Lucknow Archives - Good News 24x7 https://www.goodnews24x7.com/tag/lucknow/ Kannada Tue, 23 Jun 2026 07:32:51 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Lucknow Archives - Good News 24x7 https://www.goodnews24x7.com/tag/lucknow/ 32 32 ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ https://www.goodnews24x7.com/dad-save-me-somehow-students-life-ends-with-last-call/ Tue, 23 Jun 2026 07:32:51 +0000 https://www.goodnews24x7.com/?p=9636 ಲಕ್ನೋದಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃ*ತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಾ*ಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳಿಗೂ ತೀವ್ರ ಗಾಯಗಳಾಗಿವೆ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ…

The post ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ appeared first on Good News 24x7.

]]>

ಲಕ್ನೋದಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃ*ತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಾ*ಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳಿಗೂ ತೀವ್ರ ಗಾಯಗಳಾಗಿವೆ

ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂತಾಪ ವ್ಯಕ್ತಪಡಿಸಿದ್ದು, ಮೃ*ತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.

ಇದೇ ವೇಳೆ ಅಗ್ನಿ ದುರಂತದಲ್ಲಿ ಮೃ*ತಪಟ್ಟ ವಿದ್ಯಾರ್ಥಿಗಳ ಕರುಣಾಜನಕ ಕಥೆಗಳು ಬೆಳಕಿಗೆ ಬರುತ್ತಿವೆ.

23 ವರ್ಷದ ವಿದ್ಯಾರ್ಥಿ ಸುಖಮಣಿ ಸಿಂಗ್, ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿದ್ದ ವೇಳೆ ತನ್ನ ತಂದೆ ಪ್ರಭಜೋತ್ ಸಿಂಗ್ ಅವರಿಗೆ ಕರೆ ಮಾಡಿ, “ಅಪ್ಪಾ, ಹೇಗಾದರೂ ಮಾಡಿ ನನ್ನನ್ನು ಕಾಪಾಡಿ. ಸುತ್ತಲೂ ಬೆಂಕಿಯೇ ಕಾಣುತ್ತಿದೆ. ಹೊರಗೆ ಬರಲು ದಾರಿಯೇ ಇಲ್ಲ” ಎಂದು ಅಳುತ್ತಾ ಸಹಾಯ ಕೋರಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ತಂದೆ ಮಗನಿಗೆ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದಂತೆಯೇ ಸಂಪರ್ಕ ಕಡಿತಗೊಂಡಿದೆ

The post ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ appeared first on Good News 24x7.

]]>
ಧೋನಿಯ 15 ವರ್ಷಗಳ ದಾಖಲೆ ಮುರಿದ ರಿಂಕು ಸಿಂಗ್ https://www.goodnews24x7.com/dhoniya-15-var%e1%b9%a3aga%e1%b8%b7a-dakhale-murida-ri%e1%b9%85ku-si%e1%b9%85g-rinkusinghdhonidhonilsg-vs-kkrsuperoverekna-stadiumrunsindianpremierleagueiplhistorylucknow-ipl-2026-lsg-vs-kkr/ Mon, 27 Apr 2026 13:56:23 +0000 https://www.goodnews24x7.com/?p=9438 IPL 2026 LSG vs KKR: ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 155 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ 20 ಓವರ್​ಗಳಲ್ಲಿ 155 ರನ್ ಬಾರಿಸಿ…

The post ಧೋನಿಯ 15 ವರ್ಷಗಳ ದಾಖಲೆ ಮುರಿದ ರಿಂಕು ಸಿಂಗ್ appeared first on Good News 24x7.

]]>

IPL 2026 LSG vs KKR: ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 155 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ 20 ಓವರ್​ಗಳಲ್ಲಿ 155 ರನ್ ಬಾರಿಸಿ ಪಂದ್ಯ ಟೈ ಗೊಳಿಸಿದ್ದರು. ಬಳಿಕ ನಡೆದ ಸೂಪರ್ ಓವರ್​ನಲ್ಲಿ ಕೆಕೆಆರ್ ತಂಡ ಜಯ ಸಾಧಿಸಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಿಂಕು ಸಿಂಗ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ 15 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಲಕ್ನೋನ ಏಕನಾ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಂಕು ಸಿಂಗ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 51 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 83 ರನ್ ಬಾರಿಸಿದರು.

ಈ 83 ರನ್​ಗಳೊಂದಿಗೆ ಐಪಿಎಲ್ ಇತಿಹಾಸದಲ್ಲಿ 6ನೇ ಕ್ರಮಾಂಕದಲ್ಲಿ ಅತ್ಯಧಿಕ ರನ್​ ಕಲೆಹಾಕಿದ ದಾಖಲೆ ರಿಂಕು ಸಿಂಗ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು.
2011 ರ ಐಪಿಎಲ್​ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಮಹೇಂದ್ರ ಸಿಂಗ್ ಧೋನಿ ಅಜೇಯ 70 ರನ್ ಬಾರಿಸಿದ್ದರು. ಈ ಮೂಲಕ ಐಪಿಎಲ್​ನಲ್ಲಿ ಆರನೇ ಕ್ರಮಾಂಕದಲ್ಲಿ ಅತ್ಯಧಿಕ ವೈಯುಕ್ತಿಕ ಸ್ಕೋರ್​ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದರು
ಇದೀಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 83 ರನ್ ಬಾರಿಸುವ ಮೂಲಕ ರಿಂಕು ಸಿಂಗ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ 15 ವರ್ಷಗಳ ಹಿಂದೆ ಮಹೇಂದ್ರ ಸಿಂಗ್ ಧೋನಿ ಬರೆದಿದ್ದ ದಾಖಲೆಯನ್ನು ರಿಂಕು ಅಳಿಸಿ ಹಾಕಿದ್ದಾರೆ.

The post ಧೋನಿಯ 15 ವರ್ಷಗಳ ದಾಖಲೆ ಮುರಿದ ರಿಂಕು ಸಿಂಗ್ appeared first on Good News 24x7.

]]>
ಎಲ್‌ಎಸ್‌ಜಿ ಮಾಡಿದ ‘ಸೂಪರ್’ ಎಡವಟ್ಟು: ಲಖನೌ ಸೋಲಿನ ರಹಸ್ಯ ಬಿಚ್ಚಿಟ್ಟ ಡೇಲ್ ಸ್ಟೇನ್! https://www.goodnews24x7.com/lsgs-super-blunder-dale-steyn-reveals-the-secret-of-lucknows-defeat/ Mon, 27 Apr 2026 11:40:41 +0000 https://www.goodnews24x7.com/?p=9425 ಐಪಿಎಲ್ 2026ರ ಮೊದಲ ಸೂಪರ್ ಓವರ್ ಸೆಣಸಾಟದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಹೀನಾಯವಾಗಿ ಸೋತಿದೆ. ಗೆಲ್ಲುವ ಉತ್ತಮ ಅವಕಾಶವಿದ್ದರೂ ಲಖನೌ ತಂಡದ ತಪ್ಪು ನಿರ್ಧಾರಗಳೇ ಸೋಲಿಗೆ ಕಾರಣವಾಯಿತು ಎಂದು ಮಾಜಿ ವೇಗಿ ಡೇಲ್ ಸ್ಟೇನ್…

The post ಎಲ್‌ಎಸ್‌ಜಿ ಮಾಡಿದ ‘ಸೂಪರ್’ ಎಡವಟ್ಟು: ಲಖನೌ ಸೋಲಿನ ರಹಸ್ಯ ಬಿಚ್ಚಿಟ್ಟ ಡೇಲ್ ಸ್ಟೇನ್! appeared first on Good News 24x7.

]]>

ಐಪಿಎಲ್ 2026ರ ಮೊದಲ ಸೂಪರ್ ಓವರ್ ಸೆಣಸಾಟದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಹೀನಾಯವಾಗಿ ಸೋತಿದೆ. ಗೆಲ್ಲುವ ಉತ್ತಮ ಅವಕಾಶವಿದ್ದರೂ ಲಖನೌ ತಂಡದ ತಪ್ಪು ನಿರ್ಧಾರಗಳೇ ಸೋಲಿಗೆ ಕಾರಣವಾಯಿತು ಎಂದು ಮಾಜಿ ವೇಗಿ ಡೇಲ್ ಸ್ಟೇನ್ ಕಟುವಾಗಿ ಟೀಕಿಸಿದ್ದಾರೆ. ವಿಶೇಷವಾಗಿ ಫಾರ್ಮ್‌ನಲ್ಲಿಲ್ಲದ ನಿಕೋಲಸ್ ಪೂರನ್ ಅವರನ್ನು ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ಗೆ ಕಳುಹಿಸಿದ್ದು ದೊಡ್ಡ ತಪ್ಪು. ಐಪಿಎಲ್ ಇತಿಹಾಸದಲ್ಲಿ ಪೂರನ್ ಮೂರು ಬಾರಿ ಸೂಪರ್ ಓವರ್‌ನಲ್ಲಿ ಆಡಿದ್ದು, ಮೂರು ಬಾರಿಯೂ ಶೂನ್ಯಕ್ಕೆ ಔಟಾಗಿರುವುದು ಅವರ ಆಯ್ಕೆಯ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದು ಸ್ಟೇನ್ ಅಭಿಪ್ರಾಯಪಟ್ಟಿದ್ದಾರೆ.

ಏಕನಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್, ರಿಂಕು ಸಿಂಗ್ ಅವರ ಅಮೋಘ 83 ರನ್‌ಗಳ (51 ಎಸೆತ) ನೆರವಿನಿಂದ 155 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಲಖನೌ ಪರ ನಾಯಕ ರಿಷಭ್ ಪಂತ್ (42) ಮತ್ತು ಏಡೆನ್ ಮಾರ್ಕ್ರಮ್ (31) ಹೋರಾಟ ನೀಡಿದರೂ ಪಂದ್ಯ ಟೈ ಆಯಿತು. ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಸುನಿಲ್ ನರೇನ್ ಅವರ ಮೊದಲ ಎಸೆತದಲ್ಲೇ ಪೂರನ್ ಔಟಾದರು. ಕೇವಲ 2 ರನ್‌ಗಳ ಗುರಿ ಪಡೆದ ಕೆಕೆಆರ್ ಪರ ರಿಂಕು ಸಿಂಗ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಈ ಪಂದ್ಯದಲ್ಲಿ ಅನುಭವಿಸಿದ ಸೋಲಿನಿಂದಾಗಿ ಲಖನೌ ತಂಡ ಪ್ರಸಕ್ತ ಸರಣಿಯಲ್ಲಿ 6ನೇ ಸೋಲು ಕಂಡಂತಾಗಿದೆ. ಇದರಿಂದಾಗಿ ತಂಡದ ಪ್ಲೇಆಫ್ ಪ್ರವೇಶದ ಹಾದಿ ಬಹುತೇಕ ಮುಚ್ಚಲ್ಪಟ್ಟಿದೆ. ತಂಡದಲ್ಲಿ ಮಿಚೆಲ್ ಮಾರ್ಷ್ ಮತ್ತು ಪಂತ್ ಅವರಂತಹ ಸ್ಪೋಟಕ ಬ್ಯಾಟರ್‌ಗಳಿದ್ದರೂ ಪೂರನ್ ಅವರನ್ನು ಕಳುಹಿಸಿದ ನಿರ್ಧಾರ ತಂಡಕ್ಕೆ ಭಾರಿ ಹೊಡೆತ ನೀಡಿತು. ನಿರ್ಣಾಯಕ ಹಂತದಲ್ಲಿ ಭಾವನಾತ್ಮಕ ನಿರ್ಧಾರಗಳ ಬದಲು ಫಾರ್ಮ್‌ನಲ್ಲಿರುವ ಆಟಗಾರರಿಗೆ ಮನ್ನಣೆ ನೀಡಬೇಕು ಎಂದು ಸ್ಟೇನ್ ಎಲ್‌ಎಸ್‌ಜಿ ಮ್ಯಾನೇಜ್‌ಮೆಂಟ್‌ಗೆ ಕಿವಿಮಾತು ಹೇಳಿದ್ದಾರೆ.

The post ಎಲ್‌ಎಸ್‌ಜಿ ಮಾಡಿದ ‘ಸೂಪರ್’ ಎಡವಟ್ಟು: ಲಖನೌ ಸೋಲಿನ ರಹಸ್ಯ ಬಿಚ್ಚಿಟ್ಟ ಡೇಲ್ ಸ್ಟೇನ್! appeared first on Good News 24x7.

]]>
ಸೊಸೆಗೆ ಬೆಂಕಿ ಹಚ್ಚಿ ಜೀವ ತೆಗೆದ ಅತ್ತೆ, ಮಾವ, ಗಂಡ.. https://www.goodnews24x7.com/mother-in-law-father-in-law-husband-set-daughter-in-law-on-fire/ Sun, 24 Aug 2025 05:16:56 +0000 https://www.goodnews24x7.com/?p=6601 ಲಕ್ನೋ: ನಿಕ್ಕಿ ಎನ್ನುವ ಮಹಿಳೆ ಜೀವ ಕಳೆದುಕೊಂಡವರು. ಈಕೆಯ ಗಂಡ ವಿಪಿನ್​ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆಯ ನಂತರ ನಾಪತ್ತೆ ಆಗಿರುವ ಮಾವ, ಅತ್ತೆ ಮತ್ತು ಸೋದರ ಮಾವ ಈ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ವರದಕ್ಷಿಣೆಗಾಗಿ ಅತ್ತೆ, ಮಾವ…

The post ಸೊಸೆಗೆ ಬೆಂಕಿ ಹಚ್ಚಿ ಜೀವ ತೆಗೆದ ಅತ್ತೆ, ಮಾವ, ಗಂಡ.. appeared first on Good News 24x7.

]]>

ಲಕ್ನೋ: ನಿಕ್ಕಿ ಎನ್ನುವ ಮಹಿಳೆ ಜೀವ ಕಳೆದುಕೊಂಡವರು. ಈಕೆಯ ಗಂಡ ವಿಪಿನ್​ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆಯ ನಂತರ ನಾಪತ್ತೆ ಆಗಿರುವ ಮಾವ, ಅತ್ತೆ ಮತ್ತು ಸೋದರ ಮಾವ ಈ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ವರದಕ್ಷಿಣೆಗಾಗಿ ಅತ್ತೆ, ಮಾವ ಹಾಗೂ ಗಂಡ ಸೇರಿ ಸೊಸೆಗೆ ಮನ ಬಂದಂತೆ ಹೊಡೆದು ಮನೆಯಲ್ಲೇ ಬೆಂಕಿ ಹಚ್ಚಿ ಜೀವ ತೆಗೆದಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಈಕೆಯ ಗಂಡ ವಿಪಿನ್​ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆಯ ನಂತರ ನಾಪತ್ತೆ ಆಗಿರುವ ರೋಹಿತ್ (ಮಾವ), ದಯಾ (ಅತ್ತೆ) ಮತ್ತು ಸತ್ವೀರ್​ (ಸೋದರ ಮಾವ) ಈ ಮೂವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಹಿಳೆ ನಿಕ್ಕಿ ಹಾಗೂ ಈಕೆಯ ಸಹೋದರಿ ಕಾಂಚಾಣ ಇಬ್ಬರು ಒಂದೇ ಮನೆಗೆ ಸೊಸೆಯಾಗಿದ್ದರು. ನಿಕ್ಕಿ ಹಾಗೂ ವಿಪಿನ್ 2016ರಲ್ಲಿ ಹರಿಯಾಣದ ಸಿರ್ಸಾದಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಲ್ಲಿ ವರದಕ್ಷಿಣೆಯಾಗಿ ಎಸ್​ಯುವಿ ಕಾರು, ಬೆಲೆಬಾಳುವ ಚಿನ್ನಾಭರಣಗಳನ್ನು ನೀಡಲಾಗಿತ್ತು. ಆದರೂ ವರದಕ್ಷಿಣೆಗಾಗಿ ಇಬ್ಬರಿಗೂ ಗಂಡನ ಮನೆಯವರು ಹೊಡೆಯುತ್ತಿದ್ದರು.

ತವರಿನಿಂದ ಹಣ ತರುವಂತೆ ಮನೆಯಲ್ಲಿ ನಿರಂತರ ಹಿಂಸೆ ಕೊಡುತ್ತಿದ್ದರು. ಹೀಗಾಗಿಯೇ ಮತ್ತೊಂದು ಕಾರನ್ನು ಕೂಡ ನೀಡಲಾಗಿತ್ತು ಎಂದು ಹೇಳಲಾಗಿದೆ. ಆದರೂ ಗಂಡನ ಮನೆಯವರ ವರದಕ್ಷಿಣೆಯ ಆಸೆ ನಿರಂತರವಾಗಿದ್ದರಿಂದ ಮನೆಯಲ್ಲಿ ಹೆಂಡತಿ ಜೊತೆ ವಿಪಿನ್ ಜಗಳ ತೆಗೆದು ಹೊಡೆದಿದ್ದಾನೆ. ಇದಕ್ಕೆ ಗಂಡನ ಪೋಷಕರು ಸಾಥ್ ಕೊಟ್ಟಿದ್ದಾರೆ. ಅದರಂತೆ ಗಂಡ ಹೊಡೆದು, ಕೋಪದಲ್ಲಿ ಹೆಂಡತಿಗೆ ಬೆಂಕಿ ಹಚ್ಚಿಬಿಟ್ಟಿದ್ದಾನೆ. ರಕ್ಷಣೆಗಾಗಿ ಬೆಂಕಿಯಲ್ಲೇ ಮಹಿಳೆ ಚೀರಾಡಿದ್ದಾಳೆ. ಈ ವೇಳೆ ಈಕೆಯ ಸಹೋದರಿಯನ್ನ ಹೊರಗಾಕಲಾಗಿತ್ತು. ಇದನ್ನು ನೋಡಿ ಸಹೋದರಿ ತೀವ್ರ ಭಯದಿಂದ ಕೂಗಿದ್ದಾಳೆ.

ತಕ್ಷಣ ಸ್ಥಳೀಯರು ಬಂದು ಮನೆ ಒಳಗೆ ತೀವ್ರ ಸುಟ್ಟ ಗಾಯಗಳಿಂದ ಬಿದ್ದಿದ್ದ ಮಹಿಳೆಯನ್ನ ರಕ್ಷಣೆ ಮಾಡಿ, ಗ್ರೇಟರ್ ನೋಯ್ಡಾದ ಫೋರ್ಟಿಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ದಾರಿ ಮಧ್ಯೆಯೇ ಮಹಿಳೆ ಜೀವ ಬಿಟ್ಟಿದ್ದಾಳೆ. ಸದ್ಯ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ನಿಕ್ಕಿಯ ಸಹೋದರಿ ಕಾಂಚಾಣ, ನನ್ನ ಸಹೋದರಿಗೆ ಆಕೆಯ ಗಂಡ ಮನಬಂದಂತೆ ಥಳಿಸಿದ್ದರಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾಗ ವಿಪಿನ್ ಬೆಂಕಿ ಹಚ್ಚಿದ್ದಾನೆ. ವರದಕ್ಷಿಣೆಗಾಗಿ ನಮಗೆ ಹಿಂಸಿಸುತ್ತಿದ್ದರು. ಮದುವೆಯಲ್ಲಿ ಬ್ರ್ಯಾಂಡೆಡ್​​ ಎಸ್​ಯುವಿ ಕಾರು ಹಾಗೂ ಬೆಲೆಬಾಳುವ ಚಿನ್ನಾಭರಣಗಳನ್ನ ನೀಡಲಾಗಿದೆ. ಆದರೂ ನಿಕ್ಕಿ ಕಡೆಯವರು ಇನ್ನು ಬೇಕು ಎನ್ನುತ್ತಿದ್ದರು. ಮದುವೆ ನಂತರವೂ 35 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದರು ಎಂದಿದ್ದಾಳೆ. ಇದರ ಬದಲಿಗೆ ಮತ್ತೊಂದು ಕಾರನ್ನು ಇವರಿಗೆ ನೀಡಲಾಗಿತ್ತು. ಆದರೂ ಅವರ ಕಿರುಕುಳ, ಹಿಂಸೆ ನಿರಂತರವಾಗಿತ್ತು. ನಾನು ಸ್ಥಳದಲ್ಲೇ ಇದ್ದರೂ ಸಹೋದರಿಯನ್ನ ಉಳಿಸಿಕೊಳ್ಳಲು ಆಗಲಿಲ್ಲ. ಇಬ್ಬರು ಒಂದೇ ಬಾರಿ ಮದುವೆ ಆಗಿದ್ದೇವು. ಸ್ಥಳೀಯರ ಸಹಾಯದಿಂದ ನಿಕ್ಕಿಯನ್ನ ಆಸ್ಪತ್ರೆಗೆ ಕರೆದುಕೊಂಡು ಬಂದೇವು ಎಂದು ಕಾಂಚಾಣ ಹೇಳಿದ್ದಾರೆ.

ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ನಿಕ್ಕಿ ಅವರ ಮಗು ಹೇಳಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಪ್ಪನೇ ಮಮ್ಮಿಗೆ ಬೆಂಕಿ ಹಚ್ಚಿ ಜೀವ ತೆಗೆದಿದ್ದಾನೆ ಎಂದು ಮಗು ಹೇಳಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿಪಿನ್ ಹಾಗೂ ಅವರ ಮನೆಯವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಸ್ಥಳೀಯರು ಕೂಡ ಆ ಕುಟುಂಬದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.

The post ಸೊಸೆಗೆ ಬೆಂಕಿ ಹಚ್ಚಿ ಜೀವ ತೆಗೆದ ಅತ್ತೆ, ಮಾವ, ಗಂಡ.. appeared first on Good News 24x7.

]]>
ತಂಡವು ಸೋಲನ್ನು ಕಂಡಾಗ ಕಾವ್ಯ ಮಾರನ್ ನೋವು, ಬೇಸರ, ಹತಾಶೆಯ ಎಕ್ಸ್ಪ್ರೆಶನ್ಸ್ …. https://www.goodnews24x7.com/%e0%b2%a4%e0%b2%82%e0%b2%a1%e0%b2%b5%e0%b3%81-%e0%b2%b8%e0%b3%8b%e0%b2%b2%e0%b2%a8%e0%b3%8d%e0%b2%a8%e0%b3%81-%e0%b2%95%e0%b2%82%e0%b2%a1%e0%b2%be%e0%b2%97-%e0%b2%95%e0%b2%be%e0%b2%b5%e0%b3%8d/ Fri, 28 Mar 2025 12:44:34 +0000 https://www.goodnews24x7.com/?p=2922 ಕಾವ್ಯಾ ಮಾರನ್ ಅವರು ‘ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ. ಮಾರ್ಚ್ 27 ರಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡಕ್ಕೆ ಲಖನೋ ತಂಡ ಸೋಲನ್ನು ಉಣಿಸಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿದೆ. ಈ ಮಧ್ಯೆ ಕಾವ್ಯಾ ಮಾರನ್…

The post ತಂಡವು ಸೋಲನ್ನು ಕಂಡಾಗ ಕಾವ್ಯ ಮಾರನ್ ನೋವು, ಬೇಸರ, ಹತಾಶೆಯ ಎಕ್ಸ್ಪ್ರೆಶನ್ಸ್ …. appeared first on Good News 24x7.

]]>

ಕಾವ್ಯಾ ಮಾರನ್ ಅವರು ‘ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ. ಮಾರ್ಚ್ 27 ರಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡಕ್ಕೆ ಲಖನೋ ತಂಡ ಸೋಲನ್ನು ಉಣಿಸಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿದೆ. ಈ ಮಧ್ಯೆ ಕಾವ್ಯಾ ಮಾರನ್ ಎಕ್ಸ್ಪ್ರೆಷನ್ ಗಮನ ಸೆಳೆಯಿತು. ಐಪಿಎಲ್ ಕಾವು ಜೋರಾಗಿದೆ. ಹೈ ಸ್ಕೋರ್ ಪಂದ್ಯಗಳಿಗೆ ಈ ಬಾರಿಯ ಐಪಿಎಲ್ ಸಾಕ್ಷಿ ಆಗುತ್ತಿದೆ. ಮಾರ್ಚ್ 27ರ ಎಸ್ಆರ್ಎಚ್ vs ಎಲ್ಎಸ್ಜಿ ಪಂದ್ಯದಲ್ಲಿ ಹೈದರಾಬಾದ್ ತಂಡದ ಸೋತಿದ್ದು, ತಂಡಕ್ಕೆ ಹಿನ್ನಡೆ ಆಗಿದೆ. ಇದೇ ಕಾರಣದಿಂದಾಗಿ ಎಸ್.ಆರ್.ಹೆಚ್ ತಂಡದ ಒಡತಿ ಕಾವ್ಯಾ ಮಾರನ್ ಬೇಸರ ಮಾಡಿಕೊಂಡಿದ್ದಾರೆ.

ಪಂದ್ಯವನ್ನು ವೀಕ್ಷಣೆ ಮಾಡುತ್ತಿದ್ದ ಅವರು ಪಂದ್ಯ ಗೆಲ್ಲುತ್ತಿದೆ, ಎಸ್ಆರ್ಎಚ್ ತಂಡ ಚೆನ್ನಾಗಿ ಆಡುತ್ತಿದೆ ಎಂದಾಗ ಕಾವ್ಯಾ ಮಾರನ್ ಅವರು ಖುಷಿಯಿಂದ ಇರುತ್ತಾರೆ. ಅವರ ಮುಖದಲ್ಲಿ ನಗು ಚೆಲ್ಲುತ್ತಾ ಇರುತ್ತದೆ. ಆದರೆ, ಸೋಲುವಾಗ ಅವರ ಎಕ್ಸ್ಪ್ರೆಷನ್ ಬೇರೆಯೇ ಆಗಿರುತ್ತದೆ. ಇದೇ ಕಾರಣಕ್ಕಾಗಿಯೇ ಅವರು ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಸಾಕಷ್ಟು ಪ್ರಸಿದ್ಧಿಯನ್ನು ಹೊಂದಿದ್ದಾರೆ.

ಮಾರ್ಚ್ 27 ರ ಪಂದ್ಯದಲ್ಲಿ ಹೈದರಾಬಾದ್ ತಂಡದ ಘಟಾನುಘಟಿ ಆಟಗಾರರು ಔಟ್ಆಗುತ್ತಾ ಬಂದರು. 300 ರನ್ ಟಾರ್ಗೆಟ್ ರೀಚ್ ಆಗಬೇಕು ಎಂದು ಕನಸು ಕಂಡಿದ್ದ ಆಟಗಾರರು ಕೇವಲ 190 ರನ್ ಗಳಿಸಲಷ್ಟೇ ಶಕ್ಯರಾದರು. ಇದು ಕಾವ್ಯಾ ಬೇಸರಕ್ಕೆ ಕಾರಣ ಆಗಿದೆ. ಕಾವ್ಯಾ ಮಾರನ್ ಅವರ ವಿವಿಧ ಎಕ್ಸ್ಪ್ರೆಷನ್ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ (6), ಇಶಾನ್ ಕಿಶನ್ (0) ನಿತೀಶ್ ರೆಡ್ಡಿ (32) ಔಟ್ ಆಗುವಾಗ ಕಾವ್ಯಾ ಮುಖದಲ್ಲಿ ಬೇಸರ ಎದ್ದು ಕಾಣುತ್ತಿತ್ತು.

ಇನ್ನೂ ಲಕ್ನೋ ಸೂಪರ್ ಜಾಯಿಂಟ್ಸ್ ತಂಡದ ಪರವಾಗಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಸ್ಟ್ ಇಂಡೀಸ್ ಆಟಗಾರ ನಿಕೋಲಸ್ ಪೂರನ್ ಅವರ ಬ್ಯಾಟಿಂಗ್ ಶೈಲಿ ಎಸ್ಆರ್ಎಚ್ ತಂಡವನ್ನ ಸಂಕಷ್ಟಕ್ಕೆ ಸಿಲುಕಿಸಿತು. ಅಲ್ಲದೆ ಅವರು ಹಿಗ್ಗ ಮುಖ ಬರಿಸುವಾಗಲು ಕಾವ್ಯ ಅವರ ಮುಖದಲ್ಲಿ ಇದ್ದ ನಗು ಮಾಯ ಆಗಿತ್ತು. ಇದೆಲ್ಲದರ ನಡುವೆ ಅವರ ಎಕ್ಸ್ಪ್ರೆಶನ್ ಹಾಗೆಯೇ ಬೇಸರದ ಮುಖ ನೋಡಿಯೇ ಅನೇಕ ಅಭಿಮಾನಿಗಳಿಗೂ ಸಹ ಬೇಸರವಾಗಿದೆ.

The post ತಂಡವು ಸೋಲನ್ನು ಕಂಡಾಗ ಕಾವ್ಯ ಮಾರನ್ ನೋವು, ಬೇಸರ, ಹತಾಶೆಯ ಎಕ್ಸ್ಪ್ರೆಶನ್ಸ್ …. appeared first on Good News 24x7.

]]>