

ಪೊಲೀಸ್ ನವರು ಕಾನೂನಿನ ಪ್ರಕಾರ ಕೆಲಸ ಮಾಡಿ. ಕಾಂಗ್ರೆಸ್ ಪೊಲೀಸ್ ನವರ ರೀತಿ ಕೆಲಸ ಮಾಡಬೇಡಿ. ಮಹದೇವಪ್ಪ, ತಿಮ್ಮಯ್ಯ ದೂರು ಕೊಟ್ರೆ ಕೇಸ್ ಹಾಕುತ್ತೀರಿ. ನಾವು ದೂರು ಕೊಟ್ರೆ ಪ್ರಕರಣ ದಾಖಲು ಮಾಡಲ್ಲ. ಹೆಚ್ ಸಿ ಮಹದೇವಪ್ಪ, ತಿಮ್ಮಯ್ಯ ನೀವು ಕಾಂಗ್ರೆಸ್ ನ ಮಕ್ಕಳಾದ್ರೆ ನಮ್ಮ ಹೋರಾಟ ತಡೆಯುವ ಕೆಲಸ ಮಾಡಿ. ಮುಂದಿನ ಚುನಾವಣೆಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

The post ಸಂವಿಧಾನ ವಿರುದ್ಧ ಹೇಳಿಕೆ ನೀಡಿದ್ರೆ ಡಿಬೇಟ್ ಗೆ ಬನ್ನಿ ಸಚಿವ ಮಹದೇವಪ್ಪಗೆ ನೇರ ಸವಾಲು ಹಾಕಿದ ವಕೀಲ ಅರುಣ್ ಕುಮಾರ್. appeared first on Good News 24x7.

]]>
ಮಹಾನಾಯಕ ಬಾಬಾ ಸಾಹೇಬರ ನಿಜವಾದ ಹೆಸರೇನು? ಅಷ್ಟಕ್ಕೂ ಆ ಹೆಸರನ್ನು ಬದಲಿಸಿದವರು ಯಾರು? ಇಲ್ಲಿದೆ ಮಾಹಿತಿ…. https://www.goodnews24x7.com/%e0%b2%ae%e0%b2%b9%e0%b2%be%e0%b2%a8%e0%b2%be%e0%b2%af%e0%b2%95-%e0%b2%ac%e0%b2%be%e0%b2%ac%e0%b2%be-%e0%b2%b8%e0%b2%be%e0%b2%b9%e0%b3%87%e0%b2%ac%e0%b2%b0-%e0%b2%a8%e0%b2%bf%e0%b2%9c%e0%b2%b5/ Tue, 15 Apr 2025 11:25:44 +0000 https://www.goodnews24x7.com/?p=3279 ವಿಶ್ವಜ್ಞಾನಿ,ಭಾರತರತ್ನ, ಸಂವಿಧಾನದ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಜಗತ್ತಿನ ಮಹಾನ್ ವ್ಯಕ್ತಿ. ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಭಾರತದಷ್ಟೇ ಅಲ್ಲದೆ 193 ದೇಶಗಳು ಗೌರವ ಸಲ್ಲಿಸುವಂತಹ ಏಕೈಕ ವ್ಯಕ್ತಿ.ಇಂದು ಅವರ 134 ನೇ ಜನ್ಮ ಜಯಂತೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ…

The post ಮಹಾನಾಯಕ ಬಾಬಾ ಸಾಹೇಬರ ನಿಜವಾದ ಹೆಸರೇನು? ಅಷ್ಟಕ್ಕೂ ಆ ಹೆಸರನ್ನು ಬದಲಿಸಿದವರು ಯಾರು? ಇಲ್ಲಿದೆ ಮಾಹಿತಿ…. appeared first on Good News 24x7.

]]>

ವಿಶ್ವಜ್ಞಾನಿ,ಭಾರತರತ್ನ, ಸಂವಿಧಾನದ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಜಗತ್ತಿನ ಮಹಾನ್ ವ್ಯಕ್ತಿ. ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಭಾರತದಷ್ಟೇ ಅಲ್ಲದೆ 193 ದೇಶಗಳು ಗೌರವ ಸಲ್ಲಿಸುವಂತಹ ಏಕೈಕ ವ್ಯಕ್ತಿ.ಇಂದು ಅವರ 134 ನೇ ಜನ್ಮ ಜಯಂತೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿಜವಾದ ಹೆಸರೇನು, ಅವರ ವ್ಯಕ್ತಿತ್ವ ಎಂಥದ್ದು ಎನ್ನುವ ವಿಚಾರವನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.

ಅಂಬೇಡ್ಕರ್‌ ಅವರ ಜನ್ಮದಿನವನ್ನು ಅಂಬೇಡ್ಕರ್‌ ಜಯಂತಿ ಹಾಗೂ ಭೀಮ ಜಯಂತಿ ಎಂದೂ ಆಚರಿಸಲಾಗುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹುಟ್ಟೂರು ಕೊಂಕಣದ ಅಂಬಾಡ್ವೆ. ಅವರ ಮೂಲ ಉಪನಾಮ ಸಕ್ಪಾಲ್. ಹಿಂದೆ, ಜನರು ತಮ್ಮ ಹಳ್ಳಿಯ ಹೆಸರಿನಿಂದ ತಮ್ಮ ಉಪನಾಮಗಳನ್ನು ತೆಗೆದುಕೊಳ್ಳುತ್ತಿದ್ದರು.

ಸತಾರಾದ ಸರ್ಕಾರಿ ಪ್ರೌಢಶಾಲೆಗೆ ಸೇರಿಸಿದಾಗ, ಬಾಬಾಸಾಹೇಬರ ತಂದೆ ರಾಮ್ಜಿ ಸಕ್ಪಾಲ್, ಬಾಬಾಸಾಹೇಬರನ್ನು ಶಾಲೆಯಲ್ಲಿ ನೋಂದಾಯಿಸುವಾಗ, ಅವರಿಗೆ ಭೀಮರಾವ್ ರಾಮ್ಜಿ ಅಂಬಾವಾಡೇಕರ್ ಎಂದು ಹೆಸರಿಟ್ಟಿದ್ದರು. ನವೆಂಬರ್ 7, 1900 ರಂದು, ಬಾಬಾಸಾಹೇಬ್ ಅವರ ಉಪನಾಮವನ್ನು ಸಕ್ಪಾಲ್ ಬದಲಿಗೆ ಅಂಬಾವಾಡೇಕರ್ ಎಂದು ದಾಖಲಿಸಲಾಯಿತು. ಈ ಹೆಸರನ್ನು ಅಂಬಾಡ್ವೆ ಗ್ರಾಮದಿಂದ ತೆಗೆದುಕೊಳ್ಳಲಾಗಿದೆ. ಬಾಬಾಸಾಹೇಬರು ಶಾಲೆಯಲ್ಲಿಯೇ ಅಂಬೇಡ್ಕರ್ ಎಂಬ ಉಪನಾಮವನ್ನು ಪಡೆದರು. ಅವರ ಗುರುಗಳಾದ ಕೃಷ್ಣಾಜಿ ಕೇಶವ್ ಅಂಬೇಡ್ಕರ್ ಅವರು ಬಾಬಾಸಾಹೇಬರಿಗೆ ಈ ಉಪನಾಮವನ್ನು ನೀಡಿದರು.

The post ಮಹಾನಾಯಕ ಬಾಬಾ ಸಾಹೇಬರ ನಿಜವಾದ ಹೆಸರೇನು? ಅಷ್ಟಕ್ಕೂ ಆ ಹೆಸರನ್ನು ಬದಲಿಸಿದವರು ಯಾರು? ಇಲ್ಲಿದೆ ಮಾಹಿತಿ…. appeared first on Good News 24x7.

]]>
ನವ ಭಾರತದ ದಿಕ್ಕನ್ನೇ ಬದಲಾಯಿಸಿದ ಸಮಾನತೆಯ ನೇತಾರ ನಿಮಗಿದೋ ಸಾವಿರದ ಶರಣು. https://www.goodnews24x7.com/%e0%b2%a8%e0%b2%b5-%e0%b2%ad%e0%b2%be%e0%b2%b0%e0%b2%a4%e0%b2%a6-%e0%b2%a6%e0%b2%bf%e0%b2%95%e0%b3%8d%e0%b2%95%e0%b2%a8%e0%b3%8d%e0%b2%a8%e0%b3%87-%e0%b2%ac%e0%b2%a6%e0%b2%b2%e0%b2%be%e0%b2%af/ Mon, 14 Apr 2025 08:45:46 +0000 https://www.goodnews24x7.com/?p=3235 ಮೈಸೂರು : ಭಾರತೀಯ ಸಂವಿಧಾನದ ಪಿತಾಮಹ’ ಮತ್ತು ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವ ಡಾ. ಭೀಮರಾವ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತದೆ. ಸಾಮಾಜಿಕ ತಾರತಮ್ಯವನ್ನು ನಿರ್ಮೂಲನೆ ಮಾಡಿ, ಕಾನೂನಿನ ದೃಷ್ಟಿಯಲ್ಲಿ ಭಾರತದ ಎಲ್ಲಾ ನಾಗರಿಕರಿಗೆ ಸಮಾನತೆಯನ್ನು ಪ್ರತಿಪಾದಿಸುವ ಮೂಲಕ…

The post ನವ ಭಾರತದ ದಿಕ್ಕನ್ನೇ ಬದಲಾಯಿಸಿದ ಸಮಾನತೆಯ ನೇತಾರ ನಿಮಗಿದೋ ಸಾವಿರದ ಶರಣು. appeared first on Good News 24x7.

]]>

ಮೈಸೂರು : ಭಾರತೀಯ ಸಂವಿಧಾನದ ಪಿತಾಮಹ’ ಮತ್ತು ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವ ಡಾ. ಭೀಮರಾವ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತದೆ.

ಸಾಮಾಜಿಕ ತಾರತಮ್ಯವನ್ನು ನಿರ್ಮೂಲನೆ ಮಾಡಿ, ಕಾನೂನಿನ ದೃಷ್ಟಿಯಲ್ಲಿ ಭಾರತದ ಎಲ್ಲಾ ನಾಗರಿಕರಿಗೆ ಸಮಾನತೆಯನ್ನು ಪ್ರತಿಪಾದಿಸುವ ಮೂಲಕ ಭಾರತದಲ್ಲಿ ಮಹಿಳೆಯರು, ಕಾರ್ಮಿಕರು ಮತ್ತು ತುಳಿತಕ್ಕೊಳಗಾದ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡುತ್ತಾ ಡಾ. ಅಂಬೇಡ್ಕರ್ ತಮ್ಮ ಜೀವನವನ್ನು ಕಳೆದ ಕಾರಣ ಇದನ್ನು ಸಮಾನತಾ ದಿನ ಎಂದೂ ಕರೆಯಲಾಗುತ್ತದೆ. ಈ ವರ್ಷ ಅವರ 135 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ ಮತ್ತು ಏಪ್ರಿಲ್ 14 ರಂದು ಸೋಮವಾರದಂದು ಆಚರಿಸಲಾಗುತ್ತದೆ .
ಅಂಬೇಡ್ಕರ್ ಅವರು ಶಿಕ್ಷಣವನ್ನು ಸಬಲೀಕರಣ ಮತ್ತು ಸಾಮಾಜಿಕ ಪ್ರಗತಿಗೆ ಒಂದು ಮಾರ್ಗವಾಗಿ ಪ್ರತಿಪಾದಿಸಿದರು ಮತ್ತು ಅಂಚಿನಲ್ಲಿರುವ ಸಮುದಾಯಗಳಲ್ಲಿ ಶಿಕ್ಷಣವನ್ನು ಹರಡಲು 1923 ರಲ್ಲಿ ‘ಬಹಿಷ್ಕೃತ ಹಿತಕಾರಿಣಿ ಸಭೆ’ಯನ್ನು ಸ್ಥಾಪಿಸಿದರು.

ಡಾ. ಬಿ ಆರ್ ಅಂಬೇಡ್ಕರ್ ರವರು ವಿಶ್ವಮಾನ್ಯರಾಗಿ ,ವಿಶ್ವ ಶ್ರೇಷ್ಠರಲ್ಲಿ ಅತಿ ಎತ್ತರವಾಗಿ ಎಲ್ಲೆಡೆ ನಿಂತಿದ್ದಾರೆ .ನಿತ್ಯ ಬೋಧಕರಾಗಿ ಮತ್ತು ಪರಿವರ್ತನೆಯ ದಿಕ್ಸೂಚಿಯಾಗಿದ್ದಾರೆ. ಇವರು ಶಾಶ್ವತವಾಗಿದ್ದಾರೆ. ಇವರ ಆಶಯಗಳನ್ನು ಅವಲೋಕಿಸಬೇಕಾದ ಅನಿವಾರ್ಯತೆ ಇದೆ.
ಸಂವಿಧಾನ ಜಾರಿಯಾದ ದಿನವೇ ಇವರ ಆಶಯಗಳು ಆರಂಭವಾಗಿದೆ. ಅದರ ಚಲನೆಯ ನಿಧಾನ ಮತ್ತು ಕೆಲವು ಉದಾಸೀನತೆಯನ್ನು ವೀಕ್ಷಿಸುತ್ತಿದ್ದ ಪ್ರಬುದ್ದ ಮನಗಳು 1970ರಲ್ಲಿ ಎಚ್ಚರಗೊಂಡು, ಲೇಖನಿ, ಬೀದಿ, ಬೋಧನೆ, ವೇದಿಕೆ, ಸುತ್ತೋಲೆಗಳಲ್ಲಿ ಗಟ್ಟಿ ಗೊಳಿಸಲಾಯಿತು. ಆ ನಡುವೆಯೂ ಮೂಲ ಆಶಯಕ್ಕೆ ಅನೇಕ ಶಸ್ತ್ರಚಿಕಿತ್ಸೆಗಳು ನಡೆದಿವೆ. ಈಗಲೂ ನಡೆಯುತ್ತಿದೆ. ವಿಶ್ವದ ಗುಲಾಮಗಿರಿಯಲ್ಲೇ ವಿಶಿಷ್ಠವಾದ ಜಾತಿ ವ್ಯವಸ್ಥೆಯು ಭಾರತದಲ್ಲಿತ್ತು.ಇಲ್ಲಿ ನಾಯಿಗಳಿಗೆ ಸಿಕ್ಕಷ್ಟು ಸೌಲಭ್ಯಗಳು ಮನುಷ್ಯರಿಗೆ ಸಿಗುತ್ತಿರಲಿಲ್ಲ. ದೇವಾಲಯ, ಶಾಲೆ, ನೀರು ಸಿಗದೆ ವಂಚಿತವಾಗಿದ್ದರೂ, ಬೀದಿಯಲ್ಲಿಟ್ಟ ಹೆಜ್ಜೆ ಗುರುತಿಗೂ ಕಷ್ಟವಾಗಿತ್ತು. ಇಂತಹ ಅಳಿಸಲಾಗದ ಜಾತಿ ಪದ್ದತಿಯನ್ನು 1916ರಲ್ಲಿ ಫ್ರೊ ಗೋಲ್ಡನ್ ವೀಜರ್ ಸ್ಮರಣಾರ್ಥದ ವಿಚಾರ ಸಂಕೀರ್ಣದಲ್ಲಿ ವಿಶ್ವದ ಮುಂದಿಟ್ಟಿದ್ದರು.


ಇದನ್ನು ಅಂಬೇಡ್ಕರ್ ರವರೇ ಹುಟ್ಟಿದಾಗ, ಬೆಳೆಯುವಾಗ, ಕಲಿಯುವಾಗ ಮತ್ತು ಸೇವೆ ಸಲ್ಲಿಸುವಾಗ ಅನುಭವಿಸಿದರು .ಜಾತಿಯನ್ನು ಬೇರು ಸಹಿತ ಕಿತ್ತುಹಾಕಲು ಮನುಸ್ಮೃತಿಯನ್ನು ಸುಟ್ಟುಹಾಕಿದರು. ಇಂದು ಈ ವ್ಯವಸ್ಥೆ ಪೂರ್ಣವಾಗಿ ನಿರ್ಮೂಲನೆಯಾಗದಿದ್ದರೂ ಉಸುರುಗಟ್ಟಿದ ವಾತಾವರಣದಿಂದ ಸ್ವಲ್ಪವೇ ಸ್ವಲ್ಪ ಹೊರಬಂದಿದೆ. ಆದರೆ ಬಹಿರಂಗಕ್ಕೂ ಅಂತರಂಗಕ್ಕೂ ಅಂತರದಲ್ಲಿದೆ .ಮುಂದೊಂದು ದಿನ ಇದು ಅಂತರಂಗಕ್ಕೂ ಬರುತ್ತದೆಂಬ ನಿರೀಕ್ಷೆಯೂ ಇದೆ. ಏಕೆಂದರೆ ವ್ಯವಹಾರದ ಹೃದಯವೇ ಮಮತೆಯನ್ನು ನೀಡಬೇಕಿದೆ. ಆಗಲೇ ಅದಕ್ಕೆ ಘನತೆಯು ಬರುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಇವರು ಬುದ್ದ ನಡೆಗೆ ಹೆಜ್ಜೆ ಇಟ್ಟು, ಜಾತಿಯಿಂದ ಮುಕ್ತಿಯಾದ ಬಗ್ಗೆ ಅನಂತವಾದುದು.
ಬದುಕು ಇಂದು ಹಣಮಯವಾಗಿದೆ. ಇದಿಲ್ಲದ ಜೀವನವೇ ಶೂನ್ಯವಾಗಿದೆ. 1917ರಲ್ಲಿ ಭಾರತ ರಾಷ್ಟ್ರದ ಆದಾಯ ಒಂದು ಐತಿಹಾಸಿಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನದ ಫಲವಾಗಿ ಭಾರತದಲ್ಲಿ ಆರ್ಥಿಕ ವಿಕಾಸವಾಗಲು ಸಾಧ್ಯವಾಯಿತು. ಇದರೊಂದಿಗೆ 1922ರಲ್ಲಿ ರೂಪಾಯಿ ಸಮಸ್ಯೆ ವಿಷಯವನ್ನು ಲಂಡನ್ ನ ಸ್ಕೂಲ್ ಆಫ್ ಎಕಾನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್ ನಲ್ಲಿ ಮಂಡಿಸಿದ ಫಲವಾಗಿ RBI ಸಂಸ್ಥೆ ಸ್ಥಾಪನೆಗೂ ಮೂಲವಾಯಿತು.ಇವೆರಡರ ಶೋಧನೆಯು ಭಾರತದ ಆರ್ಥಿಕ ಸ್ಥಿರತೆ ಮತ್ತು ವಿಕಾಸಕ್ಕೆ ಸಾಕ್ಷಿಯಾಗಿದೆ. ಇಂದಿಗೂ ಭಾರತದಲ್ಲಿ ಅಕ್ಷರ ಅರಿಯದ ಮನುಷ್ಯ ಇದ್ದರೂ, ಹಣ ಬಳಸದ ಮನುಷ್ಯನಿಲ್ಲ. ಆದರೆ ಇಂದು ಹಣದ ಪ್ರಭಾವ ಪ್ರಶ್ನಾರ್ಹವಾಗುತ್ತಿದೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ಹೋಗಲಾಡಿಸುವ ಮಾರ್ಗ ಅನಿವಾರ್ಯವಿದೆ. ಹಣವೇ ಮಹಾಶಕ್ತಿಯಾದರೆ ಅಪಾಯವಿದೆ.


ಭಾರತಕ್ಕೆ ಮದ್ಯಪಾನ ಅವಶ್ಯಕತೆ ಇದೆಯೆ? ಇದು ವೈಭೋಗದ ವಸ್ತು. ಆರೋಗ್ಯದ ವಸ್ತುಗಳಾದ ಹಣ್ಣು ತರಕಾರಿ, ದವಸ-ಧಾನ್ಯಗಳಿಗಿಂತ ಮದ್ಯಪಾನವು ಉತ್ತಮವಾದ ಆರೋಗ್ಯಕರ ವಸ್ತುವಲ್ಲ.ಇದನ್ನು ಸೇವಿಸಿದ ವ್ಯಕ್ತಿಗೆ ಅನಾರೋಗ್ಯ, ಇದರಿಂದ ಕುಟುಂಬಕ್ಕೆ ಮತ್ತು ಸಮಾಜಕ್ಕೂ ಹಾನಿ.ಇದರ ಸೇವನೆಯಿಂದ ಸತ್ತವರ ಅಂಕಿ ಅಂಶಗಳೊಂದಿಗೆ ಪೆಲ್ಡಮನ್ ರವರ ಪಾನ ಪ್ರತಿಬಂಧಕ ವಿವರಣೆಯೊಂದಿಗೆ ವಿವರಿಸುತ್ತಾರೆ.
ಶ್ರೀಮಂತರು ಉತ್ತಮ ಆಹಾರ ಸೇವನೆಯೊಂದಿಗೆ ಕುಡಿಯುತ್ತಾರೆ. ಬಡವರು ಆಹಾರವಿಲ್ಲದೆ ಕುಡಿಯುತ್ತಾರೆ. ಆದ್ದರಿಂದ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಇವರ ಕಾಲೋನಿಗಲ್ಲಿ ಸಾರಾಯಿ ಅಂಗಡಿಗಳನ್ನು ತೆರೆಯುವುದಕ್ಕಿಂತ ಆಸ್ಪತ್ರೆ ಮತ್ತು ಶಾಲೆಗಳನ್ನು ತೆರೆಯಿರಿ. ಅಬಕಾರಿ ಕರ ಐಷಾರಾಮಿ ಕರವಾಗಲಿ. ಅಬಕಾರಿ ಕರ ಬೇಡ ಅಬಕಾರಿ ನಿವಾರಣೆ ಆಗಲಿ. ಅಂಬೇಡ್ಕರ್ ರವರ ಈ ಮಾತುಗಳನ್ನು ಅವಲೋಕಿಸಿದರೆ ಈಗ ನಾವೆಲ್ಲಿದ್ದೇವೆಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ.ಇವರ ನಿಜವಾದ ಅನುಯಾಯಿಗಳಾಗಿದ್ದರೆ, ಕುಡಿತವನ್ನು ಈ ಕ್ಷಣವೆ ಬಿಟ್ಟು ಬಿಡಿ. ಅವರ ಮಾರ್ಗದಲ್ಲಿ ಧನ್ಯತೆ ಇದೆ. ಅರ್ಪಿಸಿಕೊಳ್ಳೋಣ. ಕುಡಿತದ ಹಣವನ್ನು ಸದ್ಬಳಕೆಗೆ ಮಾಡಿಕೊಳ್ಳೋಣ. ಏಕೆಂದರೆ ಇವರ ಆಶಯಗಳಿರುವುದೇ ನಮ್ಮ ಶ್ರಯೋಭಿವೃದ್ದಿಗೆ. ವಿಶ್ವದಲ್ಲಿ ಹಲವಾರು ಸುಧಾರಕರಿದ್ದಾರೆ. ಸುಧಾರಣೆ ಬಗೆಗೆ ವಿಭಿನ್ನ ವಿಧಾನಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಂಬೇಡ್ಕರ್ ರವರು ಭಾರತದ ಸುಧಾರಣೆಗೆ ಆಯ್ಕೆ ಮಾಡಿಕೊಂಡಿದ್ದು ಶಿಕ್ಷಣ. ಅಕ್ಷರವೇ ಭಾರತದ ಪರಿವರ್ತನೆಗೆ ದಾರಿದೀಪ. ಇದನ್ನು ಸಂವಿಧಾನದಲ್ಲಿ ಕಡ್ಡಾಯಗೊಳಿಸಿದರು.


ನಹಿ ಜ್ಙಾನೇನು ಸದೃಶಂ ಎಂದು ಹೇಳಿದ ವರ್ಗವೇ ಶಿಕ್ಷಣವನ್ನು ವಂಚಿಸಿತ್ತು. ಇದನ್ನು ಇಂದಿಗೂ ಯಾರೂ ಗಳಿಸಲಾಗದಷ್ಟು ಜ್ಞಾನವನ್ನು, ಪದವಿಗಳನ್ನು ವಿಶ್ವದಲ್ಲೇ ಅವರೇ ಶ್ರಮವಹಿಸಿ ಪಡೆದು, ಮಾದರಿಯಾದರು. ಆ ಜ್ಙಾನವೇ ಭಾರತವನ್ನು ಬೆಳಗಿಸಲು ಸಾಧ್ಯ ಆಯಿತು.
ನಾವು ಕಲಿತ ಅಲ್ಪ ಅಕ್ಷರವೇ ನಮಗೆ ಬದುಕಲು ಜ್ಙಾನ ನೀಡಿದೆ. ಈ ಜ್ಙಾನವೇ ಬದುಕನ್ನು ಬದಲಿಸಿದೆ. ಭಾರತವು ಇಂದು ವಿಶ್ವಮಾನ್ಯತೆಯ ಮಾನವ ಸಂಪನ್ಮೂಲ ಒಳಗೊಂಡಿರಲು ಶಿಕ್ಷಣದಿಂದಲೆ ಸಾಧ್ಯವಾಗಿದೆ. ಜ್ಞಾನವನ್ನು ನೀಡುವ ಮಾರ್ಗ ಶಿಕ್ಷಣಕ್ಕೆ ಪರ್ಯಾಯವಾಗಿ ಯಾವುದೂ ಇರಲಿಲ್ಲ.
ಒಂದು ರಾಷ್ಟ್ರಕ್ಕೆ ಅಗತ್ಯವಾದ ವಿಷಯಗಳನ್ನು ಅಮೂಲಾಗ್ರವಾಗಿ ತಿಳಿದುಕೊಂಡಿದ್ದು ಮತ್ತು ಅವುಗಳನ್ನು ಕಾನೂನುಗೊಳಿಸಿ, ಉಲ್ಲಂಘನೆ ಆಗದಂತೆ ಭದ್ರಗೊಳಿಸಿದ್ದು ಜಗತ್ತಿನಲ್ಲಿ ಅಪರೂಪ. ಆಳುವ ವರ್ಗ ಮತ್ತು ಮತದಾರ ಮಾತ್ರ ಇವುಗಳನ್ನು ಅರ್ಥೈಸಿಕೊಳ್ಳಬೇಕಿದೆ.


ಸ್ವಾತಂತ್ರ್ಯದ ಸಂದರ್ಭಕ್ಕೂ ಇಂದಿನ ಪರಿಸ್ಥಿತಿಗೂ ಹೋಲಿಕೆ ಮಾಡಿಕೊಂಡರೆ ಸ್ವಲ್ಪ ಸಮಾಧಾನವಿದೆ. ಮಹಿಳೆಗೂ, ಮಕ್ಕಳಿಗೂ, ಎಲ್ಲಾ ಮಾದರಿಯ ವೇತನದಾರರಿಗೂ, ದುಡಿಮೆದಾರರಿಗೂ, ಬಂಡವಾಳಗಾರಿಗೂ ಕೋರತೆಯಿಲ್ಲದ ಕಾನೂನುಗಳನ್ನು ಇವರು ಭದ್ರಗೊಳಿಸಿರುವಷ್ಟು,ರಾಜಾಶ್ರಯ, ಧಾರ್ಮಿಕ ವ್ಯವಸ್ಥೆ ಮತ್ತು ಇತರೆ ಮಾದ್ಯಮಗಳು ಭದ್ರಗೊಳಿಸಿಲ್ಲ. ಜನಸಂಖ್ಯೆ ಮತ್ತು ಆಸ್ತಿ ಹೆಚ್ಚಳವಾದರೆ, ಅದರ ಅಪಾಯವನ್ನು, ನಿರುದ್ಯೋಗ ಇದ್ದರೆ ಸಮಾಜದ ದುಸ್ಥಿತಿಯನ್ನೂ, ಪರಿಸರ ನಾಶವಾದರೆ ಭೂಮಿಯ ವಿನಾಶವನ್ನೂ, ಜೈವಿಕ ಮತ್ತು ಸಾಮಾಜಿಕ ಅಸಮತೋಲನವನ್ನು ಮುಂದುವರೆದರೆ ಅನಾಹುತವನ್ನು ಸೋದಾರಣವಾಗಿ ಭಾಗಿಯಾದವರ ಸಮ್ಮುಖದಲ್ಲಿ ಚರ್ಚಿಸಿ, ಸಂವಿಧಾನದಲ್ಲಿ ಮನಗಾಣಿಸಿದ್ದಾರೆ.

ಸಂವಿಧಾನದಲ್ಲಿರುವ ಅಧಿಕಾರ ಮತ್ತು ಸೌಲಭ್ಯಗಳನ್ನು ಕೇಳುವಂತೆ ಇತರೆ ಜವಾಬ್ದಾರಿಗಳನ್ನು ಹೊತ್ತುಕೊಳ್ಳಬೇಕಿದೆ. 2010ರವರೆವಿಗೂ ಅಂಬೇಡ್ಕರ್ ವಿಚಾರಗಳು, ಅವರ ಪ್ರತಿಮೆಗಳು, ವತ್ತಿಗೆಗಳು ಹೆಚ್ಚಿನ ಮಟ್ಟದಲ್ಲಿ ವಿಘ್ನವಾಗುತ್ತಿದ್ದವು ಮತ್ತು ಭಗ್ನಗೊಳ್ಳುತ್ತಿದ್ದವು. ಈಗ ಅರ್ಥವಂತಿಕೆ ,ಆನಂದತೆ ಮತ್ತು ಅನಿವಾರ್ಯತೆಯಿಂದ ಇವರ ಮೇಲಿನ ಅಭಿಮಾನ ,ಭಕ್ತಿ, ಭಾಗವಹಿಸುವಿಕೆ ಮತ್ತು ಆದರಣೀಯತೆ ಹೆಚ್ಚಿರುವುದು ಸಂತೋಷದಾಯಕವಾಗಿದೆ. ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇವರ ಜಯಂತಿಗಳು ಸೀಮಿತವಾಗಿದ್ದವು. ಈಗ ಸ್ವಾಭಿಮಾನದ ಸಂಕೇತ ಮತ್ತು ಸರ್ಕಾರದ ಗೌರವವು ಪ್ರತಿ ಹಳ್ಳಿಗೂ ತಲುಪಿ, ಮಹಾನಾಯಕರ ಜನ್ಮದಿನವು ಮಹತ್ವದ್ದಾಗಿದೆ.  ಈ ನಡೆಯಿಂದಾದರೂ ಗ್ರಾಮಗಳ ಸಾಮಾಜಿಕ ವ್ಯವಸ್ಥೆ ಮಡಿಕೆವಂತಿಕೆ ಮತ್ತು ಮೌಢ್ಯತೆಯಿಂದ ಹೊರಬರುವ ಅಗತ್ಯತೆ ಇದೆ.

The post ನವ ಭಾರತದ ದಿಕ್ಕನ್ನೇ ಬದಲಾಯಿಸಿದ ಸಮಾನತೆಯ ನೇತಾರ ನಿಮಗಿದೋ ಸಾವಿರದ ಶರಣು. appeared first on Good News 24x7.

]]>
ಚಾಮರಾಜ ನಗರ ಭಾಗದ ಜನರು 5000 ಎಕರೆ ಜಾಗ ವಿಚಾರಕ್ಕೆ ಆತಂಕ ಪಡಬೇಕಿಲ್ಲ- ಸಂಸದ ಯದುವೀರ್. https://www.goodnews24x7.com/%e0%b2%9a%e0%b2%be%e0%b2%ae%e0%b2%b0%e0%b2%be%e0%b2%9c-%e0%b2%a8%e0%b2%97%e0%b2%b0-%e0%b2%ad%e0%b2%be%e0%b2%97%e0%b2%a6-%e0%b2%9c%e0%b2%a8%e0%b2%b0%e0%b3%81-5000-%e0%b2%8e%e0%b2%95%e0%b2%b0%e0%b3%86/ Mon, 14 Apr 2025 07:10:59 +0000 https://www.goodnews24x7.com/?p=3231 ಮೈಸೂರು : 5 ಸಾವಿರ ಎಕರೆ ಜಾಗ ವಿಚಾರಕ್ಕೆ ಚಾಮರಾಜ ನಗರ ಡಿಸಿಗೆ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಪತ್ರ ಬರೆದ ವಿಚಾರ ಕುರಿತು ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಂಸದ…

The post ಚಾಮರಾಜ ನಗರ ಭಾಗದ ಜನರು 5000 ಎಕರೆ ಜಾಗ ವಿಚಾರಕ್ಕೆ ಆತಂಕ ಪಡಬೇಕಿಲ್ಲ- ಸಂಸದ ಯದುವೀರ್. appeared first on Good News 24x7.

]]>

ಮೈಸೂರು : 5 ಸಾವಿರ ಎಕರೆ ಜಾಗ ವಿಚಾರಕ್ಕೆ ಚಾಮರಾಜ ನಗರ ಡಿಸಿಗೆ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಪತ್ರ ಬರೆದ ವಿಚಾರ ಕುರಿತು ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಂಸದ ಯದುವೀರ್, ಆ ಭಾಗದ ಜನರು ಆತಂಕ ಪಡುವ ಅಗತ್ಯವಿಲ್ಲ. ನನ್ನಿಂದ ಅಥವಾ ನನ್ನ ತಾಯಿಯಿಂದ ಯಾವುದೇ ಅನಾನುಕೂಲವಾಗುವುದಿಲ್ಲ.

ನಮ್ಮ ತಾಯಿ ನಮಗೆ ಸೇರಿದ ಜಾಗ ಇದೆ ಎಂದು ಪತ್ರ ಬರೆದಿದ್ದಾರೆ.. ಪತ್ರ ಬರೆದ ಕಾರಣಕ್ಕೆ ಆತಂಕ ಪಡಬೇಕಿಲ್ಲ. ಅಲ್ಲಿನ ಜನರಿಗೆ ನಾವು ಯಾವುದೇ ತೊಂದರೆ ಕೊಡಲ್ಲ.  ಡಿಸಿ ಅವರು ವರದಿ ಕೊಡಲಿ. ಅದನ್ನು ಬಿಟ್ಟು ಕೆಲವರು ಆತಂಕ ಸೃಷ್ಟಿಸುವ ಕೆಲಸ ಮಾಡಲು ಹೊರಟಿದ್ದಾರೆ. ನಮ್ಮಿಂದ ಅಲ್ಲಿನ ಜನಕ್ಕೆ ತೊಂದರೆ ಆಗಲ್ಲ. ನಮ್ಮ ಆಸ್ತಿ ಜಮೀನು ಬಗ್ಗೆ ಡಿಸಿ ಅವರಿಗೆ ತಿಳಿಸಿದ್ದೇವೆ. ಡಿಸಿ ಅವರಿಂದ ವರದಿ ಬರಲಿ. ಅಲ್ಲಿನ ಜನರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ನಮ್ಮಿಂದ ಯಾವುದೇ ಜನರಿಗೆ ಅನಾನುಕೂಲವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ವೀರಶೈವ ಲಿಂಗಾಯತ ಮಹಾಸಭಾದಿಂದ ಪ್ರತ್ಯೇಕ ಜಾತಿ ಗಣತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಸಂವಿಧಾನದಲ್ಲಿ ಸಮುದಾಯದ ಗಣತಿಗೆ ಅವಕಾಶ ಇದೆ. ಅದೇ ರೀತಿ ವೀರಶೈವ ಲಿಂಗಾಯತ ಮಹಾಸಭಾ ಜಾತಿಗಣತಿ ಮಾಡಲು ಮುಂದಾಗಿದೆ. ಸಂವಿಧಾನದಲ್ಲಿ ಅವಕಾಶ ಮಾಡಬಹುದು ಎಂದರು.

The post ಚಾಮರಾಜ ನಗರ ಭಾಗದ ಜನರು 5000 ಎಕರೆ ಜಾಗ ವಿಚಾರಕ್ಕೆ ಆತಂಕ ಪಡಬೇಕಿಲ್ಲ- ಸಂಸದ ಯದುವೀರ್. appeared first on Good News 24x7.

]]>