ಟ್ರಂಪಣ್ಣ ವಿಶ್ವವನ್ನೇ ನಡುಗಿಸುವ ಕೆಲಸದಲ್ಲಿ ತೊಡಗಿದ್ದರೆ,
ಇನ್ನೊಂದು ಪುಟ್ಟ ಪ್ರಾಣಿ ಅಮೆರಿಕವನ್ನೇ ನಡುಗಿಸಿಬಿಟ್ಟಿದೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ ಒಂದು ವಿಚಿತ್ರ ಮೊಲದ ಫೋಟೋ ಸಾಕಷ್ಟು ಗದ್ದಲ ಉಂಟುಮಾಡಿತು. ಕೊಲರಾಡೋದಲ್ಲಿ ಕಂಡುಬಂದ ಆ ಮೊಲದ ಮುಖದ ಮೇಲೆ ಉದ್ದ ಉದ್ದ ಕೊಂಬುಗಳಂತೆಯೇ ಕಾಣುವ ಮಾಂಸದ ರಚನೆಗಳು ಬೆಳೆದುಕೊಂಡಿದವು.
“ಝಾಂಬಿ ವೈರಸ್ ಶುರುವಾಯಿತೇನು?”
ಎನ್ನುತ್ತಾ ಜನರಲ್ಲಿ ಆತಂಕ ಮೂಡಿದ್ರೆ,
ಇನ್ನೊಂದೆಡೆ ಕೆಲವರು “ಇದು ಎಐ ಕ್ರಿಯೇಷನ್, ಸುಳ್ಳು ಫೋಟೋ” ಎಂದು ತಿರಸ್ಕರಿಸಿದರು.
ಆದರೆ ನಿಜವಾದ ಸತ್ಯ ಮುಂದೆ ಬರುವವರೆಗೂ, ಈ ಚಿತ್ರವು ದೊಡ್ಡಚರ್ಚೆಗೆ ಕಾರಣವಾಯಿತು. ನಂತರ ನಡೆದ ತಜ್ಞರ ಪರೀಕ್ಷೆಯಲ್ಲಿ ಗೊತ್ತಾಯಿತು – ಈ ಮೊಲವು AI ಉತ್ಪನ್ನವಲ್ಲ, ನಕಲಿ ಫೋಟೋ ಕೂಡ ಅಲ್ಲ. ಅದರ ಮುಖದ ಮೇಲೆ ಬೆಳೆಯುತ್ತಿದ್ದವು ‘ಶೋಪ್ ಪ್ಯಾಪಿಲ್ಲೋಮಾ’ ಎಂಬ ವೈರಸ್‌ನಿಂದ ಉಂಟಾಗುವ ಮಾಂಸ ಖಂಡಗಳು. ಎಂದು
ಹಾಗೆಯೆ ಈ ವೈರಸ್ ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲಿ ಹೆಚ್ಚು ಸಕ್ರಿಯವಾಗುವ ಉಣ್ಣೆಗಳ ಮೂಲಕ ಹರಡುತ್ತದೆ. ಇದು ಮೊಲಗಳ ನಡುವೆ ಮಾತ್ರ ಹರಡುತ್ತದೆ – ಬೆಕ್ಕು, ನಾಯಿ ಅಥವಾ ಮನುಷ್ಯರಿಗೆ ಯಾವುದೇ ಅಪಾಯವಿಲ್ಲ. ಎಂದು ಹೇಳಿದ್ರು
ಆದರೆ, ಇಂದಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ಎಲ್ಲವೂ “ಇದೊಂದು ಹೊಸ ಅಪಾಯ!” ಎನಿಸುತ್ತದೆ. ಅದರ ಫಲಿತಾಂಶವೇನು ಅಂದರೆ – ಪೂರ್ಣವಾಗಿ ನಿರಪಾಯವಾಗಿರುವ ಈ ಪುಟ್ಟ ಮೊಲ, ಕೆಲ ದಿನಗಳ ಕಾಲ ಅಮೆರಿಕದ ‘ಹಾರರ್ ಸ್ಟಾರ್’ ಆಗಿ ಬೆಳೆದಿತ್ತು!





