food Archives - Good News 24x7 https://www.goodnews24x7.com/tag/food/ Kannada Mon, 31 Aug 2026 06:34:53 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg food Archives - Good News 24x7 https://www.goodnews24x7.com/tag/food/ 32 32 ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ https://www.goodnews24x7.com/officials-make-surprise-visit-to-indira-canteen-check-cleanliness-and-food-quality/ Mon, 31 Aug 2026 06:34:53 +0000 https://www.goodnews24x7.com/?p=9952 ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

The post ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ appeared first on Good News 24x7.

]]>

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ ಸ್ಪಷ್ಟ ನಿರ್ದೇಶನದ ಹಿನ್ನೆಲೆಯಲ್ಲಿ ಈ ತಪಾಸಣೆ ನಡೆಸಲಾಯಿತು.

ಪರಿಶೀಲನೆ ವೇಳೆ ಮುಖ್ಯಾಧಿಕಾರಿ ಜೆ.ಇ. ಮಂಜುನಾಥ್ ಹಾಗೂ ಮೇಲ್ವಿಚಾರಕ ಸಿದ್ದು ಅವರು ಸಾರ್ವಜನಿಕರೊಂದಿಗೆ ಸಾಲಿನಲ್ಲಿ ಕುಳಿತು ಇಂದಿನ ಉಪಹಾರವಾದ ಇಡ್ಲಿ ಮತ್ತು ಪೂರಿಯನ್ನು ಸೇವಿಸುವ ಮೂಲಕ ನೇರವಾಗಿ ರುಚಿ ಹಾಗೂ ಗುಣಮಟ್ಟವನ್ನು ಖಾತರಿಪಡಿಸಿಕೊಂಡರು. ಕ್ಯಾಂಟೀನ್ ಆವರಣದ ಸ್ವಚ್ಛತೆಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ನೋಡಿಕೊಳ್ಳಲು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ವ್ಯವಸ್ಥೆಯನ್ನು ಸದಾ ಸುಸ್ಥಿತಿಯಲ್ಲಿಡಲು ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಪಿಡಿ ವೆಂಕಟಗೌಡ ಅವರು ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಕ್ಯಾಂಟೀನ್‌ಗೆ ಭೇಟಿ ನೀಡಬೇಕೆಂದು ತಿಳಿಸಲಾಗಿದೆ. ಜೊತೆಗೆ ಆರೋಗ್ಯ ನಿರೀಕ್ಷಕರು ಪ್ರತಿದಿನದ ಸ್ಥಿತಿಗತಿಯ ಬಗ್ಗೆ ನಿರಂತರ ಮೇಲ್ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಲಾಯಿತು. ಸ್ಥಳೀಯ ದಿನಗೂಲಿ ನೌಕರರು, ಆಟೋ ಚಾಲಕರು ಹಾಗೂ ವಿದ್ಯಾರ್ಥಿಗಳು ಈ ರಿಯಾಯಿತಿ ದರದ ಆಹಾರ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕಾಗಿ ಅಧಿಕಾರಿಗಳು ಕೋರಿದರು.

The post ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ appeared first on Good News 24x7.

]]>
FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ! https://www.goodnews24x7.com/fssai-displeased-everest-and-lg-asafoetida-powder-banned/ Sun, 30 Aug 2026 11:42:41 +0000 https://www.goodnews24x7.com/?p=9942 ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಪ್ರಸಿದ್ಧ ‘ಎವರೆಸ್ಟ್ ಫುಡ್ ಪ್ರಾಡಕ್ಟ್ಸ್’ ಹಾಗೂ ‘ಲಾಲ್ಜಿ ಗೋಧು (LG)’ ಕಂಪನಿಗಳ ಇಂಗಿನ ಪುಡಿ (Asafoetida) ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ. ಇತ್ತೀಚೆಗೆ ನಡೆದ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಈ ಎರಡೂ…

The post FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ! appeared first on Good News 24x7.

]]>

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಪ್ರಸಿದ್ಧ ‘ಎವರೆಸ್ಟ್ ಫುಡ್ ಪ್ರಾಡಕ್ಟ್ಸ್’ ಹಾಗೂ ‘ಲಾಲ್ಜಿ ಗೋಧು (LG)’ ಕಂಪನಿಗಳ ಇಂಗಿನ ಪುಡಿ (Asafoetida) ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ. ಇತ್ತೀಚೆಗೆ ನಡೆದ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಈ ಎರಡೂ ಬ್ರ್ಯಾಂಡ್‌ಗಳ ಇಂಗಿನ ಮಾದರಿಗಳು ನಿಗದಿತ ಆಹಾರ ಸುರಕ್ಷತಾ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿದ್ದು, ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬುದು ದೃಢಪಟ್ಟಿದೆ.

ಸಾಮಾಜಿಕ ಜಾಲತಾಣದ ಅಧಿಕೃತ ಪೋಸ್ಟ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿರುವ FSSAI, ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಈ ಕಠಿಣ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಜೊತೆಗೆ, ನಿಯಮಾವಳಿಗಳಿಗೆ ಅನುಗುಣವಾಗಿ ಉತ್ಪನ್ನದ ಗುಣಮಟ್ಟವನ್ನು ತಕ್ಷಣವೇ ಸುಧಾರಿಸಲು ಎರಡೂ ಸಂಸ್ಥೆಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

The post FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ! appeared first on Good News 24x7.

]]>
ಕರ್ನಾಟಕದಲ್ಲಿ ನಕಲಿ ‘ಪನೀರ್’ ಮಾರಾಟಕ್ಕೆ ಒಂದು ವರ್ಷ ಬ್ರೇಕ್: ಸರ್ಕಾರದ ದಿಟ್ಟ ಕ್ರಮ https://www.goodnews24x7.com/one-year-ban-on-sale-of-fake-paneer-in-karnataka-governments-bold-move/ Sat, 22 Aug 2026 09:22:19 +0000 https://www.goodnews24x7.com/?p=9905 ಸಾರ್ವಜನಿಕರ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ‘ಪನೀರ್’ ಹೆಸರಿನಲ್ಲಿ ಮಾರಾಟವಾಗುತ್ತಿರುವ ನಕಲಿ ಹಾಗೂ ನಾನ್-ಡೈರಿ ಅನಲಾಗ್ (Analogue) ಪನೀರ್ ಉತ್ಪನ್ನಗಳ ಮೇಲಿನ ನಿಷೇಧವನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿದೆ. ಈ ಕುರಿತು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ…

The post ಕರ್ನಾಟಕದಲ್ಲಿ ನಕಲಿ ‘ಪನೀರ್’ ಮಾರಾಟಕ್ಕೆ ಒಂದು ವರ್ಷ ಬ್ರೇಕ್: ಸರ್ಕಾರದ ದಿಟ್ಟ ಕ್ರಮ appeared first on Good News 24x7.

]]>

ಸಾರ್ವಜನಿಕರ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ‘ಪನೀರ್’ ಹೆಸರಿನಲ್ಲಿ ಮಾರಾಟವಾಗುತ್ತಿರುವ ನಕಲಿ ಹಾಗೂ ನಾನ್-ಡೈರಿ ಅನಲಾಗ್ (Analogue) ಪನೀರ್ ಉತ್ಪನ್ನಗಳ ಮೇಲಿನ ನಿಷೇಧವನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿದೆ. ಈ ಕುರಿತು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಏನಿದು ನಕಲಿ ಅಥವಾ ಅನಲಾಗ್ ಪನೀರ್?
ಹಾಲಿನ ಕೊಬ್ಬು ಮತ್ತು ಹಾಲಿನ ಘನವಸ್ತುಗಳ ಬದಲಿಗೆ ಸಸ್ಯಜನ್ಯ ಎಣ್ಣೆ, ಕೃತಕ കൊಬ್ಬು ಅಥವಾ ಇತರ ಹಾಲೇತರ ಪದಾರ್ಥಗಳನ್ನು ಬಳಸಿ ತಯಾರಿಸುವ ಉತ್ಪನ್ನಗಳನ್ನು ‘ಅನಲಾಗ್ ಪನೀರ್’ ಎನ್ನಲಾಗುತ್ತದೆ. FSSAI ನಿಯಮಾವಳಿಗಳ ಪ್ರಕಾರ, ಪನೀರ್ ಎಂಬುದು ಸಂಪೂರ್ಣವಾಗಿ ಹಾಲಿನಿಂದ ಮಾತ್ರ ತಯಾರಾಗಬೇಕಾದ ಉತ್ಪನ್ನ. ಹೀಗಾಗಿ, ಹಾಲೇತರ ಪದಾರ್ಥಗಳಿಂದ ತಯಾರಿಸಿದ ಉತ್ಪನ್ನಗಳನ್ನು ‘ಪನೀರ್’ ಹೆಸರಿನಲ್ಲಿ ಮಾರಾಟ ಮಾಡುವುದು, ಸಂಗ್ರಹಿಸುವುದು, ಪ್ಯಾಕ್ ಮಾಡುವುದು ಅಥವಾ ಉಪಾಹಾರ ಗೃಹಗಳಲ್ಲಿ ಬಳಸುವುದು ಸಂಪೂರ್ಣ ಕಾನೂನುಬಾಹಿರ.

ಸರ್ಕಾರದ ಮುಖ್ಯ ಮಾರ್ಗದರ್ಶಿ ಸೂತ್ರಗಳು:

ಬ್ಯಾನ್ ವ್ಯಾಪ್ತಿ: ಅನಲಾಗ್ ಪನೀರ್‌ನ ತಯಾರಿಕೆ, ಸಾಗಣೆ, ವಿತರಣೆ, ಸಗಟು-ಚಿಲ್ಲರೆ ಮಾರಾಟ ಮತ್ತು ಪ್ರದರ್ಶನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಹೋಟಲ್ & ರೆಸ್ಟೋರೆಂಟ್‌ಗಳಿಗೆ ಎಚ್ಚರಿಕೆ: ಯಾವುದೇ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ನಕಲಿ ಪನೀರ್ ಬಳಸುವುದು ಅಥವಾ ಸಂಗ್ರಹಿಸುವುದು ಶಿಕ್ಷಾರ್ಹ ಅಪರಾಧ.

ಮಿನಾಯಿತಿ: ಈಗಾಗಲೇ FSSAI ನಿಂದ ಪ್ರತ್ಯೇಕ ಮಾನದಂಡ ಹೊಂದಿರುವ ಫ್ರೋಜನ್ ಡೆಸರ್ಟ್, ಪ್ರೊಸೆಸ್ಡ್ ಚೀಸ್ ಹಾಗೂ ಮಿಕ್ಸ್ಡ್ ಫ್ಯಾಟ್ ಸ್ಪ್ರೆಡ್‌ಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.

ಆಹಾರ ಸುರಕ್ಷತೆಗೆ ತಾಲೂಕು ಮಟ್ಟದಲ್ಲಿ ‘ವಾಚ್‌ಟೀಮ್’
ಆಹಾರ ಸುರಕ್ಷತೆ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಸಚಿವ ಯು.ಟಿ. ಖಾದರ್, “ಆಹಾರದಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ಈಗಾಗಲೇ ನಿಷೇಧಿಸಲಾಗಿದ್ದು, ಅಜಿನಮೊಟೊ ದುರ್ಬಳಕೆ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಪ್ರತಿಯೊಂದು ಕಡೆ ದಾಳಿ ನಡೆಸುವುದು ಪ್ರಾಯೋಗಿಕವಾಗಿ ಸವಾಲಾಗಿರುವುದರಿಂದ, ನೈರ್ಮಲ್ಯ ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ತಾಲೂಕು ಮಟ್ಟದಲ್ಲಿ ಹಿರಿಯ ನಾಗರಿಕರು ಮತ್ತು ಸಾಮಾಜಿಕ ಕಾರ್ಯಕರ್ತರನ್ನೊಳಗೊಂಡ ‘ವಾಚ್‌ಟೀಮ್’ ರಚಿಸಲು ಸರ್ಕಾರ ಚಿಂತನೆ ನಡೆಸಿದೆ” ಎಂದು ತಿಳಿಸಿದರು.

The post ಕರ್ನಾಟಕದಲ್ಲಿ ನಕಲಿ ‘ಪನೀರ್’ ಮಾರಾಟಕ್ಕೆ ಒಂದು ವರ್ಷ ಬ್ರೇಕ್: ಸರ್ಕಾರದ ದಿಟ್ಟ ಕ್ರಮ appeared first on Good News 24x7.

]]>
ಬೆಂಗಳೂರು ಶಾಲೆಗಳಲ್ಲಿ ಫುಡ್ ಡೆಲಿವರಿ ಆಪ್‌ಗಳಿಗೆ ನಿಷೇಧ ! https://www.goodnews24x7.com/food-delivery-apps-banned-in-bengaluru-schools/ Sun, 21 Jun 2026 11:19:35 +0000 https://www.goodnews24x7.com/?p=9616   ಬೆಂಗಳೂರು : ನಗರದ ಪ್ರತಿಷ್ಠಿತ ಶಾಲೆಗಳು ತಮ್ಮ ಆವರಣದಲ್ಲಿ ಸ್ವಿಗ್ಗಿ, ಜೊಮ್ಯಾಟೊ  ಸೇರಿದಂತೆ ಇತರೆ ಆನ್‌ಲೈನ್ ಆಪ್‌ಗಳ ಮೂಲಕ ಆಹಾರ ಆರ್ಡರ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸುತ್ತಿವೆ. ಇತ್ತೀಚೆಗಷ್ಟೇ ಬನಶಂಕರಿಯಲ್ಲಿರುವ ವಿದ್ಯಾಶಿಲ್ಪ ಶಾಲೆ ತನ್ನ ಪೋಷಕರಿಗೆ ಸುತ್ತೋಲೆ ಹೊರಡಿಸಿ ಈ ನಿಯಮವನ್ನು…

The post ಬೆಂಗಳೂರು ಶಾಲೆಗಳಲ್ಲಿ ಫುಡ್ ಡೆಲಿವರಿ ಆಪ್‌ಗಳಿಗೆ ನಿಷೇಧ ! appeared first on Good News 24x7.

]]>

  ಬೆಂಗಳೂರು : ನಗರದ ಪ್ರತಿಷ್ಠಿತ ಶಾಲೆಗಳು ತಮ್ಮ ಆವರಣದಲ್ಲಿ ಸ್ವಿಗ್ಗಿ, ಜೊಮ್ಯಾಟೊ  ಸೇರಿದಂತೆ ಇತರೆ ಆನ್‌ಲೈನ್ ಆಪ್‌ಗಳ ಮೂಲಕ ಆಹಾರ ಆರ್ಡರ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸುತ್ತಿವೆ. ಇತ್ತೀಚೆಗಷ್ಟೇ ಬನಶಂಕರಿಯಲ್ಲಿರುವ ವಿದ್ಯಾಶಿಲ್ಪ ಶಾಲೆ ತನ್ನ ಪೋಷಕರಿಗೆ ಸುತ್ತೋಲೆ ಹೊರಡಿಸಿ ಈ ನಿಯಮವನ್ನು ಪ್ರಕಟಿಸಿದ್ದು, ನಗರದ ಇನ್ನೂ ಹಲವು ಪ್ರಮುಖ ಶಾಲೆಗಳು ಈ ಹಾದಿ ಹಿಡಿದಿವೆ.

ಶಾಲಾ ಆಡಳಿತ ಮಂಡಳಿಗಳುಯ ಹೇಳುವಂತೆ ಹೊರಗಿನಿಂದ ಆರ್ಡರ್ ಮಾಡುವ ಜಂಕ್ ಫುಡ್‌ಗಳು ಆರೋಗ್ಯಕರವಾಗಿರುವುದಿಲ್ಲ. ಅವುಗಳಲ್ಲಿ ಅತಿಯಾದ ಎಣ್ಣೆ, ಉಪ್ಪು ಮತ್ತು ಪ್ರಿಸರ್ವೇಟಿವ್ಸ್‌ಗಳನ್ನು ಬಳಸಲಾಗಿರುತ್ತದೆ. ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಶಾಲೆಯೊಂದರ ಪ್ರಾಂಶುಪಾಲರು ಹೇಳುವಂತೆ, ಒಬ್ಬ ವಿದ್ಯಾರ್ಥಿ ಮನೆಯಿಂದ ತಂದ ಸಾಮಾನ್ಯ ಪಲಾವ್ ತಿನ್ನುವಾಗ, ಪಕ್ಕದ ಮಗು ಪಿಜ್ಜಾ ಆರ್ಡರ್ ಮಾಡಿ ತಿಂದರೆ ಅದು ಮಕ್ಕಳಲ್ಲಿ ಅನಗತ್ಯ ಆಕರ್ಷಣೆ ಮತ್ತು ತಾರತಮ್ಯ ಮೂಡಿಸುತ್ತದೆ. ಇದು ಪೋಷಕರ ಮೇಲೆ ಮತ್ತಷ್ಟು ಒತ್ತಡ ತರುತ್ತದೆ ಎಂದಿದ್ದಾರೆ. ಡೆಲಿವರಿ ಬಾಯ್‌ಗಳು ಪದೇ ಪದೇ ಶಾಲಾ ಆವರಣಕ್ಕೆ ಬರುವುದು ಭದ್ರತೆಯ ದೃಷ್ಟಿಯಿಂದ ಸರಿಯಲ್ಲ. ಪ್ರತಿದಿನ 4-5 ಪಾರ್ಸಲ್‌ಗಳನ್ನು ತರಗತಿಗಳಿಗೆ ತಲುಪಿಸುವುದು ಶಾಲೆಯ ಶಿಸ್ತು ಮತ್ತು ಸಮಯ ಪಾಲನೆಗೆ ಅಡ್ಡಿಪಡಿಸುತ್ತದೆ.

ಮನೆಯ ಊಟಕ್ಕೆ ಆದ್ಯತೆ
ಪೋಷಕರು ಅನಿವಾರ್ಯ ಕಾರಣಗಳಿಂದ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗದಿದ್ದರೆ, ಹೋಟೆಲ್‌ನಿಂದ ತರಿಸಿದ ಆರೋಗ್ಯಕರ ಆಹಾರವನ್ನೇ ಸಾಮಾನ್ಯ ಲಂಚ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಕಳುಹಿಸಬೇಕು ಎಂದು ಶಾಲೆಗಳು ವಿನಂತಿಸಿವೆ. ವಿದ್ಯಾರ್ಥಿಗಳಿಗೆ ಮಾದರಿಯಾಗಲು ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಕ್ಕೂ ಸಹ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವುದನ್ನು ನಿಷೇಧಿಸಲಾಗಿದೆ.

The post ಬೆಂಗಳೂರು ಶಾಲೆಗಳಲ್ಲಿ ಫುಡ್ ಡೆಲಿವರಿ ಆಪ್‌ಗಳಿಗೆ ನಿಷೇಧ ! appeared first on Good News 24x7.

]]>
ನೆನೆಸಿಟ್ಟ ಅಂಜೂರದ ಉಪಯೋಗ ಏನು ಗೊತ್ತ ? https://www.goodnews24x7.com/do-you-know-what-are-the-benefits-of-soaked-figs/ Tue, 02 Sep 2025 05:31:44 +0000 https://www.goodnews24x7.com/?p=7247 ಅಂಜೂರದ ಬಗ್ಗೆ ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿರಬಹುದು. ಇದು ನಮ್ಮ ದೇಹಕ್ಕೆ ಅಗತ್ಯವಿರುವಂತಹ ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಬಾದಾಮಿ ಮತ್ತು ವಾಲ್ನಟ್ ಗಳಂತೆ ಇದರಲ್ಲಿಯೂ ಪ್ರಯೋಜನಕಾರಿ ಗುಣಗಳಿವೆ. ಆಯುರ್ವೇದ ಮತ್ತು ಪೌಷ್ಟಿಕಾಂಶ ತಜ್ಞರು ಹೇಳುವ ಪ್ರಕಾರ,…

The post ನೆನೆಸಿಟ್ಟ ಅಂಜೂರದ ಉಪಯೋಗ ಏನು ಗೊತ್ತ ? appeared first on Good News 24x7.

]]>

ಅಂಜೂರದ ಬಗ್ಗೆ ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿರಬಹುದು. ಇದು ನಮ್ಮ ದೇಹಕ್ಕೆ ಅಗತ್ಯವಿರುವಂತಹ ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಬಾದಾಮಿ ಮತ್ತು ವಾಲ್ನಟ್ ಗಳಂತೆ ಇದರಲ್ಲಿಯೂ ಪ್ರಯೋಜನಕಾರಿ ಗುಣಗಳಿವೆ. ಆಯುರ್ವೇದ ಮತ್ತು ಪೌಷ್ಟಿಕಾಂಶ ತಜ್ಞರು ಹೇಳುವ ಪ್ರಕಾರ, ಇವುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಿರ್ದಿಷ್ಟ ಪ್ರಯೋಜನಗಳು ಸಿಗುತ್ತದೆ. ಹಾಗಾದರೆ ಇದರಿಂದ ನಮ್ಮ ಆರೋಗ್ಯಕ್ಕಿರುವ ಪ್ರಯೋಜನಗಳೇನು? ಯಾಕೆ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಬಾದಾಮಿ ಮತ್ತು ವಾಲ್ನಟ್ ನಂತಹ ಒಣ ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಈ ಆರೋಗ್ಯಕರ ಒಣ ಹಣ್ಣುಗಳ ಪಟ್ಟಿಯಲ್ಲಿ ಅಂಜೂರವನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ಕೆಲವರು ಮರೆತು ಬಿಡುತ್ತಾರೆ. ಆದರೆ ಈ ಅಂಜೂರ (figs) ನಮ್ಮ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ ಮಾತ್ರವಲ್ಲ ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಇವುಗಳಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಅಂಜೂರವನ್ನು ನೀವು ಯಾವುದೇ ರೀತಿಯಲ್ಲಿಯೂ ಸೇವನೆ ಮಾಡಬಹುದು. ಆದರೆ ಆಯುರ್ವೇದ ಮತ್ತು ಪೌಷ್ಟಿಕಾಂಶ ತಜ್ಞರು ಹೇಳುವ ಪ್ರಕಾರ, ಇವುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಿರ್ದಿಷ್ಟ ಪ್ರಯೋಜನಗಳು ಸಿಗುತ್ತದೆ. ಒಣದ್ರಾಕ್ಷಿಯಂತೆಯೇ, ಇದರ ಸೇವನೆ ಕೂಡ, ಕೆಲವೇ ದಿನಗಳಲ್ಲಿ ನಿಮ್ಮ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆಯನ್ನು ನೀವು ಗಮನಿಸುವಂತೆ ಮಾಡುತ್ತದೆ. ಹಾಗಾದರೆ ಇದರಿಂದ ನಮ್ಮ ಆರೋಗ್ಯಕ್ಕಿರುವ ಪ್ರಯೋಜನಗಳೇನು? ಯಾಕೆ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಅಂಜೂರವು ಪೊಟ್ಯಾಸಿಯಮ್‌ನಿಂದ ಸಮೃದ್ಧವಾಗಿದ್ದು ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಂಜೂರದ ಹಣ್ಣು ಕ್ಲೋರೊಜೆನಿಕ್ ಆಮ್ಲವನ್ನು ಸಹ ಹೊಂದಿರುತ್ತದೆ, ಇದು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂಬುದು ಹಲವಾರು ಅಧ್ಯಯನಗಳಿಂದ ಸಾಬೀತಾಗಿದೆ. ಹೆಚ್ಚುವರಿಯಾಗಿ, ನೆನೆಸಿದ ಅಂಜೂರದ ಹಣ್ಣುಗಳನ್ನು ಸೇವಿಸುವುದರಿಂದ ಟೈಪ್ -2 ಮಧುಮೇಹ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಕೂಡ ಸಹಾಯ ಮಾಡುತ್ತದೆ.

ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಕಾರಿ
ಅಂಜೂರವು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಮಾತ್ರವಲ್ಲ ಕರುಳಿನ ಆರೋಗ್ಯ ಕಾಪಾಡಿಕೊಳ್ಳುವುದಕ್ಕೂ ಅಂಜೂರ ಸೇವನೆ ಮಾಡುವುದಕ್ಕೆ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಮಲಬದ್ಧತೆಯಿಂದ ಬಳಲುತ್ತಿರುವ ರೋಗಿಗಳು ನೆನೆಸಿದ ಅಂಜೂರವನ್ನು ತಿನ್ನುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ.

ತೂಕವನ್ನು ಕಡಿಮೆ ಮಾಡುತ್ತದೆ
ಇತ್ತೀಚಿನ ದಿನಗಳಲ್ಲಿ, ಅನೇಕರು ತೂಕ ಹೆಚ್ಚಾಗುವುದರ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಾರೆ. ಅವರ ತೂಕ ಇಳಿಸಿಕೊಳ್ಳಲು ಜಿಮ್‌ಗೆ ಹೋಗುವುದರಿಂದ ಹಿಡಿದು ಆಹಾರ ಕ್ರಮವನ್ನು ಅನುಸರಿಸುವ ವರೆಗೆ ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಇವುಗಳ ಬದಲು ಖಾಲಿ ಹೊಟ್ಟೆಯಲ್ಲಿ ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಪಡೆಯಬಹುದು.

ಮೂಳೆಗಳನ್ನು ಬಲಪಡಿಸುತ್ತದೆ
ಅಂಜೂರವು ಕ್ಯಾಲ್ಸಿಯಂ ಅಂಶಗಳಿಂದ ಸಮೃದ್ಧವಾಗಿದ್ದು, ಅಂಜೂರದ ಹಣ್ಣುಗಳ ಸೇವನೆಯು ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಬಲಪಡಿಸಲು ಹಾಲು ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಅಂಜೂರವು ಪ್ರಯೋಜನಕಾರಿಯಾಗಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಅಂಜೂರವನ್ನು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಅಂಜೂರ ಹಣ್ಣುಗಳಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಇರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯ ಕೂಡ ಕಡಿಮೆಯಾಗುತ್ತದೆ.

The post ನೆನೆಸಿಟ್ಟ ಅಂಜೂರದ ಉಪಯೋಗ ಏನು ಗೊತ್ತ ? appeared first on Good News 24x7.

]]>
ಫುಡ್ ಡೆಲಿವರಿ ವ್ಯಕ್ತಿಯ ಹುಟ್ಟು ಹಬ್ಬ ಆಚರಿಸಿದ ಫುಡ್ ಆರ್ಡರ್ ಮಾಡಿದ ಮನೆ ಮಂದಿ…. https://www.goodnews24x7.com/%e0%b2%ab%e0%b3%81%e0%b2%a1%e0%b3%8d-%e0%b2%a1%e0%b3%86%e0%b2%b2%e0%b2%bf%e0%b2%b5%e0%b2%b0%e0%b2%bf-%e0%b2%b5%e0%b3%8d%e0%b2%af%e0%b2%95%e0%b3%8d%e0%b2%a4%e0%b2%bf%e0%b2%af-%e0%b2%b9%e0%b3%81/ Mon, 23 Jun 2025 10:23:17 +0000 https://www.goodnews24x7.com/?p=4622 ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ತಾನು ಖುಷಿಯಾಗಿದ್ದರೆ ಸಾಕು ಎಂದು ಬಯಸುವವರೇ ಹೆಚ್ಚು. ಬೇರೆಯವರು ಖುಷಿಯಾಗಿರಲಿ, ಸಂತೋಷವಾಗಿರಲಿ ಎಂದು ಬಯಸುವ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಕಾಣಸಿಗುವುದೇ ಅಪರೂಪ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಡ್‌ ಆರ್ಡರ್ ಮಾಡಿದ್ದ ಮನೆಮಂದಿ ಡೆಲಿವರಿ ಬಾಯ್‌ಗೆ…

The post ಫುಡ್ ಡೆಲಿವರಿ ವ್ಯಕ್ತಿಯ ಹುಟ್ಟು ಹಬ್ಬ ಆಚರಿಸಿದ ಫುಡ್ ಆರ್ಡರ್ ಮಾಡಿದ ಮನೆ ಮಂದಿ…. appeared first on Good News 24x7.

]]>

ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ತಾನು ಖುಷಿಯಾಗಿದ್ದರೆ ಸಾಕು ಎಂದು ಬಯಸುವವರೇ ಹೆಚ್ಚು. ಬೇರೆಯವರು ಖುಷಿಯಾಗಿರಲಿ, ಸಂತೋಷವಾಗಿರಲಿ ಎಂದು ಬಯಸುವ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಕಾಣಸಿಗುವುದೇ ಅಪರೂಪ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಡ್‌ ಆರ್ಡರ್ ಮಾಡಿದ್ದ ಮನೆಮಂದಿ ಡೆಲಿವರಿ ಬಾಯ್‌ಗೆ ಬರ್ತ್ಡೇ ಸರ್ಪ್ರೈಸ್ ನೀಡುವ ಮೂಲಕ ಖುಷಿಪಡಿಸಿ, ಆತನ ಮುಖದಲ್ಲಿ ನಗುತರಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಒಳ್ಳೆಯ ಮನಸ್ಸಿನ ವ್ಯಕ್ತಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹುಟ್ಟುಹಬ್ಬ ಬಂತೆಂದರೆ ಎಲ್ಲರೂ ಕೂಡ ಆತ್ಮೀಯರು ಏನಾದ್ರೂ ಸರ್ಪ್ರೈಸ್ ಉಡುಗೊರೆಗಳನ್ನು ನೀಡುತ್ತಾರಾ ಎಂದು ಕಾಯುತ್ತೇವೆ. ಯಾರಾದ್ರೂ ಸ್ಪೆಷಲ್ ಆಗಿ ಸರ್ಪ್ರೈಸ್ ನೀಡಿದರೆ ಆ ಖುಷಿಯನ್ನು ಹೇಳಲು ಪದಗಳೇ ಸಾಲಲ್ಲ. ಇನ್ನು ಮನೆ ಮಂದಿಗೆ, ಸ್ನೇಹಿತರಿಗೆ ಹುಟ್ಟುಹಬ್ಬದ ಸರ್ಪ್ರೈಸ್‌ ನೀಡುವುದು ಕಾಮನ್‌. ಆದರೆ ಇಲ್ಲೊಂದು ಮನೆ ಮಂದಿ ಗುರುತು ಪರಿಚಯವಿಲ್ಲದ ಜೊಮಾಟೊ ಡೆಲಿವರಿ ಬಾಯ್‌ಗೆ ಬರ್ತ್ಡೇ ಸರ್ಪ್ರೈಸ್ ನೀಡಿದ್ದಾರೆ. ಈ ಸರ್ಪ್ರೈಸ್ ನೋಡಿ ಫುಡ್ ಡೆಲಿವರಿ ಬಾಯ್ ಕಣ್ಣೀರು ಸುರಿಸಿದ್ದಾನೆ. ಈ ವಿಡಿಯೋ ಸಾಮಾಜಿಕತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

The post ಫುಡ್ ಡೆಲಿವರಿ ವ್ಯಕ್ತಿಯ ಹುಟ್ಟು ಹಬ್ಬ ಆಚರಿಸಿದ ಫುಡ್ ಆರ್ಡರ್ ಮಾಡಿದ ಮನೆ ಮಂದಿ…. appeared first on Good News 24x7.

]]>
ಸಿಟ್ಟಿಗೆದ್ದ ಫೋಟೋಗ್ರಾಫರ್ ; ಡಿಲೀಟ್ ಆದ್ವು ಮದುವೆ ಫೋಟೋಗಳು…. https://www.goodnews24x7.com/%e0%b2%b8%e0%b2%bf%e0%b2%9f%e0%b3%8d%e0%b2%9f%e0%b2%bf%e0%b2%97%e0%b3%86%e0%b2%a6%e0%b3%8d%e0%b2%a6-%e0%b2%ab%e0%b3%8b%e0%b2%9f%e0%b3%8b%e0%b2%97%e0%b3%8d%e0%b2%b0%e0%b2%be%e0%b2%ab%e0%b2%b0%e0%b3%8d/ Tue, 13 May 2025 11:55:21 +0000 https://www.goodnews24x7.com/?p=3855 ಬೆಳಗ್ಗೆಯಿಂದ ಸಂಜೆ ತನಕ ನಿಂತುಕೊಂಡೆ ಮದುವೆಯ ಸುಂದರ ಫೋಟೋಗಳನ್ನುಗಳನ್ನು ಕ್ಲಿಕಿಸಿಕೊಳ್ಳುವವರೇ ಈ ಫೋಟೋಗ್ರಾಫರ್. ಆದರೆ ಮದುವೆ ಮನೆಯವರು ಅಥವಾ ಮದುವೆ ಮಂಟಪದಲ್ಲಿ ಈ ಫೋಟೋಗ್ರಾಫರ್ ಬಗ್ಗೆ ವಿಚಾರಿಸುವುದೇ ಇಲ್ಲ. ಆದರೆ ಇಲ್ಲೊಬ್ಬ ಫೋಟೋಗ್ರಾಫರ್ ಈ ವಿಚಾರವಾಗಿ ಸಿಟ್ಟುಗೊಂಡಿದ್ದು, ಮಾಡಿದ ಕೆಲಸ ತಿಳಿದರೆ…

The post ಸಿಟ್ಟಿಗೆದ್ದ ಫೋಟೋಗ್ರಾಫರ್ ; ಡಿಲೀಟ್ ಆದ್ವು ಮದುವೆ ಫೋಟೋಗಳು…. appeared first on Good News 24x7.

]]>

ಬೆಳಗ್ಗೆಯಿಂದ ಸಂಜೆ ತನಕ ನಿಂತುಕೊಂಡೆ ಮದುವೆಯ ಸುಂದರ ಫೋಟೋಗಳನ್ನುಗಳನ್ನು ಕ್ಲಿಕಿಸಿಕೊಳ್ಳುವವರೇ ಈ ಫೋಟೋಗ್ರಾಫರ್. ಆದರೆ ಮದುವೆ ಮನೆಯವರು ಅಥವಾ ಮದುವೆ ಮಂಟಪದಲ್ಲಿ ಈ ಫೋಟೋಗ್ರಾಫರ್ ಬಗ್ಗೆ ವಿಚಾರಿಸುವುದೇ ಇಲ್ಲ. ಆದರೆ ಇಲ್ಲೊಬ್ಬ ಫೋಟೋಗ್ರಾಫರ್ ಈ ವಿಚಾರವಾಗಿ ಸಿಟ್ಟುಗೊಂಡಿದ್ದು, ಮಾಡಿದ ಕೆಲಸ ತಿಳಿದರೆ ಅಚ್ಚರಿಯಾಗುತ್ತದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಎಲ್ಲರೂ ಕೂಡ ತಮ್ಮ ಮದುವೆ ಕ್ಷಣಗಳನ್ನು ಸೆರೆಹಿಡಿಯಬೇಕೆಂದು ಅಂದುಕೊಂಡುತ್ತಾರೆ. ಹೀಗಾಗಿ ಎಷ್ಟೇ ಖರ್ಚು ಆದರೂ ಸರಿಯೇ ಚೆನ್ನಾಗಿ ಫೋಟೋ ತೆಗೆಯುವ ಫೋಟೋಗ್ರಾಫರ್ ಗಳನ್ನು ಮದುವೆಗೆಂದೇ ಹೇಳುತ್ತಾರೆ. ಆದರೆ ಬೆಳಗ್ಗೆ ಯಿಂದ ಸಂಜೆ ನಿಂತುಕೊಂಡೆ ಕೆಲಸ ಮಾಡುವ ಈ ಫೋಟೋಗ್ರಾಫರ್ ಕಷ್ಟ ಕೇಳುವವರು ಯಾರು, ಅವರಿಗೂ ಕೂಡ ಕೋಪ ಅನ್ನೋದು ಬರುತ್ತದೆ. ಆದರೆ ಕೆಲವೊಮ್ಮೆ ಅವರ ಬಳಿ ಯಾರು ಕೂಡ ಊಟ ತಿಂಡಿ ಆಯ್ತಾ, ನೀರು ಬೇಕಾ ಎಂದು ಕೇಳುವುದಿಲ್ಲ. ಇದೀಗ ಇಲ್ಲೊಬ್ಬ ಫೋಟೋಗ್ರಾಫರ್ ಊಟ ನೀರು ಕೊಡಲಿಲ್ಲ, ತನ್ನ ಬಗ್ಗೆ ಯಾರು ಕೂಡ ವಿಚಾರಿಸಿಲ್ಲ ಎಂದು ಕೋಪಗೊಂಡಿದ್ದು ಮದುವೆಯ ಫೋಟೋಗಳನ್ನೆ ಡಿಲೀಟ್ ಮಾಡಿದ್ದಾನೆ ಎನ್ನಲಾಗಿದೆ. ಈ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಘಟನೆಯ ಬಗ್ಗೆ ವಿವರವಾಗಿ ಬರೆಯಲಾಗಿದೆ.. ಫೋಟೊಗ್ರಾಫರ್ ತುಂಬಾ ಹೊತ್ತು ಪೋಟೊ ತೆಗೆದ ಕಾರಣ ಸುಸ್ತಾಗಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಯಲ್ಲಿ ವಧು ವರರ ಕಡೆಯವರ ಬಳಿ ಊಟ, ನೀರು ಕೊಡುವಂತೆ ಕೇಳಿಕೊಂಡಿದ್ದಾರೆ. ಆದರೆ ಮದುಮಕ್ಕಳ ಕಡೆಯವರು ಇವರ ಮಾತಿಗೆ ಯಾವುದೇ ಬೆಲೆ ಕೊಡಲೇ ಇಲ್ಲ. ಬೆಳಗ್ಗೆಯಿಂದ ನಿಂತುಕೊಂಡೆ ಫೋಟೋ ಕ್ಲಿಕಿಸಿದ ಈ ಫೋಟೋಗ್ರಾಫರ್ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಂಡದ್ದಕ್ಕೆ ನಿಷ್ಠುರವಾಗಿ ಮಾತನಾಡಿದ್ದಾರಂತೆ. ಇದರಿಂದ ಕೋಪಗೊಂಡ ಫೋಟೋಗ್ರಾಫರ್ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದ ವಧುವರರ ಮದುವೆಯ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿ ಅಲ್ಲಿಂದ ಹೊರಟು ಹೋಗಿದ್ದಾನೆ.

 

The post ಸಿಟ್ಟಿಗೆದ್ದ ಫೋಟೋಗ್ರಾಫರ್ ; ಡಿಲೀಟ್ ಆದ್ವು ಮದುವೆ ಫೋಟೋಗಳು…. appeared first on Good News 24x7.

]]>