Mobile Archives - Good News 24x7 https://www.goodnews24x7.com/tag/mobile/ Kannada Sun, 16 Aug 2026 06:36:08 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Mobile Archives - Good News 24x7 https://www.goodnews24x7.com/tag/mobile/ 32 32 ಭಾರತದಲ್ಲಿ ಮೊಬೈಲ್ ಸಂಖ್ಯೆಗಳು 10 ಅಂಕಿಗಳೇ ಏಕೆ ಇರುತ್ತವೆ? ಇದರ ಹಿಂದಿನ ಗಣಿತದ ಲೆಕ್ಕಾಚಾರವೇನು? https://www.goodnews24x7.com/why-are-mobile-numbers-in-india-10-digits-long-what-is-the-math-behind-this/ Sun, 16 Aug 2026 06:36:08 +0000 https://www.goodnews24x7.com/?p=9896 ನಾವು ಪ್ರತಿದಿನ ಹಲವರಿಗೆ ಫೋನ್ ಮಾಡುತ್ತೇವೆ. ಒಂದು ಅಂಕಿ ಕಡಿಮೆಯಾದರೂ ಕರೆ ಕನೆಕ್ಟ್ ಆಗುವುದಿಲ್ಲ. ಆದರೆ, ನಮ್ಮ ದೇಶದಲ್ಲಿ ಮೊಬೈಲ್ ಸಂಖ್ಯೆಗಳು 8 ಅಥವಾ 9 ಅಂಕಿಗಳಿರದೆ, 10 ಅಂಕಿಗಳೇ ಏಕೆ ಇರುತ್ತವೆ? ಈ ನಿರ್ಧಾರವನ್ನು ಯಾರು ತಗೆದುಕೊಂಡಿದ್ದಾರೆ ಮತ್ತು ಇದರ…

The post ಭಾರತದಲ್ಲಿ ಮೊಬೈಲ್ ಸಂಖ್ಯೆಗಳು 10 ಅಂಕಿಗಳೇ ಏಕೆ ಇರುತ್ತವೆ? ಇದರ ಹಿಂದಿನ ಗಣಿತದ ಲೆಕ್ಕಾಚಾರವೇನು? appeared first on Good News 24x7.

]]>

ನಾವು ಪ್ರತಿದಿನ ಹಲವರಿಗೆ ಫೋನ್ ಮಾಡುತ್ತೇವೆ. ಒಂದು ಅಂಕಿ ಕಡಿಮೆಯಾದರೂ ಕರೆ ಕನೆಕ್ಟ್ ಆಗುವುದಿಲ್ಲ. ಆದರೆ, ನಮ್ಮ ದೇಶದಲ್ಲಿ ಮೊಬೈಲ್ ಸಂಖ್ಯೆಗಳು 8 ಅಥವಾ 9 ಅಂಕಿಗಳಿರದೆ, 10 ಅಂಕಿಗಳೇ ಏಕೆ ಇರುತ್ತವೆ? ಈ ನಿರ್ಧಾರವನ್ನು ಯಾರು ತಗೆದುಕೊಂಡಿದ್ದಾರೆ ಮತ್ತು ಇದರ ಹಿಂದಿರುವ ಗಣಿತದ ಲೆಕ್ಕಾಚಾರವೇನು?ಯಾವುದೇ ದೇಶದಲ್ಲಾದರೂ ಮೊಬೈಲ್ ಸಂಖ್ಯೆಯ ಉದ್ದವನ್ನು (Digit length) ಅಲ್ಲಿನ ಜನಸಂಖ್ಯೆ ಮತ್ತು ಭವಿಷ್ಯದ ಅಗತ್ಯಗಳನ್ನು ಆಧಾರವಾಗಿಟ್ಟುಕೊಂಡು ನಿರ್ಧರಿಸಲಾಗುತ್ತದೆ. ಭಾರತದಲ್ಲಿ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು ಬಳಸುವುದರ ಹಿಂದೆ ಒಂದು ಸರಳ ಹಾಗೂ ಶಕ್ತಿಯುತ ಗಣಿತದ ಲೆಕ್ಕಾಚಾರವಿದೆ.10 ಅಂಕಿಗಳ ಹಿಂದಿರುವ ಗಣಿತದ ಲೆಕ್ಕಾಚಾರ:09 ಅಂಕಿಗಳ ಸಂಖ್ಯೆ ($10^9$): ಒಂದು ವೇಳೆ 9 ಅಂಕಿಗಳ ಸಂಖ್ಯೆಯನ್ನು ಬಳಸಿದರೆ, ಗರಿಷ್ಠ 100 ಕೋಟಿ (1 Billion) ವಿಭಿನ್ನ ಕಾಂಬಿನೇಷನ್ ಸಂಖ್ಯೆಗಳನ್ನು ಮಾತ್ರ ರಚಿಸಲು ಸಾಧ್ಯ. ಪ್ರಸ್ತುತ ಭಾರತದ ಜನಸಂಖ್ಯೆಯೇ 140 ಕೋಟಿ ದಾಟಿದೆ. ಅಲ್ಲದೆ, ಒಬ್ಬರೇ ವ್ಯಕ್ತಿ ಎರಡೆರಡು ಸಿಮ್ ಕಾರ್ಡ್‌ಗಳನ್ನು ಬಳಸುತ್ತಿರುವುದರಿಂದ 9 ಅಂಕಿಗಳ ವ್ಯವಸ್ಥೆ ತೀರಾ ಅಪೂರ್ಣವಾಗುತ್ತಿತ್ತು.10 ಅಂಕಿಗಳ ಸಂಖ್ಯೆ ($10^{10}$): 10 ಅಂಕಿಗಳ ಸಂಖ್ಯೆಯನ್ನು ಬಳಸುವುದರಿಂದ ಒಟ್ಟು 1,000 ಕೋಟಿ (10 Billion) ವಿಭಿನ್ನ ಕಾಂಬಿನೇಷನ್ ಸಂಖ್ಯೆಗಳನ್ನು ಪಡೆಯಬಹುದು. ಇದು ದೇಶದ ಪ್ರಸ್ತುತ ಹಾಗೂ ಭವಿಷ್ಯದ ದೀರ್ಘಕಾಲದ ಅಗತ್ಯಗಳನ್ನು ಸುಲಭವಾಗಿ ಪೂರೈಸುತ್ತದೆ.11 ಅಂಕಿಗಳ ಸಂಖ್ಯೆ ($10^{11}$): 11 ಅಂಕಿಗಳನ್ನು ಬಳಸಿದರೆ 10,000 ಕೋಟಿ ಸಂಖ್ಯೆಗಳನ್ನು ರಚಿಸಬಹುದು. ಆದರೆ, ನೆನಪಿಟ್ಟುಕೊಳ್ಳಲು ಕಷ್ಟವಾಗುವುದರಿಂದ ಮತ್ತು ಪ್ರಸ್ತುತಕ್ಕೆ ಅಷ್ಟೊಂದು ಸಂಖ್ಯೆಗಳ ಅಗತ್ಯವಿಲ್ಲದಿರುವುದರಿಂದ 10 ಅಂಕಿಗಳನ್ನೇ ಅಂತಿಮಗೊಳಿಸಲಾಯಿತು.10 ಅಂಕಿಗಳ ವಿನ್ಯಾಸ (Structure) ಹೇಗಿರುತ್ತದೆ?ಮೊಬೈಲ್ ಸಂಖ್ಯೆ ಎಂಬುದು ಕೇವಲ ಒಂದು ಗುರುತಿನ ಸಂಖ್ಯೆಯಲ್ಲ, ಅದು ನೆಟ್‌ವರ್ಕ್ ವ್ಯವಸ್ಥೆಯಲ್ಲಿ ನಿಮ್ಮ ಫೋನಿನ ವಿಳಾಸ (Address) ಇದ್ದಂತೆ:ಮೊದಲ 4 ಅಥವಾ 5 ಅಂಕಿಗಳು: ಟೆಲಿಕಾಂ ಸರ್ಕಲ್ (ರಾಜ್ಯ/ಪ್ರದೇಶ) ಮತ್ತು ಆಪರೇಟರ್ (ಜಿಯೋ, ಏರ್‌ಟೆಲ್, ಬಿಎಸ್‌ಎನ್‌ಎಲ್ ಇತ್ಯಾದಿ) ಮಾಹಿತಿಯನ್ನು ಸೂಚಿಸುತ್ತವೆ.ಉಳಿದ 5 ಅಥವಾ 6 ಅಂಕಿಗಳು: ಸಿಮ್ ಬಳಸುವ ವ್ಯಕ್ತಿಯ ವೈಯಕ್ತಿಕ ಗುರುತಿನ ಸಂಖ್ಯೆಯಾಗಿರುತ್ತವೆ (Subscriber ID).ಈ ನಿರ್ಧಾರವನ್ನು ಯಾರು ತಗೆದುಕೊಂಡರು?1990ರ ದಶಕದಲ್ಲಿ ಭಾರತದಲ್ಲಿ ಲ್ಯಾಂಡ್‌ಲೈನ್ ಸಂಖ್ಯೆಗಳು 6 ರಿಂದ 7 ಅಂಕಿಗಳಷ್ಟೇ ಇದ್ದವು. ಆದರೆ 2000ರ ಹೊತ್ತಿಗೆ ಮೊಬೈಲ್ ಫೋನ್‌ಗಳ ಬಳಕೆ ದೇಶಾದ್ಯಂತ ವೇಗವಾಗಿ ಹೆಚ್ಚಾಗತೊಡಗಿತು. ಭವಿಷ್ಯದಲ್ಲಿ ಸಂಖ್ಯೆಗಳ ಅಭಾವ ಉಂಟಾಗಬಾರದು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ‘ರಾಷ್ಟ್ರೀಯ ಸಂಖ್ಯಾ ಯೋಜನೆ 2003’ (National Numbering Plan 2003) ಅಡಿಯಲ್ಲಿ ದೇಶಾದ್ಯಂತ 10 ಅಂಕಿಗಳ ಮೊಬೈಲ್ ಸಂಖ್ಯೆಯ ನಿಯಮವನ್ನು ಅಧಿಕೃತವಾಗಿ ಜಾರಿಗೆ ತಂದಿತು.

The post ಭಾರತದಲ್ಲಿ ಮೊಬೈಲ್ ಸಂಖ್ಯೆಗಳು 10 ಅಂಕಿಗಳೇ ಏಕೆ ಇರುತ್ತವೆ? ಇದರ ಹಿಂದಿನ ಗಣಿತದ ಲೆಕ್ಕಾಚಾರವೇನು? appeared first on Good News 24x7.

]]>
ಮೊಬೈಲ್‌ ಬಿಡಿ, ಗಿಡ ನೆಡಿ – ನಿಮ್ಮ ಓಲೈಕೆಯಲ್ಲೊಂದು ಕಾಡು ಬೆಳೆಸೋಣ. https://www.goodnews24x7.com/leave-your-mobile-plant-a-tree-lets-grow-a-forest-in-your-favor/ Sat, 23 Aug 2025 07:34:49 +0000 https://www.goodnews24x7.com/?p=6529 ಇಂದಿನ ದಿನಗಳಲ್ಲಿ ಹಿರಿಯರೂ, ಮಕ್ಕಳೂ ,ಎಲ್ಲರೂ ಡಿಜಿಟಲ್ ಸಾಧನಗಳ ಸೆಳೆಯುವ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ. “ಒಂದೆರಡು ನಿಮಿಷ” ಎಂದೇ ಮೊಬೈಲ್ ಕೈಗೆತ್ತಿಕೊಳ್ಳುವದರಿಂದ, ಗಂಟೆಗಳ ಕಾಲ ಸಮಯ ವ್ಯರ್ಥವಾಗುವುದು ಸಾಮಾನ್ಯ. ಈ ಡಿಜಿಟಲ್ ವ್ಯಸನದಿಂದ ಮುಕ್ತಿಯಾಗಲು ಹಲವಾರು ಉಪಾಯಗಳು ಇದ್ದರೂ, ಫಲಿತಾಂಶ ಕಡಿಮೆಯೇ ಇರುತ್ತದೆ.…

The post ಮೊಬೈಲ್‌ ಬಿಡಿ, ಗಿಡ ನೆಡಿ – ನಿಮ್ಮ ಓಲೈಕೆಯಲ್ಲೊಂದು ಕಾಡು ಬೆಳೆಸೋಣ. appeared first on Good News 24x7.

]]>

ಇಂದಿನ ದಿನಗಳಲ್ಲಿ ಹಿರಿಯರೂ, ಮಕ್ಕಳೂ ,ಎಲ್ಲರೂ ಡಿಜಿಟಲ್ ಸಾಧನಗಳ ಸೆಳೆಯುವ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ. “ಒಂದೆರಡು ನಿಮಿಷ” ಎಂದೇ ಮೊಬೈಲ್ ಕೈಗೆತ್ತಿಕೊಳ್ಳುವದರಿಂದ, ಗಂಟೆಗಳ ಕಾಲ ಸಮಯ ವ್ಯರ್ಥವಾಗುವುದು ಸಾಮಾನ್ಯ. ಈ ಡಿಜಿಟಲ್ ವ್ಯಸನದಿಂದ ಮುಕ್ತಿಯಾಗಲು ಹಲವಾರು ಉಪಾಯಗಳು ಇದ್ದರೂ, ಫಲಿತಾಂಶ ಕಡಿಮೆಯೇ ಇರುತ್ತದೆ.

ಆದರೆ ‘Forest: Stay Focused’ ಎಂಬ ಆ್ಯಪ್‌ ಇದರ ಬದಲಿ ಪರಿಹಾರವಾಗಬಹುದು. ಇದರ ಮೂಲಕ ನೀವು ಮೊಬೈಲ್‌ನಿಂದ ದೂರವಿರುವಷ್ಟು ಸಮಯ ನಿಗದಿಪಡಿಸಬಹುದು.

ಆ್ಯಪ್ ಹೇಗೆ ಕೆಲಸ ಮಾಡುತ್ತದೆ?

  • ನೀವು ಮೊಬೈಲ್ ಉಪಯೋಗಿಸದೆ ಇರಬೇಕಾದ ಸಮಯವನ್ನು ಆಯ್ಕೆಮಾಡಿ, ಆ ಸಮಯದಲ್ಲಿ ಒಂದು ಡಿಜಿಟಲ್ ಮರವನ್ನು ನೆಡಲಾಗುತ್ತದೆ.
  • ನೀವು ಮೊಬೈಲ್ ಉಪಯೋಗಿಸಿದರೆ, ಆ ಗಿಡ ನಶಿಸುತ್ತೆ.
  • ನೀವು ಮೊಬೈಲ್ ಸ್ಪರ್ಶವಿಲ್ಲದೇ ನಿರ್ದಿಷ್ಟ ಸಮಯವನ್ನೂ ಪೂರೈಸಿದರೆ, ಆ ಮರ ಬೆಳೆಯುತ್ತದೆ.
  • ಮರಗಳನ್ನು ಬೆಳೆಯಿಸುತ್ತಾ ಹೋದಂತೆ, ನಿಮ್ಮ ‘ವರ್ಚುವಲ್ ಕಾಡು’ ಹರಡುತ್ತ ಹೋಗುತ್ತದೆ.

ಇದರ ವಿಶೇಷತೆ ಏನು?

ಹೆಚ್ಚು ಮರಗಳನ್ನು ಬೆಳೆಸಿದಂತೆ ಕಾಯಿನ್‌ಗಳು ಸಿಗುತ್ತವೆ. ಈ ಕಾಯಿನ್‌ಗಳನ್ನು ನಿಜವಾದ ಮರಗಳನ್ನು ನೆಡುವ ಪರಿಸರ ಪ್ರಾಜೆಕ್ಟ್‌ಗಳಿಗೆ ದಾನವಾಗಿ ಬಳಸಿ, ನಿಜಕ್ಕೂ ಗಿಡ ನೆಡುವ ಅವಕಾಶ ದೊರೆಯುತ್ತದೆ.

ಫಲಿತಾಂಶ?

  • ಮೊಬೈಲ್ ವ್ಯಸನ ಕಡಿಮೆಯಾಗುತ್ತದೆ
  • ಗಮನ ವೃದ್ಧಿಯಾಗುತ್ತದೆ
  • ಪರಿಸರದ ರಕ್ಷಣೆಗೆ ಸಹಭಾಗಿಯಾಗುವ ಸಂತೋಷವೂ ಸಿಗುತ್ತದೆ

ಡಿಜಿಟಲ್ ಜಗತ್ತಿನಲ್ಲಿ ಕಾಲ ಕಳೆಯುವುದರ ಬದಲು, ಮರ ಬೆಳೆಯಿಸಿ, ಸಮಯವನ್ನು ಅರ್ಥಪೂರ್ಣವಾಗಿ ಕಳೆಯೋಣ.

The post ಮೊಬೈಲ್‌ ಬಿಡಿ, ಗಿಡ ನೆಡಿ – ನಿಮ್ಮ ಓಲೈಕೆಯಲ್ಲೊಂದು ಕಾಡು ಬೆಳೆಸೋಣ. appeared first on Good News 24x7.

]]>
ಮೊಬೈಲ್‌ಫೋನ್ ಬೆಳಕಿನಲ್ಲಿಯೇ ಮೈಸೂರು ಕ್ರಾಫರ್ಡ್ ಭವನದಲ್ಲಿ ಮೌಲ್ಯಮಾಪನ! https://www.goodnews24x7.com/evaluation-in-the-light-of-a-mobile-phone/ Fri, 27 Jun 2025 06:47:38 +0000 https://www.goodnews24x7.com/?p=4712 ಮೈಸೂರು : ಕ್ರಾಫರ್ಡ್ ಭವನದಲ್ಲಿರುವ ಪರೀಕ್ಷಾ ಭವನದಲ್ಲಿ ಗುರುವಾರ ವಿದ್ಯುತ್ ವ್ಯತ್ಯಯದಿಂದಾಗಿ ಮೌಲ್ಯಮಾಪಕರು ಪದವಿ ಪರೀಕ್ಷೆಗಳ ಉತ್ತರಪತ್ರಿಕೆಗಳನ್ನು ಮೊಬೈಲ್‌ಫೋನ್ ಬೆಳಕಿನಲ್ಲಿಯೇ ಮೌಲ್ಯಮಾಪನ ನಡೆಸಿದ ಘಟನೆ ನಡೆದಿದೆ. ಸೆಸ್ಕ್ ಮೂರು ದಿನದ ಹಿಂದೆಯೇ ‘ಕಲಾಮಂದಿರ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂಬ…

The post ಮೊಬೈಲ್‌ಫೋನ್ ಬೆಳಕಿನಲ್ಲಿಯೇ ಮೈಸೂರು ಕ್ರಾಫರ್ಡ್ ಭವನದಲ್ಲಿ ಮೌಲ್ಯಮಾಪನ! appeared first on Good News 24x7.

]]>

ಮೈಸೂರು : ಕ್ರಾಫರ್ಡ್ ಭವನದಲ್ಲಿರುವ ಪರೀಕ್ಷಾ ಭವನದಲ್ಲಿ ಗುರುವಾರ ವಿದ್ಯುತ್ ವ್ಯತ್ಯಯದಿಂದಾಗಿ ಮೌಲ್ಯಮಾಪಕರು ಪದವಿ ಪರೀಕ್ಷೆಗಳ ಉತ್ತರಪತ್ರಿಕೆಗಳನ್ನು ಮೊಬೈಲ್‌ಫೋನ್ ಬೆಳಕಿನಲ್ಲಿಯೇ ಮೌಲ್ಯಮಾಪನ ನಡೆಸಿದ ಘಟನೆ ನಡೆದಿದೆ.

ಸೆಸ್ಕ್ ಮೂರು ದಿನದ ಹಿಂದೆಯೇ ‘ಕಲಾಮಂದಿರ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂಬ ಪ್ರಕಟಣೆ ಹೊರಡಿಸಿತ್ತು. ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. ಮೈಸೂರು ವಿಶ್ವವಿದ್ಯಾಲಯವು ಅದಕ್ಕೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಇದ್ದರಿಂದ ಮೌಲ್ಯಮಾಪಕರು ಇಡೀ ದಿನ ತೊಂದರೆ ಅನುಭವಿಸಿದ ಘಟನೆ ನಡೆದಿದೆ.
ವಯಸ್ಸಾದ ಪ್ರಾಧ್ಯಾಪಕರು ಮಂದ ಬೆಳಕಿನಲ್ಲಿ ಮೌಲ್ಯಮಾಪನ ಮಾಡಿದ್ದರಿಂದ, ಅಂಕಗಳು ವ್ಯತ್ಯಾಸವಾಗುವ ಆತಂಕವೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಚಿತ್ರಗಳಿಂದ ವ್ಯಕ್ತವಾಗಿದೆ.

ಪರೀಕ್ಷಾಂಗ ವಿಭಾಗ ಪರ್ಯಾಯ ವ್ಯವಸ್ಥೆ ಮಾಡಿರಲಿಲ್ಲ. ಕಿಟಕಿಗಳು ದೂರದಲ್ಲಿದ್ದವು. ಮೋಡವೂ ಕವಿದಿದ್ದರಿಂದ ಬೆಳಕಿರಲಿಲ್ಲ. ನಾಳೆ ಉತ್ತರ ಪತ್ರಿಕೆಗಳನ್ನೂ ನೋಡುತ್ತೇವೆಂದರೂ ಅವಕಾಶ ನೀಡಲಿಲ್ಲ. ಜನರೇಟರ್ ಕೆಟ್ಟಿದ್ದು, ಡೀಸೆಲ್ ಹಾಕಲೂ ವಿಶ್ವವಿದ್ಯಾಲಯದ ಬಳಿ ಹಣವಿಲ್ಲವೆಂದು ಹೇಳಿದ್ದರಿಂದ ಸುಮ್ಮನಾದೆವು ಎಂದು ಸಹಾಯಕ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ಗಂಭೀರತೆಯೂ ಮಾಯ: ‘ಉತ್ತರ ಪತ್ರಿಕೆಗಳ ಮೌಲ್ಯಮಾಪನ 20 ದಿನದಿಂದ ನಡೆಯುತ್ತಿದೆ. ಐವರು ಮೌಲ್ಯಮಾಪಕರಿಗೆ ಒಬ್ಬ ಪ್ರತಿ ಮುಖ್ಯಸ್ಥರಿರುತ್ತಾರೆ. ನಿಗದಿಯಂತೆ ಪ್ರಕ್ರಿಯೆ ಆರಂಭವಾಗಿತ್ತು. ಕಳೆದ ಬಾರಿಯ ಹಣವನ್ನೇ ನೀಡದ್ದರಿಂದ ಉಪನ್ಯಾಸಕರು ಪ್ರತಿಭಟಿಸಿದ್ದರು. ದೊಂಬಿಯಂತೆ ಪ್ರಕ್ರಿಯೆ ನಡೆದಿದೆ. ಮೊದಲಿದ್ದ ಗಂಭೀರತೆಯೇ ಮಾಯವಾಗಿದೆ ಎಂದರು.
ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ. ಉಪನ್ಯಾಸಕರು ಮೌಲ್ಯಮಾಪನದ ದಿನವೇ ಕಂಪ್ಯೂಟರ್ ಗೆ ಅಂಕಗಳ ದತ್ತಾಂಶ ನೀಡಬೇಕಿತ್ತು. ಈಗ ಮಾರನೇಯ ದಿನ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಗೆ ಪರೀಕ್ಷಾಂಗ ಕುಲಸಚಿವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ ಎಂದು ಆರೋಪಿಸಲಾಗಿದೆ.

ಗ್ರಾಮೀಣ ಭಾಗದ ಖಾಯಂ ಪ್ರಾಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರಿಂದಲೇ ಮೌಲ್ಯಮಾಪನ ನಡೆದಿದೆ. ಆದರೆ, ನಗರ ಭಾಗದ ಖಾಯಂ ಅಧ್ಯಾಪಕರು ಬರುತ್ತಿಲ್ಲ. ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂಬ ಸುತ್ತೋಲೆಯನ್ನೂ ಹೊರಡಿಸುತ್ತಿಲ್ಲ ಎಂದು ಅಧ್ಯಾಪಕರೊಬ್ಬರು ತಿಳಿಸಿದರು.

ಮೊದಲಿದ್ದ ಪಾರದರ್ಶಕತೆ, ಶಿಸ್ತು ಇಲ್ಲ. ಯಾರು ಬೇಕಾದರೂ ಭವನದೊಳಕ್ಕೆ ಬರಬಹುದು. ಭದ್ರತೆಯ ಬಗ್ಗೆಯೂ ನಿರ್ಲಕ್ಷ್ಯವಿದೆ. ಎಲ್ಲಕ್ಕೂ ವಿಶ್ವವಿದ್ಯಾಲಯಕ್ಕೆ ಹಣವಿಲ್ಲವೆಂದು ಆಡಳಿತ ಸಿಬ್ಬಂದಿ ಹೇಳುತ್ತಾರೆ. ಮೌಲ್ಯಮಾಪನಕ್ಕೆ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಡೆಯುವುದೇಕೆ ಎಂದು ಅಧ್ಯಾಪಕರೊಬ್ಬರು ಪ್ರಶ್ನಿಸಿದ್ದಾರೆ.

The post ಮೊಬೈಲ್‌ಫೋನ್ ಬೆಳಕಿನಲ್ಲಿಯೇ ಮೈಸೂರು ಕ್ರಾಫರ್ಡ್ ಭವನದಲ್ಲಿ ಮೌಲ್ಯಮಾಪನ! appeared first on Good News 24x7.

]]>
ಮೈಸೂರು ಬೆಟ್ಟದಲ್ಲಿ ಆಷಾಢ ಸಂಭ್ರಮ, ಭಕ್ತರಿಗೆ? ಇಲ್ಲಿದೆ ಸಂಪೂರ್ಣ ವಿವರ! https://www.goodnews24x7.com/ashada-celebrations-in-mysore-hills-devotees-here-are-the-complete-details/ Thu, 26 Jun 2025 11:00:28 +0000 https://www.goodnews24x7.com/?p=4651 ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಸಿದ್ಧತೆ ಜೋರಾಗಿ ಸಾಗುತ್ತಿದೆ. ಈ ಮಾಸದಲ್ಲಿ ಶುಕ್ರವಾರ ಶನಿವಾರ ಮತ್ತು ಭಾನುವಾರಗಳಂದು ಚಾಮುಂಡೇಶ್ವರಿ ಬೆಟ್ಟಕ್ಕೆ ಯಾವುದೇ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ. ಪ್ರತಿ ಆಷಾಢ…

The post ಮೈಸೂರು ಬೆಟ್ಟದಲ್ಲಿ ಆಷಾಢ ಸಂಭ್ರಮ, ಭಕ್ತರಿಗೆ? ಇಲ್ಲಿದೆ ಸಂಪೂರ್ಣ ವಿವರ! appeared first on Good News 24x7.

]]>

ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಸಿದ್ಧತೆ ಜೋರಾಗಿ ಸಾಗುತ್ತಿದೆ. ಈ ಮಾಸದಲ್ಲಿ ಶುಕ್ರವಾರ ಶನಿವಾರ ಮತ್ತು ಭಾನುವಾರಗಳಂದು ಚಾಮುಂಡೇಶ್ವರಿ ಬೆಟ್ಟಕ್ಕೆ ಯಾವುದೇ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ. ಪ್ರತಿ ಆಷಾಢ ಶುಕ್ರವಾರದಂದು ಮಾತ್ರ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಇನ್ನುಳಿದಂತೆ ಲಲಿತ ಮಹಲ್ ಆವರಣದಿಂದ ಸಾರಿಗೆ ಬಸ್ ಸೇವೆ ಇರಲಿದೆ. ಉಳಿದ ಎರಡು ದಿನಗಳಲ್ಲಿ ಲಲಿತ ಮಹಲ್ ಆವರಣದಿಂದ ಚಾಮುಂಡೇಶ್ವರಿ ಬೆಟ್ಟಕ್ಕೆ ಶುಲ್ಕ ಪಾವತಿಸಿ ಬಸ್ನಲ್ಲಿ ತೆರಳಬೇಕಾಗುತ್ತದೆ.

ದರ್ಶನಕ್ಕೆ ಬೆಟ್ಟದಲ್ಲಿ ಸಿಗಲ್ಲ ಟಿಕೆಟ್: ಮತ್ತೆಲ್ಲಿ ಸಿಗುತ್ತೆ?
ಚಾಮುಂಡಿ ಬೆಟ್ಟದ ಮೇಲೆ ದರ್ಶನದ ಯಾವುದೇ ಟಿಕೆಟ್ ನೀಡಲಾಗುವುದಿಲ್ಲ. ಬದಲಿಗೆ ಎಲ್ಲಾ ವಿಶೇಷ ದರ್ಶನದ ಟಿಕೆಟ್ಗಳನ್ನು ಲಲಿತ ಮಹಲ್ ಆವರಣದಲ್ಲಿ ಹಾಗೂ ನಗರ ಬಸ್ ನಿಲ್ದಾಣದಲ್ಲಿ ನೀಡಲಾಗುತ್ತಿದೆ. ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿ ಬಳಕೆ ನಿರ್ಬಂಧಿಸಿದ ಆರೋಗ್ಯ ಇಲಾಖೆ ಮೋಬೈಲ್, ಕ್ಯಾಮರಾ ಬಳಸಿದರೆ ಮತ್ತೆಂದೂ ಸಿಗದು!
ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಉತ್ಸವ ಮೂರ್ತಿ, ಗರ್ಭಗುಡಿ ಮತ್ತು ಪ್ರಾಂಗಣದಲ್ಲಿ ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಛಾಯಾ ಚಿತ್ರ ಮಾಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ವಿಡಿಯೋ ಮಾಡಿದ್ದಲ್ಲಿ ಅಥವಾ ಫೋಟೋ ತೆಗೆದಿದ್ದಲ್ಲಿ ಶಾಶ್ವತವಾಗಿ ಮೊಬೈಲ್ ಹಾಗೂ ಕ್ಯಾಮರಾಗಳನ್ನು ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಪ್ರಾಧಿಕಾರದ ವತಿಯಿಂದ ಉತ್ಸವ ಮೂರ್ತಿಯ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿ ನೇರ ಪ್ರಸಾರ ಮಾಡಲಾಗುತ್ತದೆ. ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವನ್ನು ನೋಡಬಹುದಾಗಿದೆ.

ಭಕ್ತರಿಗೆ ಉಚಿತ ಡ್ರೈಫ್ರೂಟ್ಸ್, ಬಾದಾಮಿ ಹಾಲು
ಧರ್ಮ ದರ್ಶನದ ಸಾಲಿನಲ್ಲಿ ಬರುವಂತಹ ಭಕ್ತಾದಿಗಳಿಗೆ ಉಚಿತ ಡ್ರೈಫ್ರೂಟ್ಸ್ ಹಾಗೆ ಬಾದಾಮಿ ಹಾಲು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಧರ್ಮ ದರ್ಶನದ ಸರದಿ ಸಾಲಿನಲ್ಲಿ ಮಾರಾಟದ ಮಳಿಗೆಗಳನ್ನ ತೆರೆದು ಮಳಿಗೆಗಳಲ್ಲಿ ನಂದಿನಿ ಉತ್ಪನ್ನಗಳು ಹಾಗೂ ಗಾಜಿನ ನೀರಿನ ಬಾಟಲ್, ಕಾಫಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ಭಕ್ತರಿಗೆ ಕುಂಕುಮ ಪ್ರಸಾದ, ಮುತ್ತೈದೆರಿಗೆ ಮಡಿಲಕ್ಕಿ ವಿತರಣೆ ಪ್ರಾಧಿಕಾರದ ವತಿಯಿಂದ ಇರಲಿದೆ.

ಭಕ್ತರಿಗೆ ವಿಶೇಷ ಗಿಫ್ಟ್ ಬ್ಯಾಗ್: ಏನೇನಿರಲಿದೆ?

ಪ್ಲಾಸ್ಟಿಕ್ ಮುಕ್ತ ವಲಯಕ್ಕೆ ಆದ್ಯತೆಯನ್ನು ನೀಡಲಾಗಿದ್ದು, ಬಟ್ಟೆ ಬ್ಯಾಗ್ಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 2000 ರೂ. ಟಿಕೆಟ್ ಪಡೆಯುವಂತಹ ಭಕ್ತರಿಗೆ ವಿಶೇಷವಾಗಿ ಒಂದು ವಿಗ್ರಹ ಒಂದು ಲಾಡು ಪ್ರಸಾದ ಮತ್ತು 500 ಎಂಎಲ್ ನೀರಿನ ಗಾಜಿನ ಬಾಟಲ್ ಒಳಗೊಂಡಂತೆ ವಿಶೇಷ ಬ್ಯಾಗ್ ನೀಡಲಾಗುತ್ತದೆ. ಈ ವಿಶೇಷ ಗಿಫ್ಟ್ ಬ್ಯಾಗ್ನಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹ, ಗಂಡಬೇರುಂಢ ವಿಗ್ರಹ, ಅಂಬಾರಿ ಹೊತ್ತಿರುವಂತಹ ಆನೆಯ ವಿಗ್ರಹ, ಕುಂಕುಮ ಭರಣಿ, ಕೈಗೆ ಕಟ್ಟುವಂತಹ ದಾರ ಸೇರಿದಂತೆ ಶ್ರೀ ಚಕ್ರವಿರುವಂತಹ ಮರದ ಬಾಕ್ಸ್ ನೀಡಲಾಗುತ್ತದೆ.


ಚಾಮುಂಡಿ ಬೆಟ್ಟ ಸುತ್ತ ಬಿಗಿ ಭದ್ರತೆ
ಚಾಮುಂಡೇಶ್ವರಿ ಬೆಟ್ಟದ ಬುಡದಿಂದ ಸಾವಿರ ಮೆಟ್ಟಿಲುಗಳಿಗೆ, ಚಾಮುಂಡೇಶ್ವರಿ ಬೆಟ್ಟದ ಮೇಲ್ಭಾಗ ಸೇರಿದಂತೆ ಲಲಿತ ಮಹಲ್ ಆವರಣದಲ್ಲಿ ನೂರಕ್ಕೂ ಹೆಚ್ಚು ಎಐ ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ದರ್ಶನಕ್ಕೆ ಬರುವಂತಹ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಜೊತೆಗೆ ಶೌಚಾಲಯಗಳ ವ್ಯವಸ್ಥೆ ಹಾಗೂ ಇತರೆ ಸೌಕರ್ಯಗಳನ್ನ ಸಹ ಮಾಡಲಾಗಿದೆ.


ವಾಟರ್ ಬಾಟಲ್ ಗಾಜಿನದ್ದು, ವಾಪಸ್ ಕೊಟ್ರೆ ಸಿಗತ್ತೆ ದುಡ್ಡು!
ಈ ಬಾರಿ ವಿಶೇಷವಾಗಿ, ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ನೀರನ್ನು ಗಾಜಿನ ಬಾಟಲ್ಗಳ ಮೂಲಕ ಮಾರಾಟ ಮಾಡಲಾಗುತ್ತದೆ. 500 ಎಂಎಲ್ ಗಾಜಿನ ನೀರಿನ ಬಾಟಲಿಗೆ 50 ರೂ. ಇದ್ದು, ಬಾಟಲ್ ವಾಪಸ್ ನೀಡಿದರೆ 30 ರೂ. ವಾಪಸ್ ನೀಡುವ ವ್ಯವಸ್ಥೆ ಮಾಡಲಾಗಿದೆ.  ಈ ಬಾರಿಯೂ ನಾಲ್ಕು ಶುಕ್ರವಾರ ಮತ್ತು ಒಂದು ವರ್ಧಂತಿ ದಿನ ದಾಸೋಹದ , ಹೂವಿನ ಅಲಂಕಾರ ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಉತ್ತಮ ಗುಣಮಟ್ಟದ ಬ್ಯಾರಿಕೇಡಗಳು ಹಾಗೆಯೇ ಜರ್ಮನ್ ಟೆಂಟ್ಗಳ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ.

The post ಮೈಸೂರು ಬೆಟ್ಟದಲ್ಲಿ ಆಷಾಢ ಸಂಭ್ರಮ, ಭಕ್ತರಿಗೆ? ಇಲ್ಲಿದೆ ಸಂಪೂರ್ಣ ವಿವರ! appeared first on Good News 24x7.

]]>
ಎಷ್ಟೇ ರೇಡ್ ಮಾಡಿದ್ರೂ ಅದೇ ರಾಗ ಅದೇ ಹಾಡು : ಪರಪ್ಪನ ಅಗ್ರಹಾರ ಜೈಲಿನಲ್ಲಿ‌ ಮತ್ತೆ ಮೊಬೈಲ್ ಸೌಂಡ್! https://www.goodnews24x7.com/%e0%b2%8e%e0%b2%b7%e0%b3%8d%e0%b2%9f%e0%b3%87-%e0%b2%b0%e0%b3%87%e0%b2%a1%e0%b3%8d-%e0%b2%ae%e0%b2%be%e0%b2%a1%e0%b2%bf%e0%b2%a6%e0%b3%8d%e0%b2%b0%e0%b3%82-%e0%b2%85%e0%b2%a6%e0%b3%87-%e0%b2%b0/ Wed, 18 Dec 2024 10:49:31 +0000 https://www.goodnews24x7.com/?p=1196 ಬೆಂಗಳೂರು : ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ರಾಜಾತಿಥ್ಯ ಕೇಸ್ ಬಳಿಕ ಜೈಲ್ನಲ್ಲಿ ಸಾಕಷ್ಟು ಮೊಬೈಲ್ ಪತ್ತೆ ಆಗಿದ್ದವು. ಸಿಸಿಬಿ ಅಧಿಕಾರಿಗಳು ರೇಡ್ ಮಾಡಿ, ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರೂ ಮೊಬೈಲ್ ಬಳಕೆ ನಿಯಂತ್ರಣಕ್ಕೆ ಬಂದಿರಲಿಲ್ಲ. ಇದೀಗ ಪರಪ್ಪನ ಅಗ್ರಹಾರದಲ್ಲಿ ಮತ್ತೆ ಮೊಬೈಲ್…

The post ಎಷ್ಟೇ ರೇಡ್ ಮಾಡಿದ್ರೂ ಅದೇ ರಾಗ ಅದೇ ಹಾಡು : ಪರಪ್ಪನ ಅಗ್ರಹಾರ ಜೈಲಿನಲ್ಲಿ‌ ಮತ್ತೆ ಮೊಬೈಲ್ ಸೌಂಡ್! appeared first on Good News 24x7.

]]>

ಬೆಂಗಳೂರು : ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ರಾಜಾತಿಥ್ಯ ಕೇಸ್ ಬಳಿಕ ಜೈಲ್ನಲ್ಲಿ ಸಾಕಷ್ಟು ಮೊಬೈಲ್ ಪತ್ತೆ ಆಗಿದ್ದವು. ಸಿಸಿಬಿ ಅಧಿಕಾರಿಗಳು ರೇಡ್ ಮಾಡಿ, ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರೂ ಮೊಬೈಲ್ ಬಳಕೆ ನಿಯಂತ್ರಣಕ್ಕೆ ಬಂದಿರಲಿಲ್ಲ. ಇದೀಗ ಪರಪ್ಪನ ಅಗ್ರಹಾರದಲ್ಲಿ ಮತ್ತೆ ಮೊಬೈಲ್ ಬಳಕೆ ಮಾಡಲಾಗುತ್ತಿದ್ದು, ಆ ಮೂಲಕ ಆರೋಪಿಗಳು ಜೈಲಿನಿಂದಲೇ ಹಣಕ್ಕಾಗಿ ಧಮ್ಕಿ ಮತ್ತು ಡ್ರಗ್ ಡೀಲಿಂಗ್ ಮಾಡುತ್ತಿದ್ದಾರೆ.

ಸೆಂಟ್ರಲ್ ಜೈಲ್ನಲ್ಲಿ ಇದೀಗ ಮತ್ತೆ ಮೊಬೈಲ್ ಬಳಕೆಯಿಂದಾಗಿ ರೌಡಿಗಳು ಮತ್ತು ಡ್ರಗ್ಸ್ ಡೀಲರ್ಗಳ ಆಟಾಟೋಪ ಮುಂದುವರಿದಿದೆ. ಆರೋಪಿಗಳು, ಶಿಕ್ಷೆಗೆ ಒಳಪಟ್ಟ ಖೈದಿಗಳಿಂದ ಮೊಬೈಲ್ ಬಳಕೆ ನಿತ್ಯ ನಿರಂತರವಾಗಿದೆ.
ಹೊರಗಡೆಗಿಂತ ಪರಪ್ಪನ ಅಗ್ರಹಾರ ಜೈಲೇ ಕ್ರಿಮಿನಲ್ಗಳಿಗೆ ಸೇಫ್ ಆಯ್ತಾ ಎಂಬ ಅನುಮಾನಗಳು ಶುರುವಾಗಿವೆ. ಜೈಲಿನ ಖೈದಿಗಳು ರಾಜರೋಷವಾಗಿ ಮೊಬೈಲ್ ಬಳಸುತ್ತಿದ್ದಾರೆ. ಇದಕ್ಕೆ ಸಾಲು ಸಾಲು ಸಾಕ್ಷಿಗಳು ಸಿಕ್ಕಿವೆ. ಜೈಲಿನಲ್ಲಿ ಇನ್ನೂ 250-300 ಮೊಬೈಲ್ಗಳು ಇರುವ ಮಾಹಿತಿಯಿದೆ.
ಜೈಲಿನಲ್ಲೇ ಕೂತು ಸೈಕೋ ವಿಶ್ವನಾಥ್ ಎಂಬ ರೌಡಿಯಿಂದ ವ್ಯಾಪಾರಿಯೊಬ್ಬರಿಗೆ ಫೋನ್ ಮಾಡಿ ಹಣಕ್ಕಾಗಿ ಧಮ್ಕಿ ಹಾಕಲಾಗಿದೆ. ಪ್ರತಿ ವಾರ 40 ಸಾವಿರ ರೂ. ಹಣ ಹಫ್ತಾ ಕೊಡಬೇಕು ಇಲ್ಲ ಕೊಲೆ ಮಾಡುವುದಾಗಿ ಬೆದರಿಕೆ ನೀಡಲಾಗಿದೆ. ಈ ಸಂಬಂಧ ಸೈಕೋ ವಿಶ್ವನಾಥ್ ವಿರುದ್ಧ ಸಿಸಿಬಿಗೆ ವ್ಯಾಪಾರಿ ದೂರು ನೀಡಿದ್ದಾರೆ. ಸದ್ಯ ಬಾಡಿ ವಾರೆಂಟ್ ಮೇಲೆ ಸೈಕೋ ವಿಶ್ವನಾಥ್ ವಶಕ್ಕೆ ಪಡೆದು ಸಿಸಿಬಿ ಪೊಲೀಸರಿಂದ ವಿಚಾರಣೆ ಮಾಡಲಾಗಿದೆ.
ಪರಪ್ಪನ ಜೈಲಿನಲ್ಲೇ ಕೂತು ಬೆಂಗಳೂರಿನಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡಲಾಗುತ್ತಿದೆ. ಡ್ರಗ್ಸ್ ಕೇಸ್ನಲ್ಲಿ ಜೈಲಿಗೆ ಹೋಗಿರುವ ಆರೋಪಿಯಿಂದಲೇ ಡ್ರಗ್ಸ್ ಡೀಲಿಂಗ್ ಮಾಡಲಾಗುತ್ತಿದೆ. ಇತ್ತೀಚೆಗೆ ಸಿಸಿಬಿ ಪೊಲೀಸರು ಡ್ರಗ್ಸ್ ಅಡ್ಡೆ ಮೇಲೆ ದಾಳಿ ಮಾಡಿದ್ದರು. ಇಬ್ಬರನ್ನ ಬಂಧಿಸಿ ವಿಚಾರಣೆ ಮಾಡಿದಾಗ ಮತ್ತೊಬ್ಬನ ಬಗ್ಗೆ ಮಾಹಿತಿ ನೀಡಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತ ಆ ಆರೋಪಿ ಡ್ರಗ್ಸ್ ಮಾರಾಟ ಮಾಡಿಸುತ್ತಿದ್ದ. ಆತನ ಸೂಚನೆಯಂತೆ ಡ್ರಗ್ಸ್ ಕಲೆಕ್ಟ್ ಮಾಡಿ ಪೋರ್ಟರ್ ಮೂಲಕ ಮಾರಾಟ ಮಾಡುತ್ತಿದ್ದರು. ಸದ್ಯ ಈತನನ್ನೂ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲು ಸಿಸಿಬಿ ಸಿದ್ದತೆ ನಡೆಸಿದೆ.
ಜೈಲಿನಲ್ಲೇ ಕೂತು ಬಾಲಕೃಷ್ಣ ಎಂಬಾತನಿಂದ ನಗರದಲ್ಲಿ ಗಾಂಜಾ ಡೀಲಿಂಗ್ ಮಾಡಲಾಗಿದೆ. ಅಶೋಕ ನಗರ ಪೊಲೀಸರಿಂದ ನಾಲ್ವರು ಆರೋಪಿಗಳನ್ನ ಬಂಧಿಲಾಗಿತ್ತು. ಶ್ರೀಕಾಂತ್, ಮುನಿರಾಜು, ಚಂದ್ರಕಾಂತ್, ಬಾಲಕೃಷ್ಣ@ ಜಿಗಣಿ ಬಾಲು ಬಂಧಿತರು. ಆರೋಪಿಗಳು ವಿಶಾಖಪಟ್ಟಣದಿಂದ ಬೆಂಗಳೂರಿಗೆ ಗಾಂಜಾ ಸಾಗಿಸುತ್ತಿದ್ದರು.
ಆರೋಪಿಗಳ ಪೈಕಿ ಜಿಗಣಿ ಬಾಲು ಕ್ರೈಂ ಕೇಸ್ವೊಂದರಲ್ಲಿ ಜೈಲು ಸೇರಿದ್ದ. ಆದರೆ ಜೈಲಿನಲ್ಲಿ ಕೂತು ಗಾಂಜಾ ವ್ಯವಹಾರ ನಡೆಸುತ್ತಿದ್ದ. ಸದ್ಯ ಗಾಂಜಾ ಕೇಸ್ನಲ್ಲಿ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.

The post ಎಷ್ಟೇ ರೇಡ್ ಮಾಡಿದ್ರೂ ಅದೇ ರಾಗ ಅದೇ ಹಾಡು : ಪರಪ್ಪನ ಅಗ್ರಹಾರ ಜೈಲಿನಲ್ಲಿ‌ ಮತ್ತೆ ಮೊಬೈಲ್ ಸೌಂಡ್! appeared first on Good News 24x7.

]]>