FAMILY Archives - Good News 24x7 https://www.goodnews24x7.com/tag/family/ Kannada Mon, 29 Jun 2026 10:54:31 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg FAMILY Archives - Good News 24x7 https://www.goodnews24x7.com/tag/family/ 32 32 ಪತಿ ಕೊಂ*ದು ಕಥೆ ಕಟ್ಟಿದ್ದ ಪತ್ನಿ https://www.goodnews24x7.com/wife-who-fabricated-story-of-husbands-murder/ Mon, 29 Jun 2026 10:54:31 +0000 https://www.goodnews24x7.com/?p=9702 29 ಜೂನ್ 2026 , ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿ ನಡೆದಿದ್ದ ನಿತ್ಯಾನಂದ ಅವರ ಅನುಮಾನಾಸ್ಪದ ಸಾ*ವಿನ ಪ್ರಕರಣ ಕೊ*ಲೆ ಪ್ರಕರಣವಾಗಿ ತಿರುಗಿದ್ದು, ಪತ್ನಿ ಸುಶೀಲ ಅವರೇ ಗಂಡನನ್ನು ಹ*ತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.…

The post ಪತಿ ಕೊಂ*ದು ಕಥೆ ಕಟ್ಟಿದ್ದ ಪತ್ನಿ appeared first on Good News 24x7.

]]>

29 ಜೂನ್ 2026 , ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿ ನಡೆದಿದ್ದ ನಿತ್ಯಾನಂದ ಅವರ ಅನುಮಾನಾಸ್ಪದ ಸಾ*ವಿನ ಪ್ರಕರಣ ಕೊ*ಲೆ ಪ್ರಕರಣವಾಗಿ ತಿರುಗಿದ್ದು, ಪತ್ನಿ ಸುಶೀಲ ಅವರೇ ಗಂಡನನ್ನು ಹ*ತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಂಪತಿಗೆ ಮಕ್ಕಳಿರಲಿಲ್ಲ ಸಾಂಸಾರಿಕ ಕಲಹ, ಹಣಕಾಸು ಮತ್ತು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು 50 ವರ್ಷದ ನಿತ್ಯಾನಂದ ಅವರು ಖಾಸಗಿ ಮಹೀಂದ್ರಾ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಸುಶೀಲ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಎನ್ನಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ನಿತ್ಯಾನಂದ ಪ್ರತಿನಿತ್ಯ ಮದ್ಯಪಾನ ಮಾಡುತ್ತಿದ್ದರು. ಶನಿವಾರ ರಾತ್ರಿ ಕೂಡ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಮನೆಗೆ ತೆರಳಿದ್ದರು. ಬಳಿಕ ಮದ್ಯದ ಅಮಲಿನಲ್ಲಿ ಮಲಗಿದ್ದ ವೇಳೆ ಪತ್ನಿ ಸುಶೀಲ ಕುತ್ತಿಗೆಗೆ ಹಗ್ಗ ಬಿಗಿದು ಹ*ತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೊ*ಲೆ ಬಳಿಕ ಘಟನೆಗೆ ಹೃದಯಾಘಾತದ ಬಣ್ಣ ನೀಡಲು ಸುಶೀಲ ಯತ್ನಿಸಿದ್ದಾಳೆ ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಬಹಳ ಹೊತ್ತಾದರೂ ಮನೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ನಿತ್ಯಾನಂದ ಅವರ ಸ್ನೇಹಿತ ದರ್ಶನ್ ಹಲವು ಬಾರಿ ಕರೆ ಮಾಡಿದ್ದರು. ಕರೆಗಳಿಗೆ ಸಮರ್ಪಕ ಉತ್ತರ ಸಿಗದ ಕಾರಣ ಅವರು ಮನೆ ಬಳಿ ಬಂದು ಬಾಗಿಲು ತಟ್ಟಿದರೂ ಸುಶೀಲ ಬಾಗಿಲು ತೆರೆಯಲಿಲ್ಲ ಎಂದು ತಿಳಿದುಬಂದಿದೆ.

ಬಳಿಕ ಸುಶೀಲ ಅವರು ನಿತ್ಯಾನಂದ ಅವರ ಅಣ್ಣನಿಗೆ ಕರೆ ಮಾಡಿ, “ನಿಮ್ಮ ತಮ್ಮನಿಗೆ ಹೃದಯಾಘಾತವಾಗಿದೆ” ಎಂದು ಮಾಹಿತಿ ನೀಡಿದ್ದಾರೆ. ತಕ್ಷಣ ಮನೆಗೆ ಆಗಮಿಸಿದ ನಿತ್ಯಾನಂದ ಅವರ ಅಣ್ಣ ಮೃ*ತದೇಹವನ್ನು ಪರಿಶೀಲಿಸಿದಾಗ ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ.

ಇದರಿಂದ ಅನುಮಾನಗೊಂಡ ಅವರು ಕುವೆಂಪುನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸುಶೀಲ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲೇ ಕೊ*ಲೆ ಮಾಡಿರುವ ವಿಚಾರವನ್ನು ಸುಶೀಲ ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಮ*ರಣೋತ್ತರ ಪರೀಕ್ಷೆಯ ವರದಿ ಹಾಗೂ ಮುಂದಿನ ತನಿಖೆಯ ಬಳಿಕ ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

The post ಪತಿ ಕೊಂ*ದು ಕಥೆ ಕಟ್ಟಿದ್ದ ಪತ್ನಿ appeared first on Good News 24x7.

]]>
ಯುವತಿ ಸೇರಿ ಹೆತ್ತವರ ದಾರುಣ ಅ*0ತ್ಯ https://www.goodnews24x7.com/a-young-woman-who-was-supposed-to-get-married-and-her-parents-met-a-tragic-end/ Mon, 22 Jun 2026 11:26:14 +0000 https://www.goodnews24x7.com/?p=9632 ಮೈಸೂರಿನ ಟಿ.ನರಸೀಪುರದಲ್ಲಿ ನಾಡಿದ್ದು ಮದುವೆಯಾಗಬೇಕಿದ್ದ ಯುವತಿ ಹಾಗೂ ಆಕೆಯ ಹೆತ್ತವರು ಅದೇ ಗ್ರಾಮದ ವ್ಯಕ್ತಿಯೋರ್ವನ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ದಾರುಣವಾಗಿ ಅಂ*ತ್ಯ ಕಂಡಿದ್ದಾರೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನವೂ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ವರುಣ…

The post ಯುವತಿ ಸೇರಿ ಹೆತ್ತವರ ದಾರುಣ ಅ*0ತ್ಯ appeared first on Good News 24x7.

]]>

ಮೈಸೂರಿನ ಟಿ.ನರಸೀಪುರದಲ್ಲಿ ನಾಡಿದ್ದು ಮದುವೆಯಾಗಬೇಕಿದ್ದ ಯುವತಿ ಹಾಗೂ ಆಕೆಯ ಹೆತ್ತವರು ಅದೇ ಗ್ರಾಮದ ವ್ಯಕ್ತಿಯೋರ್ವನ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ದಾರುಣವಾಗಿ ಅಂ*ತ್ಯ ಕಂಡಿದ್ದಾರೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನವೂ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ವರುಣ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರು, ಜೂನ್​​ 22: ದಾಂಪತ್ಯ ಜೀವನದ ಕನಸು ಕಂಡಿದ್ದ ಯುವತಿ ಸೇರಿ ಆಕೆಯ ಹೆತ್ತವರು ದಾರುಣ ಅಂ*ತ್ಯ ಕಂಡಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ವ್ಯಕ್ತಿಯೋರ್ವನಿಂದ ಯುವತಿಗೆ ಕಿರುಕುಳ ಹಿನ್ನೆಲೆ ವಿಷ ಸೇವಿಸಿ ಮೂವರು ಒಟ್ಟಿಗೆ ಪ್ರಾಣಬಿಟ್ಟಿದ್ದಾರೆ. ಶಿವಣ್ಣ, ನಾಗರತ್ನ ಹಾಗೂ ರಕ್ಷಿತಾ ಮೃ*ತರಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್​​ 24, ಅಂದರೆ ನಾಡಿದ್ದು ರಕ್ಷಿತಾ ವಿವಾಹ ನಡೆಯಬೇಕಿತ್ತು. ಆದರೆ ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.

ರಕ್ಷಿತಾಗೆ ಉಲ್ಲಾಸ್ ಗೌಡ ಎಂಬಾತ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಈತನಿಗೆ ರಕ್ಷಿತಾ ಕಳುಹಿಸಿದ್ದ ಮೆಸೇಜ್ ಹಾಗೂ ಕೆಲವು ಫೋಟೋಗಳನ್ನು ಇಟ್ಟುಕೊಂಡು ಮಾನಸಿಕ ಹಿಂಸೆ ನೀಡಿದ್ದ ಎನ್ನಲಾಗಿದೆ. ರಕ್ಷಿತಾ ಜೊತೆ ಮದುವೆ ನಿಶ್ಚಯವಾಗಿದ್ದ ಹುಡುಗನಿಗೂ ಈತ ಫೋಟೋಗಳನ್ನು ಕಳುಹಿಸಿದ್ದ. ಹೀಗಾಗಿ ಮಾನಕ್ಕೆ ಅಂಜಿದ ಕುಟುಂಬಸ್ಥರು ಮನೆಯಲ್ಲೇ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಮೂವರ ಸಾ*ವಿಗೂ ಉಲ್ಲಾಸ್ ಗೌಡ‌ನೇ ಕಾರಣನೆಂದು ರಕ್ಷಿತಾ ಡೆ*ತ್​ನೋಟ್ ಬರೆದಿರೋದು ಕೂಡ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ವರುಣ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಂಬಂಧಿಕರ ಆಕ್ರಂದನ

ಹಸೆಮಣೆ ಏರಬೇಕಿದ್ದ ಮೊಮ್ಮಗಳ ಜೊತೆ ಅಳಿಯ-ಮಗಳು ಕೂಡ ಮಸಣಕ್ಕೆ ಸೇರಿದ್ದಾರೆ. ರಕ್ಷಿತಾ ಮದುವೆಗೆ ಎಲ್ಲ ಸಿದ್ಧತೆಗಳು ನಡೆದಿತ್ತು. ಆದರೆ ಉಲ್ಲಾಸ್​​ ಗೌಡ ಎಂಬಾತ ಮದುವೆ ನಿಲ್ಲಿಸಬೇಕೆಂದು ನನ್ನ ಮೊಮ್ಮಗಳ ಮಾನ ತೆಗೆದಿದ್ದಾನೆ. ಈತ ನನ್ನ ಅಳಿಯನಿಗೆ ಪರಿಚಯಸ್ಥನಾಗಿದ್ದು, ಟ್ರ್ಯಾಕ್ಟರ್ ಓಡಿಸುತ್ತಿದ್ದ ಈತನಿಗೆ ಅಳಿಯನ ಜೊತೆ ಒಡನಾಟ ಇತ್ತು. ಆಗಾಗ ಮನೆಗೆ ಕೂಡ ಆತ ಬಂದು ಹೋಗುತ್ತಿದ್ದ. ನನ್ನ ಮಗಳು, ಅಳಿಯ ಮತ್ತು ಮೊಮ್ಮಗಳ ಸಾ*ವಿಗೆ ಕಾರಣವಾದ ಉಲ್ಲಾಸ್ ಗೌಡನಿಗೆ ಶಿಕ್ಷೆ ಆಗಬೇಕು ಎಂದು ರಕ್ಷಿತಾಳ ಅಜ್ಜಿ ಚಿನ್ನಮ್ಮ ಆಗ್ರಹಿಸಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರ ಆಕ್ರಂದನವೂ ಮುಗಿಲು ಮುಟ್ಟಿದೆ.

ಆ್ಯಂಬುಲೆನ್ಸ್​​ಗೆ ಗ್ರಾಮಸ್ಥರ ಮುತ್ತಿಗೆ

ಆರೋಪಿ ಉಲ್ಲಾಸ್ ಗೌಡ ಬಂಧನಕ್ಕೆ ಗ್ರಾಮಸ್ಥರು ಪಟ್ಟುಹಿಡಿದಿದ್ದು, ಬಂಧನವರೆಗೂ ಮೃ*ತದೇಹಗಳನ್ನು ತೆಗೆದುಕೊಂಡು ಹೋಗದಂತೆ ತಾಕೀತು ಮಾಡಿದ್ದಾರೆ. ಹೀಗಾಗಿ ಪೊಲೀಸರ ಜೊತೆ ಸಂಬಂಧಿಕರು ಹಾಗೂ ಗ್ರಾಮಸ್ಥರ ಮಾತಿನ ಚಕಮಕಿ ನಡೆದಿದೆ. ವಿರೋಧದ ನಡುವೆಯೂ ಶ*ವಗಳನ್ನು ಕೊಂಡೊಯ್ಯುತ್ತಿದ್ದ ಕಾರಣ ಆ್ಯಂಬುಲೆನ್ಸ್​ಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಪ್ರಸಂಗವೂ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಸಹಾಯಕ ಸಿ. ಟಿ.ಕುಮಾರ್ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರೂ ಗ್ರಾಮಸ್ಥರು ಮಾತ್ರ ನಿರ್ಧಾರದಿಂದ ಹಿಂದೆ ಸರಿದಿಲ್ಲ.

The post ಯುವತಿ ಸೇರಿ ಹೆತ್ತವರ ದಾರುಣ ಅ*0ತ್ಯ appeared first on Good News 24x7.

]]>
ಕಾಫಿನಾಡಿನಲ್ಲಿ ‘ದಂಪತಿ’ ಪಥ: ಅತ್ತ ಸಿಎಂ ಅಭಿವೃದ್ಧಿ ಮಂತ್ರ, ಇತ್ತ ಪತ್ನಿಯಿಂದ ‘ಟೆಂಪಲ್ ರನ್’! https://www.goodnews24x7.com/couple-path-in-kaffi-nadu-cms-development-mantra-wifes-temple-run/ Tue, 14 Apr 2026 08:34:32 +0000 https://www.goodnews24x7.com/?p=9274 ಚಿಕ್ಕಮಗಳೂರು: ಜಿಲ್ಲೆಯಲ್ಲಿ ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯಲ್ಲಿ ಬ್ಯುಸಿಯಾಗಿದ್ದರೆ, ಮತ್ತೊಂದೆಡೆ ಅವರ ಪತ್ನಿ ಪಾರ್ವತಿ ಅವರು ಕುಟುಂಬ ಸಮೇತರಾಗಿ ಪುಣ್ಯಕ್ಷೇತ್ರಗಳ ದರ್ಶನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಪಾರ್ವತಿ ಸಿದ್ದರಾಮಯ್ಯ ಅವರ ಆಧ್ಯಾತ್ಮಿಕ ಪಯಣ ಮುಖ್ಯಮಂತ್ರಿಗಳ ಪತ್ನಿ…

The post ಕಾಫಿನಾಡಿನಲ್ಲಿ ‘ದಂಪತಿ’ ಪಥ: ಅತ್ತ ಸಿಎಂ ಅಭಿವೃದ್ಧಿ ಮಂತ್ರ, ಇತ್ತ ಪತ್ನಿಯಿಂದ ‘ಟೆಂಪಲ್ ರನ್’! appeared first on Good News 24x7.

]]>

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯಲ್ಲಿ ಬ್ಯುಸಿಯಾಗಿದ್ದರೆ, ಮತ್ತೊಂದೆಡೆ ಅವರ ಪತ್ನಿ ಪಾರ್ವತಿ ಅವರು ಕುಟುಂಬ ಸಮೇತರಾಗಿ ಪುಣ್ಯಕ್ಷೇತ್ರಗಳ ದರ್ಶನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಪಾರ್ವತಿ ಸಿದ್ದರಾಮಯ್ಯ ಅವರ ಆಧ್ಯಾತ್ಮಿಕ ಪಯಣ
ಮುಖ್ಯಮಂತ್ರಿಗಳ ಪತ್ನಿ ಪಾರ್ವತಿ ಅವರು ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು, ಭಾನುವಾರ ಮಧ್ಯಾಹ್ನದಿಂದಲೇ ಅವರ ಭಕ್ತಿ ಮಾರ್ಗ ಆರಂಭವಾಯಿತು:

ಹೊರನಾಡು: ಮಧ್ಯಾಹ್ನ 3 ಗಂಟೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಶೃಂಗೇರಿ: ಬಳಿಕ ಶೃಂಗೇರಿಗೆ ತೆರಳಿ ಶಾರದಾಂಬೆಯ ಆಶೀರ್ವಾದ ಪಡೆದ ಅವರು, ರಾತ್ರಿ ಶಾರದಾ ಪೀಠದ ಮಠದಲ್ಲೇ ವಾಸ್ತವ್ಯ ಹೂಡಿದ್ದರು.

ಕೊಲ್ಲೂರು: ಇಂದು ಶೃಂಗೇರಿಯಿಂದ ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ.

ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಚಾಲನೆ
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಪ್ರಗತಿ ಪರಿಶೀಲನೆಯಲ್ಲಿ ತೊಡಗಿದ್ದರು:

ಎನ್.ಆರ್ ಪುರ ವಾಸ್ತವ್ಯ: ಎನ್.ಆರ್.ಪುರದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ, ಬೆಳಿಗ್ಗೆ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ರೂ. 38 ಕೋಟಿ ವೆಚ್ಚದ ಕಾಮಗಾರಿ: ಸುಮಾರು 38 ಕೋಟಿ ರೂಪಾಯಿ ವೆಚ್ಚದ ಸೇತುವೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.

ಮುಂದಿನ ಪಯಣ: ಮಧ್ಯಾಹ್ನ 2 ಗಂಟೆಗೆ ರಸ್ತೆ ಮೂಲಕ ಶಿವಮೊಗ್ಗಕ್ಕೆ ತೆರಳಿದ ಮುಖ್ಯಮಂತ್ರಿಗಳು, ಅಲ್ಲಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್
ಒಂದೆಡೆ ಮುಖ್ಯಮಂತ್ರಿಗಳ ಸರ್ಕಾರಿ ಕಾರ್ಯಕ್ರಮ ಹಾಗೂ ಇನ್ನೊಂದೆಡೆ ಅವರ ಪತ್ನಿಯ ಧಾರ್ಮಿಕ ಭೇಟಿಯಿಂದಾಗಿ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿತ್ತು. ಪ್ರಮುಖ ರಸ್ತೆ ಹಾಗೂ ದೇವಸ್ಥಾನಗಳ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

The post ಕಾಫಿನಾಡಿನಲ್ಲಿ ‘ದಂಪತಿ’ ಪಥ: ಅತ್ತ ಸಿಎಂ ಅಭಿವೃದ್ಧಿ ಮಂತ್ರ, ಇತ್ತ ಪತ್ನಿಯಿಂದ ‘ಟೆಂಪಲ್ ರನ್’! appeared first on Good News 24x7.

]]>
ಮಸೂದ್‌ ಅಜರ್‌ಗೆ ಮತ್ತೊಂದು ಆ*ತ: ಸಹೋದರನ ನಿಗೂಢ ಸಾ*. https://www.goodnews24x7.com/another-shock-for-masood-azhar-brothers-mysterious-death/ Tue, 31 Mar 2026 09:59:36 +0000 https://www.goodnews24x7.com/?p=9057 ಇಸ್ಲಾಮಾಬಾದ್: ಭಾರತದ ‘ಆಪರೇಷನ್‌ ಸಿಂಧೂರ’ ಸೇನಾ ಕಾರ್ಯಾಚರಣೆಯಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ಕುಟುಂಬದ 14 ಸದಸ್ಯರು ಸಾ*ನ್ನಪ್ಪಿದ್ದರು. ಆ ಆಘಾತದಿಂದ ಇನ್ನೂ ಹೊರಬರದಿದ್ದ ಜೈಶ್‌ ಮುಖ್ಯಸ್ಥನಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಪಾಕಿಸ್ತಾನದ ಬಹವಾಲ್‌ಪುರ್‌ನಲ್ಲಿ ಮಸೂದ್‌…

The post ಮಸೂದ್‌ ಅಜರ್‌ಗೆ ಮತ್ತೊಂದು ಆ*ತ: ಸಹೋದರನ ನಿಗೂಢ ಸಾ*. appeared first on Good News 24x7.

]]>

ಇಸ್ಲಾಮಾಬಾದ್: ಭಾರತದ ‘ಆಪರೇಷನ್‌ ಸಿಂಧೂರ’ ಸೇನಾ ಕಾರ್ಯಾಚರಣೆಯಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ಕುಟುಂಬದ 14 ಸದಸ್ಯರು ಸಾ*ನ್ನಪ್ಪಿದ್ದರು. ಆ ಆಘಾತದಿಂದ ಇನ್ನೂ ಹೊರಬರದಿದ್ದ ಜೈಶ್‌ ಮುಖ್ಯಸ್ಥನಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಪಾಕಿಸ್ತಾನದ ಬಹವಾಲ್‌ಪುರ್‌ನಲ್ಲಿ ಮಸೂದ್‌ ಅಜರ್‌ ಸಹೋದರ ಮೊಹಮ್ಮದ್‌ ತಾಹಿರ್‌ ಅನ್ವರ್‌ ನಿಗೂಢವಾಗಿ ಸಾ*ನ್ನಪ್ಪಿದ್ದಾನೆ. ಆದರೆ ಸಾ*ನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಬಹವಾಲ್‌ಪುರ್‌ ಜೈಶ್‌-ಎ-ಮೊಹಮ್ಮದ್‌ ಉಗ್ರರ ಪ್ರಮುಖ ಕೇಂದ್ರವಾಗಿದ್ದು, ಇದೇ ಊರಿನಲ್ಲಿ ಅನ್ವರ್‌ ಸಾ*ನ್ನಪ್ಪಿದ್ದಾನೆ. ಈ ಬಗ್ಗೆ ಮಾಹಿತಿ ಜೈಶ್‌ ಸಂಘಟನೆಯ ಅಧಿಕೃತ ಟೆಲಿಗ್ರಾಮ್‌ ಚಾನೆಲ್‌ಗಳಲ್ಲಿ ಪ್ರಕಟವಾಗಿದೆ. ಮಾ.30ರ ತಡರಾತ್ರಿ ಬಹವಾಲ್‌ಪುರ್‌ನ ಜಾಮಿಯಾ ಉಸ್ಮಾನ್-ಒ-ಅಲಿ‌ನಲ್ಲಿ ಅಂತ್ಯಕ್ರಿಯೆ ನೆರವೇರಿದರೂ, ಅದರಲ್ಲಿ ಮಸೂದ್‌ ಅಜರ್‌ ಭಾಗವಹಿಸಿಲ್ಲ ಎಂಬುದು ಗಮನಾರ್ಹವಾಗಿದೆ.

ಅನ್ವರ್‌ ಸಾ* ಹೇಗೆ ಸಂಭವಿಸಿತು ಎಂಬುದು ಇನ್ನೂ ನಿಗೂಢವಾಗಿದ್ದು, ಯಾವುದೇ ಅನಾರೋಗ್ಯದ ಪುರಾವೆಗಳೂ ಇಲ್ಲ. ಹೀಗಾಗಿ ದಿಢೀರ್‌ ಸಾ*ಮತ್ತು ಅಂತ್ಯಕ್ರಿಯೆಗೆ ಅಜರ್‌ ಗೈರಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೊಹಮ್ಮದ್‌ ತಾಹಿರ್‌ ಅನ್ವರ್‌ ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಪ್ರಮುಖ ವ್ಯಕ್ತಿಯಾಗಿದ್ದು, ಸಶಸ್ತ್ರ ಪಡೆಗಳ ಕಮಾಂಡರ್‌ ಆಗಿಯೂ ಕಾರ್ಯನಿರ್ವಹಿಸಿದ್ದ. ಅಲ್ಲದೆ ಬಹವಾಲ್‌ಪುರ್‌ನ ‘ಮರ್ಕಝ್ ಉಸ್ಮಾನ್-ಒ-ಅಲಿ’ ತರಬೇತಿ ಕೇಂದ್ರದ ಮುಖ್ಯಸ್ಥನಾಗಿದ್ದನು. ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ ವ್ಯವಸ್ಥೆಯನ್ನೂ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ಈಗಾಗಲೇ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯಲ್ಲಿ ಮಸೂದ್‌ ಅಜರ್‌ ಮತ್ತೊಬ್ಬ ಸಹೋದರ ಅಬ್ದುಲ್‌ ರೌಫ್‌ ಅಜರ್‌ ಹತ್ಯೆಯಾಗಿದ್ದು, ಇದೀಗ ಮತ್ತೋರ್ವ ಸಹೋದರನನ್ನು ಕಳೆದುಕೊಂಡಿದ್ದಾನೆ. ಒಟ್ಟಿನಲ್ಲಿ, ಜೈಶ್‌ ಮುಖ್ಯಸ್ಥನ ಕುಟುಂಬಕ್ಕೆ ಆಘಾತಗಳ ಸರಮಾಲೆ ಮುಂದುವರಿದಂತಾಗಿದೆ.

The post ಮಸೂದ್‌ ಅಜರ್‌ಗೆ ಮತ್ತೊಂದು ಆ*ತ: ಸಹೋದರನ ನಿಗೂಢ ಸಾ*. appeared first on Good News 24x7.

]]>
ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹ*! https://www.goodnews24x7.com/couple-commits-suicide-by-strangling-childcouple-commits-suicide-by-strangling-child/ Mon, 09 Mar 2026 12:03:54 +0000 https://www.goodnews24x7.com/?p=8808   ಅದು ಮುದ್ದಾದ ಸಂಸಾರ. ಮದುವೆಯಾಗಿ ಮೂರು ವರ್ಷವಷ್ಟೇ ಆಗಿತ್ತು. ಆ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಅಂದುಕೊಳ್ತಿರುವಾಗಲೇ ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್ ಬಂದಿದೆ. ಎರಡು ವರ್ಷಗಳ ಹಿಂದಷ್ಟೇ ಪ್ರಪಂಚಕ್ಕೆ ಬಂದು ಈಗಷ್ಟೇ ಕಣ್ತೆರೆಯುತ್ತಿದ್ದ ಕಂದಮ್ಮನನ್ನ ಹೆತ್ತವರೇ ಕತ್ತು ಹಿಸುಕಿ ಕೊಲ್ಲಲು…

The post ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹ*! appeared first on Good News 24x7.

]]>

 

ಅದು ಮುದ್ದಾದ ಸಂಸಾರ. ಮದುವೆಯಾಗಿ ಮೂರು ವರ್ಷವಷ್ಟೇ ಆಗಿತ್ತು. ಆ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಅಂದುಕೊಳ್ತಿರುವಾಗಲೇ ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್ ಬಂದಿದೆ. ಎರಡು ವರ್ಷಗಳ ಹಿಂದಷ್ಟೇ ಪ್ರಪಂಚಕ್ಕೆ ಬಂದು ಈಗಷ್ಟೇ ಕಣ್ತೆರೆಯುತ್ತಿದ್ದ ಕಂದಮ್ಮನನ್ನ ಹೆತ್ತವರೇ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿ ತಾವು ಸಾವಿನ ಮನೆ ಸೇರಿದ್ದಾರೆ.ಆದ್ರೆ, ಪವಾಡಸದೃಶ ರೀತಿಯಲ್ಲಿ ಮಗು ಬದುಕುಳಿದಿದೆ.

ಕೌಟುಂಬಿಕ ಕಲಹಕ್ಕೆ 2 ವರ್ಷದ ಮಗುವನ್ನು ಕತ್ತು ಹಿಸುಕಿ, ಬಳಿಕ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಅಸ್ವಸ್ಥಗೊಂಡಿದ್ದ ಮಗು ಅದೃಷ್ಟವಶಾತ್ ಪವಾಡದಂತೆ ಬದುಕುಳಿದಿದ್ದು, ಇದೀಗ ತಂದೆ ತಾಯಿ ಇಲ್ಲದೇ ಅನಾಥವಾಗಿದೆ. ಈ ಹೃದಯ ವಿದ್ರಾವಕ ಘಟನೆ ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ. ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ದಂಪತಿ.

ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ಕಳೆದ ಮೂರು ವರ್ಷದ‌ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಎರಡು ವರ್ಷದ ಮಗುವಿನೊಂದಿಗೆ ಮಂಡ್ಯದ ಕೆ.ಆರ್.ಪೇಟೆಯ ಜಯನಗರ ಬಡಾವಣೆ ಮನೆಯೊಂದರಲ್ಲಿ ವಾಸವಾಗಿದ್ದರು. ಆದ್ರೆ, ಗಂಡ ಹೆಂಡತಿ ನಡುವೆ ಅದೇನಾಗಿತ್ತೋ ಏನೋ ದಂಪತಿ ಇಂದು ಬೆಳಿಗ್ಗೆ ನೇಣಿಗೆ ಶರಣಾಗಿದ್ದಾರೆ. ಆದ್ರೆ, ದಂಪತಿ ಸಾಯುವ ಮುನ್ನ ತಮ್ಮ ಎರಡು ವರ್ಷದ ಮಗುವನ್ನು ಸಹ ಕೊಲ್ಲಲು ತೀರ್ಮಾನಿಸಿದ್ದರು.

ಸ್ನೇಹಿತೆಯ ಲವ್​​ನಲ್ಲಿ ಮಧ್ಯಸ್ಥಿಕೆ: ಗಂಡ ಹೆಂಡ್ತಿ ಗಲಾಟೆ ಸಾವಿನಲ್ಲಿ ಅಂತ್ಯ
ಅದರಂತೆ ಮಗುವನ್ನು ಕತ್ತು ಹಿಸುಕಿದ್ದಾರೆ. ಇದರಿಂದ ಮಗು ಅಸ್ವಸ್ಥಗೊಂಡು ಬಿದ್ದಿದೆ. ಬಳಿಕ ದಂಪತಿ ಮಗು ಸಾವನ್ನಪ್ಪಿದೆ ಎಂದು ತಾವು ಸಹ ನೇಣಿಗೆ ಕೊರಳೊಡ್ಡಿದ್ದಾರೆ. ಆದ್ರೆ, ದಂಪತಿ ಸಾವನ್ನಪ್ಪುತ್ತಿದ್ದಂತೆಯೇ ಇನ್ನೊಂದೆಡೆ ಮಗು ಉಸಿರಾಡಿದ್ದು, ಪವಾಡದ ತೀರಿಯಲ್ಲಿ ಬದುಕುಳಿದಿದೆ. ಆದ್ರೆ, ತಂದೆ ತಾಯಿ ಇಲ್ಲದೇ ಅನಾಥವಾಗಿದ್ದು, ಎರಡು ಕಡೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನನ್ನು ಬದುಕುಳಿದ ಮಗುವನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆ.ಆರ್.ಪೇಟೆ ಟೌನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದಂಪತಿಯ ಕೆಟ್ಟ ನಿರ್ಧಾರಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಂಟುಂಬಿಕ ಕಲಹದಿಂದ ಬೇಸತ್ತು ಈ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗಿದ್ದು, ಪೊಲೀಸರ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಲಿದೆ.

 

The post ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹ*! appeared first on Good News 24x7.

]]>
2023 ರಲ್ಲಿ ಪೊಲೀಸ್ ಅಧಿಕಾರಿ ಕಾರು ಗುದ್ದಿ ಭಾರತೀಯ ವಿದ್ಯಾರ್ಥಿನಿ ಸಾ*: ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ. https://www.goodnews24x7.com/indian-student-killed-in-2023-after-being-hit-by-police-officers-car-family-to-get-rs-262-crore-compensation/ Thu, 12 Feb 2026 11:45:53 +0000 https://www.goodnews24x7.com/?p=8361 ವಾಷಿಂಗ್ಟನ್: ಅಮೆರಿಕದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದ ಭಾರತೀಯ ವಿದ್ಯಾರ್ಥಿನಿ ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ. ಈ ಮೊತ್ತ ಎಷ್ಟು ದೊಡ್ಡದೆಂದರೆ, ಪೊಲೀಸರ ನಿರ್ಲಕ್ಷ್ಯದಿಂದ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಅಮೆರಿಕ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ಪರಿಹಾರಗಳಲ್ಲಿ ಇದು ಕೂಡ ಒಂದು.…

The post 2023 ರಲ್ಲಿ ಪೊಲೀಸ್ ಅಧಿಕಾರಿ ಕಾರು ಗುದ್ದಿ ಭಾರತೀಯ ವಿದ್ಯಾರ್ಥಿನಿ ಸಾ*: ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ. appeared first on Good News 24x7.

]]>

ವಾಷಿಂಗ್ಟನ್: ಅಮೆರಿಕದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದ ಭಾರತೀಯ ವಿದ್ಯಾರ್ಥಿನಿ ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ. ಈ ಮೊತ್ತ ಎಷ್ಟು ದೊಡ್ಡದೆಂದರೆ, ಪೊಲೀಸರ ನಿರ್ಲಕ್ಷ್ಯದಿಂದ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಅಮೆರಿಕ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ಪರಿಹಾರಗಳಲ್ಲಿ ಇದು ಕೂಡ ಒಂದು. 2023 ರಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಪೊಲೀಸ್ ಅಧಿಕಾರಿಯೊಬ್ಬರ ಕಾರು ಡಿಕ್ಕಿ ಹೊಡೆದು 23 ವರ್ಷದ ಜಾಹ್ನವಿ ಕಂದುಲಾ ಸಾವನ್ನಪ್ಪಿದ್ದರು.

ಜಾಹ್ನವಿ ಕಂದುಲಾ ಭಾರತದವರಾಗಿದ್ದು, ಸಿಯಾಟಲ್‌ನಲ್ಲಿರುವ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು. ಈ ಘಟನೆ ಜನವರಿ 2023 ರಲ್ಲಿ ನಡೆದಿತ್ತು. ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಮಾದಕವಸ್ತು ಸೇವನೆ ಮಾಡಿ, ಫೋನ್​​ ಅಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದರು.

ಅವರು 25 mph ವೇಗದಲ್ಲಿ ಚಾಲನೆ ಮಾಡುವ ಪ್ರದೇಶದಲ್ಲಿ 74 mph (119 kph) ವೇಗದಲ್ಲಿ ಚಾಲನೆ ಮಾಡುತ್ತಿದ್ದರು. ನಂತರ ಅಧಿಕಾರಿಗೆ ಅಜಾಗರೂಕ ಚಾಲನೆಗಾಗಿ 5,000 ಡಾಲರ್ ದಂಡ ವಿಧಿಸಲಾಯಿತು. ಅವರನ್ನು ಪೊಲೀಸ್ ಇಲಾಖೆಯಿಂದ ವಜಾಗೊಳಿಸಲಾಯಿತು. ಆದಾಗ್ಯೂ, ಕಿಂಗ್ ಕೌಂಟಿ ಪ್ರಾಸಿಕ್ಯೂಟರ್‌ಗಳು ಅಧಿಕಾರಿ ಉದ್ದೇಶಪೂರ್ವಕವಾಗಿ ಸುರಕ್ಷತೆಯನ್ನು ನಿರ್ಲಕ್ಷಿಸಿದ್ದಾರೆಂದು ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಅವರ ವಿರುದ್ಧ ಯಾವುದೇ ಗಂಭೀರ ಕ್ರಿಮಿನಲ್ ಆರೋಪಗಳನ್ನು ಹೊರಿಸಲಿಲ್ಲ.

ಮತ್ತೊಬ್ಬರ ಬಾಡಿ ಕ್ಯಾಮರಾದಲ್ಲಿ ರೆಕಾರ್ಡ್​ ಆಗಿದ್ದ ದೃಶ್ಯಗಳು ಬೆಳಕಿಗೆ ಬಂದಾಗ ವಿಷಯ ತುಂಬಾ ಗಂಭೀರವಾಯಿತು. ಕಳೆದ ಶುಕ್ರವಾರ ಕಿಂಗ್ ಕೌಂಟಿ ಸುಪೀರಿಯರ್ ನ್ಯಾಯಾಲಯದಲ್ಲಿ ಇತ್ಯರ್ಥ ಅರ್ಜಿ ಸಲ್ಲಿಸಲಾಗಿದೆ. ಕುಟುಂಬದ ವಕೀಲರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಗರ ಅಟಾರ್ನಿ ಎರಿಕಾ ಇವಾನ್ಸ್ ಮಾತನಾಡಿ, ಜಾಹ್ನವಿ ಕಂದುಲಾ ಅವರ ಸಾವು ಹೃದಯವಿದ್ರಾವಕವಾಗಿತ್ತು. ಈ ಆರ್ಥಿಕ ಇತ್ಯರ್ಥವು ಕಂದುಲಾ ಕುಟುಂಬಕ್ಕೆ ಸ್ವಲ್ಪ ಸಾಂತ್ವನ ನೀಡುತ್ತದೆ ಎಂದು ನಂಬಿದ್ದೇವೆಂದು ಹೇಳಿದ್ದಾರೆ.

The post 2023 ರಲ್ಲಿ ಪೊಲೀಸ್ ಅಧಿಕಾರಿ ಕಾರು ಗುದ್ದಿ ಭಾರತೀಯ ವಿದ್ಯಾರ್ಥಿನಿ ಸಾ*: ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ. appeared first on Good News 24x7.

]]>
ಸಪ್ತಪದಿ ತುಳಿದು ತಾಳಿ ಕಟ್ಟಿದ್ದ ಗಂಡನೇ ಮಡದಿಯನ್ನ ಹ* ಮಾಡಿದ್ದಾನೆ https://www.goodnews24x7.com/the-husband-who-had-trampled-on-the-seven-pointed-star-and-tied-the-knot-killed-the-woman/ Sat, 18 Oct 2025 11:57:27 +0000 https://www.goodnews24x7.com/?p=7756 ಹಾಸನ: ಆಕೆಗೆ ಎಂಟು ವರ್ಷದ ಕೆಳಗೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾಗಿ ಮೂರು ವರ್ಷ ಚೆನ್ನಾಗಿ ಸಂಸಾರ ಮಾಡಿದ ಗಂಡ ಆಸ್ತಿಗಾಗಿ ಅಪ್ಪ ಅಮ್ಮನ ಮಾತು ಕೇಳಿ ಯಮ ಗಂಡನಾಗಿದ್ದ. ಗಂಡನ ಮನೆಯವರ ಕಿರುಕುಳದ ಜೊತೆಗೆ ಕುಡುಕ ಗಂಡನ ಜೊತೆ ಬಾಳೋದಕ್ಕಿಂತ…

The post ಸಪ್ತಪದಿ ತುಳಿದು ತಾಳಿ ಕಟ್ಟಿದ್ದ ಗಂಡನೇ ಮಡದಿಯನ್ನ ಹ* ಮಾಡಿದ್ದಾನೆ appeared first on Good News 24x7.

]]>

ಹಾಸನ: ಆಕೆಗೆ ಎಂಟು ವರ್ಷದ ಕೆಳಗೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾಗಿ ಮೂರು ವರ್ಷ ಚೆನ್ನಾಗಿ ಸಂಸಾರ ಮಾಡಿದ ಗಂಡ ಆಸ್ತಿಗಾಗಿ ಅಪ್ಪ ಅಮ್ಮನ ಮಾತು ಕೇಳಿ ಯಮ ಗಂಡನಾಗಿದ್ದ. ಗಂಡನ ಮನೆಯವರ ಕಿರುಕುಳದ ಜೊತೆಗೆ ಕುಡುಕ ಗಂಡನ ಜೊತೆ ಬಾಳೋದಕ್ಕಿಂತ ಒಂಟಿಯಾಗಿ ಇರೋದೇ ಮೇಲು ಎಂದು ಡೈವೋರ್ಸ್ ಗೆ ಅಪ್ಲೈ ಮಾಡಿಕೊಂಡಿದ್ದವಳನ್ನ ಚೆನ್ನಾಗಿರೋನ ಬಾ ಎಂದು ಪುಸಲಾಯಿಸಿ ಕರೆದುಕೊಂಡು ಬಂದವನು ಚಾಕುವಿನಿಂದ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ತನುಜಾ ಜೀವಕ್ಕೆ ಜೀವ ಆಗಿರ್ತಿನಿ.. ಕಣ್ಣಲ್ಲಿ ಕಣ್ಣಾಗಿ ನೋಡ್ಕೊಳ್ತಿನಿ ಅಂತಾ ಸಪ್ತಪದಿ ತುಳಿದು ತಾಳಿ ಕಟ್ಟಿದ್ದ ಗಂಡನೇ ಈಕೆಯನ್ನ ಕೊಂದು ಕೆಡವಿದ್ದಾನೆ. ರಣರಾಕ್ಷಸನಂತೆ ತಾನೇ ತಾಳಿ ಕಟ್ಟಿದ ಕುತ್ತಿಗೆಯನ್ನ ಚಾಕುವಿನಿಂದ ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹೌದು ಕಳೆದ 8 ವರ್ಷಗಳ ಕೆಳಗೆ ಹಾಸನ ಜಿಲ್ಲೆಯ ಗುಡ್ಡೇನಹಳ್ಳಿಯ ತನುಜಳನ್ನ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಹಿರೇಕಾನವಂಗಲ ಗ್ರಾಮದ ರಮೇಶ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಹೊಸತರಲ್ಲಿ ನೀನೆ ನನ್ನ ಜೀವ.. ನೀನೆ ನನ್ನುಸಿರು ಅಂತಾ ಅಂತಾ ಹೆಂಡತಿಯನ್ನ ಮುದ್ದು ಮಾಡ್ತಿದ್ದವನು. ಒಂದು ಗಂಡು ಮಗು ಆಗಿ ಹೆಂಡತಿ ತವರು ಮನೆಗೆ ಹೋದಾಗ್ಲಿಂದ ತನ್ನ ತಂದೆ, ತಾಯಿ, ಅಕ್ಕಂದಿರ ಮಾತು ಕೇಳಿ ಹೆಂಡತಿಗೆ ಕೊಡಬಾರದ ಚಿತ್ರ ಹಿಂಸೆ ಕೊಡ್ತಿದ್ನಂತೆ. ತನ್ನ ಮಗುವಿನ ನಾಮಕರಣಕ್ಕೂ ಹೋಗಿರ್ಲಿಲ್ವಂತೆ. ಹೆಂಡತಿ ಬಾಣಂತನ ಮುಗಿಸಿಕೊಂಡು ಗಂಡನ ಮನೆಗೆ ಬರ್ತಿದ್ದಂತೆ ಮನೆ ಮಂದಿ ಎಲ್ಲ ಸೇರಿ ಕಾಟ ಕೊಟ್ಟಿದ್ದಾರೆ. ಸಾಲದು ಅಂತಾ ಮನೆಯಿಂದ ಹೊರಗೆ ಹಾಕಿದ್ರಂತೆ. ಮೊದಲೇ ಗಂಡ ಕುಡುಕ ಅಪ್ಪ, ಅಮ್ಮ, ಅಕ್ಕಂದಿರ ಮಾತು ನಂಬಿ ಹೊಡೆದು ಬಡಿದು ಮಾಡ್ತಿದ್ನಂತೆ. ಇಲ್ಲೇ ಇದ್ರೆ ಸರಿಯಾಗಲ್ಲ ಅಂತಾ ತನುಜಾ ತನ್ನ ಗಂಡನ ಕರೆದುಕೊಂಡು ಬಂದು ಬೇರೆ ಸಂಸಾರ ಮಾಡ್ತಿದ್ದಳಂತೆ. ಮನೆ ಬಿಟ್ಟು ಬೇರೆ ಮನೆಗೆ ಬಂದ್ರೂ ಕೂಡಾ ಗಂಡ ರಮೇಶ ಕುಡಿಯೋದನ್ನ‌ ಬಿಟ್ಟಿಲ್ಲ ಇದರಿಂದ ಬೇಸತ್ತ ತನುಜಾ ಮೂರು ವರ್ಷಗಳ ಕೆಳಗೆ ಡಿವೋರ್ಸ್‌ಗೆ ಅಪ್ಲೆ ಮಾಡಿಕೊಂಡಿದ್ದಾಳೆ.. ಕೆಲ ದಿನಗಳ ಹಿಂದೆ ಮಗನ ಸ್ಕೂಲ್‌ಗೆ ರಜೆ ಅಂತಾ ತವರು ಮನೆಗೆ ಹೋಗಿದ್ದ ತನುಜಾಳಿಗೆ ಕಾಲ್ ಮಾಡಿದ್ದ ರಮೇಶ ಕೋರ್ಟ್‌ಗೆ ಹೋಗಬೇಕು.. ಲಾಯರ್ ಕಾಲ್ ಮಾಡಿದ್ರು.. ಇನ್ಮೇಲೆ ಚೆನ್ನಾಗಿರೋಣ ಬಾ ಅಂತ ಕರೆದಿದ್ದಾನೆ. ಸೋಮವಾರವಷ್ಟೇ ಗುಡ್ಡೇನಹಳ್ಳಿಯಿಂದ ತನುಜಾಳನ್ನ ಕರೆದುಕೊಂಡು ಬಂದಿದ್ದಾನೆ.. ಆದ್ರೆ ನಿನ್ನೆ ಸಂಜೆ ಗಂಡ ಹೆಂಡತಿ ನಡುವೆ ಅದೇನು ನಡೆಯಿತೋ ಗೊತ್ತಿಲ್ಲ ಚಾಕುವಿನಿಂದ ತನಜಾಳ ಕುತ್ತಿಗೆ ಸೀಳಿದ್ದಾನೆ.

ನಿನ್ನೆ ಸಂಜೆ ತನುಜಾ ಮತ್ತು ರಮೇಶನ ನಡುವೆ ಯಾವ ಜಗಳ ನಡೆದಿತ್ತೋ ಗೊತ್ತಿಲ್ಲ. ಕಂಠಪೂರ್ತಿ ಕುಡಿದು ಬಂದಿದ್ದ ರಮೇಶನಿಗೆ ಎಣ್ಣೆಯ ನಶೆಯ ಜೊತೆಗೆ ಪಿತ್ತ ನೆತ್ತಿಗೆ ಹತ್ತುತ್ತಿದ್ದಂತೆ ಮನೆಯಲ್ಲಿದ್ದ ಚಾಕುವನ್ನ ಕೈಗೆತ್ತಿಕೊಂಡು ಸಿಕ್ಕ ಸಿಕ್ಕಲ್ಲಿ ಚುಚ್ಚಿದ್ದಾನೆ.. ಚಾಕುವಿನಿಂದ ಚುಚ್ಚಿದ ತಕ್ಷಣ ಕೆಳಗೆ ಬಿದ್ದ ತನುಜಾಳ ಎದೆಯ ಮೇಲೆ ಹತ್ತಿ ಕೂತವ್ನೇ ತಾನೇ ತನ್ನ ಕೈಯ್ಯಾರೆ ತಾಳಿ ಕಟ್ಟಿದ್ದ ಕುತ್ತಿಗೆಯನ್ನ ರಣ ರಾಕ್ಷಸನಂತೆ ಸೀಳಿ ಕೊಂದಿದ್ದಾನೆ.. ಯಾವಗ ತನ್ನ ಹೆಂಡತಿ ತನುಜಾ ಸಾವನ್ನಪ್ಪಿದ್ದಾಳೆ ಅನ್ನೋದು ಕನ್ಫರ್ಮ್ ಆಯ್ತೋ ಆಗ ಅದೇ ಚಾಕುವಿನಿಂದ ತಾನೂ ಕೂಡಾ ಕೈ ಕೊಯ್ದುಕೊಂಡು ನನ್ನ ಹೆಂಡತಿ ನನಗೆ ಹೊಡೆದಿದ್ದಾಳೆ ಅಂತಾ ಆಸ್ಪತ್ರೆಗೆ ಹೋಗಿ ಅಡ್ಮೆಂಟ್ ಆಗಿದ್ದಾನೆ.. ಆಸತ್ರೆಯಿಂದ ಬಂದ ಮಾಹಿತಿ ಆಧರಿಸಿ ಹಿರೇಕಾನವಂಗಲ ಗ್ರಾಮದ ರಮೇಶನ ಮನೆಗೆ ಹೋದ ಅಜ್ಜಂಪುರ ಠಾಣೆಯ ಇನ್ಸ್ಪೆಕ್ಟರ್ ವೀರೇಂದ್ರ ಮತ್ತು ಪಿಎಸ್‌ಐ ಗಜೇಂದ್ರ ಇಬ್ಬರೂ ಒಂದು ಕ್ಷಣ ಶಾಕ್ ಆಗಿಹೋಗಿದ್ದಾನೆ. ಯಾಕಂದ್ರೆ ತನ್ನ ಹೆಂಡತಿ ತನಗೆ ಹೊಡೆದ್ದಾಳೆ ಅಂತಾ ಆಸ್ಪತ್ರೆ ಸೇರಿದ್ದ ಗಂಡ ರಮೇಶ ಇಲ್ಲಿ ತನ್ನ ಹೆಂಡತಿಯನ್ನ ಕತ್ತು ಸೀಳಿ ಕೊಂದು ಮಲಗಿಸಿ ಹೋಗಿದ್ದ. ಕೂಡಲೇ ಆಸ್ಪತ್ರೆಗೆ ಹೋಗಿ ಅಡ್ಮೆಂಟ್ ಆಗಿದ್ದ ರಮೇಶನನ್ನ ವಿಚಾರಿಸ್ತಿದ್ದಂತೆ ತಾನೇ ತನ್ನ ಹೆಂಡತಿಯನ್ನ ಕೊಂದಿದ್ದು ಅಂತ ಸತ್ಯ ಬಾಯಿಬಿಟ್ಟಿದ್ದಾನೆ. ಇನ್ನೂ ರಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ರಮೇಶನ ತಂದೆ ಪುಟ್ಟಪ್ಪ ಹಾಗೂ ತಾಯಿ ಲಲಿತಮ್ಮರನ್ನ ಪೊಲೀಸರು ಬಂಧಿಸಿದ್ದಾರೆ.

ಒಟ್ನಲ್ಲಿ ಕುಡಿತದ ಚಟಕ್ಕೆ ದಾಸನಾಗಿದ್ದ ಗಂಡ ಆಸ್ತಿಗಾಗಿ ಅಪ್ಪ, ಅಮ್ಮ, ಅಕ್ಕಂದಿರ ಮಾತು ಕೇಳಿ ತನ್ನನ್ನೇ ನಂಬಿ ಅಗ್ನಿಸಾಕ್ಷಿಯಾಗಿ ಕೈ ಹಿಡಿದು ತನ್ನವರನ್ನೆಲ್ಲ ಬಿಟ್ಟು ಬಂದಿದ್ದ ಹೆಂಡತಿಯನ್ನೇ ಕೊಂದು ಕೆಡವಿದ್ದು. ತಾಯಿ ಸತ್ತು ಸುಟ್ಟು ಬೂಧಿಯಾಗಿ ತಂದೆ ಜೈಲುಪಾಲಾಗಿದ್ದಾನೆ. ಆದ್ರೆ ಏನೂ ಅರಿಯದ 6 ವರ್ಷದ ಕಂದಮ್ಮ ಅನಾಥವಾಗಿದ್ದು ಮಾತ್ರ ದುರಂತ

The post ಸಪ್ತಪದಿ ತುಳಿದು ತಾಳಿ ಕಟ್ಟಿದ್ದ ಗಂಡನೇ ಮಡದಿಯನ್ನ ಹ* ಮಾಡಿದ್ದಾನೆ appeared first on Good News 24x7.

]]>
ಬಲೂನ್ ವ್ಯಾಪಾರಕ್ಕೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ 10 ವರ್ಷದ ಬಾಲಕಿ ಶ* ಪತ್ತೆ! ರೇ* ಅಂಡ್ ಮ*ರ್ ಶಂಕೆ! https://www.goodnews24x7.com/10-year-old-hakkipikki-girl-who-came-to-sell-balloons-found-raped-rape-and-murder-suspected/ Thu, 09 Oct 2025 06:45:56 +0000 https://www.goodnews24x7.com/?p=7679 ಮೈಸೂರು: ದಸರಾ ಹಬ್ಬದ ವೇಳೆ ಮೈಸೂರಿಗೆ ಬಲೂನ್ ಮಾರಾಟ ಮಾಡಲು ಗುಲ್ಬರ್ಗಾದಿಂದ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ 10 ವರ್ಷದ ಬಾಲಕಿಯೊಬ್ಬಳು ಕಾಣೆಯಾಗಿದ್ದಳು. ನಂತರ ಆಕೆಯ ಶವವು ಜೋಪಡಿಯ ಸಮೀಪದ ಗುಂಡಿಯಲ್ಲಿ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.…

The post ಬಲೂನ್ ವ್ಯಾಪಾರಕ್ಕೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ 10 ವರ್ಷದ ಬಾಲಕಿ ಶ* ಪತ್ತೆ! ರೇ* ಅಂಡ್ ಮ*ರ್ ಶಂಕೆ! appeared first on Good News 24x7.

]]>

ಮೈಸೂರು: ದಸರಾ ಹಬ್ಬದ ವೇಳೆ ಮೈಸೂರಿಗೆ ಬಲೂನ್ ಮಾರಾಟ ಮಾಡಲು ಗುಲ್ಬರ್ಗಾದಿಂದ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ 10 ವರ್ಷದ ಬಾಲಕಿಯೊಬ್ಬಳು ಕಾಣೆಯಾಗಿದ್ದಳು. ನಂತರ ಆಕೆಯ ಶವವು ಜೋಪಡಿಯ ಸಮೀಪದ ಗುಂಡಿಯಲ್ಲಿ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮೈಸೂರು: ದಸರಾ ಹಬ್ಬದ ಸಂಭ್ರಮದ ನಡುವೆ ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೈಶಾಚಿಕ ಕೃತ್ಯವೊಂದು ನಡೆದುಹೋಗಿದೆ. ಬಲೂನ್ ವ್ಯಾಪಾರಕ್ಕೆ ಬಂದಿದ್ದ ಬಡಕುಟುಂಬವೊಂದರ 10 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾ೧ಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಘಟನೆಯಿಂದಾಗಿ ಮೈಸೂರು ಬೆಚ್ಚಿಬಬಿದ್ದಿದೆ.

ಗುಲ್ಬರ್ಗಾದಿಂದ ಬಲೂನ್ ವ್ಯಾಪಾರಕ್ಕೆ ಬಂದಿದ್ದ ಕುಟುಂಬ: ಗುಲ್ಬರ್ಗದಿಂದ ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ ಸುಮಾರು 50 ಕುಟುಂಬಗಳು ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ತಾತ್ಕಾಲಿಕವಾಗಿ ತಂಗಿದ್ದವು. ಚಾಮುಂಡಿ ಬೆಟ್ಟ, ವಸ್ತು ಪ್ರದರ್ಶನ, ಬನ್ನಿ ಮಂಟಪ, ದೇವರಾಜ ಮಾರುಕಟ್ಟೆ ಸೇರಿದಂತೆ ಹಲವು ಸ್ಥಳಗಳಲ್ಲಿ ಇವರು ವ್ಯಾಪಾರ ಮಾಡುತ್ತಿದ್ದರು. ಈ ಪೈಕಿ ಒಂದು ಕುಟುಂಬಕ್ಕೆ ಸೇರಿದ 10 ವರ್ಷದ ಬಾಲಕಿಯೊಬ್ಬಳು ರಾತ್ರಿ ವೇಳೆ ಕಾಣೆಯಾಗಿದ್ದಾಳೆ. ನಿನ್ನೆ ರಾತ್ರಿ 12 ಗಂಟೆಯವರೆಗೆ ವ್ಯಾಪಾರ ಮಾಡಿಕೊಂಡು ಬಂದಿದ್ದ ಕುಟುಂಬ, ಒಟ್ಟಿಗೆ ಎಂಟು ಜನ ಮಲಗಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಮಳೆ ಬಂದಿದೆ. ಆಗ ಎಚ್ಚರಗೊಂಡಾಗ ಬಾಲಕಿಯು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕುಟುಂಬಸ್ಥರು ಮಳೆಯಲ್ಲೇ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಬಳಿಕ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು.

ನಗ್ನ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆ: ಬೆಳಗ್ಗೆ 6:30ರ ಸುಮಾರಿಗೆ ಜೋಪಡಿಯ ಪಕ್ಕದ ಗುಂಡಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಶವದ ಮೇಲೆ ಸರಿಯಾಗಿ ಬಟ್ಟೆಯಿರಲಿಲ್ಲ, ಇದರಿಂದ ಕುಟುಂಬಸ್ಥರು ಅತ್ಯಾಚಾರ ಮತ್ತು ಕೊಲೆಯ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ನಡೆದ ಕೇವಲ ಎರಡು ದಿನಗಳ ಹಿಂದೆ, ಇದೇ ಸ್ಥಳದ ಮತ್ತೊಂದು ಬದಿಯಲ್ಲಿ ಒಬ್ಬ ವ್ಯಕ್ತಿಯ ಬರ್ಬರ ಹತ್ಯೆ ನಡೆದಿತ್ತು. ಒಟ್ಟಾರೆ ಎರಡು ದಿನಗಳ ಅಂತರದಲ್ಲಿ ಒಂದೇ ಸ್ಥಳದಲ್ಲಿ ಎರಡು ಕೊಲೆ ಘಟನೆಗಳು ನಡೆದಿರುವುದು ಆಘಾತಕಾರಿಯಾಗಿದೆ.

ಪ್ರಸ್ತುತ, ನಜರ್‌ಬಾದ್ ಪೊಲೀಸರು ಸುಮಾರು 50 ಕುಟುಂಬಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ. ಈ ಘಟನೆಯಿಂದ ದಸರಾ ಸಂಭ್ರಮದ ನಡುವೆಯೇ ಸ್ಥಳೀಯರಲ್ಲಿ ಭಯ ಮತ್ತು ಆತಂಕ ಮನೆಮಾಡಿದೆ. ತನಿಖೆಯಲ್ಲಿ ಯಾವುದೇ ಶಂಕಿತರನ್ನು ಗುರುತಿಸಲಾಗಿಲ್ಲವಾದರೂ, ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

The post ಬಲೂನ್ ವ್ಯಾಪಾರಕ್ಕೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ 10 ವರ್ಷದ ಬಾಲಕಿ ಶ* ಪತ್ತೆ! ರೇ* ಅಂಡ್ ಮ*ರ್ ಶಂಕೆ! appeared first on Good News 24x7.

]]>
ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ ಚಿಕ್ಕಣ್ಣ, ಫಿಕ್ಸ್ ಆಯ್ತು ಕಾಮಿಡಿ ಸ್ಟಾರ್ ಚಿಕ್ಕಣ್ಣನ ಮದುವೆ https://www.goodnews24x7.com/chikkanna-finally-says-goodbye-to-bachelor-life-comedy-star-chikkannas-marriage-is-fixed/ Mon, 01 Sep 2025 04:13:16 +0000 https://www.goodnews24x7.com/?p=7182 ಚಿಕ್ಕಣ್ಣ ಮದುವೆ: ಹಾಸ್ಯ ನಟ ಆ ನಂತರ ಹೀರೋ ಸಹ ಆದ ಚಿಕ್ಕಣ್ಣ ಮದುವೆಯಿಂದ ದೂರವಿದ್ದರು. ಆದರೆ ಈಗ ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ್ದು, ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಚಿಕ್ಕಣ್ಣ ಮದವೆ ಆಗುತ್ತಿರುವ ಯುವತಿ ಯಾರು? ಯಾವ ಊರು? ನಟಿಯಾ?…

The post ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ ಚಿಕ್ಕಣ್ಣ, ಫಿಕ್ಸ್ ಆಯ್ತು ಕಾಮಿಡಿ ಸ್ಟಾರ್ ಚಿಕ್ಕಣ್ಣನ ಮದುವೆ appeared first on Good News 24x7.

]]>

ಚಿಕ್ಕಣ್ಣ ಮದುವೆ: ಹಾಸ್ಯ ನಟ ಆ ನಂತರ ಹೀರೋ ಸಹ ಆದ ಚಿಕ್ಕಣ್ಣ ಮದುವೆಯಿಂದ ದೂರವಿದ್ದರು. ಆದರೆ ಈಗ ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ್ದು, ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಚಿಕ್ಕಣ್ಣ ಮದವೆ ಆಗುತ್ತಿರುವ ಯುವತಿ ಯಾರು? ಯಾವ ಊರು? ನಟಿಯಾ? ಎಲ್ಲ ಮಾಹಿತಿ ಇಲ್ಲಿದೆ ನೋಡಿ.ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ. ಬಹಳ ಕಷ್ಟಪಟ್ಟು ಚಿತ್ರರಂಗದಲ್ಲಿ ಹೆಸರು ಮಾಡಿರುವ ಚಿಕ್ಕಣ್ಣ ಇಷ್ಟ ವರ್ಷ ಬ್ಯಾಚುಲರ್ ಆಗಿದ್ದರು.

ಹಾಸ್ಯ ನಟ ಆ ನಂತರ ಹೀರೋ ಸಹ ಆದ ಚಿಕ್ಕಣ್ಣ ಮದುವೆಯಿಂದ ದೂರವಿದ್ದರು. ಆದರೆ ಈಗ ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ್ದು, ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಚಿಕ್ಕಣ್ಣ ಅವರು ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯನ್ನು ವಿವಾಹವಾಗುತ್ತಿದ್ದಾರೆ. ಮನೆಯವರು ನೋಡಿರುವ ಸಂಬಂಧ ಇದು ಎನ್ನಲಾಗಿದೆ.
ಚಿಕ್ಕಣ್ಣ ಅವರ ಮದುವೆ ನಿಶ್ಚಯವನ್ನು ಸದ್ದಿಲ್ಲದೆ ಮುಗಿಸಿಕೊಂಡಿದ್ದಾರೆ. ಹೂ ಮುಡಿಸುವ ಶಾಸ್ತ್ರವನ್ನು ಮಾಡಿ ಆಗಿದೆ. ಮದುವೆಯ ದಿನಾಂಕವೂ ನಿಗದಿ ಆಗಿದೆಯಂತೆ ಚಿಕ್ಕಣ್ಣ ಮದುವೆ ಆಗುತ್ತಿರುವ ಯುವತಿಯ ಹೆಸರು ಪಾವನಾ. ಮಹದೇವಪುರ ಗ್ರಾಮದ ಯುವತಿ ಈಕೆ. ಇತ್ತೀಚೆಗಷ್ಟೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆಚಿಕ್ಕಣ್ಣ ಟಾಕ್ ಶೋಗಳಲ್ಲಿ ಮದುವೆ ವಿಷಯ ಮಾತಾಡಿದಾಗೆಲ್ಲ ತಮಾಷೆ ಮಾಡುತ್ತಾ ಹಾರಿಕೆ ಉತ್ತರ ನೀಡುತ್ತಿದ್ದರು. ಈಗ ಕೊನೆಗೆ ಗೃಹಸ್ಥರಾಗಲು ಸಜ್ಜಾಗಿದ್ದಾರೆ.

The post ಕೊನೆಗೂ ಬ್ಯಾಚುಲರ್ ಲೈಫ್​​ಗೆ ಗುಡ್​ಬೈ ಹೇಳಿದ ಚಿಕ್ಕಣ್ಣ, ಫಿಕ್ಸ್ ಆಯ್ತು ಕಾಮಿಡಿ ಸ್ಟಾರ್ ಚಿಕ್ಕಣ್ಣನ ಮದುವೆ appeared first on Good News 24x7.

]]>
ಬಾಲಿವುಡ್‌ ನಟ ಗೋವಿಂದ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ https://www.goodnews24x7.com/bollywood-actor-govinda-files-for-divorce-from-wife/ Sat, 23 Aug 2025 06:34:57 +0000 https://www.goodnews24x7.com/?p=6508 ಬಾಲಿವುಡ್‌ ಹಿರಿಯ ನಟ ಗೋವಿಂದ ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಗೋವಿಂದ ಅವರ ಪತ್ನಿ ಸುನೀತಾ ಅಹುಜಾಅವರು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರೀತಿ ಮತ್ತು ವಿವಾಹದಲ್ಲಿ ಮೋಸ ಹಾಗೂ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಅಂತ ಕಾರಣ ಕೊಟ್ಟು ಸುನೀತಾ…

The post ಬಾಲಿವುಡ್‌ ನಟ ಗೋವಿಂದ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ appeared first on Good News 24x7.

]]>

ಬಾಲಿವುಡ್‌ ಹಿರಿಯ ನಟ ಗೋವಿಂದ ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಗೋವಿಂದ ಅವರ ಪತ್ನಿ ಸುನೀತಾ ಅಹುಜಾಅವರು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಪ್ರೀತಿ ಮತ್ತು ವಿವಾಹದಲ್ಲಿ ಮೋಸ ಹಾಗೂ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಅಂತ ಕಾರಣ ಕೊಟ್ಟು ಸುನೀತಾ ಅವರು ವಿಚ್ಛೇದನ ಕೋರಿದ್ದಾರೆ. ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 13 (1), (i), (ia), (ib) ಅಡಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ
ಬಾಲಿವುಡ್‌ ಹಿರಿಯ ನಟ ಗೋವಿಂದ ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಗೋವಿಂದ ಅವರ ಪತ್ನಿ ಸುನೀತಾ ಅಹುಜಾಅವರು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ಹಿಂದೆಯೇ ಅಹುಜಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ತಿಳಿದುಬಂದಿತ್ತು. ಮೇ 25ರಂದು ನ್ಯಾಯಾಲಯವು ಗೋವಿಂದ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಜೂನ್‌ನಿಂದ ಇಬ್ಬರೂ ವಿಚ್ಛೇದನ ಕುರಿತಂತೆ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಆದರೆ, ವಿಚಾರಣೆ ಸಮಯದಲ್ಲಿ ಗೋವಿಂದ ಅವರು ಹಾಜರಾಗುತ್ತಿರಲಿಲ್ಲ. ಸುನೀತಾ ಅವರು ಹಾಜರಾಗುತ್ತಿದ್ದರು. ಇಬ್ಬರೂ ಮತ್ತೆ ಒಂದಾಗುತ್ತಿದ್ದಾರೆ ಎಂದೇ ಹೇಳಲಾಗಿತ್ತು.

ಈ ಜೋಡಿ 37 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಸುನೀತಾ ತಮ್ಮ ಯೂಟ್ಯೂಬ್ ವ್ಲಾಗ್‌ನಲ್ಲಿ ವಿಚ್ಛೇದನದ ಬಗ್ಗೆ ಮಾತನಾಡಿದ ಕೆಲವು ವಾರಗಳ ನಂತರ ಈ ವರದಿ ಬಂದಿದೆ. ಸುನೀತಾ ಬಾಂದ್ರಾ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ

The post ಬಾಲಿವುಡ್‌ ನಟ ಗೋವಿಂದ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ appeared first on Good News 24x7.

]]>