Trump Archives - Good News 24x7 https://www.goodnews24x7.com/tag/trump/ Kannada Mon, 27 Apr 2026 10:36:12 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Trump Archives - Good News 24x7 https://www.goodnews24x7.com/tag/trump/ 32 32 ಡೊನಾಲ್ಡ್ ಟ್ರಂಪ್‌ಗೆ ಇರಾನ್ ತಿರುಗೇಟು: ಲೆಗೋ ಶೈಲಿಯ ವಿಡಿಯೊ ಮೂಲಕ ಅಮೆರಿಕ ಅಧ್ಯಕ್ಷರ ಅಪಹಾಸ್ಯ. https://www.goodnews24x7.com/iran-hits-back-at-donald-trump-us-president-mocked-in-lego-style-video/ Mon, 27 Apr 2026 10:36:12 +0000 https://www.goodnews24x7.com/?p=9419 ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಇರಾನ್ ದೇಶವು ‘ಲೆಗೋ’ (Lego-style) ಮಾದರಿಯ ಅನಿಮೇಟೆಡ್ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ವಾಷಿಂಗ್ಟನ್‌ನಲ್ಲಿ ನಡೆದ ‘ವೈಟ್ ಹೌಸ್ ಕರಸ್ಪಾಂಡೆಂಟ್ಸ್ ಡಿನ್ನರ್’ ಕಾರ್ಯಕ್ರಮದ ವೇಳೆ ಉಂಟಾದ ಗೊಂದಲವನ್ನೇ ವಸ್ತುವಾಗಿಟ್ಟುಕೊಂಡು ಈ ಡಿಸ್ ಟ್ರ್ಯಾಕ್…

The post ಡೊನಾಲ್ಡ್ ಟ್ರಂಪ್‌ಗೆ ಇರಾನ್ ತಿರುಗೇಟು: ಲೆಗೋ ಶೈಲಿಯ ವಿಡಿಯೊ ಮೂಲಕ ಅಮೆರಿಕ ಅಧ್ಯಕ್ಷರ ಅಪಹಾಸ್ಯ. appeared first on Good News 24x7.

]]>

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಇರಾನ್ ದೇಶವು ‘ಲೆಗೋ’ (Lego-style) ಮಾದರಿಯ ಅನಿಮೇಟೆಡ್ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ವಾಷಿಂಗ್ಟನ್‌ನಲ್ಲಿ ನಡೆದ ‘ವೈಟ್ ಹೌಸ್ ಕರಸ್ಪಾಂಡೆಂಟ್ಸ್ ಡಿನ್ನರ್’ ಕಾರ್ಯಕ್ರಮದ ವೇಳೆ ಉಂಟಾದ ಗೊಂದಲವನ್ನೇ ವಸ್ತುವಾಗಿಟ್ಟುಕೊಂಡು ಈ ಡಿಸ್ ಟ್ರ್ಯಾಕ್ ವಿಡಿಯೊ ತಯಾರಿಸಲಾಗಿದೆ. ರ‍್ಯಾಪ್ ಸಂಗೀತದ ಹಿನ್ನೆಲೆಯಲ್ಲಿ ಟ್ರಂಪ್ ಅವರ ನಾಯಕತ್ವ, ಭದ್ರತಾ ವೈಫಲ್ಯ ಮತ್ತು ಅವರ ಸಾರ್ವಜನಿಕ ನಡವಳಿಕೆಯನ್ನು ಈ ವಿಡಿಯೊದಲ್ಲಿ ತೀವ್ರವಾಗಿ ವ್ಯಂಗ್ಯವಾಡಲಾಗಿದೆ.

ವೈಟ್ ಹೌಸ್ ಡಿನ್ನರ್ ವೇಳೆ ಗುಂಡಿನ ಸದ್ದು ಕೇಳಿಬಂದಾಗ ಉಂಟಾದ ಗೊಂದಲ ಮತ್ತು ಟ್ರಂಪ್ ಅವರನ್ನು ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ತರಾತುರಿಯಲ್ಲಿ ಸ್ಥಳದಿಂದ ಹೊರಗೆ ಕರೆದೊಯ್ದ ದೃಶ್ಯಗಳನ್ನು ಈ ವಿಡಿಯೊದಲ್ಲಿ ನಾಟಕೀಯವಾಗಿ ತೋರಿಸಲಾಗಿದೆ. ಟ್ರಂಪ್ ಅಮೆರಿಕದ ಮಾಧ್ಯಮಗಳನ್ನು ನಿಯಂತ್ರಿಸಬಹುದು, ಆದರೆ ಇರಾನ್ ಮೇಲೆ ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ವಿಡಿಯೊ ಮುಖಾಂತರ ಸಾರಲಾಗಿದೆ. ಅಲ್ಲದೆ, ಟ್ರಂಪ್ ತಮ್ಮ ಜನಪ್ರಿಯತೆ ಕುಗ್ಗಿದಾಗ ಜನರ ಗಮನ ಸೆಳೆಯಲು ಇಂತಹ ನಾಟಕೀಯ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ ಎಂದು ಇರಾನ್ ಆರೋಪಿಸಿದೆ.

ಈ ಆನಿಮೇಟೆಡ್ ವಿಡಿಯೊದಲ್ಲಿ ಟ್ರಂಪ್ ಅವರನ್ನು ಅಹಂಕಾರಿ ಎಂದು ಚಿತ್ರಿಸಲಾಗಿದೆ. ಅವರು ಸಾರ್ವಜನಿಕವಾಗಿ ಬಲಿಷ್ಠನಂತೆ ವರ್ತಿಸಿದರೂ, ತೆರೆಯ ಮರೆಯಲ್ಲಿ ಜನರು ಅವರನ್ನು ಹಾಸ್ಯ ಮಾಡುತ್ತಿದ್ದಾರೆ ಎಂದು ಇರಾನ್ ಹೇಳಿದೆ. ಅಮೆರಿಕ ಆರ್ಥಿಕ ಒತ್ತಡ ಎದುರಿಸುತ್ತಿದೆ ಮತ್ತು ಸ್ವತಃ ಟ್ರಂಪ್ ಬೆಂಬಲಿಗರೇ ಅವರ ದೋಷಗಳನ್ನು ಗುರುತಿಸುತ್ತಿದ್ದಾರೆ ಎಂದು ವಿಡಿಯೊದಲ್ಲಿ ಟೀಕಿಸಲಾಗಿದೆ. ಮೆಲಾನಿಯಾ ಟ್ರಂಪ್ ಮತ್ತು ಜೆಡಿ ವ್ಯಾನ್ಸ್ ಸೇರಿದಂತೆ ಉನ್ನತ ಅಧಿಕಾರಿಗಳು ಭಾಗವಹಿಸಿದ್ದ ಆ ಸಮಾರಂಭದಲ್ಲಿ ನಡೆದ ಗೊಂದಲ ಕೇವಲ ನಾಟಕವಾಗಿತ್ತು ಎಂದು ಈ ಟ್ರ್ಯಾಕ್ ಲೇವಡಿ ಮಾಡಿದೆ.

The post ಡೊನಾಲ್ಡ್ ಟ್ರಂಪ್‌ಗೆ ಇರಾನ್ ತಿರುಗೇಟು: ಲೆಗೋ ಶೈಲಿಯ ವಿಡಿಯೊ ಮೂಲಕ ಅಮೆರಿಕ ಅಧ್ಯಕ್ಷರ ಅಪಹಾಸ್ಯ. appeared first on Good News 24x7.

]]>
ಸುಳ್ಳು ಮುಂದುವರಿಸಿದರೆ ಮತ್ತೆ ಹೋರ್ಮುಜ್ ಬಂದ್: ಟ್ರಂಪ್‌ಗೆ ಇರಾನ್ ಎಚ್ಚರಿಕೆ. https://www.goodnews24x7.com/iran-warns-trump-that-if-the-us-continues-to-lie-it-will-close-the-strait-of-hormuz-again/ Sat, 18 Apr 2026 09:13:00 +0000 https://www.goodnews24x7.com/?p=9307 ಟೆಹರಾನ್ : ಹೋರ್ಮುಜ್ ಜಲಸಂಧಿಯನ್ನು ಇರಾನ್ ಮುಕ್ತಗೊಳಿಸಿದ ಬೆನ್ನಲ್ಲೇ ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಘರ್ಷ ಮತ್ತೆ ತಾರಕಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೇವಲ ಒಂದು ಗಂಟೆಯ ಅವಧಿಯಲ್ಲಿ ಏಳು ಸುಳ್ಳುಗಳನ್ನು ಹೇಳಿದ್ದಾರೆ ಎಂದು ಕಿಡಿಕಾರಿರುವ ಇರಾನ್,…

The post ಸುಳ್ಳು ಮುಂದುವರಿಸಿದರೆ ಮತ್ತೆ ಹೋರ್ಮುಜ್ ಬಂದ್: ಟ್ರಂಪ್‌ಗೆ ಇರಾನ್ ಎಚ್ಚರಿಕೆ. appeared first on Good News 24x7.

]]>

ಟೆಹರಾನ್ : ಹೋರ್ಮುಜ್ ಜಲಸಂಧಿಯನ್ನು ಇರಾನ್ ಮುಕ್ತಗೊಳಿಸಿದ ಬೆನ್ನಲ್ಲೇ ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಘರ್ಷ ಮತ್ತೆ ತಾರಕಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೇವಲ ಒಂದು ಗಂಟೆಯ ಅವಧಿಯಲ್ಲಿ ಏಳು ಸುಳ್ಳುಗಳನ್ನು ಹೇಳಿದ್ದಾರೆ ಎಂದು ಕಿಡಿಕಾರಿರುವ ಇರಾನ್, ಇದೇ ಧೋರಣೆ ಮುಂದುವರಿದರೆ ಜಲಸಂಧಿಯನ್ನು ಮತ್ತೆ ಮುಚ್ಚುವುದಾಗಿ ಎಚ್ಚರಿಸಿದೆ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಖಲೀಬಾಫ್ ಮಾತನಾಡಿ, ಇರಾನ್ ಬಂದರುಗಳ ಮೇಲೆ ಅಮೆರಿಕದ ದಿಗ್ಬಂಧನ ಮುಂದುವರಿದರೆ ಹೋರ್ಮುಜ್ ಜಲಸಂಧಿ ಮುಕ್ತವಾಗಿರಲು ಸಾಧ್ಯವಿಲ್ಲ ಮತ್ತು ಇಲ್ಲಿ ಹಾದುಹೋಗುವ ಹಡಗುಗಳು ಇರಾನ್ ಅನುಮತಿ ಪಡೆಯುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ಆಶಾವಾದ ಮತ್ತು ಎರಡನೇ ಸುತ್ತಿನ ಮಾತುಕತೆ:
ಜಲಸಂಧಿ ಮುಕ್ತವಾದ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದಿದ್ದು, ಷೇರು ಮಾರುಕಟ್ಟೆಯಲ್ಲಿ ಹೊಸ ಆಶಾವಾದ ಮೂಡಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಅಮೆರಿಕ-ಇರಾನ್ ನಡುವಿನ ಎರಡನೇ ಸುತ್ತಿನ ಮಾತುಕತೆಗೆ ಅನುವು ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. ಇದೇ ಏಪ್ರಿಲ್ 20ರ ಸೋಮವಾರದಂದು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಉಭಯ ದೇಶಗಳ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯಿದೆ. ಟ್ರಂಪ್ ಅವರು ಇರಾನ್ ತನ್ನ ಪರಮಾಣು ದಾಸ್ತಾನನ್ನು ಅಮೆರಿಕಕ್ಕೆ ನೀಡಲು ಒಪ್ಪಿಕೊಂಡಿದೆ ಎಂದು ಹೇಳಿಕೊಂಡಿದ್ದರೂ, ಇರಾನ್ ಈ ಹೇಳಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.

ಸಾರಿಗೆ ಶುಲ್ಕದ ಪ್ರಸ್ತಾವನೆ:
ಮತ್ತೊಂದೆಡೆ, ಹೋರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಗೆ ಸಾರಿಗೆ ಶುಲ್ಕ ವಿಧಿಸುವ ಮೂಲಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಇರಾನ್ ಸಂಸತ್ತು ಹೊಸ ಕಾನೂನು ರೂಪಿಸುತ್ತಿದೆ ಎಂದು ಭದ್ರತಾ ಸಮಿತಿಯ ವಕ್ತಾರ ಇಬ್ರಾಹಿಂ ರೆಜೈ ತಿಳಿಸಿದ್ದಾರೆ. ಮೊದಲ ಸುತ್ತಿನ ಮಾತುಕತೆಗಳು ವಿಫಲವಾದ ನಂತರ ಉಂಟಾಗಿದ್ದ ಬಿಕ್ಕಟ್ಟು ಈಗ ಎರಡನೇ ಸುತ್ತಿನ ಚರ್ಚೆಯ ಮೇಲೆ ನಿಂತಿದ್ದು, ಅಮೆರಿಕ ತನ್ನ ದಿಗ್ಬಂಧನಗಳನ್ನು ಹಿಂಪಡೆಯದಿದ್ದರೆ ಇರಾನ್ ಮತ್ತೆ ಕಠಿಣ ಕ್ರಮಕ್ಕೆ ಮುಂದಾಗುವ ಮುನ್ಸೂಚನೆ ನೀಡಿದೆ.

The post ಸುಳ್ಳು ಮುಂದುವರಿಸಿದರೆ ಮತ್ತೆ ಹೋರ್ಮುಜ್ ಬಂದ್: ಟ್ರಂಪ್‌ಗೆ ಇರಾನ್ ಎಚ್ಚರಿಕೆ. appeared first on Good News 24x7.

]]>
ಅಮೆರಿಕದಲ್ಲಿ ಬ್ರಾಂಡೆಡ್ ಔಷಧಗಳಿಗೆ ಟ್ರಂಪ್‌ ಬಿಗಿ ಬಲೆ – 100% ಸುಂಕ ಘೋಷಣೆ, ಫಾರ್ಮಾ ಕಂಪನಿಗಳಿಗೆ ಗಟ್ಟಿ ಸಂದೇಶ. https://www.goodnews24x7.com/trumps-tight-net-for-branded-drugs-in-america-100-tariff-announcement-a-strong-message-to-pharma-companies/ Fri, 03 Apr 2026 08:37:15 +0000 https://www.goodnews24x7.com/?p=9117 ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ Donald Trump ಫಾರ್ಮಾ ಕ್ಷೇತ್ರದ ಮೇಲೆ ಮತ್ತೊಂದು ದೊಡ್ಡ ಆರ್ಥಿಕ ಕ್ರಮ ಕೈಗೊಂಡಿದ್ದು, ಬ್ರಾಂಡೆಡ್ ಔಷಧಗಳ ಮೇಲೆ 100% ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಪೇಟೆಂಟ್ ಹೊಂದಿರುವ ಮತ್ತು ಬ್ರಾಂಡೆಡ್ ಔಷಧಗಳನ್ನು ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ…

The post ಅಮೆರಿಕದಲ್ಲಿ ಬ್ರಾಂಡೆಡ್ ಔಷಧಗಳಿಗೆ ಟ್ರಂಪ್‌ ಬಿಗಿ ಬಲೆ – 100% ಸುಂಕ ಘೋಷಣೆ, ಫಾರ್ಮಾ ಕಂಪನಿಗಳಿಗೆ ಗಟ್ಟಿ ಸಂದೇಶ. appeared first on Good News 24x7.

]]>

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ Donald Trump ಫಾರ್ಮಾ ಕ್ಷೇತ್ರದ ಮೇಲೆ ಮತ್ತೊಂದು ದೊಡ್ಡ ಆರ್ಥಿಕ ಕ್ರಮ ಕೈಗೊಂಡಿದ್ದು, ಬ್ರಾಂಡೆಡ್ ಔಷಧಗಳ ಮೇಲೆ 100% ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.

ಪೇಟೆಂಟ್ ಹೊಂದಿರುವ ಮತ್ತು ಬ್ರಾಂಡೆಡ್ ಔಷಧಗಳನ್ನು ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಕಂಪನಿಗಳ ವಿರುದ್ಧ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಸಂಬಂಧ ಕಾರ್ಯಾದೇಶಕ್ಕೆ ಸಹಿ ಹಾಕಲಾಗಿದೆ.

ಈ ನೀತಿಯ ಮುಖ್ಯ ಉದ್ದೇಶವು ಔಷಧ ತಯಾರಿಕಾ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಅಮೆರಿಕದಲ್ಲೇ ಸ್ಥಾಪಿಸಲು ಒತ್ತಾಯಿಸುವುದು, ಚೀನಾ ಸೇರಿದಂತೆ ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಹಾಗೂ ದೇಶೀಯ ಉತ್ಪಾದನೆ ಮತ್ತು ಉದ್ಯೋಗವನ್ನು ಹೆಚ್ಚಿಸುವುದಾಗಿದೆ.

ಕಾರ್ಯಾದೇಶದ ಪ್ರಕಾರ, ಮುಂದಿನ ನಾಲ್ಕು ವರ್ಷಗಳಲ್ಲಿ ಅಮೆರಿಕದಲ್ಲಿ ಕಾರ್ಖಾನೆ ತೆರೆಯಲು ಒಪ್ಪಿಕೊಳ್ಳುವ ಕಂಪನಿಗಳಿಗೆ ಸುಂಕವನ್ನು 20% ಕ್ಕೆ ಇಳಿಸುವ ಅವಕಾಶ ನೀಡಲಾಗಿದೆ. ಆದರೆ 2030ರೊಳಗೆ ಉತ್ಪಾದನೆ ಪೂರ್ಣಗೊಳ್ಳದಿದ್ದರೆ, ಮತ್ತೆ 100% ಸುಂಕ ಅನ್ವಯವಾಗುತ್ತದೆ.

ಇನ್ನೂ, ಕಂಪನಿಗಳು ಅಮೆರಿಕದಲ್ಲೇ ಉತ್ಪಾದನೆ ನಡೆಸುವುದರ ಜೊತೆಗೆ “Most Favored Nation (MFN)” ದರದಲ್ಲಿ ಔಷಧಗಳನ್ನು ಪೂರೈಸಲು ಒಪ್ಪಿದರೆ, ಅವರಿಗೆ ಸಂಪೂರ್ಣ ಸುಂಕ ವಿನಾಯಿತಿ ಸಿಗಲಿದೆ.

ದೊಡ್ಡ ಕಂಪನಿಗಳಿಗೆ ತಮ್ಮ ಯೋಜನೆ ಸಲ್ಲಿಸಲು 120 ದಿನಗಳ ಗಡುವು ನೀಡಲಾಗಿದ್ದು, ಸಣ್ಣ ಕಂಪನಿಗಳಿಗೆ 180 ದಿನಗಳ ಸಮಯ ನೀಡಲಾಗಿದೆ. ಯುರೋಪಿಯನ್ ಯೂನಿಯನ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಿಗೆ ಒಪ್ಪಂದದ ಪ್ರಕಾರ 15% ಸುಂಕ ಮಾತ್ರ ಅನ್ವಯವಾಗಲಿದೆ. ಬ್ರಿಟನ್‌ಗೆ ಇನ್ನೂ ಕಡಿಮೆ ದರ ಅಥವಾ ಸಂಪೂರ್ಣ ವಿನಾಯಿತಿ ದೊರಕುವ ಸಾಧ್ಯತೆಯಿದೆ.

ಸದ್ಯಕ್ಕೆ ಈ ನಿಯಮ ಸಾಮಾನ್ಯ ಜನರಿಕ್ ಔಷಧಗಳಿಗೆ ಅನ್ವಯಿಸುವುದಿಲ್ಲ. ಅಮೆರಿಕದಲ್ಲಿ ಬಳಸುವ ಔಷಧಗಳಲ್ಲಿ ಸುಮಾರು 90% ಜನರಿಕ್ ಆಗಿರುವುದರಿಂದ, ರೋಗಿಗಳ ಮೇಲೆ ತಕ್ಷಣದ ಬೆಲೆ ಏರಿಕೆಯ ಪರಿಣಾಮ ಬೀರದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಇದರ ಪರಿಣಾಮವಾಗಿ ಭಾರತ ಸೇರಿದಂತೆ ಜನರಿಕ್ ಔಷಧ ರಫ್ತು ಮಾಡುವ ದೇಶಗಳಿಗೆ ತಕ್ಷಣದ ಆರ್ಥಿಕ ಹೊಡೆತ ಎದುರಾಗುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

The post ಅಮೆರಿಕದಲ್ಲಿ ಬ್ರಾಂಡೆಡ್ ಔಷಧಗಳಿಗೆ ಟ್ರಂಪ್‌ ಬಿಗಿ ಬಲೆ – 100% ಸುಂಕ ಘೋಷಣೆ, ಫಾರ್ಮಾ ಕಂಪನಿಗಳಿಗೆ ಗಟ್ಟಿ ಸಂದೇಶ. appeared first on Good News 24x7.

]]>
ಟ್ರಂಪ್‌ ಸುಂಕ ನಿರ್ಧಾರಕ್ಕೆ ಯುಎಸ್‌ ಕೋರ್ಟ್‌ ಛೀಮಾರಿ ! https://www.goodnews24x7.com/us-court-rebukes-trumps-tariff-decision/ Sat, 30 Aug 2025 07:44:06 +0000 https://www.goodnews24x7.com/?p=7006 ಭಾರತ ಸೇರಿ ಹಲವು ದೇಶಗಳ ಮೇಲೆ ಮಿತಿ ಮೀರಿದ ಟ್ಯಾರಿಫ್ ಹೇರಿರುವ ಟ್ರಂಪ್ . ಆಮದು ಸುಂಕ ಕಾನೂನು ಬಾಹಿರ ಎಂದು ಯುಎಸ್‌ ಕೋರ್ಟ್‌ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧಾರಕ್ಕೆ ಕೋರ್ಟ್‌ ಛೀಮಾರಿ ಹಾಕಿದೆ. ಟ್ರಂಪ್‌ ನಿರ್ಧಾರಕ್ಕೆ ವಾಷಿಂಗ್ಟನ್‌ನ…

The post ಟ್ರಂಪ್‌ ಸುಂಕ ನಿರ್ಧಾರಕ್ಕೆ ಯುಎಸ್‌ ಕೋರ್ಟ್‌ ಛೀಮಾರಿ ! appeared first on Good News 24x7.

]]>

ಭಾರತ ಸೇರಿ ಹಲವು ದೇಶಗಳ ಮೇಲೆ ಮಿತಿ ಮೀರಿದ ಟ್ಯಾರಿಫ್ ಹೇರಿರುವ ಟ್ರಂಪ್ . ಆಮದು ಸುಂಕ ಕಾನೂನು ಬಾಹಿರ ಎಂದು ಯುಎಸ್‌ ಕೋರ್ಟ್‌ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧಾರಕ್ಕೆ ಕೋರ್ಟ್‌ ಛೀಮಾರಿ ಹಾಕಿದೆ.

ಟ್ರಂಪ್‌ ನಿರ್ಧಾರಕ್ಕೆ ವಾಷಿಂಗ್ಟನ್‌ನ ಫೆಡರಲ್ ಮೇಲ್ಮನವಿ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಕೆಳ ನ್ಯಾಯಾಲಯದ ತೀರ್ಪನ್ನು ನ್ಯಾಯಾಲಯವು ಅನುಮೋದಿಸಿದ್ದು, ಟ್ರಂಪ್ ವಿಧಿಸಿರುವ ಹೆಚ್ಚಿನ ಆಮದು ಸುಂಕಗಳು ಕಾನೂನುಬಾಹಿರ ಎಂದು ಹೇಳಿದೆ. ಈ ಸಂದರ್ಭದಲ್ಲಿ ಈ ಅಧಿಕಾರವನ್ನು ಬಳಸಲು ಅಧ್ಯಕ್ಷರ ಅಧಿಕಾರವನ್ನು ನ್ಯಾಯಾಲಯವು ಪ್ರಶ್ನಿಸಿದೆ.

ಫೆಡರಲ್ ಮೇಲ್ಮನವಿ ನ್ಯಾಯಾಲಯವು ಅಮೆರಿಕ ಅಧ್ಯಕ್ಷರು ತುರ್ತು ಅಧಿಕಾರಗಳ ದುರುಪಯೋಗದ ಬಗ್ಗೆ ಮಾತನಾಡಿದೆ. 11 ನ್ಯಾಯಾಧೀಶರ ಪೀಠದಲ್ಲಿ, 7 ನ್ಯಾಯಾಧೀಶರು ಟ್ರಂಪ್ ಅವರ ಸುಂಕ ವಿಧಿಸುವ ನಿರ್ಧಾರವನ್ನು ಕಾನೂನುಬಾಹಿರವೆಂದು ಘೋಷಿಸಿದರೆ, 4 ನ್ಯಾಯಾಧೀಶರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಆದೇಶ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಶ್ವೇತ ಭವನ ನಿರ್ಧರಿಸಿದೆ.

ಇತರೆ ದೇಶಗಳ ಮೇಲೆ ವಿಧಿಸಿರುವ ಎಲ್ಲಾ ಸುಂಕಗಳು ಜಾರಿಯಲ್ಲಿರುತ್ತವೆ. ಒಂದು ವೇಳೆ ಟ್ಯಾರಿಫ್‌ ತೆಗೆದುಹಾಕಿದರೆ, ದೇಶಕ್ಕೆ ಹಾನಿಕಾರಕ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುನರುಚ್ಚರಿಸಿದ್ದಾರೆ. ‌ಟ್ರಂಪ್ ಅವರ ಹಲವು ಸುಂಕಗಳು ಕಾನೂನುಬಾಹಿರ ಎಂದು ಯುಎಸ್ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ.

ಎಲ್ಲಾ ಸುಂಕಗಳು ಇನ್ನೂ ಜಾರಿಯಲ್ಲಿವೆ. ಇಂದು ಅತ್ಯಂತ ಪಕ್ಷಪಾತದ ಮೇಲ್ಮನವಿಗೆ ನ್ಯಾಯಾಲಯವು ನಮ್ಮ ಸುಂಕಗಳನ್ನು ತೆಗೆದುಹಾಕಬೇಕು ಎಂದು ತಪ್ಪಾಗಿ ಹೇಳಿದೆ. ಆದರೆ, ಕೊನೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಗೆಲ್ಲುತ್ತದೆ ಎಂದು ಅವರಿಗೆ ತಿಳಿದಿದೆ. ಈ ಸುಂಕಗಳು ಎಂದಾದರೂ ರದ್ದಾದರೆ, ಅದು ದೇಶಕ್ಕೆ ವಿಪತ್ತು. ಅದು ನಮ್ಮನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತದೆ. ನಾವು ಬಲಿಪಶು ಆಗಬೇಕಾಗುತ್ತದೆ ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ನಮ್ಮ ತಯಾರಕರು, ರೈತರು ಮತ್ತು ಎಲ್ಲರನ್ನೂ ದುರ್ಬಲಗೊಳಿಸುವ ಅನ್ಯಾಯದ ಸುಂಕಗಳನ್ನು ನಾವು ಒಪ್ಪಲ್ಲ. ಇತರ ದೇಶಗಳು, ಅವರು ಮಿತ್ರರಾಗಿರಲಿ ಅಥವಾ ವೈರಿಯಾಗಿರಲಿ ವಿಧಿಸುವ ಸುಂಕೇತರ ವ್ಯಾಪಾರ ಅಡೆತಡೆಗಳನ್ನು ಅಮೆರಿಕ ಇನ್ಮುಂದೆ ಸಹಿಸುವುದಿಲ್ಲ. ಒಂದು ವೇಳೆ ಈ ನಿರ್ಧಾರವನ್ನು (ಟ್ಯಾರಿಫ್) ತಡೆಯಲು ಮುಂದಾದರೆ, ಅಕ್ಷರಶಃ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ನಾಶಪಡಿಸಿದಂತೆ ಎಂದು ಟ್ರಂಪ್‌ ಹೇಳಿದ್ದಾರೆ.

ಸುಂಕಗಳು ಕಾರ್ಮಿಕರಿಗೆ ಸಹಾಯ ಮಾಡಲು ಮತ್ತು ‘ಮೇಡ್ ಇನ್ ಅಮೆರಿಕ’ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳನ್ನು ಬೆಂಬಲಿಸಲು ಅತ್ಯುತ್ತಮ ಸಾಧನವಾಗಿದೆ ಎಂದು ಟ್ರಂಪ್‌ ನಿಲುವು.

ಹಲವು ವರ್ಷಗಳಿಂದ ಕಾಳಜಿಯಿಲ್ಲದ ಮತ್ತು ಅವಿವೇಕದ ರಾಜಕಾರಣಿಗಳು ಸುಂಕಗಳನ್ನು ನಮ್ಮ ವಿರುದ್ಧವೇ ಬಳಸಲು ಅನುಮತಿಸಿದ್ದರು. ಈಗ ಯುನೈಟೆಡ್ ಸ್ಟೇಟ್ಸ್ ಸುಪ್ರೀಂ ಕೋರ್ಟ್ ಸಹಾಯದಿಂದ, ಅವುಗಳನ್ನು ನಮ್ಮ ರಾಷ್ಟ್ರದ ಪ್ರಯೋಜನಕ್ಕಾಗಿ ಬಳಸುತ್ತೇವೆ. ಅಮೆರಿಕವನ್ನು ಮತ್ತೆ ಶ್ರೀಮಂತ, ಬಲಿಷ್ಠ ಮತ್ತು ಶಕ್ತಿಶಾಲಿಯನ್ನಾಗಿ ಮಾಡುತ್ತೇವೆ ಎಂದು ಟ್ರಂಪ್‌ ಪ್ರತಿಜ್ಞೆ ಮಾಡಿದ್ದಾರೆ.

The post ಟ್ರಂಪ್‌ ಸುಂಕ ನಿರ್ಧಾರಕ್ಕೆ ಯುಎಸ್‌ ಕೋರ್ಟ್‌ ಛೀಮಾರಿ ! appeared first on Good News 24x7.

]]>
ಅಮೆರಿಕ ನಡುಗಿಸಿದ ಮೊಲ! https://www.goodnews24x7.com/the-rabbit-that-shook-america/ Mon, 18 Aug 2025 09:19:30 +0000 https://www.goodnews24x7.com/?p=6355 ಟ್ರಂಪಣ್ಣ ವಿಶ್ವವನ್ನೇ ನಡುಗಿಸುವ ಕೆಲಸದಲ್ಲಿ ತೊಡಗಿದ್ದರೆ, ಇನ್ನೊಂದು ಪುಟ್ಟ ಪ್ರಾಣಿ ಅಮೆರಿಕವನ್ನೇ ನಡುಗಿಸಿಬಿಟ್ಟಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ ಒಂದು ವಿಚಿತ್ರ ಮೊಲದ ಫೋಟೋ ಸಾಕಷ್ಟು ಗದ್ದಲ ಉಂಟುಮಾಡಿತು. ಕೊಲರಾಡೋದಲ್ಲಿ ಕಂಡುಬಂದ ಆ ಮೊಲದ ಮುಖದ ಮೇಲೆ ಉದ್ದ ಉದ್ದ…

The post ಅಮೆರಿಕ ನಡುಗಿಸಿದ ಮೊಲ! appeared first on Good News 24x7.

]]>

ಟ್ರಂಪಣ್ಣ ವಿಶ್ವವನ್ನೇ ನಡುಗಿಸುವ ಕೆಲಸದಲ್ಲಿ ತೊಡಗಿದ್ದರೆ,
ಇನ್ನೊಂದು ಪುಟ್ಟ ಪ್ರಾಣಿ ಅಮೆರಿಕವನ್ನೇ ನಡುಗಿಸಿಬಿಟ್ಟಿದೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ ಒಂದು ವಿಚಿತ್ರ ಮೊಲದ ಫೋಟೋ ಸಾಕಷ್ಟು ಗದ್ದಲ ಉಂಟುಮಾಡಿತು. ಕೊಲರಾಡೋದಲ್ಲಿ ಕಂಡುಬಂದ ಆ ಮೊಲದ ಮುಖದ ಮೇಲೆ ಉದ್ದ ಉದ್ದ ಕೊಂಬುಗಳಂತೆಯೇ ಕಾಣುವ ಮಾಂಸದ ರಚನೆಗಳು ಬೆಳೆದುಕೊಂಡಿದವು.

“ಝಾಂಬಿ ವೈರಸ್ ಶುರುವಾಯಿತೇನು?”
ಎನ್ನುತ್ತಾ ಜನರಲ್ಲಿ ಆತಂಕ ಮೂಡಿದ್ರೆ,
ಇನ್ನೊಂದೆಡೆ ಕೆಲವರು “ಇದು ಎಐ ಕ್ರಿಯೇಷನ್, ಸುಳ್ಳು ಫೋಟೋ” ಎಂದು ತಿರಸ್ಕರಿಸಿದರು.

ಆದರೆ ನಿಜವಾದ ಸತ್ಯ ಮುಂದೆ ಬರುವವರೆಗೂ, ಈ ಚಿತ್ರವು ದೊಡ್ಡಚರ್ಚೆಗೆ ಕಾರಣವಾಯಿತು. ನಂತರ ನಡೆದ ತಜ್ಞರ ಪರೀಕ್ಷೆಯಲ್ಲಿ ಗೊತ್ತಾಯಿತು – ಈ ಮೊಲವು AI ಉತ್ಪನ್ನವಲ್ಲ, ನಕಲಿ ಫೋಟೋ ಕೂಡ ಅಲ್ಲ. ಅದರ ಮುಖದ ಮೇಲೆ ಬೆಳೆಯುತ್ತಿದ್ದವು ‘ಶೋಪ್ ಪ್ಯಾಪಿಲ್ಲೋಮಾ’ ಎಂಬ ವೈರಸ್‌ನಿಂದ ಉಂಟಾಗುವ ಮಾಂಸ ಖಂಡಗಳು. ಎಂದು

ಹಾಗೆಯೆ ಈ ವೈರಸ್ ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲಿ ಹೆಚ್ಚು ಸಕ್ರಿಯವಾಗುವ ಉಣ್ಣೆಗಳ ಮೂಲಕ ಹರಡುತ್ತದೆ. ಇದು ಮೊಲಗಳ ನಡುವೆ ಮಾತ್ರ ಹರಡುತ್ತದೆ – ಬೆಕ್ಕು, ನಾಯಿ ಅಥವಾ ಮನುಷ್ಯರಿಗೆ ಯಾವುದೇ ಅಪಾಯವಿಲ್ಲ. ಎಂದು ಹೇಳಿದ್ರು

ಆದರೆ, ಇಂದಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ಎಲ್ಲವೂ “ಇದೊಂದು ಹೊಸ ಅಪಾಯ!” ಎನಿಸುತ್ತದೆ. ಅದರ ಫಲಿತಾಂಶವೇನು ಅಂದರೆ – ಪೂರ್ಣವಾಗಿ ನಿರಪಾಯವಾಗಿರುವ ಈ ಪುಟ್ಟ ಮೊಲ, ಕೆಲ ದಿನಗಳ ಕಾಲ ಅಮೆರಿಕದ ‘ಹಾರರ್ ಸ್ಟಾರ್’ ಆಗಿ ಬೆಳೆದಿತ್ತು!

The post ಅಮೆರಿಕ ನಡುಗಿಸಿದ ಮೊಲ! appeared first on Good News 24x7.

]]>
ಭಾರತದ ಎಲ್ಲ ಆಮದುಗಳ ಮೇಲೆ 24 ಗಂಟೆಗಳಲ್ಲಿ ಸುಂಕ ಗಣನೀಯ ಏರಿಕೆ – ಟ್ರಂಪ್‌ ಬೆದರಿಕೆ! https://www.goodnews24x7.com/tariffs-on-all-indian-imports-to-rise-significantly-in-24-hours-trump-threatens/ Wed, 06 Aug 2025 05:31:05 +0000 https://www.goodnews24x7.com/?p=5394 ಭಾರತ ಯುದ್ಧದ ಯಂತ್ರಕ್ಕೆ ಇಂಧನ ತುಂಬುತ್ತಿದೆ ಎಂದ ಯುಎಸ್‌ ಅಧ್ಯಕ್ಷ ವಾಷಿಂಗ್ಟನ್: ರಷ್ಯಾದಿಂದ (Russia) ಕಚ್ಚಾ ತೈಲ ಖರೀದಿ ವಿಚಾರದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವಾಕ್ಸಮರ ತೀವ್ರ ಜೋರಾಗುತ್ತಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump)…

The post ಭಾರತದ ಎಲ್ಲ ಆಮದುಗಳ ಮೇಲೆ 24 ಗಂಟೆಗಳಲ್ಲಿ ಸುಂಕ ಗಣನೀಯ ಏರಿಕೆ – ಟ್ರಂಪ್‌ ಬೆದರಿಕೆ! appeared first on Good News 24x7.

]]>

ಭಾರತ ಯುದ್ಧದ ಯಂತ್ರಕ್ಕೆ ಇಂಧನ ತುಂಬುತ್ತಿದೆ ಎಂದ ಯುಎಸ್‌ ಅಧ್ಯಕ್ಷ
ವಾಷಿಂಗ್ಟನ್: ರಷ್ಯಾದಿಂದ (Russia) ಕಚ್ಚಾ ತೈಲ ಖರೀದಿ ವಿಚಾರದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವಾಕ್ಸಮರ ತೀವ್ರ ಜೋರಾಗುತ್ತಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತೊಮ್ಮೆ ಭಾರತದ ಆಮದುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಕಳೆದ 2 ದಿನಗಳಲ್ಲಿ 2ನೇ ಬಾರಿಗೆ ಟ್ರಂಪ್‌ ನೀಡಿದ ಬೆದರಿಕೆಯಾಗಿದೆ.

ಭಾರತ ಉತ್ತಮ ಪಾಲುದಾರನಲ್ಲ
ಹೌದು. ಭಾರತವು ನಮ್ಮ ಉತ್ತಮ ವ್ಯಾಪಾರ ಪಾಲುದಾರನಲ್ಲ. ಏಕೆಂದರೆ ಭಾರತ ನಮ್ಮೊಂದಿಗೆ ಬಹಳಷ್ಟು ವ್ಯವಹಾರ ಮಾಡುತ್ತಾರೆ. ಆದ್ರೆ ನಾವು ಅವರೊಂದಿಗೆ ವ್ಯಾಪಾರ ಮಾಡಲ್ಲ. ಆದ್ದರಿಂದ ನಾವು 25 ಪ್ರತಿಶತದಷ್ಟು ಇತ್ಯರ್ಥಪಡಿಸಿಕೊಂಡಿದ್ದೇವೆ. ಆದ್ರೆ ನಾವು ಹೇಳಿದ ಮೇಲೂ ರಷ್ಯಾದಿಂದ ನಿರಂತರವಾಗಿ ತೈಲ ಖರೀದಿ ಮಾಡಲಾಗುತ್ತಿದೆ. ಈ ಮೂಲಕ ಭಾರತ ಯುದ್ಧದ ಯಂತ್ರಕ್ಕೆ ಇಂಧನ ತುಂಬುತ್ತಿದೆ. ಹಾಗಾಗಿ ಮುಂದಿನ 24 ಗಂಟೆಗಳಲ್ಲಿ ಆಮದುಗಳ ಮೇಲೆ ಸುಂಕವನ್ನು (Tariff Threat) ಗಣನೀಯವಾಗಿ ಏರಿಕೆ ಮಾಡುವುದಾಗಿ ಟ್ರಂಪ್‌ ಬೆದರಿಕೆಯೊಡ್ಡಿದ್ದಾರೆ.

ಭಾರತ ಲಾಭ ಮಾಡಿಕೊಳ್ಳುತ್ತಿದೆ
ಒಂದು ದಿನದ ಹಿಂದಷ್ಟೇ ಸುಂಕ ಗಣನೀಯ ಏರಿಕೆ ಕುರಿತು ಟ್ರಂಪ್‌ ಮಾತನಾಡಿದ್ದರು, ಭಾರತ ರಷ್ಯಾದಿಂದ (India-Russia) ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುತ್ತಿದೆ. ಭಾರತವು ದೊಡ್ಡ ಪ್ರಮಾಣದಲ್ಲಿ ರಷ್ಯಾದ ತೈಲ (Russian Oil) ಮಾತ್ರ ಖರೀದಿಸುತ್ತಿಲ್ಲ, ಖರೀದಿಸಿದ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ದೊಡ್ಡ ಪ್ರಮಾಣದ ಲಾಭ ಮಾಡಿಕೊಳ್ಳುತ್ತಿದೆ. ರಷ್ಯಾದ ಯುದ್ಧ ಟ್ಯಾಂಕರ್‌ಗಳಿಂದ ಉಕ್ರೇನ್‌ನಲ್ಲಿ ಹಲವು ಜನ ಸಾಯುತ್ತಿದ್ದರೂ ಅವರು ಹೆದರುತ್ತಿಲ್ಲ. ಈ ಕಾರಣದಿಂದಲೇ, ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕವನ್ನ ಗಣನೀಯವಾಗಿ ಏರಿಕೆ ಮಾಡಲಾಗುವುದು ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದರು.

ಭಾರತಕ್ಕಿಂತ ಪಾಕ್‌ಗೆ ಕಡಿಮೆ ಸುಂಕ
ಈಗಾಗಲೇ ಆಗಸ್ಟ್‌ 7ರಿಂದ ಅನ್ವಯವಾಗುವಂತೆ `ಭಾರತದಿಂದ ಆಮದು ಮಾಡಿಕೊಳ್ಳುವ ಎಲ್ಲ ಸರಕುಗಳಿಗೂ ಶೇ.25ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಟ್ರಂಪ್‌ ಸಹಿ ಹಾಕಿದ್ದಾರೆ. ಆದ್ರೆ ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ್ದಾರೆ. ಬೃಹತ್‌ ಪ್ರಮಾಣದಲ್ಲಿ ರಷ್ಯಾದ ಸೇನಾ ಉಪಕರಣಗಳು, ಕಚ್ಚಾ ತೈಲ ಖರೀದಿಸುತ್ತಿರುವ ಭಾರತದ ಮೇಲೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದರು. ಆದ್ರೆ, ಯಾವ ದಿನಾಂಕದಿಂದ ಈ ನಿರ್ಧಾರ ಜಾರಿಗೆ ಬರಲಿದೆ ಎಂದು ತಿಳಿಸಿರಲಿಲ್ಲ.

2ನೇ ಅತೀ ದೊಡ್ಡ ಖರೀದಿದಾರ
ಭಾರತವು ರಷ್ಯಾದಿಂದ ದೇಶದ ಅಗತ್ಯವಿರುವ ಕಚ್ಚಾತೈಲದ ಪೈಕಿ ಶೇ.35ರಿಂದ 40ರಷ್ಟು ಖರೀದಿಸುತ್ತಿದೆ. ಉಕ್ರೇನ್ ಜೊತೆಗಿನ ಯುದ್ಧ ಆರಂಭಕ್ಕೂ ಮುನ್ನ ಹೋಲಿಸಿದ್ರೆ, ಆಮದು ಪ್ರಮಾಣವು ಶೇ.0.2ರಷ್ಟು ಏರಿಕೆಯಾಗಿದೆ. ರಷ್ಯಾದಿಂದ ಗರಿಷ್ಠ ಪ್ರಮಾಣದ ಕಚ್ಚಾತೈಲ ಖರೀದಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತವು ನಂತರದ ಸ್ಥಾನದಲ್ಲಿದೆ ಎಂದು ವರದಿಗಳು ತಿಳಿಸಿವೆ.

The post ಭಾರತದ ಎಲ್ಲ ಆಮದುಗಳ ಮೇಲೆ 24 ಗಂಟೆಗಳಲ್ಲಿ ಸುಂಕ ಗಣನೀಯ ಏರಿಕೆ – ಟ್ರಂಪ್‌ ಬೆದರಿಕೆ! appeared first on Good News 24x7.

]]>