RCB Archives - Good News 24x7 https://www.goodnews24x7.com/tag/rcb/ Kannada Tue, 26 May 2026 12:33:56 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg RCB Archives - Good News 24x7 https://www.goodnews24x7.com/tag/rcb/ 32 32 ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..! https://www.goodnews24x7.com/rcb-can-reach-the-final-without-playing-the-qualifier/ Tue, 26 May 2026 12:28:44 +0000 https://www.goodnews24x7.com/?p=9547 ಐಪಿಎಲ್ 2026 ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದಲ್ಲಿ ಸೆಣಸಾಡಲಿವೆ. ಈ ಪಂದ್ಯ ಮಳೆಯಿಂದ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೋತ ತಂಡಕ್ಕೆ ಕ್ವಾಲಿಫೈಯರ್ 2 ಆಡಲು ಮತ್ತೊಂದು ಅವಕಾಶವಿದ್ದರೂ,…

The post ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..! appeared first on Good News 24x7.

]]>

ಐಪಿಎಲ್ 2026 ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದಲ್ಲಿ ಸೆಣಸಾಡಲಿವೆ. ಈ ಪಂದ್ಯ ಮಳೆಯಿಂದ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೋತ ತಂಡಕ್ಕೆ ಕ್ವಾಲಿಫೈಯರ್ 2 ಆಡಲು ಮತ್ತೊಂದು ಅವಕಾಶವಿದ್ದರೂ, ಮಳೆ ನಿಯಮ ಆರ್‌ಸಿಬಿಗೆ ವರದಾನವಾಗಲಿದೆ.

ಐಪಿಎಲ್ ರ ಸೀಸನ್ ಅಂತಿಮ ಹಂತಕ್ಕೆ ತಲುಪಿದೆ. ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಇಂದು ಧರ್ಮಶಾಲಾದಲ್ಲಿ ಮೊದಲ ಕ್ವಾಲಿಫೈಯರ್ ಆಡಲು ಸಿದ್ಧವಾಗಿವೆ. ಪಂದ್ಯ ಸಂಜೆ  7:30 ಕ್ಕೆ ಪ್ರಾರಂಭವಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಇತ್ತ ಸೋತ ತಂಡಕ್ಕೆ ಮತ್ತೊಂದು ಅವಕಾಶವಿದ್ದರೂ (ಕ್ವಾಲಿಫೈಯರ್-2), ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಇರಾದೆಯಲ್ಲಿವೆ. ಆದಾಗ್ಯೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ಕ್ವಾಲಿಫೈಯರ್ ಆಡದೆಯೇ ಫೈನಲ್ ತಲುಪುವ ಅವಕಾಶವನ್ನು ಹೊಂದಿದೆ. ಅದು ಹೇಗೆ ಸಾಧ್ಯ?

ಪಂದ್ಯ ರದ್ದಾದರೆ ಆರ್​ಸಿಬಿ ಫೈನಲ್​ಗೆ

ವಾಸ್ತವವಾಗಿ ಫೈನಲ್ ಹೊರತುಪಡಿಸಿ ಯಾವುದೇ ಪ್ಲೇಆಫ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿಲ್ಲ. ಆದ್ದರಿಂದ, ಕ್ವಾಲಿಫೈಯರ್ 1, ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಪಂದ್ಯಗಳು ಮಳೆಯಿಂದಾಗಿ ರದ್ದಾದರೆ, ಮರುದಿನ ಪಂದ್ಯಗಳನ್ನು ಆಡಲಾಗುವುದಿಲ್ಲ. ಹೀಗಾಗಿ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಲ್ಲಿ ಮಳೆ ಬಂದರೆ, ಅದೇ ದಿನ ಪಂದ್ಯವನ್ನು ಮುಗಿಸಲು ಪ್ರಯತ್ನಿಸಲಾಗುತ್ತದೆ. ಪಂದ್ಯದ ಆರಂಭ ವಿಳಂಬವಾದರೆ, ಕನಿಷ್ಠ ಐದು ಓವರ್‌ಗಳ ಪಂದ್ಯವನ್ನು ಆಡಿಸಲು ಪ್ರಯತ್ನಿಸಲಾಗುತ್ತದೆ. ಇದಕ್ಕಾಗಿ, 120 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಆದರೆ ಹೆಚ್ಚುವರಿ ಸಮಯದ 120 ನಿಮಿಷಗಳಲ್ಲೂ ಪಂದ್ಯ ಮುಗಿಯದಿದ್ದರೆ, ಆಗ ಪಾಯಿಂಟ್‌ ಪಟ್ಟಿ ಪ್ರಮುಖ ಪಾತ್ರವಹಿಸುತ್ತದೆ.

https://www.instagram.com/reel/DYzRfaoE5RV/?utm_source=ig_web_copy_link&igsh=MzRlODBiNWFlZA==ಚಾಮುಂಡಿ ತಾಯಿ ಮುಂದೆ ಕಡೆಗೂ ಕ್ಷಮೆ ಕೇಳಿದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್

ಅಂದರೆ ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇದರರ್ಥ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್​ಸಿಬಿ ಕ್ವಾಲಿಫೈಯರ್ 1 ಆಡದೆಯೇ ನೇರವಾಗಿ ಫೈನಲ್​ಗೆ ಅರ್ಹತೆ ಪಡೆಯುತ್ತದೆ. ಇತ್ತ ಗುಜರಾತ್ ತಂಡ ಕ್ವಾಲಿಫೈಯರ್ 2 ಆಡಬೇಕಾಗುತ್ತದೆ.

ಅಗ್ರಸ್ಥಾನದಲ್ಲಿ ಆರ್​ಸಿಬಿ


ಐಪಿಎಲ್ 2026 ರ ಗುಂಪು ಹಂತ ಮುಗಿದ ಬಳಿಕ ನಾವು ಪಾಯಿಂಟ್ ಪಟ್ಟಿಯನ್ನು ನೋಡುವುದಾದರೆ.. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಆರ್​ಸಿಬಿ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದ್ದು, +0.783 ನೆಟ್ ರನ್​ರೇಟ್ ಹೊಂದಿದೆ. ಇತ್ತ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಕೂಡ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದೆ. ಆದರೆ ಗುಜರಾತ್ ತಂಡದ ನೆಟ್ ರನ್​ರೇಟ್ ಆರ್​ಸಿಬಿಗಿಂತ ಕಡಿಮೆ ಅಂದರೆ +0.695 ಆಗಿರುವ ಕಾರಣ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಧರ್ಮಶಾಲಾದಲ್ಲಿ ಹವಾಮಾನ ಹೇಗಿರಲಿದೆ?


ಧರ್ಮಶಾಲಾ ಮೈದಾನವು ಪರ್ವತಗಳಿಂದ ಸುತ್ತುವರೆದಿದೆ. ಇದರಿಂದಾಗಿ, ಹವಾಮಾನ ಯಾವುದೇ ಸಮಯದಲ್ಲಿ ಬದಲಾಗಬಹುದು. ಆದಾಗ್ಯೂ, ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯದ ದಿನದಂದು ಮಳೆಯಾಗುವ ಸಾಧ್ಯತೆ ಶೇ. 25 ರಷ್ಟು ಇದೆ. ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಹೀಗಾಗಿ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪೂರ್ಣ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ಮಳೆ ಬರುವ ಸಾಧ್ಯತೆ ಇರದ ಕಾರಣ, ಆರ್​ಸಿಬಿ ಈ ಪಂದ್ಯವನ್ನು ಆಡಿ, ಜಯ ಸಾಧಿಸಿಯೇ ಫೈನಲ್​ಗೆ ಟಿಕೆಟ್ ಪಡೆಯಬೇಕಾಗಿದೆ.

The post ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..! appeared first on Good News 24x7.

]]>
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ: ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ! https://www.goodnews24x7.com/virat-kohli-sets-world-record-in-ipl-the-only-cricketer-to-achieve-this-feat%e0%b2%90%e0%b2%aa%e0%b2%bf%e0%b2%8e%e0%b2%b2%e0%b3%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%bf/ Tue, 28 Apr 2026 13:02:02 +0000 https://www.goodnews24x7.com/?p=9472 ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ದೆಹಲಿ ತಂಡವನ್ನು ಮಣಿಸಿದ ಆರ್‌ಸಿಬಿ ಭರ್ಜರಿ ಜಯ ದಾಖಲಿಸಿದೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡದ ಅತಿದೊಡ್ಡ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ…

The post ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ: ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ! appeared first on Good News 24x7.

]]>

ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ದೆಹಲಿ ತಂಡವನ್ನು ಮಣಿಸಿದ ಆರ್‌ಸಿಬಿ ಭರ್ಜರಿ ಜಯ ದಾಖಲಿಸಿದೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡದ ಅತಿದೊಡ್ಡ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 9000 ರನ್‌ಗಳ ಗಡಿ ದಾಟಿದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ವಿಶೇಷವೆಂದರೆ, ತಮ್ಮ ತವರಿನ ಮೈದಾನದಲ್ಲೇ ಈ ಅಮೋಘ ಮೈಲಿಗಲ್ಲು ತಲುಪುವ ಮೂಲಕ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

9 ವಿಕೆಟ್‌ಗಳ ಭರ್ಜರಿ ಜಯ:
ಕೇವಲ 76 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಅಬ್ಬರಿಸಿದರು. ತಮ್ಮ 275ನೇ ಐಪಿಎಲ್ ಪಂದ್ಯದಲ್ಲಿ ಈ ದಾಖಲೆ ಬರೆದ ಕೊಹ್ಲಿ, ಮೈಲಿಗಲ್ಲು ತಲುಪಿದ ಬೆನ್ನಲ್ಲೇ ಸತತ ಸಿಕ್ಸರ್‌ಗಳನ್ನು ಸಿಡಿಸಿ ತಂಡಕ್ಕೆ 9 ವಿಕೆಟ್‌ಗಳ ಸುಲಭ ಜಯ ತಂದುಕೊಟ್ಟರು. ಈ ಮೂಲಕ ಐಪಿಎಲ್‌ನ ‘ರನ್ ಮಷೀನ್’ ಎಂಬ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡರು.

ದಾಖಲೆಗಳ ಸರದಾರ:
ಪ್ರಸ್ತುತ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾಗಿಂತ ಕೊಹ್ಲಿ ಸುಮಾರು 2000 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿರುವುದು ಅವರ ಸ್ಥಿರತೆಗೆ ಸಾಕ್ಷಿ.

ವಿರಾಟ್ ಕೊಹ್ಲಿ ಐಪಿಎಲ್ ಅಂಕಿಅಂಶ:
ಒಟ್ಟು ರನ್: 9000+

ಸರಾಸರಿ: 40ಕ್ಕೂ ಹೆಚ್ಚು

ಸ್ಟ್ರೈಕ್ ರೇಟ್: 130ಕ್ಕೂ ಅಧಿಕ

ಸಾಧನೆ: ಹಲವು ಶತಕ ಹಾಗೂ ಅರ್ಧಶತಕಗಳ ಅಧಿಪತಿ

ವಿಶ್ವದ ಅತ್ಯಂತ ಕಠಿಣ ಟಿ20 ಲೀಗ್‌ನಲ್ಲಿ ಸತತವಾಗಿ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ಕೊಹ್ಲಿ, ಕ್ರಿಕೆಟ್ ಜಗತ್ತಿನ ಅಪ್ರತಿಮ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

The post ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ: ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ! appeared first on Good News 24x7.

]]>
ಸ್ಟಾರ್ ಅಥ್ಲೀಟ್ ಮೊದಲಿಂದಲೂ RCB ಅಭಿಮಾನಿ…. https://www.goodnews24x7.com/%e0%b2%b8%e0%b3%8d%e0%b2%9f%e0%b2%be%e0%b2%b0%e0%b3%8d-%e0%b2%85%e0%b2%a5%e0%b3%8d%e0%b2%b2%e0%b3%80%e0%b2%9f%e0%b3%8d-%e0%b2%ae%e0%b3%8a%e0%b2%a6%e0%b2%b2%e0%b2%bf%e0%b2%82%e0%b2%a6%e0%b2%b2%e0%b3%82/ Fri, 17 Apr 2026 10:43:15 +0000 https://www.goodnews24x7.com/?p=9286 ವಿಶ್ವದ ಅತಿ ವೇಗದ ಅಥ್ಲೀಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿ ಬಳಗಕ್ಕೆ ಸೇರಿದ್ದಾರೆ. RCB ಜೆರ್ಸಿ ಧರಿಸಿ ಫೋಟೋ ಪೋಸ್ಟ್ ಮಾಡಿ, ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ವಿಶ್ವಾದ್ಯಂತ ಇರುವ RCB ಫ್ಯಾನ್ಸ್ ಸಂತಸಗೊಂಡಿದ್ದು, ಫ್ರಾಂಚೈಸಿಯ ಜನಪ್ರಿಯತೆ ಮತ್ತಷ್ಟು ಹೆಚ್ಚಿಸಿದೆ. ಕೇವಲ…

The post ಸ್ಟಾರ್ ಅಥ್ಲೀಟ್ ಮೊದಲಿಂದಲೂ RCB ಅಭಿಮಾನಿ…. appeared first on Good News 24x7.

]]>

ವಿಶ್ವದ ಅತಿ ವೇಗದ ಅಥ್ಲೀಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿ ಬಳಗಕ್ಕೆ ಸೇರಿದ್ದಾರೆ. RCB ಜೆರ್ಸಿ ಧರಿಸಿ ಫೋಟೋ ಪೋಸ್ಟ್ ಮಾಡಿ, ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ವಿಶ್ವಾದ್ಯಂತ ಇರುವ RCB ಫ್ಯಾನ್ಸ್ ಸಂತಸಗೊಂಡಿದ್ದು, ಫ್ರಾಂಚೈಸಿಯ ಜನಪ್ರಿಯತೆ ಮತ್ತಷ್ಟು ಹೆಚ್ಚಿಸಿದೆ. ಕೇವಲ ಭಾರತವಲ್ಲದೆ, ಅನೇಕ ದೇಶಗಳಲ್ಲಿ RCBಗೆ ಅಪಾರ ಅಭಿಮಾನಿಗಳಿದ್ದಾರೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಜನಪ್ರಿಯತೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಸೇರಿದಂತೆ ಅನೇಕ ದೇಶದ ಜನರು ಆಸ್​​​ರಿಬಿ ಜೆರ್ಸಿ ಹಾಕಿ ಪೋಸ್ ಕೊಟ್ಟ ಉದಾಹರಣೆ ಇದೆ.

ಆರ್​​ಸಿಬಿ ಅಭಿಮಾನಿ ಬಳಗಕ್ಕೆ ಹೊಸ ಸೇರ್ಪಡೆ ಆಗಿದೆ. ಅದುವೇ ಅಥ್ಲೀಟ್ ಉಸೈನ್ ಬೋಲ್ಟ್. 100 ಮೀಟರ್ ರನ್ನಿಂಗ್​​ನಲ್ಲಿ ದಾಖಲೆ ಬರೆದ ಇವರು ಆರ್​​ಸಿಬಿ ಅಭಿಮಾನಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಅವರ ಹೊಸ ಫೋಟೋ ಗಮನ ಸೆಳೆದಿದೆ. ಉಸೈನ್ ಬೋಲ್ಟ್ ಅವರು ಜಮೈಕಾದವರು. ಅವರು 2012ರ ಲಂಡನ್ ಒಲಂಪಿಕ್ಸ್ ನ 100 ಮೀಟರ್ ಓಟವನ್ನು ಕೇವಲ 9.62 ಸೆಕೆಂಡ್​​ಗಳಲ್ಲಿ ಪೂರ್ಣಗೊಳಿಸಿದ್ದರು. ಈಗ ಅವರು ಆರ್​ಸಿಬಿ ಅಭಿಮಾನಿಯಾಗಿದ್ದಾರೆ.

ನಮಸ್ಕಾರ, ಎಂದು ಪೋಸ್ಟ್ ಆರಂಭಿಸಿದ್ದಾರೆ ಉಸೈನ್ ಬೋಲ್ಟ್. ಈ ಸೀಸನ್​​ಗೆ ಗುಡ್​ ಲಕ್ ಎಂದು ಕೋರಿದ್ದಾರೆ. #RCBEverywhere ಎಂದು ಅವರು ಪೋಸ್ಟ್ ಮಾಡಿದ್ದಾರೆ. ಉಸೈನ್ ಬೋಲ್ಡ್ ಬೆಂಬಲ ಸಿಕ್ಕಿರುವುದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಎಲ್ಲರೂ ಸಂತೋಷದಿಂದ ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ‘ನಮ್ಮ ರೇಂಜ್ ಇದು’ ಎಂದು ಕಮೆಂಟ್ ಹಾಕುವ ಕೆಲಸವನ್ನು ಮಾಡುತ್ತಾ ಇದ್ದಾರೆ.

 

The post ಸ್ಟಾರ್ ಅಥ್ಲೀಟ್ ಮೊದಲಿಂದಲೂ RCB ಅಭಿಮಾನಿ…. appeared first on Good News 24x7.

]]>
MI vs RCB: ವಾಂಖೆಡೆಯಲ್ಲಿ ದೈತ್ಯರ ನಡುವೆ ಬಿಗ್ ಫೈಟ್; ಮುಂಬೈ ಸವಾಲಿಗೆ ಸಜ್ಜಾದ ಬೆಂಗಳೂರು! https://www.goodnews24x7.com/mi-vs-rcb-big-fight-between-giants-at-wankhede-bangalore-ready-for-mumbai-challenge/ Sat, 11 Apr 2026 08:54:52 +0000 https://www.goodnews24x7.com/?p=9186 ಮುಂಬೈ: ಐಪಿಎಲ್ 2026ರ ಭಾನುವಾರದ ಬಿಗ್ ಸಂಡೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗುತ್ತಿವೆ. ಶುಕ್ರವಾರವಷ್ಟೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿದ್ದ ಆರ್‌ಸಿಬಿ ತಂಡ, ಕೇವಲ ಒಂದೇ ದಿನದ ಅಂತರದಲ್ಲಿ ಮುಂಬೈನ…

The post MI vs RCB: ವಾಂಖೆಡೆಯಲ್ಲಿ ದೈತ್ಯರ ನಡುವೆ ಬಿಗ್ ಫೈಟ್; ಮುಂಬೈ ಸವಾಲಿಗೆ ಸಜ್ಜಾದ ಬೆಂಗಳೂರು! appeared first on Good News 24x7.

]]>

ಮುಂಬೈ: ಐಪಿಎಲ್ 2026ರ ಭಾನುವಾರದ ಬಿಗ್ ಸಂಡೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗುತ್ತಿವೆ. ಶುಕ್ರವಾರವಷ್ಟೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿದ್ದ ಆರ್‌ಸಿಬಿ ತಂಡ, ಕೇವಲ ಒಂದೇ ದಿನದ ಅಂತರದಲ್ಲಿ ಮುಂಬೈನ ಐಕಾನಿಕ್ ವಾಂಖೆಡೆ ಕ್ರೀಡಾಂಗಣದಲ್ಲಿ ಹಾರ್ದಿಕ್ ಪಾಂಡ್ಯ ಪಡೆಯನ್ನು ಎದುರಿಸಲು ಸಜ್ಜಾಗಿದೆ.

ವಾಂಖೆಡೆ ಪಿಚ್ ಮತ್ತು ಹವಾಮಾನ ವರದಿ:
ಬ್ಯಾಟ್ಸ್‌ಮನ್‌ಗಳ ಸ್ವರ್ಗವೆಂದೇ ಕರೆಯಲ್ಪಡುವ ವಾಂಖೆಡೆಯ ಕೆಂಪು ಮಣ್ಣಿನ ಪಿಚ್ ವೇಗ ಮತ್ತು ಬೌನ್ಸ್‌ಗೆ ಹೆಸರಾಗಿದೆ. ಇಲ್ಲಿನ ವೇಗದ ಔಟ್‌ಫೀಲ್ಡ್ ಬೃಹತ್ ಮೊತ್ತದ ರನ್ ಗಳಿಸಲು ಪೂರಕವಾಗಿದೆ. ವಿಶೇಷವಾಗಿ ಎರಡನೇ ಇನ್ನಿಂಗ್ಸ್‌ನ 12ನೇ ಓವರ್ ಬಳಿಕ ಇಬ್ಬನಿ (Dew Factor) ಬೀಳುವ ನಿರೀಕ್ಷೆಯಿರುವುದರಿಂದ ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ. ಪಂದ್ಯದ ವೇಳೆ ಮಳೆ ಸಾಧ್ಯತೆ ಕೇವಲ ಶೇ.5 ರಷ್ಟು ಮಾತ್ರವಿದ್ದು, ಕ್ರಿಕೆಟ್ ಪ್ರಿಯರಿಗೆ ಯಾವುದೇ ಅಡ್ಡಿಯಿಲ್ಲದೆ ಪಂದ್ಯ ವೀಕ್ಷಿಸಲು ಅವಕಾಶವಿದೆ.

ಉಭಯ ತಂಡಗಳ ಮುಖಾಮುಖಿ ಹಾಗೂ ದಾಖಲೆಗಳು:
ಇತಿಹಾಸವನ್ನು ಗಮನಿಸಿದರೆ, ಈವರೆಗೆ ನಡೆದ 34 ಹಣಾಹಣಿಗಳಲ್ಲಿ ಮುಂಬೈ 19 ಪಂದ್ಯ ಗೆದ್ದಿದ್ದರೆ, ಆರ್‌ಸಿಬಿ 15 ರಲ್ಲಿ ಜಯ ಸಾಧಿಸಿದೆ. ಮುಂಬೈ ವಿರುದ್ಧದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 855 ರನ್ ಗಳಿಸುವ ಮೂಲಕ ಉತ್ತಮ ದಾಖಲೆ ಹೊಂದಿದ್ದಾರೆ. ಮತ್ತೊಂದೆಡೆ, ಮುಂಬೈ ಪರ ಜಸ್ಪ್ರೀತ್ ಬುಮ್ರಾ ಆರ್‌ಸಿಬಿ ವಿರುದ್ಧ 24 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. 2015 ರಲ್ಲಿ ಆರ್‌ಸಿಬಿ ಇದೇ ಮೈದಾನದಲ್ಲಿ 235 ರನ್ ಸಿಡಿಸಿ ಗರಿಷ್ಠ ಮೊತ್ತ ಪೇರಿಸಿದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ತನ್ನ ತವರಿನ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಅದ್ಭುತ ದಾಖಲೆ ಹೊಂದಿದ್ದು, ಆರ್‌ಸಿಬಿ ವಿರುದ್ಧದ 12 ಪಂದ್ಯಗಳಲ್ಲಿ 8 ರಲ್ಲಿ ಜಯ ಸಾಧಿಸಿದೆ. ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧದ ಸೋಲಿನಿಂದ ಚೇತರಿಸಿಕೊಂಡು ಜಯಭೇರಿ ಬಾರಿಸುವ ಒತ್ತಡದಲ್ಲಿ ರಜತ್ ಪಾಟಿದಾರ್ ನೇತೃತ್ವದ ಬೆಂಗಳೂರು ತಂಡವಿದೆ.

The post MI vs RCB: ವಾಂಖೆಡೆಯಲ್ಲಿ ದೈತ್ಯರ ನಡುವೆ ಬಿಗ್ ಫೈಟ್; ಮುಂಬೈ ಸವಾಲಿಗೆ ಸಜ್ಜಾದ ಬೆಂಗಳೂರು! appeared first on Good News 24x7.

]]>
ತಿಮ್ಮಪ್ಪನ ದರ್ಶನ ಪಡೆದ RCB ಆಟಗಾರರು https://www.goodnews24x7.com/rcb-players-seek-blessings-from-thimmappa/ Sat, 04 Apr 2026 07:59:12 +0000 https://www.goodnews24x7.com/?p=9125 ಐಪಿಎಲ್ 2026ರ ಭರ್ಜರಿ ಆರಂಭದ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ರಜತ್ ಪಾಟಿದಾರ್ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಆಂಧ್ರಪ್ರದೇಶದ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಚೊಚ್ಚಲ…

The post ತಿಮ್ಮಪ್ಪನ ದರ್ಶನ ಪಡೆದ RCB ಆಟಗಾರರು appeared first on Good News 24x7.

]]>

ಐಪಿಎಲ್ 2026ರ ಭರ್ಜರಿ ಆರಂಭದ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ರಜತ್ ಪಾಟಿದಾರ್ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಆಂಧ್ರಪ್ರದೇಶದ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಳೆದ ಸೀಸನ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದಿದ್ದ ಆರ್‌ಸಿಬಿ, ಈ ಬಾರಿಯೂ ಅಮೋಘ ಪ್ರದರ್ಶನ ನೀಡುತ್ತಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ನಂತರ, ತಂಡದ ಪ್ರಮುಖ ಆಟಗಾರರು ಆಧ್ಯಾತ್ಮಿಕ ಚಿಂತನೆಯತ್ತ ಮುಖ ಮಾಡಿದ್ದಾರೆ.

ಏಪ್ರಿಲ್ 5 ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಆಟಗಾರರು ಶ್ರೀಹರಿ ಆಶೀರ್ವಾದ ಪಡೆದರು. ವಿಶೇಷ ಎಂದರೆ ಕಳೆದ ವರ್ಷವೂ ಸಹ ತಂಡದ ಪ್ರಮುಖ ಆಟಗಾರರು ತಿರುಮಲಕ್ಕೆ ಭೇಟಿ ನೀಡಿದ್ದರು, ಅದು ತಂಡಕ್ಕೆ ಅದೃಷ್ಟ ತಂದಿತ್ತು ಎಂಬ ನಂಬಿಕೆ ಅಭಿಮಾನಿಗಳಲ್ಲಿದೆ. ಇದೀಗ ಸಿಎಸ್​ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ತಿಮ್ಮಪ್ಪನ ದರ್ಶನ ಪಡೆದಿರುವುದು ವಿಶೇಷ.

The post ತಿಮ್ಮಪ್ಪನ ದರ್ಶನ ಪಡೆದ RCB ಆಟಗಾರರು appeared first on Good News 24x7.

]]>
ಇಂದು ಆರ್‌ಸಿಬಿ – ಡೆಲ್ಲಿ ಫೈನಲ್‌ : ಎರಡನೇ ಕಪ್ ಮೇಲೆ ಆರ್‌ಸಿಬಿ ಕಣ್ಣು https://www.goodnews24x7.com/rcb-delhi-final-today-rcb-eyes-second-cup/ Thu, 05 Feb 2026 07:15:52 +0000 https://www.goodnews24x7.com/?p=8346 ಇಂದು ಆರ್‌ಸಿಬಿ – ಡೆಲ್ಲಿ ಫೈನಲ್‌ : ಎರಡನೇ ಕಪ್ ಮೇಲೆ ಆರ್‌ಸಿಬಿ ಕಣ್ಣು ಮಹಿಳಾ ಪ್ರೀಮಿಯರ್ ಲೀಗ್‌ನ 4ನೇ ಸೀಸನ್‌ನ ಫೈನಲ್‌ನಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಫೈಟ್ ನಡೆಸಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತದಲ್ಲಿ…

The post ಇಂದು ಆರ್‌ಸಿಬಿ – ಡೆಲ್ಲಿ ಫೈನಲ್‌ : ಎರಡನೇ ಕಪ್ ಮೇಲೆ ಆರ್‌ಸಿಬಿ ಕಣ್ಣು appeared first on Good News 24x7.

]]>

ಇಂದು ಆರ್‌ಸಿಬಿ – ಡೆಲ್ಲಿ ಫೈನಲ್‌ : ಎರಡನೇ ಕಪ್ ಮೇಲೆ ಆರ್‌ಸಿಬಿ ಕಣ್ಣು

ಮಹಿಳಾ ಪ್ರೀಮಿಯರ್ ಲೀಗ್‌ನ 4ನೇ ಸೀಸನ್‌ನ ಫೈನಲ್‌ನಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಫೈಟ್ ನಡೆಸಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಇನ್ನೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಫೈನಲ್‌ ಪ್ರವೇಶಿಸಿದೆ.

ಎರಡನೇ ಸೀಸನ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆರ್‌ಸಿಬಿ ತಂಡವು ಈ ಬಾರಿ ಕೂಡ ಭರ್ಜರಿ ಫಾರ್ಮ್‌ನಲ್ಲಿದೆ. ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಅವರಂತಹ ಆಟಗಾರ್ತಿಯರು ತಂಡದ ಬಲವಾಗಿದ್ದಾರೆ. ಮತ್ತೊಂದೆಡೆ ಮೂರು ಬಾರಿ ಫೈನಲ್ ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬಾರಿಗೆ ಟ್ರೋಫಿ ಗೆಲ್ಲುವ ತವಕದಲ್ಲಿದೆ.

ಒಟ್ಟಿನಲ್ಲಿ ವಡೋದರಾದಲ್ಲಿ ನಡೆಯಲಿರುವ ಈ ಫೈನಲ್ ಪಂದ್ಯವು ಕೋಟಿಗಟ್ಟಲೆ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ‘ಈ ಸಲವೂ ಕಪ್ ನಮ್ದೇ’ ಎನ್ನುತ್ತಿರುವ ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಗೆಲುವಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

The post ಇಂದು ಆರ್‌ಸಿಬಿ – ಡೆಲ್ಲಿ ಫೈನಲ್‌ : ಎರಡನೇ ಕಪ್ ಮೇಲೆ ಆರ್‌ಸಿಬಿ ಕಣ್ಣು appeared first on Good News 24x7.

]]>
ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಶುರು https://www.goodnews24x7.com/womens-premier-league-starts-tomorrow/ Thu, 08 Jan 2026 10:56:34 +0000 https://www.goodnews24x7.com/?p=8301 ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಶುರು ಮಹಿಳಾ ಪ್ರೀಮಿಯರ್ ಲೀಗ್ (WPL) ನಾಳೆಯಿಂದ ಡಿ.ವೈ.ಪಾಟೀಲ್ ಕ್ರೀಡಾಂಗಣ ನವಿ ಮುಂಬೈನಲ್ಲಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಇಂಡಿಯನ್ ಪ್ರೀಮಿಯರ್ ಲೀಗ್ 4ನೇ…

The post ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಶುರು appeared first on Good News 24x7.

]]>

ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಶುರು

ಮಹಿಳಾ ಪ್ರೀಮಿಯರ್ ಲೀಗ್ (WPL) ನಾಳೆಯಿಂದ ಡಿ.ವೈ.ಪಾಟೀಲ್ ಕ್ರೀಡಾಂಗಣ ನವಿ ಮುಂಬೈನಲ್ಲಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ 4ನೇ ಆವೃತ್ತಿಗೆ ನಾಳೆ ಚಾಲನೆ ದೊರೆಯಲಿದೆ. ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿಯಲಿದೆ.

The post ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಶುರು appeared first on Good News 24x7.

]]>
ಸ್ಮೃತಿ ಮಂದಾನಗೆ ಮೋಸ ಮಾಡಿಬಿಟ್ರಾ ಪಾಲಶ್ ಮುಚ್ಚಲ್ ? ಮದುವೆ ನಿಂತ ಹಿಂದಿನ ಅಸಲಿ ರಹಸ್ಯ ಏನು ..! https://www.goodnews24x7.com/did-palash-mukhal-cheat-on-smriti-mandhana-what-is-the-real-secret-behind-the-marriage-being-postponed/ Wed, 26 Nov 2025 07:59:41 +0000 https://www.goodnews24x7.com/?p=8271 ಟೀಂ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂದಾನರ ಮದುವೆ ತಾತ್ಕಾಲಿಕವಾಗಿ ಮುಂದೂಡಿಕೆ ಆಗಿದೆ. ಸ್ಮೃತಿ ತಂದೆ ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದೇ ಮದುವೆ ಮುಂದೂಡಿಕೆಗೆ ಕಾರಣ ಎನ್ನಲಾಗ್ತಿತ್ತು. ಆದ್ರೀಗ ಇದರ ಹಿಂದೆ ಬೇರೆಯದ್ದೇ ಕಾರಣ ಇದೆ ಅನ್ನೋ ಚರ್ಚೆ ಶುರುವಾಗಿದೆ. ಸ್ಮೃತಿ ಮಂದಾನ.. ಟೀಂ…

The post ಸ್ಮೃತಿ ಮಂದಾನಗೆ ಮೋಸ ಮಾಡಿಬಿಟ್ರಾ ಪಾಲಶ್ ಮುಚ್ಚಲ್ ? ಮದುವೆ ನಿಂತ ಹಿಂದಿನ ಅಸಲಿ ರಹಸ್ಯ ಏನು ..! appeared first on Good News 24x7.

]]>

ಟೀಂ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂದಾನರ ಮದುವೆ ತಾತ್ಕಾಲಿಕವಾಗಿ ಮುಂದೂಡಿಕೆ ಆಗಿದೆ. ಸ್ಮೃತಿ ತಂದೆ ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದೇ ಮದುವೆ ಮುಂದೂಡಿಕೆಗೆ ಕಾರಣ ಎನ್ನಲಾಗ್ತಿತ್ತು. ಆದ್ರೀಗ ಇದರ ಹಿಂದೆ ಬೇರೆಯದ್ದೇ ಕಾರಣ ಇದೆ ಅನ್ನೋ ಚರ್ಚೆ ಶುರುವಾಗಿದೆ.

ಸ್ಮೃತಿ ಮಂದಾನ.. ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್​​ ಬ್ಯಾಟರ್​​.. ಬ್ಯೂಟಿ ಕ್ವೀನ್​​.. ಅಷ್ಟೇ ಅಲ್ಲ ಲಾಯಲ್​​ ಆರ್​​ಸಿಬಿ ವುಮೆನ್ಸ್​​ ತಂಡದ ಕ್ಯಾಪ್ಟನ್​​.. ಎಲ್ಲವೂ ಸರಿಯಾಗಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಸ್ಮೃತಿ ಮಂದಾನ.. ತಮ್ಮ ಬಹುವರ್ಷಗಳ ಪ್ರಿಯಕರನ ಕೈ ಹಿಡಿದು.. ಜೀವನದ ಹೊಸ ಇನ್ನಿಂಗ್ಸ್​​ ಅನ್ನು ಆರಂಭಿಸಬೇಕಿತ್ತು.. ಆದ್ರೆ ಹಸೆಮಣೆ ಏರಬೇಕಿದ್ದ ದಿನ ಸ್ಮೃತಿ ತಂದೆ ಹೃದಾಯಾಘಾತದಿಂದ ಆಸ್ಪತ್ರೆ ಸೇರಿದ ಕಾರಣ, ಮದುವೆ ಮುಂದೂಡಿಕೆ ಆಗಿತ್ತು.. ಆದ್ರೆ ಮದುವೆ ಏಕಾಏಕಿ ಮುಂದೂಡಿಕೆ ಆಗಿದ್ದಕ್ಕೆ ಬೇರೆಯದ್ದೇ ಕಾರಣ ಹರಿದಾಡತೊಡಗಿದೆ.

ಸ್ಮೃತಿ ಮಂದಾನ ಹಳದಿ ಶಾಸ್ತ್ರ.. ಸಂಗೀತ ಕಾರ್ಯಕ್ರಮದಲ್ಲಿ ಭಾವಿ ಪತಿ ಮುಚ್ಚಲ್​​ ಜೊತೆ ಬಿಂದಾಸ್​ ಆಗಿ ಪೋಸ್​​ ಕೊಟ್ಟಿದ್ರು. ನಾಚಿಕೆ ಸ್ವಭಾವದ ಸ್ಮೃತಿ.. ಸಂಗೀತಾ ಕಾರ್ಯಕ್ರಮದಲ್ಲಂತೂ.. ಸಂಕೋಚ ಎಲ್ಲವನ್ನು ಬದಿಗಿಟ್ಟು, ವೇದಿಕೆ ಮೇಲೆ ಮುಚ್ಚಿಲ್​​ ಜೊತೆ ಕುಣಿದು ಕುಪ್ಪಳಿಸಿದ್ರು. ನವೆಂಬರ್​ 23 ಭಾನುವಾರಂದು ಹಸೆಮಣೆ ಏರಲು ಸಜ್ಜಾಗಿದ್ದ ಸ್ಮೃತಿಗೆ ಶಾಕ್​ ಆಗಿತ್ತು. ಮದುವೆ ದಿನವೇ ಸ್ಮೃತಿ ಮಂದಾನ ತಂದೆಗೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ ಕಾರಣ, ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಕುಟುಂಬಗಳು ಹೇಳಿಕೊಂಡಿದ್ವು.

ಆದ್ರೆ ಮಂಗಳವಾರ ಸ್ಮೃತಿ ಮಂದಾನ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಮುಚ್ಚಲ್​ ಜೊತೆಗಿನ ಎಂಗೇಜ್​​​ಮೆಂಟ್​ ಸೇರಿದಂತೆ ಮದುವೆ ಶಾಸ್ತ್ರದ ವಿಡಿಯೋ ಫೋಟೋಗಳನ್ನು ಡಿಲೀಟ್​ ಮಾಡಿದ್ದು. ಸಮ್​ಥಿಂಗ್​​ ಫಿಶಿಂಗ್​​ ಅನ್ಸಿತ್ತು. ಆದ್ರೀಗ ಸ್ಮೃತಿ ಮಂದಾನರ ಭಾವಿ ಪತಿಯ ಅಕ್ರಮ ಸಂಬಂಧವೇ ಮದುವೆ ಪೋಸ್ಟ್​ಪೋನ್​​ಗೆ ಕಾರಣ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಪಲಾಶ್‌ಗೆ ಬೇರೆ ಸಂಬಂಧವಿದೆ ಎಂದು ಹೇಳಲಾಗುವ ಯುವತಿಯೊಂದಿಗಿನ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಭಾರೀ ಸದ್ದು ಮಾಡ್ತಿದೆ. ಇದರಲ್ಲಿ ಯುವತಿಯನ್ನು ಮ್ಯಾರಿಯಟ್ ಹೋಟೆಲ್‌ನ ಪೂಲ್‌ನಲ್ಲಿ ಒಟ್ಟಿಗೆ ಈಜಲು ಆಹ್ವಾನಿಸುವುದು. ಸ್ಮೃತಿ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆಗಳು ಮತ್ತು ಪಲಾಶ್ ಅವರ ಉತ್ತರಗಳು ವಾಟ್ಸಾಪ್ ಚಾಟ್‌ನಲ್ಲಿವೆ. ಆದರೆ, ಇದು ನಿಜವಾಗಿಯೂ ಪಲಾಶ್ ಜೊತೆಗಿನ ಸಂಭಾಷಣೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಎರಡೂ ಕುಟುಂಬಗಳು ಯಾವುದೇ ಸ್ಪಷ್ಟನೆ ನೀಡಿಲಿಲ್ಲ.

ಶೀಘ್ರವೇ ಮದುವೆ ನಡೆಯಲಿದೆ ಎಂದ ಮುಚ್ಚಲ್​ ತಾಯಿ
ಸ್ಮೃತಿ ಮತ್ತು ಮುಚ್ಚಲ್​ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇದೀಗ ಮುಂದೂಡಲ್ಪಟ್ಟ ಮದುವೆ ಯಾವಾಗ ನಡೆಯಲಿದೆ ಎಂಬುದರ ಕುರಿತು ಪಲಾಶ್ ಮುಚ್ಚಲ್ ಅವರ ತಾಯಿ ಅಮಿತಾ ಬಹುದೊಡ್ಡ ಅಪ್ಡೇಟ್ ನೀಡಿದ್ದಾರೆ. ಜೊತೆಗೆ ಮುಚ್ಚಲ್​ನನ್ನು ಆಸ್ಪತ್ರೆಗೆ ದಾಖಲಿಸಿದ ಕಾರಣವನ್ನು ಬಹಿರಂಗಪಡಿಸಿದ್ದಾರೆ.

The post ಸ್ಮೃತಿ ಮಂದಾನಗೆ ಮೋಸ ಮಾಡಿಬಿಟ್ರಾ ಪಾಲಶ್ ಮುಚ್ಚಲ್ ? ಮದುವೆ ನಿಂತ ಹಿಂದಿನ ಅಸಲಿ ರಹಸ್ಯ ಏನು ..! appeared first on Good News 24x7.

]]>
ಶ್ರೇಯಾಂಕ ಪಾಟೀಲ್ ಈಗ ವಿಶ್ವದ ಮೋಸ್ಟ್​ ಸೆಲಬ್ರೇಟೆಡ್​ ವುಮೆನ್​ ಕ್ರಿಕೆಟರ್​. https://www.goodnews24x7.com/shreyanka-patil-is-now-the-worlds-most-celebrated-woman-cricketer/ Thu, 04 Sep 2025 12:02:53 +0000 https://www.goodnews24x7.com/?p=7342 ಶ್ರೇಯಾಂಕ ಪಾಟೀಲ್​​​! ವುಮೆನ್ಸ್ ಪ್ರೀಮಿಯರ್​ ಲೀಗ್​ನಲ್ಲಿ ಆರ್​​ಸಿಬಿ ಪರ ಮಿಂಚಿದ ಕನ್ನಡತಿ, ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ತನ್ನ​ ಆಟದಿಂದಲೇ ಮೋಡಿ ಮಾಡಿ ಸೆನ್ಸೇಷನ್​ ಸೃಷ್ಟಿಸಿರೋ ಶ್ರೇಯಾಂಕಾ, ಇದೀಗ ಆಫ್​ ದ ಫೀಲ್ಡ್​ನಲ್ಲೂ ಸಖತ್​ ಸದ್ದು ಮಾಡ್ತಿದ್ದಾರೆ. ನೀವು ನಂಬ್ತಿರೋ…

The post ಶ್ರೇಯಾಂಕ ಪಾಟೀಲ್ ಈಗ ವಿಶ್ವದ ಮೋಸ್ಟ್​ ಸೆಲಬ್ರೇಟೆಡ್​ ವುಮೆನ್​ ಕ್ರಿಕೆಟರ್​. appeared first on Good News 24x7.

]]>

ಶ್ರೇಯಾಂಕ ಪಾಟೀಲ್​​​! ವುಮೆನ್ಸ್ ಪ್ರೀಮಿಯರ್​ ಲೀಗ್​ನಲ್ಲಿ ಆರ್​​ಸಿಬಿ ಪರ ಮಿಂಚಿದ ಕನ್ನಡತಿ, ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ತನ್ನ​ ಆಟದಿಂದಲೇ ಮೋಡಿ ಮಾಡಿ ಸೆನ್ಸೇಷನ್​ ಸೃಷ್ಟಿಸಿರೋ ಶ್ರೇಯಾಂಕಾ, ಇದೀಗ ಆಫ್​ ದ ಫೀಲ್ಡ್​ನಲ್ಲೂ ಸಖತ್​ ಸದ್ದು ಮಾಡ್ತಿದ್ದಾರೆ. ನೀವು ನಂಬ್ತಿರೋ ಇಲ್ವೋ.. ಶ್ರೇಯಾಂಕ ಈಗ ವಿಶ್ವದ ಮೋಸ್ಟ್​ ಸೆಲಬ್ರೇಟೆಡ್​ ವುಮೆನ್​ ಕ್ರಿಕೆಟರ್​. ಕನ್ನಡತಿಯ ಮುಂದೆ ಟೀಮ್​ ಇಂಡಿಯಾ ಕ್ಯಾಪ್ಟನ್​ ಹರ್ಮನ್​​ಪ್ರೀತ್​ ಕೂಡ ಏನಿಲ್ಲ.. ಏನೇನಿಲ್ಲ.

ಶ್ರೇಯಾಂಕ ಪಾಟೀಲ್​​​​​​​​​​, ಆರ್​ಸಿಬಿಯ ಎಕ್ಸ್​-ಫ್ಯಾಕ್ಟರ್. ವಿಶ್ವ ಕ್ರಿಕೆಟ್​ನ ನಯಾ ಸೆನ್ಸೇಷನ್​. 23 ವರ್ಷದ ಈ ಚೆಲುವೆಯ ಫಿಯರ್​ಲೆಸ್ ಬ್ಯಾಟಿಂಗ್, ವೇರಿಯೇಷನ್​ ಬೌಲಿಂಗ್, ಆತ್ಮವಿಶ್ವಾಸದ ಆಟಕ್ಕೆ ಕ್ರಿಕೆಟ್​ ಲೋಕ ಫಿದಾ ಆಗಿದೆ. ಆನ್​ಫೀಲ್ಡ್​ ಆಟದಲ್ಲಿ ಇನ್ನೂ ಶ್ರೇಯಾಂಕಾಗೆ ಬಿಗ್​ ಸಕ್ಸಸ್​ ಸಿಕ್ಕಿಲ್ಲ. ಆಫ್​ ದ ಫೀಲ್ಡ್​​ನಲ್ಲಿ ಶ್ರೇಯಾಂಕಾಗೆ ಅದಾಗಲೇ ಸಪರೇಟ್​​ ಫ್ಯಾನ್​​​ ಬೇಸ್ ಕ್ರಿಯೇಟ್​ ಆಗಿದೆ. ಸೋಷಿಯಲ್​ ಮೀಡಿಯಾದಲ್ಲಂತೂ ಶ್ರೇಯಾಂಕ ಸೆನ್ಸೇಷನ್​​ ಆಗಿದ್ದಾರೆ.

ಕನ್ನಡತಿಯ ಪೋಸ್ಟ್​ಗೆ​ ಲೈಕ್ಸ್​, ಕಮೆಂಟ್ಸ್​​ ಸುರಿಮಳೆ
ಟೀಮ್ ಇಂಡಿಯಾ ಹಾಗೂ ಆರ್​​ಸಿಬಿ ಪರ ಆಡಿ ಮೋಡಿ ಮಾಡಿರುವ ಶ್ರೇಯಾಂಕ ಪಾಟೀಲ್​ ಕ್ರಿಕೆಟ್​ ಅಭಿಮಾನಿಗಳ ನಯಾ ಕ್ರಶ್​ ಆಗಿದ್ದಾರೆ. ಫ್ಯಾನ್ಸ್​ ಪ್ರೀತಿಯ ಟಗರುಪುಟ್ಟಿ ಒಂದು ಪೋಸ್ಟ್​ ಮಾಡಿದ್ರೆ ಸಾಕು ಸೆನ್ಸೇಷನ್​ ಸೃಷ್ಟಿಯಾಗ್ತಿದೆ. 1 ದಿನದ ಹಿಂದೆ ಪೋಸ್ಟ್​ ಮಾಡಿರೋ ಈ ಒಂದು ಡಾನ್ಸ್​ ವಿಡಿಯೋ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.

ಒಂದು ದಿನದ ಹಿಂದೆ ಇನ್ಸ್​​ಸ್ಟಾಗ್ರಾಂನಲ್ಲಿ ಶ್ರೇಯಾಂಕ ಪಾಟೀಲ್​ ಈ ರೀಲ್ಸ್​ನ ಪೋಸ್ಟ್​ ಮಾಡಿದ್ರು. ಪೋಸ್ಟ್​ ಮಾಡಿದ ಕೇವಲ 2 ಗಂಟೆಯಲ್ಲಿ ಇದಕ್ಕೆ ಲಕ್ಷಗಟ್ಟಲೇ ಲೈಕ್ಸ್​​ ಬಂದಿವೆ. ಕಮೆಂಟ್ಸ್​ಗಳ ಸುರಿಮಳೆಯೇ ಹರಿದಿತ್ತು. ಶ್ರೇಯಾಂಕ ಅಕೌಂಟ್​ನಲ್ಲಿ ಮಾತ್ರವಲ್ಲ. ಅಭಿಮಾನಿಗಳ ಅಕೌಂಟ್​​ಗಳಲ್ಲೂ ಈ ರೀಲ್ಸ್​ ಈಗ ಸದ್ದು ಮಾಡ್ತಿದೆ.

ಟೀಮ್​ ಇಂಡಿಯಾ ನಾಯಕಿಯನ್ನೂ ಹಿಂದಿಕ್ಕಿದ ಶ್ರೇಯಾಂಕಾ
ಶ್ರೇಯಾಂಕ ಪಾಟೀಲ್​ ಇಂಟರ್​​ನ್ಯಾಷನಲ್​ ಕ್ರಿಕೆಟ್​ಗೆ ಡೆಬ್ಯೂ ಮಾಡಿ 2 ವರ್ಷವೂ ತುಂಬಿಲ್ಲ. ಆಡಿದ ಪಂದ್ಯಗಳ ಸಂಖ್ಯೆ 20ರ ಗಡಿಯನ್ನೂ ದಾಟಿಲ್ಲ. ಪ್ರಸಿದ್ಧಿಯಲ್ಲಿ ಶ್ರೇಯಾಂಕ ವಿಶ್ವದ ಲೆಜೆಂಡರಿ ಅಟಗಾರರನ್ನೇ ಹಿಂದಿಕ್ಕಿದ್ದಾರೆ. ಹೆಸರಿಗೆ ತಕ್ಕಂತೆ ಮಹಿಳಾ ಕ್ರಿಕೆಟ್​ಗೆ ಭಾರತದ ಸ್ಮೃತಿ ಮಂದಾನಾನೇ ಕ್ವೀನ್​. ಮಂದಾನ ಬಿಟ್ರೆ 2ನೇ ಸ್ಥಾನದಲ್ಲಿರೋದು,ಶ್ರೇಯಾಂಕ ಪಾಟೀಲ್​​. ಇನ್ಸ್​​ಸ್ಟಾಗ್ರಾಂ ಫಾಲೋವರ್ಸ್​​ಗಳ ಲೆಕ್ಕಾಚಾರದಲ್ಲಿ ಶ್ರೇಯಾಂಕ ಪಾಟೀಲ್​​ ಟೀಮ್​ ಇಂಡಿಯಾ ನಾಯಕಿ ಹರ್ಮನ್​ ಪ್ರೀತಯ್​ ಕೌರ್​ನೂ ಹಿಂದಿಕ್ಕಿದ್ದಾರೆ.

ಇನ್ಸ್​​​ಸ್ಟಾಗ್ರಾಂ ಫಾಲೋವರ್ಸ್​
ಟೀಮ್​ ಇಂಡಿಯಾ ಉಪನಾಯಕಿ ಸ್ಮೃತಿ ಮಂದಾನ ಇನ್ಸ್​​ಸ್ಟಾಗ್ರಾಂನಲ್ಲಿ 12.4 ಮಿಲಿಯನ್​ ಫಾಲೋವರ್ಸ್​ ಹೊಂದಿದ್ರೆ. ಶ್ರೇಯಾಂಕ ಪಾಟೀಲ್​ 4.2 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ಟೀಮ್​ ಇಂಡಿಯಾ ನಾಯಕಿ ಹರ್ಮನ್​ಪ್ರೀತ್​ ಕೌರ್​ಗೆ 2.3 ಮಿಲಿಯನ್​, ಹರ್ಲಿನ್​ ಡಿಯೋಲ್​​ಗೆ 2.1 ಮಿಲಿಯನ್​, ಜೆಮಿಮಾ ರೋಡ್ರಿಗಸ್​ಗೆ​ 1.5 ಮಿಲಿಯನ್​ ಫಾಲೋವರ್ಸ್​ ಇದ್ದಾರೆ.

ಭಾರತದ ಕ್ರಿಕೆಟರ್ಸ್​ ಮಾತ್ರವಲ್ಲ. ವಿದೇಶಿ ಆಟಗಾರ್ತಿಯರನ್ನೂ ಶ್ರೇಯಾಂಕ ಸೈಡ್​ ಹೊಡೆದಿದ್ದಾರೆ. ಆಸ್ಟ್ರೇಲಿಯಾದ ಎಲ್ಲಿಸ್​ ಪೆರ್ರಿ, ಇಂಗ್ಲೆಂಡ್​ನ ಸಾರಾ ಟೇಲರ್​ ಸೇರಿದಂತೆ ಯಾವ ಸ್ಟಾರ್​ ಆಟಗಾರ್ತಿಯರಿಗೂ ಕೂಡ ಶ್ರೇಯಾಂಕಗಿರೋ ಫ್ಯಾನ್​ ಫಾಲೋಯಿಂಗ್ ಇಲ್ಲ.

ಇನ್ಸ್​​ಸ್ಟಾಗ್ರಾಂ ಫಾಲೋವರ್ಸ್​ ಹೆಚ್ಚಾದ್ರೆ ಏನು ಲಾಭ ಅಂತಾ ಕೇಳ್ಬೆಡಿ. ಕೋಟಿ ಕೋಟಿ ದುಡಿಯಬಹುದು. ಫಾಲೋವರ್ಸ್​ ಆಧಾರದಲ್ಲೇ ಟಾಪ್​ ಬ್ರ್ಯಾಂಡ್​​ಗಳು ಪ್ರಮೋಷನ್​ಗೆ ಶ್ರೇಯಾಂಕನ ಹುಡುಕಿಕೊಂಡು ಬಂದಿದೆ. ಅಡಿಡಾಸ್​, ಬ್ಯಾಂಕ್ ಆಫ್​ ಬರೋಡಾ, ಅಮೇಜಾನ್​, ಡಿಎಸ್​​ಸಿಯಂತಾ ಬಿಗ್​​ ಕಂಪನಿಗಳು ಸೇರಿದಂತೆ ಹಲವು ಬ್ರ್ಯಾಂಡ್​​ಗಳಿಗೆ ಶ್ರೇಯಾಂಕ ಪ್ರಮೋಟರ್​ ಆಗಿದ್ದಾರೆ. ಒಟ್ಟಿನಲ್ಲಿ, ಆನ್​​ಫೀಲ್ಡ್​ಗಿಂತ ಮುನ್ನವೇ ಆಫ್​ ದ ಫೀಲ್ಡ್​ನಲ್ಲಿ ಶ್ರೇಯಾಂಕ ಪಾಟೀಲ್​ಗೆ ಬಿಗ್​ ಸಕ್ಸಸ್​ ಅಂತೂ ಸಿಕ್ಕಿದೆ. ಇದೇ ಸಕ್ಸಸ್ ಕನ್ನಡತಿಗೆ​ ಆನ್​ಫೀಲ್ಡ್​ನಲ್ಲೂ ಸಿಗಲಿ.

The post ಶ್ರೇಯಾಂಕ ಪಾಟೀಲ್ ಈಗ ವಿಶ್ವದ ಮೋಸ್ಟ್​ ಸೆಲಬ್ರೇಟೆಡ್​ ವುಮೆನ್​ ಕ್ರಿಕೆಟರ್​. appeared first on Good News 24x7.

]]>
ಕಾಲ್ತುಳಿತದಲ್ಲಿ ಸಾ*ನ್ನಪ್ಪಿದವರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಿಸಿದ ಆರ್‌ಸಿಬಿ … https://www.goodnews24x7.com/rcb-announces-rs-25-lakh-compensation-to-families-of-those-killed-in-stampede/ Sat, 30 Aug 2025 08:35:37 +0000 https://www.goodnews24x7.com/?p=7017 ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ 17 ವರ್ಷಗಳಿಂದ ಪ್ರಶಸ್ತಿ ವಂಚಿತವಾಗಿದ್ದ RCB…

The post ಕಾಲ್ತುಳಿತದಲ್ಲಿ ಸಾ*ನ್ನಪ್ಪಿದವರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಿಸಿದ ಆರ್‌ಸಿಬಿ … appeared first on Good News 24x7.

]]>

ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ 17 ವರ್ಷಗಳಿಂದ ಪ್ರಶಸ್ತಿ ವಂಚಿತವಾಗಿದ್ದ RCB ತಂಡ, 2025ರ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿತ್ತು. ಜೂನ್ 3ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ ಗಳ ಅಂತರದಿಂದ ಮಣಿಸುವ ಮೂಲಕ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿತ್ತು.

ಹೀಗಾಗಿ, ವಿಶ್ವದಾದ್ಯಂತ RCB ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಮರುದಿನ (ಜೂನ್ 4ರಂದು) ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ನಿರೀಕ್ಷೆಗೂ ಮೀರಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡಿದ್ದರು. ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ತಕ್ಷಣವೇ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದ RCB, ಇದೀಗ ಮೃತರ ಕುಟುಂಬಗಳಿಗೆ ಅದೇ RCB CARES ಮೂಲಕ ತಲಾ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ RCB, “ಜೂನ್ 4, 2025- ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನಷ್ಟೇ ಅಲ್ಲ…ನಮ್ಮ ಕುಟುಂಬ ಸದಸ್ಯರನ್ನು. ಅವರು ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ. ಅವರ (ಮೃತ ಅಭಿಮಾನಿಗಳು) ಜಾಗವನ್ನು ಯಾವ ಸಹಾಯವೂ ತುಂಬಲಾರದು. ಆದರೆ ಮೊದಲನೇ ಮತ್ತು ಗೌರವದ ಸಂಕೇತವಾಗಿ, ಆರ್‌ಸಿಬಿ ಪ್ರತಿ ಕುಟುಂಬಕ್ಕೆ ತಲಾ 25 ಲಕ್ಷ ನೆರವನ್ನು ನೀಡಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ; ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿ ಭರವಸೆ” ಎಂದು ಹೇಳಿದೆ.

ಆರ್‌ಸಿಬಿ ಅಧಿಕೃತ ಪ್ರಕಟಣೆಯಲ್ಲಿ ಏನಿದೆ ?

ಜೂನ್ 4, 2025 – ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ.
ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನ್ನಷ್ಟೇ ಅಲ್ಲ… ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರು, ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ.
ಅವರ ಜಾಗವನ್ನು ಯಾವ ಸಹಾಯವೂ ತುಂಬಲಾರದು. ಆದರೆ ಮೊದಲನೇ ಮತ್ತು ಗೌರವದ ಸಂಕೇತವಾಗಿ, ಆರ್‌ಸಿಬಿ ಪ್ರತಿ ಕುಟುಂಬಕ್ಕೆ ತಲಾ ₹25 ಲಕ್ಷ ನೆರವನ್ನು ನೀಡಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ; ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆ.
ಇದು ಆರ್‌ಸಿಬಿ ಕೇರ್ಸ್‌ನ ಆರಂಭವೂ ಹೌದು. ಅವರ ನೆನಪನ್ನು ಗೌರವಿಸುವ ಮೂಲಕ ಶುರುವಾದ ಈ ಪ್ರಯತ್ನ, ಅಭಿಮಾನಿಗಳ ಭಾವನೆ, ನಂಬಿಕೆ ಮತ್ತು ಸುರಕ್ಷತೆ ಪ್ರತಿಬಿಂಬಿಸುವ ದೀರ್ಘಕಾಲದ ಬದ್ಧತೆ.

The post ಕಾಲ್ತುಳಿತದಲ್ಲಿ ಸಾ*ನ್ನಪ್ಪಿದವರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಿಸಿದ ಆರ್‌ಸಿಬಿ … appeared first on Good News 24x7.

]]>