election Archives - Good News 24x7 https://www.goodnews24x7.com/tag/election/ Kannada Wed, 26 Aug 2026 11:41:51 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg election Archives - Good News 24x7 https://www.goodnews24x7.com/tag/election/ 32 32 ಕೇಂದ್ರ ಸಚಿವ ಸಂಪುಟ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಪುನರ್‌ರಚನೆ: ಫಡ್ನವೀಸ್ ಸೇರಿದಂತೆ ನಾಲ್ವರು ಸಿಎಂಗಳಿಗೆ ಉನ್ನತ ಸ್ಥಾನ ಸಾಧ್ಯತೆ https://www.goodnews24x7.com/union-cabinet-and-bjp-parliamentary-board-reshuffle-four-cms-including-fadnavis-likely-to-get-top-posts/ Wed, 26 Aug 2026 11:41:51 +0000 https://www.goodnews24x7.com/?p=9922 ಮುಂಬರುವ 2027-28ರ ರಾಜ್ಯ ವಿಧಾನಸಭಾ ಚುನಾವಣೆಗಳು ಹಾಗೂ 2029ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸಚಿವ ಸಂಪುಟ ಮತ್ತು ಬಿಜೆಪಿಯ 12 ಸದಸ್ಯರ ಸಂಸದೀಯ ಮಂಡಳಿಯನ್ನು ಶೀಘ್ರದಲ್ಲೇ ಪುನರ್‌ರಚಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಈ ಉನ್ನತ ಮಟ್ಟದ ಬದಲಾವಣೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ…

The post ಕೇಂದ್ರ ಸಚಿವ ಸಂಪುಟ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಪುನರ್‌ರಚನೆ: ಫಡ್ನವೀಸ್ ಸೇರಿದಂತೆ ನಾಲ್ವರು ಸಿಎಂಗಳಿಗೆ ಉನ್ನತ ಸ್ಥಾನ ಸಾಧ್ಯತೆ appeared first on Good News 24x7.

]]>

ಮುಂಬರುವ 2027-28ರ ರಾಜ್ಯ ವಿಧಾನಸಭಾ ಚುನಾವಣೆಗಳು ಹಾಗೂ 2029ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸಚಿವ ಸಂಪುಟ ಮತ್ತು ಬಿಜೆಪಿಯ 12 ಸದಸ್ಯರ ಸಂಸದೀಯ ಮಂಡಳಿಯನ್ನು ಶೀಘ್ರದಲ್ಲೇ ಪುನರ್‌ರಚಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಈ ಉನ್ನತ ಮಟ್ಟದ ಬದಲಾವಣೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಪಶ್ಚಿಮ ಬಂಗಾಳದ ನಾಯಕ ಸುವೇಂದು ಅಧಿಕಾರಿ ಅವರಿಗೆ ಮಂಡಳಿಯಲ್ಲಿ ಸ್ಥಾನ ಲಭಿಸುವ ನಿರೀಕ್ಷೆಯಿದೆ.

ಸಂಸ್ಥೆಯ ಹೊಸ ಜವಾಬ್ದಾರಿ ವಹಿಸಿಕೊಂಡಿರುವ ಹಾಗೂ ರಾಜ್ಯಸಭಾ ಅವಧಿ ಪೂರ್ಣಗೊಳಿಸಲಿರುವ ಹಾಲಿ ಸಚಿವರಿಗೆ ಸಂಪುಟದಿಂದ ಕೋಕ್ ನೀಡಿ, ಯುವ ಹಾಗೂ ಹೊಸ ಮುಖಗಳಿಗೆ ಆದ್ಯತೆ ನೀಡಲಾಗುತ್ತದೆ. ದಕ್ಷಿಣ ಭಾರತದ ಪ್ರಾತಿನಿಧ್ಯಕ್ಕೂ ಆದ್ಯತೆ ನೀಡುವ ಸಾಧ್ಯತೆಯಿದ್ದು, ಮಾಜಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಮಂಡಳಿಯಿಂದ ಕೈಬಿಡುವ ಚರ್ಚೆಗಳು ನಡೆಯುತ್ತಿವೆ. ಆರ್‌ಎಸ್‌ಎಸ್ ಬೆಂಬಲ ಹೊಂದಿರುವ ದೇವೇಂದ್ರ ಫಡ್ನವೀಸ್ ಅವರ ಪ್ರವೇಶವು ಬಿಜೆಪಿಯ ಭವಿಷ್ಯದ ನಾಯಕತ್ವದ ದೃಷ್ಟಿಯಿಂದ ಅತ್ಯಂತ ಮಹತ್ವದ ರಾಜಕೀಯ ಸ್ಥಿತ್ಯಂತರಕ್ಕೆ ನಾಂದಿ ಹಾಡಲಿದೆ ಎಂದು ವಿಶ್ಲೇಷಿಸಲಾಗಿದೆ.

The post ಕೇಂದ್ರ ಸಚಿವ ಸಂಪುಟ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಪುನರ್‌ರಚನೆ: ಫಡ್ನವೀಸ್ ಸೇರಿದಂತೆ ನಾಲ್ವರು ಸಿಎಂಗಳಿಗೆ ಉನ್ನತ ಸ್ಥಾನ ಸಾಧ್ಯತೆ appeared first on Good News 24x7.

]]>
SIRಗೆ ಕೌಂಟರ್ ಕೊಡುತ್ತಾ ಗೃಹ ಜ್ಯೋತಿ ಪರಿಶೀಲನೆ? https://www.goodnews24x7.com/giving-counter-to-sir-griha-jyoti-verification/ Wed, 01 Jul 2026 06:07:14 +0000 https://www.goodnews24x7.com/?p=9714 ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಂದ ಎಪಿಕ್ ಕಾರ್ಡ್ ಹಾಗೂ ಜಾತಿ ವಿವರ ಸಂಗ್ರಹಿಸಲು ಸರ್ಕಾರ ಮುಂದಾಗಿದ್ದು, ಇದು ಚುನಾವಣಾ ಆಯೋಗ ನಡೆಸುತ್ತಿರುವ ‘ಎಸ್‌ಐಆರ್’ ಪ್ರಕ್ರಿಯೆಗೆ ಕೌಂಟರ್ ಕೊಡುವ ತಂತ್ರವೇ ಎಂಬ ಬಲವಾದ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಹಾಗಾದರೆ, ಈ ಕ್ರಮದಿಂದ…

The post SIRಗೆ ಕೌಂಟರ್ ಕೊಡುತ್ತಾ ಗೃಹ ಜ್ಯೋತಿ ಪರಿಶೀಲನೆ? appeared first on Good News 24x7.

]]>

ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಂದ ಎಪಿಕ್ ಕಾರ್ಡ್ ಹಾಗೂ ಜಾತಿ ವಿವರ ಸಂಗ್ರಹಿಸಲು ಸರ್ಕಾರ ಮುಂದಾಗಿದ್ದು, ಇದು ಚುನಾವಣಾ ಆಯೋಗ ನಡೆಸುತ್ತಿರುವ ‘ಎಸ್‌ಐಆರ್’ ಪ್ರಕ್ರಿಯೆಗೆ ಕೌಂಟರ್ ಕೊಡುವ ತಂತ್ರವೇ ಎಂಬ ಬಲವಾದ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಹಾಗಾದರೆ, ಈ ಕ್ರಮದಿಂದ ಸರ್ಕಾರಕ್ಕೆ ಏನು ಲಾಭ? ಇಲ್ಲಿದೆ ವಿವರ.

SIRಗೆ ಕೌಂಟರ್ ಕೊಡುತ್ತಾ ಗೃಹ ಜ್ಯೋತಿ ಪರಿಶೀಲನೆ? ಬಲವಾಯ್ತು ಅನುಮಾನ, ಕಾರಣ ಇಲ್ಲಿದೆ

ಗೃಹ ಜ್ಯೋತಿಗೆ ವೋಟರ್ ಐಡಿ ಕಡ್ಡಾಯ
ಫಲಾನುಭವಿಗಳ ಜಾತಿ ವಿವರ ಸಂಗ್ರಹ
ಐಟಿ ಪಾವತಿದಾರರಿಗೆ ಯೋಜನೆ ಕಟ್

ಜುಲೈ 1,ಬೆಂಗಳೂರು: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದ ಮಹತ್ವಾಕಾಂಕ್ಷೆಯ ಉಚಿತ ವಿದ್ಯುತ್ ಯೋಜನೆ ‘ಗೃಹ ಜ್ಯೋತಿ’ ಫಲಾನುಭವಿಗಳ ಮನೆ ಬಾಗಿಲಿಗೆ ಎಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗುತ್ತಿದೆ. ಇದರ ಬೆನ್ನಲ್ಲೇ ಹೊಸದೊಂದು ರಾಜಕೀಯ ಹಾಗೂ ಸಾಮಾಜಿಕ ಚರ್ಚೆ ಮುನ್ನೆಲೆಗೆ ಬಂದಿದೆ. ಯಾವುದೇ ಸರ್ಕಾರಿ ಯೋಜನೆಗೆ ಕಡ್ಡಾಯವಲ್ಲದ ಎಪಿಕ್ (EPIC) ಕಾರ್ಡ್ ಅಥವಾ ವೋಟರ್ ಐಡಿಯನ್ನು ಈಗ ಗೃಹ ಜ್ಯೋತಿ ಯೋಜನೆಗೆ ಕಡ್ಡಾಯಗೊಳಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇದರೊಂದಿಗೆ ಫಲಾನುಭವಿಗಳ ಜಾತಿ ಹಾಗೂ ಪ್ರವರ್ಗಗಳ (ಎಸ್‌ಸಿ, ಎಸ್‌ಟಿ, ಓಬಿಸಿ, ಅಲ್ಪಸಂಖ್ಯಾತ) ವಿವರಗಳನ್ನೂ ಅಪ್‌ಡೇಟ್ ಮಾಡಲಾಗುತ್ತಿದ್ದು, ಸರ್ಕಾರ ಪರೋಕ್ಷವಾಗಿ ಮತದಾರರ ಇಂಚಿಂಚೂ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಮತದಾರರ ಅಧಿಕೃತ ದತ್ತಾಂಶ ಕ್ರೂಢೀಕರಣ ತಂತ್ರವೇ?

ಚುನಾವಣಾ ಆಯೋಗದ ಬಳಿ ಇರುವ ಮತದಾರರ ಅಧಿಕೃತ ದತ್ತಾಂಶವನ್ನು ತಾನೂ ಕ್ರೋಢೀಕರಿಸಿಕೊಳ್ಳಲು ಸರ್ಕಾರ ಈ ಹೊಸ ಮಾರ್ಗವನ್ನು ಕಂಡುಕೊಂಡಿದೆ ಎನ್ನಲಾಗುತ್ತಿದೆ. ಇದರ ಮೂಲಕ ಕರ್ನಾಟಕದ ನೈಜ ಮತದಾರರು ಎಷ್ಟು ಎಂಬ ಅಧಿಕೃತ ವಿವರ ಸರ್ಕಾರದ ಕೈಸೇರಲಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕರಣೆಯ ಕಟ್ಟುನಿಟ್ಟಿನ ‘ಎಸ್‌ಐಆರ್’ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ನಡೆಯುತ್ತಿದೆ. ಈ ಪರಿಷ್ಕರಣೆ ವೇಳೆ ಯಾವುದೇ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಸಾರ್ವಜನಿಕರೇ ಎಚ್ಚೆತ್ತುಕೊಳ್ಳಲಿ ಮತ್ತು ಯೋಜನೆಯ ಲಾಭ ಪಡೆಯುವವರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗಲಿ ಎಂಬ ಗುಪ್ತ ಯೋಜನೆ ಇದರ ಹಿಂದಿದೆ ಎನ್ನಲಾಗಿದೆ.

ಹೊರ ರಾಜ್ಯದವರಿಗೆ ಸಿಗಲ್ಲ ಗ್ಯಾರಂಟಿ

ಈ ಸಮೀಕ್ಷೆಯಿಂದಾಗಿ ಕರ್ನಾಟಕದ ಮೂಲ ಮತದಾರರಲ್ಲದವರು ಮತ್ತು ಹೊರರಾಜ್ಯದವರು ಯೋಜನೆಯಿಂದ ಹೊರಗುಳಿಯಲಿದ್ದಾರೆ. ಇದರ ಜೊತೆಗೆ, ಆದಾಯ ತೆರಿಗೆ (ಐಟಿ) ಪಾವತಿಸುತ್ತಿರುವ ಶ್ರೀಮಂತ ವರ್ಗದವರನ್ನು ಪತ್ತೆ ಹಚ್ಚಿ ಅವರಿಗೆ ಗೃಹ ಜ್ಯೋತಿ ಯೋಜನೆಯಿಂದ ಕೊಕ್ ನೀಡಲು ಸರ್ಕಾರ ಈ ಪರಿಶೀಲನೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಉಚಿತ ವಿದ್ಯುತ್ ನೆಪದಲ್ಲಿ ನಡೆಯುತ್ತಿರುವ ಈ ಹಠಾತ್ ಜಾತಿವಾರು ಮತ್ತು ವೋಟರ್ ಐಡಿ ಮಾಹಿತಿ ಸಂಗ್ರಹ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಮುಂದಿನ ದಿನಗಳಲ್ಲಿ ದೊಡ್ಡ ರಾಜಕೀಯ ಬಿರುಗಾಳಿ ಎಬ್ಬಿಸುವ ಮುನ್ಸೂಚನೆ ನೀಡಿದೆ.

The post SIRಗೆ ಕೌಂಟರ್ ಕೊಡುತ್ತಾ ಗೃಹ ಜ್ಯೋತಿ ಪರಿಶೀಲನೆ? appeared first on Good News 24x7.

]]>
“ದನ ಕೊಂದವರು ಜೈಲಿಗೆ, ಮನುಷ್ಯರನ್ನು ಕೊಂದವರು ಪ್ರಧಾನಿ, ಸಿಎಂಗಳಾಗುತ್ತಾರೆ”: ಬಿ.ಕೆ. ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ https://www.goodnews24x7.com/those-who-kill-cows-go-to-jail-those-who-kill-humans-become-pms-and-cms-b-k-hariprasads-controversial-statement/ Mon, 29 Jun 2026 11:54:58 +0000 https://www.goodnews24x7.com/?p=9705 ಮೈಸೂರು :ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಯೊಂದು ಈಗ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ‘ನಿಮ್ಮೊಂದಿಗೆ ಕಾಂಗ್ರೆಸ್: ನಿಮ್ಮ ಮತವನ್ನು ರಕ್ಷಿಸುವ ಕಡೆಗೆ’ ಎಂಬ…

The post “ದನ ಕೊಂದವರು ಜೈಲಿಗೆ, ಮನುಷ್ಯರನ್ನು ಕೊಂದವರು ಪ್ರಧಾನಿ, ಸಿಎಂಗಳಾಗುತ್ತಾರೆ”: ಬಿ.ಕೆ. ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ appeared first on Good News 24x7.

]]>

ಮೈಸೂರು :ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಯೊಂದು ಈಗ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ‘ನಿಮ್ಮೊಂದಿಗೆ ಕಾಂಗ್ರೆಸ್: ನಿಮ್ಮ ಮತವನ್ನು ರಕ್ಷಿಸುವ ಕಡೆಗೆ’ ಎಂಬ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇಂದಿನ ದಿನಗಳಲ್ಲಿ ದನಗಳನ್ನು ಕೊಂದವರು ಜೈಲಿಗೆ ಹೋಗುತ್ತಾರೆ, ಆದರೆ ಮನುಷ್ಯರನ್ನು ಕೊಂದವರು ದೇಶದ ಪ್ರಧಾನಿ ಮತ್ತು ಮುಖ್ಯಮಂತ್ರಿಗಳಾಗುತ್ತಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ನಾವು ಸದ್ಯ ಮಹಾತ್ಮ ಗಾಂಧೀಜಿಯವರ ಅಹಿಂಸಾ ರಾಜಕೀಯವನ್ನು ಒಪ್ಪಬೇಕೋ ಅಥವಾ ಅವರನ್ನು ಕೊಂದ ಗೋಡ್ಸೆಯ ಹಿಂಸಾತ್ಮಕ ರಾಜಕೀಯವನ್ನು ಅಳವಡಿಸಿಕೊಳ್ಳಬೇಕೋ ಎಂಬುದನ್ನು ನಿರ್ಧರಿಸುವ ನಿರ್ಣಾಯಕ ಘಟ್ಟದಲ್ಲಿದ್ದೇವೆ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರ ಬಗ್ಗೆ ಸಾರ್ವಜನಿಕರು ಮತ್ತು ಕಾರ್ಯಕರ್ತರು ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದ ಹರಿಪ್ರಸಾದ್, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆಗಳಿಗೆ ದೇಶದ ಸಂವಿಧಾನ ಮತ್ತು ತ್ರಿವರ್ಣ ಧ್ವಜದ ಮೇಲೆ ನಂಬಿಕೆಯಾಗಲಿ, ಗೌರವವಾಗಲಿ ಇಲ್ಲ ಎಂದು ಟೀಕಿಸಿದರು. ಇದೇ ವೇಳೆ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (SIR) ಪ್ರಸ್ತಾಪಿಸಿದ ಅವರು, ಆಡಳಿತ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ತಮಗೆ ಬೇಡದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಸಂಚು ರೂಪಿಸುತ್ತಿವೆ ಎಂದು ದೂರಿದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಳಮಟ್ಟದಲ್ಲಿ ಸಕ್ರಿಯರಾಗಿ, ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷಗಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

The post “ದನ ಕೊಂದವರು ಜೈಲಿಗೆ, ಮನುಷ್ಯರನ್ನು ಕೊಂದವರು ಪ್ರಧಾನಿ, ಸಿಎಂಗಳಾಗುತ್ತಾರೆ”: ಬಿ.ಕೆ. ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ appeared first on Good News 24x7.

]]>
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕ್ರಾಂತಿ: ಮನೆಕೆಲಸದಾಕೆಯಿಂದ ಶಾಸಕಿಯವರೆಗೆ ಕಲಿತಾ ಮಾಝಿ ಸಾಧನೆ https://www.goodnews24x7.com/political-revolution-in-west-bengal-from-housemaid-to-mla-kalita-majhis-achievement%e0%b2%aa%e0%b2%b6%e0%b3%8d%e0%b2%9a%e0%b2%bf%e0%b2%ae-%e0%b2%ac%e0%b2%82%e0%b2%97%e0%b2%be%e0%b2%b3%e0%b2%a6/ Tue, 05 May 2026 10:04:00 +0000 https://www.goodnews24x7.com/?p=9491 ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯು ಭಾರತೀಯ ರಾಜಕೀಯ ಇತಿಹಾಸದಲ್ಲೇ ಒಂದು ಸುವರ್ಣ ಅಧ್ಯಾಯ ಬರೆದಿದೆ. 15 ವರ್ಷಗಳ ತೃಣಮೂಲ ಕಾಂಗ್ರೆಸ್ (TMC) ಆಳ್ವಿಕೆಯನ್ನು ಅಂತ್ಯಗೊಳಿಸಿ, 294 ಕ್ಷೇತ್ರಗಳ ಪೈಕಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಐತಿಹಾಸಿಕ ಬಹುಮತ ಸಾಧಿಸಿದೆ.…

The post ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕ್ರಾಂತಿ: ಮನೆಕೆಲಸದಾಕೆಯಿಂದ ಶಾಸಕಿಯವರೆಗೆ ಕಲಿತಾ ಮಾಝಿ ಸಾಧನೆ appeared first on Good News 24x7.

]]>

ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯು ಭಾರತೀಯ ರಾಜಕೀಯ ಇತಿಹಾಸದಲ್ಲೇ ಒಂದು ಸುವರ್ಣ ಅಧ್ಯಾಯ ಬರೆದಿದೆ. 15 ವರ್ಷಗಳ ತೃಣಮೂಲ ಕಾಂಗ್ರೆಸ್ (TMC) ಆಳ್ವಿಕೆಯನ್ನು ಅಂತ್ಯಗೊಳಿಸಿ, 294 ಕ್ಷೇತ್ರಗಳ ಪೈಕಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಐತಿಹಾಸಿಕ ಬಹುಮತ ಸಾಧಿಸಿದೆ. ಈ ಬೃಹತ್ ಗೆಲುವಿನ ನಡುವೆ ಎಲ್ಲರ ಗಮನ ಸೆಳೆದಿರುವುದು ಆಸ್ಗ್ರಾಮ್ ಕ್ಷೇತ್ರದ ನೂತನ ಶಾಸಕಿ ಕಲಿತಾ ಮಾಝಿ. ಕೇವಲ ₹2,500 ಮಾಸಿಕ ವೇತನಕ್ಕೆ ನಾಲ್ಕು ಮನೆಗಳಲ್ಲಿ ಪಾತ್ರೆ ತೊಳೆದು ಜೀವನ ಸಾಗಿಸುತ್ತಿದ್ದ ಇವರು, ಇಂದು ಜನಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.

ಕಳೆದ 2021ರ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋತಿದ್ದರೂ ಎದೆಗುಂದದ ಕಲಿತಾ ಮಾಝಿ ಅವರಿಗೆ ಬಿಜೆಪಿ ಹೈಕಮಾಂಡ್ ಮತ್ತೊಮ್ಮೆ ಮಣೆ ಹಾಕಿತ್ತು. ಸಾಮಾನ್ಯ ಕಾರ್ಯಕರ್ತರಿಗೆ ಮನ್ನಣೆ ನೀಡುವ ಪಕ್ಷದ ತಂತ್ರಗಾರಿಕೆಗೆ ಸಾಕ್ಷಿಯಾಗಿ, ಮಾಝಿ ಅವರು ತಮ್ಮ ಪ್ರತಿಸ್ಪರ್ಧಿ ಶ್ಯಾಮ ಪ್ರಸನ್ನ ಲೋಹರ್ ಅವರನ್ನು 12,535 ಮತಗಳ ಭರ್ಜರಿ ಅಂತರದಿಂದ ಮಣ್ಣು ಮುಕ್ಕಿಸಿದ್ದಾರೆ. 1972ರ ನಂತರ ಮೊದಲ ಬಾರಿಗೆ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ ಬಿಜೆಪಿ ಪಾಳಯದಲ್ಲಿ ಮಾಝಿ ಅವರ ಗೆಲುವು “ಸಾಮಾನ್ಯ ಜನರ ಗೆಲುವು” ಎಂದು ಬಣ್ಣಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು “ಬಂಗಾಳದಲ್ಲಿ ಕಮಲ ಅರಳಿದೆ” ಎಂದು ಹೇಳುವ ಮೂಲಕ ಈ ಬದಲಾವಣೆಯನ್ನು ಸ್ವಾಗತಿಸಿದ್ದು, ಇದು ಕೇವಲ ಅಧಿಕಾರ ಬದಲಾವಣೆಯಲ್ಲ, ರಾಜ್ಯದ ರಾಜಕೀಯ ದಿಕ್ಕನ್ನೇ ಬದಲಿಸಿದ ಮಹತ್ವದ ತಿರುವು ಎನ್ನಲಾಗಿದೆ.

The post ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕ್ರಾಂತಿ: ಮನೆಕೆಲಸದಾಕೆಯಿಂದ ಶಾಸಕಿಯವರೆಗೆ ಕಲಿತಾ ಮಾಝಿ ಸಾಧನೆ appeared first on Good News 24x7.

]]>
ಪಶ್ಚಿಮ ಬಂಗಾಳದಲ್ಲಿ 100 ಕಚ್ಚಾ ಬಾಂಬ್‌ ಪತ್ತೆ: ಎನ್‌ಐಎ ತನಿಖೆಗೆ ಚುನಾವಣಾ ಆಯೋಗ ಆದೇಶ. https://www.goodnews24x7.com/100-crude-bombs-found-in-west-bengal-election-commission-orders-nia-investigation/ Mon, 27 Apr 2026 10:49:02 +0000 https://www.goodnews24x7.com/?p=9422 ಪಶ್ಚಿಮ ಬಂಗಾಳದ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ಭಾರಿ ಪ್ರಮಾಣದ ಕಚ್ಚಾ ಬಾಂಬ್‌ಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ್ ಎಂಬಲ್ಲಿ ತೃಣಮೂಲ ಕಾಂಗ್ರೆಸ್‌ ಜತೆ ಸಂಬಂಧ ಹೊಂದಿರುವ ವ್ಯಕ್ತಿಯ ಮನೆಯಲ್ಲಿ ಸುಮಾರು…

The post ಪಶ್ಚಿಮ ಬಂಗಾಳದಲ್ಲಿ 100 ಕಚ್ಚಾ ಬಾಂಬ್‌ ಪತ್ತೆ: ಎನ್‌ಐಎ ತನಿಖೆಗೆ ಚುನಾವಣಾ ಆಯೋಗ ಆದೇಶ. appeared first on Good News 24x7.

]]>

ಪಶ್ಚಿಮ ಬಂಗಾಳದ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ಭಾರಿ ಪ್ರಮಾಣದ ಕಚ್ಚಾ ಬಾಂಬ್‌ಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ್ ಎಂಬಲ್ಲಿ ತೃಣಮೂಲ ಕಾಂಗ್ರೆಸ್‌ ಜತೆ ಸಂಬಂಧ ಹೊಂದಿರುವ ವ್ಯಕ್ತಿಯ ಮನೆಯಲ್ಲಿ ಸುಮಾರು 100 ಕಚ್ಚಾ ಬಾಂಬ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಚುನಾವಣಾ ಆಯೋಗವು, ರಾಜ್ಯದಲ್ಲಿ ಪತ್ತೆಯಾಗಿರುವ ಎಲ್ಲ ಸ್ಫೋಟಕ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸುವಂತೆ ಆದೇಶಿಸಿದೆ.

ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ:
ರಾಜ್ಯದಲ್ಲಿ ಶಾಂತಿಯುತ ಚುನಾವಣೆ ನಡೆಸಲು ಮುಂದಾಗಿರುವ ಆಯೋಗವು, ಸ್ಫೋಟಕ ತಯಾರಿಕೆಯಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ ಬಂಧಿಸಲು ವಿಶೇಷ ಕಾರ್ಯಾಚರಣೆ ನಡೆಸುವಂತೆ ರಾಜ್ಯ ಪೊಲೀಸರಿಗೆ ಸೂಚಿಸಿದೆ. ಒಂದು ವೇಳೆ ಯಾವುದೇ ವ್ಯಾಪ್ತಿಯಲ್ಲಿ ಸ್ಫೋಟಕಗಳು ಪತ್ತೆಯಾದರೂ ಅಥವಾ ಮತದಾರರಿಗೆ ಬೆದರಿಕೆ ಹಾಕುವ ಘಟನೆಗಳು ನಡೆದರೆ, ಸಂಬಂಧಪಟ್ಟ ಪೊಲೀಸ್ ಕಮಿಷನರ್ ಮತ್ತು ಸ್ಥಳೀಯ ಠಾಣಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಚುನಾವಣಾ ಭದ್ರತೆ ಮತ್ತು ಮತದಾನ:
ಮತದಾರರು ಯಾವುದೇ ಭಯವಿಲ್ಲದೆ ಮತ ಚಲಾಯಿಸಲು ಅನುಕೂಲವಾಗುವಂತೆ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಬಿಗಿ ಕಣ್ಗಾವಲು ವಹಿಸಲಾಗಿದೆ. ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಈಗಾಗಲೇ ಮುಗಿದಿದ್ದು, ಏಪ್ರಿಲ್ 29ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಬಾಂಬ್ ಪತ್ತೆಯಾದ ಭಾಂಗರ್ ಕ್ಷೇತ್ರದಲ್ಲೂ ಅಂದೇ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿವೆ.

The post ಪಶ್ಚಿಮ ಬಂಗಾಳದಲ್ಲಿ 100 ಕಚ್ಚಾ ಬಾಂಬ್‌ ಪತ್ತೆ: ಎನ್‌ಐಎ ತನಿಖೆಗೆ ಚುನಾವಣಾ ಆಯೋಗ ಆದೇಶ. appeared first on Good News 24x7.

]]>
ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ https://www.goodnews24x7.com/petrol-diesel-prices-to-rise-after-elections-central-government-clarification/ Thu, 23 Apr 2026 10:16:34 +0000 https://www.goodnews24x7.com/?p=9386 ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

The post ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ appeared first on Good News 24x7.

]]>

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ ತಳ್ಳಿಹಾಕಿದ್ದು, ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಚಿವಾಲಯ ನೀಡಿದ ಸ್ಪಷ್ಟನೆ ಏನು?
ಕೆಲವು ಮಾಧ್ಯಮ ವರದಿಗಳು ಮತ್ತು ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ನೀಡಿದ ಸುಳಿವುಗಳ ನಂತರ ಸಚಿವಾಲಯವು ‘X’ (ಟ್ವಿಟರ್) ನಲ್ಲಿ ಈ ಕೆಳಗಿನ ಅಂಶಗಳನ್ನು ಹಂಚಿಕೊಂಡಿದೆ:

ಭೀತಿ ಬೇಡ: ಬೆಲೆ ಏರಿಕೆಯ ವರದಿಗಳು ಸಾರ್ವಜನಿಕರಲ್ಲಿ ಅನಗತ್ಯ ಭಯ ಮತ್ತು ಭೀತಿಯನ್ನು ಸೃಷ್ಟಿಸುತ್ತಿವೆ. ಇವು ದುರುದ್ದೇಶಪೂರಿತ ಮತ್ತು ದಾರಿತಪ್ಪಿಸುವ ವರದಿಗಳಾಗಿವೆ.

ಸ್ಥಿರತೆ: ಕಳೆದ ನಾಲ್ಕು ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತಲ್ಲಣಗಳಿದ್ದರೂ, ಭಾರತವು ತೈಲ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟಿರುವ ಅಪರೂಪದ ದೇಶಗಳಲ್ಲಿ ಒಂದಾಗಿದೆ.

ರಕ್ಷಣೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯ ಹೊರೆ ನಾಗರಿಕರ ಮೇಲೆ ಬೀಳದಂತೆ ತೈಲ ಕಂಪನಿಗಳು ಮತ್ತು ಸರ್ಕಾರ ನಿರಂತರ ಕ್ರಮ ಕೈಗೊಳ್ಳುತ್ತಿವೆ.

ಬೆಲೆ ಏರಿಕೆಯ ವದಂತಿಗೆ ಕಾರಣವೇನು?
ಅಂತರರಾಷ್ಟ್ರೀಯ ಮಟ್ಟದ ಭೌಗೋಳಿಕ ರಾಜಕೀಯ ಘರ್ಷಣೆಗಳು ತೈಲ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿವೆ:

ಯುದ್ಧದ ಪರಿಣಾಮ: ಇತ್ತೀಚಿನ ಇರಾನ್ ಮೇಲಿನ ದಾಳಿಯ ನಂತರ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 70 ಡಾಲರ್‌ನಿಂದ 119-120 ಡಾಲರ್‌ಗೆ ಏರಿಕೆಯಾಗಿದೆ.

ಕೋಟಕ್ ವರದಿ: ಕಚ್ಚಾ ತೈಲದ ಈ ಭಾರೀ ಏರಿಕೆಯನ್ನು ಸರಿದೂಗಿಸಲು ಲೀಟರ್‌ಗೆ 25-28 ರೂ. ಹೆಚ್ಚಿಸುವುದು ಅನಿವಾರ್ಯವಾಗಬಹುದು ಎಂದು ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಅಂದಾಜಿಸಿತ್ತು.

ಗಮನಿಸಿ: ಪಶ್ಚಿಮ ಬಂಗಾಳದ ಅಂತಿಮ ಹಂತದ ಚುನಾವಣೆ ಏಪ್ರಿಲ್ 29 ರಂದು ಮುಕ್ತಾಯಗೊಳ್ಳಲಿದ್ದು, ಅಲ್ಲಿಯವರೆಗೆ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ.

The post ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ appeared first on Good News 24x7.

]]>
ಕಾಂಗ್ರೆಸ್ ಮುಸ್ಲಿಂ ನಾಯಕರ ಖಡಕ್ ವಾಗ್ದಾಳಿ: ಜಮೀರ್ ಅಹ್ಮದ್ ಖಾನ್‌ ವಿರುದ್ಧ ಅಸಮಾಧಾನ https://www.goodnews24x7.com/congress-muslim-leaders-sharp-attack-dissatisfaction-with-zameer-ahmed-khan9366-2/ Tue, 21 Apr 2026 13:00:53 +0000 https://www.goodnews24x7.com/?p=9366 ದಾವಣಗೆರೆ ಚುನಾವಣಾ ರಾಜಕಾರಣ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಸೇರ್ಪಡೆ ಕುರಿತ ಚರ್ಚೆಗಳ ಬೆನ್ನಲ್ಲೇ, ಕಾಂಗ್ರೆಸ್‌ನ ಹಿರಿಯ ಮುಸ್ಲಿಂ ನಾಯಕರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಪ್ರಮುಖಾಂಶಗಳು: ಯಾರೇ ಹೋದರೂ ಪಕ್ಷಕ್ಕೆ…

The post ಕಾಂಗ್ರೆಸ್ ಮುಸ್ಲಿಂ ನಾಯಕರ ಖಡಕ್ ವಾಗ್ದಾಳಿ: ಜಮೀರ್ ಅಹ್ಮದ್ ಖಾನ್‌ ವಿರುದ್ಧ ಅಸಮಾಧಾನ appeared first on Good News 24x7.

]]>

ದಾವಣಗೆರೆ ಚುನಾವಣಾ ರಾಜಕಾರಣ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಸೇರ್ಪಡೆ ಕುರಿತ ಚರ್ಚೆಗಳ ಬೆನ್ನಲ್ಲೇ, ಕಾಂಗ್ರೆಸ್‌ನ ಹಿರಿಯ ಮುಸ್ಲಿಂ ನಾಯಕರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಪ್ರಮುಖಾಂಶಗಳು:
ಯಾರೇ ಹೋದರೂ ಪಕ್ಷಕ್ಕೆ ನಷ್ಟವಿಲ್ಲ: ಸಿ.ಎಂ. ಇಬ್ರಾಹಿಂ ಮತ್ತು ಜಾಫರ್ ಷರೀಫ್ ಅಂತಹವರೇ ಪಕ್ಷ ಬಿಟ್ಟು ಹೋದಾಗ ಕಾಂಗ್ರೆಸ್‌ಗೆ ಏನೂ ಆಗಲಿಲ್ಲ. ಈಗ ಯಾರಾದರೂ ಹೋದರೆ ಹೊಸ ನಾಯಕತ್ವ ಬೆಳೆಯುತ್ತದೆ ಹೊರತು ಪಕ್ಷಕ್ಕೆ ನಷ್ಟವಿಲ್ಲ ಎಂದು ಉಬೇದುಲ್ಲಾ ಷರೀಫ್ ತಿರುಗೇಟು ನೀಡಿದ್ದಾರೆ.

ಶಿಸ್ತು ಕ್ರಮಕ್ಕೆ ಆಗ್ರಹ: ಚುನಾವಣಾ ಸಮಯದಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದವರು ಮತ್ತು ಪ್ರಚಾರಕ್ಕೆ ಬಾರದವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಾಯಕರು ಒತ್ತಾಯಿಸಿದ್ದಾರೆ.

ಅಬ್ದುಲ್ ಜಬ್ಬಾರ್ ನಡೆಗೆ ವಿರೋಧ: ದಾವಣಗೆರೆಯಲ್ಲಿ ಅಬ್ದುಲ್ ಜಬ್ಬಾರ್ ಅವರು ಮನೆಯಿಂದ ಹೊರಬಂದು ಪ್ರಚಾರ ಮಾಡಲಿಲ್ಲ. ಶಿಸ್ತು ಕ್ರಮ ಕೈಗೊಂಡಿದ್ದನ್ನು ಇಡೀ ಸಮುದಾಯಕ್ಕೆ ಆದ ಅನ್ಯಾಯ ಎಂದು ಬಿಂಬಿಸುವುದು ತಪ್ಪು.

ಟಿಕೆಟ್ ಹಂಚಿಕೆ ವಿವಾದ: ದಾವಣಗೆರೆ ಟಿಕೆಟ್ ವಿಚಾರದಲ್ಲಿ ಸಭೆ ನಡೆದಾಗ ಅಬ್ದುಲ್ ಜಬ್ಬಾರ್ ಹೊರತುಪಡಿಸಿ ಉಳಿದ ಆರು ಮಂದಿ ಆಕಾಂಕ್ಷಿಗಳ ಪರವಾಗಿ ಯಾರೂ ಮಾತನಾಡಲಿಲ್ಲ. ಸರಿಯಾಗಿ ಚರ್ಚೆ ಮಾಡಿದ್ದರೆ ಮುಸ್ಲಿಮರಿಗೆ ಟಿಕೆಟ್ ಸಿಗುತ್ತಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಮೀರ್ ವಿರುದ್ಧ ಪರೋಕ್ಷ ವಾಗ್ದಾಳಿ: “ನಾನು ನಾಯಕ” ಎಂಬ ಹಮ್ಮು ಸಚಿವರಿಗೆ ಕಾಂಗ್ರೆಸ್‌ನಿಂದ ಸಿಕ್ಕ ಬಳುವಳಿ. ಪಕ್ಷ ನೀಡಿದ ಅಧಿಕಾರದಿಂದಲೇ ಸಂಪನ್ಮೂಲ ಕ್ರೋಢೀಕರಿಸಿಕೊಂಡು ಮೆರೆಯುತ್ತಿದ್ದಾರೆ. ಇವರ ವಿರುದ್ಧವೂ ಶಿಸ್ತು ಕ್ರಮ ಆಗಬೇಕು ಎಂದು ಹಿರಿಯ ಮುಖಂಡರು ಕಿಡಿಕಾರಿದ್ದಾರೆ.

ಗಂಭೀರ ಆರೋಪ: ಅಲ್ಪಸಂಖ್ಯಾತ ಘಟಕದ ಕೆಲವರು ಎಸ್‌ಡಿಪಿಐ ಅಭ್ಯರ್ಥಿಗೆ ಹಣಕಾಸಿನ ನೆರವು ನೀಡಿದ್ದಾರೆ. ಇಂತಹವರ ಮನೆಗೆ ಸಿಎಂ ಅಥವಾ ಡಿಸಿಎಂ ಭೇಟಿ ನೀಡುವ ಅಗತ್ಯವಿರಲಿಲ್ಲ ಎಂದು ನಾಯಕರು ಪ್ರಶ್ನಿಸಿದ್ದಾರೆ

The post ಕಾಂಗ್ರೆಸ್ ಮುಸ್ಲಿಂ ನಾಯಕರ ಖಡಕ್ ವಾಗ್ದಾಳಿ: ಜಮೀರ್ ಅಹ್ಮದ್ ಖಾನ್‌ ವಿರುದ್ಧ ಅಸಮಾಧಾನ appeared first on Good News 24x7.

]]>
ಇವಿಎಂ ಸಾಕು, ಬ್ಯಾಲೆಟ್​​​ ಪೇಪರ್​​ ಬೇಕು ! https://www.goodnews24x7.com/evms-are-enough-ballot-papers-are-needed/ Fri, 05 Sep 2025 05:33:20 +0000 https://www.goodnews24x7.com/?p=7364 ದೇಶದಲ್ಲಿ ಎರಡೇ ಚರ್ಚೆ, ಒಂದು ಜಿಎಸ್​​ಟಿ, ಇನ್ನೊಂದು ವೋಟ್​​​ ಚೋರಿ. ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸರಣಿಯಾಗಿ ಮತಗಳ್ಳತನ ಆರೋಪ ಮಾಡಿದ್ದು, ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ಮಧ್ಯೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆ ವಿಚಾರದಲ್ಲಿ ಹೊಸ ದಾಳ…

The post ಇವಿಎಂ ಸಾಕು, ಬ್ಯಾಲೆಟ್​​​ ಪೇಪರ್​​ ಬೇಕು ! appeared first on Good News 24x7.

]]>

ದೇಶದಲ್ಲಿ ಎರಡೇ ಚರ್ಚೆ, ಒಂದು ಜಿಎಸ್​​ಟಿ, ಇನ್ನೊಂದು ವೋಟ್​​​ ಚೋರಿ. ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸರಣಿಯಾಗಿ ಮತಗಳ್ಳತನ ಆರೋಪ ಮಾಡಿದ್ದು, ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ಮಧ್ಯೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆ ವಿಚಾರದಲ್ಲಿ ಹೊಸ ದಾಳ ಉರುಳಿಸಿದೆ. ಅಷ್ಟೇ ಅಲ್ಲ, ಸಂಪುಟ ಸಭೆಯಲ್ಲಿ ಹಲವು ವಿಚಾರಗಳಲ್ಲಿ ಹೊಸ ನಿರ್ಧಾರಗಳನ್ನ ತಳೆದಿದೆ.

ಕಾಂಗ್ರೆಸ್ ಪಕ್ಷಕ್ಕೆ ದೇಶದ ಚುನಾವಣಾ ವ್ಯವಸ್ಥೆ ಮೇಲೆ ನಂಬಿಕೆಯೇ ಇಲ್ಲ. ಇವಿಎಂ ಮೇಲಂತೂ ಎಳ್ಳಷ್ಟು ವಿಶ್ವಾಸವಿಲ್ಲ. ಹೀಗಾಗಿ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧವೇ ಕೈ ನಾಯಕ ರಾಹುಲ್ ಗಾಂಧಿ ಸಿಡಿದೆದ್ದಿದ್ದಾರೆ. ಇದೇ ವಿಚಾರ ಇಟ್ಟುಕೊಂಡು ದೇಶಾದ್ಯಂತ ಪ್ರತಿಭಟನೆ ನಡೆಸ್ತಿದ್ದಾರೆ. ಇದ್ರ ಮಧ್ಯೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಚುನಾವಣೆ ವಿಚಾರದಲ್ಲಿ ಹೊಸ ನಿಲುವು ತಳೆದಿದೆ.

ರಾಹುಲ್ ಗಾಂಧಿ ಸರಣಿಯಾಗಿ ಮತಗಳ್ಳತನ ಆರೋಪ ಮಾಡಿದ್ದು, ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿದೆ. ಇದೇ ವಿಚಾರ ಇಟ್ಟುಕೊಂಡು ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸ್ತಾನೆ ಇದೆ. ಈ ಮಧ್ಯೆ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮಹತ್ವದ ನಿರ್ಧಾರಗಳನ್ನ ಕೈಗೊಂಡಿದೆ. ಇವಿಎಂ ಸಾಕು, ಬ್ಯಾಲೆಟ್​​​ ಪೇಪರ್​​ ಬೇಕು ಅಂತ ಚುನಾವಣೆ ಆಯೋಗಕ್ಕೆ ಸಂಪುಟದಿಂದ ಶಿಫಾರಸು ಮಾಡಿದೆ. ಸದ್ಯಕ್ಕೆ ಗ್ರಾಮ ಪಂಚಾಯ್ತಿಯಲ್ಲಿ ಮಾತ್ರ ಬ್ಯಾಲೇಟ್​​ ಬಳಕೆಯಲ್ಲಿದೆ. ಪುರಸಭೆ, ನಗರಸಭೆ, ಪಾಲಿಕೆ ಎಲೆಕ್ಷನ್​​ನಲ್ಲಿ ಇವಿಎಂ ಪ್ರಯೋಗ ನಡೆದಿದೆ.

ಇತ್ತೀಚೆಗೆ ಮತದಾರರ ಪಟ್ಟಿ ತಯಾರಿಕೆಯಲ್ಲಿ ಬದಲಾವಣೆಯಾಗಿದೆ.ಮತಗಳ್ಳತನ ಚರ್ಚೆ ಆಗ್ತಿದ್ದು, ಇವಿಎಂ ಬಗ್ಗೆ ಜನರಲ್ಲಿ ವಿಶ್ವಾಸ ಕುಗ್ಗಿದೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್​ಗೆ ಆದ್ಯತೆ ನೀಡಿ . ಇವಿಎಂ ಬದಲು ಬ್ಯಾಲೆಟ್ ಪೇಪರ್ ಜಾರಿಗೆ ನಿಯಮಗಳನ್ನು ರೂಪಿಸಿ
ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ಸಂಪುಟ ಒಪ್ಪಿದೆ.

ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನ ಕೈಗೊಳ್ಳಲಾಗಿದೆ. ಅದರಲ್ಲಿ 2025ರ ವರ್ಷಾಂತ್ಯದೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ನವೆಂಬರ್‌ ವೇಳೆಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.

The post ಇವಿಎಂ ಸಾಕು, ಬ್ಯಾಲೆಟ್​​​ ಪೇಪರ್​​ ಬೇಕು ! appeared first on Good News 24x7.

]]>
ಸಹೋದರಿಯ ಕೂರಿಸಿಕೊಂಡು ರಾಹುಲ್ ಗಾಂಧಿ ಬುಲೆಟ್ ಸವಾರಿ..! https://www.goodnews24x7.com/rahul-gandhi-rides-bullet-with-sister-on-his-back/ Wed, 27 Aug 2025 12:10:23 +0000 https://www.goodnews24x7.com/?p=6814 ಬಿಹಾರ್ ವೋಟ್ ಅಧಿಕಾರ್ ರ್ಯಾಲಿಯಲ್ಲಿರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ತೇಜಸ್ವಿ ಯಾದವ್ ಬೈಕ್‌ಗಳಲ್ಲಿ ಕಾಣಿಸಿಕೊಂಡರು. ಈ ಬಾರಿ ಅಣ್ಣ-ತಂಗಿ ಜೋಡಿ ಡಿಫ್ರೆಂಟ್​ ಆಗಿ ಕಾಣಿಸಿಕೊಂಡಿದೆ. ರಾಹುಲ್ ಗಾಂಧಿ, ತಮ್ಮ ಸಹೋದರಿ ಪ್ರಿಯಾಂಕ ಗಾಂಧಿಯನ್ನ ಬುಲೆಟ್​​​ನಲ್ಲಿ ಕೂರಿಸಿಕೊಂಡು ಪ್ರತಿಭಟನಾ ಱಲಿ ನಡೆಸಿದ್ದಾರೆ.…

The post ಸಹೋದರಿಯ ಕೂರಿಸಿಕೊಂಡು ರಾಹುಲ್ ಗಾಂಧಿ ಬುಲೆಟ್ ಸವಾರಿ..! appeared first on Good News 24x7.

]]>

ಬಿಹಾರ್ ವೋಟ್ ಅಧಿಕಾರ್ ರ್ಯಾಲಿಯಲ್ಲಿರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ತೇಜಸ್ವಿ ಯಾದವ್ ಬೈಕ್‌ಗಳಲ್ಲಿ ಕಾಣಿಸಿಕೊಂಡರು. ಈ ಬಾರಿ ಅಣ್ಣ-ತಂಗಿ ಜೋಡಿ ಡಿಫ್ರೆಂಟ್​ ಆಗಿ ಕಾಣಿಸಿಕೊಂಡಿದೆ. ರಾಹುಲ್ ಗಾಂಧಿ, ತಮ್ಮ ಸಹೋದರಿ ಪ್ರಿಯಾಂಕ ಗಾಂಧಿಯನ್ನ ಬುಲೆಟ್​​​ನಲ್ಲಿ ಕೂರಿಸಿಕೊಂಡು ಪ್ರತಿಭಟನಾ ಱಲಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಮತಗಳ್ಳತನ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗದ ವಿರುದ್ಧವೂ ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್​ ದೇಶಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ತಿದೆ. ಅದರ ಮುಂದುವರಿದ ಭಾಗವಾಗಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬಿಹಾರ ಮತದಾನ ಹಕ್ಕುಗಳ ಱಲಿಗಾಗಿ ಮುಜಫರ್‌ಪುರದಲ್ಲಿದ್ದಾರೆ. ಆಗಸ್ಟ್ 26 ರಂದು ಸುಪೌಲ್‌ನಲ್ಲಿ ನಡೆದ ಱಲಿಯಲ್ಲಿ ಭಾಗವಹಿಸಿದ್ದರು.

ಮತದಾರರ ಪಟ್ಟಿಯಿಂದ 65 ಲಕ್ಷ ಹೆಸರುಗಳನ್ನು ತೆಗೆದುಹಾಕಿರುವ ಬಗ್ಗೆ ಉತ್ತರ ನೀಡುವಂತೆ ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಮತಗಳನ್ನು ಹೇಗೆ ಕಳ್ಳತನ ಮಾಡಲಾಗಿದೆ ಅಂತಾ ದಾಖಲೆ ಸಹಿತ ಬಿಚ್ಚಿಡುತ್ತಿದ್ದೇವೆ ಎಂದು ಗುಡುಗಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವತ್ತಿನಿಂದ ಈ ಱಲಿಯಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್‌ನ ‘ಮತದಾರರ ಹಕ್ಕುಗಳ ಯಾತ್ರೆ’ಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದೆ ಕನಿಮೋಳಿ ಕೂಡ ಸಾಥ್ ನೀಡಿದ್ದಾರೆ.

ಒಟ್ಟು 1,300 ಕಿ.ಮೀ ದೂರದ ಱಲಿ ಇದಾಗಿದೆ. ಆಗಸ್ಟ್ 17 ರಂದು ಸಸಾರಾಮ್​ನಿಂದ ಶುರುವಾಗಿದ್ದು, ಸೆಪ್ಟೆಂಬರ್ 1 ರಂದು ಮುಕ್ತಾಯಗೊಳ್ಳಲಿದೆ. ಸೆಪ್ಟೆಂಬರ್ 1 ರಂದು ಪಾಟ್ನಾದಲ್ಲಿ ಬೃಹತ್ ಱಲಿ ನಡೆಯಲಿದೆ.

The post ಸಹೋದರಿಯ ಕೂರಿಸಿಕೊಂಡು ರಾಹುಲ್ ಗಾಂಧಿ ಬುಲೆಟ್ ಸವಾರಿ..! appeared first on Good News 24x7.

]]>
ಕೆ.ಎನ್.ರಾಜಣ್ಣ ವಜಾಗೆ ಕಾರಣ ರಣದೀಪ್ ಸುರ್ಜೇವಾಲಾ.? https://www.goodnews24x7.com/is-randeep-surjewala-the-reason-for-k-n-rajannas-dismissal/ Tue, 12 Aug 2025 11:12:15 +0000 https://www.goodnews24x7.com/?p=5946 ಸಹಕಾರ ಖಾತೆ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಕ್ಯಾಬಿನೆಟ್ ನಿಂದ ವಜಾಗೊಂಡಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿ, ಷಡ್ಯಂತ್ರ ನಡೆದಿದೆ ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ. ರಾಜಣ್ಣ ಕ್ಯಾಬಿನೆಟ್ ನಿಂದ ವಜಾ ಹಿಂದೆ ಸಕ್ರಿಯವಾಗಿ ಕೆಲಸ ಮಾಡಿರೋದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಎಂಬ…

The post ಕೆ.ಎನ್.ರಾಜಣ್ಣ ವಜಾಗೆ ಕಾರಣ ರಣದೀಪ್ ಸುರ್ಜೇವಾಲಾ.? appeared first on Good News 24x7.

]]>

ಸಹಕಾರ ಖಾತೆ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಕ್ಯಾಬಿನೆಟ್ ನಿಂದ ವಜಾಗೊಂಡಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿ, ಷಡ್ಯಂತ್ರ ನಡೆದಿದೆ ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ. ರಾಜಣ್ಣ ಕ್ಯಾಬಿನೆಟ್ ನಿಂದ ವಜಾ ಹಿಂದೆ ಸಕ್ರಿಯವಾಗಿ ಕೆಲಸ ಮಾಡಿರೋದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಎಂಬ ಮಾತು ಕೆಪಿಸಿಸಿ ಅಂಗಳದಲ್ಲಿ ಚರ್ಚೆಯಾಗುತ್ತಿದೆ.

ಸಚಿವ ಸಂಪುಟದಿಂದ ಕೆ.ಎನ್ ರಾಜಣ್ಣರನ್ನ ವಜಾಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಣದೀಪ್ ಸುರ್ಜೇವಾಲಾ..! ಹಾಲಿ ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಣದೀಪ್ ಸುರ್ಜೇವಾಲಾ ಇತ್ತೀಚೆಗೆ ಬೆಂಗಳೂರಿಗೆ ಬಂದು ಸಚಿವರು, ಶಾಸಕರ ಸಭೆ ನಡೆಸಿದ್ದರು. ಇದನ್ನು ಸಹಕಾರ ಖಾತೆ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಬಹಿರಂಗವಾಗಿ ಪ್ರಶ್ನಿಸಿದ್ದರು. ಜೊತೆಗೆ ರಣದೀಪ್ ಸುರ್ಜೇವಾಲಾ, ಎಲ್ಲ ಕ್ಯಾಬಿನೆಟ್ ಸಚಿವರನ್ನು ಪ್ರತ್ಯೇಕವಾಗಿ ಕರೆದು ಮಾತುಕತೆ ನಡೆಸಿದ್ದರು. ಈ ಮಾತುಕತೆಗೆ ಸಹಕಾರ ಸಚಿವರಾಗಿದ್ದ ಕೆ.ಎನ್‌.ರಾಜಣ್ಣ ಹೋಗಿರಲಿಲ್ಲ. ರಣದೀಪ್ ಸುರ್ಜೇವಾಲಾ, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಚಿವರ ಜೊತೆ ನಡೆಸುವಾಗ ಕೆ.ಎನ್.ರಾಜಣ್ಣ, ತಮ್ಮ ಕುಟುಂಬದ ಜೊತೆ ಅಮೆರಿಕಾ ಪ್ರವಾಸ ಹೋಗಿದ್ದರು. ನಂತರ ಹೋಗಿ ರಣದೀಪ್ ಸುರ್ಜೇವಾಲಾರನ್ನು ಭೇಟಿಯಾಗುತ್ತೇನೆ ಎಂದಿದ್ದರು. ಆ ರೀತಿ ರಣದೀಪ್ ಸುರ್ಜೇವಾಲಾರನ್ನು ರಾಜಣ್ಣ ಭೇಟಿಯಾಗಲಿಲ್ಲ ಜೊತೆಗೆ ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ಪಕ್ಷದ ನಾಯಕರು ರಣದೀಪ್ ಸುರ್ಜೇವಾಲಾಗೆ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಕರೆದು ಸಭೆ ನಡೆಸುವ ಅಧಿಕಾರ ಇಲ್ಲ. ಅಧಿಕಾರಿಗಳನ್ನು ಕರೆದು ಸಭೆ ನಡೆಸಿದ್ದು ಸರಿಯಲ್ಲ ಎಂದೆಲ್ಲಾ ಬಹಿರಂಗವಾಗಿ ರಣದೀಪ್ ಸುರ್ಜೇವಾಲಾ ವಿರುದ್ಧ ಮಾತನಾಡಿದ್ದರು.

ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತೊರೆಯಲು ಕಾರಣ ಯಾರು.?

ಇದು ಸಹಜವಾಗಿಯೇ ರಾಜ್ಯದ ಕಾಂಗ್ರೆಸ್ ಸರ್ಕಾರ, ಪಕ್ಷದ ಬೆಳವಣಿಗೆಗಳ ಬಗ್ಗೆ ಕಣ್ಣಿಟ್ಟಿರುವ ರಣದೀಪ್ ಸುರ್ಜೇವಾಲಾ ಗಮನಕ್ಕೆ ಬಂದಿದೆ. ಹೀಗಾಗಿ ರಣದೀಪ್ ಸುರ್ಜೇವಾಲಾಗೆ ಕೆ.ಎನ್.ರಾಜಣ್ಣ ಬಗ್ಗೆ ಒಳಗೊಳಗೆ ಅಸಮಾಧಾನ ಇತ್ತು. ಹೀಗಾಗಿ ಈಗ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ಮತಗಳವು ಆರೋಪ ಮಾಡಿ ಕ್ಯಾಂಪೇನ್ ಮಾಡುವಾಗ ಅದರ ವಿರುದ್ಧವೂ ರಾಜಣ್ಣ ಹೇಳಿಕೆ ಕೊಟ್ಟಿದ್ದನ್ನೇ ರಣದೀಪ್ ಸುರ್ಜೇವಾಲಾ, ರಾಜಣ್ಣ ವಿರುದ್ಧ ಅಸ್ತ್ರವಾಗಿ ಬಳಕೆ ಮಾಡಿಕೊಂಡಿದ್ದಾರೆ. ತಮ್ಮ ವಿರುದ್ಧ ಮಾತನಾಡಿದ, ತಮ್ಮನ್ನು ಪ್ರಶ್ನಿಸಿದ ಕೆ.ಎನ್‌.ರಾಜಣ್ಣರನ್ನು ಹಣಿಯಲು ಅವರ ಹೇಳಿಕೆಯನ್ನೇ ಅವರ ವಿರುದ್ಧ ಅಶಿಸ್ತು ಎಂದು ಅಸ್ತ್ರ ಪ್ರಯೋಗಿಸಿ, ರಾಹುಲ್ ಗಾಂಧಿ ಮುಂದಿಟ್ಟಿದ್ದಾರೆ. ತಮ್ಮ ಹೋರಾಟವನ್ನು ಪ್ರಶ್ನಿಸಿದ ತಮ್ಮದೇ ಪಕ್ಷದ ಸಚಿವರ ಮಾತು ಅನ್ನು ಒಪ್ಪಿಕೊಳ್ಳಲು ಆಗಲ್ಲ. ಇದು ಅಶಿಸ್ತು ಎಂದು ರಾಹುಲ್ ಗಾಂಧಿ ಪರಿಗಣಿಸಿದ್ದಾರೆ. ಜೊತೆಗೆ ರಾಜಣ್ಣರ ಈ ಹಿಂದಿನ ವಿವಾದಾತ್ಮಕ ಹೇಳಿಕೆಗಳನ್ನು ಆಗಸ್ಟ್ 8 ರಂದು ರಾಹುಲ್ ಗಾಂಧಿ ಬೆೆಂಗಳೂರಿಗೆ ಬಂದಿದ್ದ ವೇಳೆಯೇ ರಣದೀಪ್ ಸುರ್ಜೇವಾಲಾ, ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದರಂತೆ.
ಆಗಲೂ ರಾಹುಲ್ ಗಾಂಧಿ, ಕೆ.ಎನ್.ರಾಜಣ್ಣ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಕರ್ನಾಟಕದಲ್ಲಿ ನಾವು 140 ಶಾಸಕರ ಸರ್ಕಾರ ನಡೆಸುತ್ತಿದ್ದೇವೋ, 115 ಮಂದಿಯ ಶಾಸಕರ ಸರ್ಕಾರ ನಡೆಸುತ್ತಿದ್ದೇವೋ? ಬಹುಮತ ಇದ್ದರೂ, ಪದೇ ಪದೇ ಸರ್ಕಾರದಲ್ಲಿ ಗೊಂದಲ ಏಕೆ ಎಂದು ರಾಹುಲ್ ಗಾಂಧಿ ಅವರು ನೇರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಅವರನ್ನು ಪ್ರಶ್ನಿಸಿದ್ದಾರೆ.

ಕೆ.ಎನ್.ರಾಜಣ್ಣ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದರೂ, ಏಕೆ ಯಾವುದೇ ಕ್ರಮ ಆಗಿಲ್ಲವೆಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರಂತೆ. ರಾಜಣ್ಣ ಪದೇ ಪದೇ ಪಕ್ಷ , ಸರ್ಕಾರಕ್ಕೆ ಮುಜುಗರ ಆಗುವ ಹೇಳಿಕೆ ನೀಡುತ್ತಿದ್ದಾರೆ ಎಂದು ರಣದೀಪ್ ಸುರ್ಜೇವಾಲಾ ನೇರವಾಗಿ ರಾಹುಲ್ ಗಾಂಧಿಗೆ ಹೇಳಿದ್ದಾರೆ. ಇದರಿಂದಾಗಿಯೇ ರಾಹುಲ್ ಗಾಂಧಿಯೇ ಈಗ ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣರನ್ನು ವಜಾಗೊಳಿಸಬೇಕೆಂದು ಸಿಎಂ ಸಿದ್ದರಾಮಯ್ಯಗೆ ಫರ್ಮಾನು ಹೊರಡಿಸಿದ್ದರು. ಹೀಗಾಗಿ ಕೆ.ಎನ್.ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ಅದನ್ನು ಅಂಗೀಕರಿಸಿ, ರಾಜ್ಯಪಾಲರಿಗೆ ಕಳಿಸದೇ, ಸಿಎಂ ಸಿದ್ದರಾಮಯ್ಯ, ರಾಜಣ್ಣರನ್ನು ಕ್ಯಾಬಿನೆಟ್ ನಿಂದ ವಜಾಗೊಳಿಸುವ ಶಿಫಾರಸ್ಸು ಅನ್ನು ರಾಜ್ಯಪಾಲರಿಗೆ ಕಳಿಸಿದ್ದಾರೆ. ಬಳಿಕ ರಾಜಭವನದಿಂದ ರಾಜಣ್ಣರನ್ನು ಕ್ಯಾಬಿನೆಟ್ ನಿಂದ ವಜಾಗೊಳಿಸುವ ಪತ್ರ ಬಿಡುಗಡೆ ಆಗಿದೆ. ಆ ಪತ್ರವನ್ನು ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ ಅವರಿಗೆ ರವಾನೆ ಮಾಡಿದ್ದಾರೆ.
ಹೀಗೆ ಸಚಿವ ಸ್ಥಾನದಿಂದ ಕೆ.ಎನ್‌. ರಾಜಣ್ಣರ ತಲೆದಂಡಕ್ಕೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಎಂಬ ಮಾತು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯ ಅಂಗಳದಲ್ಲಿ ನಿನ್ನೆಯಿಂದ ಚರ್ಚೆಯಾಗುತ್ತಿದೆ. ಕೆ.ಎನ್‌. ರಾಜಣ್ಣ ಕಿಕ್ ಔಟ್ ಎಪಿಸೋಡ್ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ರಣದೀಪ್ ಸುರ್ಜೇವಾಲಾ.

ಬ್ಯಾಕ್ ಟು ಬ್ಯಾಕ್ ರಾಜಣ್ಣರ ಗೊಂದಲದ ಹೇಳಿಕೆಗಳ ಪಟ್ಟಿಯನ್ನೇ ರಣದೀಪ್ ಸುರ್ಜೇವಾಲಾ ಸಂಗ್ರಹಿಸಿಕೊಂಡಿದ್ದರು. ಕೆಲ ರಾಜ್ಯ ನಾಯಕರ ಮೂಲಕ ಸಾಕ್ಷಿ ಸಮೇತ ವರದಿಯನ್ನು ತರಿಸಿಕೊಂಡು ಸೂಕ್ತ ಸಮಯಕ್ಕಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಕಾಯುತ್ತಿದ್ದರು. ಡಿಕೆಶಿ ವಿರುದ್ಧ ಸಿಎಂ ಗಾದಿ, ಐದು ಡಿಸಿಎಂ ಹುದ್ದೆ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಕೆ.ಎನ್‌. ರಾಜಣ್ಣ ಬಹಿರಂಗವಾಗಿ ಮಾತನಾಡಿದ್ದರು. ಈ ಬಗ್ಗೆ ಉಸ್ತುವಾರಿ ಸುರ್ಜೇವಾಲಾಗೆ ನಿರಂತರವಾಗಿ ದೂರು ನೀಡುತ್ತಿದ್ದಿದ್ದು ಡಿಸಿಎಂ ಡಿಕೆಶಿ. ರಾಜಣ್ಣರ ಪ್ರತಿಯೊಂದು ಹೇಳಿಕೆಗಳ ಮಾಹಿತಿ ಪಡೆಯುತ್ತಿದ್ದಾಗಲೇ ಉಸ್ತುವಾರಿ ರಣದೀಪ್ ಸುರ್ಜೇವಾಲಾ ವಿರುದ್ಧವೂ ಹೇಳಿಕೆಯನ್ನು ಕೆ.ಎನ್‌. ರಾಜಣ್ಣ ನೀಡಿದ್ದರು.
ಈಗ ರಾಹುಲ್ ಗಾಂಧಿ ಹೋರಾಟವನ್ನ ಅಣಕಿಸುವಂತೆ ಹೇಳಿಕೆ ನೀಡಿದ್ದನ್ನೆ ರಾಜಣ್ಣ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಹನಿಟ್ರ್ಯಾಪ್ ಪ್ರಕರಣದ ಜೊತೆಗೆ ಮತಗಳ್ಳತನ ಸಂಬಂಧ ರಾಜಣ್ಣ ನೀಡಿದ್ದ ಹೇಳಿಕೆಯನ್ನ ರಣದೀಪ್ ಸುರ್ಜೇವಾಲಾ ಬಳಸಿಕೊಂಡಿದ್ದಾರೆ. ಮೊದಲ ಹಂತವಾಗಿ ಕೆ.ಸಿ ವೇಣುಗೋಪಾಲ್ ಗಮನಕ್ಕೆ ರಾಜಣ್ಣರ ವಿವಾದಾತ್ಮಕ ಹೇಳಿಕೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ನೇರವಾಗಿ ರಾಹುಲ್ ಗಾಂಧಿಗೆ ರಾಜಣ್ಣ ಹೇಳಿಕೆ ಬಗ್ಗೆ ಮನವರಿಕೆ ಮಾಡುವಲ್ಲಿ ರಣದೀಪ್ ಸುರ್ಜೇವಾಲಾ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ರಾಜ್ಯ ಕ್ಯಾಬಿನೆಟ್ ನಿಂದ ಕೆ.ಎನ್.ರಾಜಣ್ಣ ವಜಾ ಆದೇಶ ಹೈಕಮ್ಯಾಂಡ್ ನಿಂದ ಸಿಎಂ ಸಿದ್ದರಾಮಯ್ಯಗೆ ರವಾನೆಯಾಗಿದೆ.

The post ಕೆ.ಎನ್.ರಾಜಣ್ಣ ವಜಾಗೆ ಕಾರಣ ರಣದೀಪ್ ಸುರ್ಜೇವಾಲಾ.? appeared first on Good News 24x7.

]]>