technology Archives - Good News 24x7 https://www.goodnews24x7.com/tag/technology/ Kannada Sat, 27 Jun 2026 07:38:22 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg technology Archives - Good News 24x7 https://www.goodnews24x7.com/tag/technology/ 32 32 ಇನ್ಮೇಲೆ ಪದೇ ಪದೇ ಕರೆಂಟ್ ಹೋಗಲ್ಲ https://www.goodnews24x7.com/no-more-frequent-power-outages/ Sat, 27 Jun 2026 07:38:22 +0000 https://www.goodnews24x7.com/?p=9691 ವಿದ್ಯುತ್ ಲೈನ್‌ಗಳ ತಪಾಸಣೆಗೆ ಲಗ್ಗೆ ಇಟ್ಟ ಅತ್ಯಾಧುನಿಕ ಡ್ರೋನ್‌ಗಳು; ಶೇ. 85 ರಷ್ಟು ತಗ್ಗಿದ ವಿದ್ಯುತ್ ವ್ಯತ್ಯಯ ಕೆಪಿಟಿಸಿಎಲ್ ರಾಜ್ಯದಲ್ಲಿ ವಿದ್ಯುತ್ ಪ್ರಸರಣ ಮಾರ್ಗಗಳ ತಪಾಸಣೆಗೆ ಡ್ರೋನ್ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಇದರಿಂದ ತಾಂತ್ರಿಕ ದೋಷಗಳಿಂದ ಉಂಟಾಗುವ ವಿದ್ಯುತ್ ವ್ಯತ್ಯಯದಲ್ಲಿ ಶೇ. 85ರಷ್ಟು…

The post ಇನ್ಮೇಲೆ ಪದೇ ಪದೇ ಕರೆಂಟ್ ಹೋಗಲ್ಲ appeared first on Good News 24x7.

]]>

ವಿದ್ಯುತ್ ಲೈನ್‌ಗಳ ತಪಾಸಣೆಗೆ ಲಗ್ಗೆ ಇಟ್ಟ ಅತ್ಯಾಧುನಿಕ ಡ್ರೋನ್‌ಗಳು; ಶೇ. 85 ರಷ್ಟು ತಗ್ಗಿದ ವಿದ್ಯುತ್ ವ್ಯತ್ಯಯ ಕೆಪಿಟಿಸಿಎಲ್ ರಾಜ್ಯದಲ್ಲಿ ವಿದ್ಯುತ್ ಪ್ರಸರಣ ಮಾರ್ಗಗಳ ತಪಾಸಣೆಗೆ ಡ್ರೋನ್ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಇದರಿಂದ ತಾಂತ್ರಿಕ ದೋಷಗಳಿಂದ ಉಂಟಾಗುವ ವಿದ್ಯುತ್ ವ್ಯತ್ಯಯದಲ್ಲಿ ಶೇ. 85ರಷ್ಟು ಭಾರಿ ಇಳಿಕೆ ಕಂಡುಬಂದಿದೆ. 1.5 ಲಕ್ಷಕ್ಕೂ ಹೆಚ್ಚು ದೋಷಗಳನ್ನು ಮೊದಲೇ ಪತ್ತೆಹಚ್ಚಿ ಸರಿಪಡಿಸಲಾಗಿದೆ. ಇದು ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಸರಬರಾಜಿಗೆ ಕೆಪಿಟಿಸಿಎಲ್‌ನ ಮಹತ್ವದ ಹೆಜ್ಜೆಯಾಗಿದೆ.

ವಿದ್ಯುತ್ ಪ್ರಸರಣ ಲೈನ್‌ಗಳ ನಿಖರ ತಪಾಸಣೆಗಾಗಿ ಕೆಪಿಟಿಸಿಎಲ್ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನ

ವಿದ್ಯುತ್ ವ್ಯತ್ಯಯಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡಿದೆ
ಸುರಕ್ಷತಾ ಜಾಗೃತಿಗೆ ಎಸ್ಕಾಂಗಳ ಪ್ರತಿ ಡಿವಿಷನ್‌ಗೆ ಸಿಗಲಿದೆ 1 ಲಕ್ಷ ರೂ. ಫಂಡ್
ಬೆಂಗಳೂರು, ಜೂ.27: ರಾಜ್ಯದಲ್ಲಿ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಮಹತ್ತರ ತಾಂತ್ರಿಕ ಹೆಜ್ಜೆಯನ್ನಿಟ್ಟಿದೆ. ರಾಜ್ಯಾದ್ಯಂತ ಇರುವ ಹೈ ವೋಲ್ಟೇಜ್ (HV) ಮತ್ತು ಎಕ್ಸ್‌ಟ್ರಾ ಹೈ ವೋಲ್ಟೇಜ್ (EHV) ವಿದ್ಯುತ್ ಪ್ರಸರಣ ಲೈನ್‌ಗಳ ನಿಖರ ತಪಾಸಣೆಗಾಗಿ ಕೆಪಿಟಿಸಿಎಲ್ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನವನ್ನು (Drone Technology) ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ. ಈ ಹೊಸ ತಂತ್ರಜ್ಞಾನದ ಬಳಕೆಯಿಂದಾಗಿ ರಾಜ್ಯದಲ್ಲಿ ತಾಂತ್ರಿಕ ದೋಷಗಳಿಂದ ಉಂಟಾಗುತ್ತಿದ್ದ ವಿದ್ಯುತ್ ವ್ಯತ್ಯಯಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡಿದೆ ಎಂದು ನಿಗಮದ ಅಧಿಕೃತ ಪ್ರಕಟಣೆ ತಿಳಿಸಿದೆ.

ಕೆಪಿಟಿಸಿಎಲ್ ಅಧಿಕಾರಿಗಳು ಇದುವರೆಗೆ ಸುಮಾರು 11,000 ವಿದ್ಯುತ್ ಪ್ರಸರಣ ಟವರ್​​ಗಳನ್ನು ಡ್ರೋನ್ ಮೂಲಕ ಯಶಸ್ವಿಯಾಗಿ ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಬರೋಬ್ಬರಿ 1.5 ಲಕ್ಷಕ್ಕೂ ಹೆಚ್ಚು ತಾಂತ್ರಿಕ ದೋಷಗಳನ್ನು ಮೊದಲೇ ಪತ್ತೆಹಚ್ಚಿ, ಅವುಗಳನ್ನು ಯಶಸ್ವಿಯಾಗಿ ಸರಿಪಡಿಸಲಾಗಿದೆ. ಈ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಪ್ರಸರಣ ವಲಯದ ವಿದ್ಯುತ್ ವ್ಯತ್ಯಯ ಪ್ರಕರಣಗಳ ಸಂಖ್ಯೆ 519 ರಿಂದ ಕೇವಲ 73 ಕ್ಕೆ ಕುಸಿದಿದೆ. ಅಂದರೆ ವಿದ್ಯುತ್ ಕಡಿತದಲ್ಲಿ ಶೇ. 85 ರಷ್ಟು ಬೃಹತ್ ಇಳಿಕೆ ಕಂಡಂತಾಗಿದೆ. ಇದುವರೆಗೆ ಒಟ್ಟು 3,370 ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದದ ವಿದ್ಯುತ್ ಮಾರ್ಗವನ್ನು ಡ್ರೋನ್ ಮೂಲಕ ಸಮೀಕ್ಷೆ ಮಾಡಲಾಗಿದ್ದು, ಇದರಲ್ಲಿ 2,500 ಕಿ.ಮೀ ಗೂ ಹೆಚ್ಚು 220 KV ಲೈನ್‌ಗಳು ಮತ್ತು 843 ಕಿ.ಮೀ ಉದ್ದದ 400 KV ಲೈನ್‌ಗಳು ಸೇರಿವೆ.

ನಮ್ಮ ಗಮನವು ಈಗ ವಿದ್ಯುತ್ ದೋಷ ಸಂಭವಿಸಿದ ನಂತರ ದುರಸ್ತಿ ಮಾಡುವುದಕ್ಕಿಂತ, ದೋಷ ಬರುವ ಮುನ್ನವೇ ಅಪಾಯಗಳನ್ನು ಗುರುತಿಸಿ ತಡೆಯುವುದರ ಕಡೆಗೆ ಬದಲಾಗಿದೆ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಡ್ರೋನ್‌ಗಳಲ್ಲಿ ಅಳವಡಿಸಲಾಗಿರುವ ಹೈ-ರೆಸಲ್ಯೂಶನ್ ಕ್ಯಾಮೆರಾಗಳು, ಥರ್ಮಲ್ ಇಮೇಜಿಂಗ್ ಸಿಸ್ಟಮ್ (ಶಾಖ ಪತ್ತೆ ಹಚ್ಚುವಿಕೆ) ಮತ್ತು ಲಿಡಾರ್ ಸೆನ್ಸಾರ್‌ಗಳು ದಟ್ಟವಾದ ಕಾಡುಗಳು, ಗುಡ್ಡಗಾಡು ಪ್ರದೇಶಗಳು ಹಾಗೂ ಜನನಿಬಿಡ ನಗರ ಪ್ರದೇಶಗಳಲ್ಲಿ ಹಾದುಹೋಗುವ ವಿದ್ಯುತ್ ತಂತಿಗಳು ಮತ್ತು ಇನ್ಸುಲೇಟರ್‌ಗಳನ್ನು ಅತ್ಯಂತ ಹತ್ತಿರದಿಂದ ಪರಿಶೀಲಿಸುತ್ತವೆ. ಲೂಸ್ ಕನೆಕ್ಷನ್‌ಗಳಿಂದಾಗಿ ಉಂಟಾಗುವ ಅಸಹಜ ತಾಪಮಾನವನ್ನು ಈ ಥರ್ಮಲ್ ಕ್ಯಾಮೆರಾಗಳು ತಕ್ಷಣವೇ ಪತ್ತೆಹಚ್ಚುತ್ತವೆ. ಈ ದತ್ತಾಂಶಗಳನ್ನು ಕೆಪಿಟಿಸಿಎಲ್‌ನ ಡಿಜಿಟಲ್ ವ್ಯವಸ್ಥೆಗೆ ಸೇರಿಸಲಾಗುತ್ತಿದ್ದು, ಶೀಘ್ರದಲ್ಲೇ ಬರಲಿರುವ ‘ಡಿಜಿಟಲ್ ಟ್ವಿನ್ ಪ್ಲಾಟ್‌ಫಾರ್ಮ್’ ಮೂಲಕ ಕೇಂದ್ರ ನಿಯಂತ್ರಣ ಕೊಠಡಿಯಿಂದಲೇ ಇಡೀ ರಾಜ್ಯದ ವಿದ್ಯುತ್ ಜಾಲವನ್ನು ರಿಯಲ್-ಟೈಮ್‌ನಲ್ಲಿ ಮೇಲ್ವಿಚಾರಣೆ ಮಾಡಬಹುದು.

ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಈ ಕುರಿತು ಮಾತನಾಡಿ, “ಕರ್ನಾಟಕದ ಸುಮಾರು 45,000 ಕಿಲೋಮೀಟರ್ ವ್ಯಾಪ್ತಿಯ ವಿಶಾಲವಾದ ವಿದ್ಯುತ್ ಪ್ರಸರಣ ಜಾಲವನ್ನು ಈ ಹಿಂದಿನ ವಿಧಾನಗಳಲ್ಲಿ ಪರಿಶೀಲಿಸುವುದು ಅತ್ಯಂತ ಕಠಿಣ ಮತ್ತು ಸಮಯ ತೆಗೆದುಕೊಳ್ಳುವ ಕೆಲಸವಾಗಿತ್ತು. ಆದರೆ ಥರ್ಮಲ್ ಇಮೇಜಿಂಗ್ ಮತ್ತು ಲಿಡಾರ್ ತಂತ್ರಜ್ಞಾನದ ಡ್ರೋನ್‌ಗಳ ಮೂಲಕ ನಾವು ಕೇವಲ ಕೆಲವೇ ಗಂಟೆಗಳಲ್ಲಿ 360 ಡಿಗ್ರಿಯ ಸಮಗ್ರ ತಪಾಸಣೆ ನಡೆಸಬಹುದು. ಬರಿಗಣ್ಣಿಗೆ ಕಾಣಿಸದ ಅತ್ಯಂತ ಸಣ್ಣ ದೋಷಗಳನ್ನೂ ಇವು ಪತ್ತೆಹಚ್ಚುತ್ತವೆ. ಈ ತಪಾಸಣೆ ಆಧಾರಿತದಿಂದ ವಿದ್ಯುತ್ ವ್ಯತ್ಯಯದಲ್ಲಿ ಶೇ. 85 ರಷ್ಟು ಇಳಿಕೆ ಸಾಧಿಸಿರುವುದು ಕೆಪಿಟಿಸಿಎಲ್‌ನ ಡಿಜಿಟಲ್ ರೂಪಾಂತರದ ಹಾದಿಯಲ್ಲಿ ಒಂದು ದೊಡ್ಡ ಮೈಲಿಗಲ್ಲು,” ಎಂದು ಶ್ಲಾಘಿಸಿದ್ದಾರೆ.

ಸುರಕ್ಷತಾ ಜಾಗೃತಿಗೆ ಎಸ್ಕಾಂಗಳ ಪ್ರತಿ ಡಿವಿಷನ್‌ಗೆ ಸಿಗಲಿದೆ 1 ಲಕ್ಷ ರೂ. ಫಂಡ್

ರಾಜ್ಯದಲ್ಲಿ ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರಲ್ಲಿ ವಿದ್ಯುತ್ ಸುರಕ್ಷತೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಇಂಧನ ಇಲಾಖೆಯು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಉದ್ದೇಶಕ್ಕಾಗಿ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ವ್ಯಾಪ್ತಿಯ ಪ್ರತಿ ವಿಭಾಗಕ್ಕೆ ತಲಾ 1 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಿವೆ ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಪ್ರಕಟಿಸಿದ್ದಾರೆ. ವಿದ್ಯುತ್ ಪರಿವೀಕ್ಷಣಾಲಯದ ವತಿಯಿಂದ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಇಂಧನ ಮೂಲವೆಂದರೆ ಅದು ವಿದ್ಯುತ್. ದಿನದಿಂದ ದಿನಕ್ಕೆ ಇದರ ಬಳಕೆ ಅತ್ಯಂತ ವೇಗವಾಗಿ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಸುರಕ್ಷತೆಯ ಬಗೆಗಿನ ಜಾಗೃತಿಯೂ ಸಾರ್ವಜನಿಕರಲ್ಲಿ ಬೆಳೆಯಬೇಕಿದೆ. ನಾವೆಲ್ಲರೂ ಒಟ್ಟಾಗಿ, ಹಂಚಿಕೆಯ ಜವಾಬ್ದಾರಿಯೊಂದಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ,” ಎಂದು ಕರೆ ನೀಡಿದರು.

 

The post ಇನ್ಮೇಲೆ ಪದೇ ಪದೇ ಕರೆಂಟ್ ಹೋಗಲ್ಲ appeared first on Good News 24x7.

]]>
ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ! https://www.goodnews24x7.com/%e0%b2%86%e0%b2%a4%e0%b3%8d%e0%b2%ae%e0%b2%a8%e0%b2%bf%e0%b2%b0%e0%b3%8d%e0%b2%ad%e0%b2%b0-%e0%b2%ad%e0%b2%be%e0%b2%b0%e0%b2%a4%e0%b2%95%e0%b3%8d%e0%b2%95%e0%b3%86-%e0%b2%a6%e0%b3%8a%e0%b2%a1%e0%b3%8d/ Wed, 27 May 2026 07:28:11 +0000 https://www.goodnews24x7.com/?p=9566 ಭಾರತದ ಉಕ್ಕಿನ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲೊಂದು ನಿರ್ಮಾಣವಾಗಿದೆ. ಸಮುದ್ರ ಹಾಗೂ ಕಡಲಾಚೆಯ ಬೃಹತ್ ಇಂಜಿನಿಯರಿಂಗ್ ಯೋಜನೆಗಳಲ್ಲಿ ಬಳಸಲಾಗುವ ಅತ್ಯಂತ ಹೆಚ್ಚಿನ ಸಾಮರ್ಥ್ಯದ ವೆಲ್ಡೆಡ್ ಪೈಪ್‌ಗಳನ್ನು (EQ70 ಗ್ರೇಡ್) ಉತ್ಪಾದಿಸಿದ ವಿಶ್ವದ ಮೊದಲ ಸ್ಟೀಲ್ ಕಂಪನಿ ಎಂಬ ಹೆಗ್ಗಳಿಕೆಗೆ ‘ಆರ್ಸೆಲರ್ ಮಿತ್ತಲ್…

The post ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ! appeared first on Good News 24x7.

]]>

ಭಾರತದ ಉಕ್ಕಿನ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲೊಂದು ನಿರ್ಮಾಣವಾಗಿದೆ. ಸಮುದ್ರ ಹಾಗೂ ಕಡಲಾಚೆಯ ಬೃಹತ್ ಇಂಜಿನಿಯರಿಂಗ್ ಯೋಜನೆಗಳಲ್ಲಿ ಬಳಸಲಾಗುವ ಅತ್ಯಂತ ಹೆಚ್ಚಿನ ಸಾಮರ್ಥ್ಯದ ವೆಲ್ಡೆಡ್ ಪೈಪ್‌ಗಳನ್ನು (EQ70 ಗ್ರೇಡ್) ಉತ್ಪಾದಿಸಿದ ವಿಶ್ವದ ಮೊದಲ ಸ್ಟೀಲ್ ಕಂಪನಿ ಎಂಬ ಹೆಗ್ಗಳಿಕೆಗೆ ‘ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ’ (AM/NS India) ಪಾತ್ರವಾಗಿದೆ. ಕಂಪನಿಯ ಈ ಮಹತ್ತರ ಸಾಧನೆಯನ್ನು ಪರಿಗಣಿಸಿ, ಜಾಗತಿಕ ಮಟ್ಟದ ಪ್ರಮುಖ ಸಂಸ್ಥೆಯಾದ ‘ಅಮೆರಿಕನ್ ಬ್ಯೂರೋ ಆಫ್ ಶಿಪ್ಪಿಂಗ್’ (ಎಬಿಎಸ್) ಅಂತಾರಾಷ್ಟ್ರೀಯ ಪ್ರಮಾಣ ಪತ್ರವನ್ನೂ ನೀಡಿದ್ದು, ಇದು ಜಾಗತಿಕ ಮಟ್ಟದಲ್ಲಿ ಈ ಪೈಪ್‌ಗಳ ಗುಣಮಟ್ಟ ಹಾಗೂ ಬಲವನ್ನು ದೃಢಪಡಿಸಿದೆ.

ಈವರೆಗೆ ತೈಲ ಮತ್ತು ಅನಿಲ ಉದ್ಯಮಗಳು, ಆಫ್‌ಶೋರ್ ಗಾಳಿ ಯಂತ್ರಗಳು ಹಾಗೂ ಆಳ ಸಮುದ್ರದ ಪೈಪ್‌ಲೈನ್‌ಗಳ ನಿರ್ಮಾಣಕ್ಕೆ ಬೇಕಾಗುವ ಇಂತಹ ಬಲಿಷ್ಠ ಪೈಪ್‌ಗಳನ್ನು ಭಾರತವು ಯುರೋಪ್ ದೇಶಗಳಿಂದ ಆಮದು ಮಾಡಿಕೊಳ್ಳಬೇಕಿತ್ತು. ಆದರೆ ಇದೀಗ ಈ ಪೈಪ್‌ಗಳನ್ನು ಸಂಪೂರ್ಣವಾಗಿ ದೇಶೀಯವಾಗಿಯೇ ಉತ್ಪಾದಿಸುವ ಮೂಲಕ ‘ಆತ್ಮನಿರ್ಭರ ಭಾರತ’ ಮತ್ತು ‘ವಿಕಸಿತ್ ಭಾರತ್’ ಯೋಜನೆಗಳಿಗೆ ಬಹುದೊಡ್ಡ ಕೊಡುಗೆ ಸಿಕ್ಕಂತಾಗಿದೆ. ಇದರಿಂದಾಗಿ ಭಾರತದ ಆಫ್‌ಶೋರ್ ಮತ್ತು ಇಂಜಿನಿಯರಿಂಗ್ ವಲಯದ ಕಂಪನಿಗಳಿಗೆ ಆಮದು ವೆಚ್ಚ ಹಾಗೂ ಸಮಯ ಉಳಿಯಲಿದ್ದು, ಈಗಾಗಲೇ ದೇಶದ ಪ್ರಮುಖ ತೈಲ ಮತ್ತು ಅನಿಲ ಉತ್ಪಾದನಾ ಕಂಪನಿಯೊಂದಕ್ಕೆ ಈ ಪೈಪ್‌ಗಳನ್ನು ಭಾರಿ ಪ್ರಮಾಣದಲ್ಲಿ ಪೂರೈಸಲಾಗಿದೆ.

ಗುಜರಾತ್‌ನ ಹಜೀರಾದಲ್ಲಿರುವ ಕಂಪನಿಯ ಘಟಕದಲ್ಲಿ ‘ಸಬ್‌ಮರ್ಜ್ಡ್ ಆರ್ಕ್ ವೆಲ್ಡಿಂಗ್’ (SAW) ತಂತ್ರಜ್ಞಾನವನ್ನು ಬಳಸಿ ಈ ಪೈಪ್‌ಗಳನ್ನು ತಯಾರಿಸಲಾಗಿದೆ. ಅಮೆರಿಕನ್ ಪೆಟ್ರೋಲಿಯಂ ಇನ್‌ಸ್ಟಿಟ್ಯೂಟ್‌ನ (API) 5L X100Q ಗ್ರೇಡ್‌ಗೆ ಸಮನಾದ ಈ EQ70 ಗ್ರೇಡ್ ಪೈಪ್‌ಗಳು ಅತ್ಯಂತ ಹೆಚ್ಚಿನ ಬಲವನ್ನು (690 MPa) ಹೊಂದಿವೆ. ಇವು ಅತ್ಯಂತ ಬಲಿಷ್ಠವಾಗಿದ್ದರೂ ತೆಳುವಾಗಿ ಮತ್ತು ಹಗುರವಾಗಿರುವುದರಿಂದ ಸಮುದ್ರದ ಅಲೆಗಳು ಹಾಗೂ ಒತ್ತಡವನ್ನು ಸುಲಭವಾಗಿ ತಡೆದುಕೊಳ್ಳುತ್ತವೆ. ಪಡೆದುಕೊಂಡಿರುವ ಎಬಿಎಸ್ ಪ್ರಮಾಣಪತ್ರದಿಂದಾಗಿ, ಜಗತ್ತಿನ ಯಾವುದೇ ದೇಶದ ಸಾಗರ ಯೋಜನೆಗಳಿಗೂ ಈ ಪೈಪ್‌ಗಳನ್ನು ಪೂರೈಸುವ ಅರ್ಹತೆಯನ್ನು ಕಂಪನಿ ಪಡೆದುಕೊಂಡಿದೆ.

ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಜಗತ್ತಿನ ಮುಂಚೂಣಿ ಸ್ಟೀಲ್ ಉತ್ಪಾದನಾ ಸಂಸ್ಥೆಗಳಾದ ಆರ್ಸೆಲರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್ ನಡುವಿನ ಜಂಟಿ ಉದ್ಯಮವಾಗಿದೆ. ಇದು ವರ್ಷಕ್ಕೆ 90 ಲಕ್ಷ ಟನ್ ಕಚ್ಚಾ ಉಕ್ಕನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಆಂಧ್ರಪ್ರದೇಶದಲ್ಲಿ 82 ಲಕ್ಷ ಟನ್ ಸಾಮರ್ಥ್ಯದ ಹೊಸ ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ ಅನ್ನು ಸಹ ಸ್ಥಾಪಿಸುತ್ತಿದೆ. ವಿಶೇಷವೆಂದರೆ, ಕೇಂದ್ರ ಉಕ್ಕು ಸಚಿವಾಲಯದಿಂದ ‘ಗ್ರೀನ್ ಸ್ಟೀಲ್ ಪ್ರಮಾಣಪತ್ರ’ ಪಡೆದ ಭಾರತದ ಏಕೈಕ ಇಂಟಿಗ್ರೇಟೆಡ್ ಸ್ಟೀಲ್ ಕಂಪನಿ ಎಂಬ ಹೆಗ್ಗಳಿಕೆಯೂ ಇದಕ್ಕಿದೆ.

The post ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ! appeared first on Good News 24x7.

]]>
ಅಮೆರಿಕಾದಲ್ಲಿ ಕುಳಿತು ಮುಧೋಳ ಕಳ್ಳತನ ತಪ್ಪಿಸಿದ ಮಗಳು! https://www.goodnews24x7.com/daughter-who-averted-theft-in-mudhola-sitting-in-america/ Thu, 28 Aug 2025 09:12:08 +0000 https://www.goodnews24x7.com/?p=6896 ಈಗಿನ ಕಾಲದಲ್ಲಿ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಅಮೆರಿಕಾದಲ್ಲಿ ಕುಳಿತು ದೂರದ ಬಾಗಲಕೋಟೆಯ ಮುಧೋಳ ನಗರದಲ್ಲಿ ಏನಾಗುತ್ತಿದೆ, ತಮ್ಮ ಮನೆಯ ಹತ್ತಿರ ಯಾರು ಬಂದಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು. ಮುಧೋಳದಲ್ಲಿ ನಡೆಯುವ ಘಟನೆಯನ್ನು ದೂರದ ಅಮೆರಿಕಾದಲ್ಲಿ ನೋಡಿ ಅಪರಾಧ ಕೃತ್ಯವನ್ನು ತಪ್ಪಿಸಿದ ಚಾಣಾಕ್ಷ…

The post ಅಮೆರಿಕಾದಲ್ಲಿ ಕುಳಿತು ಮುಧೋಳ ಕಳ್ಳತನ ತಪ್ಪಿಸಿದ ಮಗಳು! appeared first on Good News 24x7.

]]>

ಈಗಿನ ಕಾಲದಲ್ಲಿ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಅಮೆರಿಕಾದಲ್ಲಿ ಕುಳಿತು ದೂರದ ಬಾಗಲಕೋಟೆಯ ಮುಧೋಳ ನಗರದಲ್ಲಿ ಏನಾಗುತ್ತಿದೆ, ತಮ್ಮ ಮನೆಯ ಹತ್ತಿರ ಯಾರು ಬಂದಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು. ಮುಧೋಳದಲ್ಲಿ ನಡೆಯುವ ಘಟನೆಯನ್ನು ದೂರದ ಅಮೆರಿಕಾದಲ್ಲಿ ನೋಡಿ ಅಪರಾಧ ಕೃತ್ಯವನ್ನು ತಪ್ಪಿಸಿದ ಚಾಣಾಕ್ಷ ಘಟನೆಯೊಂದು ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಹೆಚ್ಚಾಗಿದೆ. ಅಮೇರಿಕಾದಲ್ಲಿ ನೆಲೆಸಿದ ಮಗಳಿಂದ ಕಳ್ಳರ ಕೃತ್ಯ ಬಯಲಾಗಿದೆ. ಹನುಮಂತಗೌಡ ಸಂಕಪ್ಪನವರ ಎಂಬುವವರ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಸಿಸಿ ಕ್ಯಾಮರಾದ ದೃಶ್ಯಗಳು ತನ್ನ ಮೊಬೈಲ್ ವೀಕ್ಷಿಸುವಂತೆ ಹನುಮಂತಗೌಡ ಸಂಕಪ್ಪನವರ ಮಗಳು ವ್ಯವಸ್ಥೆ ಮಾಡಿಕೊಂಡಿದ್ದರು. ಮನೆಯ ಸಿಸಿ ಕ್ಯಾಮರಾದ ವಿಡಿಯೋ ನೋಡುವಾಗ ರಾತ್ರಿ ವೇಳೆ ತಮ್ಮ ಮನೆಗೆ ಯಾರೋ ಕಳ್ಳರು ಕಂಪೌಂಡ್ ದಾಟಿ ಬಂದಿರುವುದು ಕಂಡಿದೆ. ಅಮೇರಿಕಾದಲ್ಲಿ ಕುಳಿತೇ ತನ್ನ ಮೊಬೈಲ್‌ನಲ್ಲಿ ಸಿಸಿ ಕ್ಯಾಮರಾ ದೃಶ್ಯಗಳನ್ನು ಹನುಮಂತಗೌಡ ಸಂಕಪ್ಪನವರ ಮಗಳು ಶೃತಿ ಗಮನಿಸಿದ್ದಾರೆ. ತಕ್ಷಣವೇ ತಂದೆ ಹನುಮಂತಗೌಡ ಸಂಕಪ್ಪನವರ್ ಗೆ ಕರೆ ಮಾಡಿದ ಮಗಳು ಶೃತಿ ಆಲರ್ಟ್ ಆಗಿರುವಂತೆ ಹೇಳಿದ್ದಾರೆ. ನಂತರ‌ ತಂದೆ ಹನುಮಂತಗೌಡ ಸಂಕಪ್ಪನವರ ಬಾಗಿಲು ತೆರೆದಾಗ ಕಳ್ಳರು ಹೆದರಿಕೊಂಡು ಎಸ್ಕೇಪ್ ಆಗಿದ್ದಾರೆ. ಅಮೇರಿಕದಲ್ಲಿ ನೆಲೆಸಿರುವ ಹನುಮಂತಗೌಡ ಸಂಕಪ್ಪನವರ ಮಗಳು ಶೃತಿ ಸಂಕಪ್ಪನವರ ವೃತ್ತಿಯಲ್ಲಿ ಸಾಪ್ಟ್ ವೇರ್ ಇಂಜಿನಿಯರ್ . ಶೃತಿ ತಮ್ಮ ಮೊಬೈಲ್‌ ನಲ್ಲಿ ಸಿಸಿ ಕ್ಯಾಮೆರಾ ದೃಶ್ಯ ಗಮನಿಸಿ ಮನೆಗೆ ಕರೆ ಮಾಡಿ ಎಚ್ಚರಿಸಿದ್ದಾರೆ. ತಂದೆ ಬಾಗಿಲು ತೆರೆಯುತ್ತಿದ್ದಂತೆ ಕಳ್ಳರು ಎಸ್ಕೇಪ್ ಆಗಿದ್ದಾರೆ. ರಾಜಾರೋಷವಾಗಿ ಮನೆಗಳ್ಳತನ ಮಾಡಲು ಬಂದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಧೋಳ ನಗರದ ಸಿದ್ದರಾಮೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ.

The post ಅಮೆರಿಕಾದಲ್ಲಿ ಕುಳಿತು ಮುಧೋಳ ಕಳ್ಳತನ ತಪ್ಪಿಸಿದ ಮಗಳು! appeared first on Good News 24x7.

]]>
ಮಗುವಿಗೆ ಜನ್ಮ ನೀಡಲಿವೆ ರೋಬೋಟ್ ಗಳು ! https://www.goodnews24x7.com/robots-will-give-birth-to-a-baby/ Thu, 21 Aug 2025 09:26:57 +0000 https://www.goodnews24x7.com/?p=6423 ಪುರುಷನ ಸಂಪರ್ಕವಿಲ್ಲದೇ ಐವಿಎಫ್ ಮೂಲಕ ಸಂತಾನೋತ್ಪತ್ತಿ ಸಾಧಿಸಿದ ವಿಜ್ಞಾನಿಗಳಿಗೆ ಈಗ ತಾಯಂದಿರ ಅಗತ್ಯವೇ ಇಲ್ಲದೇ ಮಗು ಹುಟ್ಟಿಸಲು ಮುಂದಾಗಿದ್ದಾರೆ. ಇನ್ನು ಮುಂದೆ ತಾಯಂದಿರಿಂದ ಅಲ್ಲ, ಬದಲಾಗಿ ಯಂತ್ರಗಳಿಂದ ಜನಿಸುವ ಜಗತ್ತು ಕಲ್ಪಿಸಿಕೊಳ್ಳಿ. ಚೀನಿ ವಿಜ್ಞಾನಿಗಳು ಮಹಿಳೆಯ ಸಹಾಯವಿಲ್ಲದೇ ಗರ್ಭಧಾರಣೆಯ ರೋಬೋಟ್ ಆವಿಷ್ಕಾರಕ್ಕೆ…

The post ಮಗುವಿಗೆ ಜನ್ಮ ನೀಡಲಿವೆ ರೋಬೋಟ್ ಗಳು ! appeared first on Good News 24x7.

]]>

ಪುರುಷನ ಸಂಪರ್ಕವಿಲ್ಲದೇ ಐವಿಎಫ್ ಮೂಲಕ ಸಂತಾನೋತ್ಪತ್ತಿ ಸಾಧಿಸಿದ ವಿಜ್ಞಾನಿಗಳಿಗೆ ಈಗ ತಾಯಂದಿರ ಅಗತ್ಯವೇ ಇಲ್ಲದೇ ಮಗು ಹುಟ್ಟಿಸಲು ಮುಂದಾಗಿದ್ದಾರೆ. ಇನ್ನು ಮುಂದೆ ತಾಯಂದಿರಿಂದ ಅಲ್ಲ, ಬದಲಾಗಿ ಯಂತ್ರಗಳಿಂದ ಜನಿಸುವ ಜಗತ್ತು ಕಲ್ಪಿಸಿಕೊಳ್ಳಿ. ಚೀನಿ ವಿಜ್ಞಾನಿಗಳು ಮಹಿಳೆಯ ಸಹಾಯವಿಲ್ಲದೇ ಗರ್ಭಧಾರಣೆಯ ರೋಬೋಟ್ ಆವಿಷ್ಕಾರಕ್ಕೆ ಮುಂದಾಗಿದ್ದಾರೆ.

ಹೊಟ್ಟೆಯೊಳಗೆ ಗರ್ಭಧಾರಣೆಗೆ ತಂತ್ರಜ್ಞಾನ

ವಿಜ್ಞಾನಿ ಡಾ.ಜಾಂಗ್​ ಕಿಫೆಂಗ್ ನೇತೃತ್ವದ ಗುವಾಂಗ್​ಝೌ ಮೂಲದ ಕೈವಾ ಟೆಕ್ನಾಲಜಿ ಇಂಥದ್ದೊಂದು ಯೋಜನೆಗೆ ಕೈ ಹಾಕಿದೆ. ಹುಮನಾಯ್ಡ್ ರೋಬೋಟ್​ನ ಹೊಟ್ಟೆಯೊಳಗೆ ಗರ್ಭಧಾರಣೆಗೆ ತಂತ್ರಜ್ಞಾನ ಸಿದ್ಧವಾಗುತ್ತಿದೆ ಎಂಬ ಮಾಹಿತಿಯನ್ನು ವಿಜ್ಞಾನಿ ಡಾ.ಜಾಂಗ್ ನೀಡಿದ್ದಾರೆ.

ರೊಬೊಟ್​ನ ಕೃತಕ ಗರ್ಭದಲ್ಲಿ ಕೃತಕ ಆಮ್ನಿಯೊಟಿಕ್ ದ್ರವದಲ್ಲಿ ಭ್ರೂಣ ಸಿದ್ಧವಾಗಲಿದೆ. ರೋಬೋಟ್ ನ ಹೊಟ್ಟೆಯಲ್ಲಿ ಗರ್ಭಾಶಯದಂತಹ ವಾತಾವರಣ ಸೃಷ್ಟಿಸಲಾಗುತ್ತಿದೆ. ಇದು ಭ್ರೂಣವನ್ನು ಬಾಹ್ಯ ಆಘಾತಗಳಿಂದ ರಕ್ಷಿಸುವ ದ್ರವವಾಗಿದೆ. ಭ್ರೂಣಕ್ಕೆ ಸ್ಥಿರ ತಾಪಮಾನ ನೀಡಿ, ಅದರ ಬೆಳವಣಿಗೆಗೂ ಸಹಾಯ ಮಾಡುತ್ತದೆ. ರೊಬೊಟ್​​ ಗರ್ಭಾಶಯಕ್ಕೆ ಪೋಷಕಾಂಶ ಮತ್ತು ಆಮ್ಲಜನಕವನ್ನು ಹೊಕ್ಕುಳಬಳ್ಳಿಯಂತೆ ಕೊಳವೆಯ ಮೂಲಕ ಪೂರೈಸಲಾಗುತ್ತದೆ ಅಂತೆ.

ಬೀಜಿಂಗ್​ನಲ್ಲಿ ನಡೆದ ವಿಶ್ವ ರೋಬೋಟ್​ನ​ ಸಮ್ಮೇಳನದಲ್ಲಿ ಮಾಹಿತಿ ನೀಡಿರುವ ವಿಜ್ಞಾನಿ ಡಾ.ಜಾಂಗ್, 2026ರ ವೇಳೆಗೆ ಮೂಲ ಮಾದರಿ ಬಿಡುಗಡೆ ಮಾಡುತ್ತೇವೆ ಅಂತ ಘೋಷಿಸಿದ್ದಾರೆ. ಇದಕ್ಕೆ ಬೆಲೆಯೂ ನಿಗದಿ ಮಾಡಿದ್ದಾರೆ. ಇದರ ಬೆಲೆ 100,000 ಯುವಾನ್ ಅಂದರೆ 12 ಲಕ್ಷ ರೂಪಾಯಿ ಇರಲಿದೆ.

ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಇದೀಗ ಜನಸಂಖ್ಯೆ ಕುಗ್ಗುವ ಆತಂಕವೂ ಎದುರಾಗಿದೆ. ಚೀನಾದಲ್ಲಿ ಇತ್ತೀಚೆಗೆ ಬಂಜೆತನದ ಪ್ರಮಾಣವೂ ಹೆಚ್ಚುತ್ತಿದೆ. ಕೃತಕ ಗರ್ಭಾಶಯ ತಂತ್ರಜ್ಞಾನ ಬಂಜೆತನ ಹೊಂದಿರುವ ದಂಪತಿಗೆ ಭರವಸೆ ಹುಟ್ಟಿಸುತ್ತಿದೆ. ಇದು ಸಂತಾನೋತ್ಪತ್ತಿಗೆ ಸಹಾಯ ಮಾಡಬಹುದಾದರೂ ಈ ತಂತ್ರಜ್ಞಾನ ನೈತಿಕ ಪರಿಣಾಮದ ಕುರಿತು ಚರ್ಚೆ ಹುಟ್ಟು ಹಾಕಿದೆ. ಭ್ರೂಣ-ತಾಯಿಯ ಸಂಬಂಧಗಳು, ಅದರಿಂದ ಜನಿಸುವ ಮಕ್ಕಳ ಮನೋವಿಜ್ಞಾನದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

The post ಮಗುವಿಗೆ ಜನ್ಮ ನೀಡಲಿವೆ ರೋಬೋಟ್ ಗಳು ! appeared first on Good News 24x7.

]]>
ಎಂಜಿನಿಯರ್ ನ ಹೊಸ ಪ್ರಯತ್ನ; ದೋಸೆ ಮಾಡೋದಕ್ಕೂ ಬಂತು ರೋಬೋಟ್!!! https://www.goodnews24x7.com/%e0%b2%8e%e0%b2%82%e0%b2%9c%e0%b2%bf%e0%b2%a8%e0%b2%bf%e0%b2%af%e0%b2%b0%e0%b3%8d-%e0%b2%a8-%e0%b2%b9%e0%b3%8a%e0%b2%b8-%e0%b2%aa%e0%b3%8d%e0%b2%b0%e0%b2%af%e0%b2%a4%e0%b3%8d%e0%b2%a8-%e0%b2%a6/ Mon, 18 Aug 2025 08:07:09 +0000 https://www.goodnews24x7.com/?p=6343 ನಾವಿಂದು ತಂತ್ರಜ್ಞಾನದೊಂದಿಗೆ ಬೆಸೆದುಕೊಂಡಿದ್ದೇವೆ. ಹೀಗಾಗಿ ಪ್ರತಿಯೊಂದು ಕೆಲಸದಲ್ಲೂ ಮೆಷಿನ್‌ಗಳದ್ದೇ ಕಾರುಬಾರು. ಇದೀಗ ಬೆಂಗಳೂರಿನ ಇಂಜಿನಿಯರ್ ಒಬ್ಬರು ದೋಸೆ ಮಾಡುವ ರೋಬೋಟನ್ನು ಅಭಿವೃದ್ಧಿ ಪಡಿಸಿದ್ದಾರೆ. ಥಿಂಡಿ ಎಂಬ ಹೆಸರಿನ ದೋಸೆ ತಯಾರಿಸುವ ಈ ರೋಬೋಟ್ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಸಮಯ…

The post ಎಂಜಿನಿಯರ್ ನ ಹೊಸ ಪ್ರಯತ್ನ; ದೋಸೆ ಮಾಡೋದಕ್ಕೂ ಬಂತು ರೋಬೋಟ್!!! appeared first on Good News 24x7.

]]>

ನಾವಿಂದು ತಂತ್ರಜ್ಞಾನದೊಂದಿಗೆ ಬೆಸೆದುಕೊಂಡಿದ್ದೇವೆ. ಹೀಗಾಗಿ ಪ್ರತಿಯೊಂದು ಕೆಲಸದಲ್ಲೂ ಮೆಷಿನ್‌ಗಳದ್ದೇ ಕಾರುಬಾರು. ಇದೀಗ ಬೆಂಗಳೂರಿನ ಇಂಜಿನಿಯರ್ ಒಬ್ಬರು ದೋಸೆ ಮಾಡುವ ರೋಬೋಟನ್ನು ಅಭಿವೃದ್ಧಿ ಪಡಿಸಿದ್ದಾರೆ. ಥಿಂಡಿ ಎಂಬ ಹೆಸರಿನ ದೋಸೆ ತಯಾರಿಸುವ ಈ ರೋಬೋಟ್ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಸಮಯ ಉಳಿತಾಯದೊಂದಿಗೆ ಗರಿಗರಿ ದೋಸೆ ಮಾಡುವ ಈ ಮೆಷಿನ್‌ ಕಂಡು ಎಲ್ಲರೂ ಅಚ್ಚರಿಪಟ್ಟಿದ್ದಾರೆ.

 

ದೊಡ್ಡ ದೊಡ್ಡ ನಗರಗಳಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮನೆಕೆಲಸ ಹಾಗೂ ಆಫೀಸಿನ ಕೆಲಸ ನಿಭಾಯಿಸಿಕೊಂಡು ಹೋಗುವುದು ಕಷ್ಟ. ಹೀಗಾಗಿ. ಮಹಿಳೆಯರ ಅರ್ಧಕರ್ಧ ಕೆಲಸವನ್ನು ರೋಬೋಟ್‌ಗಳು ಮಾಡುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚಿನವರು ಮನೆಕೆಲಸಕ್ಕಾಗಿ ರೋಬೋಟ್‌ಗಳನ್ನು ಖರೀದಿಸುತ್ತಿರುವುದನ್ನು ನೋಡಿರಬಹುದು. ಇದೀಗ ದೋಸೆ ಮಾಡುವ ಸಮಯವನ್ನು ಉಳಿಸಲು ರೋಬೋಟ್ ಬಂದಿದೆ. ಬೆಂಗಳೂರಿನ ಇಂಜಿನಿಯರ್ ಒಬ್ಬರು ದೋಸೆ ಮಾಡುವ ರೋಬೋಟನ್ನು ಅಭಿವೃದ್ಧಿ ಪಡಿಸುವ ಮೂಲಕ ಸುದ್ದಿಯಾಗಿದ್ದಾರೆ. ಥಿಂಡಿ ಎಂಬ ಹೆಸರಿನ ಈ ರೋಬೋಟ್, ಸ್ವಯಂಚಾಲಿತವಾಗಿ ದೋಸೆಗಳನ್ನು ತಯಾರಿಸಿ, ಕೆಲಸವನ್ನು ಸುಲಭವಾಗಿಸಲಿದೆ.

r/ Bengaluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಬೆಂಗಳೂರಿನ ಇಂಜಿನಿಯರ್ ಒಬ್ಬರು ಈ ಬಗ್ಗೆ ಬರೆದುಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನಲ್ಲಿ ಒಂದು ವೈಯಕ್ತಿಕ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಥಿಂಡಿ ಎಂಬ ರೋಬೋಟ್ ಸ್ವಯಂಚಾಲಿತವಾಗಿ ದೋಸೆಗಳನ್ನು ತಯಾರಿಸಬಲ್ಲದು. ಇದು ಹಿಟ್ಟನ್ನು ಇದು ಹಿಟ್ಟನ್ನು ಸುರಿದು ಪ್ಯಾನ್ ಮೇಲೆ ಹರಡುತ್ತದೆ. ನನ್ನ ಕುಟುಂಬದ ಸದಸ್ಯರು ಅಡುಗೆ ಮಾಡುವುದನ್ನು ನೋಡಿದ ಬಳಿಕ ನಾನು ಈ ಬಗ್ಗೆ ಯೋಚಿಸಿದೆ. ಆ ಸಮಯದಲ್ಲಿ ನನಗೆ ಈ ಐಡಿಯಾ ಬಂದಿತು ಎಂದು ಹೇಳಿದ್ದಾರೆ.

 

The post ಎಂಜಿನಿಯರ್ ನ ಹೊಸ ಪ್ರಯತ್ನ; ದೋಸೆ ಮಾಡೋದಕ್ಕೂ ಬಂತು ರೋಬೋಟ್!!! appeared first on Good News 24x7.

]]>
UER-II ದ್ವಾರಕಾ ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ಮೋದಿ ಉದ್ಘಾಟನೆಯ ಮೆರಗು. https://www.goodnews24x7.com/pm-modi-inaugurates-uer-ii-dwarka-expressway/ Sat, 16 Aug 2025 08:31:03 +0000 https://www.goodnews24x7.com/?p=6198 ನವದೆಹಲಿ : ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ ಎನ್‌ಸಿಆರ್‌ಗೆ ಸಂಪರ್ಕ ಕಲ್ಪಿಸುವ ಯುಇಆರ್-II ದ್ವಾರಕಾ ಎಕ್ಸ್‌ಪ್ರೆಸ್‌ವೇಯನ್ನುಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು. ಈ ಎಕ್ಸ್‌ಪ್ರೆಸ್‌ವೇಯು ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ ಎನ್‌ಸಿಆರ್‌ಗೆ ಸಂಪರ್ಕವನ್ನು ಸುಧಾರಿಸುವ ಪ್ರಮುಖ ಯೋಜನೆಯಾಗಿದೆ. ಈ ಮಾರ್ಗವು ನೋಯ್ಡಾದಿಂದ (Noida)…

The post UER-II ದ್ವಾರಕಾ ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ಮೋದಿ ಉದ್ಘಾಟನೆಯ ಮೆರಗು. appeared first on Good News 24x7.

]]>

ನವದೆಹಲಿ : ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ ಎನ್‌ಸಿಆರ್‌ಗೆ ಸಂಪರ್ಕ ಕಲ್ಪಿಸುವ ಯುಇಆರ್-II ದ್ವಾರಕಾ ಎಕ್ಸ್‌ಪ್ರೆಸ್‌ವೇಯನ್ನುಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು.

ಈ ಎಕ್ಸ್‌ಪ್ರೆಸ್‌ವೇಯು ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ ಎನ್‌ಸಿಆರ್‌ಗೆ ಸಂಪರ್ಕವನ್ನು ಸುಧಾರಿಸುವ ಪ್ರಮುಖ ಯೋಜನೆಯಾಗಿದೆ. ಈ ಮಾರ್ಗವು ನೋಯ್ಡಾದಿಂದ (Noida) ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣ ಸಮಯವನ್ನು ಗಣನೀಯವಾಗಿ ಕಡಿಮೆಗೊಳಿಸಲಿದೆ.

ಈ ಎಕ್ಸ್‌ಪ್ರೆಸ್‌ವೇಯು 19.2 ಕಿಲೋಮೀಟರ್ ಉದ್ದವಿರುವ ಎಂಟು-ಪಥದ ರಸ್ತೆಯಾಗಿದ್ದು, ದ್ವಾರಕಾದಿಂದ ಗುರ್‌ಗಾವ್ ಶಿವ್ ಮೂರ್ತಿಯವರೆಗೆ ವಿಸ್ತರಿಸಿದೆ. ಈ ಯೋಜನೆಯಿಂದ ನೋಯ್ಡಾ, ಗುರುಗ್ರಾಮ್ ಮತ್ತು ದೆಹಲಿಯ ನಡುವಿನ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ಸಹಾಯವಾಗಲಿದೆ. ಅಲ್ಲದೇ ಎನ್‌ಸಿಆರ್‌ನಲ್ಲಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲಿದೆ ಮತ್ತು ಜನರ ಜೀವನವನ್ನು ಸುಗಮಗೊಳಿಸಲಿದೆ ಎಂದು ಪ್ರಧಾನಿ ಮೋದಿ ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.

ಈ ಮಾರ್ಗವು ಆಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿತವಾಗಿದ್ದು, ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಒತ್ತು ನೀಡಲಾಗಿದೆ. ಇದರಿಂದ ಪ್ರಯಾಣಿಕರು ಸುಮಾರು 20 ರಿಂದ 25 ನಿಮಿಷಗಳಲ್ಲಿ ನೋಯ್ಡಾದಿಂದ ಐಜಿಐ ವಿಮಾನ ನಿಲ್ದಾಣವನ್ನು ತಲುಪಬಹುದಾಗಿದೆ. ಈ ಹಿಂದೆ ಪ್ರಯಾಣಕ್ಕೆ ಒಂದು ಗಂಟೆಗಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು.

ಈ ಯೋಜನೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿದ್ದು, ದೆಹಲಿ-ಎನ್‌ಸಿಆರ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ. ಸ್ಥಳೀಯ ಜನರು ಮತ್ತು ವಾಣಿಜ್ಯ ಸಂಸ್ಥೆಗಳು ಈ ಎಕ್ಸ್‌ಪ್ರೆಸ್‌ವೇಯಿಂದ ಗಮನಾರ್ಹ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.

The post UER-II ದ್ವಾರಕಾ ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ಮೋದಿ ಉದ್ಘಾಟನೆಯ ಮೆರಗು. appeared first on Good News 24x7.

]]>
MTS ಪರೀಕ್ಷೆಗೆ ಬೇರೊಬ್ಬನನ್ನು ಕಳಿಸಿದ ಯುವಕ, ಕರ್ತವ್ಯಕ್ಕೆ ಹಾಜರಾಗುವಾಗ ಸಿಕ್ಕಿಬಿದಿದ್ದಾನೆ. https://www.goodnews24x7.com/a-youth-who-sent-someone-else-for-mts-exam-was-caught-while-reporting-for-duty/ Thu, 14 Aug 2025 10:31:30 +0000 https://www.goodnews24x7.com/?p=6135 ಬೆಂಗಳೂರು : ‘ಮುನ್ನಾ ಭಾಯಿ ಎಂಬಿಬಿಎಸ್’ ಚಿತ್ರದಲ್ಲಿ ನಡೆದಂತೆ ಬಿಹಾರದ 24 ವರ್ಷದ ಯುವಕನೊಬ್ಬ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್ – ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಯ ಮಲ್ಟಿ-ಟಾಸ್ಕಿಂಗ್ ಸ್ಟಾಫ್  ಹುದ್ದೆಗೆ ನಡೆದ ಪರೀಕ್ಷೆಯನ್ನು…

The post MTS ಪರೀಕ್ಷೆಗೆ ಬೇರೊಬ್ಬನನ್ನು ಕಳಿಸಿದ ಯುವಕ, ಕರ್ತವ್ಯಕ್ಕೆ ಹಾಜರಾಗುವಾಗ ಸಿಕ್ಕಿಬಿದಿದ್ದಾನೆ. appeared first on Good News 24x7.

]]>

ಬೆಂಗಳೂರು : ‘ಮುನ್ನಾ ಭಾಯಿ ಎಂಬಿಬಿಎಸ್’ ಚಿತ್ರದಲ್ಲಿ ನಡೆದಂತೆ ಬಿಹಾರದ 24 ವರ್ಷದ ಯುವಕನೊಬ್ಬ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್ – ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಯ ಮಲ್ಟಿ-ಟಾಸ್ಕಿಂಗ್ ಸ್ಟಾಫ್  ಹುದ್ದೆಗೆ ನಡೆದ ಪರೀಕ್ಷೆಯನ್ನು ತನ್ನ ಸ್ನೇಹಿತನಿಂದ ಬರೆಸಿ, ಕರ್ತವ್ಯಕ್ಕೆ ಹಾಜರಾಗುವಾಗ ಸಿಕ್ಕಿಬಿದ್ದಿದ್ದಾನೆ.

ಬಿಹಾರದ ನಳಂದ ಜಿಲ್ಲೆಯ ನಿವಾಸಿ ಅಂಜ್ ರಾಜ್ ಪಿಯು ಪರೀಕ್ಷೆ ಮುಗಿಸಿ ಎಂಟಿಎಸ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದನು. ಸಂಸ್ಥೆ ಆತನಿಗೆ ಪ್ರವೇಶ ಪತ್ರ ನೀಡಿತ್ತು. ಆದರೆ, ಆತ ಮಾರ್ಚ್ 16 ರಂದು ಎಂಎಸ್ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪರೀಕ್ಷೆ ಬರೆಯಲು ತಮ್ಮ ಸ್ನೇಹಿತನನ್ನು ಕಳುಹಿಸಿದ್ದನು. ಬಳಿಕ ಎಂಟಿಎಸ್ ಹುದ್ದೆಗೆ ಆತ ಆಯ್ಕೆಯಾಗಿದ್ದನು.

ಅದರಂತೆ ಜುಲೈ 14 ರಂದು ರಾಜ್ ಕರ್ತವ್ಯಕ್ಕೆ ಬಂದಾಗ ವಂಚನೆ ಬೆಳಕಿಗೆ ಬಂದಿದೆ. ರಾಜ್ ಅವರ ಸಹಿ, ಬೆರಳಚ್ಚು ಮತ್ತು ಛಾಯಾಚಿತ್ರ ಪರೀಕ್ಷೆಗೆ ಹಾಜರಾದ ವ್ಯಕ್ತಿಗೆ ಹೊಂದಿಕೆಯಾಗುತ್ತಿಲ್ಲ ಎಂಬುದನ್ನು ಸಿಬ್ಬಂದಿ ಗಮನಿಸಿದ್ದಾರೆ. ನಂತರ, ಮುಖದ ಲಕ್ಷಣಗಳು ಮತ್ತು ಚರ್ಮದ ಗುರುತುಗಳು ಸಹ ಭಿನ್ನವಾಗಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಐಡಬ್ಲ್ಯುಎಸ್‌ಟಿ ನಿರ್ದೇಶಕರ ಉಸ್ತುವಾರಿ ವಹಿಸಿಕೊಂಡಿರುವ ಐಎಫ್‌ಎಸ್ ಅಧಿಕಾರಿ ರಾಜೇಶ್ ಎಸ್ ಅವರು ಸದಾಶಿವನಗರ ಪೊಲೀಸರಿಗೆ ದೂರು ನೀಡಿದ್ದಾರೆ ಮತ್ತು ಬಿಎನ್‌ಎಸ್‌ನ ವಿವಿಧ ವಿಭಾಗಗಳು ಮತ್ತು ಸಾರ್ವಜನಿಕ ಪರೀಕ್ಷೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಇತ್ತೀಚೆಗೆ ಬಂಧಿಸಲಾಗಿದ್ದು, ಪರೀಕ್ಷೆ ಬರೆದಿದ್ದ ಸ್ನೇಹಿತ ಸದ್ಯ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಬಿಹಾರಕ್ಕೆ ತಂಡವನ್ನು ಕಳುಹಿಸಲಾಗಿದೆ. ಆದರೆ, ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ರಾಜ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

The post MTS ಪರೀಕ್ಷೆಗೆ ಬೇರೊಬ್ಬನನ್ನು ಕಳಿಸಿದ ಯುವಕ, ಕರ್ತವ್ಯಕ್ಕೆ ಹಾಜರಾಗುವಾಗ ಸಿಕ್ಕಿಬಿದಿದ್ದಾನೆ. appeared first on Good News 24x7.

]]>
ಬೆಂಗಳೂರಿನ ಸೀರೆ ಮಳಿಗೆಯಲ್ಲಿ ಗಮನ ಸೆಳೆದ ಚಾಟ್ ಜಿಪಿಟಿ ಪ್ರೇರಿತ ಜಾಹೀರಾತು. https://www.goodnews24x7.com/chat-gpt-inspired-advertisement-attracts-attention-at-a-saree-shop-in-bangalore/ Wed, 06 Aug 2025 11:30:50 +0000 https://www.goodnews24x7.com/?p=5464 ಪ್ರತಿಯೊಂದು ಮಳಿಗೆಗಳು, ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ವಿಶಿಷ್ಟ ರೀತಿಯ ಮಾರುಕಟ್ಟೆ ತಂತ್ರಗಳನ್ನು ಬಳಸುತ್ತವೆ. ಆದರೆ ಬೆಂಗಳೂರಿನ ನಾವೀನ್ಯತೆಯನ್ನು ಪ್ರದರ್ಶಿಸುವ ಈ ಸೀರೆ ಅಂಗಡಿಯೂ ಗ್ರಾಹಕರನ್ನು ಸೆಳೆಯಲು ತಂತ್ರಜ್ಞಾನವನ್ನು ಬಳಸಿಕೊಂಡು ವಿಶಿಷ್ಟವಾಗಿ ಜಾಹೀರಾತು ನೀಡಿದೆ. ಚಾಟ್ ಜಿಪಿಟಿ ಪ್ರೇರಿತ ಮೊಬೈಲ್…

The post ಬೆಂಗಳೂರಿನ ಸೀರೆ ಮಳಿಗೆಯಲ್ಲಿ ಗಮನ ಸೆಳೆದ ಚಾಟ್ ಜಿಪಿಟಿ ಪ್ರೇರಿತ ಜಾಹೀರಾತು. appeared first on Good News 24x7.

]]>

ಪ್ರತಿಯೊಂದು ಮಳಿಗೆಗಳು, ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ವಿಶಿಷ್ಟ ರೀತಿಯ ಮಾರುಕಟ್ಟೆ ತಂತ್ರಗಳನ್ನು ಬಳಸುತ್ತವೆ. ಆದರೆ ಬೆಂಗಳೂರಿನ ನಾವೀನ್ಯತೆಯನ್ನು ಪ್ರದರ್ಶಿಸುವ ಈ ಸೀರೆ ಅಂಗಡಿಯೂ ಗ್ರಾಹಕರನ್ನು ಸೆಳೆಯಲು ತಂತ್ರಜ್ಞಾನವನ್ನು ಬಳಸಿಕೊಂಡು ವಿಶಿಷ್ಟವಾಗಿ ಜಾಹೀರಾತು ನೀಡಿದೆ. ಚಾಟ್ ಜಿಪಿಟಿ ಪ್ರೇರಿತ ಮೊಬೈಲ್ ಡಿಸ್ಪ್ಲೇ ವಿನ್ಯಾಸ ಹೊಂದಿರುವ ಜಾಹೀರಾತನ್ನು ಬಳಸಿಕೊಂಡು ಗ್ರಾಹಕರ ಗಮನ ಸೆಳೆದಿದೆ. ಇದೀಗ ಕೃತಕ ಬುದ್ಧಿ ಮತ್ತೆ ಆಧಾರಿತ ಡಿಸ್ಪ್ಲೇ ಜಾಹೀರಾತು ತಂತ್ರಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಬೆಂಗಳೂರು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದು ಬ್ರ್ಯಾಂಡ್‌ ಮಾರುಕಟ್ಟೆಯಲ್ಲಿ ಜನರಿಗೆ ಹತ್ತಿರವಾಗಬೇಕೆಂದು ನಾನಾ ರೀತಿಯ ಕಸರತ್ತು ಮಾಡುತ್ತವೆ. ಬಗೆ ಬಗೆಯ ಕ್ರಿಯೇಟಿವ್‌ ಮಾರುಕಟ್ಟೆ ತಂತ್ರಗಳನ್ನು ಅನುಸರಿಸುತ್ತದೆ. ಗ್ರಾಹಕರನ್ನು ಆಕರ್ಷಿಸಲು ವಿಭಿನ್ನ ರೀತಿಯ ಜಾಹೀರಾತನ್ನು ನೀಡುತ್ತವೆ. ಆದರೆ ಇಂದಿನ ತಂತ್ರಜ್ಞಾನದ ಯುಗದಲ್ಲಿ ಬೆಂಗಳೂರಿನ ಸೀರೆ ಅಂಗಡಿಯೊಂದು ಚಾಟ್ ಜಿಪಿಟಿಯನ್ನೇ (Chat GPT) ಜಾಹೀರಾತಿನ ಭಾಗವಾಗಿ ಬಳಸಿಕೊಂಡಿವೆ. ಅದೇಗೆ ಅಂತೀರಾ?. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಾಟ್ ಜಿಪಿಟಿ ಪ್ರೇರಿತ ಮೊಬೈಲ್ ಡಿಸ್ಪ್ಲೇ ವಿನ್ಯಾಸವನ್ನು ಹೊಂದಿರುವ ವಿಶಿಷ್ಟ ಜಾಹೀರಾತಿನ ಮೂಲಕ ಗ್ರಾಹಕರ ಗಮನ ಸೆಳೆಯುವ ಪ್ರಯತ್ನ ಮಾಡಿದೆ. ಈ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

https://youtu.be/JXlm7kaxoDo?si=4nrAgDYfXpkNXwNZಧರ್ಮಸ್ಥಳದಲ್ಲಿ ಸಮಾಧಿ ಅಗೆಯೋ 2ನೇ ದಿನದ ಕಾರ್ಯಾಚರಣೆ ಆರಂಭ… ಧರ್ಮಸ್ಥಳ ಕಾಡಿನಲ್ಲಿ ಶ*ವಗಳ ಹುಡುಕಾಟ!

@os7borne ಹೆಸರಿನ ಎಕ್ಸ್ ಖಾತೆಯಲ್ಲಿ ಜಾಹೀರಾತಿನ ಈ ಫೋಟೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ChatGPT ಪರದೆಯಲ್ಲಿ “ವರಮಹಾಲಕ್ಷ್ಮಿ ಹಬ್ಬವನ್ನು ಏಕೆ ಆಚರಿಸಲಾಗುತ್ತದೆ?” ಎಂದು ಹೇಳುವ ChatGPT ಮೊಬೈಲ್ ಇಂಟರ್ಫೇಸ್ ಬಳಸಿರುವುದನ್ನು ನೀವಿಲ್ಲಿ ನೋಡಬಹುದು. ತಂತ್ರಜ್ಞಾನವನ್ನೇ ಬಳಸಿಕೊಂಡು ಗ್ರಾಹಕರ ಗಮನ ಸೆಳೆಯುವ ಪ್ರಯತ್ನವಿದು ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ.
ಈ ಫೋಟೋ ಹಂಚಿಕೊಂಡ ಬಳಕೆದಾರ ಬೆಂಗಳೂರಿನ ಸ್ಥಳೀಯ ಸೀರೆ ಅಂಗಡಿಯಲ್ಲಿ ಜಾಹೀರಾತಿಗಾಗಿ ChatGPT ಮೊಬೈಲ್ ಇಂಟರ್ಫೇಸ್ ಬಳಸುವುದು ಇದೇ ಮೊದಲು. ಇದಕ್ಕೂ ಮೊದಲು, ಇದು Google ಹುಡುಕಾಟ ಪಟ್ಟಿಯ ವಿನ್ಯಾಸವಾಗಿತ್ತು. ಇಂತಹದ್ದೆಲ್ಲವನ್ನು ಬೆಂಗಳೂರಿನಲ್ಲಿ ಮಾತ್ರ ಸಾಧ್ಯ ಎಂದು ನಾನು ಭಾವಿಸುತ್ತೇನೆ” ಎಂದು ಹೀಗೆ ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಅದ್ಭುತ, ಇಂತಹ ಬದಲಾವಣೆಯೂ ಬೆಂಗಳೂರಿನಲ್ಲಿ ಆರಂಭವಾಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಸ್ಥಳೀಯರು ಸೀರೆ ಅಂಗಡಿಗೆ ನಿಯಮಿತವಾಗಿ ಭೇಟಿ ನೀಡುವುದನ್ನು ಪ್ರೋತ್ಸಾಹಿಸುವುದೇ ಇದರ ಮೂಲ ಉದ್ದೇಶ ಎಂದು ಕಾಮೆಂಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತ್ರ ಸೀರೆ ಅಂಗಡಿ ಹಾಗೂ ಆಟೋ ಚಾಲಕ ಈ ರೀತಿ ತಂತ್ರಜ್ಞಾನ ಬಳಸಿ ವೈರಲ್ ಆಗಬಹುದು ಎಂದು ಹೇಳಿದ್ದಾರೆ.

The post ಬೆಂಗಳೂರಿನ ಸೀರೆ ಮಳಿಗೆಯಲ್ಲಿ ಗಮನ ಸೆಳೆದ ಚಾಟ್ ಜಿಪಿಟಿ ಪ್ರೇರಿತ ಜಾಹೀರಾತು. appeared first on Good News 24x7.

]]>
ಮದುವೆಯಾಗದೆ ತಾಯಿಯಾದ ನಟಿ ಭಾವನಾ! https://www.goodnews24x7.com/bhavana-becomes-a-mother-without-marriage/ Fri, 04 Jul 2025 09:34:51 +0000 https://www.goodnews24x7.com/?p=4904 ನಟಿ ಭಾವನಾ ಅಮ್ಮನಾಗುತ್ತಿದ್ದಾರೆ. ಅವರೀಗ ಏಳು ತಿಂಗಳ ಗರ್ಭಿಣಿಯಾಗಿದ್ದು ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಇದುವರೆಗೂ ಮದುವೆಯಾಗದ ಭಾವನಾ ಹೇಗೆ ಮಗು ಪಡೆದರು ಎಂದು ಆಶ್ಚರ್ಯವಾಗೋದು ನಿಜ. ಆದರೆ ಅವರು ಐವಿಎಫ್ ಮೂಲಕ ಮಗು ಪಡೆಯುತ್ತಿದ್ದು ತಮ್ಮ ಗರ್ಭದಲ್ಲೇ ಮಗುವನ್ನ…

The post ಮದುವೆಯಾಗದೆ ತಾಯಿಯಾದ ನಟಿ ಭಾವನಾ! appeared first on Good News 24x7.

]]>

ನಟಿ ಭಾವನಾ ಅಮ್ಮನಾಗುತ್ತಿದ್ದಾರೆ. ಅವರೀಗ ಏಳು ತಿಂಗಳ ಗರ್ಭಿಣಿಯಾಗಿದ್ದು ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಇದುವರೆಗೂ ಮದುವೆಯಾಗದ ಭಾವನಾ ಹೇಗೆ ಮಗು ಪಡೆದರು ಎಂದು ಆಶ್ಚರ್ಯವಾಗೋದು ನಿಜ. ಆದರೆ ಅವರು ಐವಿಎಫ್ ಮೂಲಕ ಮಗು ಪಡೆಯುತ್ತಿದ್ದು ತಮ್ಮ ಗರ್ಭದಲ್ಲೇ ಮಗುವನ್ನ ಹೆರುತ್ತಿರುವುದು ವಿಶೇಷ.

ನಟಿಯಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಭಾವನಾ ಸಿಂಗಲ್ ಜೀವನ ನಡೆಸುತ್ತಿದ್ದಾರೆ. ಮುಂದುವರೆದ ವೈದ್ಯಕೀಯ ತಂತ್ರಜ್ಞಾನದಲ್ಲೀಗ ಪುರುಷನ ದೈಹಿಕ ಸಂಪರ್ಕ ಇಲ್ಲದೆ ಈಗ ತಾಯಿಯಾಗಬಹುದು. ಹಾಗೆಯೇ ಭಾವನಾ ತಾಯಿಯಾಗುತ್ತಿದ್ದು ಅವರಿಗೀಗ ವಯಸ್ಸು 40ರ ಆಸುಪಾಸು.

ಭರತನಾಟ್ಯ ಕಲಾವಿದೆಯಾಗಿ ಫಿಟ್ ಆಗಿರುವ ಭಾವನಾ ಇದೀಗ ಮಗು ಹೆರಲು ಸಿದ್ಧರಾಗಿದ್ದು, ಅವಳಿ ಮಕ್ಕಳನ್ನು ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಅವರು ತಾಯಿಯಾಗಲಿದ್ದಾರೆ. ಹೆಚ್ಚಿನ ವಿಚಾರಗಳನ್ನ ಅವರೇ ಹಂಚಿಕೊಳ್ಳಬೇಕಿದೆ.

The post ಮದುವೆಯಾಗದೆ ತಾಯಿಯಾದ ನಟಿ ಭಾವನಾ! appeared first on Good News 24x7.

]]>
ದೇಹ ಛೇದನವಿಲ್ಲದೇ ಮರಣೋತ್ತರ ಪರೀಕ್ಷೆ! ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇತಿಹಾಸ ಬರೆಯಲಿದೆ ವಿಕ್ಟೋರಿಯಾ ಆಸ್ಪತ್ರೆ. https://www.goodnews24x7.com/%e0%b2%a6%e0%b3%87%e0%b2%b9-%e0%b2%9b%e0%b3%87%e0%b2%a6%e0%b2%a8%e0%b2%b5%e0%b2%bf%e0%b2%b2%e0%b3%8d%e0%b2%b2%e0%b2%a6%e0%b3%87-%e0%b2%aa%e0%b3%8b%e0%b2%b8%e0%b3%8d%e0%b2%9f%e0%b3%8d/ Sat, 01 Feb 2025 07:58:59 +0000 https://www.goodnews24x7.com/?p=2070 ರಾಜ್ಯದ ಅತ್ಯಂತ ದೊಡ್ಡ ಸರಕಾರಿ ಆಸ್ಪತ್ರೆ ವಿಕ್ಟೋರಿಯಾದಲ್ಲಿ ಮೃತದೇಹವನ್ನು ಕತ್ತರಿಸದೇ ಶವ ಪರೀಕ್ಷೆ ಮಾಡುವ ಅತ್ಯಾಧುನಿಕ ವಿರ್ಟೋಪಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ವರ್ಚುವಲ್ ಶವ ಪರೀಕ್ಷೆಯನ್ನು ಪರಿಚಯಿಸುತ್ತಿದೆ. ಈ ಸಂಬಂಧ ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದ್ದು, ಮುಂದಿನ ಕೆಲವೇ…

The post ದೇಹ ಛೇದನವಿಲ್ಲದೇ ಮರಣೋತ್ತರ ಪರೀಕ್ಷೆ! ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇತಿಹಾಸ ಬರೆಯಲಿದೆ ವಿಕ್ಟೋರಿಯಾ ಆಸ್ಪತ್ರೆ. appeared first on Good News 24x7.

]]>

ರಾಜ್ಯದ ಅತ್ಯಂತ ದೊಡ್ಡ ಸರಕಾರಿ ಆಸ್ಪತ್ರೆ ವಿಕ್ಟೋರಿಯಾದಲ್ಲಿ ಮೃತದೇಹವನ್ನು ಕತ್ತರಿಸದೇ ಶವ ಪರೀಕ್ಷೆ ಮಾಡುವ ಅತ್ಯಾಧುನಿಕ ವಿರ್ಟೋಪಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯು ವರ್ಚುವಲ್ ಶವ ಪರೀಕ್ಷೆಯನ್ನು ಪರಿಚಯಿಸುತ್ತಿದೆ. ಈ ಸಂಬಂಧ ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ವಿರ್ಟೋಪಿ ಆರಂಭವಾಗಲಿದೆ. ಈ ಮೂಲಕ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡ ದಕ್ಷಿಣ ಭಾರತದ ಮೊದಲ ಸರಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ.

ವರ್ಚುವಲ್ ಶವಪರೀಕ್ಷೆ ಅಥವಾ ವಿರ್ಟೋಪ್ಪಿ ಎಂದರೆ ದೇಹವನ್ನು ಕತ್ತರಿಸದೆ ತಂತ್ರಜ್ಞಾನದ ಸ್ಕ್ಯಾನ್ ಮೂಲಕ ಮಾಡುವುದಾಗಿದೆ. ವಿರ್ಟೋಪ್ಪಿ (Virtopsy) ಎಂದರೆ ‘ವರ್ಚುವಲ್’ ಮತ್ತು ‘ಶವಪರೀಕ್ಷೆ’ ಸಂಯೋಜಿಸುವ ಪದ. ವಿರ್ಟೋಪ್ಪಿ ಯಂತ್ರವು ಕಂಪ್ಯೂಟೆಡ್ ಟೋಮೊಗ್ರಫಿ (ಸಿಟಿ ಸ್ಕ್ಯಾ ನ್), ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂಆರ್ಐ) ಮುಂತಾದ ಕ್ಲಿನಿಕಲ್
ಮೆಡಿಸಿನ್ನಲ್ಲಿ ಬಳಸಲಾಗುವ ಚಿತ್ರಣ ವಿಧಾನಗಳನ್ನು ಬಳಸಿಕೊಳ್ಳುತ್ತದೆ. ಇಲ್ಲಿ ಸೆರೆಯಾದ ಚಿತ್ರಗಳನ್ನು 3ಡಿ ಚಿತ್ರವನ್ನಾಗಿ ಬದಲಾಯಿಸಲಾಗುತ್ತದೆ. ಇದರ ನಿರ್ಮಾಣಕ್ಕೆ 2 ರಿಂದ 3 ಕೋಟಿ ರೂ. ವೆಚ್ಚವಾಗಲಿದೆ.

ಮೂರು ಕಡೆ ಅಳವಡಿಕೆ: ಬರಿಗಣ್ಣಿನಲ್ಲಿ ಮಾಡುವ ಶವಪರೀಕ್ಷೆಗಳಲ್ಲಿ ಸಣ್ಣ ಮೂಳೆ ಮುರಿತ ಮತ್ತು ಗಾಯ ಗುರುತಿಸುವುದು ಕಷ್ಟ, ಆದರೆ, ವಿಕಿರಣಶಾಸ್ತ್ರದ ಪರೀಕ್ಷೆಯು ಬರಿಗಣ್ಣಿಗೆ ಕಾಣದ ಮುರಿತ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ಪತ್ತೆ ಮಾಡುತ್ತದೆ. ಅಲ್ಲದೆ, ಮೂಳೆಗಳಲ್ಲಿನ ಕೂದಲ ಗಳನ್ನೂ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ.

ಈಗಾಗಲೇ ಹೊಸದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್), ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆ ಹಾಗೂ ಮೇಘಾಲಯದ ನೀಗ್ರಿಮ್ಸ್ ನಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಡಿಸಿಕೊಳ್ಳಲಾಗಿದೆ.
ಮೂರು ಸಾವಿರ ಪರೀಕ್ಷೆ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರತಿ ವರ್ಷ ಮೂರು ಸಾವಿರಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ವರ್ಚುವಲ್ ಮೂಲಕ ತ್ವರಿತವಾಗಿ ಶವ ಪರೀಕ್ಷೆ ನಡೆಸಲು ಸಾಧ್ಯವಾಗಲಿದೆ. ಎಲ್ಲಾ ಶವಪರೀಕ್ಷೆ ಗಳನ್ನು ವರ್ಚುವಲ್ ಆಗಿ ಮಾಡಲು ಸಾಧ್ಯವಿಲ್ಲ. ಸದ್ಯಕ್ಕೆ ರಸ್ತೆ ಅಪಘಾತ ಮತ್ತೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಪ್ರಕರಣಗಳಲ್ಲಿ ಮಾತ್ರ ಈ ಶವಪರೀಕ್ಷೆ ಮಾಡಲು ಉದ್ದೇಶಿಸಲಾಗಿದೆ.

ಹೊಸ ತಂತ್ರಜ್ಞಾನ ಬಂದರೂ ಸಾಂಪ್ರದಾಯಿಕ ಶವಪರೀಕ್ಷೆಯನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ನೈಸರ್ಗಿಕ ಸಾವುಗಳು ಅಥವಾ ವಿಷಪೂರಿತ ಪ್ರಕರಣಗಳ ಸಂದರ್ಭದಲ್ಲಿ ಹಿಸ್ಟೋಪಾಥೋಲಾಜಿಕಲ್ ಪರೀಕ್ಷೆಗಾಗಿ ಅಂಗಾಂಶ ಹೊರತೆಗೆಯಬೇಕಾಗುತ್ತದೆ. ಹೃದಯಾಘಾತದ ಸಂದರ್ಭದಲ್ಲಿ ಮರಣೋತ್ತರ ಆಂಜಿಯೋಗ್ರಾಮ್ ಮಾಡಬೇಕಾಗುತ್ತದೆ. ಆದರೆ, ದೇಹದ ಭಾಗವನ್ನು ಕಡಿಮೆ ಪ್ರಮಾಣದಲ್ಲಿ ಕತ್ತರಿಸಿದರೆ ಸಾಕಾಗುತ್ತದೆ. ಕೊಲೆ, ಆತ್ಮಹತ್ಯೆ ಪ್ರಕರಣಗಳಲ್ಲಿ ಸಾಂಪ್ರದಾಯಿಕ ಶವ ಪರೀಕ್ಷೆಯ ವಿಧಾನದ ಅಗತ್ಯವಿರುತ್ತದೆ,” ಎನ್ನುತ್ತಾರೆ ವೈದ್ಯಕೀಯ ತಜ್ಞರು,

ವಿರ್ಟೋಪ್ಪಿ ಉಪಯೋಗವೇನು?

 ವರ್ಚುವಲ್ ಶವ ಪರೀಕ್ಷೆ ಎನ್ನುವುದು ಮರಣೋತ್ತರ ಪರೀಕ್ಷೆಯ ಹೊಸ ತಂತ್ರವಾಗಿದ್ದು, ಇದರಲ್ಲಿ ದೇಹವನ್ನು ಕತ್ತರಿಸುವುದಿಲ್ಲ.
 ಮರಣೋತ್ತರ ಪರೀಕ್ಷೆಯನ್ನು ಹೈಟೆಕ್ ಡಿಜಿಟಲ್ ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್ ಬಳಸಿ ಮಾಡಲಾಗುತ್ತದೆ.
 ಮರಣೋತ್ತರ ಪರೀಕ್ಷೆಯ ಸಾಂಪ್ರದಾಯಿಕ ವಿಧಾನಕ್ಕೆ ಹೋಲಿಸಿದರೆ ಈ ತಂತ್ರಕ್ಕೆ ಕಡಿಮೆ ಸಮಯ ಸಾಕು.
 ಈ ನವೀನ ವಿಧಾನದಿಂದ ಮೂಳೆಗಳಲ್ಲಿನ ಕೂದಲಿನಷ್ಟು ಸೂಕ್ಷ್ಮ ಮುರಿತ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.
 ವಿರ್ಟೋಪ್ಪಿ ಮಾಡಿದ ಸಂಶೋಧನೆಗಳನ್ನು ಎಕ್ಸ್-ರೇ ಫಿಲ್ಮಗಳ ರೂಪದಲ್ಲಿ ದಾಖಲಿಸಬಹುದು. ಅದನ್ನು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಬಳಸಬಹುದು.

The post ದೇಹ ಛೇದನವಿಲ್ಲದೇ ಮರಣೋತ್ತರ ಪರೀಕ್ಷೆ! ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇತಿಹಾಸ ಬರೆಯಲಿದೆ ವಿಕ್ಟೋರಿಯಾ ಆಸ್ಪತ್ರೆ. appeared first on Good News 24x7.

]]>