Ravana Archives - Good News 24x7 https://www.goodnews24x7.com/tag/ravana/ Kannada Thu, 30 Jul 2026 09:43:09 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Ravana Archives - Good News 24x7 https://www.goodnews24x7.com/tag/ravana/ 32 32 ರಾಮಾಯಣ’ ಟ್ರೇಲರ್ ಉದ್ದಕ್ಕೂ ರಾವಣನದ್ದೇ ಅಬ್ಬರ ! https://www.goodnews24x7.com/the-entire-trailer-of-ramayana-is-full-of-ravana/ Thu, 30 Jul 2026 09:42:59 +0000 https://www.goodnews24x7.com/?p=9884   ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ‘ರಾಮಾಯಣ’ ಟ್ರೇಲರ್ ಭಾರಿ ಧೂಳೆಬ್ಬಿಸುತ್ತಿದೆ. ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅವರ ರೌದ್ರಾವತಾರದ ಎಂಟ್ರಿಗೆ ಪ್ರೇಕ್ಷಕರು ಥಿಯೇಟರ್‌ನಲ್ಲಿ ಹುಚ್ಚೆದ್ದು ಕುಣಿದಿದ್ದು, ಇಡೀ ಟ್ರೇಲರ್ ಯಶ್ ಅವರ ಅಪ್ರತಿಮ ಡಾಮಿನೇಷನ್‌ನಿಂದ ಕೂಡಿದೆ ಎಂದು ಫ್ಯಾನ್ಸ್ ಕೊಂಡಾಡುತ್ತಿದ್ದಾರೆ. ‘ರಾಮಾಯಣ’ ಟ್ರೇಲರ್…

The post ರಾಮಾಯಣ’ ಟ್ರೇಲರ್ ಉದ್ದಕ್ಕೂ ರಾವಣನದ್ದೇ ಅಬ್ಬರ ! appeared first on Good News 24x7.

]]>

 

ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ‘ರಾಮಾಯಣ’ ಟ್ರೇಲರ್ ಭಾರಿ ಧೂಳೆಬ್ಬಿಸುತ್ತಿದೆ. ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅವರ ರೌದ್ರಾವತಾರದ ಎಂಟ್ರಿಗೆ ಪ್ರೇಕ್ಷಕರು ಥಿಯೇಟರ್‌ನಲ್ಲಿ ಹುಚ್ಚೆದ್ದು ಕುಣಿದಿದ್ದು, ಇಡೀ ಟ್ರೇಲರ್ ಯಶ್ ಅವರ ಅಪ್ರತಿಮ ಡಾಮಿನೇಷನ್‌ನಿಂದ ಕೂಡಿದೆ ಎಂದು ಫ್ಯಾನ್ಸ್ ಕೊಂಡಾಡುತ್ತಿದ್ದಾರೆ.
‘ರಾಮಾಯಣ’ ಟ್ರೇಲರ್ ಉದ್ದಕ್ಕೂ ರಾವಣನದ್ದೇ ಅಬ್ಬರ; ಯಶ್ ರೌದ್ರಾವತಾರ

ಕಿರುತೆರೆ ಮೂಲಕ ಜರ್ನಿ ಆರಂಭಿಸಿ, ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟರು. ಏನಾದರೂ ಮಾಡಿಯೇ ಮಾಡುತ್ತೇನೆ ಎಂದು ಅವರು ಬಲವಾಗಿ ಅಂದುಕೊಂಡಿದ್ದರು. ‘ಕೆಜಿಎಫ್’ ಚಿತ್ರದ ಮೂಲ ಅದನ್ನು ಸಾಧಿಸಿದರು. ಅಲ್ಲಿಗೆ ಅವರು ನಿಲ್ಲಿಸಲಿಲ್ಲ. ‘ಕೆಜಿಎಫ್ 2’ ಮಾಡಿದರು. ಈಗ ‘ಟಾಕ್ಸಿಕ್’ ರಿಲೀಸ್​​ಗೆ ರೆಡಿ ಆಗುತ್ತಿದ್ದಾರೆ. ಇದರ ಜೊತೆಗೆ ‘ರಾಮಾಯಣ’ ಟ್ರೇಲರ್ ಮೂಲಕ ಧೂಳೆಬ್ಬಿಸಿದ್ದಾರೆ.

‘ರಾಮಾಯಣ’ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದೆ. ಈ ಟ್ರೇಲರ್ ಹಾಲಿವುಡ್‌ನ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರದ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಭರ್ಜರಿ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಡೀ ಟ್ರೇಲರ್‌ನಲ್ಲಿ ಲಂಕೇಶ್ವರ ರಾವಣನಾಗಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರದ್ದೇ ಸಂಪೂರ್ಣ ಅಧಿಪತ್ಯ ಎದ್ದು ಕಾಣುತ್ತಿದೆ ಎಂದು ಅನೇಕರು ಬಣ್ಣಿಸುತ್ತಿದ್ದಾರೆ.

ಟ್ರೇಲರ್ ವೀಕ್ಷಿಸಿದ ಪ್ರೇಕ್ಷಕರು ಯಶ್ ಅವರ ನಟನೆಗೆ ಫುಲ್ ಫಿದಾ ಆಗಿದ್ದಾರೆ. ‘ಇಡೀ ರಾಮಾಯಣ ಟ್ರೇಲರ್‌ನಲ್ಲಿ ಅತ್ಯಂತ ರೋಮಾಂಚನ ನೀಡಿದ ಕ್ಷಣ ಎಂದರೆ ಅದು ಯಶ್ ಅವರ ರಾವಣನ ಅವತಾರ. ಅವರ ಕಣ್ಣುಗಳಲ್ಲಿನ ತೀವ್ರತೆ, ಗಾಂಭೀರ್ಯದ ವ್ಯಕ್ತಿತ್ವ ಮತ್ತು ಪರದೆಯ ಮೇಲಿನ ಅವರ ಅಪ್ರತಿಮ ಕ್ರೌರ್ಯದ ನಟನೆ ಎಂದಿಗೂ ಮರೆಯಲಾಗದ ಮೊದಲ ಆಕರ್ಷಣೆ’ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

ಚಿತ್ರಮಂದಿರಗಳಲ್ಲಿ ಟ್ರೇಲರ್ ಪ್ರದರ್ಶನವಾಗುವಾಗ ರಾವಣನ ಎಂಟ್ರಿ ದೃಶ್ಯಕ್ಕೆ ಪ್ರೇಕ್ಷಕರಿಂದ ಹುಚ್ಚೆದ್ದು ಕೂಗಿದ್ದಾರೆ. ‘ಯಶ್ ಅವರು ಇಡೀ ಟ್ರೇಲರ್ ಅನ್ನು ಅತ್ಯಂತ ಸುಲಭವಾಗಿ ಡಾಮಿನೇಟ್ ಮಾಡಿದ್ದಾರೆ’ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಈ ಭವ್ಯ ವಿಶ್ಯುಯಲ್ ವೈಭವ ಹಾಗೂ ಯಶ್ ಅವರ ರೌದ್ರಾವತಾರವನ್ನು ನೋಡುತ್ತಿದ್ದರೆ, ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿ, ಸುನಾಮಿ ಎಬ್ಬಿಸುವುದು ಖಚಿತ ಎಂದು ಸಿನಿವಿಶ್ಲೇಷಕರು ಹಾಗೂ ಪ್ರೇಕ್ಷಕರು ಜಂಟಿಯಾಗಿ ಭವಿಷ್ಯ ನುಡಿಯುತ್ತಿದ್ದಾರೆ.

The post ರಾಮಾಯಣ’ ಟ್ರೇಲರ್ ಉದ್ದಕ್ಕೂ ರಾವಣನದ್ದೇ ಅಬ್ಬರ ! appeared first on Good News 24x7.

]]>
‘ರಾವಣ ಪಾತ್ರಧಾರಿ ಯಶ್ ನಟನೆಯ ರಾಮಾಯಣ’ದ ಬಗ್ಗೆ ಹರಡಿರುವ ವದಂತಿಗೆ ನಟಿ ಫುಲ್ ಸ್ಟಾಪ್ . https://www.goodnews24x7.com/actress-puts-full-stop-to-rumours-about-yash-playing-ravana-in-ramayana/ Wed, 30 Apr 2025 11:43:46 +0000 https://www.goodnews24x7.com/?p=3504 ಕೆಜಿಎಫ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ‘ರಾಮಾಯಣ’ ಸಿನಿಮಾದ ಸೀತಾ ಪಾತ್ರದ ಆಫರ್ ಕೆಜಿಎಫ್ ಸಹನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಸಿಕ್ಕಿತ್ತು. ಈ ಬಗ್ಗೆ ಹರಡಿರುವ ವದಂತಿಗಳಿಗೀಗ ನಟಿ ಫುಲ್ ಸ್ಟಾಪ್ ಇಟ್ಟಿದ್ದಾರೆ. ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನದ…

The post ‘ರಾವಣ ಪಾತ್ರಧಾರಿ ಯಶ್ ನಟನೆಯ ರಾಮಾಯಣ’ದ ಬಗ್ಗೆ ಹರಡಿರುವ ವದಂತಿಗೆ ನಟಿ ಫುಲ್ ಸ್ಟಾಪ್ . appeared first on Good News 24x7.

]]>

ಕೆಜಿಎಫ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ‘ರಾಮಾಯಣ’ ಸಿನಿಮಾದ ಸೀತಾ ಪಾತ್ರದ ಆಫರ್ ಕೆಜಿಎಫ್ ಸಹನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಸಿಕ್ಕಿತ್ತು. ಈ ಬಗ್ಗೆ ಹರಡಿರುವ ವದಂತಿಗಳಿಗೀಗ ನಟಿ ಫುಲ್ ಸ್ಟಾಪ್ ಇಟ್ಟಿದ್ದಾರೆ.


ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಪ್ರಾಜೆಕ್ಟ್ನಲ್ಲಿ ಸೀತಾದೇವಿ ಪಾತ್ರವನ್ನು ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ನೀಡಲಾಗಿತ್ತು. ಈ ಅಧಿಕೃತ ಮಾಹಿತಿಯನ್ನು ಇತ್ತೀಚೆಗೆ ಸ್ವತಃ ನಟಿ ಬಹಿರಂಗಪಡಿಸಿದ್ದರು. ಆದ್ರೆ ತಮ್ಮ ಹೇಳಿಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ರಾವಣ ಪಾತ್ರಧಾರಿ ಯಶ್ ಕಾರಣದಿಂದಾಗಿ ನಾನು ಆ ಸಿನಿಮಾ ಬಿಡಲಿಲ್ಲ. ಅಂತಿಮವಾಗಿ, ಆ ಪಾತ್ರಕ್ಕೆ ಸಾಯಿ ಪಲ್ಲವಿ ಅವರು ಆಯ್ಕೆ ಆದ್ರು ಎಂದು ಸ್ಪಷ್ಟನೆ ನೀಡಿದ್ದಾರೆ.


”ದೊಡ್ಡ ಗೊಂದಲ ಆಗಿದೆ. ನಾನು ಯಾಕಾದರೂ ಆ ಬಗ್ಗೆ ಮಾತನಾಡಿದೆ ಎಂದೆನಿಸಿದೆ. ರಾಮಾಯಣ ಸಿನಿಮಾದ ಆಡಿಷನ್ಗೆ ನನ್ನನ್ನು ಕರೆದಿದ್ದರು. ಹೊಸ ಪ್ರತಿಭೆಯನ್ನು ಅಷ್ಟು ದೊಡ್ಡ ಪಾತ್ರಕ್ಕೆ ಪರಿಗಣಿಸಿರೋದೇ ದೊಡ್ಡ ವಿಷಯ. ನಾನು ಬಹಳ ಖುಷಿಯಿಂದಲೇ ಹೋಗಿದ್ದೆ. ಆಡಿಷನ್ ಕೂಡಾ ಕೊಟ್ಟೆ. ಅದಕ್ಕೂ ಮುನ್ನ ಸಾಕಷ್ಟು ನಟಿಯರು ಆಡಿಷನ್ ಕೊಟ್ಟಿದ್ದಾರೋ, ಇಲ್ಲವೋ ಎಂಬುದು ಗೊತ್ತಿಲ್ಲ. ಫೈನಲಿ, ನಟಿ ಸಾಯಿ ಪಲ್ಲವಿ ಅವರು ಸೆಲೆಕ್ಟ್ ಆಗಿದ್ದಾರೆ.

ಅದು ನನಗೆ ಬಹಳ ಖುಷಿ ಕೊಟ್ಟಿದೆ. ಬ್ರಿಲಿಯಂಟ್ ಛಾಯ್ಸ್. ನನಗೂ ಅವರೆಂದರೆ ಬಹಳ ಇಷ್ಟ. ಅವರು ಸ್ಫೂರ್ತಿ. ಈ ಉದ್ಯಮದಲ್ಲಿ ಮಹಿಳೆಯರು ಎಷ್ಟು ಚೆನ್ನಾಗಿದ್ದಾರೆ, ಎಷ್ಟು ಎಲಿಗೆಂಟ್ ಆಗಿದ್ದಾರೆ ಎಂಬುದನ್ನು ಅವರನ್ನು ನೋಡಿ ಕಲಿಯಬೇಕು. ಅವರ ಪ್ರತಿಭೆ, ನಟನೆ ಬಗ್ಗೆ ಹೇಳೋ ಹಾಗೇ ಇಲ್ಲ. ಗ್ರೇಟ್ ಚಾಯ್ಸ್” – ಶ್ರೀನಿಧಿ ಶೆಟ್ಟಿ.


ಆಡಿಷನ್ ಕೊಟ್ಟಿದ್ದು ನಿಜ, ಆದ್ರೆ ಸೆಲೆಕ್ಟ್ ಆಗ್ಲಿಲ್ಲ: ಮಾತು ಮುಂದುವರಿಸಿದ ನಟಿ, ಯಶ್ ಕಾರಣದಿಂದ ನಾನು ಈ ಸಿನಿಮಾ ಬಿಟ್ಟೆ ಎಂದು ನನ್ನ ಹೇಳಿಕೆಗಳನ್ನು ತಿರುಚಲಾಗಿದೆ. ಸೀತಾ ಪಾತ್ರ ನನಗೆ ಮೊದಲು ಬಂದಿದ್ದು, ಆದ್ರೆ ನಾನು ರಿಜೆಕ್ಟ್ ಮಾಡಿದ್ದೇನೆ ಎಂದೆಲ್ಲಾ ವೈರಲ್ ಆಗಿದೆ. ಆ ಸಂದರ್ಶನದಲ್ಲಿ ಕ್ಯಾಶುವಲ್ ಆಗಿ ನನ್ನ ಅನಿಸಿಕೆ ಹಂಚಿಕೊಂಡಿದ್ದೆ. ಕೆಜಿಎಫ್ ಸಿನಿಮಾ ಆಗಷ್ಟೇ ತೆರೆಕಂಡು ಸೂಪರ್ ಹಿಟ್ ಆಗಿತ್ತು.

ರಾಕಿ ರೀನಾ ಪಾತ್ರಗಳು ಎಲ್ಲರಿಗೂ ಇಷ್ಟ ಆಗಿದ್ದವು. ರಾಮಾಯಣದಲ್ಲಿ ರಾವಣ ಪಾತ್ರವನ್ನು ಯಶ್ ನಿರ್ವಹಿಸಲಿದ್ದಾರೆ ಎಂಬ ಮಾತೂ ಕೂಡಾ ಕೇಳಿಬಂತು. ಹಾಗಾಗಿ, ನಾನು ಕ್ಯಾಶುವಲ್ ಆಗಿ ರಾವಣ ಸೀತೆ ವಿರುದ್ಧ ಪಾತ್ರಗಳಲ್ಲವೇ? ಎಂದು ಅನಿಸಿಕೆ ಹಂಚಿಕೊಂಡಿದ್ದೆಯಷ್ಟೇ. ಆದ್ರೆ ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಯಶ್ ರಾವಣ ರೋಲ್ ನಿರ್ವಹಿಸುತ್ತಿರೋದ್ರಿಂದ ಶ್ರೀನಿಧಿ ಸೀತಾ ಪಾತ್ರ ಬಿಟ್ಟರು ಎಂದೆಲ್ಲಾ ಹಬ್ಬಿಸಲಾಗಿದೆ. ನಾನ್ಯಾರು ಸೀತಾ ಪಾತ್ರವನ್ನು ತಿರಸ್ಕರಿಸಲು? ಸೀತೆ ಬಹಳ ದೊಡ್ಡ ಪಾತ್ರ. ನಾನದನ್ನು ತಿರಸ್ಕರಿಸಿಲ್ಲ. ಆಡಿಷನ್ ಕೊಟ್ಟಿದ್ದು ನಿಜ. ಆದ್ರೆ ಸೆಲೆಕ್ಟ್ ಆಗ್ಲಿಲ್ಲ. ಕೊನೆಗೆ ಸಾಯಿ ಪಲ್ಲವಿ ಅವರು ಸೆಲೆಕ್ಟ್ ಆದ್ರು. ಗೊಂದಲ ಹರಡಿಸಬೇಡಿ ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡರು.

ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ರಣ್ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ರಾಮ ಸೀತೆಯಾಗಿ, ಯಶ್ ಅವರು ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ.

The post ‘ರಾವಣ ಪಾತ್ರಧಾರಿ ಯಶ್ ನಟನೆಯ ರಾಮಾಯಣ’ದ ಬಗ್ಗೆ ಹರಡಿರುವ ವದಂತಿಗೆ ನಟಿ ಫುಲ್ ಸ್ಟಾಪ್ . appeared first on Good News 24x7.

]]>