Dasara Archives - Good News 24x7 https://www.goodnews24x7.com/tag/dasara/ Kannada Fri, 04 Sep 2026 10:31:07 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Dasara Archives - Good News 24x7 https://www.goodnews24x7.com/tag/dasara/ 32 32 ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು https://www.goodnews24x7.com/government-to-honour-fans-demand-abhimanyu-to-be-made-into-a-flag-elephant/ Fri, 04 Sep 2026 10:31:07 +0000 https://www.goodnews24x7.com/?p=9963 ಸತತ 6 ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ನಾಡಹಬ್ಬಕ್ಕೆ ಸಾಕ್ಷಿಯಾಗಿದ್ದ ದಸರಾ ಗಜಪಡೆಯ ದಿಗ್ಗಜ ಅಭಿಮನ್ಯು, 2026ರ ಮೈಸೂರು ದಸರಾದಲ್ಲಿ ನಿಶಾನೆ ಆನೆಯಾಗಿ ಹೆಜ್ಜೆ ಹಾಕಲು ಸಜ್ಜಾಗಿದ್ದಾನೆ. 60 ವರ್ಷ ವಯೋಮಿತಿ ಪೂರೈಸಿದ ಹಿನ್ನೆಲೆಯಲ್ಲಿ ಈ ಹಿಂದೆ ಆನೆಗೆ ನಿವೃತ್ತಿ…

The post ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು appeared first on Good News 24x7.

]]>

ಸತತ 6 ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ನಾಡಹಬ್ಬಕ್ಕೆ ಸಾಕ್ಷಿಯಾಗಿದ್ದ ದಸರಾ ಗಜಪಡೆಯ ದಿಗ್ಗಜ ಅಭಿಮನ್ಯು, 2026ರ ಮೈಸೂರು ದಸರಾದಲ್ಲಿ ನಿಶಾನೆ ಆನೆಯಾಗಿ ಹೆಜ್ಜೆ ಹಾಕಲು ಸಜ್ಜಾಗಿದ್ದಾನೆ. 60 ವರ್ಷ ವಯೋಮಿತಿ ಪೂರೈಸಿದ ಹಿನ್ನೆಲೆಯಲ್ಲಿ ಈ ಹಿಂದೆ ಆನೆಗೆ ನಿವೃತ್ತಿ ಘೋಷಿಸಲಾಗಿದ್ದು, ದಸರಾ ಮೆರವಣಿಗೆಯಲ್ಲಿ ಅಭಿಮನ್ಯು ಭಾಗವಹಿಸುವುದಿಲ್ಲ ಎಂಬ ಸುದ್ದಿ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿತ್ತು. ದಿಗ್ಗಜ ಆನೆ ಅರ್ಜುನನಿಗೆ ನೀಡಿದಂತೆ ಅಭಿಮನ್ಯುವಿಗೂ ಗೌರವಪೂರ್ಣ ವಿದಾಯ ನೀಡಬೇಕು ಹಾಗೂ ಕೊನೆಯ ಬಾರಿಗೆ ನಿಶಾನೆ ಆನೆಯಾಗಿ ಕೊಂಡೊಯ್ಯಬೇಕು ಎಂದು ಸಾರ್ವಜನಿಕರು ಮತ್ತು ವನ್ಯಜೀವಿ ಪ್ರಿಯರು ವ್ಯಾಪಕ ಒತ್ತಡ ತಂದಿದ್ದರು. ಜನರ ಈ ಭಾವನಾತ್ಮಕ ಬೇಡಿಕೆಗೆ ಸ್ಪಂದಿಸಿರುವ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, 2026ರ ದಸರಾ ಮಹೋತ್ಸವದಲ್ಲಿ ಅಭಿಮನ್ಯುಗೆ ನಿಶಾನೆ ಆನೆಯಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವಂತೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ದಸರಾ ಪರಂಪರೆಯಲ್ಲಿ ತನ್ನ ಶಿಸ್ತು ಹಾಗೂ ಧೈರ್ಯದಿಂದ ನಾಡಿನ ಜನರ ಪ್ರೀತಿ ಗಳಿಸಿರುವ ಅಭಿಮನ್ಯು, ಸಚಿವರ ಈ ಹೊಸ ಆದೇಶದಿಂದ ಮತ್ತೊಮ್ಮೆ ಗಜಪಡೆಯ ಮುಂಚೂಣಿಯಲ್ಲಿ ಕಂಗೊಳಿಸುವುದು ಖಚಿತವಾಗಿದ್ದು, ಅಭಿಮಾನಿಗಳಲ್ಲಿ ಹರ್ಷ ಮೂಡಿಸಿ

The post ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು appeared first on Good News 24x7.

]]>
ಮನೆಮನೆ ಗೊಂಬೆ ಕೂರಿಸುವ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಿದ ಯದುವೀರ್ ಶ್ರೀ ಕೃಷ್ಣ ದತ್ತ ಒಡೆಯರ್ https://www.goodnews24x7.com/yaduveer-sri-krishna-datta-wodeyar-releases-poster-for-door-to-door-doll-placing-competition/ Sun, 21 Sep 2025 10:33:32 +0000 https://www.goodnews24x7.com/?p=7603 ಮೈಸೂರು: ಶ್ರೀ ದುರ್ಗಾ ಫೌಂಡೇಶನ್ ಹಾಗೂ ಕೆಎಂಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ನಾಡಹಬ್ಬ ಮೈಸೂರು ದಸರಾ 2025ರ ಮನೆಮನೆ ಗೊಂಬೆ ಗೊಂಬೆ ಕೂರಿಸುವ ಸ್ಪರ್ಧೆಯನ್ನು ಆಯೋಜಿಸಿದು ಸ್ಪರ್ಧೆಯ ಪೋಸ್ಟರನ್ನು ಮಹಾರಾಜರು ಹಾಗೂ ಸಂಸದರಾದ ಯದುವೀರ್ ಶ್ರೀ ಕೃಷ್ಣ ದತ್ತ ಒಡೆಯರು…

The post ಮನೆಮನೆ ಗೊಂಬೆ ಕೂರಿಸುವ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಿದ ಯದುವೀರ್ ಶ್ರೀ ಕೃಷ್ಣ ದತ್ತ ಒಡೆಯರ್ appeared first on Good News 24x7.

]]>

ಮೈಸೂರು: ಶ್ರೀ ದುರ್ಗಾ ಫೌಂಡೇಶನ್ ಹಾಗೂ ಕೆಎಂಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ನಾಡಹಬ್ಬ ಮೈಸೂರು ದಸರಾ 2025ರ ಮನೆಮನೆ ಗೊಂಬೆ ಗೊಂಬೆ ಕೂರಿಸುವ ಸ್ಪರ್ಧೆಯನ್ನು ಆಯೋಜಿಸಿದು ಸ್ಪರ್ಧೆಯ ಪೋಸ್ಟರನ್ನು ಮಹಾರಾಜರು ಹಾಗೂ ಸಂಸದರಾದ ಯದುವೀರ್ ಶ್ರೀ ಕೃಷ್ಣ ದತ್ತ ಒಡೆಯರು ನಗರದ ಬಿಜೆಪಿ ಕಚೇರಿಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು ಸ್ಪರ್ಧೆಯ ಮಾಹಿತಿ ನೀಡಿದ ಕೆ ಎಮ್ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್.

ಸ್ಪರ್ಧೆಯಲ್ಲಿ ಸ್ಪರ್ಧೆ ಮಾಡುವವರು 200 ರೂ ನೋಂದಣಿ ಶುಲ್ಕ ಇರುತ್ತದೆ, ದಸರಾ ಗೊಂಬೆ ಸ್ಪರ್ಧೆಯು ಸಂಸ್ಕೃತಿ ಇತಿಹಾಸ ಸಾರುವ ಹಾಗೂ ಐತಿಹಾಸಿಕ ಹಿನ್ನಲೆ ಒಳಗೊಂಡಂತೆ ಗೊಂಬೆಗಳನ್ನು ಕೂರಿಸಿದ 10 ವಿಜೇತರಿಗೆ ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲೇ ಬಹುಮಾನ ಹಾಗೂ ಪ್ರಮಾಣಪತ್ರನೀಡಲಾಗುವುದು ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು
ಕಡೆಯ ದಿನಾಂಕ 2/10/2025 ರ ಒಳಗೆ 8971389539ಈ ದೂರವಾಣಿ ಸಂಖ್ಯೆಗೆ ವಾಟ್ಸ್ ಆ್ಯಪ್ ಮೂಲಕ ಗೊಂಬೆ ಜೋಡಣೆ ಮಾಡಿರುವ ಚಿತ್ರ ಹಾಗೂ 3ನಿಮಿಷದ ವೀಡಿಯೊವನ್ನು ಕಲಿಸಿಕೊಡಬೇಕು ಆನಂತರ ನುರಿತ ತೀರ್ಪುಗಾರರು ಅವರ ನಿವಾಸಕ್ಕೆ ತೆರಳಿ ವೀಕ್ಷಿಸಿ ಸಂಸ್ಕೃತಿ ಇತಿಹಾಸ ಸಾರುವ ಹಾಗೂ ಐತಿಹಾಸಿಕ ಹಿನ್ನಲೆ ಒಳಗೊಂಡ ಅದ್ಭುತವಾಗಿ ಗೊಂಬೆ ಜೋಡಣೆ ಮಾಡಿದಂತಹ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಾಸಕರಾದ ಟಿ ಎಸ್ ಶ್ರೀವತ್ಸ, ಮಾಜಿ ಮಹಾಪೌರರಾದ ಶಿವಕುಮಾರ್, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಮುಖಂಡರಾದ ಮಹೇಶ್ ರಾಜ್ ಅರಸ್,ಕಾರ್ತಿಕ್ ಮರಿಯಪ್ಪ,ಪರಿಕ್ಷತ್ ರಾಜ್ ಹಾಗೂ ಇನ್ನಿತರರು ಹಾಜರಿದ್ದರು

The post ಮನೆಮನೆ ಗೊಂಬೆ ಕೂರಿಸುವ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಿದ ಯದುವೀರ್ ಶ್ರೀ ಕೃಷ್ಣ ದತ್ತ ಒಡೆಯರ್ appeared first on Good News 24x7.

]]>
ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ವಜಾಗೊಳಿಸಿದೆ https://www.goodnews24x7.com/supreme-court-dismisses-petition-filed-by-banu-mushtaq-opposing-mysore-dasara-inauguration/ Fri, 19 Sep 2025 10:23:07 +0000 https://www.goodnews24x7.com/?p=7578 ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನ ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಇತ್ತೀಚೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದೀಗ ಬೆಂಗಳೂರು ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿ ಆದೇಶ ಹೊರಡಿಸಿದೆ.…

The post ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ವಜಾಗೊಳಿಸಿದೆ appeared first on Good News 24x7.

]]>

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನ ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಇತ್ತೀಚೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದೀಗ ಬೆಂಗಳೂರು ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿ ಆದೇಶ ಹೊರಡಿಸಿದೆ.

ಬೆಂಗಳೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ (mysuru dasara) ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ (Banu Mushtaq)​​ ಆಯ್ಕೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ವಿಚಾರಣೆ ಮಾಡಿ ಈ ಪ್ರಕರಣವನ್ನು ವಜಾಗೊಳಿಸಿದೆ.

ಬೆಂಗಳೂರು ನಿವಾಸಿ ಹೆಚ್.ಎಸ್.ಗೌರವ್ ಅವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಪಿ.ಬಿ. ಸುರೇಶ್​ ವಾದ ಮಂಡಿಸಿದ್ದು, ಹಿಂದೂಯೇತರ ವ್ಯಕ್ತಿಗೆ ಪೂಜೆ ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದಿದ್ದಾರೆ.

ದೇವಸ್ಥಾನದ ಒಳಗೆ ಪೂಜೆ ನಡೆಸುವುದನ್ನು ಜಾತ್ಯತೀತ ಕ್ರಿಯೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಸಂಪೂರ್ಣವಾಗಿ ಇದೊಂದು ರಾಜಕೀಯವಾಗಿದ್ದು, ಧಾರ್ಮಿಕ ಕಾರ್ಯಗಳಿಗಾಗಿ ಅವರನ್ನು ಆಹ್ವಾನಿಸಬಾರದು ಎಂಬುದಕ್ಕೆ ಯಾವುದೇ ಕಾರಣವಿಲ್ಲ ಎಂದು ಹಿರಿಯ ವಕೀಲ ಪಿ.ಬಿ. ಸುರೇಶ್​ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠ ಅರ್ಜಿಯನ್ನು ವಜಾಗೊಳಿಸಿದೆ.

ಹೈಕೋರ್ಟ್​ನಲ್ಲೂ ವಜಾ
ಬಾನು ಮುಷ್ತಾಕ್​​ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಇತ್ತೀಚೆಗೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ದಸರಾ ಉದ್ಘಾಟನೆ ವಿಚಾರದಲ್ಲಿ ಯಾವುದೇ ಹಕ್ಕು ಉಲ್ಲಂಘನೆ ಆಗಿರುವುದು ಕಂಡುಬಂದಿಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿತ್ತು. ಹೈಕೋರ್ಟಿನಲ್ಲಾದರೂ ನ್ಯಾಯ ಸಿಗಬಹುದು ಎಂಬ ಭರವಸೆ ಇತ್ತು. ಆದರೆ ಅದು ಕೂಡ ಇಲ್ಲವಾಯಿತು ಎಂದು ತೀರ್ಪಿನ ನಂತರ ಪ್ರತಾಪ್ ಸಿಂಹ ನಿರಾಶೆ ವ್ಯಕ್ತಪಡಿಸಿದ್ದರು.

ಬಾನು ಮುಷ್ತಾಕ್​​ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವ ಸಿಎಂ ಸಿದ್ದರಾಮಯ್ಯ ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿಯ ಅನೇಕ ನಾಯಕರು ಟೀಕೆ ಮಾಡಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಪುಟ ಸಚಿವರು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

The post ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ವಜಾಗೊಳಿಸಿದೆ appeared first on Good News 24x7.

]]>
ಡಾ ರಾಜ್​​ಕುಮಾರ್ ಅವರಿಂದ ದಸರಾ ‘ಉದ್ಘಾಟನೆ’ ಪ್ರಾರಂಭವಾಗಿದ್ದು! ಹೇಗೆ ಗೊತ್ತೆ? https://www.goodnews24x7.com/dr-rajkumar-has-inaugurated-dasara-how-did-you-know/ Tue, 16 Sep 2025 13:35:40 +0000 https://www.goodnews24x7.com/?p=7554 ನಾಡ ಹಬ್ಬ ದಸರಾ ಆಚರಣೆಗೆ ದಿನಗಣನೆ ಶುರುವಾಗಿದೆ. ಜಂಬೂ ಸವಾರಿಯ ತಾಲೀಮು ಜಾರಿಯಲ್ಲಿದೆ. ಈ ಬಾರಿಯ ದಸರಾ ಉದ್ಘಾಟನೆಯನ್ನು ಬಾನು ಮುಷ್ಕಾಖ್ ಅವರು ಮಾಡಲಿದ್ದಾರೆ. ಆದರೆ ಇದಕ್ಕೆ ಪ್ರತಾಪ್ ಸಿಂಹ ಸೇರಿದಂತೆ ಹಲವು ಬಿಜೆಪಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ದಸರಾ ಉದ್ಘಾಟನೆ…

The post ಡಾ ರಾಜ್​​ಕುಮಾರ್ ಅವರಿಂದ ದಸರಾ ‘ಉದ್ಘಾಟನೆ’ ಪ್ರಾರಂಭವಾಗಿದ್ದು! ಹೇಗೆ ಗೊತ್ತೆ? appeared first on Good News 24x7.

]]>

ನಾಡ ಹಬ್ಬ ದಸರಾ ಆಚರಣೆಗೆ ದಿನಗಣನೆ ಶುರುವಾಗಿದೆ. ಜಂಬೂ ಸವಾರಿಯ ತಾಲೀಮು ಜಾರಿಯಲ್ಲಿದೆ. ಈ ಬಾರಿಯ ದಸರಾ ಉದ್ಘಾಟನೆಯನ್ನು ಬಾನು ಮುಷ್ಕಾಖ್ ಅವರು ಮಾಡಲಿದ್ದಾರೆ. ಆದರೆ ಇದಕ್ಕೆ ಪ್ರತಾಪ್ ಸಿಂಹ ಸೇರಿದಂತೆ ಹಲವು ಬಿಜೆಪಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ದಸರಾ ಉದ್ಘಾಟನೆ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ಡಾ ರಾಜ್​​ಕುಮಾರ್ ಅವರು ಎಂಬುದು ಎಷ್ಟು ಮಂದಿಗೆ ಗೊತ್ತು?
ದಸರಾ ‘ಉದ್ಘಾಟನೆ’ ಪ್ರಾರಂಭವಾಗಿದ್ದು ಡಾ ರಾಜ್​​ಕುಮಾರ್ ಅವರಿಂದ, ಹೇಗೆ ಗೊತ್ತೆ?

ಮೈಸೂರು ದಸರಾ ಆಚರಣೆಗೆ ಶತಮಾನಗಳ ಇತಿಹಾಸವಿದೆ. 14ನೇ ಶತಮಾನದಿಂದಲೂ ಮೈಸೂರಿನಲ್ಲಿ ದಸರಾ ಆಚರಣೆ ಬಲು ಅದ್ಧೂರಿಯಾಗಿ ಆಚರಣೆ ಆಗುತ್ತಾ ಬರುತ್ತಿದೆ. ಮೊದಲಿಗೆ ಮಹಾರಾಜರು ಅಂಬಾರಿಯಲ್ಲಿ ಕೂತು ನಗರದ ಪ್ರದಕ್ಷಿಣೆ ಹಾಕುತ್ತಿದ್ದರು ಇದಕ್ಕೆ ಜಂಬೂ ಸವಾರಿ ಎನ್ನಲಾಗುತ್ತಿತ್ತು. ಆ ಬಳಿಕ ಅಂಬಾರಿಯಲ್ಲಿ ಚಾಮುಂಡೇಶ್ವರಿ ತಾಯಿಯ ಮೂರ್ತಿಯನ್ನಿಟ್ಟು ಪ್ರದಕ್ಷಿಣೆ ಹಾಕಿಸಲಾಗುತ್ತದೆ.

ಈ ಬಾರಿಯೂ ಸಹ ದಸರಾ ಅದ್ಧೂರಿಯಾಗಿ ನಡೆಯಲಿದೆ. ಆದರೆ ಈ ಬಾರಿ ದಸರಾ ಸಣ್ಣ ವಿವಾದಕ್ಕೆ ಕಾರಣವಾಗಿದೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಸರ್ಕಾರವು ಆಹ್ವಾನ ನೀಡಿರುವುದನ್ನು ಬಿಜೆಪಿಗರು ವಿರೋಧಿಸುತ್ತಿದ್ದಾರೆ. ಅಂದಹಾಗೆ ಈ ‘ದಸರಾ ಉದ್ಘಾಟನೆ’ ಎಂಬುದಕ್ಕೆ ಪ್ರಾಮುಖ್ಯತೆ ದೊರೆತಿದ್ದು ಡಾ ರಾಜ್​​ಕುಮಾರ್ ಅವರಿಂದ. ದಸರಾ ಅನ್ನು ಮೊದಲ ಬಾರಿ ‘ಉದ್ಘಾಟನೆ’ ಮಾಡಿದ್ದು ಡಾ ರಾಜ್​​ಕುಮಾರ್ ಅವರೇ.

1993ಕ್ಕೆ ಮುಂಚೆ ದಸರಾ ಉದ್ಘಾಟನೆ ಮಾಡುವ ಸಂಪ್ರದಾಯ ಇರಲಿಲ್ಲ. ಅದಕ್ಕೂ ಮುಂಚೆ ಸ್ಥಳೀಯವಾಗಿ ಪೂಜಾ ಮಾಡಿ ಜಂಬೂ ಸವಾರಿ ಮಾಡಲಾಗುತ್ತಿತ್ತು. ಜಂಬೂ ಸವಾರಿಗೆ ಮುಂಚೆ ಚಿನ್ನದ ಅಂಬಾರಿಗೆ ಮುಖ್ಯ ಮಂತ್ರಿ ಆಗಿದ್ದವರು ಪುಷ್ಪಾರ್ಚನೆ ಮಾಡುವ ಸಂಪ್ರದಾಯ ಇತ್ತು. ಆದರೆ 1993 ರಲ್ಲಿ ನೆರೆಯ ಮಹಾರಾಷ್ಟ್ರದ ಲಾಥೋರ್​​ನಲ್ಲಿ ಭಾರಿ ಭೂಕಂಪನ ಆಗಿತ್ತು. ಸುಮಾರು 10 ಸಾವಿರ ಜನ ನಿಧನ ಹೊಂದಿದ್ದರು. 10 ಲಕ್ಷ ಜನ ಮನೆ-ಮಠ ಕಳೆದುಕೊಂಡಿದ್ದರು. ನೆರೆ ರಾಜ್ಯದಲ್ಲಿ ವಿಪತ್ತು ಸಂಭಿಸಿದ್ದ ಕಾರಣ ರಾಜ್ಯದಲ್ಲಿ ದಸರಾ ಆಚರಣೆ ಬೇಡ ಎಂಬ ಕೂಗು ಎದ್ದಿತ್ತು.

ಆಗ ಸಿಎಂ ಆಗಿದ್ದವರು ವೀರಪ್ಪ ಮೋಯ್ಲಿ. ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬಂದಿರುವ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದಸರಾ ಅನ್ನು ನಿಲ್ಲಿಸುವುದು ಬೇಡ ಎಂಬ ನಿರ್ಧಾರವನ್ನು ವೀರಪ್ಪ ಮೋಯ್ಲಿ ತಳೆದರು. ಆದರೆ ಅವರ ನಿರ್ಧಾರಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. ಆಗ ವೀರಪ್ಪ ಮೋಯ್ಲಿ ಅವರು ಡಾ ರಾಜ್​​ಕುಮಾರ್ ಅವರ ನೆರವು ಪಡೆದರು. ರಾಜ್​​ಕುಮಾರ್ ಅವರನ್ನು ದಸರಾ ಉದ್ಘಾಟನೆಗೆಂದು ಆಹ್ವಾನಿಸಿದರು. ರಾಜ್​​ಕುಮಾರ್ ಅವರ ಆಗಮನದಿಂದ ದಸರಾ ಆಚರಣೆಗೆ ಇದ್ದ ವಿರೋಧ ತಣ್ಣಗಾಯ್ತು. ಸುಸೂತ್ರವಾಗಿ ಹಿಂದಿಗಿಂತಲೂ ಅದ್ಧೂರಿಯಾಗಿ ದಸರಾ ಆಚರಣೆ ನಡೆಯಿತು.

ರಾಜ್​​ಕುಮಾರ್ ಉದ್ಘಾಟನೆ ಮಾಡಿದ ಬಳಿಕ, ಪ್ರತಿವರ್ಷವೂ ಯಾರನ್ನಾದರೂ ಗಣ್ಯರನ್ನು, ಸಾಹಿತಿಗಳನ್ನು ಕರೆಸಿ ದಸರಾ ಉದ್ಘಾಟಿಸುವ ಸಂಪ್ರದಾಯ ಆರಂಭವಾಯ್ತು. ಜಂಬೂ ಸವಾರಿಯ ಹೊರತಾಗಿ ಸಿಎಂ ಆಗಿದ್ದವರು ಬೇರೆ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ. 1994 ರಲ್ಲಿ ಸಿಎಂ ಆದ ಎಚ್​​​ಡಿ ದೇವೇಗೌಡ ಅವರು ಉದ್ಘಾಟನೆ ಕಾರ್ಯಕ್ರಮದಲ್ಲಿಯೂ ಭಾಗವಹಿಸುವ ಮೂಲಕ ಸಿಎಂಗಳು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿ ಆಗುವ ಸಂಪ್ರದಾಯಕ್ಕೆ ಚಾಲನೆ ನೀಡಿದರು.

The post ಡಾ ರಾಜ್​​ಕುಮಾರ್ ಅವರಿಂದ ದಸರಾ ‘ಉದ್ಘಾಟನೆ’ ಪ್ರಾರಂಭವಾಗಿದ್ದು! ಹೇಗೆ ಗೊತ್ತೆ? appeared first on Good News 24x7.

]]>
ವಿಶ್ವ ವಿಖ್ಯಾತಿ ಮೈಸೂರು ದಸರಾ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಯ್ತಾ ,,,! https://www.goodnews24x7.com/is-the-world-famous-mysore-dasara-limited-to-mysore-only/ Sat, 30 Aug 2025 13:42:04 +0000 https://www.goodnews24x7.com/?p=7078 ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆದು ತಿಂಗಳಾಗಿದೆ. ಉದ್ಘಾಟಕರಾಗಿ ಸಾಹಿತಿ, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ ಹೆಸರು ಘೋಷಣೆಯಾಗಿದೆ. ಈ ಸಂಗತಿಗಳನ್ನು ಹೊರತು ಪಡಿಸಿ ದಸರಾ-೨೦೨೫ ರ ಯಾವುದೇ ಕಾರ್ಯಕ್ರಮಗಳ ವಿವರ ಲಭ್ಯವಿಲ್ಲ. ಮೈಸೂರು ದಸರಾ ಮಹೋತ್ಸವದ…

The post ವಿಶ್ವ ವಿಖ್ಯಾತಿ ಮೈಸೂರು ದಸರಾ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಯ್ತಾ ,,,! appeared first on Good News 24x7.

]]>

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆದು ತಿಂಗಳಾಗಿದೆ. ಉದ್ಘಾಟಕರಾಗಿ ಸಾಹಿತಿ, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ ಹೆಸರು ಘೋಷಣೆಯಾಗಿದೆ. ಈ ಸಂಗತಿಗಳನ್ನು ಹೊರತು ಪಡಿಸಿ ದಸರಾ-೨೦೨೫ ರ ಯಾವುದೇ ಕಾರ್ಯಕ್ರಮಗಳ ವಿವರ ಲಭ್ಯವಿಲ್ಲ.

ಮೈಸೂರು ದಸರಾ ಮಹೋತ್ಸವದ ಇಂಚಿಂಚು ಮಾಹಿತಿಯನ್ನು ಒದಗಿಸಬೇಕಾಗಿದ್ದ ದಸರಾ ವೆಬ್‌ ಸೈಟ್‌ ಈತನಕ ಸಿದ್ಧಗೊಂಡಿಲ್ಲ. ಯಾರಾದರು ಕುತೂಹಲದಿಂದ ಈ ಸೈಟ್‌ ಗೆ ಭೇಟಿ ನೀಡಿದರೆ ನಿರಾಸೆ ಖಂಡಿತ.

ಕಾರಣ ಈ ವೆಬ್‌ ಸೈಟ್‌ ನಲ್ಲಿ ಯಾವುದೇ ಮಾಹಿತಿ ಇಲ್ಲ. ಅಸಲಿಗೆ ಈ ಸೈಟ್‌ ಒಪನ್‌ ಆಗೋದೇ ಇಲ್ಲ. ಅದು ಯೂಸರ್‌ ನೇಮ್‌ ,ಪಾಸವರ್ಡ್‌ ಕೇಳುತ್ತದೆ. ದಸರಾ ಮಹೋತ್ಸವ ವೀಕ್ಷಿಸಲು ಪ್ಲಾನ್‌ ಮಾಡುವ ಉದ್ದೇಶ ಹೊಂದಿರುವ ವಿದೇಶಿಗರಿಗೆ ಇದರಿಂದ ತೀವ್ರ ನಿರಾಸೆಯಾಗಿದೆ. ಟಿಕೆಟ್‌ ಅದರಲ್ಲೂ “ ಗೋಲ್ಡ್‌ ಕಾರ್ಡ್‌ “ ಪಡೆದು ಕಾರ್ಯಕ್ರಮ ವೀಕ್ಷಿಸುವ ಬಯಕೆ ಹೊಂದಿರುವವರು ವೆಬ್‌ ಸೈಟ್‌ ಸಿದ್ಧವಾಗದ್ದನ್ನು ಕಂಡು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಸಾಲಿನ ದಸರಾ ಮಹೋತ್ಸವದ ಕಾರ್ಯಕ್ರಮಗಳೇನು, ಯಾವಯಾವ ಕಲಾವಿದರು ಬರುತ್ತಾರೆ. ಕಾರ್ಯಕ್ರಮಗಳು ಎಲ್ಲಿ ನಡೆಯುತ್ತವೆ. ಅದರ ಸಮಯ ಏನು..? ಈ ಯಾವ ಮಾಹಿತಿಯು ಈ ತನಕ ಲಭ್ಯವಿಲ್ಲ.

ಯುವ ದಸರಾ ಎಲ್ಲಿ..?:

ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಕಳೆದ ವರ್ಷ ಮಹಾರಾಜ ಕಾಲೇಜು ಮೈದಾನದ ಬದಲಿಗೆ ಮೈಸೂರಿನ ಹೊರ ವಲಯದಲ್ಲಿ ಯುವ ದಸರಾ ನಡೆಸಲಾಗಿತ್ತು. ಇಳಯರಾಜ, ರೆಹಮಾನ್ ರಂಥ ಚಲನಚಿತ್ರರಂಗದ ಘಟಾನುಘಟಿ ಕಲಾವಿದರನ್ನು ಆಹ್ವಾನಿಸಿದ್ದರಿಂದ ನಗರ ಪ್ರದೇಶದಲ್ಲಿ ಜನದಟ್ಟನೆ ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಈ ವರ್ಷ ಎಲ್ಲಿ ಯುವ ದಸರಾ ನಡೆಸುತ್ತಾರೆ ಎಂಬುದು ಇನ್ನು ತೀರ್ಮಾನವಾಗಿಲ್ಲ. ಕಲಾವಿದರ ಡೇಟ್ಸ್‌ ಪೈನಲ್‌ ಆದ ಬಳಿಕ ಕಾರ್ಯಕ್ರಮ ಸ್ಥಳ ನಿಗಧಿಪಡಿಸುವ ಉದ್ದೇಶ ಹೊಂದಲಾಗಿದೆ.

ದಸರಾ ಮಹೋತ್ಸವದ ಅಧಿಕೃತ ವೆಬ್‌ಸೈಟ್ ಸಿದ್ಧವಾಗದಿರುವುದರಿಂದ ಪ್ರವಾಸಿಗರಿಗೆ ಮಾಹಿತಿ ಪಡೆಯಲು ತೊಂದರೆಯಾಗಿದೆ. ಇದು ಸಂಘಟನೆ ಕೊರತೆ ಸೂಚಿಸುತ್ತದೆ.

ಮೈಸೂರು ದಸರಾದ ವಿಶ್ವವಿಖ್ಯಾತ ಸ್ಥಾನಕ್ಕೆ ಇದರ ಐತಿಹಾಸಿಕ, ಸಾಂಸ್ಕೃತಿಕ, ಮತ್ತು ದೃಶ್ಯಾತ್ಮಕ ವೈಭವವೇ ಕಾರಣ. ಆದ್ದರಿಂದ 2025ರ ಆಚರಣೆಯ ಸಿದ್ಧತೆಯ ಕೊರತೆಯನ್ನು ಸರಿಪಡಿಸಲು ರಾಜ್ಯ ಸರಕಾರ ಶೀಘ್ರ ಕ್ರಮ ಕೈಗೊಂಡು , ಈ ವರ್ಷದ ದಸರಾವೂ ಯಶಸ್ವಿಯಾಗಿ ಜಗತ್ತಿನ ಗಮನ ಸೆಳೆಯುವಂತಾಗಲಿ.

 

The post ವಿಶ್ವ ವಿಖ್ಯಾತಿ ಮೈಸೂರು ದಸರಾ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಯ್ತಾ ,,,! appeared first on Good News 24x7.

]]>
ಬೂಕರ್ ಪ್ರಶಸ್ತಿ ವಿಜೇತೆಯಿಂದ ದಸರಾ ಉದ್ಘಾಟನೆ ! ಸೋನಿಯಾ ಗಾಂಧಿ ಪ್ರಸ್ತಾಪ ಇಲ್ಲ: https://www.goodnews24x7.com/bukar-prasasti-vijeteyinda-dasara-udgha%e1%b9%adane-soniya-gandhi-prastapa-illa-dasarabanumushtaqchiefministercm-se-22-randu-camu%e1%b9%87%e1%b8%8dibe%e1%b9%ad%e1%b9%adadalli-agrapujeyondige-das/ Sat, 23 Aug 2025 10:00:27 +0000 https://www.goodnews24x7.com/?p=6570 ಸೆ.22 ರಂದು ಚಾಮುಂಡಿಬೆಟ್ಟದಲ್ಲಿ ಅಗ್ರಪೂಜೆಯೊಂದಿಗೆ ದಸರಾ ಉದ್ಘಾಟನೆ; ಅ.2ಕ್ಕೆ ಜಂಬೂ ಸವಾರಿ ಬೆಂಗಳೂರು – ಈ ಬಾರಿಯ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತರಾದ ಸಾಹಿತಿ, ಹಾಸನ ಮೂಲದ ಬಾನು ಮುಷ್ತಾಕ್ ನೆರವೇರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.…

The post ಬೂಕರ್ ಪ್ರಶಸ್ತಿ ವಿಜೇತೆಯಿಂದ ದಸರಾ ಉದ್ಘಾಟನೆ ! ಸೋನಿಯಾ ಗಾಂಧಿ ಪ್ರಸ್ತಾಪ ಇಲ್ಲ: appeared first on Good News 24x7.

]]>

ಸೆ.22 ರಂದು ಚಾಮುಂಡಿಬೆಟ್ಟದಲ್ಲಿ ಅಗ್ರಪೂಜೆಯೊಂದಿಗೆ ದಸರಾ ಉದ್ಘಾಟನೆ; ಅ.2ಕ್ಕೆ ಜಂಬೂ ಸವಾರಿ

ಬೆಂಗಳೂರು – ಈ ಬಾರಿಯ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತರಾದ ಸಾಹಿತಿ, ಹಾಸನ ಮೂಲದ ಬಾನು ಮುಷ್ತಾಕ್ ನೆರವೇರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅವರ ‘ಎದೆಯ ಹಣತೆ’ (ಹಾರ್ಟ್ ಲ್ಯಾಂಪ್) ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಕನ್ನಡಿಗರೊಬ್ಬರಿಗೆ ಈ ಪ್ರಶಸ್ತಿ ಬಂದಿರು ವುದು ಸಂತಸದ ಸಂಗತಿ ಯಾಗಿದೆ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾನು ಮುಸ್ತಾಕ್ ಅವರೊಂದಿಗೆ ಈ ಕುರಿತು ಚರ್ಚಿಸಿದ್ದು, ಅವರಿಗೆ ಸಂಪ್ರದಾಯದಂತೆ ಜಿಲ್ಲಾಡಳಿತ ಆಹ್ವಾನ ನೀಡಲಿದೆ ಎಂದರು.
ಕರ್ನಾಟಕದ ಮಹಿಳೆಯೊಬ್ಬರಿಗೆ ಬೂಕರ್ ಪ್ರಶಸ್ತಿ ದೊರೆತಿರುವುದು ಹೆಮ್ಮೆ ವಿಷಯ. ಬಾನು ಮುಸ್ತಾಕ್ ರೈತ ಸಂಘ, ಕನ್ನಡ ಪರ ಚಳವಳಿಗಳಲ್ಲಿ ಭಾಗವಹಿಸಿದ್ದು, ಪ್ರಗತಿ ಪರ ಚಿಂತನೆ ಉಳ್ಳವರು. ಇಂತಹ ಮಹಿಳೆಯಿಂದ ನಾವು ಈ ಬಾರಿಯ ದಸರಾ ಉದ್ಘಾಟನೆ ಮಾಡಿಸುತ್ತಿದ್ದೇವೆ.

ಸೆಪ್ಟೆಂಬರ್ 22 ರಂದು ಚಾಮುಂಡಿ ಬೆಟ್ಟದಲ್ಲಿ ಅಗ್ರ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಬಾರಿ ದಸರಾ ಮಹೋತ್ಸವ 10 ದಿನಗಳಿಗೆ ಬದಲಾಗಿ ಪಂಚಾಂಗ ಪ್ರಕಾರ 11 ದಿನ ಜರುಗಲಿದೆ, ಅಕ್ಟೋಬರ್ 2ರಂದು ವಿಜಯ ದಶಮಿ ಆಚರಣೆ ಮೂಲಕ ದಸರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ.

ಸೋನಿಯಾ ಗಾಂಧಿ ಪ್ರಸ್ತಾಪ ಇಲ್ಲ:
ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಈ ಬಾರಿಯ ದಸರಾ ಮಹೋತ್ಸವವನ್ನು ಉದ್ಘಾಟಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಕಾರ್ಯಾಲಯ ಪತ್ರಿಕಾ ಹೇಳಿಕೆ ನೀಡಿ, ಸೋನಿಯಾ ಗಾಂಧಿ ಅವರಿಂದ ದಸರಾ ಉದ್ಘಾಟನೆಗೆ ಮನವಿ ಮಾಡಲಾಗಿದೆ ಎಂಬುದು ಸರಿಯಲ್ಲ. ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿ ಸತ್ಯಕ್ಕೆ ದೂರವಾದುದು, ಆ ರೀತಿಯ ಉದ್ದೇಶವಾಗಲೀ, ಪ್ರಸ್ತಾವನೆಯಾಗಲೀ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸುತ್ತಿರುವ ಕರುನಾಡಿನ ಹಿರಿಯ ಲೇಖಕಿ ಎಸ್.ಕೆ.ಬಾನು ಮುಷ್ತಾಕ್ ಸಣ್ಣ ಕಥಾ ಸಂಕಲನ “ಹಾರ್ಟ್ ಲ್ಯಾಂಪ್” (ಎದೆಯ ಹಣತೆ) ಕೃತಿಗೆ 2025ನೇ ಸಾಲಿನ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೀಪಾ ಭಕ್ತಿ ಅವರು ಎದೆಯ ಹಣತೆ ಕನ್ನಡ ಪುಸ್ತಕವನ್ನು ಇಂಗ್ಲಿಷ್‌ ಗೆ ಅನುವಾದಿಸಿ ಅದಕ್ಕೆ ‘ಹಾರ್ಟ್ ಲ್ಯಾಂಪ್’ ಹೆಸರಿಟ್ಟಿದ್ದರು. ಇತ್ತೀಚಿಗೆ ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೂಲತಃ ಹಾಸನದವರಾದ ಬಾನು ಮುಷ್ಕಾಕ್ ಅವರು 1948, ಏಪ್ರಿಲ್ 3 ರಂದು ಮುಸ್ಲಿಂ ಸಮುದಾಯದಲ್ಲಿ ಜನಿಸಿದರು. 8 ವರ್ಷವಿದ್ದಾಗ ಶಿವಮೊಗ್ಗದ ಕನ್ನಡ ಭಾಷೆಯ ಮಿಷನರಿ ಶಾಲೆಗೆ ದಾಖಲಾದರು. ಮಾತೃ ಭಾಷೆ ಉರ್ದುವಾದರೂ ಬಾನು ಮುಷ್ಕಾಕ್ ಅವರಿಗೆ ಕನ್ನಡ ಭಾಷೆಯ ಮೇಲೆ ಹಿಡಿತವಿದೆ. ಈ ಹಿನ್ನೆಲೆ ಬಹಳಷ್ಟು ಲೇಖನಗಳನ್ನು ಬರೆದಿದ್ದು, ಹಿಂದಿ, ಉರ್ದು, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗೆ ಅನುವಾದವಾಗಿದೆ.

ಬಾನು ಮುಷ್ತಾಕ್ ಅವರು ಮೂಲಭೂತವಾದ ಹಾಗೂ ಸಾಮಾಜಿಕ ಅನ್ಯಾಯದ ವಿರುದ್ಧ 1980 ರಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಮುಸ್ಲಿಂ ಮಹಿಳೆಯರ ಮಸೀದಿಗಳ ಪ್ರವೇಶ ಹಕ್ಕಿನ ಪ್ರತಿಪಾದನೆಗಾಗಿ 2000ನೇ ಇಸವಿಯಲ್ಲಿ ಬಾನು ಮುಸ್ತಾಕ್ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಯಿತು. ಪ್ರಾಣ ಬೆದರಿಕೆಗಳು ಬಂದವು. ಆದರೆ ಬಾನು ಮುಷ್ಕಾಕ್ ಇದಕ್ಕೆಲ್ಲಾ ಹೆದರದೆ, ಮೂಲಭೂತವಾದದ ವಿರುದ್ಧ ಈ ತನಕ ಹೋರಾಟ ನಡೆಸುತ್ತಾ ಬಂದಿದ್ದಾರೆ. ಸಾಹಿತಿ, ಹೋರಾಟ ಗಾರ್ತಿಯೂ ಆಗಿರುವ ಬಾನು ಮುಷ್ಕಾಕ್ ಅವರು ಈ ಬಾರಿಯ ದಸರಾ ಉದ್ಘಾಟನೆ ಮಾಡಲಿದ್ದು, ಆ ವೇಳೆ ಅವರ ಸಂದೇಶ ಬಹಳ ನಿರೀಕ್ಷೆ ಮೂಡಿಸಿದೆ.

The post ಬೂಕರ್ ಪ್ರಶಸ್ತಿ ವಿಜೇತೆಯಿಂದ ದಸರಾ ಉದ್ಘಾಟನೆ ! ಸೋನಿಯಾ ಗಾಂಧಿ ಪ್ರಸ್ತಾಪ ಇಲ್ಲ: appeared first on Good News 24x7.

]]>
ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್‌ಗೆ ಆಹ್ವಾನ https://www.goodnews24x7.com/author-banu-mushtaq-invited-to-inaugurate-mysore-dasara/ Fri, 22 Aug 2025 12:32:37 +0000 https://www.goodnews24x7.com/?p=6469   ಈ ಬಾರಿ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನು ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದು, ಜಿಲ್ಲಾಡಳಿತದ ವತಿಯಿಂದ ಅವರನ್ನು ಗೌರವದಿಂದ ಆಹ್ವಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. . ರಕ್ಷಣಾ ಸಚಿವರಿಗೆ ಪತ್ರ ಮೈಸೂರು ದಸರಾ ಸಂದರ್ಭದಲ್ಲಿ…

The post ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್‌ಗೆ ಆಹ್ವಾನ appeared first on Good News 24x7.

]]>

 

ಈ ಬಾರಿ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನು ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದು, ಜಿಲ್ಲಾಡಳಿತದ ವತಿಯಿಂದ ಅವರನ್ನು ಗೌರವದಿಂದ ಆಹ್ವಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
.
ರಕ್ಷಣಾ ಸಚಿವರಿಗೆ ಪತ್ರ
ಮೈಸೂರು ದಸರಾ ಸಂದರ್ಭದಲ್ಲಿ ವೈಮಾನಿಕ ಪ್ರದರ್ಶನಕ್ಕೆ ಅನುಮತಿ ದೊರೆತಿದ್ದು, ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ದಸರಾ ವೀಕ್ಷಣಗೆ ಆಗಮಿಸಬೇಕೆಂದು ಪತ್ರ ಬರೆದಿದ್ದೇನೆ ಎಂದರು.

 

 

The post ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್‌ಗೆ ಆಹ್ವಾನ appeared first on Good News 24x7.

]]>
ದಸರಾ ಗಜಪಡೆ ಟನ್‌ಗಟ್ಟಲೆ ಆಹಾರ ಪೂರೈಕೆ ! ಆನೆಗಳಿಗೆ ನೀಡೋ ಆಹಾರದ ಪ್ರಮಾಣ ಕೇಳುದ್ರೆ ಶಾಕ್ ಆಗ್ತೀರಾ ! https://www.goodnews24x7.com/dasara-elephant-herd-supplies-tons-of-food-you-will-be-shocked-to-hear-the-amount-of-food-given-to-the-elephants/ Thu, 14 Aug 2025 07:15:53 +0000 https://www.goodnews24x7.com/?p=6102 ಮೈಸೂರು: ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಗಜಪಡೆಯ ಆರೋಗ್ಯ ಮತ್ತು ಬಲವನ್ನು ಕಾಪಾಡುವುದು ಅರಣ್ಯ ಇಲಾಖೆಗೆ ದೊಡ್ಡ ಹೊಣೆಗಾರಿಕೆ ಆಗಿದ್ದು, ಆನೆಗಳಿಗೆ ಪೌಷ್ಟಿಕ ಆಹಾರ, ನಿರಂತರ ತಪಾಸಣೆ ಮತ್ತು ಸಮರ್ಪಕ ಕಾಳಜಿ ನೀಡಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಅರಣ್ಯ…

The post ದಸರಾ ಗಜಪಡೆ ಟನ್‌ಗಟ್ಟಲೆ ಆಹಾರ ಪೂರೈಕೆ ! ಆನೆಗಳಿಗೆ ನೀಡೋ ಆಹಾರದ ಪ್ರಮಾಣ ಕೇಳುದ್ರೆ ಶಾಕ್ ಆಗ್ತೀರಾ ! appeared first on Good News 24x7.

]]>

ಮೈಸೂರು: ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಗಜಪಡೆಯ ಆರೋಗ್ಯ ಮತ್ತು ಬಲವನ್ನು ಕಾಪಾಡುವುದು ಅರಣ್ಯ ಇಲಾಖೆಗೆ ದೊಡ್ಡ ಹೊಣೆಗಾರಿಕೆ ಆಗಿದ್ದು, ಆನೆಗಳಿಗೆ ಪೌಷ್ಟಿಕ ಆಹಾರ, ನಿರಂತರ ತಪಾಸಣೆ ಮತ್ತು ಸಮರ್ಪಕ ಕಾಳಜಿ ನೀಡಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ.

ಅರಣ್ಯ ಇಲಾಖೆಯ ವಿವಿಧ ಆನೆ ಶಿಬಿರಗಳಿಂದ ಮೈಸೂರಿಗೆ ಬಂದಿರುವ 14 ಆನೆಗಳಲ್ಲಿ 10 ಗಂಡು ಮತ್ತು 4 ಹೆಣ್ಣು ಆನೆಗಳ ತೂಕ ಹಾಗೂ ಆರೋಗ್ಯವನ್ನು ಈಗಾಗಲೇ ಪರಿಶೀಲಿಸಲಾಗಿದೆ. ಮುಂದಿನ 56 ದಿನಗಳವರೆಗೆ ಪೌಷ್ಟಿಕ ಆಹಾರ, ತರಕಾರಿ, ಒಣಹುಲ್ಲು ಮತ್ತು ಹಸಿರುಹುಲ್ಲುಗಳನ್ನು ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದೆ.

ಅನೆಗಳಿಗೆ ನೀಡಲಾಗುವ ಆಹಾರದ ವಿವರ:

  • ಹಸಿರು ಹುಲ್ಲು: 170 ಟನ್
  • ಆಲದ ಸೊಪ್ಪು: 340 ಟನ್
  • ಭತ್ತದ ಹುಲ್ಲು: 52 ಟನ್
  • ಕಬ್ಬು: 25 ಟನ್
  • ಭತ್ತ: 225 ಕ್ವಿಂಟಾಲ್
  • ಅಕ್ಕಿ: 75 ಕ್ವಿಂಟಾಲ್
  • ಬೆಲ್ಲ: 525 ಕೆಜಿ
  • ಕುಸುಬಲಕ್ಕಿ, ಗೋಧಿ, ಹೆಸರುಕಾಳು, ಉದ್ದಿನಕಾಳು: ತಲಾ ~28-29 ಕ್ವಿಂಟಾಲ್
  • ಕಡಲೆಕಾಯಿ ಹಿಂಡಿ: 35 ಕ್ವಿಂಟಾಲ್
  • ಅವಲಕ್ಕಿ: 3 ಕ್ವಿಂಟಾಲ್
  • ಈರುಳ್ಳಿ: 1,000 ಕೆಜಿ
  • ಬೆಣ್ಣೆ: 175 ಕೆಜಿ
  • ಉಪ್ಪು: 375 ಕೆಜಿ
  • ತೆಂಗಿನಕಾಯಿ: 3,250

ದಿನಪತ್ರಿ ಆಹಾರ – ತರಕಾರಿ ಸೇರಿ ವಿಶೇಷ ಆಹಾರ:

  • ದಿನಕ್ಕೆ 100 ಕೆಜಿ ತರಕಾರಿ ನೀಡಲಾಗುತ್ತದೆ.
  • ಹಾಪ್ಸ್‌ಕಾಮ್ಸ್‌ ಮೂಲಕ ತರಕಾರಿ ಖರೀದಿಸಲಾಗುತ್ತಿದ್ದು, ಗೆಡ್ಡೆಕೋಸ್‌, ಬೀಟ್ರೂಟ್‌, ಕ್ಯಾರೆಟ್‌, ಸೌತೆಕಾಯಿ, ಸೀಮೆಬದನೆಕಾಯಿ ಇತ್ಯಾದಿ ಬೆರೆಸಿ ವಿಶೇಷ ಆಹಾರ ತಯಾರಿಸಲಾಗುತ್ತದೆ.

ಆನೆಗಳಿಗೆ ತಂಪುಗಾಗಿ ಎಣ್ಣೆ ಬಳಕೆ:

ಪ್ರತಿ ದಿನ ಅರಮನೆಯಿಂದ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನಕ್ಕೆ ತಾಲೀಮಿಗೆ ಹೋಗುವ ಆನೆಗಳಿಗೆ ತಲೆ, ಕಾಲು ಹಾಗೂ ಹಣೆ ಭಾಗಕ್ಕೆ ತಂಪು ನೀಡಲು ಎಣ್ಣೆ ಹಚ್ಚಲಾಗುತ್ತದೆ:

  • ಹರಳೆ ಎಣ್ಣೆ: 200 ಲೀಟರ್
  • ಹೊಂಗೆ ಎಣ್ಣೆ: 200 ಲೀಟರ್
  • ಬೇವಿನ ಎಣ್ಣೆ: 200 ಲೀಟರ್

ಹಗ್ಗಗಳಿಂದ ಗಾಯವಾಗದಂತೆ ತಡೆಯಲು ಮತ್ತು ತಂಪು ನೀಡಲು ಈ ಎಣ್ಣೆಗಳನ್ನು ಬಳಸಲಾಗುತ್ತದೆ.

ಗುಣಮಟ್ಟದ ಆಹಾರ, ಆರೋಗ್ಯದ ಮೇಲ್ವಿಚಾರಣೆ:

ಡಾ. ಐ.ಬಿ. ಪ್ರಭುಗೌಡ (DCF, ಮೈಸೂರು ವನ್ಯಜೀವಿ ವಿಭಾಗ) ಮಾಹಿತಿ ನೀಡಿದಂತೆ:

  • ಎಲ್ಲಾ ಆಹಾರ ಪದಾರ್ಥಗಳು ಪಶುವೈದ್ಯರ ಸಲಹೆಯಂತೆ ನಿಗದಿತ ಪ್ರಮಾಣದಲ್ಲಿ ಖರೀದಿಸಲಾಗುತ್ತಿವೆ.
  • ಟೆಂಡರ್‌ ಮೂಲಕ ನಿಖರ ಗುಣಮಟ್ಟದ ಪೂರೈಕೆದಾರರನ್ನು ಆಯ್ಕೆ ಮಾಡಲಾಗಿದೆ.
  • ಪ್ರತಿ ಆನೆಯ ತೂಕ ಮತ್ತು ಅಗತ್ಯ ಆಧಾರದ ಮೇಲೆ ಆಹಾರದ ಪ್ರಮಾಣ ನಿಗದಿಗೊಳಿಸಲಾಗಿದೆ.
  • ಹಂತ ಹಂತವಾಗಿ ವಿಶೇಷ ಆಹಾರ ನೀಡಲಾಗುತ್ತಿದ್ದು, ಆನೆಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯ ಮಾಡಲಾಗುತ್ತಿದೆ.
  • ಸದ್ಯಕ್ಕೆ ಎಲ್ಲಾ ಆನೆಗಳು ಆರೋಗ್ಯವಾಗಿದ್ದು, ತಾಲೀಮೆಯಲ್ಲಿ ಸಜೀವವಾಗಿ ಭಾಗವಹಿಸುತ್ತಿವೆ ಎಂದರು.

The post ದಸರಾ ಗಜಪಡೆ ಟನ್‌ಗಟ್ಟಲೆ ಆಹಾರ ಪೂರೈಕೆ ! ಆನೆಗಳಿಗೆ ನೀಡೋ ಆಹಾರದ ಪ್ರಮಾಣ ಕೇಳುದ್ರೆ ಶಾಕ್ ಆಗ್ತೀರಾ ! appeared first on Good News 24x7.

]]>
ತೂಕದಲ್ಲಿ ಕ್ಯಾಪ್ಟನ್ ಮೀರಿಸಿದ ಭೀಮ. ಕಳೆದ ಬಾರಿ ಅತಿಹೆಚ್ಚು ತೂಕ ಹೊಂದಿದ್ದ ಅಭಿಮನ್ಯು. https://www.goodnews24x7.com/bhima-surpassed-the-captain-in-weight-abhimanyu-weighed-the-most-last-time/ Mon, 11 Aug 2025 08:07:00 +0000 https://www.goodnews24x7.com/?p=5796 2025ರ ಮೈಸೂರು ದಸರಾ 11 ದಿನಗಳ ಕಾಲ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಗಜಪಯಣ, ಜಂಬೂ ಸವಾರಿ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಹಿನ್ನಲೆ : ಆನೆಗಳಿಗೆ ಮೊದಲ ಹಂತದ ಆನೆಗಳ…

The post ತೂಕದಲ್ಲಿ ಕ್ಯಾಪ್ಟನ್ ಮೀರಿಸಿದ ಭೀಮ. ಕಳೆದ ಬಾರಿ ಅತಿಹೆಚ್ಚು ತೂಕ ಹೊಂದಿದ್ದ ಅಭಿಮನ್ಯು. appeared first on Good News 24x7.

]]>

2025ರ ಮೈಸೂರು ದಸರಾ 11 ದಿನಗಳ ಕಾಲ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಗಜಪಯಣ, ಜಂಬೂ ಸವಾರಿ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.

ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಹಿನ್ನಲೆ :
ಆನೆಗಳಿಗೆ ಮೊದಲ ಹಂತದ ಆನೆಗಳ ತೂಕ ಪರೀಕ್ಷೆ:
ನಾಡಹಬ್ಬ ದಸರಾದಲ್ಲಿ ಭಾಗವಹಿಸಲು ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆಗೆ ಇಂದು ನಗರದ ಧನ್ವಂತರಿ ರಸ್ತೆಯಲ್ಲಿರುವ ತೂಕ ಕೇಂದ್ರದಲ್ಲಿ ತೂಕ ಪರೀಕ್ಷೆ ಮಾಡಲಾಯಿತು. ಅದರಲ್ಲಿ 25 ವರ್ಷದ ಭೀಮ ಅತೀ ಹೆಚ್ಚು ತೂಕ ಇರುವ ಆನೆಯಾಗಿದೆ. ಆನಂತರ ಜಂಬೂ ಸವಾರಿ ಕ್ಯಾಪ್ಟನ್ ಅಭಿಮನ್ಯು 2ನೇ ಸ್ಥಾನದಲ್ಲಿದೆ.ಇದು ಕಾಡಿನಿಂದ ನಾಡಿಗೆ ಬಂದ ನಂತರ ನಡೆದ ಮೊದಲ ತೂಕ ಪರೀಕ್ಷೆಯಾಗಿದೆ.

 

 

 

ದಸರಾ ಆನೆಗಳ ತೂಕದ ವಿವರ :

  • ಅಭಿಮನ್ಯು – 5,360 kg
  • ಭೀಮ – 5,460 kg
  • ಪ್ರಶಾಂತ – 5,110 kg
  • ಧನಂಜಯ್ – 5,310 kg
  • ಮಹೇಂದ್ರ – 5,120 kg
  • ಏಕಲವ್ಯ – 5,305 kg
  • ಕಂಜನ್ – 4,880 kg
  • ಲಕ್ಷಿ – 3,735 kg
  • ಕಾವೇರಿ -3,010 kg

The post ತೂಕದಲ್ಲಿ ಕ್ಯಾಪ್ಟನ್ ಮೀರಿಸಿದ ಭೀಮ. ಕಳೆದ ಬಾರಿ ಅತಿಹೆಚ್ಚು ತೂಕ ಹೊಂದಿದ್ದ ಅಭಿಮನ್ಯು. appeared first on Good News 24x7.

]]>
ದಸರಾ ಗಜಪಡೆ, ಮಾವುತರಿಗೆ 2.04 ಕೋಟಿ ರೂ. ಮೊತ್ತದ ವಿಮೆ! ಅರಣ್ಯ ಇಲಾಖೆ ಸೌಲಭ್ಯ. https://www.goodnews24x7.com/dasara-gajapade-mahoutari-get-rs-2-04-crore-insurance-forest-department-provides-facility/ Wed, 06 Aug 2025 05:45:47 +0000 https://www.goodnews24x7.com/?p=5400 ಮೈಸೂರು ದಸರಾ 2025ರ ಗಜಪಡೆ, ಮಾವುತರು ಮತ್ತು ಸಿಬ್ಬಂದಿಗೆ ಒಟ್ಟು 2.04 ಕೋಟಿ ರೂ ವಿಮಾ ಸೌಲಭ್ಯ ಒದಗಿಸಲಾಗಿದೆ. ಆನೆಗಳಿಗೆ 68 ಲಕ್ಷ ರೂ, ಸಿಬ್ಬಂದಿಗೆ 86 ಲಕ್ಷ ರೂ ಮತ್ತು ಸಾರ್ವಜನಿಕ ಹಾನಿಗೆ 50 ಲಕ್ಷ ರೂ ವಿಮೆ ಒಳಗೊಂಡಿದೆ.…

The post ದಸರಾ ಗಜಪಡೆ, ಮಾವುತರಿಗೆ 2.04 ಕೋಟಿ ರೂ. ಮೊತ್ತದ ವಿಮೆ! ಅರಣ್ಯ ಇಲಾಖೆ ಸೌಲಭ್ಯ. appeared first on Good News 24x7.

]]>

ಮೈಸೂರು ದಸರಾ 2025ರ ಗಜಪಡೆ, ಮಾವುತರು ಮತ್ತು ಸಿಬ್ಬಂದಿಗೆ ಒಟ್ಟು 2.04 ಕೋಟಿ ರೂ ವಿಮಾ ಸೌಲಭ್ಯ ಒದಗಿಸಲಾಗಿದೆ. ಆನೆಗಳಿಗೆ 68 ಲಕ್ಷ ರೂ, ಸಿಬ್ಬಂದಿಗೆ 86 ಲಕ್ಷ ರೂ ಮತ್ತು ಸಾರ್ವಜನಿಕ ಹಾನಿಗೆ 50 ಲಕ್ಷ ರೂ ವಿಮೆ ಒಳಗೊಂಡಿದೆ. ಈ ವಿಮಾ ಪಾಲಿಸಿಯು ಆಗಸ್ಟ್ 4 ರಿಂದ ಅಕ್ಟೋಬರ್ 5 ರವರೆಗೆ ಜಾರಿಯಿರಲಿದೆ. ಮೈಸೂರು ದಸರಾ ಗಜಪಡೆ, ಮಾವುತರಿಗೆ 2.04 ಕೋಟಿ ರೂ. ಮೊತ್ತದ ವಿಮೆ ಸೌಲಭ್ಯ ನೀಡಿದ ಅರಣ್ಯ ಇಲಾಖೆ

ಮೈಸೂರು, ಆಗಸ್ಟ್​ 06: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಜಪಡೆ ಕಲರವ ಜೋರಾಗಿದೆ. ನಾಡಹಬ್ಬ ದಸರಾ (Mysuru Dasara) ಮಹೋತ್ಸವಕ್ಕೆ ಮೈಸೂರಿಗೆ ಬಂದ ಕ್ಯಾಪ್ಟನ್ ಅಭಿಮನ್ಯು ಆ್ಯಂಡ್​ ತಂಡ ರಿಲ್ಯಾಕ್ಸ್ ಮೂಡ್‌ನಲ್ಲಿವೆ. ಗಜಪಡೆ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿವೆ‌. ಈ ಗಜಪಡೆ ಮೈಸೂರಿನಲ್ಲಿರುವಾಗ ಏನಾದರೂ ಹಾನಿ ಸಂಭವಿಸಿದರೆ ಅದರ ನಷ್ಟ ಪರಿಹರಿಸಲು ಅರಣ್ಯ ಇಲಾಖೆಯಿಂದ ಮಾವುತರು, ಕಾವಾಡಿಗಳು ಮತ್ತು ಉಸ್ತುವಾರಿ ಸಿಬ್ಬಂದಿಗೆ 2.04 ಕೋಟಿ ರೂ. ಮೊತ್ತದ ವಿಮೆ (Insurance) ಸೌಲಭ್ಯ ಒದಗಿಸಲಾಗಿದೆ.

2.04 ಕೋಟಿ ರೂ. ಮೊತ್ತದ ವಿಮೆ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ದಿನಗಣನೆ ಶುರುವಾಗಿದೆ. ಇತ್ತ ಗಜಪಡೆ ಕೂಡ ಮೈಸೂರಿಗೆ ಬಂದಿದೆ. ಈ ಗಜಪಡೆ ಮೈಸೂರಲ್ಲಿರುವಾಗ ಏನಾದರೂ ಹಾನಿ ಸಂಭವಿಸಿದರೆ ಅದರ ನಷ್ಟ ಪರಿಹರಿಸಲು ಅರಣ್ಯ ಇಲಾಖೆಯಿಂದ ವಿಮಾ ಸೌಲಭ್ಯದ ಮೊರೆ ಹೋಗಲಾಗಿದೆ. ಆಗಸ್ಟ್​ 4ರಿಂದ ಅಕ್ಟೋಬರ್​​ 5ರವರೆಗೆ ಈ ಸುರಕ್ಷತೆ ಚಾಲ್ತಿಯಲ್ಲಿರಲಿದೆ. ಟೆಂಡರ್‌ ಮೂಲಕ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್​ ಕಂಪನಿ ಲಿಮಿಟೆಡ್ ವಿಮೆ ಸೌಲಭ್ಯ ಮಾಡಿಸಲಾಗಿದೆ.

ಬೆಳಗಿನ ಜಾವದಿಂದಲೇ ದೇವಿದರ್ಶನಕ್ಕಾಗಿ ಸಾಲುಗಟ್ಟಿರುವ ಭಕ್ತರು
ದಸರಾ ಗಜಪಡೆಯ 14 ಆನೆಗಳ ಪೈಕಿ ಈ ಬಾರಿ 10 ಗಂಡಾನೆಗಳಿವೆ. ಈ ಗಂಡಾನೆಗಳಿಗೆ ತಲಾ 5 ಲಕ್ಷ ರೂ, 4 ಹೆಣ್ಣಾನೆಗಳಿಗೆ ತಲಾ 4.5 ಲಕ್ಷ ರೂ. 14 ಆನೆಗಳಿಗೆ ಒಟ್ಟು 68 ಲಕ್ಷ ರೂ. ಮೊತ್ತದ ವಿಮೆ ಮಾಡಿಸಲಾಗಿದೆ. 14 ಮಾವುತರು, 14 ಕಾವಾಡಿಗಳು, ಡಿಸಿಎಫ್, ಇಬ್ಬರು ಆರ್‌ಎಫ್‌ಓ, ಪಶುವೈದ್ಯಾಧಿಕಾರಿ, ಓರ್ವ ಸಹಾಯಕರು, 10 ಮಂದಿ ವಿಶೇಷ ಮಾವುತರು ಸೇರಿ ಒಟ್ಟು 43 ಮಂದಿಗೆ ತಲಾ 2 ಲಕ್ಷ ರೂ.ನಂತೆ 86 ಲಕ್ಷ ರೂ. ಮೊತ್ತದ ವಿಮೆ ಸೌಲಭ್ಯ ನೀಡಲಾಗಿದೆ.

ಮೈಸೂರಿನಲ್ಲಿ ದಸರಾ ಆನೆಗಳಿಂದ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶ ಅಥವಾ ಸಾರ್ವಜನಿಕರಿಗೆ ತೊಂದರೆಯಾದರೆ ನಷ್ಟ ಭರಿಸಲು 50 ಲಕ್ಷ ರೂ. ಒಟ್ಟು 2.04 ಕೋಟಿ ರೂ. ಮೊತ್ತದ ವಿಮೆ ಮಾಡಿಸಿದ್ದು, ಇದಕ್ಕೆ ಅರಣ್ಯ ಇಲಾಖೆಯಿಂದ 67 ಸಾವಿರ ರೂ ಪ್ರಿಮಿಯಂ ಮೊತ್ತ ಪಾವತಿ ಮಾಡಲಾಗುವುದು.

ಅಭಿಮನ್ಯು ನೇತೃತ್ವದ 9 ಆನೆಗಳ ಮೊದಲ ತಂಡ ಮೈಸೂರಿಗೆ ಬರ್ತಿದ್ದಂತೆಯೇ, ರಕ್ತ ಪರೀಕ್ಷೆ ಮಾಡಲಾಗಿದ್ದು, ಎಲ್ಲಾ ಆನೆಗಳು ಆರೋಗ್ಯವಾಗಿವೆ. ಆಗಸ್ಟ್​ 10ರಂದು ದಸರಾ ಗಜಪಡೆ ಮೈಸೂರು ಅರಮನೆಗೆ ಎಂಟ್ರಿ ಕೊಡಲಿವೆ. ಇದೇ ಮೂದಲ ಬಾರಿಗೆ ಸಂಜೆ ವೇಳೆ ಗಜಪಡೆಯನ್ನ ಅರಮನೆಗೆ ಸ್ವಾಗತಿಸಲಾಗುತ್ತಿದೆ.

The post ದಸರಾ ಗಜಪಡೆ, ಮಾವುತರಿಗೆ 2.04 ಕೋಟಿ ರೂ. ಮೊತ್ತದ ವಿಮೆ! ಅರಣ್ಯ ಇಲಾಖೆ ಸೌಲಭ್ಯ. appeared first on Good News 24x7.

]]>