heartbreaking Archives - Good News 24x7 https://www.goodnews24x7.com/tag/heartbreaking/ Kannada Tue, 23 Jun 2026 07:32:51 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg heartbreaking Archives - Good News 24x7 https://www.goodnews24x7.com/tag/heartbreaking/ 32 32 ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ https://www.goodnews24x7.com/dad-save-me-somehow-students-life-ends-with-last-call/ Tue, 23 Jun 2026 07:32:51 +0000 https://www.goodnews24x7.com/?p=9636 ಲಕ್ನೋದಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃ*ತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಾ*ಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳಿಗೂ ತೀವ್ರ ಗಾಯಗಳಾಗಿವೆ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ…

The post ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ appeared first on Good News 24x7.

]]>

ಲಕ್ನೋದಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃ*ತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಾ*ಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳಿಗೂ ತೀವ್ರ ಗಾಯಗಳಾಗಿವೆ

ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂತಾಪ ವ್ಯಕ್ತಪಡಿಸಿದ್ದು, ಮೃ*ತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.

ಇದೇ ವೇಳೆ ಅಗ್ನಿ ದುರಂತದಲ್ಲಿ ಮೃ*ತಪಟ್ಟ ವಿದ್ಯಾರ್ಥಿಗಳ ಕರುಣಾಜನಕ ಕಥೆಗಳು ಬೆಳಕಿಗೆ ಬರುತ್ತಿವೆ.

23 ವರ್ಷದ ವಿದ್ಯಾರ್ಥಿ ಸುಖಮಣಿ ಸಿಂಗ್, ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿದ್ದ ವೇಳೆ ತನ್ನ ತಂದೆ ಪ್ರಭಜೋತ್ ಸಿಂಗ್ ಅವರಿಗೆ ಕರೆ ಮಾಡಿ, “ಅಪ್ಪಾ, ಹೇಗಾದರೂ ಮಾಡಿ ನನ್ನನ್ನು ಕಾಪಾಡಿ. ಸುತ್ತಲೂ ಬೆಂಕಿಯೇ ಕಾಣುತ್ತಿದೆ. ಹೊರಗೆ ಬರಲು ದಾರಿಯೇ ಇಲ್ಲ” ಎಂದು ಅಳುತ್ತಾ ಸಹಾಯ ಕೋರಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ತಂದೆ ಮಗನಿಗೆ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದಂತೆಯೇ ಸಂಪರ್ಕ ಕಡಿತಗೊಂಡಿದೆ

The post ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ appeared first on Good News 24x7.

]]>
ಯೋಧನಿಗೆ ಅಮಾನವೀಯ ಹಲ್ಲೆ: ಟೋಲ್ ಪ್ಲಾಜಾದಲ್ಲಿ ಕಂಬಕ್ಕೆ ಕಟ್ಟಿ ಥಳಿಸಿದ ಸಿಬ್ಬಂದಿ – ನಾಲ್ವರು ಅರೆಸ್ಟ್ ! https://www.goodnews24x7.com/inhumane-attack-on-soldier-staff-tied-to-a-pole-and-beaten-at-toll-plaza-four-arrested/ Mon, 18 Aug 2025 07:55:36 +0000 https://www.goodnews24x7.com/?p=6339 ಲಕ್ನೋ : ದೇಶದ ರಕ್ಷಕರಾದ ಯೋಧರು ಇಂದು ತಾವು ರಕ್ಷಿಸುತ್ತಿರುವ ಜನರಿಂದಲೇ ಅಪಮಾನ ಅನುಭವಿಸುವ ಸ್ಥಿತಿಗೆ ತಲುಪಿರುವುದನ್ನು ತೋರಿಸುವ ಹೃದಯವಿದ್ರಾವಕ ಘಟನೆ ಮೀರತ್‌ನಲ್ಲಿ ನಡೆದಿದೆ. ಟೋಲ್ ಪ್ಲಾಜಾದ ಸಿಬ್ಬಂದಿ ಒಬ್ಬ ಯೋಧನನ್ನು ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದ ಘಟನೆ ಸೋಷಿಯಲ್ ಮೀಡಿಯಾದಲ್ಲಿ…

The post ಯೋಧನಿಗೆ ಅಮಾನವೀಯ ಹಲ್ಲೆ: ಟೋಲ್ ಪ್ಲಾಜಾದಲ್ಲಿ ಕಂಬಕ್ಕೆ ಕಟ್ಟಿ ಥಳಿಸಿದ ಸಿಬ್ಬಂದಿ – ನಾಲ್ವರು ಅರೆಸ್ಟ್ ! appeared first on Good News 24x7.

]]>

ಲಕ್ನೋ : ದೇಶದ ರಕ್ಷಕರಾದ ಯೋಧರು ಇಂದು ತಾವು ರಕ್ಷಿಸುತ್ತಿರುವ ಜನರಿಂದಲೇ ಅಪಮಾನ ಅನುಭವಿಸುವ ಸ್ಥಿತಿಗೆ ತಲುಪಿರುವುದನ್ನು ತೋರಿಸುವ ಹೃದಯವಿದ್ರಾವಕ ಘಟನೆ ಮೀರತ್‌ನಲ್ಲಿ ನಡೆದಿದೆ. ಟೋಲ್ ಪ್ಲಾಜಾದ ಸಿಬ್ಬಂದಿ ಒಬ್ಬ ಯೋಧನನ್ನು ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಗೆ ಒಳಗಾದ ಯೋಧನನ್ನು ಕಪಿಲ್ ಕವಾಡ್ ಎಂದು ಗುರುತಿಸಲಾಗಿದ್ದು, ಅವರು ಭಾರತೀಯ ಸೇನೆಯ ರಜಪೂತ್ ರೆಜಿಮೆಂಟ್‌ನ ಸದಸ್ಯರಾಗಿದ್ದಾರೆ. ರಜೆ ಮುಗಿಸಿ ಕರ್ತವ್ಯದ ಸ್ಥಳವಾದ ಶ್ರೀನಗರಕ್ಕೆ ತೆರಳುತ್ತಿದ್ದ ಕಪಿಲ್, ದೆಹಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ಮೀರತ್‌ ಬಳಿ ಇರುವ ಟೋಲ್ ಪ್ಲಾಜಾದಲ್ಲಿ ತಡೆಗೊಳ್ಳಲಾದರು.

ವಿಮಾನಕ್ಕೆ ತಡವಾಗುತ್ತಿದೆ ಎಂಬ ಆತಂಕದಿಂದ ಕಾರಿನಿಂದ ಇಳಿದು ಟೋಲ್ ಸಿಬ್ಬಂದಿಯೊಂದಿಗೆ ಮಾತನಾಡಲು ಮುಂದಾದ ಕಪಿಲ್, ವಾಗ್ವಾದಕ್ಕೆ ಒಳಗಾಗಿದರು. ಇದಾದ ನಂತರ ಐವರು ಸಿಬ್ಬಂದಿ ಕಪಿಲ್ ಮತ್ತು ಅವರ ಸಂಬಂಧಿಯನ್ನು ಥಳಿಸಿದರು. ಈ ನಡುವೆ, ಕಪಿಲ್ ಅವರನ್ನು ಕಂಬಕ್ಕೆ ಕಟ್ಟಿದ ಮೇಲೆ ಮನಬಂದಂತೆ ದಾಳಿ ನಡೆಸಿದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಜನತೆಯಲ್ಲಿ ಆಕ್ರೋಶ ಮೂಡಿಸಿದೆ.

ಘಟನೆಯ ತನಿಖೆ ಆರಂಭಿಸಿದ ಪೊಲೀಸರು, ನಾಲ್ವರನ್ನು ಬಂಧಿಸಿರುವುದಾಗಿ ಎಸ್‌ಪಿ ರಾಕೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದುವರಿಯುತ್ತಿದೆ.

The post ಯೋಧನಿಗೆ ಅಮಾನವೀಯ ಹಲ್ಲೆ: ಟೋಲ್ ಪ್ಲಾಜಾದಲ್ಲಿ ಕಂಬಕ್ಕೆ ಕಟ್ಟಿ ಥಳಿಸಿದ ಸಿಬ್ಬಂದಿ – ನಾಲ್ವರು ಅರೆಸ್ಟ್ ! appeared first on Good News 24x7.

]]>
280 ಪ್ರಯಾಣಿಕರಿದ್ದ ಹಡಗಿನಲ್ಲಿ ಭಾರೀ ಬೆಂಕಿ! https://www.goodnews24x7.com/massive-fire-on-a-ship-carrying-280-passengers/ Mon, 21 Jul 2025 10:30:57 +0000 https://www.goodnews24x7.com/?p=5175 ಇಂಡೋನೇಷಿಯಾ : ಟೈಟಾನಿಕ್ ಸಿನಿಮಾ ಮಾದರಿಯ ದುರಂತವೊಂದು ಇಂಡೋನೇಷಿಯಾದಲ್ಲಿ ನಡೆದಿದೆ. 280 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಹಗಡು ಬೆಂಕಿಗಾಹುತಿ ಆಗಿದೆ. ಇದರಿಂದ ಜೀವ ಉಳಿಸಿಕೊಳ್ಳಲು ಜನರು ಸಮುದ್ರಕ್ಕೆ ಹಾರಿದ್ದು, ಐವರು ಜೀವಬಿಟ್ಟಿದ್ದಾರೆ. ಉತ್ತರ ಸುಲಾವೇಸಿಯಲ್ಲಿ 280 ಪ್ರಯಾಣಿಕರಿದ್ದ ಕೆಎಂ ಬಾರ್ಸಿಲೋನಾ 5…

The post 280 ಪ್ರಯಾಣಿಕರಿದ್ದ ಹಡಗಿನಲ್ಲಿ ಭಾರೀ ಬೆಂಕಿ! appeared first on Good News 24x7.

]]>

ಇಂಡೋನೇಷಿಯಾ : ಟೈಟಾನಿಕ್ ಸಿನಿಮಾ ಮಾದರಿಯ ದುರಂತವೊಂದು ಇಂಡೋನೇಷಿಯಾದಲ್ಲಿ ನಡೆದಿದೆ. 280 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಹಗಡು ಬೆಂಕಿಗಾಹುತಿ ಆಗಿದೆ. ಇದರಿಂದ ಜೀವ ಉಳಿಸಿಕೊಳ್ಳಲು ಜನರು ಸಮುದ್ರಕ್ಕೆ ಹಾರಿದ್ದು, ಐವರು ಜೀವಬಿಟ್ಟಿದ್ದಾರೆ.

ಉತ್ತರ ಸುಲಾವೇಸಿಯಲ್ಲಿ 280 ಪ್ರಯಾಣಿಕರಿದ್ದ ಕೆಎಂ ಬಾರ್ಸಿಲೋನಾ 5 ಎಂಬ ಹಡಗು, ಅಗ್ನಿ ಅವಘಡಕ್ಕೆ ತುತ್ತಾಗಿದೆ. ಬೆಂಕಿ ಕಾಣಿಸಿದ ಹಿನ್ನಲೆ ಹಡಗಿನ ಡೆಕ್ಗಳಲ್ಲಿ ದಟ್ಟವಾದ ಕಪ್ಪು ಹೊಗೆ ಕಾಣಿಸಿಕೊಂಡಿದ್ದು, ನೋಡ ನೋಡ್ತಿದ್ದಂತೆ ಡಕ್ನ ಮುಂಭಾಗದಲ್ಲಿ ಬೆಂಕಿಯು ಸ್ಫೋಟಗೊಂಡಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆ ಆಗಿದೆ.

ಹಡಗಿನಲ್ಲಿ ಬೆಂಕಿ ಕಾಣಿಸಿಕ್ತೊದ್ದಂತೆ ಭಯಭೀತರಾದ ಜನರು ಲೈಫ್ ಜಾಕೆಟ್ ಹಾಕಿಕೊಡು ಸಮುದ್ರಕ್ಕೆ ನಗೆಯುವ ಮೂಲಕ ಜೀವುಳಿಸಿಕೊಂಡಿದ್ದಾರೆ. 300 ಪ್ರಯಾಣಿಕರಿದ್ದ ಹಡಗಿನಲ್ಲಿ 150 ಜನರನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ನಡೀತಿದೆ. ಇಂಡೋನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ಇನ್ನು, ಪುಟ್ಟು ಮಗುವನ್ನು ರಕ್ಷಣೆ ಮಾಡುವ ದೃಶ್ಯ ರೋಚಕವಾಗಿದೆ. ನೀರಿನ ಮಧ್ಯೆ ಮಹಿಳೆಯನ್ನ ಹಿಡಿದುಕೊಂಡು ಪುಟ್ಟ ಮಗು ಪರದಾಡ್ತಿದ್ದ ದೃಶ್ಯ ಮನ ಕಲಕುವಂತಿದೆ. ಇನ್ನೂ, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ರಕ್ಷಣಾ ತಂಡದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 20 ಮಂದಿ ನಾಪತ್ತೆ ಆದವರಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಕತ್ತಲಾದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಆಗಿದೆ.

The post 280 ಪ್ರಯಾಣಿಕರಿದ್ದ ಹಡಗಿನಲ್ಲಿ ಭಾರೀ ಬೆಂಕಿ! appeared first on Good News 24x7.

]]>