train Archives - Good News 24x7 https://www.goodnews24x7.com/tag/train/ Kannada Fri, 26 Jun 2026 06:26:54 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg train Archives - Good News 24x7 https://www.goodnews24x7.com/tag/train/ 32 32 ನಮ್ಮ ಮೆಟ್ರೋ ರೈಲು ಮತ್ತೆ ಕೈಕೊಟ್ಟಿದ್ದೇಕೆ? ? https://www.goodnews24x7.com/why-did-our-metro-train-give-up-again/ Fri, 26 Jun 2026 06:25:26 +0000 https://www.goodnews24x7.com/?p=9667 ಗುರುವಾರ ಸಂಜೆ ನಮ್ಮ ಮೆಟ್ರೋದ ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರೈಲಿನ ಬಾಗಿಲು ಮುಚ್ಚದ ಕಾರಣ ಮೆಟ್ರೋ ಸೇವೆ ಸ್ಥಗಿತಗೊಂಡಿದ್ದ ಘಟನೆಗೆ ಅಸಲಿ ಕಾರಣ ಬಯಲಾಗಿದೆ. ಪ್ರಯಾಣಿಕರೊಬ್ಬರ ಲೋಹದ ಸರ ಬಾಗಿಲಿನ ಗೈಡ್‌ವೇನಲ್ಲಿ ಸಿಲುಕಿಕೊಂಡಿದ್ದರಿಂದ ಈ ತಾಂತ್ರಿಕ ವ್ಯತ್ಯಯ ಉಂಟಾಗಿತ್ತು…

The post ನಮ್ಮ ಮೆಟ್ರೋ ರೈಲು ಮತ್ತೆ ಕೈಕೊಟ್ಟಿದ್ದೇಕೆ? ? appeared first on Good News 24x7.

]]>

ಗುರುವಾರ ಸಂಜೆ ನಮ್ಮ ಮೆಟ್ರೋದ ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರೈಲಿನ ಬಾಗಿಲು ಮುಚ್ಚದ ಕಾರಣ ಮೆಟ್ರೋ ಸೇವೆ ಸ್ಥಗಿತಗೊಂಡಿದ್ದ ಘಟನೆಗೆ ಅಸಲಿ ಕಾರಣ ಬಯಲಾಗಿದೆ. ಪ್ರಯಾಣಿಕರೊಬ್ಬರ ಲೋಹದ ಸರ ಬಾಗಿಲಿನ ಗೈಡ್‌ವೇನಲ್ಲಿ ಸಿಲುಕಿಕೊಂಡಿದ್ದರಿಂದ ಈ ತಾಂತ್ರಿಕ ವ್ಯತ್ಯಯ ಉಂಟಾಗಿತ್ತು ಎಂದು ಬಿಎಂಆರ್‌ಸಿಎಲ್ ತನ್ನ ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಿದೆ.

ಪರ್ಪಲ್ ಲೈನ್ ಮೆಟ್ರೋ ರೈಲು ಹಾಗೂ ರೈಲಿನ ಬಾಗಿಲಿನ ಡೋರ್ ಗೈಡ್‌ವೇ ಯಲ್ಲಿ ಸಿಲುಕಿಕೊಂಡಿದ್ದ ಲೋಹದ ಸರ

ರೈಲಿನಲ್ಲಿ ಯಾವುದೇ ತಾಂತ್ರಿಕ ದೋಷವಿಲ್ಲ
ಬಾಗಿಲಿನಲ್ಲಿ ಸಿಲುಕಿತ್ತು ಲೋಹದ ಸರ
ಬಿಎಂಆರ್​ಸಿಎಲ್ ಪ್ರಾಥಮಿಕ ತನಿಖಾ ವರದಿಯಲ್ಲಿ ಬಯಲು

ಜೂನ್ 26 ,ಬೆಂಗಳೂರು : ನಮ್ಮ ಮೆಟ್ರೋದ ನೇರಳೆ ಮಾರ್ಗದ (Purple Line) ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಗುರುವಾರ ಸಂಜೆ ರೈಲಿನ ಬಾಗಿಲು ಮುಚ್ಚದೆ ಪ್ರಯಾಣಿಕರು ಆತಂಕಗೊಂಡಿದ್ದ ಮತ್ತು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ರೈಲಿನಲ್ಲಿ ಯಾವುದೇ ತಾಂತ್ರಿಕ ದೋಷ ಇರಲಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಎಂಆರ್‌ಸಿಎಲ್, ಘಟನೆಗೆ ಕಾರಣವಾದ ಅಸಲಿ ಸತ್ಯವನ್ನು ಬಿಚ್ಚಿಟ್ಟಿದೆ.

ಡೋರ್ ಗೈಡ್‌ವೇನಲ್ಲಿ ಸಿಲುಕಿದ್ದ ಮೆಟಲ್ ಚೈನ್
ಗುರುವಾರ ಸಂಜೆ 7:36 ರ ಸುಮಾರಿಗೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಬಾಗಿಲು ಸರಿಯಾಗಿ ಮುಚ್ಚದ ಕಾರಣ ಮುಂಜಾಗ್ರತಾ ಕ್ರಮವಾಗಿ ಸಂಜೆ 7:54 ರವರೆಗೆ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿತ್ತು.

ಕಾರಣ ಪತ್ತೆ ಹಚ್ಚಿದ ಬಿಎಂಆರ್​ಸಿಎಲ್ ನಿರ್ವಹಣಾ ತಂಡ
ಈ ಘಟನೆಯ ಬೆನ್ನಲ್ಲೇ ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ಜಂಟಿಯಾಗಿ ಸಮಗ್ರ ಪ್ರಾಥಮಿಕ ತನಿಖೆ ನಡೆಸಿದ್ದು, ಪ್ರಯಾಣಿಕರೊಬ್ಬರ ಲೋಹದ ಸರ ರೈಲಿನ ಬಾಗಿಲಿನ ಡೋರ್ ಗೈಡ್‌ವೇ ಯಲ್ಲಿ ಸಿಲುಕಿಕೊಂಡಿದ್ದನ್ನು ಪತ್ತೆ ಹಚ್ಚಿವೆ. ಇದರಿಂದಾಗಿಯೇ ಬಾಗಿಲುಗಳು ಸ್ವಯಂಚಾಲಿತವಾಗಿ ಲಾಕ್ ಆಗಲು ಸಾಧ್ಯವಾಗಿರಲಿಲ್ಲ ಎಂದು ವರದಿ ತಿಳಿಸಿದೆ.

ಪ್ರಯಾಣಿಕರ ಸುರಕ್ಷತೆಯೇ ನಮ್ಮ ಆದ್ಯತೆ ಬಿಎಂಆರ್‌ಸಿಎಲ್

ರೈಲು ಹಾಗೂ ಅದರ ಬಾಗಿಲಿನ ವ್ಯವಸ್ಥೆಯನ್ನು ಸಮಗ್ರವಾಗಿ ತಾಂತ್ರಿಕ ಪರಿಶೀಲನೆಗೆ ಒಳಪಡಿಸಿದ ನಂತರ, ರೈಲಿನ ಉಪಕರಣಗಳಲ್ಲಿ ಯಾವುದೇ ರೀತಿಯ ದೋಷ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ‘ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಯೇ ಬಿಎಂಆರ್‌ಸಿಎಲ್‌ಗೆ ಅತ್ಯುನ್ನತ ಆದ್ಯತೆಯಾಗಿದೆ. ಸಾರ್ವಜನಿಕರಿಗೆ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ನಿರಂತರ ಮೆಟ್ರೋ ಸೇವೆಗಳನ್ನು ಒದಗಿಸಲು ನಾವು ಸದಾ ಬದ್ಧರಾಗಿದ್ದೇವೆ’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕರು ಮೆಟ್ರೋ ಹತ್ತುವಾಗ ಮತ್ತು ಇಳಿಯುವಾಗ ತಮ್ಮ ಬ್ಯಾಗ್ ಹಾಗೂ ಸರಗಳಂತಹ ವಸ್ತುಗಳ ಬಗ್ಗೆ ಎಚ್ಚರ ವಹಿಸುವುದು ಅವಶ್ಯಕವಾಗಿದೆ.

The post ನಮ್ಮ ಮೆಟ್ರೋ ರೈಲು ಮತ್ತೆ ಕೈಕೊಟ್ಟಿದ್ದೇಕೆ? ? appeared first on Good News 24x7.

]]>
ವಂದೇ ಭಾರತ್ ಟ್ರೈನ್ ಪ್ರಯಾಣಿಕರಿಗೆ ಗುಡ್ ನ್ಯೂಸ್! https://www.goodnews24x7.com/good-news-for-vande-bharat-train-passengers/ Mon, 04 Aug 2025 10:54:32 +0000 https://www.goodnews24x7.com/?p=5314 ವಂದೇ ಭಾರತ್ ಟ್ರೇನ್ ಗಳು ನಿಮ್ಮ ರೈಲ್ವೇ ನಿಲ್ದಾಣಕ್ಕೆ ಬರುವ 15 ನಿಮಿಷ ಮುಂಚೆ ವಂದೇ ಭಾರತ್ ಟ್ರೇನ್ ಟಿಕೆಟ್ ಬುಕ್ ಮಾಡಬಹುದು. ದಕ್ಷಿಣ ರೈಲ್ವೇಯ 8 ವಂದೇ ಭಾರತ್ ಟ್ರೇನ್ ಗಳಲ್ಲಿ ಈ ಸೌಲಭ್ಯವನ್ನು ಪ್ರಯಾಣಿಕರಿಗೆ ನೀಡಲಾಗಿದೆ. ಇನ್ನೂ ಮುಂದೆ…

The post ವಂದೇ ಭಾರತ್ ಟ್ರೈನ್ ಪ್ರಯಾಣಿಕರಿಗೆ ಗುಡ್ ನ್ಯೂಸ್! appeared first on Good News 24x7.

]]>

ವಂದೇ ಭಾರತ್ ಟ್ರೇನ್ ಗಳು ನಿಮ್ಮ ರೈಲ್ವೇ ನಿಲ್ದಾಣಕ್ಕೆ ಬರುವ 15 ನಿಮಿಷ ಮುಂಚೆ ವಂದೇ ಭಾರತ್ ಟ್ರೇನ್ ಟಿಕೆಟ್ ಬುಕ್ ಮಾಡಬಹುದು. ದಕ್ಷಿಣ ರೈಲ್ವೇಯ 8 ವಂದೇ ಭಾರತ್ ಟ್ರೇನ್ ಗಳಲ್ಲಿ ಈ ಸೌಲಭ್ಯವನ್ನು ಪ್ರಯಾಣಿಕರಿಗೆ ನೀಡಲಾಗಿದೆ.

ಇನ್ನೂ ಮುಂದೆ ನೀವು ವಂದೇ ಭಾರತ್ ಟ್ರೇನ್ ನಲ್ಲಿ ಸಂಚಾರ ಮಾಡಲು ಒಂದು ತಿಂಗಳು, 15 ದಿನ ಮುಂಚಿತವಾಗಿ ಟಿಕೆಟ್ ಬುಕ್ ಮಾಡುವ ಅಗತ್ಯವಿಲ್ಲ. ಟ್ರೇನ್ ನಿಮ್ಮ ರೈಲ್ವೇ ನಿಲ್ದಾಣಕ್ಕೆ ಬರುವ 15 ನಿಮಿಷ ಮುಂಚಿತವಾಗಿ ಟ್ರೇನ್ ಟಿಕೆಟ್ ಬುಕ್ ಮಾಡಬಹುದು.
ದಕ್ಷಿಣ ರೈಲ್ವೇಯ ಆಯ್ದ ಎಂಟು ವಂದೇ ಭಾರತ್ ಟ್ರೇನ್ ಗಳಿಗೆ ಈ ಸೌಲಭ್ಯವನ್ನು ರೈಲ್ವೇ ಇಲಾಖೆ ನೀಡಿದೆ. ಈ ಮೊದಲು, ವಂದೇ ಭಾರತ್ ಟ್ರೇನ್ ತನ್ನ ಮೊದಲು ರೈಲ್ವೇ ಸ್ಟೇಷನ್ ನಿಂದ ಹೊರಟ ಬಳಿಕ ಆ ಮಾರ್ಗದ ಸ್ಟೇಷನ್ ಗಳಲ್ಲಿ ವಂದೇ ಭಾರತ್ ಟ್ರೇನ್ ನಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶವೇ ಇರಲಿಲ್ಲ.

https://www.youtube.com/live/qagANuO90ZQ?si=-N-KgicfDBPGbD3K JDS ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಹಿರಿಯೂರು

ಆದರೇ, ಈಗ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ ಅನ್ನು ಅಪ್ ಡೇಟ್ ಮಾಡಿರುವುದರಿಂದ ಖಾಲಿ ಇರುವ ಸೀಟುಗಳನ್ನು, ವಂದೇ ಭಾರತ್ ಟ್ರೇನ್ , ತಮ್ಮ ನಿಲ್ದಾಣಕ್ಕೆ ಬರುವ 15 ನಿಮಿಷಗಳ ಮುಂಚೆ ಕೂಡ ಬುಕ್ ಮಾಡಲು ಅವಕಾಶ ಕೊಡಲಾಗಿದೆ. ವಂದೇ ಭಾರತ್ ಟ್ರೇನ್ ಸಂಚರಿಸುವ ಮಾರ್ಗದ ಯಾವುದೇ ಸ್ಟೇಷನ್ ನಿಂದ ಬೇಕಾದರೂ ಹೊರಡಲು 15 ನಿಮಿಷಗಳ ಮುಂಚೆ ಟ್ರೇನ್ ಟಿಕೆಟ್ ಬುಕ್ ಮಾಡಿ ಟ್ರೇನ್ ನಲ್ಲಿ ಸಂಚಾರ ಮಾಡಬಹುದು.
ಯಾವ್ಯಾವ ವಂದೇ ಭಾರತ್ ಟ್ರೇನ್ ಗಳಲ್ಲಿ ಈ ಸೌಲಭ್ಯ ಇದೆ?
ದಕ್ಷಿಣ ರೈಲ್ವೇಯು ಸದ್ಯಕ್ಕೆ ಎಂಟು ವಂದೇ ಭಾರತ್ ಟ್ರೇನ್ ಗಳಲ್ಲಿ 15 ನಿಮಿಷ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಅವಕಾಶ ಕೊಟ್ಟಿದೆ. ಆ ವಂದೇ ಭಾರತ್ ಟ್ರೇನ್ ಗಳು ಯಾವ್ಯಾವು? ಯಾವ್ಯಾವ ಮಾರ್ಗದಲ್ಲಿ ವಂದೇ ಭಾರತ್ ಟ್ರೇನ್ ಗಳು ಸಂಚಾರ ಮಾಡುತ್ತಾವೆ ಅನ್ನೋ ವಿವರ ಇಲ್ಲಿದೆ ಓದಿ.

20631- ಮಂಗಳೂರು ಸೆಂಟ್ರಲ್- ತಿರುವನಂತಪುರ ಸೆಂಟ್ರಲ್
20632- ತಿರುವನಂತಪುರ ಸೆಂಟ್ರಲ್- ಮಂಗಳೂರು ಸೆಂಟ್ರಲ್
20646-ಮಂಗಳೂರು ಸೆಂಟ್ರಲ್- ಮಡಗಾಂವ್
20642-ಕೊಯಮತ್ತೂರು- ಬೆಂಗಳೂರು ಕಂಟೋನ್ ಮೆಂಟ್
20671-ಮಧುರೈ- ಬೆಂಗಳೂರು ಕಂಟೋನ್ ಮೆಂಟ್
20627-ಚೆನ್ನೈ ಎಗ್ಮೋರ್–ನಾಗರಕೋಯೀಲ್
20628- ನಾಗರಕೋಯೀಲ್- ಚೆನ್ನೈ ಎಗ್ಮೋರ್
20677–ಡಾ.ಎಂಜಿಆರ್‌ ಚೆನ್ನೈ ಸೆಂಟ್ರಲ್–ವಿಜಯವಾಡ

ದೇಶದಲ್ಲಿ ವಂದೇ ಭಾರತ್ ಟ್ರೇನ್ ಗಳ ಜನಪ್ರಿಯತೆ ಹೆಚ್ಚಾಗುತ್ತಿದೆ. ಸಾಮಾನ್ಯ ಟ್ರೇನ್ ಗಳಿಗಿಂತ ಹೆಚ್ಚು ಕಂಫರ್ಟ್, ಕ್ಲೀನ್ ನೆಸ್, ಸ್ಪೀಡ್, ಲಕ್ಷುರಿ ಪ್ರಯಾಣಕ್ಕಾಗಿ ಜನರು ವಂದೇ ಭಾರತ್ ಟ್ರೇನ್ ಗಳಲ್ಲಿ ಸಂಚಾರವನ್ನು ಇಷ್ಟಪಡುತ್ತಿದ್ದಾರೆ. ಹೀಗಾಗಿ ವಂದೇ ಭಾರತ್ ಟ್ರೇನ್ ಗಳ ಸೀಟುಗಳನ್ನು ಸಂಪೂರ್ಣವಾಗಿ ಪ್ರಯಾಣಿಕರಿಗೆ ಬಳಸಿಕೊಳ್ಳುವ ಉದ್ದೇಶದಿಂದ ಕೊನೆಯ 15 ನಿಮಿಷದವರೆಗೂ ಟಿಕೆಟ್ ಬುಕ್ ಮಾಡಲು ಈಗ ಅವಕಾಶ ಕೊಡಲಾಗಿದೆ. ಜೊತೆಗೆ ಸಡನ್ನಾಗಿ ಪ್ರಯಾಣ ಮಾಡಲು ರೈಲ್ವೇ ಸ್ಟೇಷನ್ ಗೆ ಬರುವವರಿಗೂ ಕೊನೆಯ 15 ನಿಮಿಷಗಳಲ್ಲಿ ಟ್ರೇನ್ ಟಿಕೆಟ್ ತಗೊಂಡು ವಂದ್ ಭಾರತ್ ಟ್ರೇನ್ ನಲ್ಲಿ ಸಂಚಾರ ಮಾಡಬಹುದು. ರೈಲ್ವೇಯ ಪ್ರಯಾಣಿಕರ ಅನುಕೂಲಕ್ಕಾಗಿ ತನ್ನ ಬುಕ್ಕಿಂಗ್ ಸಿಸ್ಟಮ್ ಅನ್ನು ಪ್ಲೆಕ್ಸಿಬಲ್ ಆಗುವಂತೆ ಮಾಡಿದೆ.
ಹಾಗಂತ ವಂದೇ ಭಾರತ್ ಟ್ರೇನ್ ಗಳು ಪ್ರಯಾಣಿಕರಿಲ್ಲದೇ ಖಾಲಿ ಓಡುತ್ತಿಲ್ಲ. ವಂದೇ ಭಾರತ್ ಟ್ರೇನ್ ಗಳೆಲ್ಲಾ ಪ್ರಯಾಣಿಕರಿಂದ ಶೇ.100 ಕ್ಕೂ ಹೆಚ್ಚು ಫುಲ್ ಆಗಿವೆ. 2024-25 ರಲ್ಲಿ ವಂದೇ ಭಾರತ್ ಟ್ರೇನ್ ಗಳು ಶೇ.102 ರಷ್ಟು ಪ್ರಯಾಣಿಕರಿಂದ ಭರ್ತಿ ಆಗಿವೆ. 2025-26 ರಲ್ಲಿ ಶೇ.105 ರಷ್ಟು ಪ್ರಯಾಣಿಕರಿಂದ ಸೀಟುಗಳು ಭರ್ತಿಯಾಗಿವೆ ಎಂದು ಕೇಂದ್ರದ ರೈಲ್ವೇ ಖಾತೆ ಸಚಿವ ಅಶ್ವಿನ್ ವೈಷ್ಣವ್ ಮಾಹಿತಿ ನೀಡಿದ್ದರು.

The post ವಂದೇ ಭಾರತ್ ಟ್ರೈನ್ ಪ್ರಯಾಣಿಕರಿಗೆ ಗುಡ್ ನ್ಯೂಸ್! appeared first on Good News 24x7.

]]>
ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಬೆಂಕಿ ; 5 ಬೋಗಿಗಳು ಸುಟ್ಟು ಕರಕಲು. https://www.goodnews24x7.com/fire-in-goods-train-carrying-diesel-5-coaches-gutted/ Sun, 13 Jul 2025 06:42:04 +0000 https://www.goodnews24x7.com/?p=5070 ತಿರುವಳ್ಳೂರು : ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲು ಹಳ್ಳಿ ತಪ್ಪಿದ ಪರಿಣಾಮ, ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿ ಉರಿದ ಘಟನೆ ಇಂದು ಬೆಳಗ್ಗೆ ತಮಿಳುನಾಡಿನ ತಿರುವಳ್ಳೂರು ಬಳಿ ಸಂಭವಿಸಿದೆ. ಚೆನ್ನೈ ಬಂದರಿನಿಂದ ಡೀಸೆಲ್ ಸಾಗಿಸುತ್ತಿದ್ದ ಸರಕು ಸಾಗಣೆ ರೈಲು ತಿರುವಳ್ಳೂರು ಬಳಿ…

The post ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಬೆಂಕಿ ; 5 ಬೋಗಿಗಳು ಸುಟ್ಟು ಕರಕಲು. appeared first on Good News 24x7.

]]>

ತಿರುವಳ್ಳೂರು : ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲು ಹಳ್ಳಿ ತಪ್ಪಿದ ಪರಿಣಾಮ, ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿ ಉರಿದ ಘಟನೆ ಇಂದು ಬೆಳಗ್ಗೆ ತಮಿಳುನಾಡಿನ ತಿರುವಳ್ಳೂರು ಬಳಿ ಸಂಭವಿಸಿದೆ.

ಚೆನ್ನೈ ಬಂದರಿನಿಂದ ಡೀಸೆಲ್ ಸಾಗಿಸುತ್ತಿದ್ದ ಸರಕು ಸಾಗಣೆ ರೈಲು ತಿರುವಳ್ಳೂರು ಬಳಿ ಇದ್ದಕ್ಕಿದ್ದಂತೆ ಹಳಿತಪ್ಪಿದೆ. ಈ ವೇಳೆ ರೈಲಿನಲ್ಲಿದ್ದ ಡೀಸೆಲ್ ಟ್ಯಾಂಕರ್ನಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಧಗಧಗಿಸುತ್ತಿರುವ ಬೆಂಕಿಯ ಜ್ವಾಲೆಯ ಹಿನ್ನೆಲೆಯಲ್ಲಿ ಸುತ್ತಲೂ ದಟ್ಟ ಹೊಗೆ ಆವರಿಸಿಕೊಂಡಿತ್ತು.

ಟ್ಯಾಂಕರ್ಗಳಲ್ಲಿ ಅಪಾರ ಪ್ರಮಾಣದ ಇಂಧನ ಇರುವುದರಿಂದ ಬೆಂಕಿಯ ವ್ಯಾಪ್ತಿ ಮತ್ತಷ್ಟು ಹರಡಬಹುದು ಎಂದು ಅಧಿಕಾರಿಗಳು ಆಂತಕ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ಇದುವರೆಗೆ ಒಟ್ಟು ಐದು ಬೋಗಿಗಳು ಸಂಪೂರ್ಣವಾಗಿ ಬೆಂಕಿಯಲ್ಲಿ ಸುಟ್ಟುಕರಕಲಾಗಿವೆ.

10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸುತ್ತಿದ್ದರೂ ಬೆಂಕಿಯನ್ನು ನಂದಿಸಲು ಸಾಧ್ಯವಾಗುತ್ತಿಲ್ಲ. ಹತ್ತಿರದ ವಸತಿ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಪೊಲೀಸರು ಸ್ಥಳಾಂತರಿಸಿದ್ದಾರೆ. ಸುರಕ್ಷತಾ ಕಾರಣಗಳಿಗಾಗಿ ವಿದ್ಯುತ್ ಸರಬರಾಜು ಕೂಡ ಕಡಿತಗೊಳಿಸಲಾಗಿದೆ.

ಘಟನೆ ನಡೆದ ಸ್ಥಳದ ಸಮೀಪವಿರುವ ಮನೆಗಳಲ್ಲಿನ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರ ಮಾಡಲಾಗಿದೆ.
ಇಲ್ಲಿನ ಜಿಲ್ಲಾಧಿಕಾರಿ ಎಂ.ಪ್ರತಾಪ್ ಅವರು ಅಗ್ನಿಶಾಮಕ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಆದೇಶಿಸಿದ್ದಾರೆ. ಅಪಘಾತದಲ್ಲಿ ಇಲ್ಲಿಯವರೆಗೆ ಯಾವುದೇ ಜೀವಹಾನಿ ಸಂಭವಿಸಿದ ವರದಿಯಾಗಿಲ್ಲ. ರಕ್ಷಣಾ ಕಾರ್ಯಾಚರಣೆಗಾಗಿ ಅರಕ್ಕೋಣಂನಿಂದ ವಿಪತ್ತು ಪರಿಹಾರ ತಂಡಗಳು ಘಟನಾ ಸ್ಥಳಕ್ಕೆ ತಲುಪಿವೆ.


ರೈಲು ಸೇವೆಗಳಲ್ಲಿ ವ್ಯತ್ಯಯ: ಘಟನೆಯಿಂದ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ದಕ್ಷಿಣ ರೈಲ್ವೆ ಇಲಾಖೆಯು ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ನೀಡಿದೆ. “ತಿರುವಳ್ಳೂರು ಬಳಿ ಸಂಭವಿಸಿದ ಘಟನೆಯಿಂದ ಮುಂಜಾಗೃತವಾಗಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಬೆಂಕಿ ನಂದಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದ್ದರಿಂದ ರೈಲು ಸೇವೆಗಳಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಮಾಡಲಾಗಿದೆ” ಎಂದು ರೈಲುಗಳ ಪಟ್ಟಿಯನ್ನು ಹಂಚಿಕೊಂಡಿದೆ. ತುರ್ತು ಸಹಾಯಕ್ಕಾಗಿ ಸಹಾಯವಾಣಿ: 044-25354151, 044-24354995 ತೆರೆಯಲಾಗಿದೆ.

ಘಟನಾ ಸ್ಥಳಕ್ಕೆ NDRF ತಂಡ ಆಗಮನ: ತಿರುವಳ್ಳೂರು ಜಿಲ್ಲಾಡಳಿತದ ಮನವಿ ಮೇರೆಗೆ ರಕ್ಷಣಾ ಮತ್ತು ಬೆಂಬಲ ಕಾರ್ಯಾಚರಣೆಗಾಗಿ 50 ರಕ್ಷಣಾ ಸಿಬ್ಬಂದಿಯನ್ನು ಒಳಗೊಂಡ ಎರಡು ಎನ್ಡಿಆರ್ಎಫ್ ತಂಡಗಳನ್ನು ಘಟನಾ ಸ್ಥಳಕ್ಕೆ ಕರೆಯಿಸಲಾಗಿದೆ.

ಬೆಂಕಿ ನಂದಿಸಲು ಇನ್ನೂ ಕೆಲ ಗಂಟೆಗಳ ಅಗತ್ಯ: ತಮಿಳುನಾಡು ಸಚಿವ ಎಸ್.ಎಂ. ನಾಸರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಕರೆ ನೀಡಿದ್ದಾರೆ. ಬೆಂಕಿ ನಿಯಂತ್ರಿಸಲು ಇನ್ನೂ ಕೆಲ ಗಂಟೆಗಳು ಅಗತ್ಯವಿದೆ ಎಂದು ಜಿಲ್ಲಾಡಳಿತ ಹೇಳಿದೆ.

The post ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಬೆಂಕಿ ; 5 ಬೋಗಿಗಳು ಸುಟ್ಟು ಕರಕಲು. appeared first on Good News 24x7.

]]>
ಮೈಸೂರು-ಉದಯ್ಪುರ ಪ್ಯಾಲೇಸ್ ಕ್ವೀನ್ ಹಮ್ಸಫರ್ ಎಕ್ಸ್ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ. https://www.goodnews24x7.com/fire-accident-in-mysore-udaipur-palace-queen-humsafar-express-train/ Fri, 04 Jul 2025 07:34:48 +0000 https://www.goodnews24x7.com/?p=4885 ರಾಮನಗರ : ಮೈಸೂರು-ಉದಯ್ಪುರ ಪ್ಯಾಲೇಸ್ ಕ್ವೀನ್ ಹಮ್ಸಫರ್ ಎಕ್ಸ್ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮೈಸೂರಿನಿಂದ ಉದಯ್ಪುರಕ್ಕೆ ಹೊರಟಿದ್ದ ರೈಲು ಬೆಂಗಳೂರು ದಕ್ಷಿಣ ಜಿಲ್ಲೆಯ ಚೆನ್ನಪಟ್ಟಣದ ತಾಲೂಕಿನ ವಂದಾರಗುಪ್ಪೆ ಬಳಿ ನಿಲ್ಲಿಸಿ ಬೆಂಕಿ ನಂದಿಸಲಾಯಿತು. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್…

The post ಮೈಸೂರು-ಉದಯ್ಪುರ ಪ್ಯಾಲೇಸ್ ಕ್ವೀನ್ ಹಮ್ಸಫರ್ ಎಕ್ಸ್ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ. appeared first on Good News 24x7.

]]>

ರಾಮನಗರ : ಮೈಸೂರು-ಉದಯ್ಪುರ ಪ್ಯಾಲೇಸ್ ಕ್ವೀನ್ ಹಮ್ಸಫರ್ ಎಕ್ಸ್ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮೈಸೂರಿನಿಂದ ಉದಯ್ಪುರಕ್ಕೆ ಹೊರಟಿದ್ದ ರೈಲು ಬೆಂಗಳೂರು ದಕ್ಷಿಣ ಜಿಲ್ಲೆಯ ಚೆನ್ನಪಟ್ಟಣದ ತಾಲೂಕಿನ ವಂದಾರಗುಪ್ಪೆ ಬಳಿ ನಿಲ್ಲಿಸಿ ಬೆಂಕಿ ನಂದಿಸಲಾಯಿತು. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ.

ಅದೃಷ್ಟವಶಾತ್ ಪ್ರಯಾಣಿಕರು ಹಾಗೂ ರೈಲ್ವೆ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಬೆಳಗ್ಗೆ 11.45 ರ ಸುಮಾರಿಗೆ ರೈಲು ಚನ್ನಪಟ್ಟಣ ದಾಟುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿತ್ತು.

ಎಂಜಿನ್ನಿಂದ ಕಿಡಿಗಳು ಬರುತ್ತಿರುವುದನ್ನು ಗಮನಿಸಿದ ಲೋಕೋ ಪೈಲಟ್ ತಕ್ಷಣವೇ ರೈಲನ್ನು ನಿಲ್ಲಿಸಿದರು. ಅವರು ತಕ್ಷಣ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು.ಬೆಂಕಿ ಸಣ್ಣ ಪ್ರಮಾಣದಲ್ಲಿತ್ತು ಮತ್ತು ಎಂಜಿನ್ ವಿಭಾಗಕ್ಕೆ ಮಾತ್ರ ಸೀಮಿತವಾಗಿತ್ತು ಎಂದು ವರದಿಯಾಗಿದೆ. ತಾಂತ್ರಿಕ ದೋಷದಿಂದ ಇದು ಸಂಭವಿಸಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

 

The post ಮೈಸೂರು-ಉದಯ್ಪುರ ಪ್ಯಾಲೇಸ್ ಕ್ವೀನ್ ಹಮ್ಸಫರ್ ಎಕ್ಸ್ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ. appeared first on Good News 24x7.

]]>