Department Archives - Good News 24x7 https://www.goodnews24x7.com/tag/department/ Kannada Thu, 04 Sep 2025 06:14:48 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Department Archives - Good News 24x7 https://www.goodnews24x7.com/tag/department/ 32 32 ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳೆಷ್ಟು ? https://www.goodnews24x7.com/how-many-government-posts-are-vacant-in-the-state-2/ Thu, 04 Sep 2025 06:14:48 +0000 https://www.goodnews24x7.com/?p=7334 ಆರು ಜನ ಸರ್ಕಾರಿ ನೌಕರರ ಪೈಕಿ ಒಬ್ಬರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಅನ್ನೋ ಶಾಕಿಂಗ್​​ ಮಾಹಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಂಕಿಅಂಶಗಳು ತಿಳಿಸಿವೆ. ಇಂದು ಆರು ಜನ ಸರ್ಕಾರಿ ನೌಕರರ ಪೈಕಿ ಒಬ್ಬರು ಗುತ್ತಿಗೆ ಆಧಾರದ…

The post ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳೆಷ್ಟು ? appeared first on Good News 24x7.

]]>

ಆರು ಜನ ಸರ್ಕಾರಿ ನೌಕರರ ಪೈಕಿ ಒಬ್ಬರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಅನ್ನೋ ಶಾಕಿಂಗ್​​ ಮಾಹಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಂಕಿಅಂಶಗಳು ತಿಳಿಸಿವೆ.

ಇಂದು ಆರು ಜನ ಸರ್ಕಾರಿ ನೌಕರರ ಪೈಕಿ ಒಬ್ಬರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಅನ್ನೋ ಶಾಕಿಂಗ್​​ ಮಾಹಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಂಕಿಅಂಶಗಳು ತಿಳಿಸಿವೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರ ಖಾಲಿ ಇರೋ 2.84 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲೇಬೇಕಾದ ಒತ್ತಡದಲ್ಲಿದೆ.

ಸದ್ಯ ಸರ್ಕಾರ 5.88 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದು, ಅವರಲ್ಲಿ 96,844 ಜನರು ಹೊರಗುತ್ತಿಗೆ ಪಡೆದಿದ್ದಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೇಳಿದೆ. ಅದ್ರಲ್ಲೂ ವೈದ್ಯಕೀಯ ಶಿಕ್ಷಣ ಇಲಾಖೆಯೇ 15,824 ಹೊರಗುತ್ತಿಗೆ ಪಡೆದ ಉದ್ಯೋಗಿಗಳನ್ನು ಹೊಂದಿದೆ. ಶಿಕ್ಷಣ ಇಲಾಖೆಯಲ್ಲಿ ಹೆಚ್ಚು ಮಂದಿ ಹೊರಗುತ್ತಿಗೆ ನೌಕರರು ಇದ್ದಾರೆ.

9 ತಿಂಗಳು ಸರ್ಕಾರ ನೇಮಕವೇ ಮಾಡಿಲ್ಲ

ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಆಗೋವರೆಗೂ ಯಾವುದೇ ನೇಮಕಾತಿ ಬೇಡ ಎಂದು ಸರ್ಕಾರ ಈ ಹಿಂದೆ ಆದೇಶಿಸಿತ್ತು. ಹಾಗಾಗಿ ನವೆಂಬರ್ 2024 ರಿಂದ ಆಗಸ್ಟ್ 2025ರ ನಡುವೆ 9 ತಿಂಗಳ ಕಾಲ ಸರ್ಕಾರ ಯಾವುದೇ ಹೊಸ ನೇಮಕಾತಿ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಈಗ ಒಳಮೀಸಲಾತಿ ಜಾರಿ ಮಾಡಿದ್ದು, ಸರ್ಕಾರ ನೇಮಕಾತಿಗೆ ಮುಂದಾಗಿದೆ. ಇದು ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಗುಡ್​ನ್ಯೂಸ್​ ಆಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯು 15,376 ಮಂದಿ ಮತ್ತು ಆರೋಗ್ಯ ಇಲಾಖೆ 11,424 ಹೊರಗುತ್ತಿಗೆ ನೌಕರರನ್ನು ಹೊಂದಿದೆ. ಹೊರಗುತ್ತಿಗೆ ನೌಕರರ ವೇತನಕ್ಕಾಗಿ ಸರ್ಕಾರ ಈ ವರ್ಷ 2,273 ಕೋಟಿ ಮೀಸಲಿಟ್ಟಿದೆ. ಒಟ್ಟಾರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದ ವೇತನ ಬಿಲ್ 85,860 ಕೋಟಿ ರೂ. ತಲುಪಲಿದೆ. ಇದು ಕಳೆದ ವರ್ಷಕ್ಕಿಂತ ಶೇ. 19ರಷ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಹೇಗಾದ್ರೂ ಈ ವರ್ಷದಲ್ಲೇ 96,844 ಹೊರಗುತ್ತಿಗೆ ಉದ್ಯೋಗಿಗಳ ಜಾಗದಲ್ಲಿ ಪರ್ಮನೆಂಟ್​​ ಎಂಪ್ಲಾಯ್​ಗಳ ನೇಮಕಾತಿ ಮಾಡಲು ಸರ್ಕಾರ ನಿರ್ಧರಿಸಿದೆ.

2023ರ ಚುನಾವಣೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಅಧಿಕಾರಕ್ಕೆ ಬಂದ 1 ವರ್ಷದೊಳಗೆ ಎಲ್ಲಾ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು. 2023 ಮತ್ತು 2024ರಲ್ಲಿ ಕೆಪಿಎಸ್‌ಸಿ ಮೂಲಕ 1,961 ಖಾಲಿ ಹುದ್ದೆ ಭರ್ತಿ ಮಾಡಿತ್ತು. ಹಾಗೆಯೇ 709 ಸಬ್-ಇನ್ಸ್‌ಪೆಕ್ಟರ್‌ಗಳು ಮತ್ತು 4,880 ಕಾನ್‌ಸ್ಟೆಬಲ್‌ಗಳನ್ನು ನೇಮಕ ಮಾಡಿಕೊಂಡಿತ್ತು. ಅದಾದ ನಂತರ ಇದುವರೆಗೂ ಯಾವುದೇ ನೇಮಕಾತಿ ಆಗಿಲ್ಲ.

ಈಗ ಸಿದ್ದರಾಮಯ್ಯ ಸರ್ಕಾರ ನೇಮಕಾತಿ ಸ್ಥಗಿತ ಆದೇಶವನ್ನು ತೆಗೆದುಹಾಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರ ನೇಮಕಾತಿ ಪ್ರಾರಂಭಿಸಲಿದೆ. ಈ ವರ್ಷ ಕನಿಷ್ಠ 50% ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

The post ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳೆಷ್ಟು ? appeared first on Good News 24x7.

]]>
ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ: ನಾಳೆಯಿಂದ ಜಾರಿ. https://www.goodnews24x7.com/registration-and-stamp-fee-revision-effective-from-tomorrow/ Sat, 30 Aug 2025 12:46:57 +0000 https://www.goodnews24x7.com/?p=7070 ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ, ಮತ್ತು ಈ ಪರಿಷ್ಕೃತ ಶುಲ್ಕಗಳು ನಾಳೆಯಿಂದ ಜಾರಿಗೆ ಬರಲಿದೆ. ಸ್ಥಿರಾಸ್ತಿ ಮೇಲಿನ ವ್ಯವಹಾರ ದಸ್ತಾವೇಜುಗಳಿಗೆ ವಿಧಿಸುವ ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳು ನಾಳೆಯಿಂದ ಹೆಚ್ಚಲಿವೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ…

The post ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ: ನಾಳೆಯಿಂದ ಜಾರಿ. appeared first on Good News 24x7.

]]>

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ, ಮತ್ತು ಈ ಪರಿಷ್ಕೃತ ಶುಲ್ಕಗಳು ನಾಳೆಯಿಂದ ಜಾರಿಗೆ ಬರಲಿದೆ. ಸ್ಥಿರಾಸ್ತಿ ಮೇಲಿನ ವ್ಯವಹಾರ ದಸ್ತಾವೇಜುಗಳಿಗೆ ವಿಧಿಸುವ ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳು ನಾಳೆಯಿಂದ ಹೆಚ್ಚಲಿವೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಮುಲೈ ಮುಗಿಲನ್, ಕರ್ನಾಟಕ ರಾಜ್ಯ ಸರ್ಕಾರವು ಆಗಸ್ಟ್ 31ರಿಂದ ಜಾರಿಗೆ ತರಲಿರುವ ಈ ಪರಿಷ್ಕೃತ ಶುಲ್ಕಗಳು ಇತ್ತೀಚೆಗೆ ಅನೇಕರಾದ ನೆರೆಹೊರೆಯ ರಾಜ್ಯಗಳ ದರಗಳಿಗೆ ಹೋಲಿಕೆ ಮಾಡಿದಾಗ ಕಡಿಮೆ ಇತ್ತು. ಇವುನ್ನು ಇತರ ರಾಜ್ಯಗಳ ದರಗಳೊಂದಿಗೆ ಸಮನ್ವಯ ಪಡಿಸಿ ಪರಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಿಂದೆ, ಕರ್ನಾಟಕ ರಾಜ್ಯವು ಮುದ್ರಾಂಕ, ನೋಂದಣಿ ಮತ್ತು ಇತರೆ ಸೆಸ್ ಸೇರಿ 6.6% ಶುಲ್ಕವನ್ನು ವಿಧಿಸುತ್ತಿತ್ತು. ಆದರೆ, ಇವು ಯಾವುದೇ ಸ್ಥಿರಾಸ್ತಿ ದಸ್ತಾವೇಜುಗಳ ಬಗ್ಗೆಯೂ ನಿಜವಾಗಿಯೂ ಕಡಿಮೆ ಇದ್ದು, ತಮಿಳುನಾಡು (9%), ಕೇರಳ (10%), ಆಂಧ್ರಪ್ರದೇಶ (7.5%) ಮತ್ತು ತೆಲಂಗಾಣ (7.5%) ರಾಜ್ಯಗಳಲ್ಲಿ ಉದ್ದೇಶಿತ ಶುಲ್ಕಗಳು ಹೆಚ್ಚು ಇದ್ದವು.

ಈ ಪರಿಷ್ಕರಣೆ, ರಾಜ್ಯದಲ್ಲಿ ನಾಗರಿಕರಿಗೆ ಉತ್ತಮ ಹಾಗೂ ಪರಿಣಾಮಕಾರಿ ಸೇವೆಗಳನ್ನು ನೀಡಲು ಮತ್ತು ಇತರ ರಾಜ್ಯಗಳೊಂದಿಗೆ ಸಮನ್ವಯದಲ್ಲಿರಲು ಅಧಿಸೂಚಿಸಲಾಗುತ್ತಿದೆ. ಇದರಂತೆ, 31-08-2025 ರಿಂದ, ನೋಂದಣಿ ಶುಲ್ಕವನ್ನು ಶೇಕಡಾ 1 ರಿಂದ 2 ರಷ್ಟು ಪರಿಷ್ಕರಿಸಲಾಗಿದೆ.

The post ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ: ನಾಳೆಯಿಂದ ಜಾರಿ. appeared first on Good News 24x7.

]]>
ಇಂದು ಮಧ್ಯಾಹ್ನ ಸಲ್ಲುವ ಶುಭ ಲಗ್ನದಲ್ಲಿ ಪೂಜೆ ಸಲ್ಲಿಸಿ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ. https://www.goodnews24x7.com/gajapayana-to-be-formally-inaugurated-by-offering-puja-at-the-auspicious-ascendant-this-afternoon/ Mon, 04 Aug 2025 05:30:15 +0000 https://www.goodnews24x7.com/?p=5291 ಮೈಸೂರು : – ದಸರಾ ಮಹೋತ್ಸವ ಪ್ರಮುಖ ಆಕರ್ಷಣೆ ಆಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ತಂಡದಲ್ಲಿ 9 ಆನೆಗಳಿಗೆ ಇಂದು ಮಧ್ಯಾಹ್ನ 12.34ರಿಂದ 12.59 ರವರೆಗೆ ಸಲ್ಲುವ ಶುಭ. ತುಲಾ (ಅಭಿಜಿನ್) ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ…

The post ಇಂದು ಮಧ್ಯಾಹ್ನ ಸಲ್ಲುವ ಶುಭ ಲಗ್ನದಲ್ಲಿ ಪೂಜೆ ಸಲ್ಲಿಸಿ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ. appeared first on Good News 24x7.

]]>

ಮೈಸೂರು : – ದಸರಾ ಮಹೋತ್ಸವ ಪ್ರಮುಖ ಆಕರ್ಷಣೆ ಆಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ತಂಡದಲ್ಲಿ 9 ಆನೆಗಳಿಗೆ ಇಂದು ಮಧ್ಯಾಹ್ನ 12.34ರಿಂದ 12.59 ರವರೆಗೆ ಸಲ್ಲುವ ಶುಭ. ತುಲಾ (ಅಭಿಜಿನ್) ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ.
ಪ್ರಸಕ್ತ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಈ ಬಾರಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ 14 ಆನೆಗಳನ್ನು ಆಯ್ಕೆ ಮಾಡಲು ಅರಣ್ಯ ಇಲಾಖೆ ನಿರ್ಧರಿ, ಸಿದ್ದು, ಈಗಾಗಲೇ ಮೊದಲ ಮತ್ತು ಎರ ಡನೇ ತಂಡದ ಆನೆಗಳ ಪಟ್ಟಿ ಸಿದ್ಧಪಡಿಸಿದೆ. ಜಂಬೂಸವಾರಿಗೂ 55 ದಿನ ಮುನ್ನವೇ ಮೊದಲ ತಂಡದ ಆನೆಗಳಿಗೆ ತಾಲೀಮು ಆರಂಭಿಸಿ, ವಿಶೇಷ ಆರೈಕೆ ಮಾಡಬೇಕಾದ ಹಿನ್ನೆಲೆಯಲ್ಲಿ ಅಂಬಾರಿ ಆನೆ, ಪರ್ಯಾಯ’ ಅಂಬಾರಿ ಆನೆ ಹಾಗೂ ಕುಮ್ಮಿ ಆನೆ ಜವಾಬ್ದಾರಿ ನಿಭಾಯಿಸುವ ಆನೆಗಳನ್ನು ಮೊದಲ ತಂಡದಲ್ಲಿ ಕರೆತರುವ ವಾಡಿಕೆ ಯಿದ್ದು, ಅದರಂತೆ ಇಂದು ಮಧ್ಯಾಹ್ನ ವಿವಿಧ ಕ್ಯಾಂಪ್ಗಳ 9 ಆನೆಗಳು ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.

ಗಜಪಯಣ: ಹುಣಸೂರು ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಳ್ಳಿ ಗೇಟ್ ಬಳಿ ನಾಳೆ ಮಧ್ಯಾಹ್ನ 9 ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸ ಲಾಗುತ್ತದೆ. ಈಗಾಗಲೇ ವೀರನಹೊಸಳ್ಳಿ ಗೇಟ್ನಲ್ಲಿ ಗಜಪಯಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮತ್ತಿಗೋಡು, ಬಳ್ಳೆ, ದುಬಾರೆ ಕ್ಯಾಂಪ್ಗಳಿಂದ ಮೊದಲ ತಂಡದ 9 ಆನೆಗಳು ಭಾನುವಾರ ಸಂಜೆ ವೇಳೆಗೆ ವೀರನ ಹೊಸಳ್ಳಿ ಗೇಟ್ ಬಳಿ ಸುರಕ್ಷಿತವಾಗಿ ಬಂದಿವೆ.

https://youtu.be/PcQMR0MEW7c?si=5hHOn5m1LJ-lrFhiಟ್ರೇಡಿಂಗ್ ಹೆಸರಲ್ಲಿ ರಾಜಕುಮಾರನನ್ನು ಬಲೆಗೆ ಕೆಡವಿದ ಸುಂದರಿ… ಸುಂದರಿ‌ ನಂಬಿ ಹಣ ಕೊಟ್ಟ ಉದ್ಯಮಿಗಳಿಗೆ ಪಂಗನಾಮ

ಮಧ್ಯಾಹ್ನ 12 ಗಂಟೆಗೆ ಅರ್ಚಕ ಎಸ್.ವಿ. ಪ್ರಹ್ಲಾದರಾವ್ ಅವರು ದ್ವಾರ ಪೂಜೆ ಮಾಡಿ, ಎಲ್ಲಾ ಆನೆಗಳ ಪಾದ ತೊಳೆದು ಅರಿಶಿನ, ಕ್ಯಾಪ್ಟನ್ ಅಭಿಮನ್ಯು ಸೇರಿ ಮೊದಲ ತಂಡದ 9 ಆನೆಗಳು ಮೈಸೂರಿಗೆ ಪಯಣ 7 ಗಂಡಾನೆ, 2 ಹೆಣ್ಣಾನೆ ಆಗಮನ ರಿಂದ 12.59 ರವರೆಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಪೂಜೆ ಕುಂಕುಮ, ಶ್ರೀಗಂಧ ಹಚ್ಚಿ, ಸೊಂಡಿಲ ಮೇಲೆ ಓಂಕಾರ ಬರೆದ ನಂತರ ಅಡವಿದೇವಿ ಪೂಜೆ, ಚಾಮುಂಡಿಪೂಜೆ, ಗಣಪತಿ ಪೂಜೆ ನೆರವೇರಿಸಲಿದ್ದಾರೆ. ನಂತರ ಮಧ್ಯಾಹ್ನ 12.34ರಿಂದ 12.59ರವರೆಗೆ ಸಲ್ಲುವ ಶುಭತುಲಾ(ಅಭಿಜಿನ್) ಲಗ್ನದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಆನೆಗಳಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡ ಲಿದ್ದಾರೆ. ಬಳಿಕ ಆನೆಗಳಿಗೆ ಪಂಚಫಲ, ಕಬ್ಬು, ಬೆಲ್ಲ ಸೇರಿದಂತೆ ವಿವಿಧ ತಿನಿಸು ನೀಡಿದ ನಂತರ ದೃಷ್ಟಿ ತೆಗೆಯಲಾಗುತ್ತದೆ. ನಂತರ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೊದಲ ತಂಡದ ಆನೆಗಳನ್ನು ವೀರನಹೊಸಳ್ಳಿ ಗೇಟ್ನಿಂದ 1.5 ಕಿ.ಮೀ ದೂರದ ನಾಗಾಪುರ ಹಾಡಿ ಸಮೀಪದ ಮೈದಾನದಲ್ಲಿ ನಡೆಯುವ ವೇದಿಕೆ” ಕಾರ್ಯಕ್ರಮದವರೆಗೂ ಮೆರವಣಿಗೆ ಯಲ್ಲಿ ಕರೆತರಲಾಗುತ್ತದೆ.

ವೇದಿಕೆ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ದಸರಾ ಆನೆಗಳ ಪಟ್ಟಿ ಹಾಗೂ ಕಿರು ಹೊತ್ತಿಗೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಜಿ.ಡಿ.ಹರೀಶ್ ಗೌಡ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮ ದಲ್ಲಿ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಶಾಸಕ ರಾದ ಜಿ.ಟಿ.ದೇವೇಗೌಡ, ತಸ್ವೀರ್ಸೇರ್, ಡಿ.ರವಿಶಂಕರ್, ಟಿ.ಎಸ್.ಶ್ರೀವತ್ಸ, ಕೆ.ಹರೀಶ್ ಗೌಡ, ದರ್ಶನ್ ದ್ರುವನಾರಾಯಣ್, ಅನಿಲ್ ಚಿಕ್ಕಮಾದು, ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಭೋಸ್, ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ವಿವೇಕಾನಂದ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ.

ಐದು ಸಾವಿರ ಜನರಿಗೆ ಊಟ: ನಾಗರಹೊಳೆ ಅಭಯಾರಣ್ಯದ ವೀರನ ಹೊಸಳ್ಳಿ ಗೇಟ್ ಬಳಿ ಚಾಲನೆ ದೊರೆತ ಬಳಿಕ ನಾಗಾಪುರ ಹಾಡಿ ಸಮೀಪ ನಡೆಯುವ ಸಭಾ ಕಾರ್ಯಕ್ರಮ ವೀರನಹೊಸಳ್ಳಿ, ನಾಗಾಪುರ ಹಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಆಗಮಿಸುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ 5 ಸಾವಿರ ಜನರಿಗೆ ಊಟ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ವೇದಿಕೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸ ಲಾಗಿದ್ದು, ವೀರನಹೊಸಳ್ಳಿ ಗೇಟ್ನಿಂದ ಸಭಾ ಕಾರ್ಯಕ್ರಮ ನಡೆಯುವ ಸ್ಥಳದವರೆಗೂ ರಸ್ತೆಯಲ್ಲಿ ತಳಿರು ತೋರಣದಿಂದ ಶೃಂಗರಿಸಲಾಗಿದೆ. ಸಭಾ ಕಾರ್ಯಕ್ರಮದಲ್ಲಿ ಆದಿವಾಸಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಟಿಬೆಟಿಯನ್ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.

ಮೊದಲ ತಂಡದ ಆನೆಗಳಿವು ಗಜಪಡೆ ನಾಯಕ ಅಭಿಮನ್ಯು(59) ವಿನೊಂದಿಗೆ ಮತ್ತಿಗೋಡು ಶಿಬಿರದ ಭೀಮ (25), ದುಬಾರೆ ಶಿಬಿರದ ಕಂಜನ್ (24), ಧನಂಜಯ (44) ಮತ್ತು ಪ್ರಶಾಂತ್ (53), ಬಳ್ಳೆ ಶಿಬಿರದ ಮಹೇಂದ್ರ (42), ದೊಡ್ಡಹರವೆ ಶಿಬಿರದ ಏಕಲವ್ಯ (40) ಸೇರಿದಂತೆ 7 ಗಂಡಾನೆ ಹಾಗೂ ದುಬಾರೆ ಶಿಬಿರದ ಕಾವೇರಿ (45) ಹಾಗೂ ಬಳ್ಳೆಯ (ದೊಡ್ಡಹರವೆ) ಲಕ್ಷ್ಮೀ(53) ಹೆಣ್ಣಾನೆಗಳು ಮೊದಲ ತಂಡದಲ್ಲಿ ಮೈಸೂರಿಗೆ ಆಗಮಿಸಲಿವೆ.

The post ಇಂದು ಮಧ್ಯಾಹ್ನ ಸಲ್ಲುವ ಶುಭ ಲಗ್ನದಲ್ಲಿ ಪೂಜೆ ಸಲ್ಲಿಸಿ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ. appeared first on Good News 24x7.

]]>
ಮಡಿಕೇರಿ ವಿರಾಜಪೇಟೆ ಬಳಿಯ ಅರಣ್ಯ ಪ್ರದೇಶದಲ್ಲಿ ಭೂ ಕುಸಿತ! https://www.goodnews24x7.com/landslide-in-forest-area-near-virajpet-madikeri/ Sat, 02 Aug 2025 07:38:32 +0000 https://www.goodnews24x7.com/?p=5251 ಮಡಿಕೇರಿ : ವಿರಾಜ ಪೇಟೆ ತಾಲೂಕು ಮಾಕುಟ್ಟ ಅರಣ್ಯವಲ ಯಕ್ಕೆ ಸೇರಿದ ಮಾಂಟ್ರಿಬೀಟ್ನ ಪಾಲಂ ಗಾಲ ಮಲೆತಿರಿಕೆ ಈಶ್ವರ ದೇವಸ್ಥಾನ ದಿಂದ ಸುಮಾರು 5ಕಿ.ಮೀ. ಅಂತರದ ಆರಣ್ಯ ಪ್ರದೇಶದಲ್ಲಿ ಭೂ ಕುಸಿತ ಸಂಭವಿ ಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ನಾಲ್ಕು ದಿನದ…

The post ಮಡಿಕೇರಿ ವಿರಾಜಪೇಟೆ ಬಳಿಯ ಅರಣ್ಯ ಪ್ರದೇಶದಲ್ಲಿ ಭೂ ಕುಸಿತ! appeared first on Good News 24x7.

]]>

ಮಡಿಕೇರಿ : ವಿರಾಜ ಪೇಟೆ ತಾಲೂಕು ಮಾಕುಟ್ಟ ಅರಣ್ಯವಲ ಯಕ್ಕೆ ಸೇರಿದ ಮಾಂಟ್ರಿಬೀಟ್ನ ಪಾಲಂ ಗಾಲ ಮಲೆತಿರಿಕೆ ಈಶ್ವರ ದೇವಸ್ಥಾನ ದಿಂದ ಸುಮಾರು 5ಕಿ.ಮೀ. ಅಂತರದ ಆರಣ್ಯ ಪ್ರದೇಶದಲ್ಲಿ ಭೂ ಕುಸಿತ ಸಂಭವಿ ಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ನಾಲ್ಕು ದಿನದ ಹಿಂದೆ ಈ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಆ ಸಂದರ್ಭದಲ್ಲಿ ಭೂ ಕುಸಿತವಾಗಿರುವ ಸಾಧ್ಯತೆ ಇದ್ದು, ಶುಕ್ರವಾರ ಬೆಳಗ್ಗೆ ಈ ಭೂ ಕುಸಿತ ಅರಣ್ಯ ಸಿಬ್ಬಂದಿಯ ಗಮನಕ್ಕೆ ಬಂದಿದೆ.

ಅರಣ್ಯದ ಮಧ್ಯ ಭಾಗದಲ್ಲಿ ಭೂ ಕುಸಿತ ವಾಗಿದ್ದು, ಸುಮಾರು 15 ಕಿ.ಮೀ. ವ್ಯಾಪ್ತಿ ಯಲ್ಲಿ ಜನ ವಸತಿ ಪ್ರದೇಶ ಇಲ್ಲದ ಕಾರಣ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಆದರೆ ಈ ಅರಣ್ಯಕ್ಕೆ ಕೆಳ ಭಾಗದಲ್ಲಿ ಕೊಳಕೇರಿ ಗ್ರಾಮದ ಕನ್ನಂಬೀರ ಪವನ್ ಪೂವಯ್ಯ ಎಂಬವರ ಕಾಫಿ ತೋಟ ದಲ್ಲಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪ್ರಜ್ವಲ್ ಕುಮಾರ್ ಹಿಡಿದು ರಕ್ಷಿಸಿದರು.

ಕಂದಾಯ ಇಲಾಖೆಗೆ ಸೇರಿದ ಸುಮಾರು 300 ಎಕರೆಯಷ್ಟು ಪೈಸಾರಿ ಭೂಮಿ ಇದ್ದು, ಭೂ ಕುಸಿತ ಹಾಗೂ ಭಾರೀ ಪ್ರಮಾಣದ ನೀರು ಬೆಟ್ಟದಿಂದ ಹರಿದು ಬಂದ ಪರಿಣಾಮ ಪೈಸಾರಿ ಭೂಮಿಯಲ್ಲಿ ಭಾರೀ ಪ್ರಮಾಣದ ಮಣ್ಣು, ಮರಗಳು ಹಾಗೂ ಕಲ್ಲು-ಬಂಡೆಗಳು ಬಿದ್ದಿವೆ.

ಭೂ ಕುಸಿತ ಉಂಟಾದ ಜಾಗದಲ್ಲಿ ನೀರು ಉಕ್ಕಿ ಹರಿಯುತ್ತಿದೆ ಬೆಳಗ್ಗೆ ಮಾಹಿತಿ ತಿಳಿದೊಡನೆ ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ವಿರಾಜಪೇಟೆ ಕಂದಾಯ ಇಲಾಖಾಧಿಕಾರಿ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರದೇಶಕ್ಕೆ ರಸ್ತೆ ಮಾರ್ಗ ವಿಲ್ಲದ ಕಾರಣ ಪಾಲಂಗಾಲ ಗ್ರಾಮದಿಂದ ಸುಮಾರು 8 ಕಿ.ಮೀ.ನಷ್ಟು ಬೆಟ್ಟ ಹತ್ತಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.

ಬೆಟ್ಟದ ತುದಿಯವರೆಗೂ ನಾವು ಹೋಗಲು ಸಾಧ್ಯವಾಗಿಲ್ಲ. ನಾಳೆ ಮಾಕುಟ್ಟಿ ವಲಯ ಅರಣ್ಯಾಧಿಕಾರಿಗಳನ್ನೊಳಗೊಂಡ ತಂಡ ಮತ್ತೆ ಆ ಪ್ರದೇ ಶಕ್ಕೆ ತೆರಳಲಿದೆ. ಭಾರೀ ಮಳೆಯಿಂದಾಗಿ ಬೆಟ್ಟದ ಕಲ್ಲು-ಬಂಡೆಗಳ ಮೇಲಿರುವ ಮಣ್ಣು ಕುಸಿದಿದೆಯೇ ಹೊರತು, ಇದನ್ನು ಭೂ ಕುಸಿತ ಎಂದು ಪರಿಗಣಿಸಲು ಸಾಧ್ಯವಿಲ್ಲ. – ಜಗನ್ನಾಥ್ ಜಗನ್ನಾಥ್, ಡಿಎಫ್ಓ ತಿಳಿಸಿದ್ದಾರೆ.

2019ರ ಆಗಸ್ಟ್ನಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ವೇಳೆ ಕೆದಮಳ್ಳೂರು ತೋರಾ ಗ್ರಾಮದ ಬಳಿ ಭೂ ಕುಸಿತದಿಂದ 8ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈ ಸ್ಥಳದಿಂದ ಸುಮಾರು 20 ಕಿಮೀ ಅಂತರದ ಅರಣ್ಯದ ಮಧ್ಯ ಭಾಗದಲ್ಲಿ ಈ ಭೂ ಕುಸಿತ ಸಂಭವಿಸಿದೆ.

The post ಮಡಿಕೇರಿ ವಿರಾಜಪೇಟೆ ಬಳಿಯ ಅರಣ್ಯ ಪ್ರದೇಶದಲ್ಲಿ ಭೂ ಕುಸಿತ! appeared first on Good News 24x7.

]]>
ಮೈಸೂರು-ಕುಶಾಲನಗರ ರಸ್ತೆ ಯೋಜನೆ ಕೇಂದ್ರ ಸಚಿವರಿಗೆ ಸಂಸದ ಯದುವೀರ್‌ ಮನವಿ. https://www.goodnews24x7.com/mp-yaduveer-appeals-to-union-minister-for-mysore-kushalnagar-road-project/ Fri, 01 Aug 2025 05:58:06 +0000 https://www.goodnews24x7.com/?p=5211 ಮೈಸೂರು :  ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಹೆಚ್ಚುವರಿ ಸಂಪರ್ಕ ಸೇವೆ ಕಲ್ಪಿಸಲು ಬದ್ಧವಾಗಿರುವ ಕೇಂದ್ರ ಸರ್ಕಾರ, ಅತಿ ಕೂಡಲೇ ಮೈಸೂರು-ಕುಶಾಲನಗರ ಹೆದ್ದಾರಿಯ ಎರಡನೇ ಹಂತದ ಯೋಜನೆ ಚಾಲನೆಗೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ…

The post ಮೈಸೂರು-ಕುಶಾಲನಗರ ರಸ್ತೆ ಯೋಜನೆ ಕೇಂದ್ರ ಸಚಿವರಿಗೆ ಸಂಸದ ಯದುವೀರ್‌ ಮನವಿ. appeared first on Good News 24x7.

]]>

ಮೈಸೂರು :  ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಹೆಚ್ಚುವರಿ ಸಂಪರ್ಕ ಸೇವೆ ಕಲ್ಪಿಸಲು ಬದ್ಧವಾಗಿರುವ ಕೇಂದ್ರ ಸರ್ಕಾರ, ಅತಿ ಕೂಡಲೇ ಮೈಸೂರು-ಕುಶಾಲನಗರ ಹೆದ್ದಾರಿಯ ಎರಡನೇ ಹಂತದ ಯೋಜನೆ ಚಾಲನೆಗೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ನಂತರ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಸಂಸದ ಯದುವೀರ್, 2023ರ ಜುಲೈ 19ರಂದು ಯೋಜನೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿತ್ತು. ಎರಡನೇ ಪ್ಯಾಕೇಜ್‌ನಲ್ಲಿ 22.70 ಕಿಲೋಮೀಟರ್‌  ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ಈಗಾಗಲೇ 14.522 ಕಿಲೋ ಮೀಟರ್‌ ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ. ಬಾಕಿ ಉಳಿದಿರುವ 8.178 ಕಿಲೋಮೀಟರ್‌ ಅರಣ್ಯ ಭೂಮಿ ಸ್ವಾಧೀನಕ್ಕೆ ಅರಣ್ಯ ಇಲಾಖೆಯ ಅನುಮೋದನೆ ಅಗತ್ಯವಿದೆ ಎಂದು ವಿವರಿಸಿದ್ದಾರೆ.

ಈ ಸಂದರ್ಭದಲ್ಲಿ ಯೋಜನೆಯ ಘೋಷಣೆಗೆ ಸಚಿವಾಲಯ ಮುಂದಾಗಬೇಕು. ಕಾಲಮಿತಿಯಲ್ಲಿ ಅರಣ್ಯ ಇಲಾಖೆಯ ಅನುಮೋದನೆಯನ್ನು ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದು ಯದುವೀರ್ ಒಡೆಯರ್‌ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಕೂಡಲೇ ಯೋಜನೆಯ ಆರಂಭದ ದಿನಾಂಕ ಘೋಷಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ನಿತಿನ್‌ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದೇವೆ . ಮನವಿ ಪತ್ರ ಸ್ವೀಕರಿಸಿದ ನಂತರ ನಿತಿನ್‌ ಗಡ್ಕರಿ ಅವರು ಸೂಕ್ತ ಕ್ರಮ ಕೈಗೊಳುವ ಭರವಸೆ ನೀಡಿದ್ದಾರೆ ಎಂದು ಸಂಸದ ಯದುವೀರ್‌ ಒಡೆಯರ್‌ ಮಾಹಿತಿ ನೀಡಿದ್ದಾರೆ.

ಹುಲಿ ಕಾರಿಡಾರ್‌ ರಕ್ಷಣೆಗೆ ತನಿಖೆಗಾಗಿ ಮಾರ್ಗಸೂಚಿ

ಕರ್ನಾಟಕದಲ್ಲಿ ದೀರ್ಘಕಾಲಿನ ಹುಲಿ ಆವಾಸಸ್ಥಾನ ಬಲಪಡಿಸಲು ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ ಎಂದು ಸಂಸದ ಯದುವೀರ್‌ ತಿಳಿಸಿದ್ದಾರೆ.

ಸಂಸತ್‌ ಅಧಿವೇಶನದಲ್ಲಿ ಸಂಸದ ಯದುವೀರ್‌ ಈ ಕುರಿತು ಕೇಂದ್ರ ಅರಣ್ಯ ಸಚಿವರಿಗೆ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಈ ಉತ್ತರ ನೀಡಲಾಗಿದೆ.

ಮಹದೇಶ್ವರ ಬೆಟ್ಟಗಳ ಅಭಯಾರಣ್ಯದಲ್ಲಿ ಕಾಡು ಪ್ರಾಣಿಗಳ ಸಾವು, ವನ್ಯಜೀವಿ, ವಿಧಿ ವಿಜ್ಞಾನ, ವಿಷಶಾಸ್ತ್ರದ ಬಗ್ಗೆ ಮಾರ್ಗಸೂಚಿಗಳನ್ನು ಹೊಂದಿರುವ ಬಗ್ಗೆ  ಮಾಹಿತಿ ಕೋರಲಾಗಿತ್ತು ಎಂದು ಸಂಸದ ಯದುವೀರ್ ವಿವರಿಸಿದ್ದಾರೆ.

ಪ್ರಾಜೆಕ್ಟ್‌ ಟೈಗರ್‌ ಯೋಜನೆಯಡಿಯಲ್ಲಿ ಹುಲಿ ಮೀಸಲು ಪ್ರದೇಶಗಳಲ್ಲಿ ಆವಾಸಸ್ಥಾನ ರಕ್ಷಣೆ, ಜಾಗೃತಿ, ಸಮುದಾಯ ಜಾಗರೂಕತೆಗೆ ಹೆಚ್ಚಿನ ಹಣ ಒದಗಿಸಲಾಗುತ್ತಿದೆ ಎಂದು ಸಂಸದ ಯದುವೀರ್‌ ತಿಳಿಸಿದ್ದಾರೆ ಎಂದರು.

The post ಮೈಸೂರು-ಕುಶಾಲನಗರ ರಸ್ತೆ ಯೋಜನೆ ಕೇಂದ್ರ ಸಚಿವರಿಗೆ ಸಂಸದ ಯದುವೀರ್‌ ಮನವಿ. appeared first on Good News 24x7.

]]>
ಮೈಸೂರು ಗ್ರೇಡ್‌ 1 ಪಾಲಿಕೆಗೆ ಮಾರ್ಗಸೂಚಿ ಬದಲಾವಣೆಮಾಡಿದ ಕೇಂದ್ರ. https://www.goodnews24x7.com/the-center-has-changed-the-guidelines-for-mysore-grade-1-corporation/ Tue, 15 Jul 2025 11:32:46 +0000 https://www.goodnews24x7.com/?p=5127 ಮೈಸೂರು : ಹುಬ್ಬಳ್ಳಿ-ಧಾರವಾಡ ಮಾದರಿಯಂತೆ ಮೈಸೂರು ಮಹಾನಗರ ಪಾಲಿಕೆಯನ್ನು ಗ್ರೇಡ್-1 ಪಾಲಿಕೆಯನ್ನಾಗಿಸಲು ರಾಜ್ಯ ಸರಕಾರ ಮುಂದಾಗಿದೆ. ಬಿಬಿಎಂಪಿ ಮಾದರಿಯಲ್ಲಿ ಬೃಹತ್ ಮೈಸೂರು ಮಹಾನಗರ ಪಾಲಿಕೆ ಮಾಡಬೇಕೆಂಬ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಕೈ ಬಿಟ್ಟಿರುವುದರಿಂದ ಗ್ರೇಡ್-1 ಪಾಲಿಕೆಯನ್ನಾಗಿಸಬೇಕೆಂದು ಪಾಲಿಕೆ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ…

The post ಮೈಸೂರು ಗ್ರೇಡ್‌ 1 ಪಾಲಿಕೆಗೆ ಮಾರ್ಗಸೂಚಿ ಬದಲಾವಣೆಮಾಡಿದ ಕೇಂದ್ರ. appeared first on Good News 24x7.

]]>

ಮೈಸೂರು : ಹುಬ್ಬಳ್ಳಿ-ಧಾರವಾಡ ಮಾದರಿಯಂತೆ ಮೈಸೂರು ಮಹಾನಗರ ಪಾಲಿಕೆಯನ್ನು ಗ್ರೇಡ್-1 ಪಾಲಿಕೆಯನ್ನಾಗಿಸಲು ರಾಜ್ಯ ಸರಕಾರ ಮುಂದಾಗಿದೆ.

ಬಿಬಿಎಂಪಿ ಮಾದರಿಯಲ್ಲಿ ಬೃಹತ್ ಮೈಸೂರು ಮಹಾನಗರ ಪಾಲಿಕೆ ಮಾಡಬೇಕೆಂಬ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಕೈ ಬಿಟ್ಟಿರುವುದರಿಂದ ಗ್ರೇಡ್-1 ಪಾಲಿಕೆಯನ್ನಾಗಿಸಬೇಕೆಂದು ಪಾಲಿಕೆ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಶೀಘ್ರದಲ್ಲಿಯೇ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಜತೆಗೆ ಪಾಲಿಕೆ ಸುತ್ತಲಿನ ಸ್ಥಳೀಯ ಸಂಸ್ಥೆಗಳು ಕೂಡ ಸೇರ್ಪಡೆಯಾಗಲಿವೆ.

ಬೆಂಗಳೂರು-ಮೈಸೂರು ದಶಪಥ ರಸ್ತೆ , ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಂತಾರಾಷ್ಟ್ರೀಯ ಕ್ರೀಡಾಂಗಣ ಸೇರಿದಂತೆ ನಾನಾ ಯೋಜನೆಗಳ ಅನುಷ್ಠಾನದಿಂದ ಮೈಸೂರು ಪಾಲಿಕೆಯನ್ನು ಬೃಹತ್ ಪಾಲಿಕೆ ಮಾಡಬೇಕೆಂಬ ಚರ್ಚೆ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಮೈಸೂರಿನ ಹೊರವಲಯದ ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ರಮ್ಮನಹಳ್ಳಿ, ಬೋಗಾದಿ, ಕಡಕೊಳ ಪಟ್ಟಣ ಪಂಚಾಯಿತಿಯೊಂದಿಗೆ ಎಂಟು ಗ್ರಾಪಂಗಳನ್ನು ಸೇರಿಸಿಕೊಂಡು ಬೃಹತ್ ಪಾಲಿಕೆಯನ್ನಾಗಿ ರಚನೆ ಮಾಡಲು ಪ್ರಸ್ತಾವನೆ ತಯಾರಿಸಲಾಗಿತ್ತು.

ನಂತರ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿಪಾಲಿಕೆ ಅಕಾರಿಗಳು ವಿಷಯ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದರು. ಈ ನಡುವೆ ಕಾಂಗ್ರೆಸ್ನ ಕೆಲ ನಾಯಕರು ಸಿಎಂ ಅವರಿಗೆ ಬೃಹತ್ ಪಾಲಿಕೆಯನ್ನಾಗಿ ಮಾಡದಂತೆ ಒತ್ತಡ ಹೇರಿದ್ದರು. ಇದರಿಂದ ಸಿಎಂ ಕೂಡ ಸಭೆ ನಡೆಸಲು ನಿರಾಸಕ್ತಿ ತೋರಿಸಿದ್ದರು. ಬಳಿಕ ಸಿಎಂ ಸೂಚನೆ ಮೇರೆಗೆ ಗ್ರೇಡ್-1 ಪಾಲಿಕೆ ಮಾಡುವ ಸಂಬಂಧ ಪಾಲಿಕೆ ಅಕಾರಿಗಳು ಪ್ರಸ್ತಾವನೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ.

ಗ್ರೇಡ್ 1 ಪಾಲಿಕೆಯನ್ನಾಗಿಸಲು ಅಗತ್ಯವಿರುವ 15 ಲಕ್ಷ ಜನಸಂಖ್ಯೆಯನ್ನು ಮೈಸೂರು ಹೊಂದಿದೆ. ಪಾಲಿಕೆ ಸುತ್ತಲಿನ ನಗರ ಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳನ್ನು ಸೇರ್ಪಡೆ ಮಾಡಿಕೊಂಡರೆ 16 ಲಕ್ಷ ಜನಸಂಖ್ಯೆಯಾಗಲಿದೆ.

 

ಸದ್ಯಕ್ಕಿಲ್ಲ ಚುನಾವಣೆ:
2023 ರ ನ. 14 ರಂದು ಜನಪ್ರತಿನಿಗಳ ಆಡಳಿತ ಮುಗಿದಿದ್ದು, ಸದ್ಯಕ್ಕೆ ಚುನಾವಣೆ ನಡೆಯುವುದು ಅನುಮಾನವಾಗಿದೆ. ಗ್ರೇಡ್-1 ಪಾಲಿಕೆ ರಚನೆಯಾದ ನಂತರ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಅಂದಾಜು ಒಂದು ವರ್ಷವಾದರೂ ಸಮಯ ಬೇಕಾಗುವ ಕಾರಣ ಅಲ್ಲಿಯವರೆಗೆ ಆಕಾಂಕ್ಷಿಗಳು ಕಾಯಬೇಕಿದೆ.

ಜನಸಂಖ್ಯೆ ಕೊರತೆಯಿಂದಾಗಿ ಮೈಸೂರು ಮಹಾ ನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿಗ್ರೇಡ್ 1 ಪಾಲಿಕೆಯನ್ನಾಗಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಆದಷ್ಟು ಬೇಗ ಪಾಲಿಕೆಯ ಪ್ರಸ್ತಾವನೆಗೆ ಸರಕಾರ ಅನುಮೋದನೆ ನೀಡಿ ಸ್ಥಳೀಯ ಸಂಸ್ಥೆಯ ಚುನಾವಣೆ ನಡೆಸಲಿ -ಜಿ.ಟಿ.ದೇವೇಗೌಡ, ಶಾಸಕ.

ವಿಶೇಷ ಅನುದಾನ:
ಮೈಸೂರು ನಗರ ಪಾಲಿಕೆಯನ್ನು ಗ್ರೇಡ್-1 ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದರೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಹೆಚ್ಚಿನ ಅನುದಾನ ಸಿಗುವ ಅವಕಾಶವಿರುತ್ತದೆ. ಗ್ರೇಡ್- 1 ಸಿಟಿಗಳಿಗೆ ಸಿಗುವ ವಿಶೇಷ ಸವಲತ್ತುಗಳು ಕೇಂದ್ರದಿಂದ ಸಿಗಲಿದೆ. ಜತೆಗೆ ಪಾಲಿಕೆಯ ವ್ಯಾಪ್ತಿಯ ಪ್ರದೇಶಗಳೊಂದಿಗೆ ಸುತ್ತಲಿನ ಸ್ಥಳೀಯ ಸಂಸ್ಥೆಗಳ ಪ್ರದೇಶಗಳನ್ನು ಸೇರ್ಪಡೆಗೊಳಿಸಲು ಅವಕಾಶವಾಗಲಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

 

ಮೈಸೂರು ಮಹಾನಗರ ಪಾಲಿಕೆಯನ್ನು ಗ್ರೇಡ್ 1 ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಸಂಬಂಧ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಅನುಮೋದನೆ ದೊರೆಯುವ ನಿರೀಕ್ಷೆ ಇದೆ -ದಾಸೇಗೌಡ, ಉಪ ಆಯುಕ್ತ(ಅಭಿವೃದ್ಧಿ), ಮೈಸೂರು ಮಹಾ ನಗರ ಪಾಲಿಕೆ.

The post ಮೈಸೂರು ಗ್ರೇಡ್‌ 1 ಪಾಲಿಕೆಗೆ ಮಾರ್ಗಸೂಚಿ ಬದಲಾವಣೆಮಾಡಿದ ಕೇಂದ್ರ. appeared first on Good News 24x7.

]]>
ಸರ್ಕಾರಿ ವಾಹನದಲ್ಲಿ ಮಧ್ಯ ಬಾಟಲಿಗಳು ಪತ್ತೆ, ಪ್ರಕರಣ ದಾಖಲಿಸಿಕೊಂಡ ಹುಣಸೂರು ಪೊಲೀಸರು. https://www.goodnews24x7.com/hunsur-police-register-case-after-finding-liquor-bottles-in-government-vehicle/ Sun, 13 Jul 2025 05:56:42 +0000 https://www.goodnews24x7.com/?p=5057 ಮೈಸೂರು : ಸಣ್ಣ ನೀರಾವರಿ ಇಲಾಖೆಗೆ ಸೇರಿದ ವಾಹನದಲ್ಲಿ ಮಧ್ಯದ ಬಾಟಲಿಗಳು ಪತ್ತೆಯಾಗಿರುವ ಘಟನೆ ಹುಣಸೂರಿನ ಬಸ್ ಸ್ಟ್ಯಾಂಡ್ ಬಳಿ ಘಟನೆ. ಸರ್ಕಾರಿ ವಾಹನದಲ್ಲಿ ಮಧ್ಯ ಬಾಟಲಿಗಳು ಪತ್ತೆಯಾಗಿವೆ, ವಾಹನದಲ್ಲಿ ಸರ್ಕಾರಿ ಕಡತಗಳು ಖಾಸಗಿ ವ್ಯಕ್ತಿ ಚಾಲಕನಾಗಿರುವುದು ತಿಳಿದು ಬಂದಿದೆ. ಸಣ್ಣ…

The post ಸರ್ಕಾರಿ ವಾಹನದಲ್ಲಿ ಮಧ್ಯ ಬಾಟಲಿಗಳು ಪತ್ತೆ, ಪ್ರಕರಣ ದಾಖಲಿಸಿಕೊಂಡ ಹುಣಸೂರು ಪೊಲೀಸರು. appeared first on Good News 24x7.

]]>

ಮೈಸೂರು : ಸಣ್ಣ ನೀರಾವರಿ ಇಲಾಖೆಗೆ ಸೇರಿದ ವಾಹನದಲ್ಲಿ ಮಧ್ಯದ ಬಾಟಲಿಗಳು ಪತ್ತೆಯಾಗಿರುವ ಘಟನೆ ಹುಣಸೂರಿನ ಬಸ್ ಸ್ಟ್ಯಾಂಡ್ ಬಳಿ ಘಟನೆ.

ಸರ್ಕಾರಿ ವಾಹನದಲ್ಲಿ ಮಧ್ಯ ಬಾಟಲಿಗಳು ಪತ್ತೆಯಾಗಿವೆ, ವಾಹನದಲ್ಲಿ ಸರ್ಕಾರಿ ಕಡತಗಳು ಖಾಸಗಿ ವ್ಯಕ್ತಿ ಚಾಲಕನಾಗಿರುವುದು ತಿಳಿದು ಬಂದಿದೆ.
ಸಣ್ಣ ನೀರಾವರಿ ಇಲಾಖೆಗೆ ಸೇರಿದ ವಾಹನದಲ್ಲಿ ಸ್ಥಳೀಯರ ಕೈಗೆ ರೆಡ್ ಹ್ಯಾಂಡಾಗಿ ಮಧ್ಯದ ಬಾಟಲಿಗಳು ಪತ್ತೆಯಾಗಿವೆ. ಹುಣಸೂರಿನ ಬಸ್ ಸ್ಟ್ಯಾಂಡ್ ಬಳಿ ಘಟನೆ ನಡೆದಿದೆ.

ಟೌನ್ ಪೊಲೀಸರಿಗೆ ಕೆಆರ್ಎಸ್ ಪಕ್ಷದ ಕಾರ್ಯಕರ್ತರಿಂದ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಸ್ಥಳಕ್ಕಾಆಗಮಿಸಿ ವಾಹನ ಪರಿಶೀಲಿಸಿದಾಗ ವಾಹನದಲ್ಲಿ ಮೂರು ಮಧ್ಯದ ಬಾಟಲ್, ಸರ್ಕಾರಕ್ಕೆ ಸೇರಿದ ಕಡತಗಳು ಪತ್ತೆ.


ಯಾವುದೇ ಅಧಿಕೃತ ಅಧಿಕಾರಿ ಇಲ್ಲದೆ ಸರ್ಕಾರಿ ವಾಹನದಲ್ಲಿ ಕಡತಗಳು, ಮಧ್ಯದ ಬಾಟಲಿಗಳು. ಅಲ್ಲದೆ ಸರ್ಕಾರಿ ವಾಹನಕ್ಕೆ ಖಾಸಗಿ ವ್ಯಕ್ತಿ ಚಾಲಕ.
ವಾಹನವನ್ನ ಸೀಜ್ ಮಾಡಿ ಹುಣಸೂರು ಟೌನ್ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ

The post ಸರ್ಕಾರಿ ವಾಹನದಲ್ಲಿ ಮಧ್ಯ ಬಾಟಲಿಗಳು ಪತ್ತೆ, ಪ್ರಕರಣ ದಾಖಲಿಸಿಕೊಂಡ ಹುಣಸೂರು ಪೊಲೀಸರು. appeared first on Good News 24x7.

]]>
ಮೊಬೈಲ್‌ಫೋನ್ ಬೆಳಕಿನಲ್ಲಿಯೇ ಮೈಸೂರು ಕ್ರಾಫರ್ಡ್ ಭವನದಲ್ಲಿ ಮೌಲ್ಯಮಾಪನ! https://www.goodnews24x7.com/evaluation-in-the-light-of-a-mobile-phone/ Fri, 27 Jun 2025 06:47:38 +0000 https://www.goodnews24x7.com/?p=4712 ಮೈಸೂರು : ಕ್ರಾಫರ್ಡ್ ಭವನದಲ್ಲಿರುವ ಪರೀಕ್ಷಾ ಭವನದಲ್ಲಿ ಗುರುವಾರ ವಿದ್ಯುತ್ ವ್ಯತ್ಯಯದಿಂದಾಗಿ ಮೌಲ್ಯಮಾಪಕರು ಪದವಿ ಪರೀಕ್ಷೆಗಳ ಉತ್ತರಪತ್ರಿಕೆಗಳನ್ನು ಮೊಬೈಲ್‌ಫೋನ್ ಬೆಳಕಿನಲ್ಲಿಯೇ ಮೌಲ್ಯಮಾಪನ ನಡೆಸಿದ ಘಟನೆ ನಡೆದಿದೆ. ಸೆಸ್ಕ್ ಮೂರು ದಿನದ ಹಿಂದೆಯೇ ‘ಕಲಾಮಂದಿರ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂಬ…

The post ಮೊಬೈಲ್‌ಫೋನ್ ಬೆಳಕಿನಲ್ಲಿಯೇ ಮೈಸೂರು ಕ್ರಾಫರ್ಡ್ ಭವನದಲ್ಲಿ ಮೌಲ್ಯಮಾಪನ! appeared first on Good News 24x7.

]]>

ಮೈಸೂರು : ಕ್ರಾಫರ್ಡ್ ಭವನದಲ್ಲಿರುವ ಪರೀಕ್ಷಾ ಭವನದಲ್ಲಿ ಗುರುವಾರ ವಿದ್ಯುತ್ ವ್ಯತ್ಯಯದಿಂದಾಗಿ ಮೌಲ್ಯಮಾಪಕರು ಪದವಿ ಪರೀಕ್ಷೆಗಳ ಉತ್ತರಪತ್ರಿಕೆಗಳನ್ನು ಮೊಬೈಲ್‌ಫೋನ್ ಬೆಳಕಿನಲ್ಲಿಯೇ ಮೌಲ್ಯಮಾಪನ ನಡೆಸಿದ ಘಟನೆ ನಡೆದಿದೆ.

ಸೆಸ್ಕ್ ಮೂರು ದಿನದ ಹಿಂದೆಯೇ ‘ಕಲಾಮಂದಿರ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂಬ ಪ್ರಕಟಣೆ ಹೊರಡಿಸಿತ್ತು. ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. ಮೈಸೂರು ವಿಶ್ವವಿದ್ಯಾಲಯವು ಅದಕ್ಕೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಇದ್ದರಿಂದ ಮೌಲ್ಯಮಾಪಕರು ಇಡೀ ದಿನ ತೊಂದರೆ ಅನುಭವಿಸಿದ ಘಟನೆ ನಡೆದಿದೆ.
ವಯಸ್ಸಾದ ಪ್ರಾಧ್ಯಾಪಕರು ಮಂದ ಬೆಳಕಿನಲ್ಲಿ ಮೌಲ್ಯಮಾಪನ ಮಾಡಿದ್ದರಿಂದ, ಅಂಕಗಳು ವ್ಯತ್ಯಾಸವಾಗುವ ಆತಂಕವೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಚಿತ್ರಗಳಿಂದ ವ್ಯಕ್ತವಾಗಿದೆ.

ಪರೀಕ್ಷಾಂಗ ವಿಭಾಗ ಪರ್ಯಾಯ ವ್ಯವಸ್ಥೆ ಮಾಡಿರಲಿಲ್ಲ. ಕಿಟಕಿಗಳು ದೂರದಲ್ಲಿದ್ದವು. ಮೋಡವೂ ಕವಿದಿದ್ದರಿಂದ ಬೆಳಕಿರಲಿಲ್ಲ. ನಾಳೆ ಉತ್ತರ ಪತ್ರಿಕೆಗಳನ್ನೂ ನೋಡುತ್ತೇವೆಂದರೂ ಅವಕಾಶ ನೀಡಲಿಲ್ಲ. ಜನರೇಟರ್ ಕೆಟ್ಟಿದ್ದು, ಡೀಸೆಲ್ ಹಾಕಲೂ ವಿಶ್ವವಿದ್ಯಾಲಯದ ಬಳಿ ಹಣವಿಲ್ಲವೆಂದು ಹೇಳಿದ್ದರಿಂದ ಸುಮ್ಮನಾದೆವು ಎಂದು ಸಹಾಯಕ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ಗಂಭೀರತೆಯೂ ಮಾಯ: ‘ಉತ್ತರ ಪತ್ರಿಕೆಗಳ ಮೌಲ್ಯಮಾಪನ 20 ದಿನದಿಂದ ನಡೆಯುತ್ತಿದೆ. ಐವರು ಮೌಲ್ಯಮಾಪಕರಿಗೆ ಒಬ್ಬ ಪ್ರತಿ ಮುಖ್ಯಸ್ಥರಿರುತ್ತಾರೆ. ನಿಗದಿಯಂತೆ ಪ್ರಕ್ರಿಯೆ ಆರಂಭವಾಗಿತ್ತು. ಕಳೆದ ಬಾರಿಯ ಹಣವನ್ನೇ ನೀಡದ್ದರಿಂದ ಉಪನ್ಯಾಸಕರು ಪ್ರತಿಭಟಿಸಿದ್ದರು. ದೊಂಬಿಯಂತೆ ಪ್ರಕ್ರಿಯೆ ನಡೆದಿದೆ. ಮೊದಲಿದ್ದ ಗಂಭೀರತೆಯೇ ಮಾಯವಾಗಿದೆ ಎಂದರು.
ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ. ಉಪನ್ಯಾಸಕರು ಮೌಲ್ಯಮಾಪನದ ದಿನವೇ ಕಂಪ್ಯೂಟರ್ ಗೆ ಅಂಕಗಳ ದತ್ತಾಂಶ ನೀಡಬೇಕಿತ್ತು. ಈಗ ಮಾರನೇಯ ದಿನ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಗೆ ಪರೀಕ್ಷಾಂಗ ಕುಲಸಚಿವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ ಎಂದು ಆರೋಪಿಸಲಾಗಿದೆ.

ಗ್ರಾಮೀಣ ಭಾಗದ ಖಾಯಂ ಪ್ರಾಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರಿಂದಲೇ ಮೌಲ್ಯಮಾಪನ ನಡೆದಿದೆ. ಆದರೆ, ನಗರ ಭಾಗದ ಖಾಯಂ ಅಧ್ಯಾಪಕರು ಬರುತ್ತಿಲ್ಲ. ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂಬ ಸುತ್ತೋಲೆಯನ್ನೂ ಹೊರಡಿಸುತ್ತಿಲ್ಲ ಎಂದು ಅಧ್ಯಾಪಕರೊಬ್ಬರು ತಿಳಿಸಿದರು.

ಮೊದಲಿದ್ದ ಪಾರದರ್ಶಕತೆ, ಶಿಸ್ತು ಇಲ್ಲ. ಯಾರು ಬೇಕಾದರೂ ಭವನದೊಳಕ್ಕೆ ಬರಬಹುದು. ಭದ್ರತೆಯ ಬಗ್ಗೆಯೂ ನಿರ್ಲಕ್ಷ್ಯವಿದೆ. ಎಲ್ಲಕ್ಕೂ ವಿಶ್ವವಿದ್ಯಾಲಯಕ್ಕೆ ಹಣವಿಲ್ಲವೆಂದು ಆಡಳಿತ ಸಿಬ್ಬಂದಿ ಹೇಳುತ್ತಾರೆ. ಮೌಲ್ಯಮಾಪನಕ್ಕೆ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಡೆಯುವುದೇಕೆ ಎಂದು ಅಧ್ಯಾಪಕರೊಬ್ಬರು ಪ್ರಶ್ನಿಸಿದ್ದಾರೆ.

The post ಮೊಬೈಲ್‌ಫೋನ್ ಬೆಳಕಿನಲ್ಲಿಯೇ ಮೈಸೂರು ಕ್ರಾಫರ್ಡ್ ಭವನದಲ್ಲಿ ಮೌಲ್ಯಮಾಪನ! appeared first on Good News 24x7.

]]>
ಮುಂಗಾರು ಮತ್ತೆ ಚುರುಕು: ದಕ್ಷಿಣ ಕನ್ನಡದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ https://www.goodnews24x7.com/monsoon-is-back-agricultural-activities-in-dakshina-kannada/ Sun, 15 Jun 2025 12:00:38 +0000 https://www.goodnews24x7.com/?p=4432 ಬೆಳ್ತಂಗಡಿ: ಒಂದು ಹಂತದ ಅಬ್ಬರದ ಮಳೆ ಬಳಿಕ ಸ್ವಲ್ಪ ದಿನಗಳ ಬ್ರೇಕ್ ನಂತರ ಮತ್ತೆ ವರ್ಷಧಾರೆ ಶುರುವಾಗಿದ್ದು, ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮೇ ತಿಂಗಳಲ್ಲಿ ಈ ಬಾರಿ ಉತ್ತಮ ಮಳೆ ಸುರಿದುದರಿಂದ ಕೃಷಿ ನೀರಿನ ಸಮಸ್ಯೆ ದೂರವಾಗಿತ್ತು. ಅಲ್ಲದೆ ಕೃಷಿಕರು…

The post ಮುಂಗಾರು ಮತ್ತೆ ಚುರುಕು: ದಕ್ಷಿಣ ಕನ್ನಡದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ appeared first on Good News 24x7.

]]>

ಬೆಳ್ತಂಗಡಿ: ಒಂದು ಹಂತದ ಅಬ್ಬರದ ಮಳೆ ಬಳಿಕ ಸ್ವಲ್ಪ ದಿನಗಳ ಬ್ರೇಕ್ ನಂತರ ಮತ್ತೆ ವರ್ಷಧಾರೆ ಶುರುವಾಗಿದ್ದು, ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಮೇ ತಿಂಗಳಲ್ಲಿ ಈ ಬಾರಿ ಉತ್ತಮ ಮಳೆ ಸುರಿದುದರಿಂದ ಕೃಷಿ ನೀರಿನ ಸಮಸ್ಯೆ ದೂರವಾಗಿತ್ತು. ಅಲ್ಲದೆ ಕೃಷಿಕರು ತಮ್ಮ ತೋಟ, ಗದ್ದೆಗಳ ಕೆಲಸವನ್ನು ಬೇಗನೆ ಆರಂಭಿಸಿದ್ದರು. ಆದರೆ ಜೂನ್ ಆರಂಭವಾಗುತ್ತಿದ್ದಂತೆ ಸುಮಾರು 10-12 ದಿನಗಳ ಕಾಲ ಮಳೆ ದೂರವಾಯಿತು. ಈ ಸಮಯ ಕೃಷಿ ಕೆಲಸಗಳು ಕೊಂಚ ಕುಂಠಿತಗೊಂಡವು. ಇದೀಗ 4 ದಿನಗಳಿಂದ ಮಳೆ ಪ್ರಾರಂಭವಾಗಿದ್ದು ಗದ್ದೆಗಳಲ್ಲಿ ನೀರು ತುಂಬಿದೆ. ಇದು ಏಣೇಲು ಭತ್ತದ ಗದ್ದೆಗಳಿಗೆ ಉತ್ತಮವಾಗಿದ್ದು, ಗದ್ದೆಗಳ ಕೆಲಸಗಳು ಭರದಿಂದ ಸಾಗುತ್ತಿದ್ದು ನೇಜಿ ನಾಟಿಯ ತಯಾರಿ ನಡೆದಿದೆ.

ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಕೊರತೆ ಇರುವುದರಿಂದ ಹೆಚ್ಚಿನ ಕೃಷಿಕರು ಅಗತ್ಯ ಕೆಲಸಗಳಿಗೆ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ. ಇದು ಕಡಿಮೆ ಖರ್ಚು ಹಾಗೂ ಕೆಲಸಗಳು ವೇಗವಾಗಿ ಸಾಗಲು ಸಹಕಾರಿಯಾಗಿದೆ. ಗದ್ದೆಗಳನ್ನು ಹದ ಮಾಡಲು ಟಿಲ್ಲರ್, ಟ್ರ್ಯಾಕ್ಟರ್ಗಳಿಗೆ ಬೇಡಿಕೆ ಹೆಚ್ಚಿದೆ. ಇದರ ಜತೆ ನೇಜಿ, ಬಿತ್ತನೆ ಬೀಜದ ಬೇಡಿಕೆ ಅಧಿಕಗೊಂಡಿದೆ. ಗದ್ದೆಗಳ ಬದು ಕಟ್ಟುವುದು, ಸಣ್ಣ ಪ್ರಮಾಣದ ಕಣಿಗಳನ್ನು ನಿರ್ಮಿಸುವುದು, ನೀರು ನಿಲ್ಲಿಸುವ, ಅಧಿಕ ನೀರನ್ನು ಹೊರ ಬಿಡುವ ಕೆಲಸಗಳನ್ನು ಕಾರ್ಮಿಕರಿಂದ ಮಾಡಿಸಲಾಗುತ್ತಿದೆ.

ಬೆಳ್ತಂಗಡಿ ತಾಲೂಕಿನಲ್ಲಿ 1600 ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಕಳೆದ 1580 ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿತ್ತು. ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ಕೊಕ್ಕಡ ವೇಣೂರು ಹೋಬಳಿಗಳಲ್ಲಿ ಎಂಒ-(4)- 40ಕ್ವಿಂ., ಬಿಳಿಜಯ-16ಕ್ವಿಂ., ಜ್ಯೋತಿ-12ಕ್ವಿಂ. ಬಿತ್ತನೆ ಬೀಜ ಸಹಾಯಧನದಲ್ಲಿ ಲಭ್ಯವಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಸಿಂಪಡಣೆಗೆ ಅನುಕೂಲ
ಜೂನ್ ತಿಂಗಳಲ್ಲಿ 10 ದಿನ ಮಳೆ ಬಿಟ್ಟು ಬಿಸಿಲಿನ ವಾತಾವರಣ ಮೂಡಿದ್ದು, ಅಡಕೆ ತೋಟಗಳಿಗೆ ಔಷಧ ಸಿಂಪಡಿಸುವ ಕೃಷಿಕರಿಗೆ ಹೆಚ್ಚಿನ ಅನುಕೂಲ ನೀಡಿತ್ತು. ಮೇ ತಿಂಗಳ ಕೊನೆಯ ವಾರದಲ್ಲಿ ವಿಪರೀತ ಮಳೆಯಿಂದ ಔಷಧ ಸಿಂಪಡಣೆಗೆ ಹೆಣಗಾಡುತ್ತಿದ್ದ ಅಡಕೆ ಕೃಷಿಕರಿಗೆ ಜೂನ್ ಮೊದಲ ವಾರ ಮಳೆಬಿಟ್ಟದ್ದು ಅನುಕೂಲವಾಯಿತು.

ಅರ್ಧಕ್ಕಿಂತ ಅಧಿಕ ತೋಟಗಳಲ್ಲಿ ಈಗಾಗಲೇ ಪ್ರಥಮ ಹಂತದ ಔಷಧ ಸಿಂಪಡಣೆ ಪೂರ್ಣಗೊಂಡಿದೆ. ಈ ಬಾರಿ ಉತ್ತಮ ಬೇಸಿಗೆ ಮಳೆಯಿಂದ ಅಡಕೆ ಬೇಗನೆ ಹಣ್ಣಾಗುವ ನಿರೀಕ್ಷೆ ಇದೆ. ನಳ್ಳಿ ಉದುರುವಿಕೆ ಕಡಿಮೆ ಇದ್ಧ ಕಾರಣ ಹಾಗೂ ನೀರಿನ ಕೊರತೆ ಕಂಡು ಬರದುದರಿಂದ ಹೆಚ್ಚಿನ ತೋಟಗಳಲ್ಲಿಉತ್ತಮ ಫಸಲು ಕಂಡು ಬರುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಕೃಷಿಕರು ಆಸಕ್ತರಾಗಿದ್ದಾರೆ. ನಾವು ಪ್ರತಿ ವರ್ಷ ನಮ್ಮ ಹಿರಿಯರಿಂದ ಬಂದ ಸುಮಾರು ಐದು ಎಕರೆ ಪ್ರದೇಶದಲ್ಲಿ ವರ್ಷಕ್ಕೆ ಎರಡು ಬಾರಿ ಗದ್ದೆ ಬೇಸಾಯ ಮಾಡುತ್ತಿದ್ದೇವೆ. ಏಣೇಲು ಬಿತ್ತನೆಯ ಪೂರ್ವ ತಯಾರಿ ಸಂಪೂರ್ಣಗೊಂಡಿದೆ ಎಂದಿದ್ದಾರೆ ರಮಾನಂದ ಶರ್ಮ, ಗದ್ದೆ ಕೃಷಿಕ, ಗುರಿಪಳ್ಳ, ನಡ.

ತಾಲೂಕಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಅಗತ್ಯ ಕೀಟನಾಶಕಗಳ ದಾಸ್ತಾನು ಸಾಕಷ್ಟು ಇದೆ. ಸಹಾಯಧನದಲ್ಲಿ ಬಿತ್ತನೆ ಬೀಜ ಲಭ್ಯವಿದ್ದು, ಆಸಕ್ತ ಕೃಷಿಕರು ಕಚೇರಿ ಸಮಯದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದಿದ್ದಾರೆ ವೀರಭದ್ರಪ್ಪ ಎ.ಡಿ., ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಬೆಳ್ತಂಗಡಿ.

The post ಮುಂಗಾರು ಮತ್ತೆ ಚುರುಕು: ದಕ್ಷಿಣ ಕನ್ನಡದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ appeared first on Good News 24x7.

]]>
ಬಾಲ್ಯವಿವಾಹವಾಯ್ತು, ಈಗ ಆರೋಗ್ಯ-ಕುಟುಂಬ ಅಭಿವೃದ್ಧಿ ಇಲಾಖೆಗೆ ಮತ್ತೊಂದು ಸಮಸ್ಯೆ..ಬಾಲ ಗರ್ಭಿಣಿಯರು! https://www.goodnews24x7.com/child-marriage-has-become-a-problem-now-the-health-and-family-development-department-has-another-problem-pregnant-children/ Sun, 15 Jun 2025 10:34:24 +0000 https://www.goodnews24x7.com/?p=4434 ಮೈಸೂರು :- ಬಾಲ್ಯವಿವಾಹ ಕಾನೂನುಬಾಹಿರ, ಬಾಲ್ಯವಿವಾಹ ಮಾಡಿದ ಬಾಲಕಿಯ ಪೋಷಕರು, ಬಾಲಕಿಯನ್ನು ವಿವಾಹವಾದ ವ್ಯಕ್ತಿ, ಆತನ ಪೋಷಕರು ಹಾಗೂ ಸಹಕರಿಸಿದ ಎಲ್ಲರಿಗೂ ಈಗ ಜೈಲು ಶಿಕ್ಷೆ ಗ್ಯಾರಂಟಿ. ಬಾಲ್ಯವಿವಾಹ ತಡೆಯಲು ಸರ್ಕಾ ರವು ಇಂತಹ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೊಳಿಸಿದೆ. ಅಲ್ಲದೆ ಬಾಲ್ಯವಿವಾಹ…

The post ಬಾಲ್ಯವಿವಾಹವಾಯ್ತು, ಈಗ ಆರೋಗ್ಯ-ಕುಟುಂಬ ಅಭಿವೃದ್ಧಿ ಇಲಾಖೆಗೆ ಮತ್ತೊಂದು ಸಮಸ್ಯೆ..ಬಾಲ ಗರ್ಭಿಣಿಯರು! appeared first on Good News 24x7.

]]>

ಮೈಸೂರು :- ಬಾಲ್ಯವಿವಾಹ ಕಾನೂನುಬಾಹಿರ, ಬಾಲ್ಯವಿವಾಹ ಮಾಡಿದ ಬಾಲಕಿಯ ಪೋಷಕರು, ಬಾಲಕಿಯನ್ನು ವಿವಾಹವಾದ ವ್ಯಕ್ತಿ, ಆತನ ಪೋಷಕರು ಹಾಗೂ ಸಹಕರಿಸಿದ ಎಲ್ಲರಿಗೂ ಈಗ ಜೈಲು ಶಿಕ್ಷೆ ಗ್ಯಾರಂಟಿ.

ಬಾಲ್ಯವಿವಾಹ ತಡೆಯಲು ಸರ್ಕಾ ರವು ಇಂತಹ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೊಳಿಸಿದೆ. ಅಲ್ಲದೆ ಬಾಲ್ಯವಿವಾಹ ತಡೆ ಬಗ್ಗೆ ಸತತವಾಗಿ ಜಾಗೃತಿ ಕಾರ್ಯ ಕ್ರಮಗಳನ್ನು ನಡೆಸುತ್ತಿದೆ. ಆದರೂ ಬಾಲ್ಯವಿವಾಹಗಳ ಸಂಖ್ಯೆಯಂತೂ ಕಡಿ ‘ ಗರ್ಭಿಣಿ’ ಪ್ರಕರಣಗಳೇ ಸಾಕ್ಷಿ.
ಮೈಸೂರು ಜಿಲ್ಲೆಯಲ್ಲಿ 1603 ಬಾಲ ಗರ್ಭಿಣಿಯರು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

 

 

 

 

 

 

 

 

 

ಮೈಸೂರು ಜಿಲ್ಲೆಯಲ್ಲಿ 14ರಿಂದ 15 ವರ್ಷಕ್ಕೊಳಪಟ್ಟ ಐವರು. 15ರಿಂದ 16 ವರ್ಷಕ್ಕೊಳಪಟ್ಟ 15, 16ರಿಂದ 17 ವರ್ಷಕ್ಕೊಳಪಟ್ಟ 23, 17ರಿಂದ 18 ವರ್ಷಕ್ಕೊಳಪಟ್ಟ 124 ಮತ್ತು 18 ರಿಂದ 19 ವರ್ಷಕ್ಕೊಳಪಟ್ಟ 1436 ಸೇರಿ ದಂತೆ ಒಟ್ಟು 1603 ಬಾಲಗರ್ಭಿಣಿ ಯರು ಇರುವುದು ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಅಂಕಿ-ಅಂಶ ತಿಳಿಸಿದೆ.

ಹಾಸನ ಜಿಲ್ಲೆಯಲ್ಲಿ 14ರಿಂದ 15, ವರ್ಷಕ್ಕೊಳಪಟ್ಟ ಇಬ್ಬರು, 15ರಿಂದ 16 ವರ್ಷಕ್ಕೊಳಪಟ್ಟ 7, 16ರಿಂದ 17 ವರ್ಷ ಕ್ಕೊಳಪಟ್ಟ 18, 17ರಿಂದ 18 ವರ್ಷಕ್ಕೊಳ ಪಟ್ಟ 136, 18ರಿಂದ 19 ವರ್ಷಕ್ಕೊಳಪಟ್ಟ 924 ಸೇರಿದಂತೆ 1087 ಬಾಲಗರ್ಭಿಣಿ ಯರಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ 15ರಿಂದ 16 ವರ್ಷಕ್ಕೊಳಪಟ್ಟ ನಾಲ್ವರು, 16ರಿಂದ 17 ವರ್ಷಕ್ಕೊಳ ಪಟ್ಟ 23, 17ರಿಂದ 18 ವರ್ಷಕ್ಕೊಳಪಟ್ಟ 107, 18ರಿಂದ 19 ವರ್ಷಕ್ಕೊಳಪಟ್ಟ 814 ಸೇರಿದಂತೆ 948 ಬಾಲಗರ್ಭಿಣಿಯರಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 14ರಿಂದ 15 ವರ್ಷ ಕ್ಕೊಳಪಟ್ಟ ಓರ್ವ, 15ರಿಂದ 16 ವರ್ಷ ಕ್ಕೊಳಪಟ್ಟ 11, 16ರಿಂದ 17 ವರ್ಷಕ್ಕೊಳ ಪಟ್ಟ 10, 17ರಿಂದ 18 ವರ್ಷಕ್ಕೊಳಪಟ್ಟ 79, 18ರಿಂದ 19 ವರ್ಷಕ್ಕೊಳಪಟ್ಟ 318 ಸೇರಿದಂತೆ 424 ಬಾಲಗರ್ಭಿಣಿಯರಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ 14 ರಿಂದ 15 ವರ್ಷಕ್ಕೊಳಪಟ್ಟ ಓರ್ವ, 15ರಿಂದ 16 ವರ್ಷಕ್ಕೊಳಪಟ್ಟ ಓರ್ವ, 16ರಿಂದ 17 ವರ್ಷಕ್ಕೊಳ ಪಟ್ಟ 9, 17ರಿಂದ 18 ವರ್ಷಕ್ಕೊಳಪಟ್ಟ 25, 18ರಿಂದ 19 ವರ್ಷಕ್ಕೊಳಪಟ್ಟ 380 ಸೇರಿದಂತೆ 416 ಬಾಲ ಗರ್ಭಿಣಿಯರಿದ್ದಾರೆ.

 

 

 

 

 

 

 

 

ಬಾಲಕಿಯರು ಗರ್ಭಿಣಿಯಾದಾಗ ಅನ್ಯಮಾರ್ಗವಿಲ್ಲದೆ ಆಸ್ಪತ್ರೆಗಳಿಗೆ ಬರುವು ದರಿಂದ ಆರೋಗ್ಯ ಇಲಾಖೆ ಗಮನಕ್ಕೆ ಈ ಪ್ರಕರಣಗಳು ಸಹಜವಾಗಿ ಬರುತ್ತಿವೆ. ಸದರಿ ಇಲಾಖೆಯು ಬಾಲಗರ್ಭಿಣಿ ಯರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಮಾಹಿತಿಯನ್ನಷ್ಟೇ ಪೊಲೀಸ್ ಇಲಾಖೆಗೆ ರವಾನಿಸುತ್ತದೆ. ಆದರೆ ಅಪ್ರಾಪ್ತ ವಯಸ್ಸಿ ನಲ್ಲಿ ಗರ್ಭ ಧರಿಸುವ ಬಾಲಕಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆಯು ಬಾಲಗರ್ಭಿಣಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರಿಗೆ ಹೆರಿಗೆಯಾಗುವವರೆಗೂ ಅಗತ್ಯವಿರುವ ಎಲ್ಲಾ ರೀತಿಯ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲೆಯ ಯಾವುದೇ ಆಸ್ಪತ್ರೆಗೆ ಬಾಲಗರ್ಭಿಣಿಯರು ಬಂದರೆ, ಅವರನ್ನು ಮಕ್ಕಳ ಆಸ್ಪತ್ರೆಯಾದ ಚೆಲುವಾಂಬ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಜೊತೆಗೆ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ಮಾಹಿತಿ ನೀಡಲಾಗುತ್ತದೆ.

 

 

 

 

 

 

 

 

 

ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳು ಬಾಲ ಗರ್ಭಿಣಿಯರಿಂದ ಮಾಹಿತಿ ಪಡೆಯುವು ದಲ್ಲದೇ ಮುಂದಿನ ಕ್ರಮ ವಹಿಸುತ್ತಾರೆ. ಹೆಚ್.ಡಿ.ಕೋಟೆ, ಹುಣಸೂರು ಮುಂತಾದ ತಾಲೂಕುಗಳಲ್ಲಿರುವ ಹಾಡಿಗಳಲ್ಲಿ ಹೆಚ್ಚಿನ ಬಾಲ್ಯವಿವಾಹಗಳು ನಡೆಯುತ್ತವೆ. ಅವರ ಸಂಪ್ರದಾಯದಂತೆ ಚಿಕ್ಕ ವಯಸ್ಸಿನಲ್ಲೇ ರಕ್ತ ಸಂಬಂಧದಲ್ಲೇ ಮದುವೆ ಮಾಡು ವುದು ವಾಡಿಕೆಯಾಗಿ ಬಂದಿದೆ. ಬಾಲ್ಯ ವಿವಾಹ ನಡೆಯುವುದು ಮುಂಚಿತವಾಗಿ ಗೊತ್ತಾದರೆ ಸಂಬಂಧಪಟ್ಟ ಇಲಾಖೆ ಅದನ್ನು ತಡೆಯುತ್ತದೆ. ಆದರೆ ಬಹುತೇಕ ಪ್ರಕರಣಗಳು ಗೊತ್ತಾಗುವುದೇ ಇಲ್ಲ. ಬಾಲಕಿಯರು ಗರ್ಭಿಣಿಯರಾಗಿ ಆಸ್ಪತ್ರೆಗೆ ಬಂದಾಗಲಷ್ಟೇ ಗೊತ್ತಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

 

 

 

 

 

 

 

 

 

ಆರೋಗ್ಯ ಇಲಾಖೆಯು ಬಾಲ ಗರ್ಭಿಣಿಯರಿಗೆ ಅತ್ಯಾವಶ್ಯಕ ಆರೋಗ್ಯ ಸೇವೆ ನೀಡುವುದರತ್ತ ವಿಶೇಷ ಗಮನ ಹರಿಸುತ್ತದೆ. ಕೆಲವು ಹಳ್ಳಿಗಳಲ್ಲಿ ಬಾಲ್ಯ ವಿವಾಹ ನಡೆಯುವುದು ಗೊತ್ತಾದರೂ ಯಾರೂ ಸಂಬಂಧಪಟ್ಟ ಇಲಾಖೆಗೆ ತಿಳಿಸುವುದಿಲ್ಲ. ಬಾಲಗರ್ಭಿಣಿಯರು ಆಸ್ಪತ್ರೆಗೆ ಬಂದಾಗ ಆರೋಗ್ಯ ಇಲಾಖೆ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸು ವುದೇ ಪ್ರಥಮ ಮಾಹಿತಿಯಾಗಿರುತ್ತದೆ ಎಂದು ತಿಳಿಸಿದ ಈ ಅಧಿಕಾರಿಯು, ಬಾಲ್ಯ ವಿವಾಹವಾಗಿ ಬಾಲಕಿ 20 ವರ್ಷ ಆಗು ವವರೆಗೂ ಗರ್ಭಿಣಿಯಾಗದಿದ್ದರೆ ಆರೋಗ್ಯ ಇಲಾಖೆ ಗಮನಕ್ಕೂ ಕೂಡ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಲಭ್ಯವಾಗುವುದಿಲ್ಲ. ಕೆಲವು ವಿದ್ಯಾವಂತ ಹಾಗೂ ಶ್ರೀಮಂತ ಮನೆತನ ಗಳಲ್ಲೇ ಬಾಲ್ಯವಿವಾಹಗಳು ನಡೆಯುತ್ತಿವೆ ಎಂದರು. ಈ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ತಡೆಯುವ ಸಲುವಾಗಿ ಆರೋಗ್ಯ ಇಲಾಖೆ ಮಾತ್ರವಲ್ಲದೇ, ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆಯೂ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸು ತ್ತಿದ್ದರೂ ಬಾಲ್ಯ ವಿವಾಹ ನಡೆಯುತ್ತಲೇ ಇದೆ ಎಂದು ಅವರು ಹೇಳಿದರು.

The post ಬಾಲ್ಯವಿವಾಹವಾಯ್ತು, ಈಗ ಆರೋಗ್ಯ-ಕುಟುಂಬ ಅಭಿವೃದ್ಧಿ ಇಲಾಖೆಗೆ ಮತ್ತೊಂದು ಸಮಸ್ಯೆ..ಬಾಲ ಗರ್ಭಿಣಿಯರು! appeared first on Good News 24x7.

]]>