#Samvatsara. Archives - Good News 24x7 https://www.goodnews24x7.com/tag/samvatsara/ Kannada Sun, 01 Mar 2026 08:25:51 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg #Samvatsara. Archives - Good News 24x7 https://www.goodnews24x7.com/tag/samvatsara/ 32 32 ಮಾರ್ಚ್ 3 ,ರಂದು ಖಗ್ರಾಸ ಚಂದ್ರಗ್ರಹಣ ! https://www.goodnews24x7.com/lunar-eclipse-on-march-3/ Sun, 01 Mar 2026 08:25:04 +0000 https://www.goodnews24x7.com/?p=8563 ಪ್ರಸಕ್ತ ವರ್ಷ2026ದ ಮೊದಲ ಖಗ್ರಾಸ ಚಂದ್ರಗ್ರಹಣ ಮಾ. 3ರಂದು ಸಂಭವಿ ಸಲಿದೆ. ವಿಶ್ವಾವಸು ನಾಮ ಸಂವತ್ಸರದ ಫಾಲ್ಗುಣ ಮಾಸದ ಹುಣ್ಣಿಮೆಯ ದಿನವಾದ ಮಂಗಳವಾರ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ. ಪುಬ್ಬಾ ನಕ್ಷತ್ರ, ಸಿಂಹ ರಾಶಿಯಲ್ಲಿ ಖಗ್ರಾಸ ಚಂದ್ರಗ್ರಹಣ…

The post ಮಾರ್ಚ್ 3 ,ರಂದು ಖಗ್ರಾಸ ಚಂದ್ರಗ್ರಹಣ ! appeared first on Good News 24x7.

]]>

ಪ್ರಸಕ್ತ ವರ್ಷ2026ದ ಮೊದಲ ಖಗ್ರಾಸ ಚಂದ್ರಗ್ರಹಣ ಮಾ. 3ರಂದು ಸಂಭವಿ ಸಲಿದೆ. ವಿಶ್ವಾವಸು ನಾಮ ಸಂವತ್ಸರದ ಫಾಲ್ಗುಣ ಮಾಸದ ಹುಣ್ಣಿಮೆಯ ದಿನವಾದ ಮಂಗಳವಾರ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ. ಪುಬ್ಬಾ ನಕ್ಷತ್ರ, ಸಿಂಹ ರಾಶಿಯಲ್ಲಿ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಹೀಗಾಗಿ ಈ ಗ್ರಹಣವು ಮಘಾ ನಕ್ಷತ್ರ, ಪುಬ್ಬ, ಉತ್ತರ, ಭರಣಿ ಮತ್ತು ಪೂರ್ವಾಷಾಢ ನಕ್ಷತ್ರದವರಿಗೆ ಹಾಗೂ ಸಿಂಹ ರಾಶಿ, ಕನ್ಯಾ, ಮಕರ, ವೃಷಭ ರಾಶಿಯವರೆಗೆ ಸ್ವಲ್ಪ ಅನಿಷ್ಟ ಕಾರಿಯಾಗಲಿದೆ. ಇದಕ್ಕೆ ಪರಿಹಾರವೂ ಇದೆ ಎಂದು ದೈವಜ್ಞಕೆ.ಎನ್. ಸೋಮಯಾಜಿ ತಿಳಿಸಿದರು.

ಗ್ರಹಣದ ಸ್ಪರ್ಶ ಕಾಲ ಮಧ್ಯಾಹ್ನ 3.20ಕ್ಕೆಸಂಭವಿಸಲಿದೆ. ಗ್ರಹಣದ ಮಧ್ಯಕಾಲ ಸಂಜೆ 5.04ಕ್ಕೆ, ಉನ್ನಿಲನ ಕಾಲ ಸಂಜೆ 5.3 5.33ಕ್ಕೆ. ಮೋಕ್ಷಕಾಲವು ಸಂಜೆ 6.47ಕ್ಕೆ ಆಗಲಿದೆ. ಈ ಗ್ರಹಣ ಶುಚಿ ಕಾಲದಲ್ಲಿ ಊಟೋಪಚಾರ, ನಿದ್ದೆ ನಿಷಿದ್ಧವಾದುದು. ಗ್ರಹಣ ಕಾಲಕ್ಕೆ ಕನಿಷ್ಠ 6 ಗಂಟೆಗಳ ಮುಂಚೆ ಆಹಾರ ಸೇವಿಸಬೇಕು. ಮೋಕ್ಷಕಾಲದ ನಂತರ ಸ್ನಾನಾದಿ ರ್ಭೂತರಾಗಿ ದೇವತಾ ಧ್ಯಾನದೊಂದಿಗೆ ನಿತ್ಯ ಜೀವನಕ್ಕೆ ಮರಳುವುದು.ಗ್ರಹಣ ದೋಷ ಪರಿಹಾರಕ್ಕಾಗಿ ಅಕ್ಕಿ, ದೋಷ ಪರಿಹಾರಕ್ಕೆ ಏನು ದಾನ?: ಹುರುಳಿ ಮತ್ತು ಬೆಳ್ಳಿ ಲೋಹ ಸಹಿತವಾಗಿ ವಸ್ತ್ರದಾನ ಮಾಡಬೇಕು. ಜತೆಗೆ ಗ್ರಹಣ ಕಾಲದಲ್ಲಿನಾನಾ ದೇವತಾಧ್ಯಾನ, ತರ್ಪಣ,ಜಪ ಮಾಡಬೇಕು. ದಾನಗಳು ಮತ್ತು ದೇವರ ಧ್ಯಾನದಿಂದ ಅನಿಷ್ಟಗಳು ಶುಭಫಲ ಪ್ರಾಪ್ತಿ ಪರಿಹಾರವಾಗಿ ಯಾಗುತ್ತದೆ. ಗ್ರಹಣದ ವೇಳೆ ಆಹಾರ ಸೇವನೆ ಮತ್ತು ಪ್ರಕೃತಿ ಕರೆಗೆ ವಯೋವೃದ್ಧರು, ರೋಗಿಗಳು, ಗರ್ಭಿಣಿಯರು, ರಜಸ್ವಲೆ (ಋತುಮತಿ) ಯಾದವರು ಮತ್ತು ಚಿಕ್ಕ ಮಕ್ಕಳಿಗೆ ವಿನಾಯಿತಿಯಿದೆ ಸೋಮಯಾಜಿ ನುಡಿದರು.

ಬೇಯಿಸಿದ ಆಹಾರಕ್ಕೆ ದರ್ಬೆಅನ್ವಯವಲ್ಲ: ತುಪ್ಪ, ಹಾಲು, ಮೊಸರು,
ಉಪ್ಪಿನಕಾಯಿ, ಕುಡಿಯುವ ನೀರಿನ ಪಾತ್ರೆ ಮತ್ತು ನೀರಿನ ಟ್ಯಾಂಕ್ ಇತ್ಯಾದಿಗಳಿಗೆ ದರ್ಬೆಯನ್ನು ಇಡು ವುದರಿಂದ ಗ್ರಹಣದ ಮೈಲಿಗೆ ತಗಲು ವುದಿಲ್ಲ. ಈ ನಿಯಮ ಬೇಯಿಸಿದ ಮತ್ತು ಕರಿದ ಪದಾರ್ಥಗಳಿಗೆ ಅನ್ವಯಿಸುವುದಿಲ್ಲ ಎಂದು ಸೋಮಯಾಜಿ ತಿಳಿಸಿದರು.

The post ಮಾರ್ಚ್ 3 ,ರಂದು ಖಗ್ರಾಸ ಚಂದ್ರಗ್ರಹಣ ! appeared first on Good News 24x7.

]]>