forest Archives - Good News 24x7 https://www.goodnews24x7.com/tag/forest/ Kannada Fri, 04 Sep 2026 10:31:07 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg forest Archives - Good News 24x7 https://www.goodnews24x7.com/tag/forest/ 32 32 ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು https://www.goodnews24x7.com/government-to-honour-fans-demand-abhimanyu-to-be-made-into-a-flag-elephant/ Fri, 04 Sep 2026 10:31:07 +0000 https://www.goodnews24x7.com/?p=9963 ಸತತ 6 ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ನಾಡಹಬ್ಬಕ್ಕೆ ಸಾಕ್ಷಿಯಾಗಿದ್ದ ದಸರಾ ಗಜಪಡೆಯ ದಿಗ್ಗಜ ಅಭಿಮನ್ಯು, 2026ರ ಮೈಸೂರು ದಸರಾದಲ್ಲಿ ನಿಶಾನೆ ಆನೆಯಾಗಿ ಹೆಜ್ಜೆ ಹಾಕಲು ಸಜ್ಜಾಗಿದ್ದಾನೆ. 60 ವರ್ಷ ವಯೋಮಿತಿ ಪೂರೈಸಿದ ಹಿನ್ನೆಲೆಯಲ್ಲಿ ಈ ಹಿಂದೆ ಆನೆಗೆ ನಿವೃತ್ತಿ…

The post ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು appeared first on Good News 24x7.

]]>

ಸತತ 6 ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ನಾಡಹಬ್ಬಕ್ಕೆ ಸಾಕ್ಷಿಯಾಗಿದ್ದ ದಸರಾ ಗಜಪಡೆಯ ದಿಗ್ಗಜ ಅಭಿಮನ್ಯು, 2026ರ ಮೈಸೂರು ದಸರಾದಲ್ಲಿ ನಿಶಾನೆ ಆನೆಯಾಗಿ ಹೆಜ್ಜೆ ಹಾಕಲು ಸಜ್ಜಾಗಿದ್ದಾನೆ. 60 ವರ್ಷ ವಯೋಮಿತಿ ಪೂರೈಸಿದ ಹಿನ್ನೆಲೆಯಲ್ಲಿ ಈ ಹಿಂದೆ ಆನೆಗೆ ನಿವೃತ್ತಿ ಘೋಷಿಸಲಾಗಿದ್ದು, ದಸರಾ ಮೆರವಣಿಗೆಯಲ್ಲಿ ಅಭಿಮನ್ಯು ಭಾಗವಹಿಸುವುದಿಲ್ಲ ಎಂಬ ಸುದ್ದಿ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿತ್ತು. ದಿಗ್ಗಜ ಆನೆ ಅರ್ಜುನನಿಗೆ ನೀಡಿದಂತೆ ಅಭಿಮನ್ಯುವಿಗೂ ಗೌರವಪೂರ್ಣ ವಿದಾಯ ನೀಡಬೇಕು ಹಾಗೂ ಕೊನೆಯ ಬಾರಿಗೆ ನಿಶಾನೆ ಆನೆಯಾಗಿ ಕೊಂಡೊಯ್ಯಬೇಕು ಎಂದು ಸಾರ್ವಜನಿಕರು ಮತ್ತು ವನ್ಯಜೀವಿ ಪ್ರಿಯರು ವ್ಯಾಪಕ ಒತ್ತಡ ತಂದಿದ್ದರು. ಜನರ ಈ ಭಾವನಾತ್ಮಕ ಬೇಡಿಕೆಗೆ ಸ್ಪಂದಿಸಿರುವ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, 2026ರ ದಸರಾ ಮಹೋತ್ಸವದಲ್ಲಿ ಅಭಿಮನ್ಯುಗೆ ನಿಶಾನೆ ಆನೆಯಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವಂತೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ದಸರಾ ಪರಂಪರೆಯಲ್ಲಿ ತನ್ನ ಶಿಸ್ತು ಹಾಗೂ ಧೈರ್ಯದಿಂದ ನಾಡಿನ ಜನರ ಪ್ರೀತಿ ಗಳಿಸಿರುವ ಅಭಿಮನ್ಯು, ಸಚಿವರ ಈ ಹೊಸ ಆದೇಶದಿಂದ ಮತ್ತೊಮ್ಮೆ ಗಜಪಡೆಯ ಮುಂಚೂಣಿಯಲ್ಲಿ ಕಂಗೊಳಿಸುವುದು ಖಚಿತವಾಗಿದ್ದು, ಅಭಿಮಾನಿಗಳಲ್ಲಿ ಹರ್ಷ ಮೂಡಿಸಿ

The post ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು appeared first on Good News 24x7.

]]>
ಚಾಮರಾಜನಗರ ಎನ್‌*ಕೌಂಟರ್ ಪ್ರಕರಣ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ . https://www.goodnews24x7.com/chamarajanagar-encounter-case-minister-ramalinga-reddy-clarifies/ Tue, 18 Aug 2026 05:48:30 +0000 https://www.goodnews24x7.com/?p=9902 ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ಅರಣ್ಯ ಪ್ರದೇಶದಲ್ಲಿ ನಡೆದ ಶೂ*ಟೌಟ್‌ನಲ್ಲಿ ಮೂವರು ಮೃ*ತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ತೀವ್ರ ಗದ್ದಲ ಉಂಟಾಗಿದೆ. ಈ ಘಟನೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಹಾಗೂ…

The post ಚಾಮರಾಜನಗರ ಎನ್‌*ಕೌಂಟರ್ ಪ್ರಕರಣ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ . appeared first on Good News 24x7.

]]>

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ಅರಣ್ಯ ಪ್ರದೇಶದಲ್ಲಿ ನಡೆದ ಶೂ*ಟೌಟ್‌ನಲ್ಲಿ ಮೂವರು ಮೃ*ತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ತೀವ್ರ ಗದ್ದಲ ಉಂಟಾಗಿದೆ. ಈ ಘಟನೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದಾಗ, ತನಿಖೆಯಲ್ಲಿ ಸರ್ಕಾರಿ ಅಧಿಕಾರಿಗಳ ತಪ್ಪು ಸಾಬೀತಾದರೆ ಮತ್ತು ಸದನ ಬಯಸಿದರೆ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಮೃತಪಟ್ಟವರು ಅಕ್ರಮವಾಗಿ ಅರಣ್ಯಕ್ಕೆ ಪ್ರವೇಶಿಸಿದ ಬೇಟೆಗಾರರು ಎಂದು ತನಿಖೆಯಲ್ಲಿ ದೃಢಪಟ್ಟರೆ ಅವರಿಗೆ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸದನದಲ್ಲಿ ತಿಳಿಸಿದರು. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್ ತನಿಖೆ ನಡೆಯುತ್ತಿದ್ದು, ಮುಂದಿನ ಮೂರು ದಿನಗಳಲ್ಲಿ ವರದಿ ಬರುವ ನಿರೀಕ್ಷೆಯಿದೆ. ಆ ವರದಿಯನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾಗುವುದು, ಅದರಿಂದ ತೃಪ್ತಿಯಾಗದಿದ್ದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ವಿವರಣೆ ನೀಡಿದ್ದಾರೆ. ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು, ಮೃತರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು ಹಾಗೂ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಸಭೆಯಲ್ಲಿ ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆಗಸ್ಟ್ 14 ರ ರಾತ್ರಿ ಅಕ್ರಮ ಬೇಟೆಯ ಕುರಿತು ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದರು ಹಾಗೂ ಬೆಳಗಿನ ಜಾವ ಶಂಕಿತರು ದಾಳಿ ಮಾಡಲು ಮುಂದಾದಾಗ ಆತ್ಮರಕ್ಷಣೆಗಾಗಿ ಸ್ಲೈಡ್‌ ಆ್ಯಕ್ಷನ್‌ ಬಂದೂಕುಗಳಿಂದ ಗುಂಡು ಹಾರಿಸಿದ್ದಾರೆ ಎಂದು ಸಮರ್ಥಿಸಿಕೊಂಡರು. ಘಟನಾ ಸ್ಥಳದಿಂದ ಎರಡು ನಾಡ ಬಂದೂಕುಗಳು, ಅಡುಗೆ ಪಾತ್ರೆಗಳು, ಮಸಾಲೆ ಪದಾರ್ಥಗಳು ಹಾಗೂ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದ ಅವರು, ಮೃತರು ಜಾನುವಾರುಗಳನ್ನು ಹುಡುಕಲು ಅರಣ್ಯಕ್ಕೆ ಹೋಗಿದ್ದರು ಎಂಬ ವಾದವನ್ನು ತಳ್ಳಿಹಾಕಿದರು. ಅಲ್ಲದೆ ಮೃತಪಟ್ಟವರ ಪೈಕಿ ಇಬ್ಬರ ವಿರುದ್ಧ ಈಗಾಗಲೇ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು ಎಂದು ಮಾಹಿತಿ ನೀಡಿದರು.

 

The post ಚಾಮರಾಜನಗರ ಎನ್‌*ಕೌಂಟರ್ ಪ್ರಕರಣ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ . appeared first on Good News 24x7.

]]>
ಚಾಮರಾಜನಗರ ಶೂ*ಟೌಟ್ ಪ್ರಕರಣ: ಅರಣ್ಯ ಇಲಾಖೆ ವಿರುದ್ಧ ಮೃ*ತರ ಕುಟುಂಬಸ್ಥರ ಗಂಭೀರ ಆರೋಪ https://www.goodnews24x7.com/chamarajanagar-shootout-case-family-members-of-the-deceased-make-serious-allegations-against-the-forest-department/ Sun, 16 Aug 2026 05:55:13 +0000 https://www.goodnews24x7.com/?p=9892 ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್‌ನ ಹೊಳೆಮುರಿದಟ್ಟಿ ಅರಣ್ಯ (ತೋಮಿಯರ್ಪಾಳ್ಯ ಗ್ರಾಮದ ಬಳಿ) ಪ್ರದೇಶದಲ್ಲಿ ನಡೆದ ಮೂವರ ಶೂ*ಟೌಟ್ ಪ್ರಕರಣ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಾವನ್ನಪ್ಪಿದ ಮೂವರೂ ಹವ್ಯಾಸಿ ಬೇಟೆಗಾರರಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ರಜೆಯ ಸಂದರ್ಭದಲ್ಲಿ ಜಿಂಕೆ ಬೇಟೆಗೆ…

The post ಚಾಮರಾಜನಗರ ಶೂ*ಟೌಟ್ ಪ್ರಕರಣ: ಅರಣ್ಯ ಇಲಾಖೆ ವಿರುದ್ಧ ಮೃ*ತರ ಕುಟುಂಬಸ್ಥರ ಗಂಭೀರ ಆರೋಪ appeared first on Good News 24x7.

]]>

ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್‌ನ ಹೊಳೆಮುರಿದಟ್ಟಿ ಅರಣ್ಯ (ತೋಮಿಯರ್ಪಾಳ್ಯ ಗ್ರಾಮದ ಬಳಿ) ಪ್ರದೇಶದಲ್ಲಿ ನಡೆದ ಮೂವರ ಶೂ*ಟೌಟ್ ಪ್ರಕರಣ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಾವನ್ನಪ್ಪಿದ ಮೂವರೂ ಹವ್ಯಾಸಿ ಬೇಟೆಗಾರರಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ರಜೆಯ ಸಂದರ್ಭದಲ್ಲಿ ಜಿಂಕೆ ಬೇಟೆಗೆ ಕಾಡಿಗೆ ಪ್ರವೇಶಿಸಿದ್ದರು ಮತ್ತು ಸ್ಥಳದಲ್ಲಿ ಜಿಂಕೆ ಮಾಂಸವಿದ್ದ ನಾಲ್ಕು ಚೀಲಗಳು ಪತ್ತೆಯಾಗಿವೆ ಎಂದು ಅರಣ್ಯ ಇಲಾಖೆ ಹೇಳಿದೆ. ಆದರೆ, ಈ ಆರೋಪವನ್ನು ತೀವ್ರವಾಗಿ ನಿರಾಕರಿಸಿರುವ ಮೃತರ ಕುಟುಂಬಸ್ಥರು, ಸತ್ತವರು ಬೇಟೆಗಾರರಲ್ಲ, ರೈತರು ಎಂದು ಸ್ಪಷ್ಟಪಡಿಸಿದ್ದಾರೆ.

ಮೃ*ತರಲ್ಲೊಬ್ಬರಾದ ಆಂಥೋನಿಯ ಪತ್ನಿ ಲೌರ್ಡೆ ಮೇರಿ ಮಾತನಾಡಿ, ತಮ್ಮ ಪತಿ ಬೆಳೆದಿದ್ದ ಮೆಕ್ಕೆಜೋಳದ ಬೆಳೆಯನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಕೃಷಿ ಭೂಮಿಯಲ್ಲಿ ಮಲಗಿದ್ದಾಗ ಅರಣ್ಯ ಸಿಬ್ಬಂದಿ ಅವರನ್ನು ಬಲವಂತವಾಗಿ ಕರೆದೊಯ್ದು ಗುಂಡಿಕ್ಕಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೊಬ್ಬ ಮೃತ ಕುಮಾರ್ ಅವರ ಪತ್ನಿ ಡೊಮಿನಾ ಹಾಗೂ ಮೈಸೂರಿನ ಸಂಬಂಧಿ ಅಜಯ್ ಆಂಟನಿ, “ಅವರು ಯಾವುದೇ ತಪ್ಪು ಮಾಡಿದ್ದರೂ ಕೊಲ್ಲಲು ಅಧಿಕಾರ ಕೊಟ್ಟವರು ಯಾರು? ಅರಣ್ಯ ಸಿಬ್ಬಂದಿ ಮೇಲೆ ಅವರು ಗುಂಡು ಹಾರಿಸಿದ್ದಕ್ಕೆ ಸಾಕ್ಷಿ ಎಲ್ಲಿದೆ? ಕೊಲ್ಲುವ ಬದಲು ಉದ್ದೇಶಪೂರ್ವಕವಾಗಿ ಅವರ ಕುತ್ತಿಗೆ, ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಗುರಿವಿಟ್ಟು ಎನ್‌*ಕೌಂಟರ್ ಮಾಡಲಾಗಿದೆ,” ಎಂದು ಕಣ್ಣೀರಿಡುತ್ತಾ ಪ್ರಶ್ನಿಸಿದ್ದಾರೆ.

ಇದೇ ವೇಳೆ, ಸ್ಥಳದಿಂದ ತಪ್ಪಿಸಿಕೊಂಡು ಬಂದ ಮಹಿಮಾ ದಾಸ್ ಎಂಬ ವ್ಯಕ್ತಿಯ ಹೇಳಿಕೆಯು ಅರಣ್ಯ ಇಲಾಖೆಯ ವಾದಕ್ಕೆ ತದ್ವಿರುದ್ಧವಾಗಿದೆ. ತಾವು ಕೇವಲ ಕಾಣೆಯಾದ ದನಗಳನ್ನು ಹುಡುಕಿಕೊಂಡು ಕಾಡಿಗೆ ಹೋಗಿದ್ದಾಗಿ ಅವರು ತಿಳಿಸಿದ್ದಾರೆ. ಸದ್ಯ ಮೂವರ ಮೃ*ತದೇಹಗಳನ್ನು ಕೊಳ್ಳೇಗಾಲ ಜನರಲ್ ಆಸ್ಪತ್ರೆಯಿಂದ ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಮತ್ತೊಂದೆಡೆ, ಕರ್ನಾಟಕ ಗೃಹ ಸಚಿವರು ಇದನ್ನು ಎನ್‌ಕೌಂಟರ್ ಎಂದು ನಿರಾಕರಿಸಿದ್ದು, ಇದೊಂದು ‘ಬೇಟೆ ವಿರೋಧಿ ಕಾರ್ಯಾಚರಣೆ’ಯ ವೇಳೆ ನಡೆದ ಗುಂಡಿನ ಚಕಮಕಿ ಎಂದು ಸಮರ್ಥಿಸಿಕೊಂಡಿದ್ದಾರೆ. ಕಾಡಿನಲ್ಲಿದ್ದ ಕಾರಣಗಳ ಬಗ್ಗೆ ಇಲಾಖೆ ಮತ್ತು ಸಂತ್ರಸ್ತರ ನಡುವೆ ವ್ಯತಿರಿಕ್ತ ಹೇಳಿಕೆಗಳಿದ್ದು, ಘಟನೆಯ ಸುತ್ತ ಸಾರ್ವಜನಿಕರಲ್ಲಿ ಅನುಮಾನಗಳು ದಟ್ಟವಾಗಿವೆ.

The post ಚಾಮರಾಜನಗರ ಶೂ*ಟೌಟ್ ಪ್ರಕರಣ: ಅರಣ್ಯ ಇಲಾಖೆ ವಿರುದ್ಧ ಮೃ*ತರ ಕುಟುಂಬಸ್ಥರ ಗಂಭೀರ ಆರೋಪ appeared first on Good News 24x7.

]]>
ಬಂಡೀಪುರ, ನಾಗರಹೊಳೆ ಸಫಾರಿ ಪುನರಾರಂಭ ​​ https://www.goodnews24x7.com/bandipur-nagarhole-safaris-resume/ Fri, 26 Jun 2026 10:44:13 +0000 https://www.goodnews24x7.com/?p=9671 ವನ್ಯಜೀವಿ ಪ್ರಿಯರಿಗೆ ಬಿಗ್ ನ್ಯೂಸ್ ಸಿಕ್ಕಿದ್ದು, ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ತಾಂತ್ರಿಕ ಸಮಿತಿಯ ವರದಿ ಆಧರಿಸಿ ಪೂರ್ಣ ಪ್ರಮಾಣದ ಜಂಗಲ್ ಸಫಾರಿ ಪುನರಾರಂಭಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ. ಮಾನವ ಮತ್ತು ವನ್ಯಜೀವಿ ಸಂಘರ್ಷದ ಕಾರಣದಿಂದಾಗಿ…

The post ಬಂಡೀಪುರ, ನಾಗರಹೊಳೆ ಸಫಾರಿ ಪುನರಾರಂಭ ​​ appeared first on Good News 24x7.

]]>

ವನ್ಯಜೀವಿ ಪ್ರಿಯರಿಗೆ ಬಿಗ್ ನ್ಯೂಸ್ ಸಿಕ್ಕಿದ್ದು, ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ತಾಂತ್ರಿಕ ಸಮಿತಿಯ ವರದಿ ಆಧರಿಸಿ ಪೂರ್ಣ ಪ್ರಮಾಣದ ಜಂಗಲ್ ಸಫಾರಿ ಪುನರಾರಂಭಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ. ಮಾನವ ಮತ್ತು ವನ್ಯಜೀವಿ ಸಂಘರ್ಷದ ಕಾರಣದಿಂದಾಗಿ ಜಂಗಲ್​​ ಸಫಾರಿಯನ್ನು 2025ರ ನವೆಂಬರ್ ತಿಂಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ 2026ರ ಫೆಬ್ರವರಿ 19ರಿಂದ ಶೇ.50ರ ಸಾಮರ್ಥ್ಯದಲ್ಲಿ ಮತ್ತು ಕಡಿಮೆ ಅವಧಿಯೊಂದಿಗೆ ಸಫಾರಿ ಪುನರಾರಂಭಕ್ಕೆ ಸರ್ಕಾರ ಅವಕಾಶ ನೀಡಿತ್ತು.

ಬಂಡೀಪುರ, ನಾಗರಹೊಳೆಯಲ್ಲಿ ಪೂರ್ಣ ಪ್ರಮಾಣದ ಸಫಾರಿ ಪುನರಾರಂಭ

ತಜ್ಞರು ಮತ್ತು ಅಧಿಕಾರಿಗಳ ತಾಂತ್ರಿಕ ಸಮಿತಿ ವರದಿ ಅನ್ವಯ ಮಹತ್ವದ ಕ್ರಮ ಸಮಿತಿ ಶಿಫಾರಸಿನ ಪ್ರಕಾರ ನಿಯಂತ್ರಿತ ರೀತಿಯಲ್ಲಿ ಸಫಾರಿ ನಡೆಸಲು ಸೂಚನೆ
ಜೂನ್​​ 26 ,ಬೆಂಗಳೂರು: ವನ್ಯಜೀವಿ ಪ್ರಿಯರಿಗೆ ಗುಡ್​​ನ್ಯೂಸ್​​ ಸಿಕ್ಕಿದ್ದು, ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಪೂರ್ಣ ಪ್ರಮಾಣದ ಸಫಾರಿ ಪುನರಾರಂಭಕ್ಕೆ ಸರ್ಕಾರ ನಿರ್ಧರಿಸಿದೆ. ತಜ್ಞರು, ಅಧಿಕಾರಿಗಳ ತಾಂತ್ರಿಕ ಸಮಿತಿ ವರದಿ ಅನ್ವಯ ಕ್ರಮ ಕೈಗೊಳ್ಳಲಾಗಿದ್ದು, ವೈಜ್ಞಾನಿಕ ಮೌಲ್ಯಮಾಪನ ಮತ್ತು ಸಾಗಣೆ ಸಾಮರ್ಥ್ಯ ಆಧರಿಸಿ ಹಸಿರು ನಿಶಾನೆ ನೀಡಲಾಗಿದೆ. ಈ ನಿರ್ಧಾರಿಂದ ಸ್ಥಳೀಯ ಉದ್ಯೋಗ, ಆರ್ಥಿಕತೆ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಸಮಿತಿಯ ಶಿಫಾರಸಿನ ಪ್ರಕಾರ ನಿಯಂತ್ರಿತ ರೀತಿಯಲ್ಲಿ ಜಂಗಲ್ ಸಫಾರಿ ನಡೆಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.

2025ರ ನವೆಂಬರ್​​ನಲ್ಲಿ ತಾತ್ಕಾಲಿಕ ಸ್ಥಗಿತಗೊಂಡಿದ್ದ ಸಫಾರಿ

ಮಾನವ ಮತ್ತು ವನ್ಯಜೀವಿ ಸಂಘರ್ಷದ ಕಾರಣದಿಂದಾಗಿ ಕರ್ನಾಟಕದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು 2025ರ ನವೆಂಬರ್ ತಿಂಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ 2026ರ ಫೆಬ್ರವರಿ 19ರಿಂದ ಶೇ.50ರ ಸಾಮರ್ಥ್ಯದಲ್ಲಿ ಮತ್ತು ಕಡಿಮೆ ಅವಧಿಯೊಂದಿಗೆ ಸಫಾರಿ ಪುನರಾರಂಭಕ್ಕೆ ಸರ್ಕಾರ ಅವಕಾಶ ನೀಡಿತ್ತು. ಸಫಾರಿ ತಾತ್ಕಾಲಿಕ ಸ್ಥಗಿತವಾದ ನಂತರ ರಚನೆ ಮಾಡಲಾಗಿದ್ದ ತಾಂತ್ರಿಕ ಸಮಿತಿ ಮಧ್ಯಂತರ ವರದಿ ನೀಡಿದ್ದು, ಈ ಸಂಬಂಧ ಜನವರಿ 2ರಂದು ಸಿಎಂ ನೇತೃತ್ವದ ಸಭೆ ನಡೆಸಿ ಚರ್ಚೆ ಮಾಡಲಾಗಿತ್ತು. ಸಫಾರಿ ಪುನರ್ ಪ್ರಾರಂಭಕ್ಕೆ ಬೇಡಿಕೆ ಇರುವ ಕಾರಣ ಶೇ.50ರಷ್ಟು ಸಫಾರಿ ಪುನರಾರಂಭಕ್ಕೆ ತೀರ್ಮಾನಿಸಲಾಗಿದೆ. ಪೂರ್ತಿ ವರದಿ ಬಂದ ಬಳಿಕ ಸಂಪೂರ್ಣ ಅನುಮತಿ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ಅಂದಿನ ಅರಣ್ಯ ಸಚಿವ ಈಶ್ವರ್​​ ಖಂಡ್ರೆ ತಿಳಿಸಿದ್ದರು.

ಈ ಮೊದಲು ಬಳಕೆ ಮಾಡ್ತಿದ್ದ ಶೇ.50ರಷ್ಟು ವಾಹನಗಳ ಬಳಕೆಗೆ ಮಾತ್ರ ಅವಕಾಶ ನೀಡುವ ಜೊತೆಗೆ, ಬಂಡೀಪುರದಲ್ಲಿ ಸಫಾರಿ ಅವಧಿಯನ್ನು 8 ಗಂಟೆಯಿಂದ 5ಕ್ಕೆ ಅವಧಿ ಇಳಿಕೆ ಮಾಡಲಾಗಿತ್ತಾದರೆ, ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿ ನೀಡಲಾಗಿತ್ತು. ಆದರೀಗ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು ಮೊದಲಿನಂತೆ ಪೂರ್ಣ ಪ್ರಮಾಣದ ಸಫಾರಿಗೆ ಅವಕಾಶ ನೀಡಿರೋದು ವನ್ಯಜೀವಿ ಪ್ರಿಯರಿಗೆ ಹರ್ಷ ತಂದಿದೆ.

The post ಬಂಡೀಪುರ, ನಾಗರಹೊಳೆ ಸಫಾರಿ ಪುನರಾರಂಭ ​​ appeared first on Good News 24x7.

]]>
ವಿದ್ಯುತ್ ಶಾಕ್​​ಗೆ ಹೆಣ್ಣು ಹುಲಿ ಬಲಿ; ಅರಣ್ಯಾಧಿಕಾರಿಗಳ ಕಳ್ಳಾಟಕ್ಕೆ ರೊಚ್ಚಿಗೆದ್ದ ರೈತರು ! https://www.goodnews24x7.com/female-tiger-dies-of-electric-shock-farmers-angry-at-forest-officials-negligencefemale-tiger-dies-of-electric-shock-farmers-angry-at-forest-officials-negligence/ Tue, 17 Mar 2026 13:19:13 +0000 https://www.goodnews24x7.com/?p=8942   ಜಮೀನಿನ ಬೇಲಿಯಿಂದ ವಿದ್ಯುತ್ ಪ್ರವಹಿಸಿ 5 ವರ್ಷದ ಹೆಣ್ಣು ಹುಲಿ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ. ಇದೇ ಹುಲಿ ಮೂರು ಹಸುಗಳನ್ನು ಕೊಂದಿತ್ತು. ಜಾನುವಾರು ಸತ್ತಾಗ ಸ್ಪಂದಿಸದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸಾವಿನ…

The post ವಿದ್ಯುತ್ ಶಾಕ್​​ಗೆ ಹೆಣ್ಣು ಹುಲಿ ಬಲಿ; ಅರಣ್ಯಾಧಿಕಾರಿಗಳ ಕಳ್ಳಾಟಕ್ಕೆ ರೊಚ್ಚಿಗೆದ್ದ ರೈತರು ! appeared first on Good News 24x7.

]]>

 

ಜಮೀನಿನ ಬೇಲಿಯಿಂದ ವಿದ್ಯುತ್ ಪ್ರವಹಿಸಿ 5 ವರ್ಷದ ಹೆಣ್ಣು ಹುಲಿ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ. ಇದೇ ಹುಲಿ ಮೂರು ಹಸುಗಳನ್ನು ಕೊಂದಿತ್ತು. ಜಾನುವಾರು ಸತ್ತಾಗ ಸ್ಪಂದಿಸದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಗಡಿನಾಡು ಚಾಮರಾಜನಗರದಲ್ಲಿ ಮಾನವ ಮತ್ತು ಕಾಡು ಪ್ರಾಣಿ ಸಂಘರ್ಷ ಮತ್ತೆ ಮುಂದುವರೆದಿದೆ. ಕಳೆದ ವಾರ ಮೂರು ಹಸುವನ್ನ ಕೊಂದು ತಿಂದಿದ್ದ 5 ವರ್ಷದ ಹೆಣ್ಣು ಹುಲಿ ವಿದ್ಯುತ್ ಶಾಕ್​​ಗೆ ಬಲಿಯಾಗಿರುವಂತಹ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ. ಜಾನುವಾರು ಸತ್ತಾಗ ಬಾರದ ಅರಣ್ಯ ಸಿಬ್ಬಂದಿ ಇದೀಗ ಹುಲಿ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಓಡೋಡಿ ಬಂದಿದ್ದ ಅರಣ್ಯಾಧಿಕಾರಿಗಳಿಗೆ ರೈತರು ಚಳಿ ಕೂಡ ಬಿಡಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗೆ ಘೇರಾವ್ ಹಾಕಿದ ಅನ್ನದಾತರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಜಮೀನು ಒಂದಕ್ಕೆ ನೀಡಿದ್ದ ವಿದ್ಯುತ್ ಸಂಪರ್ಕದಿಂದ 5 ವರ್ಷ ಪ್ರಾಯದ ಹೆಣ್ಣು ಹುಲಿ ಸಾವನ್ನಪ್ಪಿದೆ. ಈ ಹಿನ್ನಲೆ ಸ್ಥಳಕ್ಕೆ ಬಂದ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿಗೆ ಘೇರಾವ್ ಹಾಕಿ ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಇನ್ನು ಕಳೆದ 15 ದಿನಗಳಲ್ಲಿ ರವಿಚಂದ್ರ ಎಂಬುವವರ ಜಮೀನಿನಲ್ಲಿ ಮೇಯುತ್ತಿದ್ದ ಮೂರು ಜಾನುವಾರುಗಳ ಮೇಲೆ ವ್ಯಾಘ್ರ ದಾಳಿ ಮಾಡಿತ್ತು. ಮೂರು ಹಸುವನ್ನ ಕೊಂದು ತಿಂದು ತೇಗಿತ್ತು. ಆಗ ಬಂಡೀಪುರ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದರೆ ಸ್ಥಳಕ್ಕೆ ಬಾರದೆ ಉಡಾಫೆ ತೋರಿದ್ದರು. ಆದರೆ ಇಂದು ಹುಲಿ ಸತ್ತ ವಿಚಾರ ತಿಳಿದ ತಕ್ಷಣ ಇಡೀ ಬಂಡೀಪುರ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ಇದರಿಂದ ರೊಚ್ಚಿಗೆದ್ದ ರೈತ ವರ್ಗ ಅರಣ್ಯ ಸಿಬ್ಬಂದಿಗೆ ಘೇರಾವ್ ಹಾಕಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.ಹುಲಿಯ ಕಾಟಕ್ಕೆ ಈ ಭಾಗದ ರೈತರು ರೋಸಿಹೋಗಿದ್ದಾರೆ. ಆಗಲೇ ಅರಣ್ಯ ಸಿಬ್ಬಂದಿ ಬೋನಿಟ್ಟು ಹುಲಿಯನ್ನ ಹಿಡಿದಿದ್ದರೆ ಇಂದು ಹುಲಿ ಬಲಿಯಾಗುತ್ತಿರಲಿಲ್ಲ ಎಂದು ರೈತ ದಿನೇಶ್​ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 

ಜಮೀನಿನಲ್ಲಿ ವಿದ್ಯುತ್ ಕೊಟ್ಟು ಹುಲಿ ಸಾವಿಗೆ ಕಾರಣವಾದವರ ಮೇಲೆ ಎಫ್​ಐಆರ್ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಿ, ಆದರೆ ಕರ್ತವ್ಯ ಲೋಪ ಎಸಗಿದ ಅರಣ್ಯ ಇಲಾಖೆಯ ಸಿಎಫ್ ಪ್ರಭಾಕರನ್ ಮೇಲೆ ಎಫ್ ಐ ಆರ್ ಮಾಡಿದರೆ ಮಾತ್ರ ರೈತನ ಮೇಲೆ ಎಫ್​ಐಆರ್ ಮಾಡಬೇಕು. ಇಲ್ಲದೆ ಹೋದರೆ ಯಾವುದೇ ಕಾರಣಕ್ಕೂ ಪ್ರಕರಣ ದಾಖಲು ಮಾಡುವುದಕ್ಕೆ ಬಿಡಲ್ಲವೆಂದು ರೈತರು ಪಟ್ಟುಹಿಡಿದರು. ರೈತರ ಉಗ್ರ ರೂಪಕ್ಕೆ ಬೆದರಿದ ಬಂಡೀಪುರ ಸಿಎಫ್ ಪ್ರಭಾಕರನ್, ಪೊಲೀಸ್ ರಕ್ಷಣೆ ಜೊತೆ ಸ್ಥಳಕ್ಕೆ ಬಂದಿದ್ದು ಹಾಸ್ಯಸ್ಪದವಾಗಿತ್ತು.

 

The post ವಿದ್ಯುತ್ ಶಾಕ್​​ಗೆ ಹೆಣ್ಣು ಹುಲಿ ಬಲಿ; ಅರಣ್ಯಾಧಿಕಾರಿಗಳ ಕಳ್ಳಾಟಕ್ಕೆ ರೊಚ್ಚಿಗೆದ್ದ ರೈತರು ! appeared first on Good News 24x7.

]]>
ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬ* https://www.goodnews24x7.com/student-dies-in-wild-estudent-dies-in-wild-elephant-attacklephant-attack/ Mon, 02 Mar 2026 13:19:07 +0000 https://www.goodnews24x7.com/?p=8602 ಮಡಿಕೇರಿ ಸಮೀಪದ ಬೆಟ್ಟತ್ತೂರು ಗ್ರಾ ಮದಲ್ಲಿಈ ಘಟನೆ ನಡೆದಿದೆ. ವಿದ್ಯಾರ್ಥಿನಿ ಸಾವಿನ ಹಿನ್ನೆಲೆ ಗ್ರಾಮ ಸ್ಥರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸುವ ಮೂಲಕ ಅರಣ್ಯ ಇಲಾ ಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿ ಸಿದ್ದಾರೆ. ಮಡಿಕೇರಿಯ ಸಂತ ಮೈಕಲರ ಪದವಿಪೂರ್ವ ಕಾಲೇಜಿನ…

The post ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬ* appeared first on Good News 24x7.

]]>

ಮಡಿಕೇರಿ ಸಮೀಪದ ಬೆಟ್ಟತ್ತೂರು ಗ್ರಾ ಮದಲ್ಲಿಈ ಘಟನೆ ನಡೆದಿದೆ. ವಿದ್ಯಾರ್ಥಿನಿ ಸಾವಿನ ಹಿನ್ನೆಲೆ ಗ್ರಾಮ ಸ್ಥರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸುವ ಮೂಲಕ ಅರಣ್ಯ ಇಲಾ ಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿ ಸಿದ್ದಾರೆ.
ಮಡಿಕೇರಿಯ ಸಂತ ಮೈಕಲರ ಪದವಿಪೂರ್ವ ಕಾಲೇಜಿನ ಕುಡಿಯರ ಗಿರೀಶ್ ಎಂಬುವವರ ಪುತ್ರಿ ಪೂಜಾ (17) ಮೃ* ದುರ್ದೈವಿ. ಮನೆಗೆ ತೆರಳುತ್ತಿದ್ದ ಸಂದರ್ಭಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಪೂಜಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬಲಿಯಾದ ಹಿನ್ನೆಲೆ ಜಿಲ್ಲೆ ಯಲ್ಲಿ ಕಾಡಾನೆ ಹಾವಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತಿ. ಮೃತ ವಿದ್ಯಾರ್ಥಿನಿಯ ಕುಟುಂಬದವರಿಗೆ ಸರಕಾರಿ ಕೆಲಸ ನೀಡಬೇಕು, ವಿದ್ಯಾರ್ಥಿನಿ ಸಾವಿಗೆ ಕಾರಣರಾದಅಧಿಕಾರಿಗಳನ್ನುಅಮಾನತುಗೊಳಿಸಬೇಕು. ಈ ಭಾಗ ದಲ್ಲಿ ಕಾಡಾನೆಗಳ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವಿದ್ಯಾರ್ಥಿನಿ ಸಾವಿನ ವಿಚಾರದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೇ ಶನಿವಾರ ರಾತ್ರಿಯೇ ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿ ಸುವಂತೆ ಮಾಡಿದ್ದ ಅರಣ್ಯ ಅಧಿಕಾರಿಗಳು ಆಗಲೇ ಪರಿಹಾರದ ಚೆಕ್ ನೀಡಿ ತೆರಳಿದ್ದರು. ಆದರೆ ಅವರು ನೀಡಿದ ಚೆಕ್‌ ನಲ್ಲಿ ಸಹಿಯೇ ಇರಲಿಲ್ಲ, ಈ ವಿಚಾರ ವಾಗಿಯೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಭಾನುವಾರ ಸಹಿ ಹಾಕಿದ ಚೆಕ್ ನೀಡಲಾಯಿತೆಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕಾಡಾನೆಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಕೂಡಲೇ ಈ ಭಾಗದ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಯಾಗಬೇಕು. ಅನುಕಂಪದ ಆಧಾರದಲ್ಲಿ ಮೃತ ವಿದ್ಯಾರ್ಥಿನಿ ಕುಟುಂಬದಲ್ಲಿ ಒಬ್ಬ ರಿಗೆ ಸರಕಾರಿ ಕೆಲಸ ನೀಡಬೇಕು.
-ಕೆ.ಜಿ ಬೋಪಯ್ಯ, ಮಾಜಿ ಸ್ಪೀಕರ್ ಎಂದು ಪ್ರತಿಕ್ರಿಯಿಸಿದ್ದಾರೆ

ರಾಷ್ಟ್ರೀಯ ಹೆದ್ದಾರಿ 275ನ್ನು ಬಂದ್ ಮಾಡಿ ಪ್ರತಿಭಟಿಸಿದ ಹಿನ್ನೆಲೆ ಮಂಗಳೂರು – ಮೈಸೂರು ನಡು ವೆ ಸಂಚರಿಸುವ ವಾಹನಗಳು ಸುಮಾರು 2 ಗಂಟೆಗಳಿಗೂ ಹೆಚ್ಚುಕಾಲ ರಸ್ತೆಯಲ್ಲಿಯೇ ನಿಲ್ಲಬೇಕಾಯಿತು. ಪೊಲೀ ಸರ ಮಾತಿಗೂ ಜಗ್ಗದ ಪ್ರತಿಭಟನಾ ನಿರತರು ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಬರಲು ಪಟ್ಟುಹಿಡಿದರು. ಕೊನೆಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳ ಕ್ಯಾಗಮಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಮೆಹ ರೆಗೆ ಪ್ರತಿಭಟನೆ ಕೊನೆಗೊಂಡಿತು.

 

.

The post ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬ* appeared first on Good News 24x7.

]]>
ನಂಜನಗೂಡಿನ ಹುಸ್ಕೂರು ಗ್ರಾಮದ ಸಮೀಪವಿರುವ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ. https://www.goodnews24x7.com/crocodile-spotted-in-a-lake-near-huskuru-village-in-nanjangud/ Tue, 04 Nov 2025 13:32:27 +0000 https://www.goodnews24x7.com/?p=8032 ನಂಜನಗೂಡು ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಹುಲಿ ,ಚಿರತೆ, ಆನೆಗಳ, ಕಾಟದ ಸರದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ.ಭಾರಿ ಗಾತ್ರದ ಮೊಸಳೆ ಕಂಡು ಕಳೆದ ಮೂರ್ನಾಲ್ಕು ದಿನಗಳಿಂದ ಹೊಲಗದ್ದೆ ನೀರಾವರಿ ಕೃಷಿ ಚಟುವಟಿಕೆಗಳಿಗೆ ರೈತರು ತೆರಳದೆ ಕಂಗಾಲಾಗಿದ್ದಾರೆ. ಹುಸ್ಕೂರು ಗ್ರಾಮದ ಸಮೀಪವಿರುವ ಕೆರೆಯಲ್ಲಿ…

The post ನಂಜನಗೂಡಿನ ಹುಸ್ಕೂರು ಗ್ರಾಮದ ಸಮೀಪವಿರುವ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ. appeared first on Good News 24x7.

]]>

ನಂಜನಗೂಡು ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಹುಲಿ ,ಚಿರತೆ, ಆನೆಗಳ, ಕಾಟದ ಸರದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ.ಭಾರಿ ಗಾತ್ರದ ಮೊಸಳೆ ಕಂಡು ಕಳೆದ ಮೂರ್ನಾಲ್ಕು ದಿನಗಳಿಂದ ಹೊಲಗದ್ದೆ ನೀರಾವರಿ ಕೃಷಿ ಚಟುವಟಿಕೆಗಳಿಗೆ ರೈತರು ತೆರಳದೆ ಕಂಗಾಲಾಗಿದ್ದಾರೆ.

ಹುಸ್ಕೂರು ಗ್ರಾಮದ ಸಮೀಪವಿರುವ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಭಯ ಸೃಷ್ಟಿಸುತ್ತಿರುವ ಮೊಸಳೆಯನ್ನು ಹಿಡಿದು ಗ್ರಾಮಸ್ಥರ ಆತಂಕ ದೂರ ಮಾಡಲು ಅರಣ್ಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಹುಸ್ಕೂರು ಗ್ರಾಮಸ್ಥರು.ಹುಸ್ಕೂರು ಗ್ರಾಮಸ್ಥರ ಮನವಿಗೆ ಕ್ಯಾರೆ ಎನ್ನದ ಅರಣ್ಯ ಅಧಿಕಾರಿಗಳು. ನಂಜನಗೂಡು ಅರಣ್ಯ ಅಧಿಕಾರಿಗಳ ವಿರುದ್ಧ ಹುಸ್ಕೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಭಯ ಸೃಷ್ಟಿಸಿರುವ ಮೊಸಳೆಯನ್ನು ಹಿಡಿದು ಬೇರೆಡೆ ಸ್ಥಳಾಂತರ ಮಾಡಲು ಆಗ್ರಹಿಸಿದ್ದಾರೆ.

The post ನಂಜನಗೂಡಿನ ಹುಸ್ಕೂರು ಗ್ರಾಮದ ಸಮೀಪವಿರುವ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ. appeared first on Good News 24x7.

]]>
ಹಣದ ಆಸೆಗಾಗಿ ಪತಿಯನ್ನೇ ಕೊಂ* ಖತರ್ನಾಕ್ ಹೆಂಡತಿ https://www.goodnews24x7.com/a-wife-who-killed-her-husband-for-the-sake-of-money/ Fri, 12 Sep 2025 05:42:38 +0000 https://www.goodnews24x7.com/?p=7472 ಮೈಸೂರು: ಹೊಟ್ಟೆಪಾಡಿಗಾಗಿ ಮಂಡ್ಯ ಜಿಲ್ಲೆ ಹಲಗೂರು ಹೋಬಳಿ ಕದಂಪುರ ಗ್ರಾಮದಿಂದ ಬಂದು, ಹುಣಸೂರು ತಾಲೂಕು ಚಿಕ್ಕ ಹೆದ್ದೂರು ಗ್ರಾಮದ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬಡ ದಂಪತಿ ವೆಂಕಟಸ್ವಾಮಿ(45) ಮತ್ತು ಸಲ್ಲಾಪುರಿ. ಈ ಅಡಿಕೆ ತೋಟ ಬೆಂಗಳೂರಿನ ಸಿವಿಲ್ ಎಂಜಿನಿಯ‌ರ್ ಗಳಾದ…

The post ಹಣದ ಆಸೆಗಾಗಿ ಪತಿಯನ್ನೇ ಕೊಂ* ಖತರ್ನಾಕ್ ಹೆಂಡತಿ appeared first on Good News 24x7.

]]>

ಮೈಸೂರು: ಹೊಟ್ಟೆಪಾಡಿಗಾಗಿ ಮಂಡ್ಯ ಜಿಲ್ಲೆ ಹಲಗೂರು ಹೋಬಳಿ ಕದಂಪುರ ಗ್ರಾಮದಿಂದ ಬಂದು, ಹುಣಸೂರು ತಾಲೂಕು ಚಿಕ್ಕ ಹೆದ್ದೂರು ಗ್ರಾಮದ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬಡ ದಂಪತಿ ವೆಂಕಟಸ್ವಾಮಿ(45) ಮತ್ತು ಸಲ್ಲಾಪುರಿ.
ಈ ಅಡಿಕೆ ತೋಟ ಬೆಂಗಳೂರಿನ ಸಿವಿಲ್ ಎಂಜಿನಿಯ‌ರ್ ಗಳಾದ ರವಿಕುಮಾರ್ ಮತ್ತು ಅರುಣ್‌ ಕುಮಾ‌ರ್ ಅವರ ಮಾಲೀಕತ್ವದ್ದು. ಇಲ್ಲಿ ಕೆಲಸ ಮಾಡಿಕೊಂಡು. ಇಲ್ಲಿಯೇ ವಾಸವಿದ್ದ ಈ ದಂಪತಿ ಪೈಕಿ ಕಳೆದ ಸೋಮವಾರ ಮಧ್ಯರಾತ್ರಿ ಹುಲಿ ಘರ್ಜನೆ ಕೇಳಿ ಮನೆಯಿಂದ ಹೊರಬಂದ ಪತಿ ವೆಂಕಟಸ್ವಾಮಿ ನಾಪತ್ತೆ. ತೀವ್ರ ಆತಂಕಗೊಂಡ ಪತ್ನಿ ಸಲ್ಲಾ ಪುರಿ, ಮಂಗಳವಾರ ಸಂಜೆ ಹುಣಸೂರು ಗ್ರಾಮಾಂತರ ಠಾಣೆಗೆ ತೆರಳಿ ತನ್ನ ಪತಿ ನಾಪತ್ತೆಯಾಗಿದ್ದಾನೆ ಎಂದು ಇನ್ಸ್ಪೆಕ್ಟರ್ ಮುನಿಯಪ್ಪ ಅವರಿಗೆ ದೂರು ಸಲ್ಲಿಸಿ ದ್ದಾಳೆ. ಆಕೆ ತನ್ನ ದೂರಿನಲ್ಲಿ, ಸೋಮವಾರ ಮಧ್ಯರಾತ್ರಿ ಮನೆಯ ಹೊರಗೆ ಹುಲಿ ಘರ್ಜನೆ ಕೇಳಿಸಿತು. ಆಗ ಪತಿ ವೆಂಕಟ ಸ್ವಾಮಿ ಎದ್ದು, ಮನೆ ಬಾಗಿಲು ಹಾಕಿಕೋ ಎಂದು ತಿಳಿಸಿ, ಹೊರ ಹೋದರು.ಅವರು ಇದುವರೆಗೂ ವಾಪಸ್ ಬಂದಿಲ್ಲ. ಅವರನ್ನು ಹುಲಿ ಹೊತ್ತೊಯ್ದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದಳು.

ದಿನವಿಡೀ ಕೂಂಬಿಂಗ್: ವೆಂಕಟಸ್ವಾಮಿಯನ್ನು ಹುಲಿ ಹೊತ್ತೊಯ್ದಿರಬಹುದು ಎಂದಾಗ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್‌ಪೆಕ್ಟರ್ ಮುನಿಯಪ್ಪ ತಕ್ಷಣವೇ ಆರಣ್ಯ ಇಲಾಖೆಗೆ ಮಾಹಿತಿ
ವೆಂಕಟಸ್ವಾಮಿ ನೀಡಿದರು. ಮಂಗಳವಾರ ರಾತ್ರಿಯಿಂದಲೇ ಹುಲಿ ಹಾಗೂ ವೆಂಕಟಸ್ವಾಮಿಗಾಗಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಯಿತು. ಬುಧವಾರ ಸಂಜೆವರೆವಿಗೂ ಅಡಿಕೆ ತೋಟ ಹಾಗೂ ಸುಮಾರು 3 ಕಿ.ಮೀ. ಸುತ್ತಳತೆ ಯಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಕೂಂಬಿಂಗ್ ನಡೆಸಿದರೂ ಯಾವುದೇ ಕುರುಹು ದೊರೆಯಲಿಲ್ಲ. ಹುಲಿ ಇರಲಿ, ನಾಪತ್ತೆಯಾದ ವೆಂಕಟ ಸ್ವಾಮಿ ಮೃತದೇಹವಿರಲಿ, ಅಡಿಕೆ ತೋಟಕ್ಕೆ ಯಾವುದೇ ವನ್ಯಜೀವಿ ಬಂದು ಹೋಗಿರು ವುದರ ಕುರುಹು ಸಿಗಲಿಲ್ಲ. ಸೋಮವಾರ ಮಳೆ ಬಿದ್ದಿದ್ದರಿಂದ ಯಾವುದೇ ವನ್ಯಜೀವಿ ಅಡಿಕೆ ತೋಟಕ್ಕೆ ಬಂದಿದ್ದರೂ, ಅದರ ಹೆಜ್ಜೆ ಗುರುತು ಇರಲೇಬೇಕಿತ್ತು. ಅಂತಹ ಯಾವುದೇ ಗುರುತು ಪತ್ತೆಯಾಗಲಿಲ್ಲ.ಆದರೆ ಇದ್ದಕ್ಕಿದ್ದಂತೆ ಸಲ್ಲಾಪುರಿ ಆನೆ ಹೆಜ್ಜೆ ಗುರುತನ್ನು ತೋರಿಸಿ ಆನೆ ಬಂದಿರ ಬಹುದು ಎಂದು ಹೇಳಿದ್ದಾಳೆ. ಆದರೆ ಅಷ್ಟರ ಲ್ಲಾಗಲೇ ತೋಟಕ್ಕೆ ಬಂದಿದ್ದ ಅದರ ಮಾಲೀಕರು, ನಮ್ಮ ತೋಟಕ್ಕೆ ಸುಮಾರು ಎರಡು ತಿಂಗಳ ಹಿಂದೆ ಆನೆ ಬಂದಿತ್ತು ನಂತರ ಯಾವುದೇ ಆನೆ ಬಂದಿಲ್ಲ ಎಂದರು. ಅದೇ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯೂ ಈ ಆನೆ ಹೆಜ್ಜೆ ಗುರುತು ಬಹಳ ಹಳೆಯದು ಎಂಬುದನ್ನು ಖಚಿತಪಡಿಸಿದರು.

ಮನೆಯಿಂದ ತಿಪ್ಪೇಗುಂಡಿವರೆಗೆ ಏನೋ ಎಳೆದೊಯ್ದ ಗುರುತು: ಮಂಗಳವಾರ ರಾತ್ರಿ ಯಿಂದ ಬುಧವಾರ ಸಂಜೆವರೆಗೆ ಅಡಿಕೆ ತೋಟಕ್ಕೆ ಹೊಂದಿಕೊಂಡಿರುವ ಕಾಡಿನಲ್ಲಿ ಅಲೆದು ಸುಸ್ತಾಗಿದ್ದ ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ತೋಟದ ಮನೆ ಬಳಿ ಬಂದಾಗ ಮನೆಯಿಂದ ತಿಪ್ಪೆಗುಂಡಿವರೆಗೆ ಏನೋ ಎಳೆದೊಯ್ದಿದ್ದ ಗುರುತು ಕಣ್ಣಿಗೆ ಬಿತ್ತು. ಆದರೆ ಮನುಷ್ಯನನ್ನು ಯಾವುದೇ ಪ್ರಾಣಿ ಎಳೆದೊಯ್ದರೆ ಉಂಟಾಗುವ ಗುರುತಂತೂ ಇದಾಗಿರಲಿಲ್ಲ. ಹಾಗಾಗಿ ಸಂಶಯ ಗೊಂಡ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಆ ಗುರುತಿನ ಬಗ್ಗೆ ಸಲ್ಲಾಪುರಿ ಪ್ರಶ್ನಿಸಲಾರಂಭಿ ಸಿದರು. ಆದರೆ ಆಕೆ ಗಳಿಗೆಗೊಂದು ಉತ್ತರ ಹೇಳುತ್ತಿದ್ದಾಗ ಅವಳ ಮೇಲೆ ಸಂಶಯ ಹೆಚ್ಚಾಗತೊಡಗಿತು.

ವೆಂಕಟಸ್ವಾಮಿ ಎಳೆದೊಯ್ದದ್ದು ಹುಲಿಯಲ್ಲ,ಪತ್ನಿ: ಹುಲಿ ಘರ್ಜನೆ ಕೇಳಿ ಮನೆಯಿಂದ ಹೊರ ಹೋದ ವೆಂಕಟಸ್ವಾಮಿಯನ್ನು ಹುಲಿ ಎಳೆದೊಯ್ದಿರಬಹುದು ಎಂದು ಪೊಲೀಸರಿಗೆ ಹೇಳಿದ್ದ ಪತ್ನಿ ಸಲ್ಲಾಪುರಿಯೇ ತನ್ನ ಪತಿಯ ಮೃತದೇಹವನ್ನು ಮನೆಯಿಂದ ತಿಪ್ಪೆಗುಂಡಿ ವರೆಗೆ ಎಳೆದೊಯ್ದಿದ್ದಳು. ಅದರ ಗುರುತೇ ಇದು ಎಂಬುದು ತೀವ್ರ ವಿಚಾರಣೆ ವೇಳೆ ತಿಳಿದು ಬಂದಿದೆ. ತಿಪ್ಪೇಗುಂಡಿಯನ್ನು ಅಗೆದಾಗ ಸುಮಾರು 2 ಅಡಿ ಆಳದಲ್ಲಿ ವೆಂಕಟಸ್ವಾಮಿಯ ಕೈ ಗೋಚರಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಪೊಲೀಸರು ಹುಣ ಸೂರು ಉಪ ವಿಭಾಗಾಧಿಕಾರಿ ವಿಜಯಕುಮಾರ್ ಸಮ್ಮುಖದಲ್ಲಿ ವೆಂಕಟಸ್ವಾಮಿ ದೇಹವನ್ನು ಹೊರ ತೆಗೆದು ಸರ್ಕಾರಿ ವೈದ್ಯರನ್ನು ಸ್ಥಳಕ್ಕೇ ಕರೆಸಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ.

ಪರಿಹಾರದ ಹಣದಾಸೆಗಾಗಿ ಪತಿಯನ್ನೇ ಮುಗಿಸಿದಳು: ನಂತರ ಪೊಲೀಸರು ಸಲ್ಲಾಪುರಿ ಯನ್ನು ತೀವ್ರ ವಿಚಾರಣೆಗೊಳಪಡಿಸಿದ ವೇಳೆ ತನ್ನ ಪತಿ ವೆಂಕಟಸ್ವಾಮಿಯನ್ನು ಹುಲಿ ಕೊಂದು ಹಾಕಿದೆ ಎಂದು ಹೇಳಿದರೆ ಆರಣ್ಯ ಇಲಾಖೆ ಯಿಂದ 15 ಲಕ್ಷ ರೂ. ಪರಿಹಾರ ದೊರೆಯು ತ್ತದೆ ಎಂದು ಪರಿಹಾರದ ಆಸೆಗಾಗಿ ಪತಿಯನ್ನ ಕೊಂದು ಹುಲಿ ಎಳೆದೊಯ್ದಿರಬಹುದು ಎಂದು ಕತೆ ಕಟ್ಟಿರುವುದು ಬೆಳಕಿಗೆ ಬಂದಿದೆ.

ಪರಿಹಾರದ ಬಗ್ಗೆ ಗ್ರಾಮ ಪಂಚಾಯ್ತಿಯಿಂದ ಮಾಹಿತಿ ಪಡೆದಿದ್ದಳು: ಕಳೆದ 11 ತಿಂಗಳಿಂದ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಈಕೆ, ವನ್ಯಮೃಗಗಳಿಗೆ ಮನುಷ್ಯರು ಬಲಿಯಾದರೆ, ಲಕ್ಷಾಂತರ ರೂ. ಪರಿಹಾರ ಸಿಗುತ್ತದೆ ಎಂಬುದನ್ನು ಸಮೀಪದ ಗ್ರಾಮ ಪಂಚಾಯ್ತಿಯಿಂದ ತಿಳಿದು ಕೊಂಡಿದ್ದಳು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ.

ಊಟಕ್ಕೆ ವಿಷ: ಪತಿ ವೆಂಕಟಸ್ವಾಮಿಯನ್ನು ಕೊಂದು ತಿಪ್ಪೆಗುಂಡಿಯಲ್ಲಿ ಹೂತು ಹಾಕಲು ನಿರ್ಧಾರ ಮಾಡಿಕೊಂಡಿದ್ದ ಸಲ್ಲಾಪುರಿ, ಸೋಮವಾರ ರಾತ್ರಿ ಊಟದಲ್ಲಿ ಪತಿ ವೆಂಕಟಸ್ವಾಮಿಗೆ ವಿಷ ಹಾಕಿ ಕೊಟ್ಟಿದ್ದಳು. ಆತ ಪ್ರಜ್ಞೆ ತಪ್ಪಿದಾಗ ಆತನ ಖಾಸಗಿ ಅಂಗಾಂಗಕ್ಕೆ ಒದ್ದು, ದಿಂಬಿನಿಂದ ಉಸಿರುಗಟ್ಟಿಸಿ ಕೊಂದು ಹಾಕಿದ್ದಾಳೆ. ನಂತರ ತಾನೇ ಮನೆಯಿಂದ ಪತಿಯ ಮೃತದೇಹವನ್ನು ತಿಪ್ಪೆಗುಂಡಿಯ ವರೆಗೆ ಎಳೆದೊಯ್ದು, ಮೂರಾಲ್ಕು ಅಡಿ ಹಳ್ಳ ತೆಗೆದು ಅದರಲ್ಲಿ ದೇಹವನ್ನು ಹೂತುಹಾಕಿದ್ದಳು.

 

ಪೊಲೀಸರ ಮುಂದೆ ಕಟ್ಟುಕತೆ: ಸೋಮವಾರ ರಾತ್ರಿಯೇ ಗಂಡನನ್ನು ತಿಪ್ಪೆಗುಂಡಿಯಲ್ಲಿ ಸಮಾಧಿ ಮಾಡಿದ ಸಲ್ಲಾಪುರಿ, ಪತಿಯನ್ನು ಹುಲಿ ಕೊಂದು ಹಾಕಿದೆ ಎಂಬುದರ ಬಗ್ಗೆ ಕಟ್ಟುಕತೆ ರೂಪಿಸಲು ಒಬ್ಬಳೇ ಕುಳಿತು ಮಂಗಳ ವಾರ ಸಂಜೆವರೆಗೂ ಯೋಜನೆ ರೂಪಿಸಿ ನಂತರ ಹುಣಸೂರು ಗ್ರಾಮಾಂತರ ಠಾಣೆಗೆ ತೆರಳಿ ಪತಿ ನಾಪತ್ತೆ ದೂರು ನೀಡಿದ್ದಲ್ಲದೇ, ಹೆಚ್ಚುವರಿಯಾಗಿ ಆತನನ್ನು ಹುಲಿ ಹೊತ್ತೊಯ್ದಿರಬಹುದು ಎಂದು ಕತೆ ಕಟ್ಟಿದ್ದಾಳೆ.ಆದರೆ ಇವಳ ಕತೆಯನ್ನು ಆರಂಭದಲ್ಲಿ ನಂಬಿದ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ದಿನವಿಡೀ ಕೂಂಬಿಂಗ್ ನಡೆಸಿ, ಬಸವಳಿದಿದ್ದೇ ಆಯ್ತು. ಆದರೆ, ಅವರಿಗೆ ಅಡಿಕೆ ತೋಟಕ್ಕೆ ಯಾವುದೇ ವನ್ಯಮೃಗ ಬಂದಿದ್ದಕ್ಕೆ ಹೆಜ್ಜೆ ಗುರುತು ಗಳು ಸಿಗಲಿಲ್ಲವಾದರೂ, ಈಕೆಯೇ ಗಂಡನ ಶವವನ್ನು ಎಳೆದೊಯ್ದಿದ್ದ ಗುರುತಂತೂ ದೊರೆತು ಸಲ್ಲಾ ಪುರಿಯನ್ನು ಜೈಲಿಗೆ ಕಳುಹಿಸುವಂತಾಯಿತು.
ವಿಷಯ ಬಯಲಾಗುತ್ತಿದ್ದಂತೆಯೇ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸ ರು ಸಲ್ಲಾಪುರಿಯನ್ನು ಬಂಧಿಸಿದ್ದಾರೆ. ಜಿಲ್ಲಾ ಎಸ್ಪಿ ವಿಷ್ಣುವರ್ಧನ ನಿರ್ದೇಶನದಂತೆ ಅಡಿಷನಲ್ ಎಸ್ಪಿ ಸಿ.ಮಲ್ಲಿಕ್, ಹುಣಸೂರು ಉಪ ವಿಭಾಗದ ಡಿವೈಎಸ್‌ಪಿ ಗೋಪಾಲ ಕೃಷ್ಣ, ಹುಣಸೂರು ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಧಾ, ಜಿಲ್ಲಾ ಬೆರಳಚ್ಚು ಘಟಕದ ಇನ್ಸ್‌ಪೆಕ್ಟರ್ ಎಂ.ಆರ್.ಬಾಲಸುಬ್ರಹ್ಮಣ್ಯ, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹೆಚ್.ಆರ್. ಹರೀಶ್, ಹೆಡ್ ಕಾನ್ಸ್ ಟೇಬಲ್ ಹೆಚ್.ಮಧು ಚಂದ್ರ, ಸೀನ್ ಆಫ್ ಕ್ರೈಮ್ ಅಧಿಕಾರಿಗಳಾದ ಆದರ್ಶ ಮತ್ತು ಮೋಹಿತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

The post ಹಣದ ಆಸೆಗಾಗಿ ಪತಿಯನ್ನೇ ಕೊಂ* ಖತರ್ನಾಕ್ ಹೆಂಡತಿ appeared first on Good News 24x7.

]]>
ಟೈಗರ್ ಸಫಾರಿಗೆ ಹೋದ ಪ್ರವಾಸಿಗರನ್ನು ಕಾಡಿನ ಮಧ್ಯೆ ಬಿಟ್ಟು ಹೋದ ಗೈಡ್ ! https://www.goodnews24x7.com/guide-leaves-tourists-on-tiger-safari-in-the-middle-of-the-forest/ Mon, 18 Aug 2025 05:54:20 +0000 https://www.goodnews24x7.com/?p=6307 ಜೈಪುರ, ಆಗಸ್ಟ್ 18: ಟೈಗರ್ ಸಫಾರಿಗೆಂದು ಕರೆದೊಯ್ದಿದ್ದ ಗೈಡ್ ಕಾಡಿನ ಮಧ್ಯೆ ಕತ್ತಲೆಯಲ್ಲಿ ಪ್ರವಾಸಿಗರನ್ನು ಬಿಟ್ಟು ಹೋಗಿರುವ ಭಯಾನಕ ಘಟನೆ ಜೈಪುರದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ. ರಾಜಸ್ಥಾನದ ಸವಾಯಿ ಮಾಧೋಪುರ್ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರ ಸುರಕ್ಷತೆಗೆ ಸಂಬಂಧಿಸಿದಂತೆ ದೊಡ್ಡ…

The post ಟೈಗರ್ ಸಫಾರಿಗೆ ಹೋದ ಪ್ರವಾಸಿಗರನ್ನು ಕಾಡಿನ ಮಧ್ಯೆ ಬಿಟ್ಟು ಹೋದ ಗೈಡ್ ! appeared first on Good News 24x7.

]]>

ಜೈಪುರ, ಆಗಸ್ಟ್ 18: ಟೈಗರ್ ಸಫಾರಿಗೆಂದು ಕರೆದೊಯ್ದಿದ್ದ ಗೈಡ್ ಕಾಡಿನ ಮಧ್ಯೆ ಕತ್ತಲೆಯಲ್ಲಿ ಪ್ರವಾಸಿಗರನ್ನು ಬಿಟ್ಟು ಹೋಗಿರುವ ಭಯಾನಕ ಘಟನೆ ಜೈಪುರದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ. ರಾಜಸ್ಥಾನದ ಸವಾಯಿ ಮಾಧೋಪುರ್ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರ ಸುರಕ್ಷತೆಗೆ ಸಂಬಂಧಿಸಿದಂತೆ ದೊಡ್ಡ ನಿರ್ಲಕ್ಷ್ಯವೊಂದು ಬೆಳಕಿಗೆ ಬಂದಿದೆ.

ಹುಲಿಗಳಿಂದ ತುಂಬಿರುವ ಕಾಡಿನ ಮಧ್ಯದಲ್ಲಿ ಸಫಾರಿ ನಡೆಸುತ್ತಿದ್ದಾಗ, ಕಾಡಿನ ಮಧ್ಯೆ ಪ್ರವಾಸಿಗರು ತುಂಬಿದ್ದ ಕ್ಯಾಂಟರ್‌ ಇದ್ದಕ್ಕಿದ್ದಂತೆ ಕೆಟ್ಟು ಹೋಗಿತ್ತು. ಮಹಿಳೆಯರು ಮತ್ತು ಮಕ್ಕಳು ಸಹ ಈ ಕ್ಯಾಂಟರ್‌ನಲ್ಲಿ ಸವಾರಿ ಮಾಡುತ್ತಿದ್ದರು. ಕ್ಯಾಂಟರ್‌ನಲ್ಲಿದ್ದ ಮಾರ್ಗದರ್ಶಿ ಪ್ರವಾಸಿಗರನ್ನು ಕಾಡಿನಲ್ಲಿ ಬಿಟ್ಟು ಮತ್ತೊಂದು ಕ್ಯಾಂಟರ್ ತರುತ್ತಿದ್ದೇನೆ ಎಂದು ಹೇಳಿ ಹೊರಡುವಾಗ ಅವಾಚ್ಯ ಶಬ್ದಗಳನ್ನು ಬಳಸಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರವಾಸಿಗರು ಸಂಜೆ 6 ರಿಂದ 7:30 ರವರೆಗೆ ಕತ್ತಲೆ ಮತ್ತು ಭಯದ ವಾತಾವರಣದಲ್ಲಿ ಸಿಲುಕಿಕೊಂಡರು. ಮೊಬೈಲ್ ಬೆಳಕಿನಲ್ಲಿ ಮಕ್ಕಳು ಕತ್ತಲೆಯಲ್ಲಿ ಕುಳಿತಿರುವುದು ಮತ್ತು ಅಳುವ ಶಬ್ದ ಕೇಳುತ್ತಿರುವ ವೀಡಿಯೊ ಕೂಡ ಹೊರಬಿದ್ದಿದೆ.

ಸಹಾಯಕ್ಕಾಗಿ ಪದೇ ಪದೇ ಮನವಿ ಮಾಡಿದರೂ ಅರಣ್ಯ ಇಲಾಖೆ ಸಕಾಲಕ್ಕೆ ಸಹಾಯ ನೀಡಲಿಲ್ಲ ಎಂದು ಪ್ರವಾಸಿಗರು ಹೇಳುತ್ತಾರೆ. ಕೊನೆಗೆ, ಒಬ್ಬ ಪ್ರವಾಸಿಗ ಮತ್ತೊಂದು ಜೀಪಿನಲ್ಲಿ ರಾಜ್‌ಬಾಗ್ ನಾಕಾ ಚೌಕಿಗೆ ತಲುಪಿದರು ಮತ್ತು ಅಲ್ಲಿಂದ ವಾಹನ ತೆಗೆದುಕೊಂಡು ಉಳಿದ ಪ್ರವಾಸಿಗರನ್ನು ಕರೆತರಲಾಯಿತು. ದೂರಿನ ನಂತರ, ಅರಣ್ಯ ಇಲಾಖೆಯು ಸುಮಾರು ಎರಡೂವರೆ ಗಂಟೆಗಳ ವಿಳಂಬದೊಂದಿಗೆ ದೀಪಗಳಿಲ್ಲದ ಕ್ಯಾಂಟರ್ ಅನ್ನು ಕಳುಹಿಸಿತು.

ಪ್ರವಾಸಿಗರು ಮತ್ತು ರಾಜ್‌ಬಾಗ್ ನಾಕಾ ಚೌಕಿಯಲ್ಲಿ ನಿಯೋಜಿಸಲಾದ ಅರಣ್ಯ ಅಧಿಕಾರಿ ವಿಜಯ್ ಮೇಘವಾಲ್ ನಡುವೆ ವಾಗ್ವಾದ ನಡೆಯಿತು. ಇದ್ಯಾವುದಕ್ಕೂ ಇಲಾಖೆ ಜವಾಬ್ದಾರನಲ್ಲ ಎಂದು ಅಧಿಕಾರಿಗಳು ಪದೇ ಪದೇ ಹೇಳುತ್ತಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಕ್ಯಾಂಟರ್ ಗೈಡ್ ಮುಖೇಶ್ ಕುಮಾರ್ ಬೈರ್ವಾ , ಕ್ಯಾಂಟರ್ ಚಾಲಕರಾದ ಕನ್ಹಯ್ಯಾ, ಶಹಜಾದ್ ಚೌಧರಿ ಮತ್ತು ಲಿಯಾಕತ್ ಅಲಿ ಅವರನ್ನು ಮುಂದಿನ ಆದೇಶದವರೆಗೆ ಉದ್ಯಾನವನಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

ಆಗಸ್ಟ್ 16 ರ ಸಂಜೆ ಕ್ಯಾಂಟರ್ ಸಂಖ್ಯೆ RJ25-PA-2171 ಕಾಡಿನಲ್ಲಿ ಕೆಟ್ಟುಹೋಯಿತು ಎಂದು ಡಿಎಫ್‌ಒ ಆದೇಶದಲ್ಲಿ ತಿಳಿಸಿದ್ದಾರೆ. ಅರಣ್ಯ ಸಂರಕ್ಷಣಾಧಿಕಾರಿ ಅನೂಪ್ ಮಾತನಾಡಿ, ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಮಾರ್ಗದರ್ಶಕ ಅಥವಾ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಭವಿಷ್ಯದಲ್ಲಿ ಅಂತಹ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

The post ಟೈಗರ್ ಸಫಾರಿಗೆ ಹೋದ ಪ್ರವಾಸಿಗರನ್ನು ಕಾಡಿನ ಮಧ್ಯೆ ಬಿಟ್ಟು ಹೋದ ಗೈಡ್ ! appeared first on Good News 24x7.

]]>
ಮತ್ತೆರಡು ಹುಲಿ ಮರಿಗಳು ಅಸಹಜವಾಗಿ ಸಾವು! ಕಾವೇರಿ ವನ್ಯಜೀವಿಧಾಮದಲ್ಲಿ ಘಟನೆ. https://www.goodnews24x7.com/two-more-tiger-cubs-die-unnaturally-incident-in-cauvery-wildlife-sanctuary/ Wed, 13 Aug 2025 06:27:31 +0000 https://www.goodnews24x7.com/?p=5986 ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆರಡು ಹುಲಿ ಮರಿಗಳು ಅಸಹಜವಾಗಿ ಪ್ರಾಣ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹನೂರು ವಲಯದ ಶಾಗ್ಯ ಶಾಖೆಯ ಹೊಳೆಮುರಿದಟ್ಟಿ ಗಸ್ತಿನ ಕಿರುಬನಕಲ್ಲು ಎಂಬ ಅರಣ್ಯ ಪ್ರದೇಶದಲ್ಲಿ ಎರಡು ಹುಲಿ ಮರಿಗಳ ಕಳೇಬರ ಪತ್ತೆಯಾಗಿವೆ. ಚಾಮರಾಜನಗರ…

The post ಮತ್ತೆರಡು ಹುಲಿ ಮರಿಗಳು ಅಸಹಜವಾಗಿ ಸಾವು! ಕಾವೇರಿ ವನ್ಯಜೀವಿಧಾಮದಲ್ಲಿ ಘಟನೆ. appeared first on Good News 24x7.

]]>

ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆರಡು ಹುಲಿ ಮರಿಗಳು ಅಸಹಜವಾಗಿ ಪ್ರಾಣ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹನೂರು ವಲಯದ ಶಾಗ್ಯ ಶಾಖೆಯ ಹೊಳೆಮುರಿದಟ್ಟಿ ಗಸ್ತಿನ ಕಿರುಬನಕಲ್ಲು ಎಂಬ ಅರಣ್ಯ ಪ್ರದೇಶದಲ್ಲಿ ಎರಡು ಹುಲಿ ಮರಿಗಳ ಕಳೇಬರ ಪತ್ತೆಯಾಗಿವೆ. ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆರಡು ಹುಲಿ ಮರಿಗಳು ಅಸಹಜವಾಗಿ ಪ್ರಾಣ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹನೂರು ವಲಯದ ಶಾಗ್ಯ ಶಾಖೆಯ ಹೊಳೆಮುರಿದಟ್ಟಿ ಗಸ್ತಿನ ಕಿರುಬನಕಲ್ಲು ಎಂಬ ಅರಣ್ಯ ಪ್ರದೇಶದಲ್ಲಿ ಎರಡು ಹುಲಿ ಮರಿಗಳ ಕಳೇಬರ ಪತ್ತೆಯಾಗಿವೆ.

ಅರಣ್ಯ ರಕ್ಷಣಾ ಸಿಬ್ಬಂದಿ ನಿನ್ನೆ ಗಸ್ತು ತಿರುಗುವಾಗ ಒಂದು ಹುಲಿ ಮರಿಯ ಕಳೇಬರ ಪತ್ತೆ ಆಗಿದೆ. ಕೂಡಲೇ ಎಚ್ಚೆತ್ತುಕೊಂಡ ಸಿಬ್ಬಂದಿ ಆ ಪ್ರದೇಶದ ಸುತ್ತಮುತ್ತ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹುಲಿ ಮರಿಯು ಮೃತಪಟ್ಟ ಸಮೀಪ ಇರುವ ಕಲ್ಲು ಬಂಡೆಯ ಗುಹೆಯೊಳಗೆ ಮತ್ತೊಂದು ಹುಲಿ ಮರಿಯು ಮೃತಪಟ್ಟಿರೋದು ಪತ್ತೆಯಾಗಿದೆ.

NTCA ಸದಸ್ಯರನ್ನೊಳಗೊಂಡ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮೃತ ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷಾ ಪ್ರಕ್ರಿಯೆಯಲ್ಲಿ ಸದರಿ ಎರಡೂ ಹುಲಿ ಮರಿಗಳು ಸುಮಾರು 8 ರಿಂದ 10 ದಿನಗಳ ಮರಿಗಳಾಗಿರೋದು ಗೊತ್ತಾಗಿದೆ.

ತನಿಖೆ ನಡೀತಿದೆ :
ಮೃತ ಹುಲಿ ಮರಿಗಳು ತಾಯಿ ಹುಲಿಯಿಂದ ಬೇರ್ಪಟ್ಟು ಹಸಿವಿನಿಂದ ನಿತ್ರಾಣಗೊಂಡು ಮೃತಪಟ್ಟಿರುತ್ತದೆ ಎಂದು ಪಶು ವೈದ್ಯರು ಸ್ಥಳದಲ್ಲಿಯೇ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಹಾಗೂ ಮೃತ ಹುಲಿ ಮರಿಗಳ ಸಾವಿನ ನಿಖರ ಮಾಹಿತಿಗಾಗಿ ಮೃತ ಹುಲಿ ಮರಿಗಳ ದೇಹದಿಂದ ಕೆಲವು ಮಾದರಿ ತುಣುಕುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿರುತ್ತದೆ. ಮರಣೋತ್ತರ ಪರೀಕ್ಷೆಯ ನಂತರ, ಎನ್.ಟಿ.ಸಿ.ಎ ಸದಸ್ಯರನ್ನೊಳಗೊಂಡ ತಂಡದವರ ಸಮ್ಮುಖದಲ್ಲಿ ಹುಲಿ ಮರಿಗಳ ಮೃತ ದೇಹವನ್ನು ಬೆಂಕಿಯಿಂದ ಸುಡಲಾಗಿರುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

The post ಮತ್ತೆರಡು ಹುಲಿ ಮರಿಗಳು ಅಸಹಜವಾಗಿ ಸಾವು! ಕಾವೇರಿ ವನ್ಯಜೀವಿಧಾಮದಲ್ಲಿ ಘಟನೆ. appeared first on Good News 24x7.

]]>