Police Archives - Good News 24x7 https://www.goodnews24x7.com/tag/police/ Kannada Wed, 08 Jul 2026 08:02:47 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Police Archives - Good News 24x7 https://www.goodnews24x7.com/tag/police/ 32 32 ಡೀಲ್​ ಕೊಟ್ಟವರಿಗಾಗಿ ಪೊಲೀಸರ ಹುಡುಕಾಟ https://www.goodnews24x7.com/renukaswamy-murder-case-police-search-for-deal-makers/ Wed, 08 Jul 2026 08:02:47 +0000 https://www.goodnews24x7.com/?p=9810 ದರ್ಶನ್ (Darshan) ಆರೋಪಿ ಆಗಿರುವ ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದಲ್ಲಿ ಇತ್ತೀಚೆಗಷ್ಟೆ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದಲ್ಲಿ ಸಾಕ್ಷಿ ಆಗಿದ್ದ ಒಬ್ಬರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪುನೀತ್, ಸುಹಾಸ್ ಮತ್ತು ವೇಣು ಎಂಬುವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಈ…

The post ಡೀಲ್​ ಕೊಟ್ಟವರಿಗಾಗಿ ಪೊಲೀಸರ ಹುಡುಕಾಟ appeared first on Good News 24x7.

]]>

ದರ್ಶನ್ (Darshan) ಆರೋಪಿ ಆಗಿರುವ ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದಲ್ಲಿ ಇತ್ತೀಚೆಗಷ್ಟೆ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದಲ್ಲಿ ಸಾಕ್ಷಿ ಆಗಿದ್ದ ಒಬ್ಬರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪುನೀತ್, ಸುಹಾಸ್ ಮತ್ತು ವೇಣು ಎಂಬುವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಈ ಪ್ರಕರಣದ ಹಿಂದೆ ಕೆಲ ‘ಪ್ರಭಾವಿ’ಗಳು ಇರುವ ಶಂಕೆ ತನಿಖೆ ವೇಳೆ ಪೊಲೀಸರಿಗೆ ಮೂಡಿದ್ದು, ಆ ‘ಪ್ರಭಾವಿ’ಗಳ ಪತ್ತೆ ಹಚ್ಚುವ ಪ್ರಯತ್ನದಲ್ಲಿ ಪೊಲೀಸರು ನಿರತರಾಗಿದ್ದಾರೆ.

ತನಿಖೆ ವೇಳೆ ಆರೋಪಿಗಳಿಂದ ಪೊಲೀಸರು ಹೇಳಿಕೆ, ಮರು ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ಆದರೆ ಆರೋಪಿಗಳು ಪೊಲೀಸರ ವಿಚಾರಣೆಗೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿಲ್ಲ ಎನ್ನಲಾಗುತ್ತಿದೆ. ಮುಖ್ಯವಾಗಿ ಪುನೀತ್ ಎಂಬ ಆರೋಪಿ, ಸಾಕ್ಷ್ಯಗಳ ಹೇಳಿಕೆಗಳನ್ನು ಬದಲಾಯಿಸಿಕೊಡುವ ‘ಡೀಲ್’ ಪಡೆದಿದ್ದ ಎನ್ನಲಾಗುತ್ತಿದೆ. ಈತ ಪದೇ ಪದೇ ಹೇಳಿಕೆಗಳನ್ನು ಬದಲಾಯಿಸುತ್ತಿದ್ದು, ತನಿಖೆ ನಡೆಸುತ್ತಿರುವ ಪೊಲೀಸರಿಗೆ ತಲೆ ನೋವಾಗಿದೆ ಎನ್ನಲಾಗಿದೆ.

ಈಗಾಗಲೇ ಆರೋಪಿಗಳ ಮೊಬೈಲ್​​ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಕೆಲವೇ ದಿನಗಳಲ್ಲಿ ವರದಿ ಬರಲಿದ್ದು, ಈ ವೇಳೆ ಆರೋಪಿಗಳು ಯಾರೊಟ್ಟಿಗೆ ಸಂಪರ್ಕದಲ್ಲಿದ್ದರು ಎಂಬುದು ತಿಳಿಯಲಿದೆ. ಆರೋಪಿಗಳ ಬಂಧನ ಆಗುವ ಮೊದಲೇ ಅವರುಗಳು ಮೊಬೈಲ್ ಕರೆ ದಾಖಲೆಗಳು, ವಾಟ್ಸ್ ಆಪ್ ಚಾಟ್ ಇನ್ನಿತರೆ ಮಾಹಿತಿಗಳನ್ನು ಡಿಲೀಟ್ ಮಾಡಿದ್ದರು. ಫಾರೆನ್ಸಿಕ್ ತನಿಖೆಯಿಂದ ಆ ವರದಿಗಳನ್ನೆಲ್ಲ ಮರಳಿ ಪಡೆಯುವ ಪ್ರಯತ್ನದಲ್ಲಿ ಪೊಲೀಸರು ಇದ್ದಾರೆ. ಸಾಕ್ಷಿಗೆ ಬೆದರಿಕೆ ಹಾಕುವ ಸಮಯದಲ್ಲಿ ಕೆಲವರು ಕಾನ್ಫರೆನ್ಸ್ ಕಾಲ್​​ನಲ್ಲಿ ಇದ್ದರು ಎನ್ನಲಾಗುತ್ತಿದ್ದು, ಆ ಕಾಲ್​​ನಲ್ಲಿ ಆರೋಪಿಗಳ ಹೊರತಾಗಿ ಇನ್ಯಾರ್ಯಾರು ಇದ್ದರು ಎಂಬುದು ವರದಿ ಮೂಲಕ ಬಹಿರಂಗವಾಗುವ ಸಾಧ್ಯತೆ ಇದೆ.

ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದು, ಪ್ರಕರಣದ 49ನೇ ಸಾಕ್ಷಿ ಆಗಿರುವ ದುರ್ಗಾ ಬಾರ್​​​ನ ಸಂದೀಪ್ ಎಂಬುವರಿಗೆ ಆಕರ್ಷ್ ಎಂಬ ವ್ಯಕ್ತಿಯಿಂದ ಕರೆ ಮಾಡಿಸಿ, ತಾವು ಹೇಳಿಕೊಟ್ಟಂತೆ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಬೇಕು ಎಂದು ಆರೋಪಿಗಳು ಹೇಳಿದ್ದರಂತೆ. ಆದರೆ ಸಂದೀಪ್, ನ್ಯಾಯಾಲಯದ ಮುಂದೆ ತಮಗೆ ಸುಳ್ಳು ಸಾಕ್ಷ್ಯ ನುಡಿಯುವ ಬೆದರಿಕೆಯನ್ನು ಕೆಲವರು ಹಾಕಿದ್ದಾರೆ ಎಂದು ಜವಾಬ್ದಾರಿ ಹೇಳಿಕೆಯನ್ನು ನೀಡಿದ್ದರು. ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದು, ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

The post ಡೀಲ್​ ಕೊಟ್ಟವರಿಗಾಗಿ ಪೊಲೀಸರ ಹುಡುಕಾಟ appeared first on Good News 24x7.

]]>
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್‌ ಅಧಿಕಾರಿ https://www.goodnews24x7.com/%e0%b2%b2%e0%b2%82%e0%b2%9a-kas-officer-caught-in-lokayukta-trap-while-accepting-bribe%e0%b2%b8%e0%b3%8d%e0%b2%b5%e0%b3%80%e0%b2%95%e0%b2%b0%e0%b2%bf%e0%b2%b8%e0%b3%81%e0%b2%b5%e0%b2%be%e0%b2%97/ Wed, 29 Apr 2026 11:15:42 +0000 https://www.goodnews24x7.com/?p=9488 ಬೆಂಗಳೂರಿನ ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ ಅಧಿಕಾರಿ ನಾಗಪ್ರಶಾಂತ್, ಬಾಕಿ ಇರುವ ಕಂದಾಯ ಪ್ರಕರಣವೊಂದರಲ್ಲಿ ಅನುಕೂಲಕರ ಆದೇಶ ನೀಡಲು 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಪೈಕಿ ಮೊದಲ ಕಂತಿನ 15 ಲಕ್ಷ ರೂಪಾಯಿಗಳನ್ನು ಈಗಾಗಲೇ ಪಡೆದಿದ್ದ…

The post ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್‌ ಅಧಿಕಾರಿ appeared first on Good News 24x7.

]]>

ಬೆಂಗಳೂರಿನ ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ ಅಧಿಕಾರಿ ನಾಗಪ್ರಶಾಂತ್, ಬಾಕಿ ಇರುವ ಕಂದಾಯ ಪ್ರಕರಣವೊಂದರಲ್ಲಿ ಅನುಕೂಲಕರ ಆದೇಶ ನೀಡಲು 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಪೈಕಿ ಮೊದಲ ಕಂತಿನ 15 ಲಕ್ಷ ರೂಪಾಯಿಗಳನ್ನು ಈಗಾಗಲೇ ಪಡೆದಿದ್ದ ಅವರು, ಇಂದು ದೂರುದಾರ ರವಿಕುಮಾರ್ ಅವರಿಂದ ಎರಡನೇ ಕಂತಿನ 15 ಲಕ್ಷ ರೂಪಾಯಿಗಳನ್ನು ತಮ್ಮ ಹೊರಗುತ್ತಿಗೆ ಚಾಲಕ ಕುಮಾರ್ ಮೂಲಕ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ರೆಡ್‌ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

The post ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್‌ ಅಧಿಕಾರಿ appeared first on Good News 24x7.

]]>
ಪಶ್ಚಿಮ ಬಂಗಾಳದಲ್ಲಿ 100 ಕಚ್ಚಾ ಬಾಂಬ್‌ ಪತ್ತೆ: ಎನ್‌ಐಎ ತನಿಖೆಗೆ ಚುನಾವಣಾ ಆಯೋಗ ಆದೇಶ. https://www.goodnews24x7.com/100-crude-bombs-found-in-west-bengal-election-commission-orders-nia-investigation/ Mon, 27 Apr 2026 10:49:02 +0000 https://www.goodnews24x7.com/?p=9422 ಪಶ್ಚಿಮ ಬಂಗಾಳದ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ಭಾರಿ ಪ್ರಮಾಣದ ಕಚ್ಚಾ ಬಾಂಬ್‌ಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ್ ಎಂಬಲ್ಲಿ ತೃಣಮೂಲ ಕಾಂಗ್ರೆಸ್‌ ಜತೆ ಸಂಬಂಧ ಹೊಂದಿರುವ ವ್ಯಕ್ತಿಯ ಮನೆಯಲ್ಲಿ ಸುಮಾರು…

The post ಪಶ್ಚಿಮ ಬಂಗಾಳದಲ್ಲಿ 100 ಕಚ್ಚಾ ಬಾಂಬ್‌ ಪತ್ತೆ: ಎನ್‌ಐಎ ತನಿಖೆಗೆ ಚುನಾವಣಾ ಆಯೋಗ ಆದೇಶ. appeared first on Good News 24x7.

]]>

ಪಶ್ಚಿಮ ಬಂಗಾಳದ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ಭಾರಿ ಪ್ರಮಾಣದ ಕಚ್ಚಾ ಬಾಂಬ್‌ಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ್ ಎಂಬಲ್ಲಿ ತೃಣಮೂಲ ಕಾಂಗ್ರೆಸ್‌ ಜತೆ ಸಂಬಂಧ ಹೊಂದಿರುವ ವ್ಯಕ್ತಿಯ ಮನೆಯಲ್ಲಿ ಸುಮಾರು 100 ಕಚ್ಚಾ ಬಾಂಬ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಚುನಾವಣಾ ಆಯೋಗವು, ರಾಜ್ಯದಲ್ಲಿ ಪತ್ತೆಯಾಗಿರುವ ಎಲ್ಲ ಸ್ಫೋಟಕ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸುವಂತೆ ಆದೇಶಿಸಿದೆ.

ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ:
ರಾಜ್ಯದಲ್ಲಿ ಶಾಂತಿಯುತ ಚುನಾವಣೆ ನಡೆಸಲು ಮುಂದಾಗಿರುವ ಆಯೋಗವು, ಸ್ಫೋಟಕ ತಯಾರಿಕೆಯಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ ಬಂಧಿಸಲು ವಿಶೇಷ ಕಾರ್ಯಾಚರಣೆ ನಡೆಸುವಂತೆ ರಾಜ್ಯ ಪೊಲೀಸರಿಗೆ ಸೂಚಿಸಿದೆ. ಒಂದು ವೇಳೆ ಯಾವುದೇ ವ್ಯಾಪ್ತಿಯಲ್ಲಿ ಸ್ಫೋಟಕಗಳು ಪತ್ತೆಯಾದರೂ ಅಥವಾ ಮತದಾರರಿಗೆ ಬೆದರಿಕೆ ಹಾಕುವ ಘಟನೆಗಳು ನಡೆದರೆ, ಸಂಬಂಧಪಟ್ಟ ಪೊಲೀಸ್ ಕಮಿಷನರ್ ಮತ್ತು ಸ್ಥಳೀಯ ಠಾಣಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಚುನಾವಣಾ ಭದ್ರತೆ ಮತ್ತು ಮತದಾನ:
ಮತದಾರರು ಯಾವುದೇ ಭಯವಿಲ್ಲದೆ ಮತ ಚಲಾಯಿಸಲು ಅನುಕೂಲವಾಗುವಂತೆ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಬಿಗಿ ಕಣ್ಗಾವಲು ವಹಿಸಲಾಗಿದೆ. ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಈಗಾಗಲೇ ಮುಗಿದಿದ್ದು, ಏಪ್ರಿಲ್ 29ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಬಾಂಬ್ ಪತ್ತೆಯಾದ ಭಾಂಗರ್ ಕ್ಷೇತ್ರದಲ್ಲೂ ಅಂದೇ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿವೆ.

The post ಪಶ್ಚಿಮ ಬಂಗಾಳದಲ್ಲಿ 100 ಕಚ್ಚಾ ಬಾಂಬ್‌ ಪತ್ತೆ: ಎನ್‌ಐಎ ತನಿಖೆಗೆ ಚುನಾವಣಾ ಆಯೋಗ ಆದೇಶ. appeared first on Good News 24x7.

]]>
ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆ ನಾಪತ್ತೆ: ಶೋಧ ಕಾರ್ಯ ಮುಂದುವರಿಕೆ. https://www.goodnews24x7.com/woman-goes-missing-after-trekking-in-tadiyandamol-hills-search-continues/ Fri, 03 Apr 2026 08:13:19 +0000 https://www.goodnews24x7.com/?p=9112 ಮಡಿಕೇರಿ: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ನಾಪತ್ತೆಯಾಗಿರುವ ಮಹಿಳೆಯನ್ನು ಶರಣ್ಯ (36) ಎಂದು ಗುರುತಿಸಲಾಗಿದೆ. ಅವರು ಯವಕಪಾಡಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದು, ಅಲ್ಲಿಂದ ಟ್ರೆಕ್ಕಿಂಗ್‌ಗೆ ಒಬ್ಬರೇ ತೆರಳಿದ್ದರು. ಆನ್‌ಲೈನ್ ಮೂಲಕ ಬುಕ್ಕಿಂಗ್…

The post ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆ ನಾಪತ್ತೆ: ಶೋಧ ಕಾರ್ಯ ಮುಂದುವರಿಕೆ. appeared first on Good News 24x7.

]]>

ಮಡಿಕೇರಿ: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ನಾಪತ್ತೆಯಾಗಿರುವ ಮಹಿಳೆಯನ್ನು ಶರಣ್ಯ (36) ಎಂದು ಗುರುತಿಸಲಾಗಿದೆ. ಅವರು ಯವಕಪಾಡಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದು, ಅಲ್ಲಿಂದ ಟ್ರೆಕ್ಕಿಂಗ್‌ಗೆ ಒಬ್ಬರೇ ತೆರಳಿದ್ದರು. ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಂಡು ಬಂದಿದ್ದ ಶರಣ್ಯ ಅವರನ್ನು ಕಾಡಾನೆಗಳ ಸಂಚಾರ ಇರುವ ಪ್ರದೇಶವಾದ್ದರಿಂದ ಇತರ ಪ್ರವಾಸಿಗರ ಜೊತೆ ಕಳುಹಿಸಲಾಗಿತ್ತು.

ಆದರೆ, ಬೆಟ್ಟಕ್ಕೆ ತೆರಳಿದ್ದ ಇತರ ಪ್ರವಾಸಿಗರು ಹಿಂದಿರುಗಿದ್ದರೂ ಶರಣ್ಯ ಮಾತ್ರ ಮರಳಿ ಬರದ ಹಿನ್ನೆಲೆ ಆತಂಕ ಉಂಟಾಗಿದೆ. ಈ ವಿಷಯವನ್ನು ಸ್ಥಳೀಯ ನಿವಾಸಿ ಕುಡಿಯರ ಮುತ್ತಪ್ಪ ಅವರು ಪೊಲೀಸರಿಗೆ ತಿಳಿಸಿದ್ದಾರೆ.

ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಗ್ರಾಮಸ್ಥರು ಬೆಟ್ಟದ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದರೂ ಮಹಿಳೆಯ ಸುಳಿವು ಇನ್ನೂ ಸಿಗಲಿಲ್ಲ.

ಇನ್ನೂ ಇಂದು ಕೂಡ ಶೋಧ ಕಾರ್ಯ ಮುಂದುವರಿದಿದ್ದು, ಮಹಿಳೆಯ ಮೊಬೈಲ್ ಕೇರಳ ನೆಟ್‌ವರ್ಕ್‌ನಲ್ಲಿ ಸಿಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆ ತಂಡಗಳು ಬೆಟ್ಟದ ಪ್ರದೇಶದಲ್ಲಿ ತಂಗಿದ್ದು ಶೋಧ ಕಾರ್ಯ ತೀವ್ರಗೊಳಿಸಿವೆ.

The post ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆ ನಾಪತ್ತೆ: ಶೋಧ ಕಾರ್ಯ ಮುಂದುವರಿಕೆ. appeared first on Good News 24x7.

]]>
ಲೈಂ*ಕ ದೌರ್ಜನ್ಯ ಆರೋಪ: ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ಬಂಧನ, 14 ದಿನ ನ್ಯಾಯಾಂಗ ಬಂಧನ. https://www.goodnews24x7.com/sexual-assault-charges-renowned-malayalam-director-ranjith-arrested-sent-to-14-days-judicial-custody/ Wed, 01 Apr 2026 10:06:46 +0000 https://www.goodnews24x7.com/?p=9063 ತಿರುವನಂತಪುರ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ರಂಜಿತ್ (Ranjith) ಅವರನ್ನು ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿಯಲ್ಲಿ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಕ್ಯಾರವಾನ್‌ಗೆ ಕರೆದೊಯ್ದು ತಮಗೆ ಕಿರುಕುಳ ನೀಡಲಾಗಿದೆ ಎಂದು ನಟಿಯೊಬ್ಬರು…

The post ಲೈಂ*ಕ ದೌರ್ಜನ್ಯ ಆರೋಪ: ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ಬಂಧನ, 14 ದಿನ ನ್ಯಾಯಾಂಗ ಬಂಧನ. appeared first on Good News 24x7.

]]>

ತಿರುವನಂತಪುರ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ರಂಜಿತ್ (Ranjith) ಅವರನ್ನು ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿಯಲ್ಲಿ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಕ್ಯಾರವಾನ್‌ಗೆ ಕರೆದೊಯ್ದು ತಮಗೆ ಕಿರುಕುಳ ನೀಡಲಾಗಿದೆ ಎಂದು ನಟಿಯೊಬ್ಬರು ಸೋಮವಾರ ಕೊಚ್ಚಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿ ರಂಜಿತ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಬಂಧನದ ಬಳಿಕ ರಂಜಿತ್ ಅವರನ್ನು ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ (JFMC) ಮುಂದೆ ಹಾಜರುಪಡಿಸಲಾಯಿತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಸದ್ಯ ಅವರನ್ನು ಎರ್ನಾಕುಲಂ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಕೊಚ್ಚಿ ಪೊಲೀಸ್ ಆಯುಕ್ತರ ನೇತೃತ್ವದ ವಿಶೇಷ ತನಿಖಾ ತಂಡ (SIT) ಈ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದೆ.

ನಿರ್ದೇಶಕ ರಂಜಿತ್ ವಿರುದ್ಧ ಈ ಹಿಂದೆಯೂ ಇಂತಹ ಗಂಭೀರ ಆರೋಪಗಳು ಕೇಳಿಬಂದಿದ್ದವು. 2024ರಲ್ಲಿ ಬಂಗಾಳಿ ನಟಿಯೊಬ್ಬರು 2009ರ ಘಟನೆಯನ್ನು ಉಲ್ಲೇಖಿಸಿ ದೂರು ನೀಡಿದ್ದರು. ಇದು ರಂಜಿತ್ ವಿರುದ್ಧ ದಾಖಲಾಗಿರುವ ಮೂರನೇ ಪ್ರಕರಣವಾಗಿದ್ದು, ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಆದರೆ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ರಂಜಿತ್, ಇವೆಲ್ಲವೂ ಸುಳ್ಳು ದೂರುಗಳು ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

The post ಲೈಂ*ಕ ದೌರ್ಜನ್ಯ ಆರೋಪ: ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ಬಂಧನ, 14 ದಿನ ನ್ಯಾಯಾಂಗ ಬಂಧನ. appeared first on Good News 24x7.

]]>
ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು! https://www.goodnews24x7.com/police-are-on-the-lookout-for-illegal-immigrants-in-bengalurupolice-are-on-the-lookout-for-illegal-immigrants-in-bengaluru/ Sat, 07 Mar 2026 05:49:22 +0000 https://www.goodnews24x7.com/?p=8747 200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳಿಗೆ ಗೇಟ್​​​ಪಾಸ್ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವಿಸ್ತೃತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರ ಆಯುಕ್ತರ ನೇತೃತ್ವದಲ್ಲಿ ನಡೆದ ಈ ತಪಾಸಣೆಯಲ್ಲಿ 200ಕ್ಕೂ ಹೆಚ್ಚು ದಾಖಲೆರಹಿತ ವಿದೇಶಿಗರನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಬಾಂಗ್ಲಾದೇಶ…

The post ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು! appeared first on Good News 24x7.

]]>

200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳಿಗೆ ಗೇಟ್​​​ಪಾಸ್
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವಿಸ್ತೃತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರ ಆಯುಕ್ತರ ನೇತೃತ್ವದಲ್ಲಿ ನಡೆದ ಈ ತಪಾಸಣೆಯಲ್ಲಿ 200ಕ್ಕೂ ಹೆಚ್ಚು ದಾಖಲೆರಹಿತ ವಿದೇಶಿಗರನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಬಾಂಗ್ಲಾದೇಶ ಮತ್ತು ಆಫ್ರಿಕಾ ಮೂಲದವರು ಹೆಚ್ಚಿದ್ದು, ಅಗತ್ಯ ದಾಖಲೆಗಳಿಲ್ಲದೆ ವಾಸಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ವಶಪಡಿಸಿಕೊಂಡವರನ್ನು FRROಗೆ ಹಸ್ತಾಂತರಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ವಿಶೇಷ ಕಾರ್ಯಾಚರಣೆಯಲ್ಲಿ ಸಿಸಿಬಿ ಅಧಿಕಾರಿಗಳು ಹಾಗೂ ನಗರದ 11 ಡಿಸಿಪಿ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದಾರೆ. ಕಳೆದ ಒಂದು ವಾರದಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ತಪಾಸಣೆ ನಡೆಸಿ ಅಕ್ರಮವಾಗಿ ವಾಸಿಸುತ್ತಿದ್ದ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲಾಗುತ್ತಿದೆ.

ಒಂದೇ ದಿನದಲ್ಲಿ ನೂರಾರು ವಿದೇಶಿ ಪ್ರಜೆಗಳ ಪತ್ತೆ
ಪೊಲೀಸರು ಹೇಳುವಂತೆ ನಗರದಲ್ಲಿ ಒಟ್ಟು 200ಕ್ಕೂ ಅಧಿಕ ಅಕ್ರಮ ವಲಸಿಗರನ್ನು ಗುರುತಿಸಲಾಗಿದ್ದು, ನಿನ್ನೆ ಒಂದೇ ದಿನದಲ್ಲಿ 100ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲಾಗಿದೆ. ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ತಂಗಿದ್ದ ಈ ವಲಸಿಗರು ಅಗತ್ಯ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಇವರಲ್ಲಿ ಹೆಚ್ಚಿನವರು ಬಾಂಗ್ಲಾದೇಶ ಮೂಲದವರಾಗಿದ್ದು, ಆಫ್ರಿಕಾ ಸೇರಿದಂತೆ ಇನ್ನೂ ಕೆಲವು ದೇಶಗಳಿಂದ ಬಂದವರೂ ಪತ್ತೆಯಾಗಿದ್ದಾರೆ.

ಪತ್ತೆಯಾದ ಅಕ್ರಮ ವಲಸಿಗರನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಕಾರ್ಯಾಚರಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ FRRO ಅಧಿಕಾರಿಗಳು ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ.

ತನಿಖೆ ವೇಳೆ ಸಿಕ್ತು ದಾಖಲೆ ಪೊಲೀಸರು ನಡೆಸಿದ ಪರಿಶೀಲನೆ ವೇಳೆ ಕೆಲವರ ಬಳಿ ಆಧಾರ್ ಕಾರ್ಡ್ ಸೇರಿದಂತೆ ಸ್ಥಳೀಯ ದಾಖಲೆಗಳು ಕೂಡ ಪತ್ತೆಯಾಗಿವೆ. ಅವುಗಳ ನೈಜತೆ ಕುರಿತು ಪರಿಶೀಲನೆ ನಡೆಯುತ್ತಿದೆ. ಪತ್ತೆಯಾದ ವಿದೇಶಿ ಪ್ರಜೆಗಳ ವಿವರಗಳನ್ನು ಸಂಬಂಧಿತ ದೇಶಗಳ ಅಧಿಕಾರಿಗಳಿಗೆ ರವಾನಿಸಲಾಗುತ್ತಿದ್ದು, ಅವರ ಗುರುತು ಮತ್ತು ದಾಖಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಈ ಹಿಂದೆ ಪೊಲೀಸ್ ಆಯುಕ್ತರ ಸೂಚನೆಯಂತೆ ವಿವಿಧ ವಿಭಾಗಗಳ ಪೊಲೀಸರು ಅನುಮಾನಾಸ್ಪದ ಪ್ರದೇಶಗಳಲ್ಲಿ ತಲಾಶ್ ನಡೆಸಿ ದಾಖಲೆಗಳ ಪರಿಶೀಲನೆ ವೇಳೆ ಫೆಬ್ರವರಿ 26ರ ಒಂದೇ ದಿನ ಸುಮಾರು 2,000ಕ್ಕೂ ಹೆಚ್ಚು ವಿದೇಶಿಗರು ಪತ್ತೆಯಾಗಿದ್ದರು. ಇದರಲ್ಲಿ ಬಹುತೇಕರು ಸರಿಯಾದ ದಾಖಲೆಗಳಿಲ್ಲದೆ ಅಥವಾ ವೀಸಾ ಅವಧಿ ಮೀರಿಸಿ ನಗರದಲ್ಲಿ ವಾಸಿಸುತ್ತಿರುವುದು ಎಂದು ತಿಳಿದು ಬಂದಿತ್ತು.

 

The post ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು! appeared first on Good News 24x7.

]]>
ದೂರು ನೀಡಲು ಹೋದ ಅಮಾಯಕ ದಲಿತ ಹುಡುಗರ ಮೇಲೆ ಪೊಲೀಸರಿಂದಲೇ ಹ*! https://www.goodnews24x7.com/innocent-dalit-boys-who-went-to-file-a-complaint-were-c-by-the-policeinnocent-dalit-boys-who-went-to-file-a-complaint-were-attacked-by-the-police/ Fri, 06 Mar 2026 10:06:12 +0000 https://www.goodnews24x7.com/?p=8696 ಯಳಂದೂರು ತಾಲ್ಲೂಕಿನ ಕಂದಹಳ್ಳಿ ದಲಿತ ಜನಾಂಗದ ಶಿವರಾಜು ಹಾಗೂ ಕುಮಾರ್ ಎಂಬುವವರು ನನ್ನ ಮೊಬೈಲ್ ಕಳ್ಳತನ ಮಾಡಿ ಅದರಲ್ಲಿದ್ದ ಫೋನ್ ಪೇ/ಯು.ಪಿ.ಐ ಖಾತೆಯಲ್ಲಿ ಪಿನ್ ನಂಬರ್ ನಕಲು ಮಾಡಿ ರೂ.10.560/- ರೂಪಾಯಿಗಳನ್ನು ಅಕ್ರಮವಾಗಿ ಡ್ರಾ ಮಾಡಿರುವ ಬಗ್ಗೆ ದೂರು ನೀಡಲು ಯಳಂದೂರು…

The post ದೂರು ನೀಡಲು ಹೋದ ಅಮಾಯಕ ದಲಿತ ಹುಡುಗರ ಮೇಲೆ ಪೊಲೀಸರಿಂದಲೇ ಹ*! appeared first on Good News 24x7.

]]>

ಯಳಂದೂರು ತಾಲ್ಲೂಕಿನ ಕಂದಹಳ್ಳಿ ದಲಿತ ಜನಾಂಗದ ಶಿವರಾಜು ಹಾಗೂ ಕುಮಾರ್ ಎಂಬುವವರು ನನ್ನ ಮೊಬೈಲ್ ಕಳ್ಳತನ ಮಾಡಿ ಅದರಲ್ಲಿದ್ದ ಫೋನ್ ಪೇ/ಯು.ಪಿ.ಐ ಖಾತೆಯಲ್ಲಿ ಪಿನ್ ನಂಬರ್ ನಕಲು ಮಾಡಿ ರೂ.10.560/- ರೂಪಾಯಿಗಳನ್ನು ಅಕ್ರಮವಾಗಿ ಡ್ರಾ ಮಾಡಿರುವ ಬಗ್ಗೆ ದೂರು ನೀಡಲು ಯಳಂದೂರು ಪೊಲೀಸ್ ಠಾಣೆಗೆ ಹೋಗಿದ್ದ ಸಂದರ್ಭದಲ್ಲಿ ರಕ್ಷಕರೇ ಭಕ್ಷಕರಾದರೆ ಜನ ಸಾಮಾನ್ಯರು ನ್ಯಾಯ ಕೇಳುವುದಾದರೂ ಯಾರನ್ನ ಎಂಬ ಪ್ರಶ್ನೆ ಮೂಡುತ್ತದೆ.

 

 

 

 

 

 

ಮೊಬೈಲ್ ಕಳ್ಳತನ ಆಗಿದೆ ಎನ್ನಬೇಡ ಕಳುವಾಗಿದೆ ಎಂದು ದೂರು ಕೊಡು ಮಗನೇಇಲ್ಲ ಅಂದ್ರೆ ನಿನ್ನ ಮೇಲೆ ಕೇಸ್ ದಾಖಲಿಸುತ್ತೇನೆ ಎಂದು ಅಶ್ಲೀಲ ಪದಗಳಿಂದ ನಿಂದಿಸಿ ನನ್ನ ಕಪಾಲಕ್ಕೆ 10-15 ಬಾರಿ S I ,ಆಕಾಶ್ ಅವರು ಹೊಡೆದರು ಆ ವೇಳೆಯಲ್ಲಿ ಸಬ್ ಇನ್ಸೆಕ್ಟರ್ ಅವರು ಮದ್ಯಪಾನ ಮಾಡಿದ್ದರು ಅವರ ಜೊತೆಯಲ್ಲೇ ಇದ್ದ ಪೊಲೀಸ್ಪೇದೆ ಶಿವಕುಮಾರ್ ಹಾಸನ್ ಅವರು ನನಗೆ ಬೂಟಿಂದ ಹೊಡೆದರೆ ಹೇಗಾಗುತ್ತದೆ ಗೊತ್ತಾ ಮಗನೆ ನಾಟಕ ಆಡಿಕೊಂಡು ಸ್ಟೇಷನ್ ಗೆ ಬಂದಿದ್ದೀರ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಮೊದಲೇ ಕುಡಿದ ನಶೆಯಲ್ಲಿದ್ದ ಆಕಾಶ್ ದೂರುದರರನ್ನೇ ನೀವು ಕುಡಿದುಬಂದಿದ್ದೀರ ಎಂದು ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಮಾಡಿಸಿದ್ದಾರೆ ಡಾಕ್ಟರ್ ಇವರು ಕುಡಿದಿಲ್ಲ ಎಂಬ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಗಾಬರಿ ಗೊಂಡಿದ್ದ ಶಿವರಾಜುಗೆ ಬಿಪಿ ಜಾಸ್ತಿ ಇದೆ ಎಂದಾಗ ಠಾಣೆಗೆ ಕರೆದುಕೊಂಡು ಬಂದು ಮಧ್ಯರಾತ್ರಿ 1.30 ರ ವೇಳೆಯಲ್ಲಿ ಬೈಕ್ ಕಿತ್ತುಕೊಂಡು ಬಿಟ್ಟು ಕಳಿಸಿದ್ದಾರೆ.

ಇದರಿಂದ ನೋವು ಅನುಭವಿಸಿದ ಶಿವರಾಜು ಕೊಳ್ಳೆಗಾಲದ ಆಸ್ಪತ್ರೆಯಲ್ಲಿ ಮೆಡಿಕಲ್ ಸರ್ಟಿಫಿಕೇಟ್ ಮಾಡಿಸಿ ಆನ್ವೆನ್ ನಲ್ಲಿ ಸಬ್ ಇನ್ಸೆಕ್ಟರ್ ಹಾಗೂ ಪೊಲೀಸ್ ಪೇದೆ ವಿರುದ್ಧ ದೂರು ದಾಖಲಿಸಿದ್ದಾರೆ ನಾನು ಬಡವ ಕೂಲಿ ಮಾಡಿದರೆ ಉಂಟು ಇಲ್ಲ ಅಂದರೆ ಇಲ್ಲ ಹೀಗಿರುವಾಗ ಸಬ್ ಇನ್ನೆ ಕ್ಟರ್ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ನನಗೆ ಏನಾದರೂ ತೊಂದರೆ ಆದರೆ ಅವರೇ ನೇರ ಹೊಣೆ ಎಂದು ಪತ್ರಿಕೆ ಜೊತೆ ತಮ್ಮ ಅಳಲನ್ನು ತೋಡಿಕೊಂಡರು ತಕ್ಷಣ ಮೇಲಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೊಂದ ಶಿವರಾಜುಗೆ ನ್ಯಾಯ ಕೊಡಿಸುವರೇ ಕಾದು ನೋಡೋಣ.ರು ನ್ಯಾಯ ರಕ್ಷಕರೇ ಭಕ್ಷಕರಾದರೆ ಜನ ಸಾಮಾನ್ಯಕೇಳುವುದಾದರೂ ಯಾರನ್ನ ಎಂಬ ಪ್ರಶ್ನೆ ಮೂಡುತ್ತದೆ.

The post ದೂರು ನೀಡಲು ಹೋದ ಅಮಾಯಕ ದಲಿತ ಹುಡುಗರ ಮೇಲೆ ಪೊಲೀಸರಿಂದಲೇ ಹ*! appeared first on Good News 24x7.

]]>
2023 ರಲ್ಲಿ ಪೊಲೀಸ್ ಅಧಿಕಾರಿ ಕಾರು ಗುದ್ದಿ ಭಾರತೀಯ ವಿದ್ಯಾರ್ಥಿನಿ ಸಾ*: ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ. https://www.goodnews24x7.com/indian-student-killed-in-2023-after-being-hit-by-police-officers-car-family-to-get-rs-262-crore-compensation/ Thu, 12 Feb 2026 11:45:53 +0000 https://www.goodnews24x7.com/?p=8361 ವಾಷಿಂಗ್ಟನ್: ಅಮೆರಿಕದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದ ಭಾರತೀಯ ವಿದ್ಯಾರ್ಥಿನಿ ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ. ಈ ಮೊತ್ತ ಎಷ್ಟು ದೊಡ್ಡದೆಂದರೆ, ಪೊಲೀಸರ ನಿರ್ಲಕ್ಷ್ಯದಿಂದ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಅಮೆರಿಕ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ಪರಿಹಾರಗಳಲ್ಲಿ ಇದು ಕೂಡ ಒಂದು.…

The post 2023 ರಲ್ಲಿ ಪೊಲೀಸ್ ಅಧಿಕಾರಿ ಕಾರು ಗುದ್ದಿ ಭಾರತೀಯ ವಿದ್ಯಾರ್ಥಿನಿ ಸಾ*: ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ. appeared first on Good News 24x7.

]]>

ವಾಷಿಂಗ್ಟನ್: ಅಮೆರಿಕದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದ ಭಾರತೀಯ ವಿದ್ಯಾರ್ಥಿನಿ ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ. ಈ ಮೊತ್ತ ಎಷ್ಟು ದೊಡ್ಡದೆಂದರೆ, ಪೊಲೀಸರ ನಿರ್ಲಕ್ಷ್ಯದಿಂದ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಅಮೆರಿಕ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ಪರಿಹಾರಗಳಲ್ಲಿ ಇದು ಕೂಡ ಒಂದು. 2023 ರಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಪೊಲೀಸ್ ಅಧಿಕಾರಿಯೊಬ್ಬರ ಕಾರು ಡಿಕ್ಕಿ ಹೊಡೆದು 23 ವರ್ಷದ ಜಾಹ್ನವಿ ಕಂದುಲಾ ಸಾವನ್ನಪ್ಪಿದ್ದರು.

ಜಾಹ್ನವಿ ಕಂದುಲಾ ಭಾರತದವರಾಗಿದ್ದು, ಸಿಯಾಟಲ್‌ನಲ್ಲಿರುವ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು. ಈ ಘಟನೆ ಜನವರಿ 2023 ರಲ್ಲಿ ನಡೆದಿತ್ತು. ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಮಾದಕವಸ್ತು ಸೇವನೆ ಮಾಡಿ, ಫೋನ್​​ ಅಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದರು.

ಅವರು 25 mph ವೇಗದಲ್ಲಿ ಚಾಲನೆ ಮಾಡುವ ಪ್ರದೇಶದಲ್ಲಿ 74 mph (119 kph) ವೇಗದಲ್ಲಿ ಚಾಲನೆ ಮಾಡುತ್ತಿದ್ದರು. ನಂತರ ಅಧಿಕಾರಿಗೆ ಅಜಾಗರೂಕ ಚಾಲನೆಗಾಗಿ 5,000 ಡಾಲರ್ ದಂಡ ವಿಧಿಸಲಾಯಿತು. ಅವರನ್ನು ಪೊಲೀಸ್ ಇಲಾಖೆಯಿಂದ ವಜಾಗೊಳಿಸಲಾಯಿತು. ಆದಾಗ್ಯೂ, ಕಿಂಗ್ ಕೌಂಟಿ ಪ್ರಾಸಿಕ್ಯೂಟರ್‌ಗಳು ಅಧಿಕಾರಿ ಉದ್ದೇಶಪೂರ್ವಕವಾಗಿ ಸುರಕ್ಷತೆಯನ್ನು ನಿರ್ಲಕ್ಷಿಸಿದ್ದಾರೆಂದು ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಅವರ ವಿರುದ್ಧ ಯಾವುದೇ ಗಂಭೀರ ಕ್ರಿಮಿನಲ್ ಆರೋಪಗಳನ್ನು ಹೊರಿಸಲಿಲ್ಲ.

ಮತ್ತೊಬ್ಬರ ಬಾಡಿ ಕ್ಯಾಮರಾದಲ್ಲಿ ರೆಕಾರ್ಡ್​ ಆಗಿದ್ದ ದೃಶ್ಯಗಳು ಬೆಳಕಿಗೆ ಬಂದಾಗ ವಿಷಯ ತುಂಬಾ ಗಂಭೀರವಾಯಿತು. ಕಳೆದ ಶುಕ್ರವಾರ ಕಿಂಗ್ ಕೌಂಟಿ ಸುಪೀರಿಯರ್ ನ್ಯಾಯಾಲಯದಲ್ಲಿ ಇತ್ಯರ್ಥ ಅರ್ಜಿ ಸಲ್ಲಿಸಲಾಗಿದೆ. ಕುಟುಂಬದ ವಕೀಲರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಗರ ಅಟಾರ್ನಿ ಎರಿಕಾ ಇವಾನ್ಸ್ ಮಾತನಾಡಿ, ಜಾಹ್ನವಿ ಕಂದುಲಾ ಅವರ ಸಾವು ಹೃದಯವಿದ್ರಾವಕವಾಗಿತ್ತು. ಈ ಆರ್ಥಿಕ ಇತ್ಯರ್ಥವು ಕಂದುಲಾ ಕುಟುಂಬಕ್ಕೆ ಸ್ವಲ್ಪ ಸಾಂತ್ವನ ನೀಡುತ್ತದೆ ಎಂದು ನಂಬಿದ್ದೇವೆಂದು ಹೇಳಿದ್ದಾರೆ.

The post 2023 ರಲ್ಲಿ ಪೊಲೀಸ್ ಅಧಿಕಾರಿ ಕಾರು ಗುದ್ದಿ ಭಾರತೀಯ ವಿದ್ಯಾರ್ಥಿನಿ ಸಾ*: ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ. appeared first on Good News 24x7.

]]>
ಮನೆ ಮುಂದೆ ನಿಂತಿದ್ದ ಕಾರ್ ಗಳಿಗೆ ಬೆಂಕಿ…! ಎರಡು ಕಾರುಗಳು ಸುಟ್ಟು ಕರುಕಲು…ಕಿಡಿಗೇಡಿಗಳ ದುಷ್ಕೃತ್ಯ…! https://www.goodnews24x7.com/cars-parked-in-front-of-the-house-caught-fire-two-cars-burnt-to-ashes-the-mischief-of-miscreants/ Thu, 20 Nov 2025 07:24:33 +0000 https://www.goodnews24x7.com/?p=8224 ನಂಜನಗೂಡಿನಲ್ಲಿ ಬಿಗಿ ಇಲ್ಲದ ಪೊಲೀಸ್ ಕಾರ್ಯವೈಖರಿಯ ವಿರುದ್ಧ ವ್ಯಾಪಕ ಆಕ್ರೋಶ ನಂಜನಗೂಡು: ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿದೆ.ನಂಜನಗೂಡಿನ ಆರ್.ಪಿ.ರಸ್ತೆಯಲ್ಲಿ ಹಾಗೂ ಶ್ರೀರಾಂಪುರ ಬಡಾವಣೆಯಲ್ಲಿ ಘಟನೆ ನಡೆದಿದೆ.ಮಧ್ಯ ರಾತ್ರಿ ವೇಳೆಯಲ್ಲಿ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಮನೆಯವರು ಎಚ್ಚರವಾಗಿ…

The post ಮನೆ ಮುಂದೆ ನಿಂತಿದ್ದ ಕಾರ್ ಗಳಿಗೆ ಬೆಂಕಿ…! ಎರಡು ಕಾರುಗಳು ಸುಟ್ಟು ಕರುಕಲು…ಕಿಡಿಗೇಡಿಗಳ ದುಷ್ಕೃತ್ಯ…! appeared first on Good News 24x7.

]]>

ನಂಜನಗೂಡಿನಲ್ಲಿ ಬಿಗಿ ಇಲ್ಲದ ಪೊಲೀಸ್ ಕಾರ್ಯವೈಖರಿಯ ವಿರುದ್ಧ ವ್ಯಾಪಕ ಆಕ್ರೋಶ

ನಂಜನಗೂಡು: ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿದೆ.ನಂಜನಗೂಡಿನ ಆರ್.ಪಿ.ರಸ್ತೆಯಲ್ಲಿ ಹಾಗೂ ಶ್ರೀರಾಂಪುರ ಬಡಾವಣೆಯಲ್ಲಿ ಘಟನೆ ನಡೆದಿದೆ.ಮಧ್ಯ ರಾತ್ರಿ ವೇಳೆಯಲ್ಲಿ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಮನೆಯವರು ಎಚ್ಚರವಾಗಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಪರಿಸ್ಥಿತಿ ಕೈ ಮೀರಿದೆ.

ಕೊಲೆ ಸುಲಿಗೆ ಆಯ್ತು ಈಗ ಮನೆ ಮುಂದೆ ನಿಲ್ಲಿಸಿರುವ ಕಾರುಗಳಿಗೆ ಬೆಂಕಿ…!

ಪ್ರಶಾಂತ್ ಎಂಬುವರಿಗೆ ಸೇರಿದ ನ್ಯಾನೋ ಕಾರ್ ಹಾಗೂ ಅಭಿನಾಗಭೂಷಣ್ ಎಂಬುವರಿಗೆ ಸೇರಿದ ಮಹೇಂದ್ರ ಯುವ 500 ಬೆಂಕಿಗೆ ಆಹುತಿಯಾಗಿದೆ.ನಂಜನಗೂಡಿನಲ್ಲಿ ಪೊಲೀಸರ ಕಾರ್ಯ ವೈಖರಿ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.ರಾತ್ರಿ ಗಸ್ತು ಹೆಚ್ಚಿಸುವಂತೆ ಪೊಲೀಸರ ಮೇಲೆ ಸಾರ್ವಜನಿಕರು ಒತ್ತಡ ಹೇರಿದ್ದಾರೆ.ಕೊಲೆ,ಸುಲಿಗೆ ಆಯ್ತು ಇದೀಗ ಮನೆ ಮುಂದೆ ನಿಲ್ಲಿಸಿರುವ ವಾಹನಗಳಿಗೂ ರಕ್ಷಣೆ ಇಲ್ಲ ಎಂದು ಕಿಡಿ ಕಾರಿದ್ದಾರೆ.

The post ಮನೆ ಮುಂದೆ ನಿಂತಿದ್ದ ಕಾರ್ ಗಳಿಗೆ ಬೆಂಕಿ…! ಎರಡು ಕಾರುಗಳು ಸುಟ್ಟು ಕರುಕಲು…ಕಿಡಿಗೇಡಿಗಳ ದುಷ್ಕೃತ್ಯ…! appeared first on Good News 24x7.

]]>
ಸರ್ಕಾರದ ವಿರುದ್ಧ ಪಟ್ಟು ಬಿಡದೆ ರೈತರ ಹೋರಾಟ, ಕಬ್ಬಿಗೆ 3500 ರೂ. ಬೆಂಬಲ ಬೆಲೆ ಕೊಡಲೇಬೇಕು https://www.goodnews24x7.com/farmers-struggle-against-the-government-sugarcane-should-be-given-rs-3500-support-price/ Fri, 14 Nov 2025 05:09:41 +0000 https://www.goodnews24x7.com/?p=8141 ಬೆಳಗಾವಿಯ ಗುರ್ಲಪುರದ ಬಳಿಕ ಬಾಗಲಕೋಟೆಯಲ್ಲಿ ಶುರುವಾದ ರೈತಾಕ್ರೋಶ ಮೂರು ದಿನಗಳಾದ್ರೂ ತಣ್ಣಗಾಗಿಲ್ಲ. ಕಬ್ಬಿಗೆ 3,500 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ನೂರಾರು ರೈತರು ಇವತ್ತು ಮುಧೋಳ ಅಖಾಡಕ್ಕಿಳಿದಿದ್ದರು. ಬೆಂಗಳೂರು: ರಾಜ್ಯದಲ್ಲಿ ಸಿಹಿ ಕಬ್ಬಿನ ಬೆಲೆಗಾಗಿ ಹೊತ್ತಿದ್ದ ಕಿಚ್ಚು ಇನ್ನೂ ಆರಿಲ್ಲ.…

The post ಸರ್ಕಾರದ ವಿರುದ್ಧ ಪಟ್ಟು ಬಿಡದೆ ರೈತರ ಹೋರಾಟ, ಕಬ್ಬಿಗೆ 3500 ರೂ. ಬೆಂಬಲ ಬೆಲೆ ಕೊಡಲೇಬೇಕು appeared first on Good News 24x7.

]]>

ಬೆಳಗಾವಿಯ ಗುರ್ಲಪುರದ ಬಳಿಕ ಬಾಗಲಕೋಟೆಯಲ್ಲಿ ಶುರುವಾದ ರೈತಾಕ್ರೋಶ ಮೂರು ದಿನಗಳಾದ್ರೂ ತಣ್ಣಗಾಗಿಲ್ಲ. ಕಬ್ಬಿಗೆ 3,500 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ನೂರಾರು ರೈತರು ಇವತ್ತು ಮುಧೋಳ ಅಖಾಡಕ್ಕಿಳಿದಿದ್ದರು.

ಬೆಂಗಳೂರು: ರಾಜ್ಯದಲ್ಲಿ ಸಿಹಿ ಕಬ್ಬಿನ ಬೆಲೆಗಾಗಿ ಹೊತ್ತಿದ್ದ ಕಿಚ್ಚು ಇನ್ನೂ ಆರಿಲ್ಲ. ಈಗಾಗಲೇ ಸರ್ಕಾರ 3 ಸಾವಿರದ 300 ರೂ. ಘೋಷಣೆ ಮಾಡಿದೆ. ಇದನ್ನ ಕೆಲ ರೈತರು ಒಪ್ಪಿದ್ರೆ, ಇನ್ನೂ ಕೆಲ ಅನ್ನದಾತರು ನಮಗೆ 3 ಸಾವಿರದ 500 ರೂ. ಬೇಕೇ ಬೇಕು ಅಂತ ಪಟ್ಟು ಹಿಡಿದಿದ್ದಾರೆ. ವಿಜಯಪುರ, ಕಲಬುರ್ಗಿ ನಂತರ ಬಾಗಲಕೋಟೆ, ಬೀದರ್​ನಲ್ಲಿ ರೈತರ ಹೋರಾಟ ಮುಂದುವರೆದಿದ್ದು, ಪ್ರತಿಭಟನೆ ಮಾಡಿದ್ದಾರೆ.

ಕಬ್ಬಿಗೆ ₹3,500 ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ಬೆಳಗಾವಿಯ ಗುರ್ಲಪುರದ ಬಳಿಕ ಬಾಗಲಕೋಟೆಯಲ್ಲಿ ಶುರುವಾದ ರೈತಾಕ್ರೋಶ ಮೂರು ದಿನಗಳಾದ್ರೂ ತಣ್ಣಗಾಗಿಲ್ಲ. ಕಬ್ಬಿಗೆ 3,500 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ನೂರಾರು ರೈತರು ಇವತ್ತು ಮುಧೋಳ ಅಖಾಡಕ್ಕಿಳಿದಿದ್ದರು. ಕಸಬಾ ಜಂಬಗಿ ಕ್ರಾಸ್​ನಲ್ಲಿ ಹೆದ್ದಾರಿ ತಡೆದು, ರಸ್ತೆ ಮೇಲೆ ಮುಳ್ಳು ಕಂಠಿ ಹಾಕಿ ಪ್ರತಿಭಟನೆ ನಡೆಸಿದ್ರು.

ಅಷ್ಟೇ ಅಲ್ಲ, ರಸ್ತೆ ಮಧ್ಯೆಯೇ ಅಡುಗೆ ಮಾಡಿ ರೈತರು ಧರಣಿ ಕುಳಿತಿದ್ರು. ಸರ್ಕಾರ ಸ್ಪಂದಿಸುವವರೆಗೂ ನಾವು ಹೋರಾಟ ನಿಲ್ಲಿಸಲ್ಲ ಅಂತ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು. ಅಲ್ಲದೇ, ಪ್ರತಿಭಟನೆ ಮಾಡ್ತಿದ್ದ ಕಬ್ಬು ಬೆಳೆಗಾರರಿಗೆ ಕಸಬಾ ರೈತರು ಕೂಡ ಸಾಥ್ ನೀಡಿದ್ರು. ಹೆದ್ದಾರಿ ತಡೆದಿದ್ದ ಪರಿಣಾಮ ಅನೇಕ ವಾಹನ ಸವಾರರಿಗೆ ಕಿರಿಕಿರಿ ಉಂಟಾಯ್ತು. ಸ್ಥಳಕ್ಕೆ ಪೊಲೀಸ್ ವಾಹನ ಬಂದ್ರೂ ಪಟ್ಟು ಬಿಡದ ಪ್ರತಿಭಟನೆ ಮುಂದುವೆರೆಸಿದ್ರು. ಬೀದರ್​ನಲ್ಲೂ ಕಬ್ಬು ಬೆಳೆಗಾರರ ಪ್ರತಿಭಟನೆ ತಾರಕಕ್ಕೇರಿತ್ತು. ಕೈಯಲ್ಲಿ ಕಬ್ಬು ಹಿಡಿದು ಬಂದಿದ್ದ ರೈತರು ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಕೂಗಿದ್ರು. ಕೈಯಲ್ಲಿ ಸಿದ್ದರಾಮಯ್ಯ ಹಾಗೂ ಶಿವಾನಂದ್ ಪಾಟೀಲ್​ ಅವ್ರ ಶ್ರದ್ಧಾಂಜಲಿ ಬ್ಯಾನರ್ ಹಿಡಿದು ಆಕ್ರೋಶ ಹೊರಹಾಕಿದ್ರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಬ್ಯಾನರ್​ ಇಳಿಸುವಂತೆ ಸೂಚನೆ ಕೊಟ್ರು. ಇಷ್ಟಾದ್ರೂ ರೈತರ ಆಕ್ರೋಶ ತಣ್ಣಗಾಗಲಿಲ್ಲ.

The post ಸರ್ಕಾರದ ವಿರುದ್ಧ ಪಟ್ಟು ಬಿಡದೆ ರೈತರ ಹೋರಾಟ, ಕಬ್ಬಿಗೆ 3500 ರೂ. ಬೆಂಬಲ ಬೆಲೆ ಕೊಡಲೇಬೇಕು appeared first on Good News 24x7.

]]>