temple Archives - Good News 24x7 https://www.goodnews24x7.com/tag/temple/ Kannada Thu, 16 Jul 2026 05:54:55 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg temple Archives - Good News 24x7 https://www.goodnews24x7.com/tag/temple/ 32 32 ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ ! https://www.goodnews24x7.com/grand-jagannath-rath-yatra-begins-in-puri-odisha-from-today/ Thu, 16 Jul 2026 05:54:21 +0000 https://www.goodnews24x7.com/?p=9845   ಒಡಿಶಾದ ಪುರಿಯಲ್ಲಿ ಭವ್ಯ ಜಗನ್ನಾಥ ರಥಯಾತ್ರೆ ಇಂದಿನಿಂದ ಆರಂಭಗೊಂಡಿದೆ. ಲಕ್ಷಾಂತರ ಭಕ್ತರು ‘ಜಯ ಜಗನ್ನಾಥ’ ಘೋಷಗಳೊಂದಿಗೆ ಈ ಮಹಾ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಜಗನ್ನಾಥ ಸ್ವಾಮಿ, ಬಲಭದ್ರ ಮತ್ತು ಸುಭದ್ರಾ ದೇವಿ ದೇವಾಲಯದಿಂದ ಹೊರಬಂದು ಭಕ್ತರಿಗೆ ದರ್ಶನ ನೀಡುತ್ತಾರೆ. ಹೊಸ ರಥಗಳ…

The post ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ ! appeared first on Good News 24x7.

]]>

 

ಒಡಿಶಾದ ಪುರಿಯಲ್ಲಿ ಭವ್ಯ ಜಗನ್ನಾಥ ರಥಯಾತ್ರೆ ಇಂದಿನಿಂದ ಆರಂಭಗೊಂಡಿದೆ. ಲಕ್ಷಾಂತರ ಭಕ್ತರು ‘ಜಯ ಜಗನ್ನಾಥ’ ಘೋಷಗಳೊಂದಿಗೆ ಈ ಮಹಾ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಜಗನ್ನಾಥ ಸ್ವಾಮಿ, ಬಲಭದ್ರ ಮತ್ತು ಸುಭದ್ರಾ ದೇವಿ ದೇವಾಲಯದಿಂದ ಹೊರಬಂದು ಭಕ್ತರಿಗೆ ದರ್ಶನ ನೀಡುತ್ತಾರೆ. ಹೊಸ ರಥಗಳ ನಿರ್ಮಾಣ, ಗುಂಡಿಚಾ ಮಂದಿರಕ್ಕೆ ಪ್ರಯಾಣ ಮತ್ತು ‘ಛೇರಾ ಪಹರಾ’ ಸಮಾನತೆಯ ಸಂದೇಶ ಸಾರುವ ಪ್ರಮುಖ ಆಚರಣೆಗಳಾಗಿವೆ.

ಭಾರತದ ಅತ್ಯಂತ ಪವಿತ್ರ ಹಾಗೂ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ‘ಪುರಿ ಜಗನ್ನಾಥ ರಥಯಾತ್ರೆ’ಯು ಇಂದುಅತ್ಯಂತ ವೈಭವದಿಂದ ಆರಂಭವಾಗಿದೆ. ದೇಶ-ವಿದೇಶಗಳ ಲಕ್ಷಾಂತರ ಭಕ್ತರು ಪುರಿ ನಗರಕ್ಕೆ ಹರಿದು ಬಂದಿದ್ದು, ಇಡೀ ನಗರವು ‘ಜಯ ಜಗನ್ನಾಥ’ ಎಂಬ ಜೈಕಾರದೊಂದಿಗೆ ಭಕ್ತಿಯ ಸಾಗರದಲ್ಲಿ ಮುಳುಗಿದೆ. ಶ್ರೀ ಜಗನ್ನಾಥ ದೇವಾಲಯ ಆಡಳಿತವು ಈ ಮಹಾ ಉತ್ಸವದ ಅಧಿಕೃತ ಧಾರ್ಮಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಬಿಗಿ ಭದ್ರತೆಯ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ.

ಸಾಮಾನ್ಯವಾಗಿ ಹಿಂದೂ ಧರ್ಮದ ಬಹುತೇಕ ಹಬ್ಬಗಳಲ್ಲಿ ಭಕ್ತರು ದೇವರ ದರ್ಶನ ಪಡೆಯಲು ದೇವಾಲಯಗಳ ಒಳಗೆ ಹೋಗಬೇಕಾಗುತ್ತದೆ. ಆದರೆ, ಪುರಿ ರಥಯಾತ್ರೆಯ ವೈಶಿಷ್ಟ್ಯವೇ ಬೇರೆ. ಇಲ್ಲಿ ಜಗನ್ನಾಥ ಸ್ವಾಮಿ, ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರಾ ದೇವಿಯೊಂದಿಗೆ ಸ್ವತಃ ತಾನೇ ದೇವಾಲಯದಿಂದ ಹೊರಬಂದು, ಜಾತಿ, ಮತ, ಧರ್ಮ ಅಥವಾ ಬಡವ-ಬಲ್ಲಿದ ಎಂಬ ಭೇದವಿಲ್ಲದೆ ರಸ್ತೆಯಲ್ಲಿ ನಿಂತಿರುವ ಪ್ರತಿಯೊಬ್ಬ ಭಕ್ತನಿಗೂ ದರ್ಶನ ನೀಡಿ ಆಶೀರ್ವದಿಸುತ್ತಾನೆ.

ಸನಾತನ ಸಂಪ್ರದಾಯದ ಪ್ರಕಾರ, ಜಗನ್ನಾಥ ಸ್ವಾಮಿಯು ತನ್ನ ಒಡಹುಟ್ಟಿದವರೊಂದಿಗೆ ಜಗನ್ನಾಥ ದೇವಸ್ಥಾನದಿಂದ ಹೊರಟು, ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ತನ್ನ ಸೋದರತ್ತೆಯ ಮನೆ ಎಂದು ನಂಬಲಾದ ‘ಗುಂಡಿಚಾ ದೇವಸ್ಥಾನ’ಕ್ಕೆ ವಾರ್ಷಿಕ ಪ್ರಯಾಣ ಬೆಳೆಸುತ್ತಾನೆ. ಈ ಒಂಬತ್ತು ದಿನಗಳ ಕಾಲ ದೇವತೆಗಳು ಗುಂಡಿಚಾ ಮಂದಿರದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಜಗತ್ತಿನ ಸೃಷ್ಟಿಕರ್ತನಾದ ಜಗನ್ನಾಥನ ಮುಂದೆ ರಾಜನಾಗಲಿ ಅಥವಾ ಸಾಮಾನ್ಯ ಪ್ರಜೆಯಾಗಲಿ ಎಲ್ಲರೂ ಸಮಾನರು, ಭಗವಂತನಿಗೆ ಎಲ್ಲರೂ ಸೇವಕರು ಎಂಬ ಪರಮೋಚ್ಚ ಸಮಾನತೆಯ ಸಂದೇಶವನ್ನು ಈ ಆಚರಣೆ ಸಾರುತ್ತದೆ. ಒಡಿಶಾ ಸರ್ಕಾರ ಹಾಗೂ ಸ್ಥಳೀಯ ಪೊಲೀಸರು ಲಕ್ಷಾಂತರ ಭಕ್ತರ ಸೌಕರ್ಯಕ್ಕಾಗಿ ಇಡೀ ಪುರಿ ನಗರದಾದ್ಯಂತ ವಾಹನ ಸಂಚಾರ ವ್ಯವಸ್ಥೆ ಮತ್ತು ಪ್ರವಾಸೋದ್ಯಮ ಸೌಲಭ್ಯಗಳನ್ನು

The post ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ ! appeared first on Good News 24x7.

]]>
ವಾಷಿಂಗ್ಟನ್ ಡಿಸಿ ಮೇಯರ್ ಚುನಾವಣೆ: ಭಾರತೀಯ ಮೂಲದ ರಿನಿ ಸಂಪತ್‌ಗೆ ಅಮೆರಿಕನ್ ಹಿಂದೂ ಕೋಅಲಿಷನ್ ಬೆಂಬಲ. https://www.goodnews24x7.com/washington-dc-mayoral-election-american-hindu-coalition-backs-indian-origin-rini-sampath/ Tue, 28 Apr 2026 10:55:22 +0000 https://www.goodnews24x7.com/?p=9466 ವಾಷಿಂಗ್ಟನ್: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯ ಮೇಯರ್ ಚುನಾವಣಾ ಕಣ ರಂಗೇರಿದ್ದು, ಭಾರತೀಯ ಮೂಲದ ಸೈಬರ್ ಸುರಕ್ಷತಾ ತಜ್ಞೆ ರಿನಿ ಸಂಪತ್ ಅವರಿಗೆ ಅಮೆರಿಕನ್ ಹಿಂದೂ ಕೋಅಲಿಷನ್ (AHC) ಅಧಿಕೃತ ಬೆಂಬಲ ಘೋಷಿಸಿದೆ. ಇಸ್ಕಾನ್ ದೇವಾಲಯದಲ್ಲಿ ಬೆಂಬಲಿಗರ ಸಭೆ: ರಿನಿ ಸಂಪತ್…

The post ವಾಷಿಂಗ್ಟನ್ ಡಿಸಿ ಮೇಯರ್ ಚುನಾವಣೆ: ಭಾರತೀಯ ಮೂಲದ ರಿನಿ ಸಂಪತ್‌ಗೆ ಅಮೆರಿಕನ್ ಹಿಂದೂ ಕೋಅಲಿಷನ್ ಬೆಂಬಲ. appeared first on Good News 24x7.

]]>

ವಾಷಿಂಗ್ಟನ್: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯ ಮೇಯರ್ ಚುನಾವಣಾ ಕಣ ರಂಗೇರಿದ್ದು, ಭಾರತೀಯ ಮೂಲದ ಸೈಬರ್ ಸುರಕ್ಷತಾ ತಜ್ಞೆ ರಿನಿ ಸಂಪತ್ ಅವರಿಗೆ ಅಮೆರಿಕನ್ ಹಿಂದೂ ಕೋಅಲಿಷನ್ (AHC) ಅಧಿಕೃತ ಬೆಂಬಲ ಘೋಷಿಸಿದೆ.

ಇಸ್ಕಾನ್ ದೇವಾಲಯದಲ್ಲಿ ಬೆಂಬಲಿಗರ ಸಭೆ:
ರಿನಿ ಸಂಪತ್ ಅವರ ಪರವಾಗಿ ಜನಬೆಂಬಲ ವ್ಯಕ್ತಪಡಿಸಲು ಎಎಚ್‌ಸಿ ಸಂಸ್ಥೆಯು ವಾಷಿಂಗ್ಟನ್ ಡಿಸಿಯ ಇಸ್ಕಾನ್ ದೇವಾಲಯದಲ್ಲಿ ವಿಶೇಷ ಸಭೆಯನ್ನು ಆಯೋಜಿಸಿತ್ತು. ಜೂನ್ 16ರಂದು ನಡೆಯಲಿರುವ ಡೆಮಾಕ್ರಟಿಕ್ ಪ್ರೈಮರಿ ಚುನಾವಣೆಯಲ್ಲಿ ರಿನಿ ಅವರು ‘ಫಿಕ್ಸ್ ದಿ ಬೇಸಿಕ್ಸ್’ (ಮೂಲಭೂತ ಸೌಕರ್ಯಗಳ ಸುಧಾರಣೆ) ಅಜೆಂಡಾ ಮತ್ತು ‘ಹೊಸ ಡಿಸಿ’ ಎಂಬ ಭರವಸೆಯೊಂದಿಗೆ ಸ್ಪರ್ಧಿಸುತ್ತಿದ್ದಾರೆ.

ಪ್ರತಿನಿಧಿತ್ವಕ್ಕಾಗಿ ಒಗ್ಗಟ್ಟಿನ ಕರೆ:
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಎಚ್‌ಸಿ ಮೆರಿಲ್ಯಾಂಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅಂಕುರ್ ಮಿಶ್ರಾ, “ನಾವು ಇನ್ನು ಕೇವಲ ವೀಕ್ಷಕರಾಗಿ ಉಳಿಯುವುದಿಲ್ಲ. ನಮ್ಮ ಮೌಲ್ಯಗಳು ಮತ್ತು ಕುಟುಂಬಗಳ ಹಿತಾಸಕ್ತಿಗಾಗಿ ಸ್ಥಳೀಯ ಆಡಳಿತದ ಉನ್ನತ ಮಟ್ಟದಲ್ಲಿ ನಮಗೆ ಪ್ರಾತಿನಿಧ್ಯ ಬೇಕಿದೆ. ರಿನಿ ಸಂಪತ್ ಅವರ ಸ್ಪರ್ಧೆಯು ಒಂದು ಐತಿಹಾಸಿಕ ಹೆಜ್ಜೆಯಾಗಿದ್ದು, ಇದು ನಮ್ಮ ಸಮುದಾಯದ ದೀರ್ಘಕಾಲೀನ ಚಳವಳಿಯ ಆರಂಭವಾಗಿದೆ” ಎಂದು ತಿಳಿಸಿದರು.

ತಮಿಳುನಾಡು ಮೂಲದ ಸಾಧಕಿ:
ತಮಿಳುನಾಡಿನ ತೆನಿ ಜಿಲ್ಲೆಯವರಾದ ರಿನಿ ಸಂಪತ್ ಅವರು ತಮ್ಮ 7ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ಕಳೆದ ಹತ್ತು ವರ್ಷಗಳಿಂದ ವಾಷಿಂಗ್ಟನ್ ಡಿಸಿಯ ನಿವಾಸಿಯಾಗಿರುವ ಅವರು, ಸೈಬರ್ ಸುರಕ್ಷತಾ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಮುದಾಯದ ಪ್ರಮುಖ ನಾಯಕರಾದ ಶ್ರೀನಿವಾಸ್ ತಟಿಪಾಮುಲ, ಲಕ್ಷ್ಮಿ ತಲಾಂಕಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸ್ಥಳೀಯ ಭಾರತೀಯ ಮತ್ತು ಹಿಂದೂ ಸಮುದಾಯದ ಬೆಂಬಲವು ರಿನಿ ಸಂಪತ್ ಅವರ ಚುನಾವಣಾ ಅಭಿಯಾನಕ್ಕೆ ಹೊಸ ಚೈತನ್ಯ ನೀಡಿದೆ.

The post ವಾಷಿಂಗ್ಟನ್ ಡಿಸಿ ಮೇಯರ್ ಚುನಾವಣೆ: ಭಾರತೀಯ ಮೂಲದ ರಿನಿ ಸಂಪತ್‌ಗೆ ಅಮೆರಿಕನ್ ಹಿಂದೂ ಕೋಅಲಿಷನ್ ಬೆಂಬಲ. appeared first on Good News 24x7.

]]>
ಗೆಲುವಿಗಾಗಿ ‘ದಳಪತಿ’ ಪ್ರಾರ್ಥನೆ: ತಿರುಚೆಂಡೂರು ಮುರುಗನ್ ದೇವಸ್ಥಾನಕ್ಕೆ ನಟ ವಿಜಯ್ ಭೇಟಿ. https://www.goodnews24x7.com/dalapati-prayer-for-victory-actor-vijay-visits-tiruchendur-murugan-temple/ Tue, 28 Apr 2026 09:51:40 +0000 https://www.goodnews24x7.com/?p=9458 ಟುಟಿಕೋರಿನ್‌: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಹಾಗೂ ಖ್ಯಾತ ನಟ ಜೋಸೆಫ್ ವಿಜಯ್‌ ಅವರು ಇಂದು ಪ್ರಸಿದ್ಧ ತಿರುಚೆಂಡೂರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ…

The post ಗೆಲುವಿಗಾಗಿ ‘ದಳಪತಿ’ ಪ್ರಾರ್ಥನೆ: ತಿರುಚೆಂಡೂರು ಮುರುಗನ್ ದೇವಸ್ಥಾನಕ್ಕೆ ನಟ ವಿಜಯ್ ಭೇಟಿ. appeared first on Good News 24x7.

]]>

ಟುಟಿಕೋರಿನ್‌: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಹಾಗೂ ಖ್ಯಾತ ನಟ ಜೋಸೆಫ್ ವಿಜಯ್‌ ಅವರು ಇಂದು ಪ್ರಸಿದ್ಧ ತಿರುಚೆಂಡೂರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪೂರ್ಣಕುಂಭ ಸ್ವಾಗತ ಮತ್ತು ದರ್ಶನ:
ಚೆನ್ನೈನಿಂದ ಆಗಮಿಸಿದ ವಿಜಯ್ ಅವರಿಗೆ ದೇವಾಲಯದ ವತಿಯಿಂದ ಪೂರ್ಣಕುಂಭ ಗೌರವಗಳೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ದೇವರ ಶಕ್ತಿಯ ಸಂಕೇತವಾದ ‘ವೇಲ್’ (ಈಟಿ) ಮತ್ತು ಶಾಲನ್ನು ನೀಡಿ ಅವರನ್ನು ಗೌರವಿಸಲಾಯಿತು. ಮುಂಜಾನೆಯೇ ದೇವಸ್ಥಾನಕ್ಕೆ ಭೇಟಿ ನೀಡಿದರೂ, ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಅಭಿಮಾನಿಗಳು ದೇವಾಲಯದ ಆವರಣದಲ್ಲಿ ಜಮಾಯಿಸಿದ್ದರು.

ವಿಶ್ವ ರೂಪ ದರ್ಶನ ಮತ್ತು ಗೆಲುವಿನ ಹಾರೈಕೆ:
ಪವಿತ್ರ ‘ವಿಶ್ವರೂಪ ದರ್ಶನ’ದಲ್ಲಿ ಪಾಲ್ಗೊಂಡ ವಿಜಯ್ ಅವರು ಸುಮಾರು ಹೊತ್ತು ಪ್ರಾರ್ಥನೆ ಸಲ್ಲಿಸಿದರು. ಏಪ್ರಿಲ್ 23 ರಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಭರ್ಜರಿ ಗೆಲುವು ಸಾಧಿಸಲಿ ಎಂಬ ಉದ್ದೇಶದಿಂದ ವಿಜಯ್ ಅವರು ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ವಿಜಯ್ ಅವರೊಂದಿಗೆ ಟಿವಿಕೆ ಪ್ರಧಾನ ಕಾರ್ಯದರ್ಶಿ ಬಸ್ಸಿ ಆನಂದ್ ಹಾಗೂ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಮೇ 4ಕ್ಕೆ ಅಗ್ನಿಪರೀಕ್ಷೆ:
ಸಿನೆಮಾ ರಂಗದ ಅಧಿಪತಿಯಾಗಿ ಮಿಂಚಿದ್ದ ವಿಜಯ್, ಈಗ ರಾಜಕೀಯ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ರಾಜ್ಯದ ಜನರ ತೀರ್ಪು ಇವರ ಪರವಾಗಿದೆಯೇ ಎಂಬ ಕುತೂಹಲಕ್ಕೆ ಮೇ 4 ರಂದು ನಡೆಯಲಿರುವ ಮತ ಎಣಿಕೆಯ ದಿನ ಉತ್ತರ ಸಿಗಲಿದೆ.

The post ಗೆಲುವಿಗಾಗಿ ‘ದಳಪತಿ’ ಪ್ರಾರ್ಥನೆ: ತಿರುಚೆಂಡೂರು ಮುರುಗನ್ ದೇವಸ್ಥಾನಕ್ಕೆ ನಟ ವಿಜಯ್ ಭೇಟಿ. appeared first on Good News 24x7.

]]>
ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ. https://www.goodnews24x7.com/suryavanshi-in-a-recent-interview-shared-the-bitter-truths-about-the-caste-discrimination-and-colour-inequality-that-he-has-faced-since-childhood-%e0%b2%b8%e0%b3%82%e0%b2%b0%e0%b3%8d%e0%b2%af/ Wed, 22 Apr 2026 07:16:14 +0000 https://www.goodnews24x7.com/?p=9375 ಕರ್ನಾಟಕದ ತಮ್ಮ ಹುಟ್ಟೂರಿನಲ್ಲಿ ಇಂದಿಗೂ ಜಾತಿ ಪದ್ಧತಿ ಜೀವಂತವಾಗಿದ್ದು, ಊರಿನ ದೇವಸ್ಥಾನಕ್ಕೆ ತಮಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, 12 ವರ್ಷದವರಿದ್ದಾಗ ಹೋಟೆಲೊಂದರಲ್ಲಿ ಊಟ ಮಾಡಿದ ನಂತರ ಹಣ ನೀಡಿದರೂ ಸಹ, ಕೆಳಜಾತಿಯವರೆಂಬ ಕಾರಣಕ್ಕೆ ತಟ್ಟೆಯನ್ನು…

The post ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ. appeared first on Good News 24x7.

]]>

ಕರ್ನಾಟಕದ ತಮ್ಮ ಹುಟ್ಟೂರಿನಲ್ಲಿ ಇಂದಿಗೂ ಜಾತಿ ಪದ್ಧತಿ ಜೀವಂತವಾಗಿದ್ದು, ಊರಿನ ದೇವಸ್ಥಾನಕ್ಕೆ ತಮಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, 12 ವರ್ಷದವರಿದ್ದಾಗ ಹೋಟೆಲೊಂದರಲ್ಲಿ ಊಟ ಮಾಡಿದ ನಂತರ ಹಣ ನೀಡಿದರೂ ಸಹ, ಕೆಳಜಾತಿಯವರೆಂಬ ಕಾರಣಕ್ಕೆ ತಟ್ಟೆಯನ್ನು ತಾವೇ ತೊಳೆಯಬೇಕಾದ ಅನಿವಾರ್ಯತೆ ಇತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೇಲೆಯೂ ವಿನೋದ್ ಅವರ ಸಂಕಷ್ಟಗಳು ಮುಗಿಯಲಿಲ್ಲ. ಅವರ ಮೈಬಣ್ಣ ಕಪ್ಪಗಿದೆ ಎಂಬ ಕಾರಣಕ್ಕೆ ಹಲವು ಬಾರಿ ಅವಕಾಶಗಳನ್ನು ನಿರಾಕರಿಸಲಾಗಿತ್ತು. ಒಮ್ಮೆ ಮನೆಗೆಲಸದವನ ಪಾತ್ರಕ್ಕೆ ಆಯ್ಕೆಯಾಗಿದ್ದರೂ, ಕ್ರಿಯೇಟಿವ್ ಡೈರೆಕ್ಟರ್ ಅವರ ಕಪ್ಪು ಮೈಬಣ್ಣವನ್ನು ನೋಡಿ ಸೆಟ್‌ನಿಂದಲೇ ವಾಪಸ್ ಕಳುಹಿಸಿದ್ದ ಘಟನೆಯನ್ನು ಅವರು ಸ್ಮರಿಸಿದ್ದಾರೆ. ಬಡತನದ ಬಾಲ್ಯ, ಅಪ್ಪನ ಕುಡಿತ ಮತ್ತು ತಾಯಿಯ ಕಷ್ಟಗಳ ನಡುವೆ ಬೆಳೆದ ಅವರಿಗೆ ಹಬ್ಬಗಳೆಂದರೆ ಎಂದೂ ಸಡಗರವಿರಲಿಲ್ಲ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಆರಂಭಿಸಿ ಇಂದು ಪಂಚಾಯತ್‌ನಂತಹ ದೊಡ್ಡ ಸರಣಿಯಲ್ಲಿ ನಟಿಸುವವರೆಗಿನ ಅವರ ಈ ಪಯಣ ಅಪಾರ ನೋವು ಮತ್ತು ಅವಮಾನಗಳನ್ನು ದಾಟಿ ಬಂದಿದ್ದಾಗಿದೆ.

The post ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ. appeared first on Good News 24x7.

]]>
ಜ್ಯೋತಿಷಿ ಹೇಳಿದ ‘ನೀನು ಅಲ್ಪಾಯುಷಿ’, ನೇಣು ಬಿಗಿದುಕೊಂಡು ಟೆಕ್ಕಿ ಆತ್ಮ*ತ್ಯೆ! https://www.goodnews24x7.com/astrologer-said-you-will-live-a-short-life-techie-commits-suicide-by-hanging-herselfastrologer-said-you-will-live-a-short-life-techie-commits-suicide-by-hanging-herself/ Sun, 01 Mar 2026 08:59:47 +0000 https://www.goodnews24x7.com/?p=8570 ಜ್ಯೋತಿಷಿ ಯೊಬ್ಬರ ಮಾತು ನಂಬಿ ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ನೇಣು ಬಿಗಿದು ಕೊಂಡು ಆತ್ಮ*ತ್ಯೆ ಮಾಡಿಕೊಂಡಿ ರುವ ಘಟನೆ ಬೆಂಗಳೂ ರಿನ ಬಾಗಲಗುಂಟೆಯ ಎಂಇಐ ಲೇಔಟ್‌ನಲ್ಲಿ ಸಂಭವಿಸಿದೆ. ವಿದ್ಯಾಜ್ಯೋತಿ (29) ನೇಣುಬಿಗಿದು ಕೊಂಡು ಆತ್ಮಹತ್ಯೆ ಶರಣಾಗಿರುವ ಯುವತಿ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ…

The post ಜ್ಯೋತಿಷಿ ಹೇಳಿದ ‘ನೀನು ಅಲ್ಪಾಯುಷಿ’, ನೇಣು ಬಿಗಿದುಕೊಂಡು ಟೆಕ್ಕಿ ಆತ್ಮ*ತ್ಯೆ! appeared first on Good News 24x7.

]]>

ಜ್ಯೋತಿಷಿ ಯೊಬ್ಬರ ಮಾತು ನಂಬಿ ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ನೇಣು ಬಿಗಿದು ಕೊಂಡು ಆತ್ಮ*ತ್ಯೆ ಮಾಡಿಕೊಂಡಿ ರುವ ಘಟನೆ ಬೆಂಗಳೂ ರಿನ ಬಾಗಲಗುಂಟೆಯ ಎಂಇಐ ಲೇಔಟ್‌ನಲ್ಲಿ ಸಂಭವಿಸಿದೆ.

ವಿದ್ಯಾಜ್ಯೋತಿ (29) ನೇಣುಬಿಗಿದು ಕೊಂಡು ಆತ್ಮಹತ್ಯೆ ಶರಣಾಗಿರುವ ಯುವತಿ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ವರ್ಕ್ ಫ್ರಂ ಹೋಮ್‌ನಲ್ಲಿದ್ದರು. ಮೃತ ವಿದ್ಯಾಜ್ಯೋತಿಗೆ ಜ್ಯೋತಿಷಿಯೊಬ್ಬರು ನೀನು ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದರಂತೆ.
ಕೊಡಗು ಮೂಲದ ಯುವಕನನ್ನ ಪ್ರೀತಿ ಸುತ್ತಿದ್ದ ವಿದ್ಯಾ ಇಷ್ಟದಂತೆ ಎರಡೂ ಮನೆಯ ವರು ಒಪ್ಪಿಗೆ ಸೂಚಿಸಿ, ಮದುವೆ ಮಾಡಿ ಕೊಡಲು ಒಪ್ಪಿಕೊಂಡಿದ್ದರು. ಜ್ಯೋತಿಷಿ 9 ದಿನ ಪೂಜೆ ಮಾಡಲು ಸೂಚಿಸಿದ್ದರು.

ಅದರಂತೆ ಮನೆಯಲ್ಲಿ ಒಂಬತ್ತನೇ ದಿನದ ಪೂಜೆ ನಡೆಯುತ್ತಿತ್ತು. ಕೊನೆಯ ದಿನವಾ ದ್ದರಿಂದ ಮಾರಮ್ಮ ದೇವ ರಿಗೆ ತಾಳಿ ಕೊಡುವಂತೆ ಜ್ಯೋತಿಷಿ ತಿಳಿಸಿದ್ದರು.
ಮನೆಯಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಊಟದ ನಂತರ ವಿದ್ಯಾ ರೂಂಗೆ ಹೋಗಿದ್ದಳು. ಸಂಜೆ ತಾಯಿ ಕೂಗಿದ್ದರೂ ವಿದ್ಯಾ ಹೊರ ಬಂದಿರಲಿಲ್ಲ. ಕೆಲಸ ಮಾಡುತ್ತಿರಬೇ ಕೆಂದು ಎಲ್ಲರೂ ಸುಮ್ಮನಾಗಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ತಾಯಿ ದೇವಸ್ಥಾನಕ್ಕೆ ತೆರಳಲು ವಿದ್ಯಾಳನ್ನು ಕರೆದಿದ್ದರು.
ಬಾಗಿಲನ್ನು ತೆಗೆಯದೇ ಇದ್ದಾಗ ಅನು ಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿ ಕೊಂಡಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

The post ಜ್ಯೋತಿಷಿ ಹೇಳಿದ ‘ನೀನು ಅಲ್ಪಾಯುಷಿ’, ನೇಣು ಬಿಗಿದುಕೊಂಡು ಟೆಕ್ಕಿ ಆತ್ಮ*ತ್ಯೆ! appeared first on Good News 24x7.

]]>
ದೇಗುಲದ ಕಾಣಿಕೆ ಡಬ್ಬಿ ಮಾಯ! ತಿಂಗಳ ಬಳಿಕ ಅನಿರೀಕ್ಷಿತ ಘಟನೆ, ಇಲ್ಲಿ ಎಲ್ಲವೂ ದೇವಿಯ ಮಹಿಮೆ! https://www.goodnews24x7.com/degulada-ka%e1%b9%87ike-%e1%b8%8dabbi-maya-ti%e1%b9%85ga%e1%b8%b7a-ba%e1%b8%b7ika-anirik%e1%b9%a3ita-gha%e1%b9%adane-illi-ellavu-deviya-mahime-goddessrupeestempleofferingboxbukkarayasamudram/ Sat, 06 Sep 2025 07:36:06 +0000 https://www.goodnews24x7.com/?p=7411 ಕಳ್ಳರ ಗುಂಪೊಂದು ದೇವಸ್ಥಾನ ದೋಚಲು ಪ್ಲಾನ್ ಹಾಕಿಕೊಂಡು ನುಗ್ಗಿತ್ತು. ಆ ಪ್ರಕಾರವೇ ಅವರು ದೇವಾಲಯಕ್ಕೆ ಎಂಟ್ರಿ ನೀಡಿ, ಕಾಣಿಕೆ ಡಬ್ಬಿಯನ್ನೇ ಹೊತ್ತೊಯ್ದರು. ಆಮೇಲೆ ಏನಾಯ್ತು ಅನ್ನೋದೇ ಇಲ್ಲಿ ಇಂಟ್ರೆಸ್ಟಿಂಗ್! ಕಳ್ಳರ ಗುಂಪೊಂದು ದೇವಸ್ಥಾನ ದೋಚಲು ಪ್ಲಾನ್ ಹಾಕಿಕೊಂಡು ನುಗ್ಗಿತ್ತು. ಆ ಪ್ರಕಾರವೇ…

The post ದೇಗುಲದ ಕಾಣಿಕೆ ಡಬ್ಬಿ ಮಾಯ! ತಿಂಗಳ ಬಳಿಕ ಅನಿರೀಕ್ಷಿತ ಘಟನೆ, ಇಲ್ಲಿ ಎಲ್ಲವೂ ದೇವಿಯ ಮಹಿಮೆ! appeared first on Good News 24x7.

]]>

ಕಳ್ಳರ ಗುಂಪೊಂದು ದೇವಸ್ಥಾನ ದೋಚಲು ಪ್ಲಾನ್ ಹಾಕಿಕೊಂಡು ನುಗ್ಗಿತ್ತು. ಆ ಪ್ರಕಾರವೇ ಅವರು ದೇವಾಲಯಕ್ಕೆ ಎಂಟ್ರಿ ನೀಡಿ, ಕಾಣಿಕೆ ಡಬ್ಬಿಯನ್ನೇ ಹೊತ್ತೊಯ್ದರು. ಆಮೇಲೆ ಏನಾಯ್ತು ಅನ್ನೋದೇ ಇಲ್ಲಿ ಇಂಟ್ರೆಸ್ಟಿಂಗ್!

ಕಳ್ಳರ ಗುಂಪೊಂದು ದೇವಸ್ಥಾನ ದೋಚಲು ಪ್ಲಾನ್ ಹಾಕಿಕೊಂಡು ನುಗ್ಗಿತ್ತು. ಆ ಪ್ರಕಾರವೇ ಅವರು ದೇವಾಲಯಕ್ಕೆ ಎಂಟ್ರಿ ನೀಡಿ, ಕಾಣಿಕೆ ಡಬ್ಬಿಯನ್ನೇ ಹೊತ್ತೊಯ್ದರು. ಆಮೇಲೆ ಏನಾಯ್ತು ಅನ್ನೋದೇ ಇಲ್ಲಿ ಇಂಟ್ರೆಸ್ಟಿಂಗ್! ಕದ್ದ ಕಾಣಿಕೆ ಡಬ್ಬಿಯನ್ನ ತುಂಬಾ ಉತ್ಸಾಹದಿಂದಲೇ ಒಡೆದಿದ್ದಾರೆ. ಆದರೆ, ಅದೇನು ಆಯ್ತೋ ಗೊತ್ತಿಲ್ಲ. ಕದ್ದ ಎಲ್ಲಾ ಹಣವನ್ನು ಸ್ವಲ್ಪ ದಿನ ಒಂದು ತಿಂಗಳ ನಂತರ ಅದೇ ದೇವಸ್ಥಾನಕ್ಕೆ ತಂದಿಟ್ಟು ಹೋಗಿದ್ದಾರೆ. ಅಂದ್ಹಾಗೆ ಈ ಘಟನೆ ನಡೆದಿರೋದು ಆಂಧ್ರದ ಅನಂತಪುರ ಜಿಲ್ಲೆಯ ಬುಕ್ಕರಾಯಸಮುದ್ರಂನಲ್ಲಿರುವ ದೇವಸ್ಥಾನವೊಂದರಲ್ಲಿ. ಒಂದು ತಿಂಗಳ ಹಿಂದೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

 

ಹಣದ ಜೊತೆಗೆ ಪತ್ರ ಇಟ್ಟು ಹೋದ ಕಳ್ಳರು ಒಂದು ಪತ್ರವನ್ನೂ ದೇವಾಲಯದಲ್ಲಿ ಇಟ್ಟು ಹೋಗಿದ್ದಾರೆ. ಬೆಳಗ್ಗೆ, ಪೂಜಾ ಸೇವೆಗಳಿಗಾಗಿ ದೇವಾಲಯಕ್ಕೆ ಪ್ರವೇಶಿಸಿದ ಅರ್ಚಕರಿಗೆ ಆವರಣದಲ್ಲಿ ಹಣದ ಬ್ಯಾಗ್ ಸಿಕ್ಕಿದೆ. ಅದನ್ನು ನೋಡಿದ ಅರ್ಚಕರಿಗೆ ಶಾಕ್ ಆಗಿದೆ. ಬ್ಯಾಗ್​ ಒಳಗೆ ಹಣ ಮತ್ತು ಒಂದು ಪತ್ರ ಇತ್ತು. ಆ ಪತ್ರದಲ್ಲಿ ಏನಿತ್ತು ಅನ್ನೋದನ್ನ ತೆಗೆದು ನೋಡಿದಾಗ.. ತನ್ನ ಮಕ್ಕಳು ದೇವಾಲಯದ ಹುಂಡಿಯಿಂದ ಹಣ ಕದ್ದು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಬರೆಯಲಾಗಿತ್ತು.ಇನ್ನು ದೇವಸ್ಥಾನದ ಆಡಳಿತಾಧಿಕಾರಿಗಳು ಕಳ್ಳರು ತಂದಿದ್ದ ಹುಂಡಿಯನ್ನು ಎಣಿಸಿದಾಗ ಒಟ್ಟು 1,86,486 ರೂಪಾಯಿ ಇರೋದು ತಿಳಿದುಬಂದಿದೆ. ದೇವಿಯ ಶ್ರೇಷ್ಠತೆಯಿಂದಾಗಿ ಕಳ್ಳರು ಕದ್ದ ಹಣವನ್ನು ವಾಪಸ್ ತಂದಿದ್ದಾರೆ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

The post ದೇಗುಲದ ಕಾಣಿಕೆ ಡಬ್ಬಿ ಮಾಯ! ತಿಂಗಳ ಬಳಿಕ ಅನಿರೀಕ್ಷಿತ ಘಟನೆ, ಇಲ್ಲಿ ಎಲ್ಲವೂ ದೇವಿಯ ಮಹಿಮೆ! appeared first on Good News 24x7.

]]>
ಚಾಮುಂಡಿಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ: ಡಿಕೆ ಶಿವಕುಮಾರ್ ವಿವಾದಾತ್ಮಕ ಹೇಳಿಕೆ. https://www.goodnews24x7.com/chamundi-hills-is-not-a-property-of-hinduism-dk-shivakumars-controversial-statement/ Thu, 28 Aug 2025 05:29:52 +0000 https://www.goodnews24x7.com/?p=6865 ಬೆಂಗಳೂರು: ಮೈಸೂರು ದಸರಾ ಉತ್ಸವಕ್ಕೆ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಸ್ತಾಕ್ ಅವರನ್ನು ಆಹ್ವಾನ ನೀಡಿರುವ ವಿಚಾರವನ್ನು ಪ್ರತಿಸ್ಪಂದಿಸಿದ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, “ಚಾಮುಂಡಿಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ” ಎಂಬ ಹೇಳಿಕೆಯಿಂದ ವಿವಾದ ಕೆರಳಿಸಿದ್ದಾರೆ. “ಅದು ಅವರ…

The post ಚಾಮುಂಡಿಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ: ಡಿಕೆ ಶಿವಕುಮಾರ್ ವಿವಾದಾತ್ಮಕ ಹೇಳಿಕೆ. appeared first on Good News 24x7.

]]>

ಬೆಂಗಳೂರು: ಮೈಸೂರು ದಸರಾ ಉತ್ಸವಕ್ಕೆ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಸ್ತಾಕ್ ಅವರನ್ನು ಆಹ್ವಾನ ನೀಡಿರುವ ವಿಚಾರವನ್ನು ಪ್ರತಿಸ್ಪಂದಿಸಿದ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, “ಚಾಮುಂಡಿಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ” ಎಂಬ ಹೇಳಿಕೆಯಿಂದ ವಿವಾದ ಕೆರಳಿಸಿದ್ದಾರೆ.

“ಅದು ಅವರ (ಬಾನು ಮುಸ್ತಾಕ್) ನಂಬಿಕೆ. ನಾವು ಮಸೀದಿ, ಜೈನ್ ದೇವಸ್ಥಾನ, ಗುರುದ್ವಾರಗಳಿಗೆ ಹೋಗುತ್ತೇವೆ. ಹಾಗೆಂದು ಯಾರಾದರೂ ನಮ್ಮನ್ನು ತಡೆಯುತ್ತಾರಾ? ಮುಸ್ಲಿಮರು ಹಿಂದೂಗಳಾಗಲ್ವಾ? ಹಿಂದೂಗಳು ಮುಸ್ಲಿಂ ಆಗಲ್ವಾ?” ಎಂದು ಅವರು ಪ್ರಶ್ನಿಸಿದರು.

“ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಯಾರಿಗೂ ತಡೆ ಇಲ್ಲ. ಹಿಂದೂ ದೇವಾಲಯಗಳಿಗೆ ಹಲವಾರು ಧರ್ಮಗಳವರು ಭೇಟಿ ಕೊಡುತ್ತಾರೆ. ಇದು ಸಂವಿಧಾನಪಾಲನೆಯ ರಾಷ್ಟ್ರ. ಮದುವೆಯಾದ ದಂಪತಿಗಳಲ್ಲಿ ಧರ್ಮ ಕಲ್ಪನೆ ಬೇರೆ ಬೇರೆ ಆಗಬಹುದು, ಆದರೆ ಮಕ್ಕಳಿಗೆ ಆಯ್ಕೆಯಿರಬೇಕು,” ಎಂದು ಅವರು ತಿಳಿಸಿದರು.

“ಬಾನು ಮುಸ್ತಾಕ್ ಕನ್ನಡದಲ್ಲಿ ಬರೆದಿದ್ದಾರೆ. ಯಾರು ಯಾವ ಧರ್ಮದವರು ಎಂದು ನಾವು ಪ್ರಶ್ನೆ ಮಾಡುವಲ್ಲ. ನಾವು ಧರ್ಮದ ಮೇಲೆ ರಾಜಕಾರಣ ಮಾಡುವುದಿಲ್ಲ; ನಾವು ಜಾತ್ಯಾತೀತ ತತ್ವಗಳಲ್ಲಿ ನಂಬಿಕೆ ಇಡುವವರು,” ಎಂದು ಡಿಕೆಶಿ ಹೇಳಿದ್ದಾರೆ.

ಡಿಕೆಶಿಯ ಹೇಳಿಕೆಗೆ ಯದುವೀರ್ ಕಿರಿಆಲಿಸಿ

ಮೈಸೂರು: “ಚಾಮುಂಡಿಬೆಟ್ಟ ಹಿಂದೂಗಳ ಆಸ್ತಿಯಲ್ಲ” ಎಂಬ ಡಿಕೆಶಿಯ ಹೇಳಿಕೆಯನ್ನು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರವಾಗಿ ಖಂಡಿಸಿದ್ದಾರೆ.

ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ ಅವರು, “ಗೌರಿ ಹಬ್ಬದ ಪವಿತ್ರ ದಿನವೇ ಇಂತಹ ಹೇಳಿಕೆ ನೀಡಿ ಅವರು ಹಿಂದೂ ಸಂಪ್ರದಾಯ ಮತ್ತು ನಂಬಿಕೆಗಳಿಗೆ ಧಕ್ಕೆಯಾಗುವ ಕೆಲಸ ಮಾಡಿದ್ದಾರೆ. ಚಾಮುಂಡಿಬೆಟ್ಟವು ಶಕ್ತಿ ಪೀಠವಾಗಿದ್ದು ಶಾಸ್ತ್ರಸಮ್ಮತವಾಗಿದೆ. ಕೋಟ್ಯಂತರ ಹಿಂದೂಗಳು ಪೂಜಿಸುವ ಈ ಸ್ಥಳ ಯಾವಾಗಲೂ ಹಿಂದೂಗಳ ಆಸ್ತಿಯಾಗಿಯೇ ಇರುತ್ತದೆ,” ಎಂದು ಹೇಳಿದ್ದಾರೆ.

“ಕರ್ನಾಟಕದ ಜನರು ಎಲ್ಲಾ ಧರ್ಮಗಳಿಗೆ ಗೌರವವಿಡುತ್ತಾರೆ. ಆದರೆ ಹಿಂದೂ ದೇವಾಲಯಗಳು, ಹಬ್ಬಗಳು ಮತ್ತು ಸಂಪ್ರದಾಯಗಳ ಮೇಲಿನ ನಿರಂತರ ದಾಳಿಯನ್ನು ಎಂದಿಗೂ ಸಹಿಸಲಾರರು,” ಎಂದು ಯದುವೀರ್ ಎಚ್ಚರಿಸಿದ್ದಾರೆ.

The post ಚಾಮುಂಡಿಬೆಟ್ಟ ಹಿಂದೂ ಧರ್ಮದ ಆಸ್ತಿಯಲ್ಲ: ಡಿಕೆ ಶಿವಕುಮಾರ್ ವಿವಾದಾತ್ಮಕ ಹೇಳಿಕೆ. appeared first on Good News 24x7.

]]>
ಅಮೆರಿಕನ್ ಡೈಮಂಡ್​ನಿಂದ ತಯಾರಾದ ವಿಶೇಷ ಗಣಪ.. ಇದರ ಬೆಲೆ ಎಷ್ಟು ಗೊತ್ತಾ? https://www.goodnews24x7.com/special-ganesha-idol-made-from-american-diamond-do-you-know-how-much-it-costs/ Sun, 24 Aug 2025 06:26:21 +0000 https://www.goodnews24x7.com/?p=6629 ‘‘ಗಣಪತಿ ಬಪ್ಪ ಮೋರೆಯಾ ಮಂಗಳ ಮೂರ್ತಿ ಮೋರೆಯಾ’’ ಇನ್ನೇನೂ ಗೌರಿ ಗಣೇಶ ಹಬ್ಬ ಬಂದೇಬಿಡ್ತು. ಎಲ್ಲೆಲ್ಲೂ ಶುರು ವಿನಾಯಕನ ಸಂಭ್ರಮ. ಹಬ್ಬಕ್ಕೆ ಇನ್ನು ಒಂದು ವಾರ ಇರುವಾಗಲೇ ಸಿಲಿಕಾನ್​ ಸಿಟಿಗೆ ಮುಂಬೈನಿಂದ ಗಣಪ ಬಂದಿದ್ದಾನೆ.ಮುಂಬೈ ಹಾಗೂ ಸೊಲ್ಲಾಪುರ ಕುಶಲಕರ್ಮಿಗಳಿಂದ 30 ದಿನಗಳಿಂದ…

The post ಅಮೆರಿಕನ್ ಡೈಮಂಡ್​ನಿಂದ ತಯಾರಾದ ವಿಶೇಷ ಗಣಪ.. ಇದರ ಬೆಲೆ ಎಷ್ಟು ಗೊತ್ತಾ? appeared first on Good News 24x7.

]]>

‘‘ಗಣಪತಿ ಬಪ್ಪ ಮೋರೆಯಾ ಮಂಗಳ ಮೂರ್ತಿ ಮೋರೆಯಾ’’ ಇನ್ನೇನೂ ಗೌರಿ ಗಣೇಶ ಹಬ್ಬ ಬಂದೇಬಿಡ್ತು. ಎಲ್ಲೆಲ್ಲೂ ಶುರು ವಿನಾಯಕನ ಸಂಭ್ರಮ. ಹಬ್ಬಕ್ಕೆ ಇನ್ನು ಒಂದು ವಾರ ಇರುವಾಗಲೇ ಸಿಲಿಕಾನ್​ ಸಿಟಿಗೆ ಮುಂಬೈನಿಂದ ಗಣಪ ಬಂದಿದ್ದಾನೆ.ಮುಂಬೈ ಹಾಗೂ ಸೊಲ್ಲಾಪುರ ಕುಶಲಕರ್ಮಿಗಳಿಂದ 30 ದಿನಗಳಿಂದ ಸಿದ್ಧಗೊಂಡ ಚಾಮರ ಕರ್ಣನ ರೂಪ ಎಷ್ಟು ಅದ್ಭುತವಾಗಿದೆ ಅಲ್ವಾ. ಬರೋಬ್ಬರಿ 12 ಲಕ್ಷ ಖರ್ಚು ಮಾಡಿ ಅಮೆರಿಕನ್ ಡೈಮಂಡ್​ನಿಂದ ಈ ಗಣಪತಿಯನ್ನ ತಯಾರಿಸಲಾಗಿದೆ. ಆರು ಅಡಿ ಎತ್ತರದ ಬಹಳ ವಿಶೇಷವಾದ ಗಣಪ ಮೂರ್ತಿ ಇದಾಗಿದ್ದು, ಮಿಲ್ಕ್ ಕಾಲೋನಿಯ ಸ್ವಸ್ತಿಕ್ ಯುವಕರ ಸಂಘದಿಂದ 40ನೇ ವರ್ಷದ ಗಣಪತಿ ಉತ್ಸವಕ್ಕೆ ಇದನ್ನ ಸಿದ್ಧಪಡಿಸಲಾಗಿದೆ.

ಲಂಬೋದರನ ಮೂರ್ತಿಯಷ್ಟೇ ವಿಶೇಷವಾಗಿಲ್ಲ. ಈತ ಕೂರುವ ಮಂಟಪ ಕೂಡ ಅಷ್ಟೇ ವೈಶಿಷ್ಟ್ಯತೆಯಿಂದ ಕೂಡಿದೆ. ಬರೀ ಮಂಟಪಕ್ಕೇನೇ 30 ಲಕ್ಷ ವೆಚ್ಚ ಮಾಡಲಾಗಿದೆ. ಕಳೆದ ವರ್ಷ ‘ಕೈಲಾಸನಾಥ ದೇವಸ್ಥಾನ’ ಹೋಲುವ ಮಂಟಪ ನಿರ್ಮಾಣ ಮಾಡಿದ್ರು. ಈ ಬಾರಿ ವಾರಣಾಸಿಯ ‘ಕಾಶಿವಿಶ್ವನಾಥ ದೇವಾಲಯ’ ಹೋಲುವ ಮಂಟಪ ಸಿದ್ಧಪಡಿಸಲಾಗ್ತಾಯಿದೆ.
ಆಗಸ್ಟ್ 27ನೇ ತಾರೀಖಿನಿಂದ ಸೆಪ್ಟೆಂಬರ್ 5ನೇ ತಾರೀಖಿನವರೆಗೂ ಗಣೇಶನ ಹಬ್ಬ ಆಚರಣೆಗೆ ಸ್ವಸ್ತಿಕ್ ಯುವಕರ ಸಂಘ ಸಜ್ಜಾಗಿದೆ. ಅದೇನೇ ಹೇಳಿ ನಗರದಲ್ಲಿ ವೆರೈಟಿ ವೆರೈಟಿ ಗಣಾಧ್ಯಕ್ಷನ ದರ್ಶನ ಆಗೋದಂತು ಪಕ್ಕ. ಸುಮುಖನ ಸಂಭ್ರಮಕ್ಕೆ ಕೌಂಟ್​ಡೌನ್​ ಶುರು.g

The post ಅಮೆರಿಕನ್ ಡೈಮಂಡ್​ನಿಂದ ತಯಾರಾದ ವಿಶೇಷ ಗಣಪ.. ಇದರ ಬೆಲೆ ಎಷ್ಟು ಗೊತ್ತಾ? appeared first on Good News 24x7.

]]>
ರಾಜ್ಯದ 36 ಸಾವಿರ ದೇಗುಲಗಳಲ್ಲಿ ಪ್ಲಾಸ್ಟಿಕ್ ಬ್ಯಾನ್ ! https://www.goodnews24x7.com/plastic-ban-in-36-thousand-temples-of-the-state/ Mon, 18 Aug 2025 06:45:40 +0000 https://www.goodnews24x7.com/?p=6318 ಬೆಂಗಳೂರು, ಆ.17– ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ಒಟ್ಟು 36 ಸಾವಿರ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಲು ಅಭಿಯಾನವನ್ನು ಪ್ರಾರಂಭಿಸಲಾಗಿದೆ. ರಾಜ್ಯದ ಎಲ್ಲ…

The post ರಾಜ್ಯದ 36 ಸಾವಿರ ದೇಗುಲಗಳಲ್ಲಿ ಪ್ಲಾಸ್ಟಿಕ್ ಬ್ಯಾನ್ ! appeared first on Good News 24x7.

]]>

ಬೆಂಗಳೂರು, ಆ.17– ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ಒಟ್ಟು 36 ಸಾವಿರ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಲು ಅಭಿಯಾನವನ್ನು ಪ್ರಾರಂಭಿಸಲಾಗಿದೆ. ರಾಜ್ಯದ ಎಲ್ಲ ದೇವಾಲಯ ಇನ್ನು ಮುಂದೆ ಪ್ರಸಾದ ವಿತರಣೆಗೆ ಅಥವಾ ಯಾವುದೇ ಉದ್ದೇಶಕ್ಕಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವಂತಿಲ್ಲ. ಆ.15 ರಿಂದಲೇ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೆ ತರಲಾಗಿದ್ದು, ಆ. 17 ರಂದು ಅಧಿಕೃತವಾಗಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ನೇತೃತ್ವದಲ್ಲಿ, ಬಸವನಗುಡಿಯ ದೊಡ್ಡಗಣಪತಿ ದೇವಾ ಲಯದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ರವಿ ಸುಬ್ರಮಣ್ಯ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಅವುಗಳು ಪರಿಸರ ಸ್ವಚ್ಛತೆಯ ಸಂಕೇತವೂ ಆಗಬೇಕು. ಈ ಅಭಿಯಾನದ ಮೂಲಕ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು. ಈ ಕ್ರಮವು ಪರಿಸರ ಸಂರಕ್ಷಣೆಗೆ ದೊಡ್ಡ ಮಟ್ಟದಲ್ಲಿ ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ರಾಜ್ಯದ 36,000 ಮುಜರಾಯಿ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಬೌಲ್, ಪ್ಲಾಸ್ಟಿಕ್ ತಟ್ಟೆ ಮತ್ತು ಪ್ಲಾಸ್ಟಿಕ್ ಬ್ಯಾಗ್‌ಗಳಂತಹ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇನ್ಮುಂದೆ ಪ್ರಸಾದವನ್ನು ಪ್ಲಾಸ್ಟಿಕ್ ತಟ್ಟೆ ಅಥವಾ ಲೋಟದಲ್ಲಿ ನೀಡುವಂತಿಲ್ಲ. ದೇವಾಲಯಗಳು ಪರ್ಯಾಯ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕಿದೆ.

‘ಪರಿಸರ ಉಳಿಸಿ, ಪರಿಸರ ಬೆಳೆಸಿ’ ಎಂಬ ಧೈಯ ವಾಕ್ಯದೊಂದಿಗೆ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳಲ್ಲಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಲಾಗುವುದು.

ಒಂದು ವೇಳೆ, ಯಾವುದೇ ದೇವಾಲಯದಲ್ಲಿ ಈ ನಿಯಮವನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ವಸ್ತುಗಳು ಕಂಡುಬಂದರೆ, ಆಯಾ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು
ಸೂಚನೆ ನೀಡಲಾಗಿದೆ.

The post ರಾಜ್ಯದ 36 ಸಾವಿರ ದೇಗುಲಗಳಲ್ಲಿ ಪ್ಲಾಸ್ಟಿಕ್ ಬ್ಯಾನ್ ! appeared first on Good News 24x7.

]]>
ಕೊನೆಗೂ ಫಲಿಸಲಿಲ್ಲ ದಾಸನ ಪೂಜಾ ಫಲ! ವರ್ಕೌಟ್ ಆಗಲೇ ಇಲ್ಲ ದರ್ಶನ್ ಮಾಡಿದ ಟೆಂಪಲ್ ರನ್! https://www.goodnews24x7.com/finally-the-results-of-dasanas-puja-did-not-bear-fruit-darshans-temple-run-did-not-even-work-out/ Thu, 14 Aug 2025 09:37:19 +0000 https://www.goodnews24x7.com/?p=6122 ಕನ್ನಡದ ಖ್ಯಾತ ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದರು. ನಂತರ ಆರೋಗ್ಯ ಸಮಸ್ಯೆಯ ಕಾರಣ ಕೊಟ್ಟು ಮಧ್ಯಂತರ ಜಾಮೀನು ಸಹ ಪಡೆದು ಹೊರಬಂದಿದ್ರು. ದರ್ಶನ್ ಹೊರಬಂದವರೇ ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿ ಟೆಂಪಲ್ ರನ್ ಸಹ…

The post ಕೊನೆಗೂ ಫಲಿಸಲಿಲ್ಲ ದಾಸನ ಪೂಜಾ ಫಲ! ವರ್ಕೌಟ್ ಆಗಲೇ ಇಲ್ಲ ದರ್ಶನ್ ಮಾಡಿದ ಟೆಂಪಲ್ ರನ್! appeared first on Good News 24x7.

]]>

ಕನ್ನಡದ ಖ್ಯಾತ ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದರು. ನಂತರ ಆರೋಗ್ಯ ಸಮಸ್ಯೆಯ ಕಾರಣ ಕೊಟ್ಟು ಮಧ್ಯಂತರ ಜಾಮೀನು ಸಹ ಪಡೆದು ಹೊರಬಂದಿದ್ರು. ದರ್ಶನ್ ಹೊರಬಂದವರೇ ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿ ಟೆಂಪಲ್ ರನ್ ಸಹ ಮಾಡಿದ್ರು

ಚಾಮುಂಡಿ ಬೆಟ್ಟ, ಕೇರಳದ ಕೊಟ್ಟಿಯೂರು ಅಷ್ಟೇ ಅಲ್ಲದೆ ನಿನ್ನೆ ಸಹ ಬನ್ನಾರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ . ಆದರೆ ಎಷ್ಟೇ ದೇವಸ್ಥಾನ ಸುತ್ತಿದ್ರು ಸಹ ಫಲಿಸಲಿಲ್ಲ ದರ್ಶನ್ ಪೂಜಾ ಫಲ, ಕೊನೆಗೂ ಜಾಮೀನು ಅರ್ಜಿ ರದ್ದು ಮಾಡೇ ಬಿಡ್ತು ಸುಪ್ರೀಂ ಕೋರ್ಟ್ .

ಹೌದು ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದ ನಂತರ ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿ ಶತ್ರು ಸಂಹಾರ ಯಾಗ ಸಹ ಮಾಡ್ಸಿದ್ರು , ಆದ್ರೆ ಯಾವುದೇ ಶತ್ರು ಸಂಹಾರ ಯಾಗವಾಗಲಿ ವಿಶೇಷ ಪೂಜೆಯಾಗಲಿ ದರ್ಶನ್ ಕೈ ಹಿಡಿದಿಲ್ಲ. ಕೊಲೆ ಪ್ರಕರಣದಿಂದ ಪಾರಾಗಲು ದರ್ಶನ್ ಮಾಡಿದಂತಹ ಟೆಂಪಲ್ ರನ್ ವರ್ಕ್ ಔಟ್ ಆಗ್ಲೇ ಇಲ್ಲ.
ಯಾವುದೇ ಮುಲಾಜಿಲ್ಲದೆ ದರ್ಶನ್ ಅವರ ಜಾಮೀನು ಅರ್ಜಿಯನ್ನು ರದ್ದು ಮಾಡಿದೆ ಸುಪ್ರೀಂ ಕೋರ್ಟ್ . ಈ ಹಿನ್ನಲೆ ಮತ್ತೆ ಜೈಲು ಪಾಲಾಗಿದ್ದಾರೆ ದಾಸ. ದರ್ಶನ್ ಅವರ ದೈವಭಕ್ತಿ ಫಲ ನೀಡದೆ ಕಾನೂನು ಎಂಬ ದೇವರ ಮುಂದೆ ಕೊನೆಗೂ ತಲೆಬಾಗಲೇಬೇಕಿದೆ ಡಿ ಬಾಸ್…

The post ಕೊನೆಗೂ ಫಲಿಸಲಿಲ್ಲ ದಾಸನ ಪೂಜಾ ಫಲ! ವರ್ಕೌಟ್ ಆಗಲೇ ಇಲ್ಲ ದರ್ಶನ್ ಮಾಡಿದ ಟೆಂಪಲ್ ರನ್! appeared first on Good News 24x7.

]]>