InternationalSpaceStation Archives - Good News 24x7 https://www.goodnews24x7.com/tag/internationalspacestation/ Kannada Mon, 18 Aug 2025 06:17:12 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg InternationalSpaceStation Archives - Good News 24x7 https://www.goodnews24x7.com/tag/internationalspacestation/ 32 32 ಗಗನಯಾತ್ರೆ ಶುಭಾಂಶು ಶುಕ್ಲಾ ಮರಳಿ ತಾನ್ನಾಡಿಗೆ ! ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿದ್ದ ಗಗನಯಾತ್ರಿ. https://www.goodnews24x7.com/gaganyatra-shubanshu-shukla-back-on-track-astronaut-who-made-a-historic-visit-to-the-national-space-station/ Mon, 18 Aug 2025 06:17:12 +0000 https://www.goodnews24x7.com/?p=6312 ಅಮೆರಿಕದಿಂದ ಮಧ್ಯರಾತ್ರಿ 1.30ರ ವೇಳೆಗೆ ದೆಹಲಿಗೆ ಆಗಮಿಸಿದ ಶುಭಾಂಶು ಶುಕ್ಲಾ ಅವರಿಗೆ ಇಂದಿರಾಗಾಂಧಿ ಏರ್‌ಪೋರ್ಟ್‌ನಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಶುಭಾಂಶು ಶುಕ್ಲಾ ಅವರನ್ನು ಬರಮಾಡಿಕೊಂಡರು. ಶುಕ್ಲಾ ಅವರು ಸೋಮವಾರ ಪ್ರಧಾನಮಂತ್ರಿ…

The post ಗಗನಯಾತ್ರೆ ಶುಭಾಂಶು ಶುಕ್ಲಾ ಮರಳಿ ತಾನ್ನಾಡಿಗೆ ! ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿದ್ದ ಗಗನಯಾತ್ರಿ. appeared first on Good News 24x7.

]]>

ಅಮೆರಿಕದಿಂದ ಮಧ್ಯರಾತ್ರಿ 1.30ರ ವೇಳೆಗೆ ದೆಹಲಿಗೆ ಆಗಮಿಸಿದ ಶುಭಾಂಶು ಶುಕ್ಲಾ ಅವರಿಗೆ ಇಂದಿರಾಗಾಂಧಿ ಏರ್‌ಪೋರ್ಟ್‌ನಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಶುಭಾಂಶು ಶುಕ್ಲಾ ಅವರನ್ನು ಬರಮಾಡಿಕೊಂಡರು. ಶುಕ್ಲಾ ಅವರು ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಯಾಗಲಿದ್ದಾರೆ. ಬಳಿಕ, ತಮ್ಮ ತವರು ಲಖನೌಗೆ ಪ್ರಯಾಣಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಆಕ್ಸಿಯಂ-4 ಮಿಷನ್‌ ಗಾಗಿ ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿದ್ದ ಶುಕ್ಲಾ, 2027 ರಲ್ಲಿ ಇಸ್ರೋ ತನ್ನ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಎದುರು ನೋಡು ತ್ತಿರುವುದರಿಂದ ತಮ್ಮ ಅನುಭವಗಳನ್ನು ಸ್ನೇಹಿತರು ಹಾಗೂ ಸಹೋದ್ಯೋಗಿ ಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಆಗಸ್ಟ್ 22-23 ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಭಾಗವಹಿಸಲು ಅವರು ದೆಹಲಿಗೆ
ಹಿಂದಿರುಗುತ್ತಾರೆಎಂದು ಹೇಳಲಾಗಿದೆ. ಐಎಸ್‌ಎಸ್‌ನಲ್ಲಿ 18 ದಿನಗಳನ್ನು ಕಳೆದ ನಂತರ ಗಗನಯಾತ್ರಿ ಕಳೆದ ತಿಂಗಳು ಭೂಮಿಗೆ ಮರಳಿದ್ದರು. ಈ ಅವಧಿಯಲ್ಲಿ ಅವರು ಭಾರತಕ್ಕೆ ಸಂಬಂಧಿಸಿದ 7 ನಿರ್ದಿಷ್ಟ ಪ್ರಯೋಗಗಳನ್ನು ನಡೆಸಿದ್ದಾರೆ. ಅವು ಗಳನ್ನು ಈಗ ಭಾರತೀಯ ವಿಜ್ಞಾನಿಗಳು ಪರಿಶೀಲನೆಗಾಗಿ ಮರಳಿ ತರಲಾಗಿದ್ದು, ಫಲಿತಾಂಶಗಳು ಶೀಘ್ರದಲ್ಲೇ ಬರುವ ನಿರೀಕ್ಷೆಯಿದೆ. ಶುಭಾಂಶು ಶುಕ್ಲಾ ಅವರು ಭಾರತಕ್ಕೆ ಮರಳಿರುವ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು, ಭಾರತದ

ಬಾಹ್ಯಾಕಾಶ ವೈಭವ ದೇಶದ ಮಣ್ಣನ್ನು ಸ್ಪರ್ಶಿಸಿದೆ. ಭಾರತ ಮಾತೆಯ ಪುತ್ರ ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು ಬೆಳಗ್ಗಿನ ಜಾವ ದೆಹಲಿಗೆ ಬಂದಿಳಿದರು. ಅವರೊಂದಿಗೆ ಮತ್ತೊಬ್ಬ ಸಮಾನ ಸಾಧನೆ ಮಾಡಿದ, ಭಾರತದ ಮೊದಲ ಮಾನವ ಗಗನಯಾನಕ್ಕೆ ಆಯ್ಕೆಯಾದ ಗಗನಯಾತ್ರಿಗಳಲ್ಲಿ ಒಬ್ಬರಾದ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಕೂಡ ಭಾರತಕ್ಕೆ ಮರಳಿದ್ದಾರೆ. ಬಾಲಕೃಷ್ಣ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮಿಷನ್‌ ಭಾರತದ ನಿಯೋಜಿತ ಬ್ಯಾಕಪ್ ಆಗಿದ್ದರು ಎಂದು ಹೇಳಿದ್ದಾರೆ.

The post ಗಗನಯಾತ್ರೆ ಶುಭಾಂಶು ಶುಕ್ಲಾ ಮರಳಿ ತಾನ್ನಾಡಿಗೆ ! ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿದ್ದ ಗಗನಯಾತ್ರಿ. appeared first on Good News 24x7.

]]>
ಭಾರತಕ್ಕೆ ಮರಳಿ ಬಂದ ಗಗನಯಾತ್ರಿ ಶುಭಾಂಶು ಶುಕ್ಲಾ https://www.goodnews24x7.com/astronaut-shubanshu-shukla-returns-to-india/ Sun, 17 Aug 2025 06:54:12 +0000 https://www.goodnews24x7.com/?p=6270 ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿದ ಬಳಿಕ ಇಂದು ಮುಂಜಾನೆ ತಾಯ್ನಾಡಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ…

The post ಭಾರತಕ್ಕೆ ಮರಳಿ ಬಂದ ಗಗನಯಾತ್ರಿ ಶುಭಾಂಶು ಶುಕ್ಲಾ appeared first on Good News 24x7.

]]>

ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿದ ಬಳಿಕ ಇಂದು ಮುಂಜಾನೆ ತಾಯ್ನಾಡಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಶುಕ್ಲಾ ಅವರ ಸಹಾಯಕ ಗಗನಯಾತ್ರಿ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಕೂಡ ತಾಯ್ನಾಡಿಗೆ ಮರಳಿದ್ದು, ಅವರಿಗೂ ಸ್ವಾಗತ ಕೋರಲಾಯಿತು.

ಕಳೆದ ಒಂದು ವರ್ಷದಿಂದ ಶುಭಾಂಶು ಶುಕ್ಲಾ ಅವರು ಅಮೆರಿಕದಲ್ಲಿದ್ದು, ಐಎಸ್​ಎಸ್​ಗೆ ಆಕ್ಸಿಯಂ-4 ಮಿಷನ್​ ತರಬೇತಿ ಪಡೆದಿದ್ದರು. ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಯಶಸ್ವಿ ಪ್ರಯಾಣ ಕೈಗೊಂಡಿದ್ದರು.

ಶುಕ್ಲಾ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ತಮ್ಮ ತವರೂರು ಲಕ್ನೋಗೆ ಪ್ರಯಾಣಿಸುವ ಸಾಧ್ಯತೆಯಿದೆ. ನಂತರ ಆಗಸ್ಟ್ 22 ಹಾಗೂ 23 ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ರಾಜಧಾನಿಗೆ ಮರಳುವ ನಿರೀಕ್ಷೆಯಿದೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, “ಭಾರತದ ಬಾಹ್ಯಾಕಾಶ ವೈಭವ ದೇಶದ ಮಣ್ಣನ್ನು ಸ್ಪರ್ಶಿಸಿದೆ. ಭಾರತ ಮಾತೆಯ ಪುತ್ರ ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು ಬೆಳಗ್ಗಿನ ಜಾವ ದೆಹಲಿಗೆ ಬಂದಿಳಿದರು. ಅವರೊಂದಿಗೆ ಮತ್ತೊಬ್ಬ ಸಮಾನ ಸಾಧನೆ ಮಾಡಿದ, ಭಾರತದ ಮೊದಲ ಮಾನವ ಗಗನಯಾನಕ್ಕೆ ಆಯ್ಕೆಯಾದ ಗಗನಯಾತ್ರಿಗಳಲ್ಲಿ ಒಬ್ಬರಾದ ಗ್ರೂಪ್​ ಕ್ಯಾಪ್ಟನ್​ ಪ್ರಶಾಂತ್​ ಬಾಲಕೃಷ್ಣನ್​ ನಾಯರ್ ಕೂಡ ಭಾರತಕ್ಕೆ ಮರಳಿದ್ದಾರೆ. ಬಾಲಕೃಷ್ಣ​ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮಿಷನ್​ಗೆ ಭಾರತದ ನಿಯೋಜಿತ ಬ್ಯಾಕಪ್​ ಆಗಿದ್ದರು” ಎಂದು ತಿಳಿಸಿದ್ದಾರೆ.

ಶನಿವಾರ, ಭಾರತಕ್ಕೆ ಹಿಂತಿರುಗಲು ವಿಮಾನದಲ್ಲಿ ಕುಳಿತಿದ್ದ ಶುಭಾಂಶು ಶುಕ್ಲಾ ಅವರು ನಗುಮೊಗದಲ್ಲಿರುವ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದರು. “ಭಾರತಕ್ಕೆ ಹಿಂತಿರುಗಲು ವಿಮಾನದಲ್ಲಿ ಕುಳಿತಿದ್ದು, ಈ ಸಮಯದಲ್ಲಿ ನನ್ನ ಹೃದಯದಲ್ಲಿ ಹಲವು ಭಾವನೆಗಳು ಕುಣಿದಾಡುತ್ತಿವೆ. ಈ ಮಿಷನ್​ಗಾಗಿ ಕಳೆದ ವರ್ಷ ನನ್ನ ಸ್ನೇಹಿತರು ಮತ್ತು ಕುಟುಂಬವಾಗಿದ್ದ ಅದ್ಭುತ ಜನರ ಗುಂಪನ್ನು ಬಿಟ್ಟು ಹೋಗಿದ್ದಕ್ಕೆ ನನಗೆ ದುಃಖವಾಗುತ್ತದೆ. ಇದೇ ವೇಳೆ, ಮಿಷನ್​ ನಂತರ ಮೊದಲ ಬಾರಿಗೆ ನನ್ನ ಎಲ್ಲಾ ಸ್ನೇಹಿತರು, ಕುಟುಂಬ ಮತ್ತು ದೇಶದ ಪ್ರತಿಯೊಬ್ಬರನ್ನು ಭೇಟಿಯಾಗಲು ನಾನು ಉತ್ಸುಕನಾಗಿದ್ದೇನೆ. ಇದು ಜೀವನಕ್ಕೂ ಅನ್ವಯಿಸುತ್ತದೆ ಎಂದು ನಾನು ನಂಬುತ್ತೇನೆ” ಎಂದು ಪೋಸ್ಟ್​ ಹಂಚಿಕೊಂಡಿದ್ದರು.

ಜೂನ್ 25ರಂದು ಅಮೆರಿಕದಿಂದ ಐಎಸ್‌ಎಸ್‌ಗೆ ಆಕ್ಸಿಯಮ್-4 ಮಿಷನ್​ಗೆ ತೆರಳುವ ಮೊದಲು ಅವರ ಪ್ಲೇ ಲಿಸ್ಟ್​ನಲ್ಲಿದ್ದ ಸ್ವದೇಶ್‌ ಬಾಲಿವುಡ್ ಸಿನಿಮಾದ ಹಾಡನ್ನು ನೆನಪಿಸಿಕೊಳ್ಳುತ್ತಾ, “ದಿನದ ಕೊನೆಯಲ್ಲಿ ‘ಯುನ್ ಹಿ ಚಲಾ ಚಲ್ ರಹಿ – ಜೀವನ್ ಗಾಡಿ ಹೈ ಸಮಯ್ ಪಹಿಯಾ'” ಎಂದು ಶುಕ್ಲಾ ಬರೆದುಕೊಂಡಿದ್ದಾರೆ. ಶುಕ್ರವಾರ ಹೂಸ್ಟನ್​ನ ಭಾರತೀಯ ಕಾನ್ಸುಲೇಟ್​ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ಲಾ ಹಾಗೂ ಅವರ ಸಹಾಯಕ ಗಗನಯಾತ್ರಿ ಪ್ರಶಾಂತ್​ ನಾಯರ್​ ಭಾಗವಹಿಸಿದ್ದರು.

ಕೆಂಫು ಕೋಟೆಯಲ್ಲಿ ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, “ಭಾರತ ತನ್ನದೇ ಆದ ಬಾಹ್ಯಾಕಾಶ ಕೇಂದ್ರವನ್ನು ಅಭಿವೃದ್ಧಿಪಡಿಸುತ್ತಿದೆ. ನಮ್ಮ ಗ್ರೂಪ್​ ಕ್ಯಾಪ್ಟನ್​ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನದಿಂದ ಮರಳಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ಭಾರತಕ್ಕೆ ವಾಪಸ್​ ಆಗಲಿದ್ದಾರೆ” ಎಂದು ಹೇಳಿದ್ದರು.

ಶುಭಾಂಶು ಶುಕ್ಲಾ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ದೆಹಲಿ ಸಿಎಂ ರೇಖಾ ಗುಪ್ತಾ ಹಾಗೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್ (PTI)
ಶುಭಾಂಶು ಶುಕ್ಲಾ ಅವರು, ಜೂನ್​ 25ರಂದು ಫ್ಲೋರಿಡಾದಿಂದ ಉಡಾವಣೆಗೊಂಡು, ಜೂನ್​ 26ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್​ ಮಾಡಲಾದ ಆಕ್ಸಿಯಮ್​-4 ಖಾಸಗಿ ಬಾಹ್ಯಾಕಾಶ ಕಾರ್ಯಾಚರಣೆಯ ಭಾಗವಾಗಿದ್ದರು. ಜುಲೈ 15ರಂದು ಮಿಷನ್​ ಮುಗಿಸಿ, ಭೂಮಿಗೆ ವಾಪಸ್​ ಆಗಿದ್ದರು.

ಇತರ ಮೂವರು ಗಗನಯಾತ್ರಿಗಳಾದ ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್​ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಹಾಗೂ ಹಂಗೇರಿಯ ಟಿಬೋರ್ ಕಾಪು ಅವರ ಜೊತೆಗೆ ಶುಕ್ಲಾ 18 ದಿನಗಳ ಮಿಷನ್​ನಲ್ಲಿ ಭಾಗವಹಿಸಿದ್ದರು. ಈ ವೇಳೆ 60ಕ್ಕೂ ಹೆಚ್ಚು ಪ್ರಯೋಗಗಳು ಮತ್ತು 20 ಔಟ್ರೀಚ್ ಸೆಷನ್​ಗಳನ್ನು ಶುಭಾಂಶು ಶುಕ್ಲಾ ನಡೆಸಿದ್ದರು.

The post ಭಾರತಕ್ಕೆ ಮರಳಿ ಬಂದ ಗಗನಯಾತ್ರಿ ಶುಭಾಂಶು ಶುಕ್ಲಾ appeared first on Good News 24x7.

]]>
ಭಾರತೀಯ ಗಗನಯಾತ್ರಿ ಶುಕ್ಲಾ ಭೂಮಿಗೆ ಸುರಕ್ಷಿತವಾಗಿ, ಖುಷಿಯ ಕ್ಷಣ. https://www.goodnews24x7.com/indian-astronaut-shukla-safely-returns-to-earth-parents-watch-happy-moment/ Tue, 15 Jul 2025 10:33:01 +0000 https://www.goodnews24x7.com/?p=5116 ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ದಿಂದ ಭೂಮಿಗೆ ಬಂದಿಳಿದಿದ್ದಾರೆ. ಈ ಖುಷಿ ಕ್ಷಣವನ್ನು ಶುಕ್ಲಾ ಪೋಷಕರು ಕಣ್ತುಂಬಿಕೊಂಡಿದ್ದಾರೆ. ಲೈವ್ ವೀಕ್ಷಿಸಲು ಅವರ ಪೋಷಕರು ಲಕ್ನೋದಲ್ಲಿರುವ ಸಿಟಿ ಮಾಂಟೆಸರಿ ಶಾಲೆಗೆ ಬಂದಿದ್ದರು. ಶುಭಾಂಶು ಶುಕ್ಲಾ 18 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು…

The post ಭಾರತೀಯ ಗಗನಯಾತ್ರಿ ಶುಕ್ಲಾ ಭೂಮಿಗೆ ಸುರಕ್ಷಿತವಾಗಿ, ಖುಷಿಯ ಕ್ಷಣ. appeared first on Good News 24x7.

]]>

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ದಿಂದ ಭೂಮಿಗೆ ಬಂದಿಳಿದಿದ್ದಾರೆ. ಈ ಖುಷಿ ಕ್ಷಣವನ್ನು ಶುಕ್ಲಾ ಪೋಷಕರು ಕಣ್ತುಂಬಿಕೊಂಡಿದ್ದಾರೆ. ಲೈವ್ ವೀಕ್ಷಿಸಲು ಅವರ ಪೋಷಕರು ಲಕ್ನೋದಲ್ಲಿರುವ ಸಿಟಿ ಮಾಂಟೆಸರಿ ಶಾಲೆಗೆ ಬಂದಿದ್ದರು. ಶುಭಾಂಶು ಶುಕ್ಲಾ 18 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಇದೀಗ ಹಿಂದಿರುಗಿದ್ದು, ಎಲ್ಲೆಡೆ ಸಂತಸ ಮನೆ ಮಾಡಿದೆ. ಜುಲೈ 14 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ನಂತರ ತಂಡವು ಈಗ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪ್ಲಾಶ್ಡೌನ್ ಮಾಡಿದೆ.

ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಮತ್ತು ಆಕ್ಸ್-4 ಸಿಬ್ಬಂದಿ ಭೂಮಿಗೆ ಮರಳುವುದು ಹಲವು ಹಂತಗಳನ್ನು ಒಳಗೊಂಡಿರುವ ಒಂದು ನಿಖರವಾದ ಪ್ರಕ್ರಿಯೆಯಾಗಿದೆ. ಆಕ್ಸಿಯಮ್ ಸ್ಪೇಸ್ ಮತ್ತು ನಾಸಾ ತಂಡವು ಇದು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಲು ವೇಳಾಪಟ್ಟಿಯನ್ನು ಸಿದ್ಧಪಡಿಸಿತ್ತು. ಮೊದಲು ಡಿಯೋರ್ಬಿಟ್ ಬರ್ನ್ – ಬಾಹ್ಯಾಕಾಶ ನೌಕೆಯು ತನ್ನ ಕಕ್ಷೆಯಿಂದ ಹೊರಬರಲು ವೇಗವನ್ನು ಕಡಿಮೆ ಮಾಡಲು ತನ್ನ ಎಂಜಿನ್ಗಳನ್ನು ಸುಡುತ್ತದೆ. ಟ್ರಂಕ್ ಜೆಟ್ಟಿಸನ್ – ವಾಹನದ ಬಿಡಿ ಭಾಗ (ಟ್ರಂಕ್) ಬೇರ್ಪಡುತ್ತದೆ.

ನೊಸೆಕೋನ್ ಮುಚ್ಚುವಿಕೆ – ಇಳಿಯುವ ತಯಾರಿಯಲ್ಲಿ ಬಾಹ್ಯಾಕಾಶ ನೌಕೆಯ ಮುಂಭಾಗವು ಮುಚ್ಚಲ್ಪಡುತ್ತದೆ. ಡ್ರೋಗ್ ಪ್ಯಾರಾಚೂಟ್ಗಳನ್ನು ನಿಯೋಜಿಸಲಾಗುತ್ತದೆ – ಸಣ್ಣ ಪ್ಯಾರಾಚೂಟ್ಗಳು ತೆರೆದುಕೊಳ್ಳುತ್ತವೆ, ಇದು ಬಾಹ್ಯಾಕಾಶ ನೌಕೆಯ ವೇಗವನ್ನು ನಿಧಾನಗೊಳಿಸುತ್ತದೆ.
ಮುಖ್ಯ ಪ್ಯಾರಾಚೂಟ್ಗಳನ್ನು ನಿಯೋಜಿಸಲಾಗಿದೆ – ದೊಡ್ಡ ಪ್ಯಾರಾಚೂಟ್ಗಳು ತೆರೆದುಕೊಳ್ಳುತ್ತವೆ, ಇದರಿಂದಾಗಿ ಬಾಹ್ಯಾಕಾಶ ನೌಕೆ ಸುರಕ್ಷಿತವಾಗಿ ಇಳಿಯಲು ಅನುವು ಮಾಡಿಕೊಡುತ್ತದೆ. ಕೊನೆಯದಾಗಿ ಡ್ರ್ಯಾಗನ್ ಸ್ಪ್ಲಾಶ್ಡೌನ್ – ಬಾಹ್ಯಾಕಾಶ ನೌಕೆಯು ಪೆಸಿಫಿಕ್ ಮಹಾಸಾಗರದ ನೀರಿನ ಮೇಲೆ ಇಳಿದಿದೆ. ವಾಪಸಾತಿಯ ಬಳಿಕ ಗಗನಯಾತ್ರಿಗಳ ದೇಹ ಭೂಮಿಯ ವಾತಾವರಣಕ್ಕೆ ಒಗ್ಗಿಕೊಳ್ಳುವಂತೆ ಮಾಡಲು ಅವರಿಗಾಗಿ 7 ದಿನ ಪುನಶ್ಚೇತನ ಕಾರ್ಯಕ್ರಮ ನಡೆಸಲಾಗುವುದು. ನಂತರ ಅವರು ಸಾರ್ವಜನಿಕರ ಭೇಟಿಗೆ ಲಭ್ಯರಿರುತ್ತಾರೆ.

ಜೂ.25ರಂದು ಆಕ್ಸಿಯಂ-4 ಮಿಷನ್ ಮೂಲಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ, ಅಮೆರಿಕ ಮಹಿಳಾ ಗಗನಯಾತ್ರಿ ಪೆಗ್ಗಿ ವಿಟ್ಸನ್, ಹಂಗೇರಿಯ ಟಿಬೋರ್ ಕಾಪು ಹಾಗೂ ಪೋಲೆಂಡ್ ಗಗನಯಾತ್ರಿ ಸ್ಲಾವೋಸ್ಜ್ ಉಜ್ನಾನ್ಸ್ಕಿ ಅಂತರಿಕ್ಷ ಯಾನಕ್ಕೆ ತೆರಳಿದ್ದರು.
8 ಗಂಟೆಗಳ ಪ್ರಯಾಣದ ನಂತರ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಜೂನ್ 26 ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್ ಮಾಡಿತು. ಆದಾಗ್ಯೂ, ಈ ಮಿಷನ್ 14 ದಿನಗಳದ್ದಾಗಿತ್ತು. ಈಗ ಗಗನಯಾತ್ರಿಗಳ ಮರಳುವಿಕೆ ನಾಲ್ಕು ದಿನಗಳ ವಿಳಂಬವಾಗಿದೆ. ಜುಲೈ 6 ರಂದು, ಶುಭಾಂಶು ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿದ್ದರು.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಭಾರತೀಯ ಸಂಸ್ಥೆ ಇಸ್ರೋ ನಡುವಿನ ಒಪ್ಪಂದದಡಿಯಲ್ಲಿ, ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಈ ಕಾರ್ಯಾಚರಣೆಗೆ ಆಯ್ಕೆ ಮಾಡಲಾಯಿತು. 41 ವರ್ಷಗಳ ಹಿಂದೆ, ಭಾರತದ ರಾಕೇಶ್ ಶರ್ಮಾ 1984 ರಲ್ಲಿ ಸೋವಿಯತ್ ಒಕ್ಕೂಟದ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು.

The post ಭಾರತೀಯ ಗಗನಯಾತ್ರಿ ಶುಕ್ಲಾ ಭೂಮಿಗೆ ಸುರಕ್ಷಿತವಾಗಿ, ಖುಷಿಯ ಕ್ಷಣ. appeared first on Good News 24x7.

]]>