England Archives - Good News 24x7 https://www.goodnews24x7.com/tag/england/ Kannada Wed, 04 Mar 2026 14:15:09 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg England Archives - Good News 24x7 https://www.goodnews24x7.com/tag/england/ 32 32 ಭಾರತ- ಇಂಗ್ಲೆಂಡ್ ಸೆಮೀಸ್ ಕಾಳಗ ಯಾವಾಗ ಆರಂಭ? https://www.goodnews24x7.com/when-will-the-india-england-semi-final-clash-start8642-2/ Wed, 04 Mar 2026 14:12:03 +0000 https://www.goodnews24x7.com/?p=8642 ಭಾರತ- ಇಂಗ್ಲೆಂಡ್ ಸೆಮೀಸ್ ಕಾಳಗ ಯಾವಾಗ ಆರಂಭ? 2026ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಫೆಬ್ರವರಿ 5ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಮುಖಾಮುಖಿಯಾಗಲಿವೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪಂದ್ಯದ ನೇರಪ್ರಸಾರ…

The post ಭಾರತ- ಇಂಗ್ಲೆಂಡ್ ಸೆಮೀಸ್ ಕಾಳಗ ಯಾವಾಗ ಆರಂಭ? appeared first on Good News 24x7.

]]>

ಭಾರತ- ಇಂಗ್ಲೆಂಡ್ ಸೆಮೀಸ್ ಕಾಳಗ ಯಾವಾಗ ಆರಂಭ?

2026ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಫೆಬ್ರವರಿ 5ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಮುಖಾಮುಖಿಯಾಗಲಿವೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪಂದ್ಯದ ನೇರಪ್ರಸಾರ ವೀಕ್ಷಿಸಬಹುದು. ಎರಡೂ ತಂಡಗಳ ಬಲಿಷ್ಠ ಸ್ಕ್ವಾಡ್‌ಗಳ ವಿವರ ಇಲ್ಲಿದೆ. ಈ ರೋಚಕ ಕದನಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

2026 ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಗಳು ಇಂದಿನಿಂದ ಆರಂಭವಾಗಲಿವೆ. ಇಂದು ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ. ನಾಳೆ ಆತಿಥೇಯ ಭಾರತ ತಂಡವನ್ನು ಇಂಗ್ಲೆಂಡ್‌ ಎದುರಿಸಲಿದೆ. ಒಂದೆಡೆ ಭಾರತ ತಂಡ ಗುಂಪು ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿತ್ತು. ಇತ್ತ ಇಂಗ್ಲೆಂಡ್‌ ಒಂದು ಪಂದ್ಯದಲ್ಲಿ ಸೋತಿತ್ತಾದರೂ ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟಿತ್ತು. ಸೂಪರ್ 8 ಸುತ್ತಿನಲ್ಲಿ ಭಾರತ 1 ಪಂದ್ಯವನ್ನು ಸೋತು, 2 ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಟಿಕೆಟ್ ಪಡೆದರೆ, ಇತ್ತ ಇಂಗ್ಲೆಂಡ್‌ ಆಡಿದ ಮೂರು ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಹೀಗಾಗಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಕಾಳಗವನ್ನು ನಿರೀಕ್ಷಿಸಲಾಗಿದೆ. ಹೀಗಾಗಿ ಈ ಹೈವೋಲ್ಟೇಜ್ ಕದನದ ಪೂರ್ಣ ವಿವರ ಇಲ್ಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಫೆಬ್ರವರಿ 5 ರಂದು ನಡೆಯಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್​ನ ವಿವಿಧ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಹಾಟ್ ಸ್ಟಾರ್​ನಲ್ಲೂ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

ಟಿ20 ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

ಉಭಯ ತಂಡಗಳು
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್.

ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮೀ ಓವರ್ಟನ್, ಆದಿಲ್ ರಶೀದ್, ಫಿಲಿಪ್ ಸಾಲ್ಟ್, ಜೋಶ್ ಟಂಗ್,

The post ಭಾರತ- ಇಂಗ್ಲೆಂಡ್ ಸೆಮೀಸ್ ಕಾಳಗ ಯಾವಾಗ ಆರಂಭ? appeared first on Good News 24x7.

]]>
ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್​ನಲ್ಲಿ ಗೌತಮ್ ಗಂಭೀರ್ ಸೆಲೆಬ್ರೆಷನ್. ಮೊದಲ ಬಾರಿಗೆ ಕಣ್ಣೀರು ಹಾಕಿದ ಕೋಚ್​ ಗಂಭೀರ್​ ​! https://www.goodnews24x7.com/gautam-gambhir-celebrates-in-the-dressing-room-as-team-india-wins-coach-gambhir-sheds-tears-for-the-first-time/ Tue, 05 Aug 2025 10:51:08 +0000 https://www.goodnews24x7.com/?p=5376 ಟೀಮ್ ಇಂಡಿಯಾ ಕೇವಲ 6 ರನ್​ಗಳಿಂದ ಜಯಭೇರಿ ಬಾರಿಸಿತು. ಮೊಹಮ್ಮದ್ ಸಿರಾಜ್ ಕೊನೆ ವಿಕೆಟ್​ ಕಬಳಿಸುತ್ತಿದ್ದಂತೆ ಡ್ರೆಸಿಂಗ್ ರೂಮ್​ನಲ್ಲಿದ್ದ ಹೆಡ್​ ಕೋಚ್​ ಗೌತಮ್ ಗಂಭೀರ್ ಅಗ್ರೆಸ್ಸಿವ್​ ಆಗಿ ಸಂಭ್ರಮಾಚರಣೆ ಮಾಡಿದರು. ಟೀಮ್ ಇಂಡಿಯಾದ ಹೆಡ್​ ಕೋಚ್​ ಗೌತಮ್ ಗಂಭೀರ್ ಯಾವಾಗಲೂ ನಗು…

The post ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್​ನಲ್ಲಿ ಗೌತಮ್ ಗಂಭೀರ್ ಸೆಲೆಬ್ರೆಷನ್. ಮೊದಲ ಬಾರಿಗೆ ಕಣ್ಣೀರು ಹಾಕಿದ ಕೋಚ್​ ಗಂಭೀರ್​ ​! appeared first on Good News 24x7.

]]>

ಟೀಮ್ ಇಂಡಿಯಾ ಕೇವಲ 6 ರನ್​ಗಳಿಂದ ಜಯಭೇರಿ ಬಾರಿಸಿತು. ಮೊಹಮ್ಮದ್ ಸಿರಾಜ್ ಕೊನೆ ವಿಕೆಟ್​ ಕಬಳಿಸುತ್ತಿದ್ದಂತೆ ಡ್ರೆಸಿಂಗ್ ರೂಮ್​ನಲ್ಲಿದ್ದ ಹೆಡ್​ ಕೋಚ್​ ಗೌತಮ್ ಗಂಭೀರ್ ಅಗ್ರೆಸ್ಸಿವ್​ ಆಗಿ ಸಂಭ್ರಮಾಚರಣೆ ಮಾಡಿದರು.

ಟೀಮ್ ಇಂಡಿಯಾದ ಹೆಡ್​ ಕೋಚ್​ ಗೌತಮ್ ಗಂಭೀರ್ ಯಾವಾಗಲೂ ನಗು ಮುಖದಿಂದ ಇರುವವರೇ ಅಲ್ಲ. ಯಾವಾಗಲೂ ಗಂಭೀರವಾದ ಮುಖ ಇಟ್ಟುಕೊಂಡು ತಂಡದಲ್ಲಿ ಕೋಚ್​ ಬೆರೆಯುತ್ತಿದ್ದರು. ಆದರೆ ನಿನ್ನೆ ಟೆಸ್ಟ್​ ಪಂದ್ಯವನ್ನು ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಗೌತಮ್ ಗಂಭೀರ್ ಅವರು ಸೆಲೆಬ್ರೆಷನ್ ಮಾಡಿರೋದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅವರಲ್ಲಿ ಅಷ್ಟೊಂದು ಖುಷಿಯನ್ನು ಇದೇ ಮೊದಲ ಬಾರಿಗೆ ಸಾಕಷ್ಟು ಕ್ರಿಕೆಟ್​ ಅಭಿಮಾನಿಗಳು ನೋಡಿದ್ದಾರೆ ಎನ್ನಬಹುದು.

https://www.goodnews24x7.com/kannada-veteran-actor-honnavalli-krishna-also-affected-by-the-transport-workers-strike-bus-bandh-is-hot/ ಕನ್ನಡ ಹಿರಿಯ ನಟ ಹೊನ್ನವಳ್ಳಿ ಕೃಷ್ಣಗೂ ತಟ್ಟಿದೆ ಸಾರಿಗೆ ನೌಕರರ ಮುಷ್ಕರದ ಬಸ್​ ಬಂದ್​ ಬಿಸಿ!

ಲಂಡನ್‌ನಲ್ಲಿರುವ ಕೆನ್ನಿಂಗ್ಟನ್‌ನ ಓವಲ್ ಸ್ಟೇಡಿಯಂನಲ್ಲಿ ನಡೆದ 5ನೇ ಟೆಸ್ಟ್​ ಪಂದ್ಯದ ಕೊನೆ ದಿನದಲ್ಲಿ ಟೀಮ್ ಇಂಡಿಯಾ ಕೇವಲ 6 ರನ್​ಗಳಿಂದ ಜಯಭೇರಿ ಬಾರಿಸಿತು. ಮೊಹಮ್ಮದ್ ಸಿರಾಜ್ ಕೊನೆ ವಿಕೆಟ್​ ಕಬಳಿಸುತ್ತಿದ್ದಂತೆ ಡ್ರೆಸಿಂಗ್ ರೂಮ್​ನಲ್ಲಿದ್ದ ಹೆಡ್​ ಕೋಚ್​ ಗೌತಮ್ ಗಂಭೀರ್ ಅಗ್ರೆಸ್ಸಿವ್​ ಆಗಿ ಸಂಭ್ರಮಾಚರಣೆ ಮಾಡಿದರು. ಈ ವಿಡಿಯೋವನ್ನು ಬಿಸಿಸಿಐ ತನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ.

ಮೈದಾನದಲ್ಲಿ ಗಿಲ್ ಪಡೆ ಜಯ ಸಾಧಿಸುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್​ನಲ್ಲಿ ಗೌತಮ್ ಗಂಭೀರ್ ಸೆಲೆಬ್ರೆಷನ್ ಮಾಡುತ್ತ ಮಾರ್ನ್​ ಮಾರ್ಕೆಲ್​ ಅವರ ಮೇಲೆ ಜಂಪ್ ಮಾಡಿ ಖುಷಿ ಪಟ್ಟರು. ಅಲ್ಲಿದ್ದ ಎಲ್ಲರನ್ನು ತಬ್ಬಿಕೊಂಡು, ಕೈಕುಲುಕಿ ಸಂತಸಪಟ್ಟರು. ಇದೇ ವೇಳೆ ಗೌತಮ್ ಗಂಭೀರ್ ಕಣ್ಣಿನಿಂದ ನೀರು ಕೂಡ ಬಂತು. ತುಂಬಾ ಭಾವನಾತ್ಮಕರಾಗಿದ್ದ ಗಂಭೀರ್ ಅತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೋಚ್​ ಈ ರೀತಿ ಕಣ್ಣೀರು ಹಾಕಿದ್ದು ಇದೇ ಮೊದಲ ಬಾರಿ ಆಗಿದೆ.

ಅಂತಿಮ ಟೆಸ್ಟ್​ನಲ್ಲಿ ಜಯಗಳಿಸಿದ ಬಳಿಕ ​​ಗೌತಮ್​ ಗಂಭೀರ್​, ಇಂಗ್ಲೆಂಡ್​ ಹೆಡ್​ಕೋಚ್​ ಬ್ರೆಂಡನ್​ ಮೆಕಲಮ್​ ಪರಸ್ಪರ ಅಭಿನಂದನೆ ಸಲ್ಲಿಸಿದ್ದಾರೆ. ಗೆಲುವಿನ ಬಳಿಕ ಡ್ರೆಸ್ಸಿಂಗ್​ರೂಮ್​ನಿಂದ ನೇರವಾಗಿ ಮೆಕಲಮ್​ ಬಳಿ ತೆರಳಿರೋ ಗಂಭೀರ್​ ಹಸ್ತಲಾಘವ ನೀಡಿದ್ದಾರೆ. ಆ ಬಳಿಕ ಇಬ್ಬರೂ ತಬ್ಬಿಕೊಂಡಿದ್ದಾರೆ. ಹೆಡ್​​ಕೋಚ್​ಗಳ ಸಮಾಗಮದ ವಿಡಿಯೋ ಇಂಟರ್​ನೆಟ್​ನಲ್ಲಿ ವೈರಲ್​ ಆಗಿದೆ.

The post ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್​ನಲ್ಲಿ ಗೌತಮ್ ಗಂಭೀರ್ ಸೆಲೆಬ್ರೆಷನ್. ಮೊದಲ ಬಾರಿಗೆ ಕಣ್ಣೀರು ಹಾಕಿದ ಕೋಚ್​ ಗಂಭೀರ್​ ​! appeared first on Good News 24x7.

]]>
ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು https://www.goodnews24x7.com/team-india-wins-the-final-test-match-with-a-bang/ Mon, 04 Aug 2025 11:24:03 +0000 https://www.goodnews24x7.com/?p=5317 ಇಂಗ್ಲೆಂಡ್​ ವಿರುದ್ಧ ನಡೆದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 2-2 ರಿಂದ ಭಾರತ- ಇಂಗ್ಲೆಂಡ್​ ಸಮಬಲ ಸಾಧಿಸಿವೆ. ಲಂಡನ್‌ನಲ್ಲಿರುವ ಕೆನ್ನಿಂಗ್ಟನ್‌ನ ಓವಲ್ ಸ್ಟೇಡಿಯಂನಲ್ಲಿ ನಡೆದ 5ನೇ ಟೆಸ್ಟ್​…

The post ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು appeared first on Good News 24x7.

]]>

ಇಂಗ್ಲೆಂಡ್​ ವಿರುದ್ಧ ನಡೆದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 2-2 ರಿಂದ ಭಾರತ- ಇಂಗ್ಲೆಂಡ್​ ಸಮಬಲ ಸಾಧಿಸಿವೆ.

ಲಂಡನ್‌ನಲ್ಲಿರುವ ಕೆನ್ನಿಂಗ್ಟನ್‌ನ ಓವಲ್ ಸ್ಟೇಡಿಯಂನಲ್ಲಿ ನಡೆದ 5ನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ಕ್ಯಾಪ್ಟನ್​ ಆಲಿ ಪೋಪ್ ಟಾಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ದ ಶುಭ್​ಮನ್ ಗಿಲ್ ನೇತೃತ್ವದ ಭಾರತ ತಂಡ ಆರಂಭದಲ್ಲಿ ಸಂಕಷ್ಟಕ್ಕೆ ಒಳಗಾಗಿತ್ತು. ಏಕೆಂದರೆ ಜೈಸ್ವಾಲ್​ ಕೇವಲ 2 ರನ್​ಗೆ ಔಟ್ ಆದ್ರೆ ಕನ್ನಡಿಗ ರಾಹುಲ್ ಅವರು ಕೇವಲ 14 ರನ್​ಗಳಿಗೆ ಔಟ್ ಆಗಿ ನಿರಾಸೆ ಮೂಡಿಸಿದ್ದರು.

https://www.youtube.com/live/qNWknyOXIxs?si=kI6c-WUw-4m2I2Shಸೇಟುಗಳಿಗೆ ಸೇಲ್ ಆದ್ರಾ ಮೈಸೂರು ನಗರ ಪಾಲಿಕೆ ಅಧಿಕಾರಿಗಳು! ಚಾಮುಂಡಿ ಪುರಂ ಸರ್ಕಲ್ ನಲ್ಲಿ ಅಕ್ರಮ ಕಟ್ಟಡ!

ನಾಯಕ ಶುಭ್​ಮನ್ ಗಿಲ್ ಕೂಡ 21 ರನ್​ಗೆ ರನೌಟ್ ಆಗಿದ್ದರು. ಧೃವ್ ಜುರೆಲ್ ಹಾಗೂ ವಾಷಿಂಗ್ಟನ್​ ಸುಂದರ್ ಕೆಲ ಸಮಯ ಬ್ಯಾಟಿಂಗ್ ಮಾಡಿದರೂ ಇಂಗ್ಲೆಂಡ್​ ದಾಳಿಗೆ ವಿಕೆಟ್​ ಒಪ್ಪಿಸಿದರು. ಆದರೆ ಇನ್ನೊಬ್ಬ ಕನ್ನಡಿಗ ಕರುಣ್ ನಾಯರ್​ ಅವರ ಅಮೋಘವಾದ ಅರ್ಧಶತಕ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 224 ರನ್​ಗೆ ಆಲೌಟ್ ಆಗಿತ್ತು.

ಇದಾದ ಮೇಲೆ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್​ ಆರಂಭದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿತ್ತು. ಓಪನರ್​ ಜಾಕ್ ಕ್ರಾಲಿ ಅರ್ಧಶತಕ ಬಾರಿಸಿದ್ದರು. ಹ್ಯಾರಿ ಬ್ರೂಕ್​ 53 ರನ್​ ಸಿಡಿಸಿದ್ದರು. ಕೊನೆಯಲ್ಲಿ ಬ್ಯಾಟಿಂಗ್​ನಲ್ಲಿ ವಿಫಲತೆ ಹೆಚ್ಚಾಯಿತು. ಉಳಿದ ಬ್ಯಾಟರ್ಸ್​ ಉತ್ತಮ ಬ್ಯಾಟಿಂಗ್ ಮಾಡದ ಕಾರಣ ಆಂಗ್ಲ ಪಡೆ ಕೇವಲ 247 ರನ್​ಗೆ ಆಲೌಟ್ ಆಗಿತ್ತು. ಆದರೆ ಇನ್ನಿಂಗ್ಸ್​​ನಲ್ಲಿ 23 ರನ್​ಗಳ ಮುನ್ನಡೆ ಕಾಯ್ದುಕೊಂಡಿದ್ದರು.

ನಂತರ 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿತ್ತು. ಆರಂಭಿಕ ಬ್ಯಾಟರ್​ ಯಶಸ್ವಿ ಜೈಸ್ವಾಲ್ 118 ರನ್​ಗಳ ಚಚ್ಚಿ ಭಾರತಕ್ಕೆ ನೆರವಾಗಿದ್ದರು. ಇನ್ನು ಈ ಇನ್ನಿಂಗ್ಸ್​ನಲ್ಲೂ ಕೆ.ಎಲ್ ರಾಹುಲ್ (7)​ ವಿಫಲ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು.

The post ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು appeared first on Good News 24x7.

]]>
ಡೆಡ್ಲಿ ಜೋಫ್ರಾ ಆರ್ಚರ್ 4 ವರ್ಷಗಳ ಬಳಿಕ ಮತ್ತೆ ಕಣಕ್ಕಿಳಿದಿದ್ದಾರೆ…. https://www.goodnews24x7.com/%e0%b2%a1%e0%b3%86%e0%b2%a1%e0%b3%8d%e0%b2%b2%e0%b2%bf-%e0%b2%9c%e0%b3%8b%e0%b2%ab%e0%b3%8d%e0%b2%b0%e0%b2%be-%e0%b2%86%e0%b2%b0%e0%b3%8d%e0%b2%9a%e0%b2%b0%e0%b3%8d-4-%e0%b2%b5%e0%b2%b0%e0%b3%8d/ Thu, 26 Jun 2025 12:35:35 +0000 https://www.goodnews24x7.com/?p=4694 ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ 5 ವಿಕೆಟ್​ಗಳ ಸೋಲನುಭವಿಸಿದೆ. ಇನ್ನು ಉಭಯ ತಂಡಗಳ ನಡುವಣ ಎರಡನೇ ಪಂದ್ಯವು ಜುಲೈ 2 ರಿಂದ ಶುರುವಾಗಲಿದ್ದು, ಈ ಪಂದ್ಯಕ್ಕೆ ಎಡ್ಜ್ ಬಾಸ್ಟನ್‌ ಸ್ಟೇಡಿಯಂ…

The post ಡೆಡ್ಲಿ ಜೋಫ್ರಾ ಆರ್ಚರ್ 4 ವರ್ಷಗಳ ಬಳಿಕ ಮತ್ತೆ ಕಣಕ್ಕಿಳಿದಿದ್ದಾರೆ…. appeared first on Good News 24x7.

]]>

ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ 5 ವಿಕೆಟ್​ಗಳ ಸೋಲನುಭವಿಸಿದೆ. ಇನ್ನು ಉಭಯ ತಂಡಗಳ ನಡುವಣ ಎರಡನೇ ಪಂದ್ಯವು ಜುಲೈ 2 ರಿಂದ ಶುರುವಾಗಲಿದ್ದು, ಈ ಪಂದ್ಯಕ್ಕೆ ಎಡ್ಜ್ ಬಾಸ್ಟನ್‌ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಫಸ್ಟ್ ಕ್ಲಾಸ್ ಕ್ರಿಕೆಟ್​ಗೆ ಮತ್ತೆ ಮರಳಿದ್ದಾರೆ. ಅದು ಕೂಡ ಬರೋಬ್ಬರಿ 4 ವರ್ಷಗಳ ಬಳಿಕ. ಫಿಟ್​ನೆಸ್ ಸಮಸ್ಯೆಯ ಕಾರಣ ವರ್ಷಗಳ ಕಾಲ ಇಂಗ್ಲೆಂಡ್ ತಂಡದಿಂದ ಹೊರಗುಳಿದಿದ್ದ ಆರ್ಚರ್ ಇತ್ತೀಚೆಗಷ್ಟೇ ಸೀಮಿತ ಓವರ್​ಗಳ ಸರಣಿಗಳಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರು ದೀರ್ಘಾವಧಿಯ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಇದೀಗ ವರ್ಷಗಳ ಬಳಿಕ ಆರ್ಚರ್ ರೆಡ್ ಬಾಲ್​ ಕ್ರಿಕೆಟ್​ಗೆ ಮರಳಿದ್ದಾರೆ.

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್​ಶಿಪ್ ಟೆಸ್ಟ್ ಟೂರ್ನಿಯಲ್ಲಿ ಜೋಫ್ರಾ ಆರ್ಚರ್ ಸಸೆಕ್ಸ್ ತಂಡದ ಪರ ಕಣಕ್ಕಿಳಿದಿದ್ದಾರೆ. ಚೆಸ್ಟರ್-ಲೆ-ಸ್ಟ್ರೀಟ್​ನ ರಿವರ್‌ಸೈಡ್ ಮೈದಾನದಲ್ಲಿ ನಡೆದ ಡರ್ಹ್ಯಾಮ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಆರ್ಚರ್ ಮೊದಲ ಇನಿಂಗ್ಸ್​ನಲ್ಲಿ 18 ಓವರ್​ಗಳನ್ನು ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಕೇವಲ 32 ರನ್ ನೀಡಿ ಒಂದು ವಿಕೆಟ್ ಪಡೆದಿದ್ದಾರೆ. ಈ ಮೂಲಕ ಜೋಫ್ರಾ ಆರ್ಚರ್ ತಮ್ಮ ಫಿಟ್​ನೆಸ್ ಅನ್ನು ಸಾಬೀತುಪಡಿಸಿದ್ದಾರೆ.ಇತ್ತ ಕೌಂಟಿ ಕ್ರಿಕೆಟ್​ನಲ್ಲಿ ಆರ್ಚರ್ 18 ಓವರ್​ಗಳನ್ನು ಎಸೆಯುಲು ಯಶಸ್ವಿಯಾಗಿರುವ ಕಾರಣ ಅವರನ್ನು ಭಾರತದ ವಿರುದ್ಧದ ಸರಣಿಗೆ ಆಯ್ಕೆ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳುವ ಸಲುವಾಗಿಯೇ ಆರ್ಚರ್ ಮತ್ತೆ ರೆಡ್ ಬಾಲ್ ಕ್ರಿಕೆಟ್​ನಲ್ಲಿ ಕಣಕ್ಕಿಳಿದಿದ್ದಾರೆ. ಅದರಲ್ಲೂ ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯ ಮುಗಿದರೂ ಇನ್ನೂ 4 ಮ್ಯಾಚ್​ಗಳು ಬಾಕಿಯಿವೆ. ಹೀಗಾಗಿ ಈ ಸರಣಿಯ ಮೂಲಕವೇ ಕಂಬ್ಯಾಕ್ ಮಾಡಲು ಜೋಫ್ರಾ ಆರ್ಚರ್ ಪ್ಲ್ಯಾನ್ ರೂಪಿಸಿದ್ದಾರೆ. ಅದರಂತೆ ಭಾರತದ ವಿರುದ್ಧದ ಎರಡನೇ ಅಥವಾ ಮೂರನೇ ಟೆಸ್ಟ್ ಪಂದ್ಯದ ವೇಳೆ ಜೋಫ್ರಾ ಆರ್ಚರ್ ಇಂಗ್ಲೆಂಡ್ ಟೆಸ್ಟ್ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಎಡ್ಜ್​ಬಾಸ್ಟನ್​ನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಜೋಫ್ರಾ ಆರ್ಚರ್ ಇಂಗ್ಲೆಂಡ್ ತಂಡವನ್ನು ಸೇರಿಕೊಂಡರೆ ಆಂಗ್ಲರ ಬೌಲಿಂಗ್ ಲೈನಪ್ ಮತ್ತಷ್ಟು ಬಲಿಷ್ಠವಾಗಲಿದೆ. ಅದರಲ್ಲೂ ಮಾರಕ ಬೌನ್ಸರ್​ಗೆ ಹೆಸರುವಾಸಿಯಾಗಿರುವ ಆರ್ಚರ್ ಎದುರಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿ ಜೋಫ್ರಾ ಎಂಟ್ರಿಗೂ ಮುನ್ನ ಟೀಮ್ ಇಂಡಿಯಾ ಬ್ಯಾಟರ್​ಗಳು ಘಾತಕ ಎಸೆತಗಳನ್ನು ಎದುರಿಸಲು ಸಜ್ಜಾಬೇಕಿರುವುದು ಅನಿವಾರ್ಯ.

The post ಡೆಡ್ಲಿ ಜೋಫ್ರಾ ಆರ್ಚರ್ 4 ವರ್ಷಗಳ ಬಳಿಕ ಮತ್ತೆ ಕಣಕ್ಕಿಳಿದಿದ್ದಾರೆ…. appeared first on Good News 24x7.

]]>
ಆಂಗ್ಲರ ನಾಡಿನಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಪಾತ್ರ ನಿರ್ಣಾಯಕ…. https://www.goodnews24x7.com/%e0%b2%86%e0%b2%82%e0%b2%97%e0%b3%8d%e0%b2%b2%e0%b2%b0-%e0%b2%a8%e0%b2%be%e0%b2%a1%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1%e0%b2%bf%e0%b2%97/ Thu, 19 Jun 2025 11:53:18 +0000 https://www.goodnews24x7.com/?p=4486 ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಇಂಗ್ಲೆಂಡ್ನಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯಕ್ಕೆ ಹೆಡಿಂಗ್ಲೆ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯದಲ್ಲಿ ಜಯಭೇರಿ ಬಾರಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಶುಭಾರಂಭ ಮಾಡುವ…

The post ಆಂಗ್ಲರ ನಾಡಿನಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಪಾತ್ರ ನಿರ್ಣಾಯಕ…. appeared first on Good News 24x7.

]]>

ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಇಂಗ್ಲೆಂಡ್ನಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯಕ್ಕೆ ಹೆಡಿಂಗ್ಲೆ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯದಲ್ಲಿ ಜಯಭೇರಿ ಬಾರಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ.

ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲು ಯಂಗ್ ಇಂಡಿಯಾ ಸಜ್ಜಾಗಿದೆ. ಈ ಯಂಗ್ ಇಂಡಿಯಾದಲ್ಲಿರುವ ಅತ್ಯಂತ ಅನುಭವಿ ಬ್ಯಾಟರ್ ಎಂದರೆ ನಮ್ಮ ಕನ್ನಡಿಗ ಕೆಎಲ್ ರಾಹುಲ್ . ಈಗಾಗಲೇ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿಯೇ ಈ ಬಾರಿ ಕನ್ನಡಿಗನ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಈ ನಿರೀಕ್ಷೆಗಳೊಂದಿಗೆ ಕೆಎಲ್ ರಾಹುಲ್ ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಏಕೆಂದರೆ ಭಾರತ ಟೆಸ್ಟ್ ತಂಡದ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ರೋಹಿತ್ ಶರ್ಮಾ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಈ ಹಿಂದೆ ಹಿಟ್ಮ್ಯಾನ್ ಅನುಪಸ್ಥಿತಿಯಲ್ಲಿ ರಾಹುಲ್, ಯಶಸ್ವಿ ಜೈಸ್ವಾಲ್ ಜೊತೆ ಇನಿಂಗ್ಸ್ ಆರಂಭಿಸಿದ್ದರು.

ಹೀಗಾಗಿ ಈ ಬಾರಿ ಶುಭಾರಂಭದ ಜವಾಬ್ದಾರಿ ಕೆಎಲ್ ರಾಹುಲ್ ಹೆಗಲೇರುವುದು ಬಹುತೇಕ ಖಚಿತ. ಏಕೆಂದರೆ ಇಂಗ್ಲೆಂಡ್ನಲ್ಲಿ 9 ಟೆಸ್ಟ್ ಪಂದ್ಯಗಳನ್ನಾಡಿದ ಅನುಭವ ಕೂಡ ಕೆಎಲ್ಆರ್ ಜೊತೆಗಿದೆ. ಈ ಒಂಭತ್ತು ಪಂದ್ಯಗಳಲ್ಲಿ 18 ಇನಿಂಗ್ಸ್ ಆಡಿರುವ ರಾಹುಲ್ 614 ರನ್ ಕಲೆಹಾಕಿದ್ದಾರೆ. ಅಂದರೆ 34.11 ಸರಾಸರಿಯಲ್ಲಿ ಆಂಗ್ಲರ ನಾಡಿನಲ್ಲಿ ರನ್ಗಳಿಸಿದ್ದಾರೆ .ಈ 18 ಇನಿಂಗ್ಸ್ಗಳಲ್ಲಿ ಕೆಎಲ್ ರಾಹುಲ್ ಬ್ಯಾಟ್ನಿಂದ 2 ಭರ್ಜರಿ ಶತಕಗಳು ಸಹ ಮೂಡಿಬಂದಿವೆ. ಹಾಗೆಯೇ ಒಂದು ಅರ್ಧಶತಕವನ್ನು ಸಹ ಬಾರಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಸ್ತುತ ಟೀಮ್ ಇಂಡಿಯಾದಲ್ಲಿರುವ ಬ್ಯಾಟರ್ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ವಿರುದ್ಧ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಕೂಡ ಕೆಎಲ್ ರಾಹುಲ್. ಇಂಗ್ಲೆಂಡ್ ವಿರುದ್ಧ ಈವರೆಗೆ 24 ಇನಿಂಗ್ಸ್ ಆಡಿರುವ ಕೆಎಲ್ ರಾಹುಲ್ ಒಟ್ಟು 955 ರನ್ ಕಲೆಹಾಕಿದ್ದಾರೆ. ಹೀಗಾಗಿಯೇ ಆಂಗ್ಲರ ವಿರುದ್ಧ ಟೀಮ್ ಇಂಡಿಯಾ ಸರಣಿ ಗೆಲ್ಲಬೇಕಿದ್ದರೆ ಕನ್ನಡಿಗನ ಪಾತ್ರ ನಿರ್ಣಾಯಕವಾಗಲಿದೆ. ಈ ಜವಾಬ್ದಾರಿಯುತ ಪಾತ್ರದೊಂದಿಗೆ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಸೆಟೆದು ನಿಂತು ಭಾರತ ತಂಡಕ್ಕೆ ಗೆಲುವು ತಂದುಕೊಡಲಿದ್ದಾರಾ ಕಾದು ನೋಡಬೇಕಿದೆ.

 

 

 

The post ಆಂಗ್ಲರ ನಾಡಿನಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಪಾತ್ರ ನಿರ್ಣಾಯಕ…. appeared first on Good News 24x7.

]]>
ಮೂವರು ಕನ್ನಡಿಗರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಿಂದ ಆಯ್ಕೆ. https://www.goodnews24x7.com/three-kannadigas-selected-in-indias-test-series-against-england/ Sat, 24 May 2025 12:48:31 +0000 https://www.goodnews24x7.com/?p=4068 ಮುಂಬೈ : ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಇಬ್ಬರು ಕನ್ನಡಿಗರಿಗೆ ಸ್ಥಾನ ದೊರೆತಿದೆ. 18 ಸದಸ್ಯರ ಟೆಸ್ಟ್ ತಂಡದ ನಾಯಕರಾಗಿ ಯುವ ಆಟಗಾರ ಶುಭ್ಮನ್ ಗಿಲ್, ಉಪನಾಯಕರಾಗಿ ರಿಷಬ್ ಪಂತ್ ಆಯ್ಕೆಯಾಗಿದ್ದಾರೆ. ಟೆಸ್ಟ್ ತಂಡದಲ್ಲಿ ಕನ್ನಡಿಗರಾದ ಕೆ.ಎಲ್…

The post ಮೂವರು ಕನ್ನಡಿಗರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಿಂದ ಆಯ್ಕೆ. appeared first on Good News 24x7.

]]>

ಮುಂಬೈ : ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಇಬ್ಬರು ಕನ್ನಡಿಗರಿಗೆ ಸ್ಥಾನ ದೊರೆತಿದೆ.
18 ಸದಸ್ಯರ ಟೆಸ್ಟ್ ತಂಡದ ನಾಯಕರಾಗಿ ಯುವ ಆಟಗಾರ ಶುಭ್ಮನ್ ಗಿಲ್, ಉಪನಾಯಕರಾಗಿ ರಿಷಬ್ ಪಂತ್ ಆಯ್ಕೆಯಾಗಿದ್ದಾರೆ. ಟೆಸ್ಟ್ ತಂಡದಲ್ಲಿ ಕನ್ನಡಿಗರಾದ ಕೆ.ಎಲ್ ರಾಹುಲ್ , ಕರುಣ್ ನಾಯರ್, ಪ್ರಸಿದ್ ಕೃಷ್ಣಗೆ ಸ್ಥಾನ ಲಭಿಸಿದೆ.

ಕೆ.ಎಲ್ ರಾಹುಲ್

ಪ್ರಸಿದ್ ಕೃಷ್ಣ

ಕರುಣ್ ನಾಯರ್

 

ತಂಡದಲ್ಲಿ ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್ ಹಾಗೂ ಸಾಯಿ ಸುದರ್ಶನ್ ಕಾಣಿಸಿಕೊಂಡಿದ್ದಾರೆ. ಆಲ್ರೌಂಡರ್ಗಳಾಗಿ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ವೇಗದ ಬೌಲರ್ ಗಳಾಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್ ಹಾಗೂ ಅರ್ಷದೀಪ್ ಸಿಂಗ್ ಆಯ್ಕೆಯಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಈ ಕೆಳಗಿನಂತಿದೆ
ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್.

ಶುಭ್ಮನ್ ಗಿಲ್ (ನಾಯಕ)

ರಿಷಭ್ ಪಂತ್ (ಉಪನಾಯಕ)

 

 

ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ ಹೀಗಿದೆ ನೋಡಿ
ಮೊದಲ ಟೆಸ್ಟ್: 20-24 ಜೂನ್, 2025
2ನೇ ಟೆಸ್ಟ್: ಜುಲೈ 2-6, 2025
3ನೇ ಟೆಸ್ಟ್: ಜುಲೈ 10-14, 2025
4ನೇ ಟೆಸ್ಟ್: 23-27 ಜುಲೈ, 2025
5ನೇ ಟೆಸ್ಟ್: 31 ಜುಲೈ-4 ಆಗಸ್ಟ್, 2025

The post ಮೂವರು ಕನ್ನಡಿಗರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಿಂದ ಆಯ್ಕೆ. appeared first on Good News 24x7.

]]>
ಟೀಮ್ ಇಂಡಿಯಾಗೆ 142 ರನ್​ಗಳ ರೋಚಕ ಗೆಲುವು… ಇಂಗ್ಲೆಂಡ್ ವೈಟ್ ವಾಶ್… https://www.goodnews24x7.com/team-india-won-by-142-runs-england-whitewashed/ Wed, 12 Feb 2025 16:16:52 +0000 https://www.goodnews24x7.com/?p=2287 ಅಹಮದಾಬಾದ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು 142 ರನ್‌ಗಳಿಂದ ಸೋಲಿಸಿ 3-0 ರಿಂದ ಸರಣಿಯನ್ನು ಗೆದ್ದುಕೊಂಡಿದೆ. ಶುಭ್‌ಮನ್ ಗಿಲ್ (112), ವಿರಾಟ್ ಕೊಹ್ಲಿ (52) ಮತ್ತು ಶ್ರೇಯಸ್ ಅಯ್ಯರ್ (78) ಅವರ ಅದ್ಭುತ ಬ್ಯಾಟಿಂಗ್‌ನಿಂದ ಭಾರತ 356…

The post ಟೀಮ್ ಇಂಡಿಯಾಗೆ 142 ರನ್​ಗಳ ರೋಚಕ ಗೆಲುವು… ಇಂಗ್ಲೆಂಡ್ ವೈಟ್ ವಾಶ್… appeared first on Good News 24x7.

]]>

ಅಹಮದಾಬಾದ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು 142 ರನ್‌ಗಳಿಂದ ಸೋಲಿಸಿ 3-0 ರಿಂದ ಸರಣಿಯನ್ನು ಗೆದ್ದುಕೊಂಡಿದೆ. ಶುಭ್‌ಮನ್ ಗಿಲ್ (112), ವಿರಾಟ್ ಕೊಹ್ಲಿ (52) ಮತ್ತು ಶ್ರೇಯಸ್ ಅಯ್ಯರ್ (78) ಅವರ ಅದ್ಭುತ ಬ್ಯಾಟಿಂಗ್‌ನಿಂದ ಭಾರತ 356 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಭಾರತದ ಬೌಲರ್ ಗಳ ದಾಳಿಯನ್ನು ಎದುರಿಸಲಾಗದೆ 34.2 ಓವರ್ ಗಳಲ್ಲಿ ಕೇವಲ 214 ರನ್ ಗಳಿಗೆ ಆಲೌಟ್ ಆಯಿತು. ದೊಡ್ಡ ಮೊತ್ತದ ಗುರಿ ಪಡೆದಿದ್ದರೂ ಇಂಗ್ಲೆಂಡ್ ತಂಡದ ಒಬ್ಬನೇ ಒಬ್ಬ ಬ್ಯಾಟರ್ ಕೂಡ ಅರ್ಧಶತಕ ಸಹ ಗಳಿಸಲು ಸಫಲವಾಗಲಿಲ್ಲ. ಭಾರತದ ಪರ ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರು. ಉಳಿದೆರಡು ವಿಕೆಟ್ ವಾಶಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ಪಾಲಾಯಿತು.

The post ಟೀಮ್ ಇಂಡಿಯಾಗೆ 142 ರನ್​ಗಳ ರೋಚಕ ಗೆಲುವು… ಇಂಗ್ಲೆಂಡ್ ವೈಟ್ ವಾಶ್… appeared first on Good News 24x7.

]]>
ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ; ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ https://www.goodnews24x7.com/england-win-toss-elect-to-bat-india-make-two-changes/ Sun, 09 Feb 2025 07:50:26 +0000 https://www.goodnews24x7.com/?p=2278 ಭಾರತ VS ಇಂಗ್ಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯ, ಟಾಸ್ ಗೆದ್ದು ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಬ್ಯಾಟಿಂಗ್ ಆಯ್ಕೆ. ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಯಶಸ್ವಿ ಜೈಸ್ವಾಲ್, ಕುಲದೀಪ್ ಯಾದವ್ ಹೊರಗುಳಿದಿದ್ದು ಅವರ ಬದಲಿಗೆ ವಿರಾಟ್ ಕೊಹ್ಲಿ, ವರುಣ್…

The post ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ; ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ appeared first on Good News 24x7.

]]>

ಭಾರತ VS ಇಂಗ್ಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯ, ಟಾಸ್ ಗೆದ್ದು ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಬ್ಯಾಟಿಂಗ್ ಆಯ್ಕೆ. ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಯಶಸ್ವಿ ಜೈಸ್ವಾಲ್, ಕುಲದೀಪ್ ಯಾದವ್ ಹೊರಗುಳಿದಿದ್ದು ಅವರ ಬದಲಿಗೆ ವಿರಾಟ್ ಕೊಹ್ಲಿ, ವರುಣ್ ಚಕ್ರವರ್ತಿ ಸ್ಥಾನ ಗಿಟ್ಟಿಸಿದ್ದಾರೆ. ಬಾರಾಬತಿ ಕ್ರೀಡಾಂಗಣ, ಕಟಕ್ ನಲ್ಲಿ ಪಂದ್ಯ ನಡೆಯುತ್ತಿದ್ದು. ಒಂದು ವೇಳೆ ಟೀಂ ಇಂಡಿಯಾ 2ನೇ ಏಕದಿನ ಗೆದ್ದರೆ ಸರಣಿಯನ್ನು ವಶಪಡಿಸಿಕೊಳ್ಳಲಿದೆ. ಇತ್ತ ಇಂಗ್ಲೆಂಡ್‌ ಗೆದ್ದರೆ ಸರಣಿ 1-1 ರಿಂದ ಸಮಬಲವಾಗಲಿದೆ.

ಭಾರತ (ಆಟದ XI): ರೋಹಿತ್ ಶರ್ಮಾ(ಸಿ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ಸಿ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ

ಇಂಗ್ಲೆಂಡ್ (ಆಟದ XI): ಫಿಲಿಪ್ ಸಾಲ್ಟ್(ವಿಕೆಟ್ ಕೀಪರ್), ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್(ಸಿ), ಲಿಯಾಮ್ ಲಿವಿಂಗ್‌ಸ್ಟೋನ್, ಜೇಮೀ ಓವರ್ಟನ್, ಗಸ್ ಅಟ್ಕಿನ್ಸನ್, ಆದಿಲ್ ರಶೀದ್, ಮಾರ್ಕ್ ವುಡ್, ಸಾಕಿಬ್ ಮಹಮೂದ್

The post ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ; ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ appeared first on Good News 24x7.

]]>
ನಾಳೆಯಿಂದ ಭಾರತ VS ಇಂಗ್ಲೆಂಡ್ ನಡುವಿನ ಏಕದಿನ ಸರಣಿ https://www.goodnews24x7.com/india-vs-england-odi-series-from-tomorrow/ Wed, 05 Feb 2025 11:11:33 +0000 https://www.goodnews24x7.com/?p=2262 ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು. ಈ ಸರಣಿಗಾಗಿ ಒಟ್ಟು 16 ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಣ 3 ಪಂದ್ಯಗಳ ಏಕದಿನ ಸರಣಿಯು ಫೆಬ್ರವರಿ 6 ರಿಂದ…

The post ನಾಳೆಯಿಂದ ಭಾರತ VS ಇಂಗ್ಲೆಂಡ್ ನಡುವಿನ ಏಕದಿನ ಸರಣಿ appeared first on Good News 24x7.

]]>

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು. ಈ ಸರಣಿಗಾಗಿ ಒಟ್ಟು 16 ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಣ 3 ಪಂದ್ಯಗಳ ಏಕದಿನ ಸರಣಿಯು ಫೆಬ್ರವರಿ 6 ರಿಂದ ಶುರುವಾಗಲಿದೆ. ಮೊದಲ ಪಂದ್ಯವು ನಾಗ್ಪುರದಲ್ಲಿ ನಡೆದರೆ, ಎರಡನೇ ಪಂದ್ಯವು ಕಟಕ್ ಅಡಿಲೇಡ್​ನಲ್ಲಿ ಜರುಗಲಿದೆ. ಕೊನೆಯ ಪಂದ್ಯವು ಅಹಮದಾಬಾದ್ ಯಲ್ಲಿ ಜರುಗಲಿದೆ.

ಭಾರತ ತಂಡ : ರೋಹಿತ್ ಶರ್ಮಾ(C), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್(W), ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅರ್ಷ್‌ದೀಪ್ ಸಿಂಗ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಯಶಸ್ವಿ ಜೈಸ್ವಾಲ್, ವರುಣ್ ಚಕ್ರವರ್ತಿ, ರಾಹುಲ್ ಚಕ್ರವರ್ತಿ, ರಾಹುಲ್ ಚಕ್ರವರ್ತಿ

ಇಂಗ್ಲೆಂಡ್ ತಂಡ : ಫಿಲಿಪ್ ಸಾಲ್ಟ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (w/c), ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಆದಿಲ್ ರಶೀದ್, ಗಸ್ ಅಟ್ಕಿನ್ಸನ್, ಮಾರ್ಕ್ ವುಡ್, ಜೇಮೀ ಓವರ್ಟನ್, ಸಾಕಿಬ್ ಮಹಮೂದ್, ಜೇಮೀ ಸ್ಮಿತ್, ಜೋಫ್ರಾ ಆರ್ಚರ್.

The post ನಾಳೆಯಿಂದ ಭಾರತ VS ಇಂಗ್ಲೆಂಡ್ ನಡುವಿನ ಏಕದಿನ ಸರಣಿ appeared first on Good News 24x7.

]]>
ಇಂದು ಭಾರತ VS ಇಂಗ್ಲೆಂಡ್ ವಿರುದ್ಧ 5ನೇ ಟಿ20 ಪಂದ್ಯ https://www.goodnews24x7.com/today-is-the-5th-t20-match-against-india-vs-england/ Sun, 02 Feb 2025 03:47:10 +0000 https://www.goodnews24x7.com/?p=2087 ಭಾರತ ತಂಡ ಇಂಗ್ಲೆಂಡ್ ವಿರುದ್ಧ ಕೊನೆಯ ಟಿ20 ಪಂದ್ಯ ಆಡಲಿದೆ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಪುಣೆಯಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ಭಾರತ 3-1 ಅಂತರದ ಮುನ್ನಡೆ ಸಾಧಿಸಿದೆ. ಭಾರತ…

The post ಇಂದು ಭಾರತ VS ಇಂಗ್ಲೆಂಡ್ ವಿರುದ್ಧ 5ನೇ ಟಿ20 ಪಂದ್ಯ appeared first on Good News 24x7.

]]>

ಭಾರತ ತಂಡ ಇಂಗ್ಲೆಂಡ್ ವಿರುದ್ಧ ಕೊನೆಯ ಟಿ20 ಪಂದ್ಯ ಆಡಲಿದೆ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಪುಣೆಯಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ಭಾರತ 3-1 ಅಂತರದ ಮುನ್ನಡೆ ಸಾಧಿಸಿದೆ.

ಭಾರತ ತಂಡ: ಸಂಜು ಸ್ಯಾಮ್ಸನ್(W), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್(C), ಧ್ರುವ ಜುರೆಲ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ, ರಿಂಕು ಸಿಂಗ್, ಶಿವಂ ದುಬೆ , ರಮಣದೀಪ್ ಸಿಂಗ್, ಹರ್ಷಿತ್ ರಾಣಾ.

ಇಂಗ್ಲೆಂಡ್ ತಂಡ : ಬೆನ್ ಡಕೆಟ್, ಫಿಲಿಪ್ ಸಾಲ್ಟ್(W), ಜೋಸ್ ಬಟ್ಲರ್(C), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಜೇಮೀ ಓವರ್ಟನ್, ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್, ಸಾಕಿಬ್ ಮಹಮೂದ್, ಗಸ್ ಅಟ್ಕಿನ್ಸನ್, ಜೇಮೀ ಸ್ಮಿತ್, ರೆಹಾನ್ ಅಹ್ಮದ್.

The post ಇಂದು ಭಾರತ VS ಇಂಗ್ಲೆಂಡ್ ವಿರುದ್ಧ 5ನೇ ಟಿ20 ಪಂದ್ಯ appeared first on Good News 24x7.

]]>