Leopard Archives - Good News 24x7 https://www.goodnews24x7.com/tag/leopard/ Kannada Wed, 24 Jun 2026 07:49:48 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Leopard Archives - Good News 24x7 https://www.goodnews24x7.com/tag/leopard/ 32 32 ಏಕಾಏಕಿ ಚಿರತೆ ದಾಳಿ, ಆದಿವಾಸಿ ಮಹಿಳೆ ಬದುಕಿದ್ದೇ ಪವಾಡ! https://www.goodnews24x7.com/a-tribal-woman-miraculously-survived-a-leopard-attack/ Wed, 24 Jun 2026 07:49:48 +0000 https://www.goodnews24x7.com/?p=9652 ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಹಾಡಿಯಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿದ್ದು ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಜೂನ್​​ 24,ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳ ಉಪಟಳ ಮಿತಿ ಮೀರಿದ್ದು, ಕಾಡಂಚಿನ ಗ್ರಾಮಗಳ ಜನರ…

The post ಏಕಾಏಕಿ ಚಿರತೆ ದಾಳಿ, ಆದಿವಾಸಿ ಮಹಿಳೆ ಬದುಕಿದ್ದೇ ಪವಾಡ! appeared first on Good News 24x7.

]]>

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಹಾಡಿಯಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿದ್ದು ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಜೂನ್​​ 24,ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳ ಉಪಟಳ ಮಿತಿ ಮೀರಿದ್ದು, ಕಾಡಂಚಿನ ಗ್ರಾಮಗಳ ಜನರ ಬದುಕೇ ದುಸ್ತರವಾಗಿ ಮಾರ್ಪಟ್ಟಿದೆ. ಜನವಸತಿ ಪ್ರದೇಶಗಳಿಗೆ ಮೇಲಿಂದ ಮೇಲೆ ವನ್ಯ ಜೀವಿಗಳು ಲಗ್ಗೆ ಇಡುತ್ತಿರವ ಕಾರಣಕ್ಕೆ ಜೀವ ಭಯದಲ್ಲಿಯೇ ಜನ ಬದುಕುವಂತಾಗಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದ ಆನೆಹೊಲ ಹಾಡಿಯಲ್ಲಿ ಏಕಾಏಕಿ ಚಿರತೆ ದಾಳಿ ನಡೆಸಿದ್ದು, ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಪವಾಡ ಎಂಬಂತೆ ಜೀವ ಉಳಿಸಿಕೊಂಡಿದ್ದಾಳೆ.

ಕಳೆದ 6 ತಿಂಗಳಿಂದ ಮಲೆ ಮಹದೇಶ್ವರ ಬೆಟ್ಟದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಚಿರತೆ ದಾಳಿ ಪ್ರಕರಣಗಳು ನಡೆಯುತ್ತಿವೆ. ಘಟನೆಗಳಿಂದ ಹಾಡಿಯ ನಿವಾಸಿಗಳು ಮತ್ತು ಮಾದಪ್ಪನ ಭಕ್ತರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಮಲೆ ಮಹದೇಶ್ವರ ವನ್ಯಜೀವಿಧಾಮ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅರಣ್ಯ ಸಿಬ್ಬಂದಿಗೆ ಚೆಲ್ಲಾಟ ಆದಿವಾಸಿ ಸೋಲಿಗರಿಗೆ ಪ್ರಾಣ ಸಂಕಟ!

ಮಲೆ ಮಹದೇಶ್ವರ ವನ್ಯಜೀವಿಧಾಮ ಅರಣ್ಯ ಸಿಬ್ಬಂದಿ ನಡೆಗೆ ಭಾರಿ ಆಕ್ರೋಶ ಕೂಡ ಕೇಳಿಬಂದಿದೆ. ಬೇರೆಡೆ ಸೆರೆ ಹಿಡಿದ ಚಿರತೆಯನ್ನ ಪಾಲಾರ್ ಕಾಡಿಗೆ ತಂದು ಬಿಡಲಾಗುತ್ತಿದೆ. ಮಾದಪ್ಪನ ಬೆಟ್ಟದಲ್ಲಿ ಪಾದಯಾತ್ರಿಯನ್ನ ಕೊಂದು ಹಾಕಿದ್ದ ನರಭಕ್ಷಕ ಚಿರತೆಯನ್ನು ಸೆರೆ ಹಿಡಿದು ಕಾಲರ್ ಐಡಿ ಅಳವಡಿಸಿದ್ದ ಅರಣ್ಯ ಸಿಬ್ಬಂದಿ ಅದನ್ನು ಮತ್ತೆ ಪಾಲಾರ್ ಹಾಗೂ ಪೊನ್ನಾಚಿ ಕಾಡಿನ ಮಧ್ಯೆ ಬಿಟ್ಟಿದ್ದರು. ಇದೇ ಕಾಡು ಪ್ರದೇಶದಲ್ಲಿ ಹಾಡಿಗಳಿದ್ದು, ಹಸು, ಮೇಕೆ ಹಾಗೂ ಜಾನುವಾರುಗಳ ಮೇಲೆ ಪದೇ ಪದೆ ಚಿರತೆ ದಾಳಿ ನಡೆಯುತ್ತಿದೆ. ಪೊನ್ನಾಚಿ ಬಳಿಯ ಕಕ್ಕೆ ಹೊಲ ಗ್ರಾಮದ ಇಟ್ಟಿದ್ದ ಪಂಜರಕ್ಕೆ ಬಿದ್ದ ಚಿರತೆ ಕತ್ತಿನಲ್ಲಿಯೂ ಕಾಲರ್ ಐಡಿ ಪತ್ತೆಯಾಗಿರೋದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

The post ಏಕಾಏಕಿ ಚಿರತೆ ದಾಳಿ, ಆದಿವಾಸಿ ಮಹಿಳೆ ಬದುಕಿದ್ದೇ ಪವಾಡ! appeared first on Good News 24x7.

]]>
ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿ ಚಿರತೆ ಆತಂಕ: ಮಗಳ ಸಮಯಪ್ರಜ್ಞೆಯಿಂದ ಪಾರಾದ ತಾಯಿ. https://www.goodnews24x7.com/leopard-in-siddhartha-blockade-mysore-mother-saved-by-her-daughters-time/ Mon, 20 Apr 2026 12:26:41 +0000 https://www.goodnews24x7.com/?p=9346 ಮೈಸೂರಿನ ಸಿದ್ದಾರ್ಥ ಬಡಾವಣೆಯ ನಿವಾಸಿಯಾದ ಸುರೇಶ್ ಎಂಬುವವರ ಮನೆಗೆ ಆಕಸ್ಮಿಕವಾಗಿ ಚಿರತೆಯೊಂದು ನುಗ್ಗಿ ಆತಂಕ ಸೃಷ್ಟಿಸಿತ್ತು. ಚಿರತೆಯು ಮನೆಯೊಳಗೆ ಎಂಟ್ರಿ ಕೊಟ್ಟಾಗ ಸುರೇಶ್ ಅವರ ಪತ್ನಿ ಸುಜಾತ ಮತ್ತು ಅವರ ತಾಯಿ ಶೈಲಜಾ ಮನೆಯಲ್ಲಿದ್ದರು. ಚಿರತೆಯು ನೇರವಾಗಿ ಶೈಲಜಾ ಅವರು ಇದ್ದ…

The post ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿ ಚಿರತೆ ಆತಂಕ: ಮಗಳ ಸಮಯಪ್ರಜ್ಞೆಯಿಂದ ಪಾರಾದ ತಾಯಿ. appeared first on Good News 24x7.

]]>

ಮೈಸೂರಿನ ಸಿದ್ದಾರ್ಥ ಬಡಾವಣೆಯ ನಿವಾಸಿಯಾದ ಸುರೇಶ್ ಎಂಬುವವರ ಮನೆಗೆ ಆಕಸ್ಮಿಕವಾಗಿ ಚಿರತೆಯೊಂದು ನುಗ್ಗಿ ಆತಂಕ ಸೃಷ್ಟಿಸಿತ್ತು. ಚಿರತೆಯು ಮನೆಯೊಳಗೆ ಎಂಟ್ರಿ ಕೊಟ್ಟಾಗ ಸುರೇಶ್ ಅವರ ಪತ್ನಿ ಸುಜಾತ ಮತ್ತು ಅವರ ತಾಯಿ ಶೈಲಜಾ ಮನೆಯಲ್ಲಿದ್ದರು. ಚಿರತೆಯು ನೇರವಾಗಿ ಶೈಲಜಾ ಅವರು ಇದ್ದ ಕೊಠಡಿಯೊಳಗೆ ನುಗ್ಗಿತಾದರೂ, ಸುಜಾತ ಅವರು ತೋರಿದ ಅಪ್ರತಿಮ ಧೈರ್ಯ ಮತ್ತು ಸಮಯಪ್ರಜ್ಞೆಯಿಂದಾಗಿ ತಮ್ಮ ತಾಯಿಯನ್ನು ತಕ್ಷಣವೇ ಅಲ್ಲಿಂದ ಸುರಕ್ಷಿತವಾಗಿ ಹೊರಗೆ ಕರೆತಂದು ರಕ್ಷಿಸಿದರು.

ಬಳಿಕ ಆ ಚಿರತೆಯು ಅದೇ ಕೊಠಡಿಯ ಮಂಚದ ಕೆಳಗೆ ಅಡಗಿ ಕುಳಿತುಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ, ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಸುಜಾತ ಅವರ ಈ ಧೈರ್ಯದ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

The post ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿ ಚಿರತೆ ಆತಂಕ: ಮಗಳ ಸಮಯಪ್ರಜ್ಞೆಯಿಂದ ಪಾರಾದ ತಾಯಿ. appeared first on Good News 24x7.

]]>
ಬೋನಿನ ಬಾಗಿಲು ತೆರೆದು ಚಿರತೆ ಕೆರಳಿಸಿದ ಅಧಿಕಾರಿಗಳು ! https://www.goodnews24x7.com/officials-opened-the-cage-door-and-provoked-the-leopard/ Sat, 16 Aug 2025 10:14:05 +0000 https://www.goodnews24x7.com/?p=6236 ಚಿಕ್ಕಮಗಳೂರು: ಬೋನಿನಲ್ಲಿ ಸೆರೆಯಾದ ಚಿರತೆಯನ್ನು ಹತ್ತಿರದಿಂದ ನೋಡಲು ಅರಣ್ಯ ಇಲಾಖೆ ಸಿಬ್ಬಂದಿ ಬೋನಿನ ಬಾಗಿಲನ್ನು ತೆಗೆದು ಅದನ್ನು ಕೆರಳಿಸಿದ ಘಟನೆ ಅಜ್ಜಂಪುರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಯ ಈ ನಡೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಾರಾಯಣಪುರ…

The post ಬೋನಿನ ಬಾಗಿಲು ತೆರೆದು ಚಿರತೆ ಕೆರಳಿಸಿದ ಅಧಿಕಾರಿಗಳು ! appeared first on Good News 24x7.

]]>

ಚಿಕ್ಕಮಗಳೂರು: ಬೋನಿನಲ್ಲಿ ಸೆರೆಯಾದ ಚಿರತೆಯನ್ನು ಹತ್ತಿರದಿಂದ ನೋಡಲು ಅರಣ್ಯ ಇಲಾಖೆ ಸಿಬ್ಬಂದಿ ಬೋನಿನ ಬಾಗಿಲನ್ನು ತೆಗೆದು ಅದನ್ನು ಕೆರಳಿಸಿದ ಘಟನೆ ಅಜ್ಜಂಪುರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಯ ಈ ನಡೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನಾರಾಯಣಪುರ ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಭಯ ಹುಟ್ಟಿಸಿತ್ತು. ಜನ ಹೊಲ, ಹದ್ದೆ-ತೋಟಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಮಕ್ಕಳು ಕೂಡ ಶಾಲೆಗೆ ಹೋಗಲು ಭಯಪಡುತ್ತಿದ್ದರು. ಹಾಗಾಗಿ ಅರಣ್ಯ ಇಲಾಖೆಯವರು ಗ್ರಾಮದ ಶಿವಯ್ಯ ಎಂಬವರ ಮನೆ ಬಳಿ ಬೋನನ್ನು ಇಟ್ಟಿದ್ದರು. ಶುಕ್ರವಾರ (ಆ.15) ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಚಿರತೆ ಬೋನಿಗೆ ಬಿದ್ದಿತ್ತು.

ಇಂದು (ಆ.16) ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಯಾಗಿದ್ದ ಬೋನಿನ ಬಾಗಿಲನ್ನ ಅರ್ಧ ತೆಗೆದು ಅದನ್ನು ಕೆರಳಿಸಿದ್ದಾರೆ. ಚಿರತೆ ಭಯವಾಗಿ ದಾಳಿಗೆ ಯತ್ನಿಸಿದಾಗ ತಕ್ಷಣ ಬಾಗಿಲು ಹಾಕಿದ್ದಾರೆ. ಅಧಿಕಾರಿಗಳ ಈ ವರ್ತನೆಯ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅಪಾಯಕಾರಿ ಪ್ರಾಣಿಯ ಜೊತೆ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

The post ಬೋನಿನ ಬಾಗಿಲು ತೆರೆದು ಚಿರತೆ ಕೆರಳಿಸಿದ ಅಧಿಕಾರಿಗಳು ! appeared first on Good News 24x7.

]]>
ಸಿಂಹಿಣಿ ಹಾಗೂ ಚಿರತೆಯ ರೋಚಕ ಕಾಳಗದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್.! https://www.goodnews24x7.com/%e0%b2%b8%e0%b2%bf%e0%b2%82%e0%b2%b9%e0%b2%bf%e0%b2%a3%e0%b2%bf-%e0%b2%b9%e0%b2%be%e0%b2%97%e0%b3%82-%e0%b2%9a%e0%b2%bf%e0%b2%b0%e0%b2%a4%e0%b3%86%e0%b2%af-%e0%b2%b0%e0%b3%8b%e0%b2%9a%e0%b2%95/ Mon, 13 Jan 2025 09:52:12 +0000 https://www.goodnews24x7.com/?p=1761 ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಪ್ರಾಣಿ ಸಾಮ್ರಾಜ್ಯಗಳಿಗೆ ಸಂಬಂಧಪಟ್ಟ ಹಲವಾರು ಕುತೂಹಲಕಾರಿ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಮರದ ಮೇಲೆ ಸಿಂಹ ಮತ್ತು ಚಿರತೆಯೂ ಕಾದಾಟ ನಡೆಸಿದೆ. ಆದರೆ ಚಿರತೆ ತನ್ನ ಚಾಣಾಕ್ಷತೆಯಿಂದ ಸಿಂಹಿಣಿಯ ದಾಳಿಯನ್ನು ತಪ್ಪಿಸಿ ಕೊಂಡಿದೆ. ಈ ಪ್ರಾಣಿಗಳ ಕಾಳಗದ ವಿಡಿಯೋವು…

The post ಸಿಂಹಿಣಿ ಹಾಗೂ ಚಿರತೆಯ ರೋಚಕ ಕಾಳಗದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್.! appeared first on Good News 24x7.

]]>

ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಪ್ರಾಣಿ ಸಾಮ್ರಾಜ್ಯಗಳಿಗೆ ಸಂಬಂಧಪಟ್ಟ ಹಲವಾರು ಕುತೂಹಲಕಾರಿ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಮರದ ಮೇಲೆ ಸಿಂಹ ಮತ್ತು ಚಿರತೆಯೂ ಕಾದಾಟ ನಡೆಸಿದೆ. ಆದರೆ ಚಿರತೆ ತನ್ನ ಚಾಣಾಕ್ಷತೆಯಿಂದ ಸಿಂಹಿಣಿಯ ದಾಳಿಯನ್ನು ತಪ್ಪಿಸಿ ಕೊಂಡಿದೆ. ಈ ಪ್ರಾಣಿಗಳ ಕಾಳಗದ ವಿಡಿಯೋವು ಮೈ ಜುಮ್ಮ್ ಎನ್ನುವಂತಿದ್ದು,
ಪ್ರಾಣಿಗಳ ಲೋಕದಲ್ಲಿ ಬೇಟೆಗಾಗಿ ಪ್ರಾಣಿಗಳ ನಡುವೆ ಪರಸ್ಪರ ಕಾದಾಟಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಸಾಕಷ್ಟು ಪ್ರಾಣಿಗಳು ಬೇಟೆಯಲ್ಲಿ ಪಳಗಿರುತ್ತವೆ. ಈ ಪ್ರಾಣಿ ಪ್ರಪಂಚದಲ್ಲಿನ ಕಾದಾಟದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಈ ಕ್ರೂರ ಪ್ರಾಣಿಗಳಾದ ಹುಲಿ, ಚಿರತೆ, ಸಿಂಹವು ಹೊಂಚು ಹಾಕಿ ಬೇಟೆಯಾಡುವುದರಲ್ಲಿ ಒಂದು ಕೈ ಮುಂದೆ ಎನ್ನಬಹುದು. ಈ ಬಲಿಷ್ಠ ಜೀವಿಗಳು ಒಮ್ಮೆ ಗುರಿ ಇಟ್ಟು ಬೇಟೆಗಿಳಿದರೆ ಮುಗಿದೇ ಹೋಯಿತು ವಿಫಲವಾಗುವುದು ಬಹಳ ಕಡಿಮೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮರದ ಮೇಲೆ ಸಿಂಹ ಹಾಗೂ ಚಿರತೆಯ ನಡುವಿನ ಕಾಳಗವು ಮೈ ಜುಮ್ಮ್ ಎನಿಸುವಂತಿದೆ.


AMAZlNGNATURE ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಸಿಂಹ ಮತ್ತು ಚಿರತೆಯ ನಡುವಿನ ಸಂಘರ್ಷದ ವಿಡಿಯೋ ಇದಾಗಿದ್ದು, ಈ ಈ ಕಾಳಗ ಯಾವುದೇ ಕಾಡಿನಲ್ಲಿ ನಡೆಯದೇ ಮರದಲ್ಲಿ ನಡೆದಿದೆ. ಹೌದು, ಸಿಂಹ ಹಾಗೂ ಚಿರತೆ ನಡುವಿನ ಸಂಘರ್ಷ ನಡೆದಿದ್ದು, ಈ ಕ್ರೂರ ಪ್ರಾಣಿಗಳು ಮರದ ಮೇಲೆಯೇ ಉಗ್ರ ಹೋರಾಟಕ್ಕೆ ಇಳಿದಿದ್ದು, ಇತ್ತ ಈ ಸಿಂಹಿಣಿ ಕೂಡ ತನ್ನ ಶಕ್ತಿಯಿಂದ ಚಿರತೆಯನ್ನು ಮಣಿಸಲು ಮುಂದಾಗಿದೆ.
ಚಿರತೆಯು ನಾನೇನು ಕಮ್ಮಿ ಎಂದು ತನಗಿರುವ ಬಲದಿಂದ, ಸಿಂಹದ ಮೇಲೆ ಎರಗಿದೆ. ಆದರೆ ಕೊನೆಗೆ ಮರದ ಕೊಂಬೆಯೇ ಮುರಿದು ಬಿದಿದೆ. ಇತ್ತ ಚಿರತೆ ತನ್ನ ಚಾಣಾಕ್ಷತೆಯಿಂದ ಸಿಂಹಿಣಿಯ ದಾಳಿಯನ್ನು ತಪ್ಪಿಸಿ ಕೊಂಡಿದೆ. ಈ ಮೈ ಜುಮ್ಮ್ ಎನಿಸುವ ಕಾದಾಟದ ವಿಡಿಯೋ ವೈರಲ್ ಆಗುತ್ತಿದ್ದಂತೆ ಹತ್ತು ಮಿಲಿಯನ್ಸ್ ಗೂ ಅಧಿಕ ವೀಕ್ಷಣೆಗಳನ್ನು ಕಂಡಿದೆ.
ವೀಡಿಯೋ ನೋಡಿ ನೆಟ್ಟಿಗರು, ಕ್ರೂರ ಪ್ರಾಣಿಗಳ ಕಾದಾಟದ ಬಗ್ಗೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರನು “ಪ್ರಕೃತಿಯನ್ನು ಪ್ರಕೃತಿಗಾಗಿ ನಿರ್ಮಿಸಲಾಗಿದೆ” ಎಂದು ಬರೆದಿದ್ದಾರೆ. ಮತ್ತೊಬ್ಬರು, ‘ಈ ಕ್ರೂರ ಪ್ರಾಣಿಗಳು ಮರದಲ್ಲಿ ಏನು ಮಾಡುತ್ತಿವೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರ ಬಳಕೆದಾರರು, ‘ಈ ಪ್ರಾಣಿಗಳ ಕಾದಾಟ ನೋಡುವುದಕ್ಕೆ ಭಯಂಕರವಾಗಿದೆ’ ಎಂದಿದ್ದಾರೆ.

The post ಸಿಂಹಿಣಿ ಹಾಗೂ ಚಿರತೆಯ ರೋಚಕ ಕಾಳಗದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್.! appeared first on Good News 24x7.

]]>
ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಚಿರತೆ ಸೆರೆ ಕಾರ್ಯಾಚರಣೆ: ಈಶ್ವರ ಖಂಡ್ರೆ ಮಾಹಿತಿ. https://www.goodnews24x7.com/%e0%b2%ae%e0%b3%88%e0%b2%b8%e0%b3%82%e0%b2%b0%e0%b2%bf%e0%b2%a8-%e0%b2%87%e0%b2%a8%e0%b3%8d%e0%b2%ab%e0%b3%8b%e0%b2%b8%e0%b2%bf%e0%b2%b8%e0%b3%8d-%e0%b2%86%e0%b2%b5%e0%b2%b0%e0%b2%a3%e0%b2%a6%e0%b2%b2/ Wed, 01 Jan 2025 04:28:50 +0000 https://www.goodnews24x7.com/?p=1436 ಬೆಂಗಳೂರು : ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಚಿರತೆ ಸಂಚಾರದ ವಿಷಯ ತಿಳಿದ ಕೂಡಲೇ ಚಿರತೆ ಸೆರೆ ಹಿಡಿಯಲು ಚಿರತೆ ಕಾರ್ಯಪಡೆ ತಂಡವನ್ನು ಕಳುಹಿಸಲಾಗಿದೆ. ತಂಡದಲ್ಲಿ ಪಶುವೈದ್ಯರು, ಚಿರತೆ ಸೆರೆ ತರಬೇತಿ ಪಡೆದ 40 ಸಿಬ್ಬಂದಿ ಇದ್ದಾರೆ. ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳೂ ಸ್ಥಳದಲ್ಲಿದ್ದು,…

The post ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಚಿರತೆ ಸೆರೆ ಕಾರ್ಯಾಚರಣೆ: ಈಶ್ವರ ಖಂಡ್ರೆ ಮಾಹಿತಿ. appeared first on Good News 24x7.

]]>

ಬೆಂಗಳೂರು : ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಚಿರತೆ ಸಂಚಾರದ ವಿಷಯ ತಿಳಿದ ಕೂಡಲೇ ಚಿರತೆ ಸೆರೆ ಹಿಡಿಯಲು ಚಿರತೆ ಕಾರ್ಯಪಡೆ ತಂಡವನ್ನು ಕಳುಹಿಸಲಾಗಿದೆ. ತಂಡದಲ್ಲಿ ಪಶುವೈದ್ಯರು, ಚಿರತೆ ಸೆರೆ ತರಬೇತಿ ಪಡೆದ 40 ಸಿಬ್ಬಂದಿ ಇದ್ದಾರೆ. ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳೂ ಸ್ಥಳದಲ್ಲಿದ್ದು, ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಿಸಿ ಟಿವಿಯಲ್ಲಿ ಚಿರತೆ ಸಂಚಾರದ ದೃಶ್ಯಗಳು ಸೆರೆಯಾಗಿದ್ದು, ಇಂದು ಮಧ್ಯಾಹ್ನ 12ರ ಸುಮಾರಿನಲ್ಲಿ ಚಿರತೆ ಇರುವಿಕೆ ಖಚಿತವಾದ ಹಿನ್ನೆಲೆಯಲ್ಲಿ ತುರ್ತು ಕಾರ್ಯಾಚರಣೆಗೆ ಸೂಚನೆ ನೀಡಲಾಗಿದೆ. ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದು ಆತಂಕ ಪಡುವ ಅಗತ್ಯವಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಬಲೆ, ಅರವಳಿಕೆ ಔಷಧದೊಂದಿಗೆ ಸಜ್ಜಾಗಿದ್ದಾರೆ.

ಇನ್ಫೋಸಿಸ್ ಆವರಣ ಸುಮಾರು 350 ಎಕರೆಯಷ್ಟಿದ್ದು, ಕೆಲವು ಭಾಗ ಕಾಡಿನಂತೆಯೇ ಇದೆ. ಇಲ್ಲಿ ಕಾರ್ಯಾಚರಣೆ ಸಾಹಸವೇ ಸರಿ. ಆದರೂ ಕಾರ್ಯಾಚರಣೆ ನಡೆಯುತ್ತಿದೆ. ಚಿರತೆ ಸಮೀಪದ ವಸತಿ ಪ್ರದೇಶಗಳಿಗೆ ನುಗ್ಗದಂತೆ ಸಹ ಕ್ರಮ ವಹಿಸಲಾಗಿದೆ. ಚಿರತೆ ಪತ್ತೆಗೆ ಥರ್ಮಲ್ ಕ್ಯಾಮರಾ ಅಳವಡಿಸಿದ ಡ್ರೋನ್ ಸಹ ಬಳಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಶೀಘ್ರವೇ ಚಿರತೆ ಸೆರೆ ಹಿಡಿದು ಜನರ ಆತಂಕ ದೂರ ಮಾಡುತ್ತಾರೆ ಎಂಬ ವಿಶ್ವಾಸವನ್ನು ಈಶ್ವರ ಖಂಡ್ರೆ ವ್ಯಕ್ತಪಡಿಸಿದ್ದಾರೆ.

The post ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಚಿರತೆ ಸೆರೆ ಕಾರ್ಯಾಚರಣೆ: ಈಶ್ವರ ಖಂಡ್ರೆ ಮಾಹಿತಿ. appeared first on Good News 24x7.

]]>