farmer Archives - Good News 24x7 https://www.goodnews24x7.com/tag/farmer/ Kannada Tue, 14 Jul 2026 06:11:54 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg farmer Archives - Good News 24x7 https://www.goodnews24x7.com/tag/farmer/ 32 32 KRS ಒಳಹರಿವಿನಲ್ಲಿ ಭಾರೀ ಇಳಿಕೆ: ರೈತರು ಮತ್ತು ಬೆಂಗಳೂರಿಗರಲ್ಲಿ ಹೆಚ್ಚಿದ ಆತಂಕ! https://www.goodnews24x7.com/9836-2huge-drop-in-krs-inflow-farmers-and-bengaluruans-worried/ Tue, 14 Jul 2026 06:11:54 +0000 https://www.goodnews24x7.com/?p=9836 ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ, ಮಂಡ್ಯ ಜಿಲ್ಲೆಯ ಜೀವನಾಡಿಯಾದ ಕೆ.ಆರ್.ಎಸ್ (KRS) ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಇದು ಕೇವಲ ಕೃಷಿಯನ್ನೇ ನಂಬಿದ ಅನ್ನದಾತರ ನಿದ್ದೆಗೆಡಿಸಿರುವುದು ಮಾತ್ರವಲ್ಲದೆ, ಕಾವೇರಿ ನೀರನ್ನೇ ಅವಲಂಬಿಸಿರುವ ಸಿಲಿಕಾನ್ ಸಿಟಿ ಬೆಂಗಳೂರಿಗೂ…

The post KRS ಒಳಹರಿವಿನಲ್ಲಿ ಭಾರೀ ಇಳಿಕೆ: ರೈತರು ಮತ್ತು ಬೆಂಗಳೂರಿಗರಲ್ಲಿ ಹೆಚ್ಚಿದ ಆತಂಕ! appeared first on Good News 24x7.

]]>

ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ, ಮಂಡ್ಯ ಜಿಲ್ಲೆಯ ಜೀವನಾಡಿಯಾದ ಕೆ.ಆರ್.ಎಸ್ (KRS) ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಇದು ಕೇವಲ ಕೃಷಿಯನ್ನೇ ನಂಬಿದ ಅನ್ನದಾತರ ನಿದ್ದೆಗೆಡಿಸಿರುವುದು ಮಾತ್ರವಲ್ಲದೆ, ಕಾವೇರಿ ನೀರನ್ನೇ ಅವಲಂಬಿಸಿರುವ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕುಡಿಯುವ ನೀರಿನ ಸಂಕಷ್ಟದ ಮುನ್ಸೂಚನೆ ನೀಡಿದೆ. ಒಳಹರಿವಿನಲ್ಲಿ ದಿಢೀರ್ ಕುಸಿತಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಂಗೆ ಬರುವ ನೀರಿನ ಪ್ರಮಾಣ 12 ಸಾವಿರ ಕ್ಯೂಸೆಕ್ ದಾಟಿತ್ತು. ಆದರೆ ಈಗ ಮಳೆ ಬಿಡುವು ನೀಡಿರುವುದರಿಂದ ಒಳಹರಿವು ಗಣನೀಯವಾಗಿ ಕುಸಿದಿದೆ.ನಿನ್ನೆಯ ಒಳಹರಿವು: 7,500 ಕ್ಯೂಸೆಕ್ಇಂದಿನ ಒಳಹರಿವು: ಕೇವಲ 3,685 ಕ್ಯೂಸೆಕ್ಮುಂಗಾರು ಆರಂಭದ ಮಳೆ ನೋಡಿ ಕೃಷಿ ಚಟುವಟಿಕೆಗಳಿಗೆ ಸಜ್ಜಾಗಿದ್ದ ಮಂಡ್ಯ ಭಾಗದ ರೈತರು, ಈಗ ಬೆಳೆಗಳಿಗೆ ನೀರು ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ಬೆಂಗಳೂರಿಗರಿಗೂ ಕಾದಿದೆಯೇ ನೀರಿನ ಕ್ಷಾಮ?ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿರುವುದು ಬೆಂಗಳೂರು ನಗರದ ಪಾಲಿಗೆ ಆತಂಕದ ಸಂಗತಿಯಾಗಿದೆ. ಬೆಂಗಳೂರಿನ ಬಹುತೇಕ ಭಾಗಗಳಿಗೆ ಕುಡಿಯುವ ನೀರು ಪೂರೈಕೆಯಾಗುವುದು ಇದೇ ಕಾವೇರಿ ನದಿಯಿಂದ. ಸದ್ಯ ಕುಡಿಯುವ ಉದ್ದೇಶಕ್ಕಾಗಿ ಜಲಾಶಯದಿಂದ 623 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಂದು ವೇಳೆ ಮಳೆ ಮತ್ತೆ ಚುರುಕುಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯಿದೆ.ಜಲಾಶಯದ ಇಂದಿನ ಸ್ಥಿತಿಗತಿ (KRS Today’s Status)ವಿವರಗಳುಮಾಹಿತಿಗರಿಷ್ಠ ಮಟ್ಟ124.80 ಅಡಿಇಂದಿನ ಮಟ್ಟ92.54 ಅಡಿಗರಿಷ್ಠ ಸಾಮರ್ಥ್ಯ49.452 ಟಿಎಂಸಿಸದ್ಯದ ನೀರಿನ ಸಂಗ್ರಹ17.509 ಟಿಎಂಸಿಇಂದಿನ ಒಳಹರಿವು3,685 ಕ್ಯೂಸೆಕ್ಇಂದಿನ ಹೊರಹರಿವು623 ಕ್ಯೂಸೆಕ್ಮುಖ್ಯ
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವುದು ರೈತರಿಗೂ ಮತ್ತು ಜನಸಾಮಾನ್ಯರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮುಂಬರುವ ದಿನಗಳಲ್ಲಿ ಮಳೆ ಮತ್ತೆ ಚುರುಕಾಗದಿದ್ದರೆ ನೀರಿನ ಸಂಕಷ್ಟ ಎದುರಾಗುವುದು ಅನಿವಾರ್ಯ ಎಂಬಂತಾಗಿದೆ.

The post KRS ಒಳಹರಿವಿನಲ್ಲಿ ಭಾರೀ ಇಳಿಕೆ: ರೈತರು ಮತ್ತು ಬೆಂಗಳೂರಿಗರಲ್ಲಿ ಹೆಚ್ಚಿದ ಆತಂಕ! appeared first on Good News 24x7.

]]>
ಬೇಲೂರು: ಕಾಡಾನೆ ದಾಳಿಗೆ ರೈತ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ. https://www.goodnews24x7.com/beluru-ka%e1%b8%8dane-da%e1%b8%b7ige-raita-bali-ara%e1%b9%87ya-ilakhe-viruddha-gramasthara-akrosa-belurfarmervillagersworkingattacksdamage-beluru-tallukina-ka%e1%b9%87aguppe-gramadalli-bhan/ Sun, 12 Apr 2026 13:32:58 +0000 https://www.goodnews24x7.com/?p=9249 ಬೇಲೂರು: ತಾಲ್ಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮದ ರಾಜಶೆಟ್ಟಿ (60) ಎಂಬುವವರು ತಮ್ಮ ಮನೆಯ ಮುಂದಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಬಂದ ಆನೆ ಅವರನ್ನು ಸೊಂಡಿಲಿನಿಂದ ಎತ್ತಿ…

The post ಬೇಲೂರು: ಕಾಡಾನೆ ದಾಳಿಗೆ ರೈತ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ. appeared first on Good News 24x7.

]]>

ಬೇಲೂರು: ತಾಲ್ಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮದ ರಾಜಶೆಟ್ಟಿ (60) ಎಂಬುವವರು ತಮ್ಮ ಮನೆಯ ಮುಂದಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಬಂದ ಆನೆ ಅವರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿ, ತುಳಿದು ಸಾಯಿಸಿದೆ. ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ಸುಮಾರು 50ಕ್ಕೂ ಹೆಚ್ಚು ಆನೆಗಳ ಹಿಂಡು ಬೀಡುಬಿಟ್ಟಿದ್ದು, ಬೆಳೆ ಹಾನಿ ಹಾಗೂ ಸಾರ್ವಜನಿಕರ ಮೇಲಿನ ಸರಣಿ ದಾಳಿಗಳಿಂದ ಜನತೆ ಹೈರಾಣಾಗಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. “ಕಳೆದ ವರ್ಷವೂ ಇದೇ ಭಾಗದಲ್ಲಿ ಮಹಿಳೆಯೊಬ್ಬರು ಆನೆ ದಾಳಿಗೆ ಬಲಿಯಾಗಿದ್ದರು. ಪದೇ ಪದೇ ಮನವಿ ಮಾಡಿದರೂ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ” ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಸ್ಥಳಕ್ಕೆ ಉನ್ನತ ಅಧಿಕಾರಿಗಳು ಹಾಗೂ ಸಚಿವರು ಭೇಟಿ ನೀಡುವವರೆಗೆ ಶವವನ್ನು ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಪ್ರತಿಭಟನಾಕಾರರು, ಕಾಡಾನೆಗಳನ್ನು ಕೂಡಲೇ ಶಾಶ್ವತವಾಗಿ ಸ್ಥಳಾಂತರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

The post ಬೇಲೂರು: ಕಾಡಾನೆ ದಾಳಿಗೆ ರೈತ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ. appeared first on Good News 24x7.

]]>
ಹೂಕೋಸಿನಲ್ಲಿ ಮೂಡಿ ಬಂದ ರಾಮ, ಸೀತೆ, ಹನುಮಂತ;ಇದು ರೈತನ ವಿಭಿನ್ನ ರಾಮನವಮಿ ಸೆಲೆಬ್ರೇಶನ್ https://www.goodnews24x7.com/%e0%b2%b9%e0%b3%82%e0%b2%95%e0%b3%8b%e0%b2%b8%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ae%e0%b3%82%e0%b2%a1%e0%b2%bf-%e0%b2%ac%e0%b2%82%e0%b2%a6-%e0%b2%b0%e0%b2%be%e0%b2%ae/ Sun, 29 Mar 2026 06:49:37 +0000 https://www.goodnews24x7.com/?p=9041 ಯುಗಾದಿ ನಂತರ ಬರುವ ಹಬ್ಬವೇ ರಾಮನವಮಿ. ಹಿಂದೂಗಳ ಪ್ರಮುಖ ಹಬ್ಬವಾದ ರಾಮನವಮಿಯನ್ನು ದೇಶದಾದ್ಯಂತ ಅದ್ದೂರಿಯಿಂದ ಆಚರಿಸಲಾಗಿದೆ. ಈ ಆದರೆ ಇಲ್ಲೊಬ್ಬ ಯುವ ರೈತ ವಿಭಿನ್ನವಾಗಿ ರಾಮನವಮಿ ಆಚರಿಸಿದ್ದಾನೆ. ತಾನು ಬೆಳೆದ ಹೂಕೋಸಿನಲ್ಲಿ ರಾಮ, ಸೀತೆ ಹಾಗೂ ಹನುಮಂತ ಚಿತ್ರ ಬಿಡಿಸಿ ಹಬ್ಬವನ್ನು…

The post ಹೂಕೋಸಿನಲ್ಲಿ ಮೂಡಿ ಬಂದ ರಾಮ, ಸೀತೆ, ಹನುಮಂತ;ಇದು ರೈತನ ವಿಭಿನ್ನ ರಾಮನವಮಿ ಸೆಲೆಬ್ರೇಶನ್ appeared first on Good News 24x7.

]]>

ಯುಗಾದಿ ನಂತರ ಬರುವ ಹಬ್ಬವೇ ರಾಮನವಮಿ. ಹಿಂದೂಗಳ ಪ್ರಮುಖ ಹಬ್ಬವಾದ ರಾಮನವಮಿಯನ್ನು ದೇಶದಾದ್ಯಂತ ಅದ್ದೂರಿಯಿಂದ ಆಚರಿಸಲಾಗಿದೆ. ಈ ಆದರೆ ಇಲ್ಲೊಬ್ಬ ಯುವ ರೈತ ವಿಭಿನ್ನವಾಗಿ ರಾಮನವಮಿ ಆಚರಿಸಿದ್ದಾನೆ. ತಾನು ಬೆಳೆದ ಹೂಕೋಸಿನಲ್ಲಿ ರಾಮ, ಸೀತೆ ಹಾಗೂ ಹನುಮಂತ ಚಿತ್ರ ಬಿಡಿಸಿ ಹಬ್ಬವನ್ನು ಸಂಭ್ರಮಿಸಿದ್ದಾನೆ, ಈ ಕುರಿತಾದ ಸ್ಟೋರಿ ಇಲ್ಲಿದೆ. ಮರ್ಯಾದಾ ಪುರುಷ, ಪುರುಷೋತ್ತಮ ಭಗವಾನ್ ಶ್ರೀ ರಾಮನ ಜನ್ಮದಿನವನ್ನು ದೇಶದೆಲ್ಲೆಡೆ ಶ್ರದ್ಧಾಭಕ್ರಿಯಿಂದ ಆಚರಿಸಲಾಗಿದೆ. ಹಿಂದೂಗಳಿಗೆ ಯುಗಾದಿ ವರುಷದ ಮೊದಲ ಹಬ್ಬವಾದರೆ, ತದನಂತರ ಬರುವುದೇ ಈ ರಾಮನವಮಿ. ಈ ಹಬ್ಬದಂದು ಕೋಟ್ಯಾಂತರ ಭಕ್ತರು ರಾಮನನ್ನು ಪೂಜಿಸಿ, ಆರಾಧಿಸುತ್ತಾರೆ. ಆದರೆ ಇಲ್ಲೊಬ್ಬ ರೈತನು ತಾನು ಬೆಳೆದ ಹೂಕೋಸಿನಲ್ಲಿ ರಾಮ, ಸೀತೆ ಹನುಮಂತನ ಚಿತ್ರ ಬಿಡಿಸಿದ ರಾಮನವಮಿಯನ್ನು ಸಂಭ್ರಮಿಸಿದ್ದಾನೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ನಂದಿನಿ ವೆಂಕಟಾದ್ರಿ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಯುವ ರೈತನೊಬ್ಬ ತಾನು ಬೆಳೆದ ಹೂಕೋಸಿನಲ್ಲಿ ರಾಮ, ಸೀತೆ, ಹನುಮಂತನ ಚಿತ್ರ ಬಿಡಿಸಿದ ರಾಮನವಮಿಯನ್ನು ವಿಭಿನ್ನವಾಗಿ ಆಚರಿಸುವುದನ್ನು ಕಾಣಬಹುದು. ಹೊಲದಲ್ಲಿ ಹೂಕೋಸಿನ ರಾಶಿಯನ್ನು ಕಾಣಬಹುದು. ಮೂವರು ಮಹಿಳೆಯರು ಕೆಲಸದಲ್ಲಿ ತೊಡಗಿಕೊಂಡಿದ್ದು, ಯುವ ರೈತನೊಬ್ಬ ಹೂಕೋಸನ್ನು ಜೋಡಿಸಿ ರಾಮ, ಸೀತೆ, ಹನುಮಂತನ ಚಿತ್ರ ಬಿಡಿಸಿ ಅದರ ಪಕ್ಕ ಕುಳಿತಿರುವುದನ್ನು ನೀವು ನೋಡಬಹುದು.

ಮಾರ್ಚ್ 27 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಮ್ಮ ಭಕ್ತಿಯ ಭಾವನೆಯನ್ನು ವ್ಯಕ್ತಪಡಿಸಲು ಹಲವಾರು ಮಾರ್ಗಗಳಿವೆ, ಆದ್ದರಿಂದ, ಇದು ನೈಸರ್ಗಿಕ ಹೂವಿನ ಗೌರವವಾದ ಹೂಕೋಸು ಮೂಲಕ ಭಕ್ತಿಯನ್ನು ವ್ಯಕ್ತಪಡಿಸುವ ಅತ್ಯಂತ ವಿಶಿಷ್ಟ ಮಾರ್ಗವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಇದು ತುಂಬಾ ಸುಂದರ ಹಾಗೂ ಹೃದಯ ಸ್ಪರ್ಶಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಜೈ ಶ್ರೀರಾಮ್ ಎಂದು ಹೇಳಿದ್ದಾರೆ.

The post ಹೂಕೋಸಿನಲ್ಲಿ ಮೂಡಿ ಬಂದ ರಾಮ, ಸೀತೆ, ಹನುಮಂತ;ಇದು ರೈತನ ವಿಭಿನ್ನ ರಾಮನವಮಿ ಸೆಲೆಬ್ರೇಶನ್ appeared first on Good News 24x7.

]]>
ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ, 2 ಹಸುಗಳು ಸಾ*ವು. https://www.goodnews24x7.com/farmer-2-cows-die-after-falling-on-electric-wire-in-field/ Mon, 26 May 2025 06:08:22 +0000 https://www.goodnews24x7.com/?p=4077 ಮೈಸೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಓರ್ವ ವ್ಯಕ್ತಿ, ಎರಡು ಹಸು ಸಾವನ್ನಪ್ಪಿರುವ ದುರ್ಘಟನೆ ನಂಜನಗೂಡು ತಾಲೂಕಿನ ಏಚಗಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಸಿದ್ದರಾಜು (52) ಮೃತರು. ಇವರ ಜತೆ ಸುಮಾರು ಒಂದೂವರೆ ಲಕ್ಷ ಬೆಲೆಬಾಳುವ ಎರಡು ಇಲಾತಿ ಹಸುಗಳು…

The post ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ, 2 ಹಸುಗಳು ಸಾ*ವು. appeared first on Good News 24x7.

]]>

ಮೈಸೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಓರ್ವ ವ್ಯಕ್ತಿ, ಎರಡು ಹಸು ಸಾವನ್ನಪ್ಪಿರುವ ದುರ್ಘಟನೆ ನಂಜನಗೂಡು ತಾಲೂಕಿನ ಏಚಗಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಸಿದ್ದರಾಜು (52) ಮೃತರು. ಇವರ ಜತೆ ಸುಮಾರು ಒಂದೂವರೆ ಲಕ್ಷ ಬೆಲೆಬಾಳುವ ಎರಡು ಇಲಾತಿ ಹಸುಗಳು ಸಹ ಮೃತಪಟ್ಟಿವೆ. ಮೃತರ ಕುಟುಂಬದವರ ದುಃಖ ಮುಗಿಲು ಮುಟ್ಟಿದೆ.


ಸಿದ್ದರಾಜುರವರು ಜಮೀನಿನಲ್ಲಿ ತಮ್ಮ ಹಸುಗಳನ್ನು ಮೇಯಿಸುತ್ತಿರುವಾಗ, ಹಸುಗಳು ವಿದ್ಯುತ್ ತಂತಿಯನ್ನು ಸ್ಪರ್ಶಿಸಿದೆ. ಈ ವೇಳೆ ಹಸುಗಳನ್ನು ಕಾಪಾಡಲು ಹೋದಾಗ ಹಸುವಿನ ಮಾಲಿಕ ಸಿದ್ದರಾಜುರವರು ಸಹ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.
ತುಂತುರು ಮಳೆಯಾಗುತ್ತಿದ್ದು, ಸಂಜೆಯಾದರೂ ಸಿದ್ದರಾಜು ಅವರು ಮನೆಗೆ ಬಾರದ ಹಿನ್ನೆಲೆ ಆತನ ಕುಟುಂಬ ಸಂಜೆ ಸಮಯದಲ್ಲಿ ತಮ್ಮ ಜಮೀನಿಗೆ ಹೋಗಿ ನೋಡಿದಾಗ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದು ಹಾಗೂ ಸಿದ್ದರಾಜು ಮತ್ತು ಆತನ ಎರಡು ಹಸುಗಳು ಸಹ ಮೃತಪಟ್ಟಿರುವುದು ಕಂಡುಬಂದಿದೆ.
ಸುದ್ದಿ ತಿಳಿದ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು, ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

The post ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ, 2 ಹಸುಗಳು ಸಾ*ವು. appeared first on Good News 24x7.

]]>
ಸಿಎಂ ತವರು ಕ್ಷೇತ್ರದಲ್ಲಿ ಅನ್ನದಾತರ ಅಹೋರಾತ್ರಿ ಧರಣಿ, ಭೂಮಿ ಕಳೆದುಕೊಂಡ ರೈತ ಕುಟುಂಬದಿಂದ ಪ್ರತಿಭಟನೆ https://www.goodnews24x7.com/an-hour-long-sit-in-by-food-givers-in-cms-home-constituency-protest-by-farmer-families-who-lost-their-land/ Wed, 04 Sep 2024 14:46:17 +0000 https://www.goodnews24x7.com/?p=512 ಸಿಎಂ ತವರು ಕ್ಷೇತ್ರದಲ್ಲಿ ಅನ್ನದಾತರ ಅಹೋರಾತ್ರಿ ಧರಣಿ, ಭೂಮಿ ಕಳೆದುಕೊಂಡ ರೈತ ಕುಟುಂಬದಿಂದ ಪ್ರತಿಭಟನೆ ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ಕೊಡಿಸಲು ವಿಫಲವಾದ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕೆಐಎಡಿಬಿಯ ವಿರುದ್ಧ ಕೆಂಪಿಸಿದ್ದನಹುಂಡಿ ‌ರೈತರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ವರುಣಾ ಕ್ಷೇತ್ರದ ಕೆಂಪಿಸಿದ್ದನಹುಂಡಿ…

The post ಸಿಎಂ ತವರು ಕ್ಷೇತ್ರದಲ್ಲಿ ಅನ್ನದಾತರ ಅಹೋರಾತ್ರಿ ಧರಣಿ, ಭೂಮಿ ಕಳೆದುಕೊಂಡ ರೈತ ಕುಟುಂಬದಿಂದ ಪ್ರತಿಭಟನೆ appeared first on Good News 24x7.

]]>

ಸಿಎಂ ತವರು ಕ್ಷೇತ್ರದಲ್ಲಿ ಅನ್ನದಾತರ ಅಹೋರಾತ್ರಿ ಧರಣಿ, ಭೂಮಿ ಕಳೆದುಕೊಂಡ ರೈತ ಕುಟುಂಬದಿಂದ ಪ್ರತಿಭಟನೆ

ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ಕೊಡಿಸಲು ವಿಫಲವಾದ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕೆಐಎಡಿಬಿಯ ವಿರುದ್ಧ ಕೆಂಪಿಸಿದ್ದನಹುಂಡಿ ‌ರೈತರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

ವರುಣಾ ಕ್ಷೇತ್ರದ ಕೆಂಪಿಸಿದ್ದನಹುಂಡಿ ಗ್ರಾಮದ ರೈತರ ಭೂಮಿಯನ್ನು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆಂದು ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ರೈತರ ಕುಟುಂಬದ ಸದಸ್ಯರಿಗೆ ಕಾರ್ಖಾನೆಗಳಲ್ಲಿ ಖಾಯಂ ಕೆಲಸ ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಬಹುತೇಕ ಕಾರ್ಖಾನೆಗಳು ಉದ್ಯೋಗವನ್ನು ನೀಡಿರಲಿಲ್ಲ. ರೈತರ ಹಲವಾರು ಹೋರಾಟಗಳ ನಂತರ, ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಕೈಗಾರಿಕೆಗಳ ಕೇಂದ್ರದ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಒಂದು ಜಿಲ್ಲಾಮಟ್ಟದ ಸಮಿತಿಯನ್ನು ರಚನೆ ಮಾಡಿದರು. ಈ ಸಮಿತಿಯ ಶಿಫರಾಸ್ಸಿನಂತೆ, ಉದ್ಯೋಗ ನೀಡಬೇಕೆಂದು ಕೆಲವು ಕೈಗಾರಿಕೆಗಳಿಗೆ ಕೆಐಎಡಿಬಿಯ ಅಧಿಕಾರಿಗಳು ಪತ್ರವನ್ನು ನೀಡಿದ್ದಾರೆ. ಆದರೆ ಈ ಪತ್ರಗಳಿಗೆ ಕಾರ್ಖಾನೆಗಳು ಸ್ಪಂದಿಸುತ್ತಿಲ್ಲ.

ಹಾಗಾಗಿ ರೈತರಿಂದ ಭೂಮಿಯನ್ನು ಪಡೆದು ಕೈಗಾರಿಕೆಗಳಿಗೆ ನೀಡಿರುವ ಕೆಐಎಡಿಬಿಯ ಅಧಿಕಾರಿಗಳು ರೈತರ ಮಕ್ಕಳಿಗೆ ಕೆಲಸ ಕೊಡಿಸಬೇಕೆಂದು, ೨೯-೦೮-೨೦೨೪ರಂದು ಕೆಐಎಡಿಬಿಯ ಕಚೇರಿಯ ಮುಂದೆ ಅನಿರ್ಧಿಷ್ಟಾವಧಿ ಹೋರಾಟವನ್ನು ಶುರು ಮಾಡಲಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಬಂದ ಕೆಐಎಡಿಬಿಯ ಅಧಿಕಾರಿಗಳು ೦೪-೦೯-೨೦೨೪ ರಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರೈತರಿಗೆ ಕೆಲಸ ನೀಡಬೇಕಿರುವ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯನ್ನು ನಡೆಸಿ ಉದ್ಯೋಗ ಕೊಡಿಸುವುದಾಗಿ ತಿಳಿಸಿದ್ದರು. ಆ‌ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ವಾಪಾಸ್ ತೆಗೆದುಕೊಳ್ಳಲಾಗಿತ್ತು.

ಆದರೆ ಇಂದಿನ ಸಭೆಯಲ್ಲಿ, ಭೂಮಿ ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡುವ ಬಗ್ಗೆ ಯಾವುದೇ ತಿರ್ಮಾನವಾಗಲಿಲ್ಲ. ಹಾಗಾಗಿ ರೈತರಿಗೆ ನ್ಯಾಯ ಸಿಗುವವರೆಗೂ ಜಂಟಿ ನಿರ್ದೇಶಕರ ಕಛೇರಿಯ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.

The post ಸಿಎಂ ತವರು ಕ್ಷೇತ್ರದಲ್ಲಿ ಅನ್ನದಾತರ ಅಹೋರಾತ್ರಿ ಧರಣಿ, ಭೂಮಿ ಕಳೆದುಕೊಂಡ ರೈತ ಕುಟುಂಬದಿಂದ ಪ್ರತಿಭಟನೆ appeared first on Good News 24x7.

]]>
ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳಿಂದ, ರೈತರನ್ನು ನಾಶ ಮಾಡಲು ಹೊರಟಿದೆ : ಕುರುಬೂರ್ ಶಾಂತಕುಮಾರ್ https://www.goodnews24x7.com/kendra-sarkara-raita-virodhi-dhora%e1%b9%87ega%e1%b8%b7inda-raitarannu-nasa-ma%e1%b8%8dalu-hora%e1%b9%adide-kurubur-santakumar-kendra-sarkarakke-durbala-adhikara-sikkidaru-raita-virodhi-dhora/ Wed, 28 Aug 2024 09:51:58 +0000 https://www.goodnews24x7.com/?p=463 ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳಿಂದ, ರೈತರನ್ನು ನಾಶ ಮಾಡಲು ಹೊರಟಿದೆ : ಕುರುಬೂರ್ ಶಾಂತಕುಮಾರ್ ಕೇಂದ್ರ ಸರ್ಕಾರಕ್ಕೆ ದುರ್ಬಲ ಅಧಿಕಾರ ಸಿಕ್ಕಿದರು ರೈತ ವಿರೋಧಿ ಧೋರಣೆಗಳನ್ನೇ ಮುಂದುವರಿಸುತ್ತಿದೆ. ಇದೇ ರೀತಿ ರೈತ ವಿರೋಧಿ ಧೋರಣೆ ಮುಂದುವರೆದರೆ ಅಧಿಕಾರದಿಂದಲೇ ದೂರ ಹಾಕುವ…

The post ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳಿಂದ, ರೈತರನ್ನು ನಾಶ ಮಾಡಲು ಹೊರಟಿದೆ : ಕುರುಬೂರ್ ಶಾಂತಕುಮಾರ್ appeared first on Good News 24x7.

]]>

ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳಿಂದ, ರೈತರನ್ನು ನಾಶ ಮಾಡಲು ಹೊರಟಿದೆ : ಕುರುಬೂರ್ ಶಾಂತಕುಮಾರ್

ಕೇಂದ್ರ ಸರ್ಕಾರಕ್ಕೆ ದುರ್ಬಲ ಅಧಿಕಾರ ಸಿಕ್ಕಿದರು ರೈತ ವಿರೋಧಿ ಧೋರಣೆಗಳನ್ನೇ ಮುಂದುವರಿಸುತ್ತಿದೆ. ಇದೇ ರೀತಿ ರೈತ ವಿರೋಧಿ ಧೋರಣೆ ಮುಂದುವರೆದರೆ ಅಧಿಕಾರದಿಂದಲೇ ದೂರ ಹಾಕುವ ಸನ್ನಿವೇಶ ನಿರ್ಮಾಣ ಮಾಡಬೇಕಾಗುತ್ತದೆ ಎಂಬುದನ್ನು ಅರಿಯಬೇಕು.
ರೈತರ ಕೃಷಿ ಭೂಮಿ, ಸಾಲ ವಸುಲಾತಿ ನೆಪದಲ್ಲಿ ಭೂಮಿ ಕಿತ್ತುಕೊಳ್ಳುವ ಸರ್ಪ್ರೈಸಿ ಕಾಯ್ದೆ ಜಾರಿಗೆ ತಂದು. ಸಾಲ ಕಟ್ಟದ ರೈತರ ಜಮೀನುಗಳನ್ನು ಬ್ಯಾಂಕುಗಳು ವಶ ಪಡಿಸಿಕೊಳ್ಳುತ್ತಿವೆ ಇಂತಹ ರೈತ ದ್ರೋಹಿ ಕಾನೂನುಗಳ ವಿರುದ್ಧ ಪ್ರಬಲ ಹೋರಾಟ ನಡೆಸಬೇಕಾಗಿದೆ. ಇಲ್ಲದಿದ್ದರೆ ರೈತ ಕುಲವೇ ನಾಶವಾಗುತ್ತದೆ. ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ಕುರುಬೂರು ಶಾಂತಕುಮಾರ್ ಪಾಂಡಿಚೇರಿ ಕಾರಯ್ಕಲ್ ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತ ತಿಳಿಸಿದರು.

ಇಂದು ನಡೆದ ರಾಷ್ಟ್ರೀಯ ರೈತ ಸಮಾವೇಶದಲ್ಲಿ. ತಮಿಳುನಾಡು ಕರ್ನಾಟಕ ಆಂಧ್ರಪ್ರದೇಶ್. ತೆಲಂಗಾಣ. ಕೇರಳ. ರಾಜ್ಯಗಳ ರೈತ ಮುಖಂಡರು ಭಾಗವಹಿಸಿದ್ದರು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿ. ರೈತರ ಸಂಪೂರ್ಣ ಸಾಲಮನ್ನಾ. ಡಾ. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ. ಬೆಳೆ ವಿಮೆ ಪದ್ಧತಿ ತಿದ್ದುಪಡಿ ಆಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂಬ ಇನ್ನಿತರ ಒತ್ತಾಯಗಳ ಬಗ್ಗೆ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಮುಂದಿನ ದಿನಗಳಲ್ಲಿ ಬೆಂಬಲಿಸಿ ಪ್ರಬಲಗೊಳಿಸಲು ಪಾಂಡಿಚೇರಿಯಲ್ಲಿ ದಕ್ಷಿಣ ಭಾರತ ರಾಜ್ಯದ ರೈತ ಮುಖಂಡರು ತೀರ್ಮಾನಿಸಿದರು.

The post ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳಿಂದ, ರೈತರನ್ನು ನಾಶ ಮಾಡಲು ಹೊರಟಿದೆ : ಕುರುಬೂರ್ ಶಾಂತಕುಮಾರ್ appeared first on Good News 24x7.

]]>