ಪತಿಯ ಮನೆಯ ಮುಂದೆ ಪತ್ನಿ ಧರಣಿ ಕಾರಣ ವರದಕ್ಷಿಣೆ …!

ತುಮಕೂರಿನ ಪತಿ ಮನೆ ಮುಂದೆ ಪತ್ನಿಯ ಧರಣಿ ಸತ್ಯಾಗ್ರಹ
ಪತಿ, ಪೋಷಕರು ತನಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದ ಪ್ರೇರಣಾ
ತನ್ನ ಒಡವೆ ವಾಪಸ್ ಕೊಡುವಂತೆ ಪ್ರೇರಣಾರಿಂದ ಧರಣಿ
ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿರುವ ನವ ವಿವಾಹಿತೆ ತನ್ನ ಪತಿಯ ಮನೆಯ ಮುಂದೆ ಧರಣಿ ನಡೆಸುತ್ತಿದ್ದಾರೆ. ಮದುವೆ ವೇಳೆ ತನಗೆ ತನ್ನ ಪೋಷಕರು ನೀಡಿದ್ದ ಒಡವೆಗಳನ್ನು ಗಂಡ ಹಾಗೂ ಗಂಡನ ಮನೆಯವರು ಇಟ್ಟುಕೊಂಡಿದ್ದಾರೆ. ಅವುಗಳನ್ನು ವಾಪಸ್ ನೀಡಬೇಕೆಂದು ಆಗ್ರಹಿಸಿ ಪತಿಯ ಮನೆ ಮುಂದೆ ಪತ್ನಿ ಧರಣಿ ಆರಂಭಿಸಿದ್ದಾರೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯ ಪತಿ ಪ್ರಜ್ವಲ್ ಶಂಕರ್ ಮನೆ ಮುಂದೆ ಪತ್ನಿ ಪ್ರೇರಣಾ ಧರಣಿ ಆರಂಭಿಸಿದ್ದಾರೆ.
ತನಗೆ ವರದಕ್ಷಿಣೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಪತ್ನಿ ಪ್ರೇರಣಾ ಆರೋಪ ಮಾಡಿದ್ದಾರೆ. ಮನೆಯ ಮುಂದೆ ಧರಣಿ ನಡೆಸುತ್ತಿರುವ ಸೊಸೆ ಪ್ರೇರಣಾಳನ್ನು ಅತ್ತೆ, ಮಾವ, ಗಂಡ ಭೇಟಿಯಾಗದೇ ಮನೆಯೊಳಗೆ ಇದ್ದಾರೆ.
ನಾನೇ ಬೇಡವಾದ ಮೇಲೆ, ನನ್ನ ಚಿನ್ನದ ಒಡವೆಗಳನ್ನು ಏಕೆ ಇಟ್ಟುಕೊಂಡಿದ್ದೀರಿ, ಅವುಗಳನ್ನು ವಾಪಸ್ ಕೊಡಿ ಎಂದು ಪತ್ನಿ ಪ್ರೇರಣಾ ಆಗ್ರಹಿಸುತ್ತಿದ್ದಾರೆ. ಮದುವೆ ವೇಳೆ ತನಗೆ ತನ್ನ ಪೋಷಕರು 130 ಗ್ರಾಂ ಚಿನ್ನದ ಆಭರಣ ನೀಡಿದ್ದರು. ಅವುಗಳನ್ನು ತನಗೆ ವಾಪಸ್ ನೀಡಬೇಕು ಅನ್ನೋದು ಪತ್ನಿ ಪ್ರೇರಣಾ ಆಗ್ರಹ. ಈಗ ನಮ್ಮ ಅಪ್ಪ, ಅಮ್ಮ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಅವರ ಸಾಲ ತೀರಿಸಲು ನಮಗೆ ನಮ್ಮ ಒಡವೆಗಳು ವಾಪಸ್ ಬೇಕು ಎಂದು ಪತ್ನಿ ಪ್ರೇರಣಾ ಪಟ್ಟು ಹಿಡಿದಿದ್ದಾರೆ. ಮಗಳು ಪ್ರೇರಣಾ ಜೊತೆ ತಾಯಿ ಚಂದ್ರಕಲಾ ಕೂಡ ಧರಣಿ ನಡೆಸುತ್ತಿದ್ದಾರೆ.

ರಾಜ್ಯ ಮಹಿಳಾ ಆಯೋಗ ಹಾಗೂ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರತಿ, ಪ್ರೇರಣಾ-ಪ್ರಜ್ವಲ್ ಶಂಕರ್ ಮದುವೆ ಪೋಟೋ.

ಕಳೆದ ವರ್ಷದ ಆಗಸ್ಟ್ ನಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಟೌನ್ ನಿವಾಸಿ ಪ್ರೇರಣಾ ಹಾಗೂ ತುಮಕೂರಿನ ಸಪ್ತಗಿರಿ ಬಡಾವಣೆಯ ನಿವಾಸಿ ಪ್ರಜ್ವಲ್ ಶಂಕರ್ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು. ಮದುವೆಯಾದ ನಾಲ್ಕು ತಿಂಗಳಲ್ಲೇ ಪತಿ ಪ್ರಜ್ವಲ್ ಶಂಕರ್ ಹಾಗೂ ಪೋಷಕರು ತನಗೆ ವರದಕ್ಷಿಣೆ ಕಿರುಕುಳ ನೀಡಿದ್ದರು ಎಂದು ಪತ್ನಿ ಪ್ರೇರಣಾ ಆರೋಪಿಸಿ ತುಮಕೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನ ಮೇಲೆ ಹಲ್ಲೆ ನಡೆಸಿ, ದೈಹಿಕ, ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ತುಮಕೂರಿನ ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಎರಡು ಕಡೆಯವರನ್ನು ಕರೆಸಿ, ರಾಜೀ ಸಂಧಾನ ಮಾಡಿ ಪೊಲೀಸರು ಬುದ್ದಿವಾದ ಹೇಳಿ ಕಳಿಸಿದ್ದಾರೆ. ಆದರೇ, ಮತ್ತೆ ಪತಿ ಪ್ರಜ್ವಲ್ ಶಂಕರ್ ಹಾಗೂ ಆತನ ಪೋಷಕರು ನನಗೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಪತ್ನಿ ಪ್ರೇರಣಾ ಆರೋಪಿಸಿದ್ದಾರೆ. ಈಗ ನ್ಯಾಯಕ್ಕಾಗಿ ಆಗ್ರಹಿಸಿ ರಾಜ್ಯ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.
ತನ್ನ ಚಿನ್ನಾಭರಣಗಳನ್ನು ವಾಪಸ್ ನೀಡುವವರೆಗೂ ಪತಿಯ ಮನೆಯ ಮುಂದೆ ಧರಣಿ ಮುಂದುವರಿಸುವುದಾಗಿ ಪ್ರೇರಣಾ ಹೇಳಿದ್ದಾರೆ.

Related Posts

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ರಾಜ್ಯದಲ್ಲಿ ಈ ತಿಂಗಳಿನಿಂದ ಆರಂಭವಾಗಲಿರುವ ಎಸ್‌ಐಆರ್ (ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, “ಕೇರಳದ ಮಾದರಿಯಲ್ಲಿ ನಮ್ಮಲ್ಲೂ ಈ…

ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಶಾಸಕ ಯತ್ನಾಳ್ !

  ಬಾಗಲಕೋಟೆ ಉಪಚುನಾವಣೆ ಅಖಾಡದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವೀರಣ್ಣ ಚರಂತಿಮಠ ಅವರ ಪರವಾಗಿ ಪ್ರಚಾರ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹಿಂದೂ ಸಮಾಜದ ಐಕ್ಯತೆಯನ್ನು…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!