ತಮಿಳಿಗೆ ರಿಮೇಕ್ ಆಗಲಿದೆ ‘ಸು ಫ್ರಮ್ ಸೋ’ ! ಪುನೀತ್ ಚಿತ್ರದ ನಿರ್ಮಾಪಕನಿಂದ ರಿಮೇಕ್ ಹಕ್ಕು ಖರೀದಿ.

ಕನ್ನಡದ ಸೂಪರ್ ಹಿಟ್ ಚಿತ್ರವಾದ ‘ಸು ಫ್ರಮ್ ಸೋ’ ತಮಿಳು ರಿಮೇಕ್ ಹಕ್ಕುಗಳನ್ನು ಪ್ರಸಿದ್ಧ ನಿರ್ಮಾಪಕ ಎನ್.ಎಸ್. ರಾಜಕುಮಾರ್ ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ. ಮೂಲತಃ ಕನ್ನಡದಲ್ಲಿ ಬಿಡುಗಡೆಯಾಗಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಯಶಸ್ವಿಯಾಗಿರುವ ಈ ಚಿತ್ರ ತಮಿಳು ಪ್ರೇಕ್ಷಕರನ್ನೂ ರಂಜಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಚಿತ್ರದ ತಾರಾಬಳಗ ಮತ್ತು ತಾಂತ್ರಿಕ ತಂಡದ ಬಗ್ಗೆ ಶೀಘ್ರದಲ್ಲೇ ಘೋಷಣೆ ಆಗಲಿದೆ.

‘ಸು ಫ್ರಮ್ ಸೋ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿದೆ. ಈ ಚಿತ್ರ ಸೂಪರ್ ಹಿಟ್ ಆಗಿದೆ. ಕನ್ನಡ ಮಾತ್ರವಲ್ಲದೆ, ತೆಲುಗು ಹಾಗೂ ಮಲಯಾಳಂನಲ್ಲೂ ಸಿನಿಮಾ ಮೆಚ್ಚುಗೆ ಪಡೆದಿದೆ. ಈ ಚಿತ್ರ ತಮಿಳಿಗೆ ರಿಮೇಕ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಈಗ ಆ ಮಾತುಕತೆ ಫೈನಲ್ ಆಗಿದೆ. ದೊಡ್ಡ ಮೊತ್ತಕ್ಕೆ ಎನ್​ಎಸ್ ರಾಜ್​ಕುಮಾರ್ ಅವರು ‘ಸು ಫ್ರಮ್ ಸೋ’ (Su From So) ಚಿತ್ರದ ತಮಿಳು ರಿಮೇಕ್ ಹಕ್ಕನ್ನು ಪಡೆದಿದ್ದಾರೆ.

‘ಸು ಫ್ರಮ್ ಸೋ’ ಚಿತ್ರವನ್ನು ರಾಜ್​ ಬಿ ಶೆಟ್ಟಿ ಅವರ ‘ಲೈಟರ್ ಬುದ್ಧ ಫಿಲ್ಮ್ಸ್’ ಮೂಲಕ ನಿರ್ಮಾಣ ಮಾಡಲಾಗಿದೆ. ಈ ಚಿತ್ರ ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ರಿಲೀಸ್ ಆಯಿತು. ಆ ಬಳಿಕ ಚಿತ್ರ ಮಲಯಾಳಂನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ತೆಲುಗು ಮಂದಿ ಕೂಡ ಚಿತ್ರವನ್ನು ಇಷ್ಟಪಟ್ಟರು. ಈ ಸಿನಿಮಗೆ ಜೆಪಿ ತುಮಿನಾಡ್ ನಿರ್ದೇಶನ ಇದೆ. ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಶನೀಲ್ ಗೌತಮ್, ಸಂಧ್ರ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ ನಟಿಸಿದ್ದಾರೆ.

ಸದ್ಯ ಎನ್​ಎಸ್ ರಾಜ್​ಕುಮಾರ್ ಅವರು ‘ಸು ಫ್ರಮ್ ಸೋ’ ತಮಿಳು ಹಕ್ಕನ್ನು ಪಡೆದಿದ್ದಾರೆ. ಅವರು ಕನ್ನಡದಲ್ಲಿ ‘ಮೈನಾ’, ‘ಮೈತ್ರಿ’, ‘ಪೃಥ್ವಿ’ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. 60ಕ್ಕೂ ಹೆಚ್ಚು ಚಿತ್ರಗಳನ್ನು ಅವರು ಹಂಚಿಕೆ ಮಾಡಿದ್ದಾರೆ. ಅವರು ದೊಡ್ಡ ಮೊತ್ತಕ್ಕೆ ‘ಸು ಫ್ರಮ್ ಸೋ’ ಹಕ್ಕನ್ನು ಖರೀದಿ ಮಾಡಿದ್ದಾರೆ.

‘ಸು ಫ್ರಮ್ ಸೋ’ ಸಿನಿಮಾನ ತಮಿಳಿಗೆ ಡಬ್ ಮಾಡುವ ಬದಲು ಆ ಭಾಷೆಗೆ ರಿಮೇಕ್ ಮಾಡಿದರೆ ಹೆಚ್ಚು ಸೂಕ್ತ ಎಂದು ತಂಡದವರು ನಿರ್ಧರಿಸಿತ್ತು. ಈಗ ಸೂಕ್ತ ಎನಿಸಿದವರಿಗೆ ಹಕ್ಕನ್ನು ಮಾರಲಾಗಿದೆ. ಸಿನಿಮಾದ ಪಾತ್ರವರ್ಗ, ತಾಂತ್ರಿಕ ತಂಡದ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆ. ‘ಸು ಫ್ರಮ್ ಸೋ’ ಸಿನಿಮಾದಲ್ಲಿ ಹಾಸ್ಯದ ಜೊತೆಗೆ ಒಂದು ಸ್ಟ್ರಾಂಗ್ ಮೆಸೇಜ್ ಇದೆ. ಇದು ತಮಿಳು ನಾಡು ಜನತೆಗೂ ಇಷ್ಟ ಆಗಲಿದೆ ಎಂಬ ನಂಬಿಕೆ ರಾಜ್​ಕುಮಾರ್ ಅವರದ್ದು.

Related Posts

ಮೈಸೂರಿನ ಗದ್ದಿಗೆ ರಸ್ತೆಗೆ ‘ಎಸ್. ಜಾನಕಿ ರಸ್ತೆ’ ನಾಮಕರಣ !

ಮೈಸೂರಿನ ಗದ್ದಿಗೆ ರಸ್ತೆಗೆ ‘ಎಸ್. ಜಾನಕಿ ರಸ್ತೆ’ ನಾಮಕರಣಕ್ಕೆ ಶಾಸಕ ಜಿ.ಟಿ. ದೇವೇಗೌಡ ಭರವಸೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ತಮ್ಮ ಅಮೋಘ ಗಾಯನದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಗಾನಕೋಗಿಲೆ ಎಸ್. ಜಾನಕಿ ಅವರ ಸ್ಮರಣಾರ್ಥ…

ಚಿತ್ರರಂಗಕ್ಕೆ ಕಾಲಿಟ್ಟ ಲಂಕೇಶ್ ಮೊಮ್ಮಗಳು ಇಶಾ ಲಂಕೇಶ್

  ಕೆಲವು ಸಿನಿಮಾಗಳನ್ನು ನಿರ್ದೇಶಿಸಿ, ನಟನೆ ಸಹ ಮಾಡಿದ್ದರು ಪಿ ಲಂಕೇಶ್. ಇದೀಗ ಅವರ ಮೂರನೇ ತಲೆಮಾರು ಅಂದರೆ ಮೊಮ್ಮಕ್ಕಳು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಲಂಕೇಶ್ ಅವರ ಪುತ್ರ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದೀಗ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!