Lokayukta Archives - Good News 24x7 https://www.goodnews24x7.com/tag/lokayukta/ Kannada Tue, 07 Jul 2026 09:15:57 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Lokayukta Archives - Good News 24x7 https://www.goodnews24x7.com/tag/lokayukta/ 32 32 ರಾಷ್ಟ್ರಪತಿಗಳ‌ ಹೆಸರಿನಲ್ಲಿರುವ ಜಾಗ ಕಬಳಿಕೆ ಲೋಕಾಯುಕ್ತಕ್ಕೆ ದೂರು https://www.goodnews24x7.com/complaint-to-lokayukta-against-land-in-the-name-of-the-president/ Tue, 07 Jul 2026 09:15:57 +0000 https://www.goodnews24x7.com/?p=9778 ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ರಾಷ್ಟ್ರಪತಿಗಳ ಹೆಸರಿನಲ್ಲಿದ್ದ₹100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕೇಂದ್ರ ಇಂಧನ ಸಚಿವಾಲಯದ ಜಾಗವನ್ನು ಸಚಿವ ಕೃಷ್ಣಭೈರೇಗೌಡರ ಆಪ್ತ ಎನ್ನಲಾದ ಕೆ.ಎಂ. ಚೇತನ್ ಕಬಳಿಸಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಕೊಡಿಗೇಹಳ್ಳಿ…

The post ರಾಷ್ಟ್ರಪತಿಗಳ‌ ಹೆಸರಿನಲ್ಲಿರುವ ಜಾಗ ಕಬಳಿಕೆ ಲೋಕಾಯುಕ್ತಕ್ಕೆ ದೂರು appeared first on Good News 24x7.

]]>

ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ರಾಷ್ಟ್ರಪತಿಗಳ ಹೆಸರಿನಲ್ಲಿದ್ದ₹100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕೇಂದ್ರ ಇಂಧನ ಸಚಿವಾಲಯದ ಜಾಗವನ್ನು ಸಚಿವ ಕೃಷ್ಣಭೈರೇಗೌಡರ ಆಪ್ತ ಎನ್ನಲಾದ ಕೆ.ಎಂ. ಚೇತನ್ ಕಬಳಿಸಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಕೊಡಿಗೇಹಳ್ಳಿ ಗ್ರಾಮದಲ್ಲಿನ ಚೇರ್‌ಮ್ಯಾನ್ ಕ್ಲಬ್ ಪಕ್ಕದಲ್ಲಿರುವ ಜಾಗವನ್ನು ಕಬಳಿಸಲಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ರಾಷ್ಟ್ರಪತಿಗಳ‌ ಹೆಸರಿನಲ್ಲಿರುವ ಜಾಗ ಕಬಳಸಿದ್ರಾ ಸಚಿವರ ಆಪ್ತ?
ಬಿಜೆಪಿ ಮುಖಂಡ ಎನ್.ಆರ್. ರಮೇಶ್​​ರಿಂದ ಗಂಭೀರ ಆರೋಪ
ಕೆ.ಎಂ. ಚೇತನ್​​ ಎಂಬವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ
ಸಚಿವ ಕೃಷ್ಣ ಭೈರೇಗೌಡರ ಆಪ್ತ ಎನ್ನಲಾಗಿರುವ ಕೆ.ಎಂ. ಚೇತನ್​​ ಎಂಬವರ ವಿರುದ್ಧ ಭಾರತದ‌ ರಾಷ್ಟ್ರಪತಿಗಳ‌ ಹೆಸರಿನಲ್ಲಿರುವ ನೂರಾರು ಕೋಟಿ ಮೌಲ್ಯದ ಸರ್ಕಾರಿ ಸ್ವತ್ತು ಕಬಳಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗ ಕಬಳಿಸಲಾಗಿದೆ ಎಂದು ಆರೋಪಿಸಿ 2015-2020ರ ಅವಧಿಯಲ್ಲಿ ಬ್ಯಾಟರಾಯನಪುರದ ಕೊಡಿಗೇಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯರಾಗಿದ್ದ ಚೇತನ್​​ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದೂರು ಸಲ್ಲಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಕೊಡಿಗೇಹಳ್ಳಿ ಗ್ರಾಮದಲ್ಲಿನ ಚೇರ್‌ಮ್ಯಾನ್ ಕ್ಲಬ್ ಪಕ್ಕದಲ್ಲಿರುವ ಜಾಗವನ್ನು ಕಬಳಿಸಲಾಗಿದೆ. ಕೇಂದ್ರ ಇಂಧನ ಸಚಿವಾಲಯದ 32 ಗುಂಟೆ ವಿಸ್ತೀರ್ಣದ ಸ್ವತ್ತನ್ನೂ ಸೇರಿಸಿಕೊಂಡು ಚೇತನ್ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಈ ಜಾಗದ ಮೌಲ್ಯ ಸುಮಾರು 100 ಕೋಟಿ ರೂ.ಗಳಿಗೂ ಹೆಚ್ಚಾಗಿದೆ. ಸರ್ವೆ ನಂಬರ್ 14/1ರ 1 ಎಕರೆ 11 ಗುಂಟೆ ಜಾಗ ಮಾತ್ರ ಕ್ಲಬ್‌ಗೆ ಸೇರಿದೆ. ಅದಕ್ಕೆ ಹೊಂದಿಕೊಡಂತೆ ಪಶ್ಚಿಮ ಭಾಗದಲ್ಲಿ ರಾಷ್ಟ್ರಪತಿಗಳ ಹೆಸರಲ್ಲಿ ಇಂಧನ ಸಚಿವಾಲಯದ ಜಾಗ ಇದ್ದು, ಅಲ್ಲಿ ಇಂಧನ ಸಚಿವಾಲಯದ ಕ್ವಾಟ್ರಸ್‌ಗಳನ್ನ ನಿರ್ಮಿಸಲಾಗಿದೆ. ಅದರ ಹೊರತಾಗಿ ಖಾಲಿ ಇದ್ದ 32 ಗುಂಟೆ ಜಾಗಕ್ಕೆ ರಾತ್ರೋರಾತ್ರಿ ಬೇಲಿ ಹಾಕಿದ್ದಾರೆ. ತಪ್ಪು ಮಾಹಿತಿ ನೀಡಿ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಕೊಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆಇಂಧನ ಸಚಿವಾಲಯ ದೂರು ದಾಖಲಿಸಿದ್ದು, ಉಚ್ಚ ನ್ಯಾಯಲಯದಲ್ಲಿ ವಿಚಾರಣೆ ಕೂಡ ನಡೆದಿದೆ. ಈ ವೇಳೆ ತಪ್ಪನ್ನು ಚೇತನ್​​ ಒಪ್ಪಿಕೊಂಡಿದ್ದಾರೆ. ಅದಾದ ಬಳಿಕ ಏಪ್ರಿಲ್‌ನಲ್ಲಿ ಅಂದಿನ ಕಂದಾಯ ಸಚಿವರಾಗಿದ್ದ ಕೃಷ್ಣಭೈರೇಗೌಡರನ್ನ ಇಂಧನ ಸಚಿವಾಲಯದ ಅಧಿಕಾರಿಗಳು ಭೇಟಿ ಮಾಡುತ್ತಾರೆ. ಆದರೆ ಆ ವೇಳೆ ಅವರನ್ನ ದಬ್ಬಾಳಿಕೆ ಮಾಡಿ ಹೊರದಬ್ಬುವ ಕೆಲಸ ನಡೆದಿದೆ. ಜಾಗವನ್ನ ತಮ್ಮ ವಶಕ್ಕೆ ಪಡೆದುಕೊಳ್ಳಲು ಅಧಿಕಾರಿಗಳು ಹೋದಾಗ ಚೇತನ್, ಅವರ ತಂದೆ ಮಂಜುನಾಥ್, ಕೃಷ್ಣ ಭೈರೇಗೌಡರ ಬೆಂಬಲಿಗರು ಅವರನ್ನಯ ಹೆದರಿಸಿದ್ದಾರೆ. ಶಾಲಿನಿ ರಜನೀಶ್ ಅವರಿಗೂ ಕೂಡ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಅವರು ಕೂಡ ಪರೋಕ್ಷವಾಗಿ ಕೃಷ್ಣಭೈರೇಗೌಡರಿಗೆ ಸಹಕಾರ ನೀಡಿದ್ದಾರೆ. ಈ ವಿಚಾರವಾಗಿ ಲೋಕಾಯುಕ್ತಾಗೆ ದೂರು ನೀಡಿದ್ದು, ಮುಖ್ಯಮಂತ್ರಿಗಳಿಗೂ ಇದರ ದಾಖಲೆ ನೀಡಿ ಸಿಬಿಐ ತನಿಖೆ ಆಗ್ರಹಿಸುತ್ತೇನೆ ಎಂದು ಎನ್.ಆರ್. ರಮೇಶ್ ತಿಳಿಸಿದ್ದಾರೆ.

The post ರಾಷ್ಟ್ರಪತಿಗಳ‌ ಹೆಸರಿನಲ್ಲಿರುವ ಜಾಗ ಕಬಳಿಕೆ ಲೋಕಾಯುಕ್ತಕ್ಕೆ ದೂರು appeared first on Good News 24x7.

]]>
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್‌ ಅಧಿಕಾರಿ https://www.goodnews24x7.com/%e0%b2%b2%e0%b2%82%e0%b2%9a-kas-officer-caught-in-lokayukta-trap-while-accepting-bribe%e0%b2%b8%e0%b3%8d%e0%b2%b5%e0%b3%80%e0%b2%95%e0%b2%b0%e0%b2%bf%e0%b2%b8%e0%b3%81%e0%b2%b5%e0%b2%be%e0%b2%97/ Wed, 29 Apr 2026 11:15:42 +0000 https://www.goodnews24x7.com/?p=9488 ಬೆಂಗಳೂರಿನ ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ ಅಧಿಕಾರಿ ನಾಗಪ್ರಶಾಂತ್, ಬಾಕಿ ಇರುವ ಕಂದಾಯ ಪ್ರಕರಣವೊಂದರಲ್ಲಿ ಅನುಕೂಲಕರ ಆದೇಶ ನೀಡಲು 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಪೈಕಿ ಮೊದಲ ಕಂತಿನ 15 ಲಕ್ಷ ರೂಪಾಯಿಗಳನ್ನು ಈಗಾಗಲೇ ಪಡೆದಿದ್ದ…

The post ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್‌ ಅಧಿಕಾರಿ appeared first on Good News 24x7.

]]>

ಬೆಂಗಳೂರಿನ ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ ಅಧಿಕಾರಿ ನಾಗಪ್ರಶಾಂತ್, ಬಾಕಿ ಇರುವ ಕಂದಾಯ ಪ್ರಕರಣವೊಂದರಲ್ಲಿ ಅನುಕೂಲಕರ ಆದೇಶ ನೀಡಲು 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಪೈಕಿ ಮೊದಲ ಕಂತಿನ 15 ಲಕ್ಷ ರೂಪಾಯಿಗಳನ್ನು ಈಗಾಗಲೇ ಪಡೆದಿದ್ದ ಅವರು, ಇಂದು ದೂರುದಾರ ರವಿಕುಮಾರ್ ಅವರಿಂದ ಎರಡನೇ ಕಂತಿನ 15 ಲಕ್ಷ ರೂಪಾಯಿಗಳನ್ನು ತಮ್ಮ ಹೊರಗುತ್ತಿಗೆ ಚಾಲಕ ಕುಮಾರ್ ಮೂಲಕ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ರೆಡ್‌ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

The post ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್‌ ಅಧಿಕಾರಿ appeared first on Good News 24x7.

]]>
ಅಬಕಾರಿ ಇಲಾಖೆಯಲ್ಲಿ ಬೃಹತ್ ಹಗರಣ: ಬೋಗಸ್ ದಾಖಲೆ ಸೃಷ್ಟಿಸಿ ನೂರಾರು CL-7 ಪರವಾನಗಿ ಮಂಜೂರು! https://www.goodnews24x7.com/massive-scam-in-the-excise-department-hundreds-of-cl-7-licenses-were-granted-by-creating-bogus-documents/ Sun, 12 Apr 2026 07:13:12 +0000 https://www.goodnews24x7.com/?p=9222 ಬೆಂಗಳೂರು : ರಾಜ್ಯ ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಜೇನುಗೂಡು ಈಗ ಲೋಕಾಯುಕ್ತ ತನಿಖೆಯಿಂದ ಬಯಲಾಗಿದೆ. ಮಂಥ್ಲಿ ಮನಿ, ವರ್ಗಾವಣೆ ದಂಧೆ ಹಾಗೂ ಕಿಕ್‌ಬ್ಯಾಕ್ ಆರೋಪಗಳ ನಡುವೆಯೇ, ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರಾರು CL-7 (ಹೋಟೆಲ್ ಮತ್ತು ವಸತಿಗೃಹ) ಪರವಾನಗಿಗಳನ್ನು ಕಾನೂನುಬಾಹಿರವಾಗಿ…

The post ಅಬಕಾರಿ ಇಲಾಖೆಯಲ್ಲಿ ಬೃಹತ್ ಹಗರಣ: ಬೋಗಸ್ ದಾಖಲೆ ಸೃಷ್ಟಿಸಿ ನೂರಾರು CL-7 ಪರವಾನಗಿ ಮಂಜೂರು! appeared first on Good News 24x7.

]]>

ಬೆಂಗಳೂರು : ರಾಜ್ಯ ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಜೇನುಗೂಡು ಈಗ ಲೋಕಾಯುಕ್ತ ತನಿಖೆಯಿಂದ ಬಯಲಾಗಿದೆ. ಮಂಥ್ಲಿ ಮನಿ, ವರ್ಗಾವಣೆ ದಂಧೆ ಹಾಗೂ ಕಿಕ್‌ಬ್ಯಾಕ್ ಆರೋಪಗಳ ನಡುವೆಯೇ, ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರಾರು CL-7 (ಹೋಟೆಲ್ ಮತ್ತು ವಸತಿಗೃಹ) ಪರವಾನಗಿಗಳನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಿರುವುದು ವರದಿಯಲ್ಲಿ ಸಾಬೀತಾಗಿದೆ.

ಅಕ್ರಮದ ಆಳ-ಅಗಲ:
ಬೆಂಗಳೂರು ನಗರ ಜಿಲ್ಲೆಯ ಅಬಕಾರಿ ವಲಯ ಬಿಯುಡಿ-2 ವ್ಯಾಪ್ತಿಯ ಕೆ.ಆರ್. ಪುರ, ಮೇದಹಳ್ಳಿ, ಕೌದೇನಹಳ್ಳಿ, ಬೀದರಹಳ್ಳಿ ಮತ್ತು ರಾಮಪುರ ಪ್ರದೇಶಗಳಲ್ಲಿ ಈ ಅಕ್ರಮ ಅವಿಶ್ರಾಂತವಾಗಿ ನಡೆದಿದೆ. ತನಿಖಾ ವರದಿಯ ಪ್ರಕಾರ, ಅಧಿಕಾರಿಗಳು ಲೈಸೆನ್ಸ್ ನೀಡಲು ಅನುಸರಿಸಿದ ದಾರಿಗಳು ದಿಗಿಲು ಹುಟ್ಟಿಸುವಂತಿವೆ:

ನಕಲಿ ನೀಲನಕಾಶೆ: ಈಗಾಗಲೇ ಇರುವ CL-9 (ಬಾರ್ ಆ್ಯಂಡ್ ರೆಸ್ಟೋರೆಂಟ್) ಕೊಠಡಿಗಳನ್ನೇ CL-7 ಕೊಠಡಿಗಳೆಂದು ಬಿಂಬಿಸಲಾಗಿದೆ.
ದಾಖಲೆಗಳ ಮರೆಯಲ್ಲಿ ವಂಚನೆ: ಬೇರೆ ಕಟ್ಟಡದ ಕಿಚನ್, ಡೈನಿಂಗ್ ಹಾಲ್ ಹಾಗೂ ಶೌಚಾಲಯಗಳ ಛಾಯಾಚಿತ್ರಗಳನ್ನು ನೀಡಿ ಪರವಾನಗಿ ಪಡೆಯಲಾಗಿದೆ.
ಕೆರೆ ಜಾಗದಲ್ಲಿ ಪಾರ್ಕಿಂಗ್: ಪಾರ್ಕಿಂಗ್ ವ್ಯವಸ್ಥೆ ತೋರಿಸಲು ಕೆರೆ ಅಂಗಳದ ಜಾಗವನ್ನು ಬಳಸಿಕೊಳ್ಳಲಾಗಿದ್ದು, ಸುಳ್ಳು ಟ್ರೇಡ್ ಲೈಸೆನ್ಸ್ ಸೃಷ್ಟಿಸಲಾಗಿದೆ.
ಅಸ್ತಿತ್ವವಿಲ್ಲದ ಕಟ್ಟಡ: ಹಲವೆಡೆ ಕಟ್ಟಡಗಳೇ ಇಲ್ಲದಿದ್ದರೂ ಕಾಗದದ ಮೇಲೆ ಸಕಲ ಸೌಲಭ್ಯಗಳಿವೆಯೆಂದು ತೋರಿಸಿ ಲೈಸೆನ್ಸ್ ಮಂಜೂರು ಮಾಡಲಾಗಿದೆ.

ಆರೋಪಿತ ಅಧಿಕಾರಿಗಳ ‘ಕರಾಮತ್ತು’:
ಈ ಬೃಹತ್ ಹಗರಣದಲ್ಲಿ ಅಬಕಾರಿ ಉಪ ಆಯುಕ್ತ ಅಜಿತ್‌ಕುಮಾರ್ ಉಪ ಅಧೀಕ್ಷಕ ತುಕಾರಂ ನಾಯಕ್ ಮತ್ತು ನಿರೀಕ್ಷಕ ಭರತ್ ಎಂಬುವವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿವೆ. ಇವರು ಜಿಲ್ಲಾಧಿಕಾರಿಗಳಿಗೆ ತಪ್ಪು ವರದಿ ನೀಡಿ ದಾರಿ ತಪ್ಪಿಸಿದ್ದಲ್ಲದೆ, ಮಧ್ಯವರ್ತಿಗಳ ಮೂಲಕ ಪ್ರತಿ ಲೈಸೆನ್ಸ್‌ಗೆ ಕೋಟ್ಯಂತರ ರೂಪಾಯಿ ಲಂಚ ಪಡೆದಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ವಕೀಲ ಡಾ. ಹರಿಪ್ರಸಾದ್ ಅವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತರು ನಡೆಸಿದ ತನಿಖೆಯಲ್ಲಿ ಈ ಎಲ್ಲಾ ಸತ್ಯಾಂಶಗಳು ಸಾಬೀತಾಗಿವೆ.

ವರ್ಗಾವಣೆ ದಂಧೆ ಮತ್ತು ಸಾರ್ವಜನಿಕರ ಆಕ್ರೋಶ:
ಬೆಂಗಳೂರಿನಲ್ಲೇ ಸುಮಾರು 30 ವರ್ಷಗಳಿಂದ ಬೇರೂರಿರುವ ಕೆಲ ಅಧಿಕಾರಿಗಳು ಸಿಂಡಿಕೇಟ್ ಮಾಡಿಕೊಂಡು ಆಯಕಟ್ಟಿನ ಜಾಗಗಳಿಗಾಗಿ ಕೋಟ್ಯಂತರ ರೂ. ಲಂಚ ನೀಡುತ್ತಿದ್ದಾರೆ ಎಂಬ ಅಂಶವೂ ವರದಿಯಲ್ಲಿದೆ. ವರ್ಗಾವಣೆ ಪ್ರಕ್ರಿಯೆ ಆರಂಭವಾಗುತ್ತಿರುವ ಬೆನ್ನಲ್ಲೇ ಈ ಭ್ರಷ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು (Suspend) ಮಾಡಬೇಕೆಂದು ಸಾರ್ವಜನಿಕ ವಲಯದಲ್ಲಿ ತೀವ್ರ ಒತ್ತಾಯ ಕೇಳಿಬಂದಿದೆ.

The post ಅಬಕಾರಿ ಇಲಾಖೆಯಲ್ಲಿ ಬೃಹತ್ ಹಗರಣ: ಬೋಗಸ್ ದಾಖಲೆ ಸೃಷ್ಟಿಸಿ ನೂರಾರು CL-7 ಪರವಾನಗಿ ಮಂಜೂರು! appeared first on Good News 24x7.

]]>
ಲೋಕಾ ರೈಡ್ ವೇಳೆ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು! https://www.goodnews24x7.com/gold-silver-cash-seized-during-lokayukta-raidgold-silver-cash-seized-during-lokayukta-raid/ Thu, 05 Mar 2026 12:51:14 +0000 https://www.goodnews24x7.com/?p=8682   ಮಂಡ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಕೆಲಸಗಳ ಇಲಾಖೆ (PWD) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಸತೀಶ್ ಅವರ ನಿವಾಸ ಮತ್ತು ಕಚೇರಿ ಸೇರಿದಂತೆ ಒಟ್ಟು ನಾಲ್ಕು ಸ್ಥಳಗಳ ಮೇಲೆ…

The post ಲೋಕಾ ರೈಡ್ ವೇಳೆ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು! appeared first on Good News 24x7.

]]>

 

ಮಂಡ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಕೆಲಸಗಳ ಇಲಾಖೆ (PWD) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಸತೀಶ್ ಅವರ ನಿವಾಸ ಮತ್ತು ಕಚೇರಿ ಸೇರಿದಂತೆ ಒಟ್ಟು ನಾಲ್ಕು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

ಮಂಡ್ಯದ ಬಂಡಿಗೌಡ ಬಡಾವಣೆಯಲ್ಲಿರುವ ಎಇಇ ಸತೀಶ್ ಅವರ ಮನೆ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದ್ದು, ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾಗ, ಎಇಇ ಸತೀಶ್ ಮತ್ತು ಅವರ ಪತ್ನಿ ಮೌನವಾಗಿದ್ದರು ಎಂದು ವರದಿಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

The post ಲೋಕಾ ರೈಡ್ ವೇಳೆ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು! appeared first on Good News 24x7.

]]>
ಪೋಕ್ಸೊ ಕೇಸಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲು ಲಂಚಕ್ಕೆ ಬೇಡಿಕೆ- ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ! https://www.goodnews24x7.com/police-officer-caught-in-lokayukta-trap-for-demanding-bribe-to-file-chargesheet-in-pocso-case/ Thu, 04 Sep 2025 05:56:19 +0000 https://www.goodnews24x7.com/?p=7328 ಬೆಂಗಳೂರು: ಲಂಚ ಸ್ವೀಕರಿಸುವ ವೇಳೆ ದೇವನಹಳ್ಳಿ ಪೊಲೀಸ್ ಸಿಬ್ಬಂದಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಮಹಿಳಾ ಪಿಎಸ್‌ಐ ಜಗದೇವಿ ಪರಾರಿಯಾಗಿದ್ದಾರೆ. 70 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು, 50 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಮಯದಲ್ಲಿ ದೇವನಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ ಅಮರೇಶ್ ಲೋಕಾಯುಕ್ತ ಬಲೆಗೆ…

The post ಪೋಕ್ಸೊ ಕೇಸಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲು ಲಂಚಕ್ಕೆ ಬೇಡಿಕೆ- ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ! appeared first on Good News 24x7.

]]>

ಬೆಂಗಳೂರು: ಲಂಚ ಸ್ವೀಕರಿಸುವ ವೇಳೆ ದೇವನಹಳ್ಳಿ ಪೊಲೀಸ್ ಸಿಬ್ಬಂದಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಮಹಿಳಾ ಪಿಎಸ್‌ಐ ಜಗದೇವಿ ಪರಾರಿಯಾಗಿದ್ದಾರೆ.

70 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು, 50 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಮಯದಲ್ಲಿ ದೇವನಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ ಅಮರೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪೋಕ್ಸೊ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಮಹಿಳೆಯೊಬ್ಬರು ನೀಡಿದ್ದ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು.

ದೇವನಹಳ್ಳಿ ಠಾಣೆ ಪಿಎಸ್‌ಐ ಜಗದೇವಿ, ಕಾನ್ಸ್‌ಟೇಬಲ್‌ಗಳಾದ ಮಂಜುನಾಥ್, ಅಮರೇಶ್ ವಿರುದ್ದ ದೂರು ದಾಖಲಾಗಿತ್ತು. ಪೋಕ್ಸೊ ಕೇಸ್‌ನಲ್ಲಿ ಚಾರ್ಜ್‌ಶೀಟ್ ಹಾಕಲು 70 ಸಾವಿರ ಲಂಚ ಕೇಳಿದ್ದರು. ಸದ್ಯ ಲೋಕಾಯುಕ್ತ ದಾಳಿ ವೇಳೆ ಪಿಎಸ್‌ಐ ಜಗದೇವಿ ಹಾಗೂ ಕಾನ್ಸ್‌ಟೇಬಲ್ ಮಂಜುನಾಥ್ ಪರಾರಿಯಾಗಿದ್ದಾರೆ. ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

The post ಪೋಕ್ಸೊ ಕೇಸಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲು ಲಂಚಕ್ಕೆ ಬೇಡಿಕೆ- ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ! appeared first on Good News 24x7.

]]>
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ಅಧಿಕಾರಿ. https://www.goodnews24x7.com/revenue-officer-caught-in-lokayukta-trap-while-accepting-bribe/ Sun, 22 Jun 2025 11:06:13 +0000 https://www.goodnews24x7.com/?p=4601 ಮೈಸೂರು : ಲಂಚ ಸ್ವೀಕರಿಸುವಾಗ ಕಂದಾಯ ಅಧಿಕಾರಿ, ಬಿಲ್ ಕಲೆಕ್ಟರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ-4 ರ ಕಂದಾಯ ಅಧಿಕಾರಿ ಎಂ.ಎನ್.ನಂದೀಶ್ ಮತ್ತು ಬಿಲ್ ಕಲೆಕ್ಟರ್ ರಜಾಕ್ ಲೋಕಾಯುಕ್ತ ಬಲೆಗೆ ಬಿದ್ದವರು.…

The post ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ಅಧಿಕಾರಿ. appeared first on Good News 24x7.

]]>

ಮೈಸೂರು : ಲಂಚ ಸ್ವೀಕರಿಸುವಾಗ ಕಂದಾಯ ಅಧಿಕಾರಿ, ಬಿಲ್ ಕಲೆಕ್ಟರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ-4 ರ ಕಂದಾಯ ಅಧಿಕಾರಿ ಎಂ.ಎನ್.ನಂದೀಶ್ ಮತ್ತು ಬಿಲ್ ಕಲೆಕ್ಟರ್ ರಜಾಕ್ ಲೋಕಾಯುಕ್ತ ಬಲೆಗೆ ಬಿದ್ದವರು.
ಇ-ಸ್ವತ್ತು ಮಾಡಿಕೊಡಲು ವ್ಯಕ್ತಿಯೊಬ್ಬರ ಬಳಿ ರೂ. 25,000/-(ಇಪ್ಪತ್ತೈದು ಸಾವಿರ ರೂಪಾಯಿಗಳು) ಲಂಚದ ಹಣಕ್ಕೆ ಇಬ್ಬರು ಬೇಡಿಕೆ ಇಟ್ಟಿದ್ದರು. ಈ ಸಂಬಂಧ ವ್ಯಕ್ತಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

ಇಂದು ಆರೋಪಿಗಳಾದ ಕಂದಾಯ ಅಧಿಕಾರಿ ಎಂ.ಎನ್.ನಂದೀಶ್ ಮತ್ತು ಬಿಲ್ ಕಲೆಕ್ಟರ್ ರಜಾಕ್ ಅವರು ವ್ಯಕ್ತಿಯಿಂದ ಲಂಚದ ಹಣವನ್ನು ಪಡೆದುಕೊಳ್ಳುವಾಗ ಮೈಸೂರು ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಬಿದ್ದಿದ್ದಾರೆ.

 


ಪೊಲೀಸ್ ಮಹಾನಿರ್ದೇಶಕ ಮನೀಷ್ ಕರ್ಬೀಕರ್ ಮತ್ತು ಪೊಲೀಸ್ ಮಹಾನಿರೀಕ್ಷಕ ಸುಬ್ರಹ್ಮಣೇಶ್ವರರಾವ್ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಅಧೀಕ್ಷಕ ಉದೇಶ.ಟಿ.ಜೆ, ನೇತೃತ್ವದಲ್ಲಿ ಮೈಸೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಉಮೇಶ್.ಪಿ, ಲೋಕೇಶ್, ರವಿಕುಮಾರ್, ಸಿಬ್ಬಂದಿಯವರುಗಳಾದ ಲೋಕೇಶ್.ಆ‌ರ್.ಎನ್, ಗೋಪಿ.ಹೆಚ್.ಎನ್, ಲೋಕೇಶ್ ರಾಜೇ ಅರಸ್, ಕಾಂತರಾಜು, ಮೋಹನ್‌ಗೌಡ, ಮೋಹನ್ ಕುಮಾ‌ರ್, ಲೋಕೇಶ್, ದಿನೇಶ್, ಈ ಕಾರ್ಯಾಚರಣೆ ನಡೆದಿದೆ.

The post ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ಅಧಿಕಾರಿ. appeared first on Good News 24x7.

]]>
ಕೈ MLA ಪುಟ್ಟರಂಗ ಶೆಟ್ಟಿಗೆ ಸಂಕಷ್ಟ , ವಿಧಾನದ 25 ಲಕ್ಷ ಕಿಕ್ ಬ್ಯಾಕ್ ಪ್ರಕರಣ; ಹೆಚ್ಚುವರಿ ತನಿಖೆಗೆ ಹೈ ಕೋರ್ಟ್ ಆದೇಶ. https://www.goodnews24x7.com/%e0%b2%95%e0%b3%88-mla-%e0%b2%aa%e0%b3%81%e0%b2%9f%e0%b3%8d%e0%b2%9f%e0%b2%b0%e0%b2%82%e0%b2%97-%e0%b2%b6%e0%b3%86%e0%b2%9f%e0%b3%8d%e0%b2%9f%e0%b2%bf%e0%b2%97%e0%b3%86-%e0%b2%b8%e0%b2%82%e0%b2%95/ Tue, 04 Feb 2025 07:04:40 +0000 https://www.goodnews24x7.com/?p=2219 ಆರು ವರ್ಷಗಳ ಹಿಂದೆ ಸಚಿವರಿಗೆ ತಲುಪಬೇಕಿದ್ದ 25.76 ಲಕ್ಷ ರೂ.ಗಳು ವಿಧಾನಸೌಧದಲ್ಲಿಯೇ ಜಪ್ತಿಯಾದ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಲೋಕಾಯುಕ್ತ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ. ಇದರ ಬೆನ್ನಲ್ಲೇ ಪ್ರಕರಣಕ್ಕೆ ಮರುಜೀವ ನೀಡಲು ಪ್ರತ್ಯೇಕ ತನಿಖಾ ತಂಡ ನೇಮಿಸುವ ಕುರಿತು…

The post ಕೈ MLA ಪುಟ್ಟರಂಗ ಶೆಟ್ಟಿಗೆ ಸಂಕಷ್ಟ , ವಿಧಾನದ 25 ಲಕ್ಷ ಕಿಕ್ ಬ್ಯಾಕ್ ಪ್ರಕರಣ; ಹೆಚ್ಚುವರಿ ತನಿಖೆಗೆ ಹೈ ಕೋರ್ಟ್ ಆದೇಶ. appeared first on Good News 24x7.

]]>

ಆರು ವರ್ಷಗಳ ಹಿಂದೆ ಸಚಿವರಿಗೆ ತಲುಪಬೇಕಿದ್ದ 25.76 ಲಕ್ಷ ರೂ.ಗಳು ವಿಧಾನಸೌಧದಲ್ಲಿಯೇ ಜಪ್ತಿಯಾದ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಲೋಕಾಯುಕ್ತ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ.
ಇದರ ಬೆನ್ನಲ್ಲೇ ಪ್ರಕರಣಕ್ಕೆ ಮರುಜೀವ ನೀಡಲು ಪ್ರತ್ಯೇಕ ತನಿಖಾ ತಂಡ ನೇಮಿಸುವ ಕುರಿತು ಲೋಕಾಯುಕ್ತ ಉನ್ನತ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಮರುತನಿಖೆ ಹಿನ್ನೆಲೆಯಲ್ಲಿ ಹಾಲಿ ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಅನಂತಶಂಕರ್, ಶ್ರೀನಿಧಿ ಸೇರಿದಂತೆ ಐವರು ಮಧ್ಯವರ್ತಿಗಳು, ಹಲವು ಗುತ್ತಿಗೆದಾರರಿಗೆ ಪುನಃ ಲೋಕಾಯುಕ್ತ ವಿಚಾರಣೆಯ ಬಿಸಿತಟ್ಟುವ ಸಾಧ್ಯತೆ ನಿಚ್ಚಳವಾಗಿವೆ. ಅಂದಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿ ಸಿಬ್ಬಂದಿಗೆ ಗುತ್ತಿಗೆದಾರರ ಪರವಾಗಿ ಲಂಚ ಕೊಟ್ಟಿದ್ದ ಮಧ್ಯವರ್ತಿಗಳಿಗೆ ‘ಕ್ಲೀನ್ ಚಿಟ್’ ಹಾಗೂ ಭ್ರಷ್ಟಾಚಾರದ ಕುರಿತ ಆಳ ತನಿಖೆಯನ್ನೇ ಕೈಗೊಳ್ಳದ ‘ಲೋಕಾ’ ಕಾರ್ಯವೈಖರಿ ಕುರಿತು ಹಲವು ಪ್ರಶ್ನೆಗಳು ಎದ್ದಿದ್ದವು. ಈ ಅಂಶಗಳನ್ನು ಪುಷ್ಟಿಕರಿಸುವಂತೆ ಇಡೀ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಶೇ.6ರಷ್ಟು ಕಮಿಷನ್ ನಡೆಯುತ್ತಿತ್ತು!:
ಆರೋಪಿ ಮೋಹನ್‌ಕುಮಾರ್, “2019ರ ಜ.3 ಹಾಗೂ 4ರಂದು ಗುತ್ತಿಗೆದಾರರ ಪರವಾಗಿ ಅನಂತಶಂಕರ್, ಶ್ರೀನಿಧಿ, ನಂದನ್, ಎ.ವಿ. ಮಂಜುನಾಥ, ಕೃಷ್ಣಮೂರ್ತಿ ಅವರಿಂದ ಪ್ರತ್ಯೇಕವಾಗಿ 25.76 ಲಕ್ಷ ರೂ. ಸಂಗ್ರಹಿಸಿ ಸಚಿವರ ಕೊಠಡಿಯಲ್ಲಿಯೇ ಇರಿಸಿದ್ದ. ಜ.4 ರಂದು ಹಣವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಸಚಿವರಿಗೆ ಲಂಚವಾಗಿ ನೀಡಲು ತೆರಳುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದೆ. ಎಂದು ತಪ್ರೊಪ್ಪಿಗೆ ಹೇಳಿಕೆ ನೀಡಿದ್ದರು.

ಅಷ್ಟೇ ಅಲ್ಲದೆ, “ಸಚಿವ ಪುಟ್ಟರಂಗಶೆಟ್ಟಿ ಅವರು ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ನಡೆಯುವ ಕಾಮಗಾರಿಗಳಿಗೆ ಶೇ.6ರಷ್ಟು ಕಮಿಷನ್ ಪಡೆಯುತ್ತಾರೆ,” ಎಂಬ ಸಂಗತಿಯನ್ನು ಮೋಹನ್‌ಕುಮಾರ್, ಗುತ್ತಿಗೆದಾರರಿಗೆ ತಿಳಿಸಿದ್ದರು. ಜತೆಗೆ, ಮೋಹನ್ ಕುಮಾರ್. ಬಳಿ ದೊರೆತ ಹಣ ಯಾವ್ಯಾವ ಕ್ಷೇತ್ರದ ಕಾಮಗಾರಿಗೆ ಯಾವ ಗುತ್ತಿಗೆದಾರರು ಮಧ್ಯವರ್ತಿಗಳ ಬಳಿ ಕೊಟ್ಟುಕಳಿಸಿದ್ದ ಕಮಿಷನ್ ಎಂಬುದೂ ತನಿಖೆಯಲ್ಲಿ ಗೊತ್ತಾಗಿತ್ತು. ಪೂರಕ ಸಾಕ್ಷ್ಯಾಧಾರಗಳು ದೊರೆತರೂ ಸರಕಾರಿ ವ್ಯವಸ್ಥೆಯಲ್ಲಿ ಆಳವಾಗಿ ಹುದುಗಿರುವ ಭ್ರಷ್ಟಾಚಾರದ ಕುರಿತು ಲೋಕಾಯುಕ್ತ ಆಳವಾಗಿ ತನಿಖೆ ನಡೆಸಿಲ್ಲ. ಜತೆಗೆ, ಸಹ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿ ಕೈ ತೊಳೆದುಕೊಂಡಿದ್ದಾರೆ. ಹೀಗಾಗಿ, ಪ್ರಕರಣ ಹೆಚ್ಚುವರಿ ತನಿಖೆ ನಡೆಯಬೇಕಿದೆ ಎಂದು ಮೂಲಗಳು ತಿಳಿಸಿವೆ.
ಕ್ಲೀನ್ ಚಿಟ್ ನೀಡಿತ್ತು ಲೋಕಾಯುಕ್ತ
2019ರ ಜ.4ರಂದು ಅಂದಿನ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯ ಟೈಪಿಸ್ಟ್‌ಎಸ್.ಜೆ. ಮೋಹನ್ ಕುಮಾರ್ ಬಳಿ 25.76 ಲಕ್ಷರೂ. ನಗದು ಇದ್ದ ಬ್ಯಾಗನ್ನು ವಿಧಾನಸೌಧ ಗೇಟ್‌ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದರು. ಅನಧಿ ಕೃತವಾಗಿ ದೊರೆತಿದ್ದ ಹಣ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಎಸಿಬಿ ಅಧಿಕಾರಿಗಳು, ಮೋಹನ್ ಕುಮಾರ್, ಶ್ರೀನಿಧಿ, ಆನಂತಶಂಕರ್, ನಂದನ, ಮಂಜುನಾಥ್, ಕೃಷ್ಣಮೂರ್ತಿ ಅವರನ್ನು ಆರೋಪಿಗಳನ್ನಾಗಿ ಪರಿಗಣಿಸಿ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅನ್ವಯ ತನಿಖೆ ನಡೆಸುತ್ತಿದ್ದರು. ಈ ಪ್ರಕರಣ 2023ರಲ್ಲಿ ಲೋಕಾಯುಕ್ತಕ್ಕೆ ಹಸ್ತಾಂತರವಾಗಿದ್ದು, ತನಿಖಾಧಿಕಾರಿಯು ಮೋಹನ್‌ಕುಮಾರ್ ಅವರನ್ನು ಮಾತ್ರ ಆರೋಪಿಯನ್ನಾಗಿ ಪರಿಗಣಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.

The post ಕೈ MLA ಪುಟ್ಟರಂಗ ಶೆಟ್ಟಿಗೆ ಸಂಕಷ್ಟ , ವಿಧಾನದ 25 ಲಕ್ಷ ಕಿಕ್ ಬ್ಯಾಕ್ ಪ್ರಕರಣ; ಹೆಚ್ಚುವರಿ ತನಿಖೆಗೆ ಹೈ ಕೋರ್ಟ್ ಆದೇಶ. appeared first on Good News 24x7.

]]>
ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು https://www.goodnews24x7.com/complaint-to-lokayukta-against-raghu-kautilya/ Sat, 19 Oct 2024 06:19:52 +0000 https://www.goodnews24x7.com/?p=875 ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ಕಾನೂನು ಬಾಹಿರವಾಗಿ ಸಿ.ಎ ನಿವೇಶನ ಪಡೆದಿದ್ದಾರೆಂದು ಆರೋಪಿಸಿ ಬಿಜೆಪಿ ಮುಖಂಡ ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ನಾಗೇಂದ್ರ ಎಂಬುವವರು ರಘು ಕೌಟಿಲ್ಯ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ್ದು ಇದಕ್ಕೆ ಸಂಬಂಧಪಟ್ಟ ಎಲ್ಲಾ…

The post ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು appeared first on Good News 24x7.

]]>

ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

ಕಾನೂನು ಬಾಹಿರವಾಗಿ ಸಿ.ಎ ನಿವೇಶನ ಪಡೆದಿದ್ದಾರೆಂದು ಆರೋಪಿಸಿ ಬಿಜೆಪಿ ಮುಖಂಡ ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ನಾಗೇಂದ್ರ ಎಂಬುವವರು ರಘು ಕೌಟಿಲ್ಯ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ್ದು ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನು ನಾಗೇಂದ್ರ ಅವರು ಸಲ್ಲಿಸಿದ್ದಾರೆ ಎನ್ನಲಾಗಿದೆ.

ಜೆ. ರಂಗಣ್ಣ ಲಕ್ಷ್ಮಮ್ಮ ಚಾರಿಟಬಲ್ ಟ್ರಸ್ಟ್ ಗ ಕಾನೂನು ಬಾಹಿರ ಸಿ.ಎ ನಿವೇಶನ ಪಡೆಯಲಾಗಿದೆ. ಮೈಸೂರು ತಾಲ್ಲೂಕು, ಕೇರ್ಗಳ್ಳಿ ಸರ್ವೆ ನಂ. 27, 29 ರಲ್ಲಿ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದವರು ನಿರ್ಮಿಸಿರುವ ಸೋಮನಾಥ ನಗರ ಬಡಾವಣೆಯಲ್ಲಿ ಸಿ.ಎ. ನಿವೇಶನ ಇದಾಗಿದೆ. ನಿವೇಶನದ 85 (62+67)/2 ( 5482.5) ಚದರ ಮೀಟರ್‌ಗಳು ) ಇದನ್ನು ಮಂಜೂರು ಮಾಡಲಾಗಿತ್ತು.

ನಿವೇಶನಕ್ಕೆ ಸಂಬಂಧಿಸಿದಂತೆ ಸರ್ಕಾರದ ಗಮನಕ್ಕಾಗಲೀ ತರದೇ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಂಡಿಸದೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಸಿಬ್ಬಂದಿ ಸೇರಿ ಕಾನೂನುಬಾಹಿರವಾಗಿ ರಘು ಕೌಟಿಲ್ಯ ಅವರಿಗೆ ನಿವೇಶನ ಮಂಜೂರು ಮಾಡಿದ್ದಾರೆ. ಹೀಗಾಗಿ ಅಕ್ರಮವಾಗಿ ನಿವೇಶನ ಪಡೆದಿರುವ ರುಘು ಕೌಟಿಲ್ಯ ವಿರುದ್ದ ಕ್ರಮ ಜರುಗಿಸುವಂತೆ ದೂರಿನಲ್ಲಿ ನಾಗೇಂದ್ರ ಒತ್ತಾಯಿಸಿದ್ದಾರೆ.

ವ್ಯವಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಖಾಸಗಿ ವ್ಯಕ್ತಿ ಆರ್. ರಘು ಕೌಟಿಲ್ಯ ಆಕ್ರಮ ಆರ್ಥಿಕ ಲಾಭ ಮಾಡಿಕೊಡುವ ಉದ್ದೇಶದಿಂದ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಸಿ.ಎ. ನಿವೇಶನವನ್ನು ಗುತ್ತಿಗೆ ಒಪ್ಪಂದ ಪತ್ರ ಮಾಡಿಕೊಟ್ಟು ಸಹಕರಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟು ಮಾಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ತಹಶೀಲ್ದಾರ್ ರಾಜಶೇಖ‌ರ್, ನಗರ ಯೋಜನಾ ಸಹಾಯಕ ನಿರ್ದೇಶಕಪಿ.ಎಸ್.ನಟರಾಜ್, ಅಂದಿನ ಆಯುಕ್ತರುಗಳಾಗಿದ್ದ ನಟೇಶ್ ಮತ್ತು ದಿನೇಶ್ ಕುಮಾರ್, ಹಿಂದಿನ ಕಾರ್ಯದರ್ಶಿಗಳಾದ ಕುಸುಮ ಕುಮಾರಿ ಮತ್ತು ತಹಶೀಲ್ದಾರ್ ರಮಾದೇವಿ ಸಬ್ ರಿಜಿಸ್ಟ್ರಾರ್, ಪ್ರಥಮ ದರ್ಜೆ ಸಹಾಯಕ ಮಾದೇಶ್ ದ್ವೀತಿಯ ದರ್ಜೆ ಸಹಾಯಕ ರವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾಗೇಂದ್ರ ಆಗ್ರಹಿಸಿದ್ದಾರೆ.

 

The post ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು appeared first on Good News 24x7.

]]>
ಮುಡಾ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ : ಸಿಎಂ ಸಿದ್ದರಾಮಯ್ಯ https://www.goodnews24x7.com/mu%e1%b8%8da-prakara%e1%b9%87ada-tanikheyalli-hastak%e1%b9%a3epa-illa-sie%e1%b9%81-siddaramayya-lokayukta-mu%e1%b8%8da-prakara%e1%b9%87ada-tanikhe-prastuta-lokayuktadalliddu-nanu-adaralli-yavude/ Sun, 29 Sep 2024 08:19:30 +0000 https://www.goodnews24x7.com/?p=689 ಮುಡಾ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ : ಸಿಎಂ ಸಿದ್ದರಾಮಯ್ಯ ಮುಡಾ ಪ್ರಕರಣದ ತನಿಖೆ ಪ್ರಸ್ತುತ ಲೋಕಾಯುಕ್ತದಲ್ಲಿದ್ದು, ನಾನು ಅದರಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮುಡಾ ಪ್ರಕರಣ ಸಂಬಂಧ ಸಿಎಂ ವಿರುದ್ಧ ಇಡಿಯಲ್ಲಿ ದೂರು…

The post ಮುಡಾ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ : ಸಿಎಂ ಸಿದ್ದರಾಮಯ್ಯ appeared first on Good News 24x7.

]]>

ಮುಡಾ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ : ಸಿಎಂ ಸಿದ್ದರಾಮಯ್ಯ

ಮುಡಾ ಪ್ರಕರಣದ ತನಿಖೆ ಪ್ರಸ್ತುತ ಲೋಕಾಯುಕ್ತದಲ್ಲಿದ್ದು, ನಾನು ಅದರಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮುಡಾ ಪ್ರಕರಣ ಸಂಬಂಧ ಸಿಎಂ ವಿರುದ್ಧ ಇಡಿಯಲ್ಲಿ ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇಡಿಯಲ್ಲಿ ದೂರು ದಾಖಲಾಗಿದ್ದರೆ, ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದರು.

ಕುಮಾರಸ್ವಾಮಿಯವರು ಲೋಕಾಯುಕ್ತ ಎಡಿಜಿಪಿ ಮೇಲೆಯೂ ಟೀಕೆ ಮಾಡುತ್ತಿರುವ ಬಗ್ಗೆ ಬಗ್ಗೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿಯವರು ತಪ್ಪೆಸೆಗಿಸಿದ್ದು, ಅಧಿಕಾರಗಳ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ. ಇಂತಹ ಹೇಳಿಕೆಗಳ ಮೇಲೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ

ಮೈಸೂರಿನಲ್ಲಿ ರೇವ್ ಪಾರ್ಟಿ ನಡೆದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ರೇವ್ ಪಾರ್ಟಿ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು,ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ದಸರಾ ಉತ್ಸವದ ಸಿದ್ಧತೆಗಳ ಪರ್ತಕರ್ತರಿಗೆ ಮಾಹಿತಿ ನೀಡುತ್ತಾ, ದಸರಾ ಉತ್ಸವಗಳ ಸಿದ್ದತೆಗಳಿಗೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಸಿದ್ಧತೆಗಳನ್ನು ವೀಕ್ಷಿಸಲು ಅಕ್ಟೋಬರ್ 2 ರಂದು ಮೈಸೂರಿಗೆ ಆಗಮಿಸಲಿದ್ದೇನೆ ಎಂದರು.

The post ಮುಡಾ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ : ಸಿಎಂ ಸಿದ್ದರಾಮಯ್ಯ appeared first on Good News 24x7.

]]>
ಮುಡಾ ಪ್ರಾಧಿಕಾರದ 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್ https://www.goodnews24x7.com/lokayukta-notice-to-18-officers-of-muda-authority/ Tue, 10 Sep 2024 07:36:27 +0000 https://www.goodnews24x7.com/?p=567 ಮುಡಾ ಪ್ರಾಧಿಕಾರದ 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್ ಮುಡಾ ನಿವೇಶನ ಹಂಚಿಕೆ ಆರೋಪ ಪ್ರಕರಣದಲ್ಲಿ ಮುಡಾದ 18 ಅಧಿಕಾರಿಗಳಿಗೆ ಮೈಸೂರು ಲೋಕಾಯುಕ್ತ ನೋಟಿಸ್​​​​​​​ ನೀಡಿದೆ. ಮುಡಾ ಸೂಪರಿಂಟೆಂಡೆಂಟ್ ಇಂಜಿನಿಯರ್ ಕಾರ್ಯದರ್ಶಿ ಸೇರಿದಂತೆ 2017ರಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.…

The post ಮುಡಾ ಪ್ರಾಧಿಕಾರದ 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್ appeared first on Good News 24x7.

]]>

ಮುಡಾ ಪ್ರಾಧಿಕಾರದ 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್

ಮುಡಾ ನಿವೇಶನ ಹಂಚಿಕೆ ಆರೋಪ ಪ್ರಕರಣದಲ್ಲಿ ಮುಡಾದ 18 ಅಧಿಕಾರಿಗಳಿಗೆ ಮೈಸೂರು ಲೋಕಾಯುಕ್ತ ನೋಟಿಸ್​​​​​​​ ನೀಡಿದೆ. ಮುಡಾ ಸೂಪರಿಂಟೆಂಡೆಂಟ್ ಇಂಜಿನಿಯರ್ ಕಾರ್ಯದರ್ಶಿ ಸೇರಿದಂತೆ 2017ರಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಮೈಸೂರು ತಾಲೂಕಿನ ಹಿನಕಲ್​ ಗ್ರಾ.ಪಂ. ವ್ಯಾಪ್ತಿಯಲ್ಲಿ ಸೈಟ್ ಹಂಚಿಕೆ ಮಾಡಲಾಗಿತ್ತು. ಹಿನಕಲ್ ಸರ್ವೇ ನಂಬರ್ 89ರಲ್ಲಿ ಅಧಿಕಾರಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಮುಡಾದ 7.18 ಗುಂಟೆ ಜಮೀನಿನಲ್ಲಿ ನಿವೇಶನ‌ ಮಾಡಿ 350ಕ್ಕೂ ಹೆಚ್ಚು ಪ್ರಭಾವಿ ಅಧಿಕಾರಿಗಳಿಗೆ ಹಂಚಿರುವ ಆರೋಪ ಕೇಳಿಬಂದಿದೆ.

ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂಧಿಸಿ ಆರ್​ಟಿಐ ಕಾರ್ಯಕರ್ತ ಗಂಗರಾಜು 2017ರಲ್ಲಿ ದೂರು ನೀಡಿದ್ದರು. ಈ ಸಂಬಂಧ 2022ರಲ್ಲಿ ಮೈಸೂರು ಲೋಕಾಯುಕ್ತ ಪ್ರಕರಣ ದಾಖಲಿಸಿಕೊಂಡಿತ್ತು. ಸರ್ಕಾರದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

The post ಮುಡಾ ಪ್ರಾಧಿಕಾರದ 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್ appeared first on Good News 24x7.

]]>