Royal Challengers Bengaluru Archives - Good News 24x7 https://www.goodnews24x7.com/tag/royal-challengers-bengaluru/ Kannada Sun, 29 Mar 2026 06:30:17 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Royal Challengers Bengaluru Archives - Good News 24x7 https://www.goodnews24x7.com/tag/royal-challengers-bengaluru/ 32 32 ಚೇಸ್ ಮಾಸ್ಟರ್ ಕಿಂಗ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಗೆ ಪಾಕ್ ದಾಂಡಿಗನ ವಿಶ್ವ ದಾಖಲೆ ಧೂಳಿಪಟ https://www.goodnews24x7.com/%e0%b2%9a%e0%b3%87%e0%b2%b8%e0%b3%8d-%e0%b2%ae%e0%b2%be%e0%b2%b8%e0%b3%8d%e0%b2%9f%e0%b2%b0%e0%b3%8d-%e0%b2%95%e0%b2%bf%e0%b2%82%e0%b2%97%e0%b3%8d-%e0%b2%95%e0%b3%8a%e0%b2%b9%e0%b3%8d%e0%b2%b2/ Sun, 29 Mar 2026 06:29:00 +0000 https://www.goodnews24x7.com/?p=9033 Chase Master Records: ಟಿ20 ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯ ನಾಗಾಲೋಟ ಮುಂದುವರೆದಿದೆ. ಎಸ್​ಆರ್​ಹೆಚ್ ವಿರುದ್ಧ 69 ರನ್​ಗಳಿಸುವ ಮೂಲಕ ಕಿಂಗ್ ಕೊಹ್ಲಿ ಟಿ20 ರನ್ ಸರದಾರರ ಪಟ್ಟಿಯಲ್ಲಿ ಪಾಕ್ ದಾಂಡಿಗ ಶೊಯೆಬ್ ಮಲಿಕ್ ಅವರನ್ನು ಹಿಂದಿಕ್ಕಿದ್ದಾರೆ. ಅಷ್ಟೇ ಅಲ್ಲದೆ ಅತ್ಯಧಿಕ ರನ್​ಗಳಿಸಿದ…

The post ಚೇಸ್ ಮಾಸ್ಟರ್ ಕಿಂಗ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಗೆ ಪಾಕ್ ದಾಂಡಿಗನ ವಿಶ್ವ ದಾಖಲೆ ಧೂಳಿಪಟ appeared first on Good News 24x7.

]]>

Chase Master Records: ಟಿ20 ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯ ನಾಗಾಲೋಟ ಮುಂದುವರೆದಿದೆ. ಎಸ್​ಆರ್​ಹೆಚ್ ವಿರುದ್ಧ 69 ರನ್​ಗಳಿಸುವ ಮೂಲಕ ಕಿಂಗ್ ಕೊಹ್ಲಿ ಟಿ20 ರನ್ ಸರದಾರರ ಪಟ್ಟಿಯಲ್ಲಿ ಪಾಕ್ ದಾಂಡಿಗ ಶೊಯೆಬ್ ಮಲಿಕ್ ಅವರನ್ನು ಹಿಂದಿಕ್ಕಿದ್ದಾರೆ. ಅಷ್ಟೇ ಅಲ್ಲದೆ ಅತ್ಯಧಿಕ ರನ್​ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲೂ ಮೇಲೇರಿದ್ದಾರೆ.ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ ಹೆಸರಿಗೆ ಮತ್ತೊಂದು ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಅದು ಕೂಡ ಟಿ20 ರನ್​ ಸರದಾರರ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರುವ ಮೂಲಕ. ಅಂದರೆ ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಲಿಸ್ಟ್​ನಲ್ಲಿ ಕಿಂಗ್ ಕೊಹ್ಲಿ ಒಂದು ಸ್ಥಾನ ಮೇಲೇರಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 69 ರನ್ ಬಾರಿಸಿ ಮಿಂಚಿದ್ದರು. ಈ 69 ರನ್​ಗಳೊಂದಿಗೆ ಕಿಂಗ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಆರನೇ ಸ್ಥಾನದಲ್ಲಿ ಪಾಕಿಸ್ತಾನದ ಬ್ಯಾಟರ್ ಶೊಯೆಬ್ ಮಲಿಕ್ ಕಾಣಿಸಿಕೊಂಡಿದ್ದರು. ಇದೀಗ ಮಲಿಕ್ ಅವರನ್ನು ಹಿಂದಿಕ್ಕುವಲ್ಲಿ ಕೊಹ್ಲಿ ಯಶಸ್ವಿಯಾಗಿದ್ದಾರೆ.

 

ಶೊಯೆಬ್ ಮಲಿಕ್ ಟಿ20 ಕ್ರಿಕೆಟ್​ನಲ್ಲಿ ಈವರೆಗೆ 515 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 10665 ಎಸೆತಗಳನ್ನು ಎದುರಿಸಿರುವ ಅವರು ಒಟ್ಟು 13571 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್​ಗಳಿಸಿ ಪಾಕ್ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ.ಇದೀಗ ಕೇವಲ 398 ಟಿ20 ಇನಿಂಗ್ಸ್​ಗಳಲ್ಲಿ ವಿರಾಟ್ ಕೊಹ್ಲಿ 13,612 ರನ್​ಗಳಿಸಿದ್ದಾರೆ. ಈ ಮೂಲಕ ಶೊಯೆಬ್ ಮಲಿಕ್ ಅವರನ್ನು ಹಿಂದಿಕ್ಕಿ ಕಿಂಗ್ ಕೊಹ್ಲಿ ಟಿ20 ರನ್ ಸರದಾರರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ. ಅಷ್ಟೇ ಅಲ್ಲದೆ ಟಿ20 ಇತಿಹಾಸದಲ್ಲೇ ಅತೀ ಹೆಚ್ಚು ರನ್​ಗಳಿಸಿದ ವಿಶ್ವ ದಾಖಲೆ ಬರೆಯಲು ಮುನ್ನುಗ್ಗುತ್ತಿದ್ದಾರೆ.

ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್​ಗಳಿಸಿದ ವಿಶ್ವ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 455 ಟಿ20 ಇನಿಂಗ್ಸ್​ಗಳ ಮೂಲಕ ಒಟ್ಟು 14562 ರನ್​ಗಳಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದೀಗ 13,612 ರನ್​ ಕಲೆಹಾಕಿರುವ ಕೊಹ್ಲಿ ಇನ್ನು 951 ರನ್​ಗಳಿಸಿದರೆ ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಧಿಕ ರನ್​ಗಳಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

 

 

 

The post ಚೇಸ್ ಮಾಸ್ಟರ್ ಕಿಂಗ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಗೆ ಪಾಕ್ ದಾಂಡಿಗನ ವಿಶ್ವ ದಾಖಲೆ ಧೂಳಿಪಟ appeared first on Good News 24x7.

]]>
ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಶುರು https://www.goodnews24x7.com/womens-premier-league-starts-tomorrow/ Thu, 08 Jan 2026 10:56:34 +0000 https://www.goodnews24x7.com/?p=8301 ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಶುರು ಮಹಿಳಾ ಪ್ರೀಮಿಯರ್ ಲೀಗ್ (WPL) ನಾಳೆಯಿಂದ ಡಿ.ವೈ.ಪಾಟೀಲ್ ಕ್ರೀಡಾಂಗಣ ನವಿ ಮುಂಬೈನಲ್ಲಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಇಂಡಿಯನ್ ಪ್ರೀಮಿಯರ್ ಲೀಗ್ 4ನೇ…

The post ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಶುರು appeared first on Good News 24x7.

]]>

ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಶುರು

ಮಹಿಳಾ ಪ್ರೀಮಿಯರ್ ಲೀಗ್ (WPL) ನಾಳೆಯಿಂದ ಡಿ.ವೈ.ಪಾಟೀಲ್ ಕ್ರೀಡಾಂಗಣ ನವಿ ಮುಂಬೈನಲ್ಲಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ 4ನೇ ಆವೃತ್ತಿಗೆ ನಾಳೆ ಚಾಲನೆ ದೊರೆಯಲಿದೆ. ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿಯಲಿದೆ.

The post ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಶುರು appeared first on Good News 24x7.

]]>
RCB ತಂಡಕ್ಕೆ ಸಿಗಲಿದೆಯಾ 5 ತವರು ಮೈದಾನಗಳು ….! https://www.goodnews24x7.com/rcb-%e0%b2%a4%e0%b2%82%e0%b2%a1%e0%b2%95%e0%b3%8d%e0%b2%95%e0%b3%86-%e0%b2%b8%e0%b2%bf%e0%b2%97%e0%b2%b2%e0%b2%bf%e0%b2%a6%e0%b3%86%e0%b2%af%e0%b2%be-5-%e0%b2%a4%e0%b2%b5%e0%b2%b0%e0%b3%81-%e0%b2%ae/ Mon, 11 Aug 2025 04:32:30 +0000 https://www.goodnews24x7.com/?p=5714 ಐಪಿಎಲ್ ನಲ್ಲಿ ಪ್ರತಿ ತಂಡಗಳಿಗೂ ಒಂದು ತವರು ಮೈದಾನವಿದೆ. ಹೀಗೆ ನಗರ ಮತ್ತು ಮೈದಾನವನ್ನು ಕೇಂದ್ರೀಕರಿಸಿಯೇ ಐಪಿಎಲ್ ತಂಡಗಳನ್ನು ರೂಪಿಸಲಾಗಿದೆ. ಹೀಗಾಗಿಯೇ ಕಳೆದ 18 ವರ್ಷಗಳಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾತ್ರ ತವರು ಪಂದ್ಯಗಳನ್ನಾಡುತ್ತಾ ಬಂದಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಮುಂಬರುವ…

The post RCB ತಂಡಕ್ಕೆ ಸಿಗಲಿದೆಯಾ 5 ತವರು ಮೈದಾನಗಳು ….! appeared first on Good News 24x7.

]]>

ಐಪಿಎಲ್ ನಲ್ಲಿ ಪ್ರತಿ ತಂಡಗಳಿಗೂ ಒಂದು ತವರು ಮೈದಾನವಿದೆ. ಹೀಗೆ ನಗರ ಮತ್ತು ಮೈದಾನವನ್ನು ಕೇಂದ್ರೀಕರಿಸಿಯೇ ಐಪಿಎಲ್ ತಂಡಗಳನ್ನು ರೂಪಿಸಲಾಗಿದೆ. ಹೀಗಾಗಿಯೇ ಕಳೆದ 18 ವರ್ಷಗಳಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾತ್ರ ತವರು ಪಂದ್ಯಗಳನ್ನಾಡುತ್ತಾ ಬಂದಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಮುಂಬರುವ ದಿನಗಳಲ್ಲಿ ಕರ್ನಾಟಕದ ಇತರೆಡೆ ಕೂಡ ಹೋಮ್ ಮ್ಯಾಚ್ಗಳನ್ನಾಡಲಿದೆ. ಏಕೆಂದರೆ ಕರ್ನಾಟದಲ್ಲಿ 4 ಹೊಸ ಸ್ಟೇಡಿಯಂ ತಲೆ ಎತ್ತಲಿದ್ದು, ಇದರಿಂದಾಗಿ ಆರ್ಸಿಬಿ ತಂಡಕ್ಕೆ 5 ತವರು ಮೈದಾನದ ಆಯ್ಕೆ ದೊರೆಯಲಿದೆ.

ಏಕೆಂದರೆ ಕರ್ನಾಟಕದಲ್ಲಿ 4 ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗಳು ನಿರ್ಮಾಣವಾಗಲಿದೆ. ಈಗಾಗಲೇ ಒಂದು ಸ್ಟೇಡಿಯಂನ ಕೆಲಸಗಳು ಆರಂಭವಾಗಿದ್ದು, ಇನ್ನೊಂದರ ಶಂಕು ಸ್ಥಾಪನೆ ಶೀಘ್ರದಲ್ಲ ನೆರವೇರಲಿದೆ. ಹಾಗೆಯೇ ಮತ್ತೊಂದು ಸ್ಟೇಡಿಯಂಗಾಗಿ ರೂಪುರೇಷೆಗಳು ಸಿದ್ಧವಾಗುತ್ತಿದೆ. ಇದರ ನಡುವೆ ಬೆಂಗಳೂರಿನಲ್ಲೇ ಹೊಸ ಸ್ಟೇಡಿಯಂ ನಿರ್ಮಿಸಲು ಹಸಿರು ನಿಶಾನೆ ತೋರಿದೆ.

ಇದಾಗ್ಯೂ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಎರಡು ತವರು ಮೈದಾನಗಳನ್ನು ಹೊಂದಿದೆ. ಅಂದರೆ ನಿಗದಿತ ತವರು ಮೈದಾನವಲ್ಲದೇ, ಇತರೆಡೆ ಕೂಡ ತನ್ನ ಹೋಮ್ ಮ್ಯಾಚ್ಗಳನ್ನು ಆಡುತ್ತಿದೆ. ಭವಿಷ್ಯದಲ್ಲಿ ಎರಡು ಹೋಮ್ ಗ್ರೌಂಡ್ಗಳನ್ನು ಹೊಂದಿರುವ ತಂಡಗಳ ಪಟ್ಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಸೇರ್ಪಡೆಯಾಗಲಿದೆ.

ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ಸೂರ್ಯ ಸಿಟಿಯಲ್ಲಿ 80,000 ಆಸನ ಸಾಮರ್ಥ್ಯದ ಕ್ರಿಕೆಟ್ ಕ್ರೀಡಾಂಗಣ ಸೇರಿದಂತೆ ಅತ್ಯಾಧುನಿಕ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಲು ಕರ್ನಾಟಕ ವಸತಿ ಮಂಡಳಿ ಮುಂದಾಗಿದೆ. ಕೆಹೆಚ್ಬಿಯ ಈ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 8 ರಂದು ಅನುಮೋದನೆ ನೀಡಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಮತ್ತೊಂದು ಸ್ಟೇಡಿಯಂ ನಿರ್ಮಾಣವಾಗುವುದು ಖಚಿತ.

ಕರ್ನಾಟಕದಲ್ಲಿ ತಲೆ ಎತ್ತಲಿರುವ 4 ಸ್ಟೇಡಿಯಂಗಳ ಪಟ್ಟಿ ಹೀಗಿದೆ.

ಕೊಡಗು ಕ್ರಿಕೆಟ್ ಸ್ಟೇಡಿಯಂ:- ಮಡಿಕೇರಿ ತಾಲೂಕಿನ ಪಾಲೆಮಾಡು ಗ್ರಾಮದ ಬಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ತಲೆ ಎತ್ತುತ್ತಿದೆ. ಈಗಾಗಲೆ ಮೈದಾನ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂ ಮಾದರಿಯಲ್ಲಿ ಈ ಮೈದಾನವು ನಿಸರ್ಗದ ನಡುವೆ ನಿರ್ಮಾಣವಾಗುತ್ತಿದೆ. ವಿಶೇಷ ಅಂದರೆ, ಈ ಮೈದಾನವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ತುಸು ದೊಡ್ಡದಾಗಿರಲಿದೆ. ಅಲ್ಲದೆ ಈ ಮೈದಾನದ ಕಾಮಗಾರಿ ಮೂರು-ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.

ತುಮಕೂರು ಕ್ರಿಕೆಟ್ ಸ್ಟೇಡಿಯಂ:- ತುಮಕೂರಿನ ಪಿ.ಗೊಲ್ಲಹಳ್ಳಿ ಮತ್ತು ಸೋರೆಕುಂಟೆ ವ್ಯಾಪ್ತಿಯಲ್ಲಿ ಹೊಸ ಕ್ರಿಕೆಟ್ ಸ್ಟೇಡಿಯಂ ತಲೆ ಎತ್ತಲಿದೆ. 41 ಎಕರೆ ಭೂ ಪ್ರದೇಶದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಡಿ.2 ರಂದು ಶಂಕುಸ್ಥಾಪನೆ ನೆರವರೇಲಿದೆ. ಅಲ್ಲದೆ ಈ ಸುಸಜ್ಜಿತ ಕ್ರೀಡಾಂಗಣವು 2 ವರ್ಷಗಳಲ್ಲಿ ಲೋಕಾರ್ಪಣೆಯಾಗಲಿದೆ.

ಮೈಸೂರು ಕ್ರಿಕೆಟ್ ಸ್ಟೇಡಿಯಂ: -ಅರಮನೆ ನಗರಿ ಮೈಸೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ ಎಂಬ ಸುದ್ದಿ ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಿದೆ. ಈ ಸ್ಟೇಡಿಯಂ ನಿರ್ಮಾಣಕಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಇಲವಾಲ ಹೋಬಳಿಯ ಹುಯಿಲಾಳು ಗ್ರಾಮದಲ್ಲಿ 20.8 ಎಕರೆ ಭೂಮಿಯನ್ನು ಗುರುತಿಸಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮೈಸೂರಿನಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗುವುದನ್ನು ನಿರೀಕ್ಷಿಸಬಹುದು.

ಬೆಂಗಳೂರು ಕೆಹೆಚ್ಬಿ ಸ್ಟೇಡಿಯಂ: -ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ಸೂರ್ಯ ಸಿಟಿಯಲ್ಲಿ ಬೃಹತ್ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. 80,000 ಆಸನ ಸಾಮರ್ಥ್ಯದ ಈ ಸ್ಟೇಡಿಯಂ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, 100 ಎಕರೆ ವಿಸ್ತೀರ್ಣದ ಜಾಗದಲ್ಲಿ ಹೊಸ ಕ್ರಿಕೆಟ್ ಮೈದಾನ ತಲೆ ಎತ್ತಲಿದೆ.

ಈ ನಾಲ್ಕು ಸ್ಟೇಡಿಯಂಗಳು ಲೋಕಾರ್ಪಣೆಯಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನೊಂದಿಗೆ ಇತರೆ ನಾಲ್ಕು ಹೋಮ್ ಗ್ರೌಂಡ್ ಆಯ್ಕೆಗಳು ದೊರೆಯಲಿದೆ. ಅದರಲ್ಲೂ ಮುಂದಿನ ಐದು ವರ್ಷದೊಳಗೆ ತುಮಕೂರು ಮತ್ತು ಕೊಡಗು ಕ್ರಿಕೆಟ್ ಸ್ಟೇಡಿಯಂಗಳು ಉದ್ಘಾಟನೆಗೊಳ್ಳುವುದು ಖಚಿತ. ಹೀಗಾಗಿ ಐಪಿಎಲ್ 2028 ರಿಂದ ಆರ್ಸಿಬಿ ಹೊಸ ಹೋಮ್ ಗ್ರೌಂಡ್ನಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

 

 

The post RCB ತಂಡಕ್ಕೆ ಸಿಗಲಿದೆಯಾ 5 ತವರು ಮೈದಾನಗಳು ….! appeared first on Good News 24x7.

]]>
ಆರ್​ಸಿಬಿ ಬೌಲಿಂಗ್ ಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ : 9 ವರ್ಷಗಳ ಬಳಿಕ ಫೈನಲ್‌ಗೆ ಎಂಟ್ರಿ ಕೊಟ್ಟ ಆರ್​ಸಿಬಿ https://www.goodnews24x7.com/punjab-kings-falters-against-rcb-bowling-rcb-enters-final-after-9-years/ Thu, 29 May 2025 17:04:26 +0000 https://www.goodnews24x7.com/?p=4129 ಪಂಜಾಬ್​ ಕಿಂಗ್ಸ್​ ವಿರುದ್ಧದ ಕ್ವಾಲಿಫೈಯರ್​ 1ರ ಪಂದ್ಯದಲ್ಲಿ RCB ತಂಡ ಭರ್ಜರಿ ಜಯ ಸಾಧಿಸಿ ನೇರವಾಗಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇದರಿಂದ 2009, 2011, 2016ರ ಬಳಿಕ 4ನೇ ಬಾರಿಗೆ ಆರ್​ಸಿಬಿ ಫೈನಲ್​ಗೆ ಹೋಗಿದೆ. ಮುಲ್ಲನಪುರದ ನ್ಯೂ ಪಿಸಿಎ ಸ್ಟೇಡಿಯಂನಲ್ಲಿ ನಡೆದ…

The post ಆರ್​ಸಿಬಿ ಬೌಲಿಂಗ್ ಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ : 9 ವರ್ಷಗಳ ಬಳಿಕ ಫೈನಲ್‌ಗೆ ಎಂಟ್ರಿ ಕೊಟ್ಟ ಆರ್​ಸಿಬಿ appeared first on Good News 24x7.

]]>

ಪಂಜಾಬ್​ ಕಿಂಗ್ಸ್​ ವಿರುದ್ಧದ ಕ್ವಾಲಿಫೈಯರ್​ 1ರ ಪಂದ್ಯದಲ್ಲಿ RCB ತಂಡ ಭರ್ಜರಿ ಜಯ ಸಾಧಿಸಿ ನೇರವಾಗಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇದರಿಂದ 2009, 2011, 2016ರ ಬಳಿಕ 4ನೇ ಬಾರಿಗೆ ಆರ್​ಸಿಬಿ ಫೈನಲ್​ಗೆ ಹೋಗಿದೆ. ಮುಲ್ಲನಪುರದ ನ್ಯೂ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದಾರ್, ಬೌಲಿಂಗ್ ಆಯ್ಕೆ ಮಾಡಿದರು.

ಪಂಜಾಬ್​ ಕಿಂಗ್ಸ್​ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಪ್ರಿಯಾಂಶ್​ ಆರ್ಯ 7, ಪ್ರಭಾಸಿಮ್ರಾನ್​ ಸಿಂಗ್ 18 ರನ್​ಗೆ ಔಟ್​ ಆದರು. ನಂತರ ನಾಯಕ ಶ್ರೇಯಸ್​ ಅಯ್ಯರ್ ಕೂಡ ಕೇವಲ 2 ರನ್​ಗೆ ಡ್ರೆಸ್ಸಿಂಗ್​ ರೂಮ್​ನತ್ತ ಹೆಜ್ಜೆ ಹಾಕಿದರು. ಇವರ ಬೆನ್ನಲ್ಲೇ ಜೋಶ್ ಇಂಗ್ಲಿಷ್​ ಕೇವಲ 4 ರನ್​ಗೆ ವಿಕೆಟ್​ ಕಳೆದುಕೊಂಡರು.

ಬ್ಯಾಟಿಂಗ್​​ ಮಾಡಲು ಕ್ರೀಸ್​ಗೆ ಬಂದ ನೆಹಾಲ್ ವಧೇರಾ, ಯಶ್​ ದಯಾಳ್​ ಬೌಲಿಂಗ್​ನಲ್ಲಿ ಬೋಲ್ಡ್​ ಆದರು, ಸುಯಶ್ ಶರ್ಮಾ ಬೌಲಿಂಗ್​ನಲ್ಲಿ ಶಶಾಂಕ್​ ಸಿಂಗ್​ 3, ಮುಶೀರ್ ಖಾನ್​, ಮಾರ್ಕಸ್ ಸ್ಟೊಯಿನಿಸ್ ಔಟ್​ ಆದರು. ಇದರಿಂದ ಪಂಜಾಬ್​ ಕಿಂಗ್ಸ್​ ಕೇವಲ 14.1 ಓವರ್​ಗಳಲ್ಲಿ ಆಲೌಟ್​ ಆಗಿ 102 ರನ್​ಗಳ ಟಾರ್ಗೆಟ್​ ಅನ್ನು ಆರ್​ಸಿಬಿಗೆ ನೀಡಿತ್ತು.ಈ ಸುಲಭ ಟಾರ್ಗೆಟ್​ ಅನ್ನು ಚೇಸ್ ಮಾಡಿದ ಆರ್​ಸಿಬಿ 10 ಓವರ್​ಗೆ ಎರಡು ವಿಕೆಟ್​ ಕಳೆದುಕೊಂಡು 106 ರನ್​ ಗಳಿಸುವ ಮೂಲಕ ಜಯ ಸಾಧಿಸಿತು.

The post ಆರ್​ಸಿಬಿ ಬೌಲಿಂಗ್ ಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ : 9 ವರ್ಷಗಳ ಬಳಿಕ ಫೈನಲ್‌ಗೆ ಎಂಟ್ರಿ ಕೊಟ್ಟ ಆರ್​ಸಿಬಿ appeared first on Good News 24x7.

]]>
ಐಪಿಎಲ್ 2025 ಪುನರಾರಂಭ: RCB ತಂಡ ಮೊದಲ ಪಂದ್ಯವನ್ನಾಡಲಿದೆ…. https://www.goodnews24x7.com/%e0%b2%90%e0%b2%aa%e0%b2%bf%e0%b2%8e%e0%b2%b2%e0%b3%8d-2025-%e0%b2%aa%e0%b3%81%e0%b2%a8%e0%b2%b0%e0%b2%be%e0%b2%b0%e0%b2%82%e0%b2%ad-rcb-%e0%b2%a4%e0%b2%82%e0%b2%a1-%e0%b2%ae%e0%b3%8a%e0%b2%a6/ Mon, 12 May 2025 12:38:35 +0000 https://www.goodnews24x7.com/?p=3844 ಇಂಡಿಯನ್ ಪ್ರೀಮಿಯರ್ ಲೀಗ್ನ 59ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಟೂರ್ನಿಯು ಅರ್ಧದಲ್ಲೇ ಸ್ಥಗಿತಗೊಂಡಿದ್ದರಿಂದ ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ಈ ಪಂದ್ಯ ಜರುಗಿರಲಿಲ್ಲ. ಭಾರತ ಮತ್ತು ಪಾಕಿಸ್ತಾನ್ ನಡುವಣ ಯುದ್ಧ ಭೀತಿ…

The post ಐಪಿಎಲ್ 2025 ಪುನರಾರಂಭ: RCB ತಂಡ ಮೊದಲ ಪಂದ್ಯವನ್ನಾಡಲಿದೆ…. appeared first on Good News 24x7.

]]>

ಇಂಡಿಯನ್ ಪ್ರೀಮಿಯರ್ ಲೀಗ್ನ 59ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಟೂರ್ನಿಯು ಅರ್ಧದಲ್ಲೇ ಸ್ಥಗಿತಗೊಂಡಿದ್ದರಿಂದ ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ಈ ಪಂದ್ಯ ಜರುಗಿರಲಿಲ್ಲ.

ಭಾರತ ಮತ್ತು ಪಾಕಿಸ್ತಾನ್ ನಡುವಣ ಯುದ್ಧ ಭೀತಿ ಹಿನ್ನಲೆ ಅರ್ಧದಲ್ಲೇ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಶುಕ್ರವಾರದಿಂದ ಶುರುವಾಗುವುದು ಬಹುತೇಕ ಖಚಿತವಾಗಿದೆ. ಇಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರಾಳಿಯಾಗಿ ಕಣಕ್ಕಿಳಿಯುವುದು ಲಕ್ನೋ ಸೂಪರ್ ಜೈಂಟ್ಸ್. ಏಕೆಂದರೆ ಐಪಿಎಲ್ನ 59ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಬೇಕಿತ್ತು. ಇದೀಗ ಈ ಪಂದ್ಯದ ಮೂಲಕವೇ ಟೂರ್ನಿಯನ್ನು ಮತ್ತೆ ಶುರು ಮಾಡಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.

ಈಗಾಗಲೇ ಗುಜರಾತ್ ಟೈಟಾನ್ಸ್ ಸೇರಿದಂತೆ ಕೆಲ ತಂಡಗಳು ಐಪಿಎಲ್ನ ಉಳಿದ ಪಂದ್ಯಗಳಿಗಾಗಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಈ ಸಿದ್ಧತೆಗಳ ನಡುವೆ ಮತ್ತೊಂದು ಮಾಹಿತಿ ಕೂಡ ಹೊರಬಿದ್ದಿದೆ. ಅಂದರೆ ಮೊದಲ ಪಂದ್ಯದಲ್ಲಿ ಆರ್ಸಿಬಿ ತಂಡ ಕಣಕ್ಕಿಳಿಯಲಿದೆ ಎಂದು ಎಎನ್ಐ ಮೂಲಗಳು ತಿಳಿಸಿವೆ. ಹೀಗಾಗಿ ಐಪಿಎಲ್ ಪುನರಾರಂಭವಾದರೆ ಮೊದಲ ಮ್ಯಾಚ್ನಲ್ಲಿ ಆರ್ಸಿಬಿ ಪಡೆ ಕಾಣಿಸಿಕೊಳ್ಳುವುದು ಖಚಿತ.

ಇದಾಗ್ಯೂ ಈ ಪಂದ್ಯವನ್ನು ಎಲ್ಲಿ ಆಯೋಜಿಸಲಾಗುತ್ತದೆ ಎಂಬುದರ ಖಚಿತ ಮಾಹಿತಿ ಹೊರಬಿದ್ದಿಲ್ಲ. ಈ ಹಿಂದಿನ ವೇಳಾಪಟ್ಟಿಯ ಪ್ರಕಾರ, ಆರ್ಸಿಬಿ-ಎಲ್ಎಸ್ಜಿ ನಡುವಣ ಪಂದ್ಯವು ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಇದೀಗ ವೇಳಾಪಟ್ಟಿಯನ್ನು ಮರುನಿಗದಿ ಮಾಡುತ್ತಿರುವುದರಿಂದ ಉಭಯ ತಂಡಗಳು ತಟಸ್ಥ ಮೈದಾನದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಏಕೆಂದರೆ ಐಪಿಎಲ್ನ ಲೀಗ್ ಹಂತದ ಉಳಿದ ಪಂದ್ಯಗಳನ್ನು ದಕ್ಷಿಣ ಭಾರತದಲ್ಲಿ ಆಯೋಜಿಸುವ ಬಗ್ಗೆ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಗಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯವು ಹೈದರಾಬಾದ್, ಚೆನ್ನೈ ಅಥವಾ ಬೆಂಗಳೂರಿನಲ್ಲಿ ಆಯೋಜಿಸಬಹುದು. ಈ ಮೂಲಕ ರಂಗು ರಂಗಿನ ಕ್ರಿಕೆಟ್ ಟೂರ್ನಿಗೆ ಮತ್ತೆ ಚಾಲನೆ ನೀಡಲು ಬಿಸಿಸಿಐ ಯೋಜನೆ ರೂಪಿಸಿದೆ.

 

 

The post ಐಪಿಎಲ್ 2025 ಪುನರಾರಂಭ: RCB ತಂಡ ಮೊದಲ ಪಂದ್ಯವನ್ನಾಡಲಿದೆ…. appeared first on Good News 24x7.

]]>
ಐಪಿಎಲ್ ನಿಂದ ಆರ್.ಸಿ.ಬಿ ಹೊರಗೋಗ್ಬಾರ್ದು ಅಂದ್ರೆ ಇಷ್ಟು ಪಂದ್ಯಗಳನ್ನು ಗೆಲ್ಲಲೇಬೇಕು…. https://www.goodnews24x7.com/%e0%b2%90%e0%b2%aa%e0%b2%bf%e0%b2%8e%e0%b2%b2%e0%b3%8d-%e0%b2%a8%e0%b2%bf%e0%b2%82%e0%b2%a6-%e0%b2%86%e0%b2%b0%e0%b3%8d-%e0%b2%b8%e0%b2%bf-%e0%b2%ac%e0%b2%bf-%e0%b2%b9%e0%b3%8a%e0%b2%b0%e0%b2%97/ Tue, 06 May 2025 11:42:07 +0000 https://www.goodnews24x7.com/?p=3675 ಐಪಿಎಲ್ 2025, ಸೀಸನ್ 18ರ ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಗ್ರಸ್ಥಾನದಲ್ಲಿದ್ದು,16 ಪಾಯಿಂಟ್ಸ್ ಗಳನ್ನು ಪಡೆದುಕೊಂಡಿದ್ದರು ಸಹ ಇನ್ನು ಪ್ಲೇ ಆಫ್ ಗೆ ಆಯ್ಕೆಯಾಗಿಲ್ಲ. ಇನ್ನು ಉಳಿದಿರುವ ಮೂರು ಪಂದ್ಯಗಳಲ್ಲಿ ಆರ್.ಸಿ.ಬಿ ತಂಡವು ಎಷ್ಟು ಪಂದ್ಯಗಳನ್ನು ಗೆಲ್ಲಲೇ ಬೇಕು ಆಗ…

The post ಐಪಿಎಲ್ ನಿಂದ ಆರ್.ಸಿ.ಬಿ ಹೊರಗೋಗ್ಬಾರ್ದು ಅಂದ್ರೆ ಇಷ್ಟು ಪಂದ್ಯಗಳನ್ನು ಗೆಲ್ಲಲೇಬೇಕು…. appeared first on Good News 24x7.

]]>

ಐಪಿಎಲ್ 2025, ಸೀಸನ್ 18ರ ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಗ್ರಸ್ಥಾನದಲ್ಲಿದ್ದು,16 ಪಾಯಿಂಟ್ಸ್ ಗಳನ್ನು ಪಡೆದುಕೊಂಡಿದ್ದರು ಸಹ ಇನ್ನು ಪ್ಲೇ ಆಫ್ ಗೆ ಆಯ್ಕೆಯಾಗಿಲ್ಲ. ಇನ್ನು ಉಳಿದಿರುವ ಮೂರು ಪಂದ್ಯಗಳಲ್ಲಿ ಆರ್.ಸಿ.ಬಿ ತಂಡವು ಎಷ್ಟು ಪಂದ್ಯಗಳನ್ನು ಗೆಲ್ಲಲೇ ಬೇಕು ಆಗ ಮಾತ್ರ ಪ್ಲೇ ಆಫ್ಗೆ ಏರಲು ಸಾಧ್ಯವಾಗುತ್ತದೆ.ಇಂಡಿಯನ್ ಪ್ರೀಮಿಯರ್ ಲೀಗ್ನ 55 ಪಂದ್ಯಗಳು ಪೂರ್ಣಗೊಂಡರೂ ಯಾವುದೇ ತಂಡ ಪ್ಲೇಆಫ್ಗೆ ಪ್ರವೇಶಿಸಿಲ್ಲ. ಇತ್ತ ಮೂರು ತಂಡಗಳು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದ್ದರೆ, 7 ತಂಡಗಳ ನಡುವೆ ಪ್ಲೇಆಫ್ ರೇಸ್ ಪೈಪೋಟಿ ಮುಂದುವರೆದಿದೆ. ಹೀಗಾಗಿ ಈ ವಾರದ ಪಂದ್ಯದೊಂದಿಗೆ ಪ್ಲೇಆಫ್ ಆಡಲಿರುವ ತಂಡಗಳ ಸ್ಪಷ್ಟ ಚಿತ್ರಣ ದೊರೆಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 11 ಪಂದ್ಯಗಳಲ್ಲಿ 8 ಜಯ ಸಾಧಿಸಿ ಇದೀಗ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಒಟ್ಟು 16 ಅಂಕಗಳನ್ನು ಕಲೆಹಾಕಿದರೂ, ಆರ್ಸಿಬಿ ತಂಡ ಅಧಿಕೃತವಾಗಿ ಪ್ಲೇಆಫ್ಗೆ ಪ್ರವೇಶಿಸಿಲ್ಲ. ಇದಕ್ಕೆ ಮುಖ್ಯ ಕಾರಣ ಇತರೆ 7 ತಂಡಗಳು ಪ್ಲೇಆಫ್ ರೇಸ್ನಲ್ಲಿರುವುದು. ಅದರಲ್ಲೂ 4 ತಂಡಗಳಿಗೆ ಆರ್ಸಿಬಿ ತಂಡವನ್ನು ಹಿಂದಿಕ್ಕಿ ಪ್ಲೇಆಫ್ ಹಂತಕ್ಕೇರಲು ಉತ್ತಮ ಅವಕಾಶವಿದೆ. ಹೀಗಾಗಿಯೇ ಆರ್ಸಿಬಿ ಪಾಲಿಗೆ ಮುಂದಿನ ಮೂರು ಪಂದ್ಯಗಳು ನಿರ್ಣಾಯಕ. ಏಕೆಂದರೆ….

ಮುಂಬೈ ಇಂಡಿಯನ್ಸ್ ತಂಡವು ಮುಂದಿನ ಮೂರು ಮ್ಯಾಚ್ಗಳಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಮಣಿಸಿದರೆ, ಒಟ್ಟು 20 ಅಂಕಗಳನ್ನು ಪಡೆದು ಪ್ಲೇಆಫ್ಗೇರಲಿದೆ. ಪಂಜಾಬ್ ಕಿಂಗ್ಸ್ ತಂಡವು ಮುಂದಿನ 3 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಸೋಲಿಸಿದರೆ 19 ಅಂಕಗಳೊಂದಿಗೆ ಪ್ಲೇಆಫ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಲಿದೆ. ಹಾಗೆಯೇ ಗುಜರಾತ್ ಟೈಟಾನ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಮಣಿಸಿದರೆ ಒಟ್ಟು 18 ಅಂಕಗಳೊಂದಿಗೆ ಪ್ಲೇಆಫ್ ಹಂತಕ್ಕೇರಲಿದೆ.

ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಮುಂದಿನ ಮೂರು ಪಂದ್ಯಗಳಲ್ಲೂ ಜಯ ಸಾಧಿಸಿದರೆ, ಅಂದರೆ ಚೆನ್ನೈ ಸೂಪರ್ ಕಿಂಗ್ಸ್, ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿದರೆ ಒಟ್ಟು 17 ಅಂಕಗಳನ್ನು ಪಡೆದು ಪ್ಲೇಆಫ್ಗೆ ಅರ್ಹತೆ ಪಡೆಯಲಿದೆ.ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್, ಸನ್ರೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ವಿರುದ್ಧ ಸೋತರೆ 16 ಅಂಕಗಳಲ್ಲೇ ಉಳಿಯಲಿದೆ.

ಹೀಗಾದಲ್ಲಿ ಆರ್ಸಿಬಿ ತಂಡವು ಪ್ಲೇಆಫ್ ರೇಸ್ನಿಂದ ಹೊರಬೀಳಲಿದ್ದು, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಂದಿನ ಹಂತಕ್ಕೇರಲಿದೆ. ಹೀಗಾಗಿಯೇ ಆರ್ಸಿಬಿ ತಂಡದ ಪಾಲಿಗೆ ಮುಂದಿನ ಪಂದ್ಯಗಳು ನಿರ್ಣಾಯಕ.

 

The post ಐಪಿಎಲ್ ನಿಂದ ಆರ್.ಸಿ.ಬಿ ಹೊರಗೋಗ್ಬಾರ್ದು ಅಂದ್ರೆ ಇಷ್ಟು ಪಂದ್ಯಗಳನ್ನು ಗೆಲ್ಲಲೇಬೇಕು…. appeared first on Good News 24x7.

]]>
ಆರ್.ಸಿ.ಬಿ ಯ ಹೀರೋ ಆದ ಯಶ್ ದಯಾಳ್ ನ ಯಶೋಗಾಥೆ…. https://www.goodnews24x7.com/%e0%b2%86%e0%b2%b0%e0%b3%8d-%e0%b2%b8%e0%b2%bf-%e0%b2%ac%e0%b2%bf-%e0%b2%af-%e0%b2%b9%e0%b3%80%e0%b2%b0%e0%b3%8b-%e0%b2%86%e0%b2%a6-%e0%b2%af%e0%b2%b6%e0%b3%8d-%e0%b2%a6%e0%b2%af%e0%b2%be%e0%b2%b3/ Sun, 04 May 2025 09:31:11 +0000 https://www.goodnews24x7.com/?p=3640 2023ರಲ್ಲಿ ಜಿ.ಟಿ ತಂಡದ ಆಟಗಾರನಾಗಿದ್ದಂತಹ ಯಶ್ ದಯಾಳ್, ಒಂದೇ ಓವರ್ನಲ್ಲಿ ಐದು ಸಿಕ್ಸರ್ಸ್ಗಳನ್ನ ರಿಂಕು ಸಿಂಗ್ ಅವರ ಬ್ಯಾಟಿಂಗ್ ನಲ್ಲಿ ಹೊಡೆಸಿಕೊಳ್ಳುತ್ತಾರೆ. ಅದಾದ ನಂತರ ಜಿ.ಟಿ ಫ್ರಾನ್ಚೈಸಿಯು ಅವರನ್ನು ತಂಡದಿಂದ ಕೈ ಬಿಡುತ್ತಾರೆ. ನಂತರ 2024ರಲ್ಲಿ ಆರ್.ಸಿ.ಬಿ ಫ್ರಾಂಚೈಸಿಯು ಅವರನ್ನ ಬಿಡ್…

The post ಆರ್.ಸಿ.ಬಿ ಯ ಹೀರೋ ಆದ ಯಶ್ ದಯಾಳ್ ನ ಯಶೋಗಾಥೆ…. appeared first on Good News 24x7.

]]>

2023ರಲ್ಲಿ ಜಿ.ಟಿ ತಂಡದ ಆಟಗಾರನಾಗಿದ್ದಂತಹ ಯಶ್ ದಯಾಳ್, ಒಂದೇ ಓವರ್ನಲ್ಲಿ ಐದು ಸಿಕ್ಸರ್ಸ್ಗಳನ್ನ ರಿಂಕು ಸಿಂಗ್ ಅವರ ಬ್ಯಾಟಿಂಗ್ ನಲ್ಲಿ ಹೊಡೆಸಿಕೊಳ್ಳುತ್ತಾರೆ. ಅದಾದ ನಂತರ ಜಿ.ಟಿ ಫ್ರಾನ್ಚೈಸಿಯು ಅವರನ್ನು ತಂಡದಿಂದ ಕೈ ಬಿಡುತ್ತಾರೆ. ನಂತರ 2024ರಲ್ಲಿ ಆರ್.ಸಿ.ಬಿ ಫ್ರಾಂಚೈಸಿಯು ಅವರನ್ನ ಬಿಡ್ ಮಾಡಿ ಖರೀದಿಸುತ್ತಾರೆ. ನಂತರ ತಂಡದಲ್ಲಿ ಅತ್ಯುತ್ತಮವಾದ ಪ್ರದರ್ಶನವನ್ನು ನೀಡುತ್ತಾರೆ. ಪ್ಲೇ ಆಫ್ ಆದಿ ತಲುಪುವಲ್ಲಿ ಸಿಎಸ್‌ಕೆ ತಂಡದ ವಿರುದ್ಧ ಕೊನೆಯ ಓವರ್ ನಲ್ಲಿ ಅತ್ಯದ್ಭುತ ಬೌಲಿಂಗ್ ಪ್ರದರ್ಶನವನ್ನು ನೀಡುತ್ತಾರೆ. ಈ ಬಾರಿಯೂ ಸಹ ಅದೇ ಕೆಲಸವನ್ನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಯಶ್ ದಯಾಳ್. ಐಪಿಎಲ್ ಸೀಸನ್ 18, 52ನೇ ಪಂದ್ಯಾವಳಿಯಲ್ಲಿ, ಸಿ ಎಸ್ ಕೆ ತಂಡದ ವಿರುದ್ಧದ ಕೊನೆಯ ಓವರ್ ನಲ್ಲಿ ತಮ್ಮ ಕೋಟಾದ ನಾಲ್ಕನೇ ಓವರ್ ನಲ್ಲಿ ಧೋನಿ ಅವರನ್ನು ಎಲ್.ಬಿ.ಡಬ್ಲ್ಯೂ ಮಾಡಿ ಔಟ್ ಮಾಡುವ ಮುಖಾಂತರ ಪಂದ್ಯದ ದಿಕ್ಕನ್ನೇ ಬದಲಿಸುತ್ತಾರೆ. ಅಲ್ಲದೆ ಲೋಪುಲ್ಟಾಸ್ ಹಾಕುವ ಯತ್ನದಲ್ಲಿ ನೋಬಾಲ್ ಸಹ ಮಾಡ್ತಾರೆ ಆರು ರನ್ಗಳನ್ನ ಸಹ ನೀಡ್ತಾರೆ. ಅದಾದ್ಮೇಲೆ ನಡೆದಿದ್ದು ಇತಿಹಾಸ. ಇದೆಲ್ಲವನ್ನ ಗಮನದಲ್ಲಿಟ್ಟುಕೊಂಡು ಆರ್‌ಸಿಬಿಯ ಹೀರೋ ಯಶ್ ದಯಾಳ್ ಎಂದು ಕೊಂಡಾಡಿದ್ದಾರೆ ಅಭಿಮಾನಿಗಳು.ತಮ್ಮ ತಪ್ಪುಗಳಿಂದ ಪಾಠ ಕಲಿತ ಯಶ್ ದಯಾಳ್ ಐಪಿಎಲ್ 2024 ರಲ್ಲಿ ಆರ್‌ಸಿಬಿ ಪರ ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದರು. ಯಶ್ ದಯಾಳ್ ಅವರ ಈ ಅದ್ಭುತ ಪ್ರದರ್ಶನವನ್ನು ನೋಡಿದ ಆರ್‌ಸಿಬಿ ಐಪಿಎಲ್ 2025 ಕ್ಕೆ ಅವರನ್ನು ಉಳಿಸಿಕೊಂಡಿತು. ಯಶ್ ಆರ್‌ಸಿಬಿಯ ನಂಬಿಕೆಗೆ ತಕ್ಕಂತೆ ಬದುಕಿದರು ಮತ್ತು ಈಗ ಅವರ ತಂಡದ ಅತಿದೊಡ್ಡ ಪ್ರಮುಖ ಬೌಲರ್ ಆಗಿದ್ದಾರೆ.

ಐಪಿಎಲ್ 2023 ರಲ್ಲಿ ಯಶ್ ದಯಾಳ್ ಗುಜರಾತ್ ಟೈಟಾನ್ಸ್ ಪರ ಆಡುವಾಗ ಅವರ ಒಂದೇ ಓವರ್ನಲ್ಲಿ ರಿಂಕು ಸಿಂಗ್ 5 ಸಿಕ್ಸರ್‌ಗಳನ್ನು ಬಾರಿಸಿದ್ದರು. ಆಗ ಯಶ್ ದಯಾಳ್ ತಮ್ಮ ವೃತ್ತಿಜೀವನ ಇಲ್ಲಿಗೆ ಮುಗಿಯಿತು ಎಂದೇ ಭಾವಿಸಲಾಗಿತ್ತು. ಕೆಕೆಆರ್ ವಿರುದ್ಧದ ಆ ಪಂದ್ಯದಲ್ಲಿ ಯಶ್ ದಯಾಳ್ ಅತಿದೊಡ್ಡ ವಿಲನ್ ಆದರು. ಆ ಋತುವಿನ ನಂತರ ಗುಜರಾತ್ ಯಶ್ ದಯಾಳ್ ಅವರನ್ನು ಬಿಡುಗಡೆ ಮಾಡಿತು, ಆದರೆ ಆರ್‌ಸಿಬಿ ಹರಾಜಿನಲ್ಲಿ ಯಶ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿತು. ತಮ್ಮ ತಪ್ಪುಗಳಿಂದ ಪಾಠ ಕಲಿತ ಯಶ್ ದಯಾಳ್ ಐಪಿಎಲ್ 2024 ರಲ್ಲಿ ಆರ್‌ಸಿಬಿ ಪರ ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದರು.

ಯಶ್ ದಯಾಳ್ ಅವರ ಈ ಅದ್ಭುತ ಪ್ರದರ್ಶನವನ್ನು ನೋಡಿದ ಆರ್‌ಸಿಬಿ ಐಪಿಎಲ್ 2025 ಕ್ಕೆ ಅವರನ್ನು ಉಳಿಸಿಕೊಂಡಿತು. ಯಶ್ ಆರ್‌ಸಿಬಿಯ ನಂಬಿಕೆಗೆ ತಕ್ಕಂತೆ ಬದುಕಿದರು ಮತ್ತು ಈಗ ಅವರ ತಂಡದ ಅತಿದೊಡ್ಡ ಪ್ರಮುಖ ಬೌಲರ್ ಆಗಿದ್ದಾರೆ. ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ, ವಿಶ್ವದ ಶ್ರೇಷ್ಠ ಫಿನಿಷರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಮಹೇಂದ್ರ ಸಿಂಗ್ ಧೋನಿ ಕೂಡ ಅವರ ಬಿಗಿಯಾದ ಬೌಲಿಂಗ್ ಮುಂದೆ ಅಸಹಾಯಕರಾಗಿ ಕಂಡರು. ಐಪಿಎಲ್ 2025 ರ ಹಿಂದಿನ ಪಂದ್ಯದಲ್ಲಿ ಕೂಡ ಇದೇರೀತಿ ಕಂಡುಬಂದಿದೆ.

ಯಶ್ ವಿರುದ್ಧ ನಡೆಯಲ್ಲ ಧೋನಿ ಆಟ;
ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ, ಯಶ್ ದಯಾಳ್ ಕೊನೆಯ ಓವರ್‌ನಲ್ಲಿ 15 ರನ್‌ಗಳನ್ನು ರಕ್ಷಿಸಿಕೊಳ್ಳಬೇಕಾಯಿತು. ಕೊನೆಯ ಓವರ್ನ ಮೊದಲ ಮೂರು ಎಸೆತಗಳಲ್ಲಿ ಯಶ್ ದಯಾಳ್ ಸಿಎಸ್‌ಕೆ ಸೋಲನ್ನು ದೃಢಪಡಿಸಿದರು. ಧೋನಿ ಮತ್ತು ರವೀಂದ್ರ ಜಡೇಜಾ ಕ್ರೀಸ್‌ನಲ್ಲಿ ನಿಂತಿದ್ದರು. ಮೊದಲ ಚೆಂಡು ಫುಲ್-ಟಾಸ್ ಆಗಿತ್ತು ಆದರೆ ಧೋನಿ ಅದನ್ನು ಸರಿಯಾಗಿ ಟಚ್ ಮಾಡಲು ವಿಫಲರಾದರು ಮತ್ತು ಸಿಂಗಲ್ ತೆಗೆದುಕೊಂಡು ಜಡೇಜಾಗೆ ಸ್ಟ್ರೈಕ್ ನೀಡಿದರು. ಯಶ್ ಅದ್ಭುತ ಯಾರ್ಕರ್ ಮೂಲಕ ಜಡೇಜಾ ಅವರನ್ನೂ ಕಟ್ಟಿಹಾಕಿದರು. ಮೂರನೇ ಎಸೆತದಲ್ಲಿ ಧೋನಿ ಮತ್ತೊಮ್ಮೆ ಸ್ಟ್ರೈಕ್‌ಗೆ ಬಂದರು ಮತ್ತು ಈ ಬಾರಿ ಯಶ್ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡಿದರು.

ಧೋನಿ ಔಟಾದ ತಕ್ಷಣ, ಪಂದ್ಯವು ಆರ್‌ಸಿಬಿ ಪರವಾಗಿ ಬಂದಿತು. ನಾಲ್ಕನೇ ಎಸೆತದಲ್ಲಿ ನೋ ಬಾಲ್ ಹಾಗೂ ಸಿಕ್ಸ್ ಹೋದರು ಯಶ್ ಮತ್ತೆ ಕಮ್ಬ್ಯಾಕ್ ಮಾಡಿದರು. ಯಶ್ ತಮ್ಮ ಹಿಡಿತವನ್ನು ಕಾಯ್ದುಕೊಂಡು ಕೊನೆಯ ಮೂರು ಎಸೆತಗಳಲ್ಲಿ ಕೇವಲ ಮೂರು ರನ್‌ಗಳನ್ನು ಬಿಟ್ಟುಕೊಟ್ಟರು, ಇದರಿಂದಾಗಿ ಆರ್ಸಿಬಿ ಪಂದ್ಯವನ್ನು ಗೆದ್ದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ 5 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಸಿಎಸ್‌ಕೆ 5 ವಿಕೆಟ್‌ಗೆ 211 ರನ್ ಗಳಿಸಲಷ್ಟೇ ಶಕ್ತವಾಯಿತು.

The post ಆರ್.ಸಿ.ಬಿ ಯ ಹೀರೋ ಆದ ಯಶ್ ದಯಾಳ್ ನ ಯಶೋಗಾಥೆ…. appeared first on Good News 24x7.

]]>
ರೈನೋ ರೋಮಾರಿಯೋ ಶೆಫರ್ಡ್ ದಾಳಿಗೆ ಸಿಎಸ್‌ಕೆ ಧೂಳಿಪಟ…. https://www.goodnews24x7.com/%e0%b2%b0%e0%b3%88%e0%b2%a8%e0%b3%8b-%e0%b2%b0%e0%b3%8b%e0%b2%ae%e0%b2%be%e0%b2%b0%e0%b2%bf%e0%b2%af%e0%b3%8b-%e0%b2%b6%e0%b3%86%e0%b2%ab%e0%b2%b0%e0%b3%8d%e0%b2%a1%e0%b3%8d-%e0%b2%a6%e0%b2%be/ Sun, 04 May 2025 09:09:18 +0000 https://www.goodnews24x7.com/?p=3635 ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ,ರೊಮಾರಿಯೊ ಶೆಫರ್ಡ್ ಹೊಸ ಇತಿಹಾಸ ಬರೆದಿದ್ದಾರೆ. ಅದು ಕೂಡ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ. ಈ ಅರ್ಧಶತಕದೊಂದಿಗೆ ಐಪಿಎಲ್ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಯಶಸ್ವಿ…

The post ರೈನೋ ರೋಮಾರಿಯೋ ಶೆಫರ್ಡ್ ದಾಳಿಗೆ ಸಿಎಸ್‌ಕೆ ಧೂಳಿಪಟ…. appeared first on Good News 24x7.

]]>

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ,ರೊಮಾರಿಯೊ ಶೆಫರ್ಡ್ ಹೊಸ ಇತಿಹಾಸ ಬರೆದಿದ್ದಾರೆ. ಅದು ಕೂಡ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ. ಈ ಅರ್ಧಶತಕದೊಂದಿಗೆ ಐಪಿಎಲ್ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ (13 ಎಸೆತಗಳು) ಅಗ್ರಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 52 ನೇ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೊಮಾರಿಯೊ ಶೆಫರ್ಡ್ 14 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 53 ರನ್ ಬಾರಿಸಿದ್ದರು, ಅದು ಸಹ 378.6 ಸ್ಟ್ರೈಕ್ ರೇಟ್ ನೊಂದಿಗೆ ಎಂಬುದು ವಿಶೇಷ ಹಾಗೂ ಅಚ್ಚರಿ ಮೂಡಿಸುವಂತದ್ದು. ಈ ಸ್ಪೋಟಕ ಅರ್ಧಶತಕದೊಂದಿಗೆ ಆರ್ಸಿಬಿ ಪರ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ ದಾಖಲೆ ರೊಮಾರಿಯೊ ಪಾಲಾಯಿತು.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. 2013 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಗೇಲ್ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು.ಇದೀಗ ಬರೋಬ್ಬರಿ 12 ವರ್ಷಗಳ ಬಳಿಕ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ದಾಖಲೆ ಮುರಿಯುವಲ್ಲಿ ವೆಸ್ಟ್ ಇಂಡೀಸ್ ಆಟಗಾರನೇ ಆಗಿರುವ ರೊಮಾರಿಯೊ ಶೆಫರ್ಡ್ ಯಶಸ್ವಿಯಾಗಿದ್ದಾರೆ. ಅದು ಕೂಡ 14 ಎಸೆತಗಳಲ್ಲಿ ಸ್ಪೋಟಕ ಹಾಫ್ ಸೆಂಚುರಿ ಸಿಡಿಸುವ ಮೂಲಕ ಎಂಬುದು ವಿಶೇಷ.

ಇನ್ನು ರೊಮಾರಿಯೊ ಶೆಫರ್ಡ್ ಬಾರಿಸಿದ ಈ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಆರ್ಸಿಬಿ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 211 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಆರ್ಸಿಬಿ ತಂಡ 2 ರನ್ಗಳ ರೋಚಕ ಜಯ ಸಾಧಿಸಿದೆ.

The post ರೈನೋ ರೋಮಾರಿಯೋ ಶೆಫರ್ಡ್ ದಾಳಿಗೆ ಸಿಎಸ್‌ಕೆ ಧೂಳಿಪಟ…. appeared first on Good News 24x7.

]]>
ಕಿಂಗ್ ಕೊಹ್ಲಿ ಅಬ್ಬರಕ್ಕೆ ರೆಕಾರ್ಡ್ಸ್ ಗಳು ಉಡೀಸ್…. https://www.goodnews24x7.com/%e0%b2%95%e0%b2%bf%e0%b2%82%e0%b2%97%e0%b3%8d-%e0%b2%95%e0%b3%8a%e0%b2%b9%e0%b3%8d%e0%b2%b2%e0%b2%bf-%e0%b2%85%e0%b2%ac%e0%b3%8d%e0%b2%ac%e0%b2%b0%e0%b2%95%e0%b3%8d%e0%b2%95%e0%b3%86-%e0%b2%b0/ Sun, 04 May 2025 08:57:03 +0000 https://www.goodnews24x7.com/?p=3624 ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ ದಾಖಲೆಗಳ ಸರಮಾಲೆ ಮುಂದುವರೆದಿದೆ. ಇದೀಗ ಈ ದಾಖಲೆಗಳ ಪಟ್ಟಿಗೆ ಒಂದಷ್ಟು ಹೊಸ ದಾಖಲೆಗಳು ಸೇರ್ಪಡೆಯಾಗಿವೆ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ… ಇಂಡಿಯನ್ ಪ್ರೀಮಿಯರ್ ಲೀಗ್ನ 52ನೇ ಪಂದ್ಯದ…

The post ಕಿಂಗ್ ಕೊಹ್ಲಿ ಅಬ್ಬರಕ್ಕೆ ರೆಕಾರ್ಡ್ಸ್ ಗಳು ಉಡೀಸ್…. appeared first on Good News 24x7.

]]>

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ ದಾಖಲೆಗಳ ಸರಮಾಲೆ ಮುಂದುವರೆದಿದೆ. ಇದೀಗ ಈ ದಾಖಲೆಗಳ ಪಟ್ಟಿಗೆ ಒಂದಷ್ಟು ಹೊಸ ದಾಖಲೆಗಳು ಸೇರ್ಪಡೆಯಾಗಿವೆ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…

ಇಂಡಿಯನ್ ಪ್ರೀಮಿಯರ್ ಲೀಗ್ನ 52ನೇ ಪಂದ್ಯದ ಮೂಲಕ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದು ಸಹ ದಾಖಲೆಗಳ ಮೇಲೆಯೇ ದಾಖಲೆಗಳನ್ನು ಬರೆಯುವ ಮೂಲಕ ಎಂಬುದು ವಿಶೇಷ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ 33 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 66 ರನ್ ಬಾರಿಸಿದ್ದರು. ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ.

ಸಿಕ್ಸರ್ ಕಿಂಗ್: ಈ ಪಂದ್ಯದಲ್ಲಿ ಬಾರಿಸಿದ 5 ಸಿಕ್ಸ್ಗಳೊಂದಿಗೆ ವಿರಾಟ್ ಕೊಹ್ಲಿ ಆರ್ಸಿಬಿ ಪರ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಆರ್ಸಿಬಿ ಪರ 300+ ಸಿಕ್ಸ್ ಬಾರಿಸಿದ ಏಕೈಕ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಿಂಗ್ ಕೊಹ್ಲಿ ಆರ್ಸಿಬಿ ಪರ ಈವರೆಗೆ 304 ಸಿಕ್ಸ್ಗಳನ್ನು ಬಾರಿಸಿದ್ದಾರೆ.

 

 

ಸಿಕ್ಸರ್ ಸರದಾರ: ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಮೈದಾನದಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 151 ಸಿಕ್ಸ್ ಬಾರಿಸಿ ಗೇಲ್ ಈ ದಾಖಲೆ ಬರೆದಿದ್ದರು. ಇದೀಗ ಬೆಂಗಳೂರಿನಲ್ಲಿ 154 ಸಿಕ್ಸ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಈ ದಾಖಲೆ ಮುರಿದಿದ್ದಾರೆ.

500+ ರನ್ಸ್: ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ 500+ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ 7 ಬಾರಿ 500+ ರನ್ ಕಲೆಹಾಕಿದ ಡೇವಿಡ್ ವಾರ್ನರ್ ಹೆಸರಿನಲ್ಲಿತ್ತು. ಇದೀಗ 8ನೇ ಬಾರಿ 500+ ಸ್ಕೋರ್ಗಳಿಸಿ ವಿರಾಟ್ ಕೊಹ್ಲಿ ಇತಿಹಾಸ ನಿರ್ಮಿಸಿದ್ದಾರೆ.

ಅರ್ಧಶತಕದ ವೀರ: ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಡೇವಿಡ್ ವಾರ್ನರ್ (62) ಅವರ ದಾಖಲೆಯನ್ನು ಸಹ ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ಸಿಎಸ್ಕೆ ವಿರುದ್ಧದ ಅರ್ಧಶತಕದೊಂದಿಗೆ ಕೊಹ್ಲಿಯ ಐಪಿಎಲ್ ಹಾಫ್ ಸೆಂಚುರಿಗಳ ಸಂಖ್ಯೆ 62 ಕ್ಕೇರಿದೆ.

ರನ್ ಸರದಾರ: ಐಪಿಎಲ್ ಇತಿಹಾಸದಲ್ಲಿ ಒಂದು ತಂಡದ ಪರ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಕೂಡ ವಿರಾಟ್ ಕೊಹ್ಲಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಡೇವಿಡ್ ವಾರ್ನರ್ ಹೆಸರಿನಲ್ಲಿತ್ತು. ವಾರ್ನರ್ ಪಂಜಾಬ್ ಕಿಂಗ್ಸ್ ವಿರುದ್ಧ 1134 ರನ್ ಬಾರಿಸಿ ಈ ದಾಖಲೆ ಬರೆದಿದ್ದರು. ಇದೀಗ ಸಿಎಸ್ಕೆ ವಿರುದ್ಧ 1146 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.ಒಟ್ಟಾರೆಯಾಗಿ ಎಲ್ಲವೂ ಆರ್‌ಸಿಬಿ ಆಟಗಾರರು ಅಂದುಕೊಂಡಂತೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಇದರಿಂದ 11 ಪಂದ್ಯಗಳನ್ನಾಡಿರುವ ಆರ್‌ಸಿಬಿ ತಂಡವು 8 ಗೆಲುವನ್ನು ಸಾಧಿಸಿ 16 ಅಂಕಗಳೊಂದಿಗೆ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

 

 

The post ಕಿಂಗ್ ಕೊಹ್ಲಿ ಅಬ್ಬರಕ್ಕೆ ರೆಕಾರ್ಡ್ಸ್ ಗಳು ಉಡೀಸ್…. appeared first on Good News 24x7.

]]>
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು; RCB ಮತ್ತೆ ಟೇಬಲ್ ಟಾಪರ್ https://www.goodnews24x7.com/huge-win-against-delhi-capitals-rcb-again-table-topper/ Mon, 28 Apr 2025 06:16:14 +0000 https://www.goodnews24x7.com/?p=3459 ನೆನ್ನೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 163 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ಕೃನಾಲ್ ಪಾಂಡ್ಯಾ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕಗಳ ನೆರವಿನಿಂದ ಜಯಭೇರಿ ಭಾರಿಸಿತು. ಆರ್…

The post ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು; RCB ಮತ್ತೆ ಟೇಬಲ್ ಟಾಪರ್ appeared first on Good News 24x7.

]]>

ನೆನ್ನೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 163 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ಕೃನಾಲ್ ಪಾಂಡ್ಯಾ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕಗಳ ನೆರವಿನಿಂದ ಜಯಭೇರಿ ಭಾರಿಸಿತು. ಆರ್ ಸಿಬಿ 18.3 ಓವರ್ ನಲ್ಲಿ 165 ರನ್ ಗಳಿಸಿ ಇನ್ನೂ 9 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿತು.

ಈ ಮೂಲಕ ಆರ್ ಸಿಬಿ ತನ್ನ ಅಂಕಗಳ ಗಳಿಕೆಯನ್ನು 14ಕ್ಕೆ ಏರಿಸಿಕೊಂಡಿದ್ದು ಮಾತ್ರವಲ್ಲದೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹಾಲಿ ಟೂರ್ನಿಯಲ್ಲಿ ಆರ್ ಸಿಬಿ ಒಟ್ಟು 10 ಪಂದ್ಯಗಳ ಪೈಕಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿ 3 ಪಂದ್ಯಗಳಲ್ಲಿ ಸೋಲು ಕಂಡಿದೆ

ಆ ಮೂಲಕ 14 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಅಂತೆಯೇ ಆರ್ ಸಿಬಿ ತನ್ನನೆಟ್ ರನ್ ರೇಟ್ ಅನ್ನೂ ಕೂಡ ಉತ್ತಮಗೊಳಿಸಿಕೊಂಡಿದ್ದು, ಆರ್ ಸಿಬಿ ನೆಟ್ ರನ್ ರೇಟ್ +0.521ಕ್ಕೆ ಏರಿಕೆಯಾಗಿದೆ. ಉಳಿದಂತೆ ಈ ಪಟ್ಟಿಯಲ್ಲಿ 12 ಅಂಕಗಳನ್ನು ಹೊಂದಿರುವ ಗುಜರಾತ್ ಟೈಟನ್ಸ್ 2ನೇ ಸ್ಥಾನದಲ್ಲಿದ್ದು, 8 ಪಂದ್ಯಗಳನ್ನಾಡಿರುವ ಗುಜರಾತ್ 6 ಜಯ ಮತ್ತು 2 ಸೋಲಿನೊಂದಿಗೆ 12 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ.

The post ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು; RCB ಮತ್ತೆ ಟೇಬಲ್ ಟಾಪರ್ appeared first on Good News 24x7.

]]>