ಬಿದನಗೆರೆಯಲ್ಲಿ ಇದೆ ಹನುಮಂತನ ಪತ್ನಿ ಜೊತೆ ನವಗ್ರಹಗಳ ಪತ್ನಿಯರ ವಿಶೇಷ ದೇವಾಲಯ.

ಹನುಮಂತನಿಗೆ ಮದುವೆಯಾಗಿಲ್ಲ, ಹೆಂಡತಿಯೂ ಇರಲಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹನುಮಂತನು ಆಜನ್ಮ ಬ್ರಹ್ಮಚಾರಿ ಎಂದು ಹೇಳಲಾಗುತ್ತದೆ. ಆದರೆ ಅವನಿಗೆ ಬೆವರಿನ ಹನಿಯಿಂದ ಜನಿಸಿದ ಮಕರಧ್ವಜ ಎಂಬ ಮಗನೂ ಇದ್ದಾನೆ. ಆದರೆ, ಇನ್ನು ಕೆಲವೆಡೆ ಹನುಮಂತನ ಪತ್ನಿಯರ ಬಗ್ಗೆಯೂ ಉಲ್ಲೇಖವಿದೆ. ಹನುಮಂತನ ಹೆಂಡತಿಯ ಬಗ್ಗೆ, ಹನುಮಂತನು ವಿವಾಹವಾಗಿರುವುದರ ಬಗ್ಗೆ ನಿಮಗೆ ತಿಳಿದುಕೊಳ್ಳಲು ಆಸಕ್ತಿಯಿದ್ದರೆ ಈ ಸ್ಟೋರಿ ನೋಡಿ

ಕಲ್ಪತರು ನಾಡು ಎಂದೇ ಪ್ರಸಿದ್ದಿಯಾದ ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ ‘ಬಿದನಗೆರೆ ಬಸವೇಶ್ವರ ಮಠ’ ಹಲವು ವೈಶಿಷ್ಟ್ಯಗಳ ತವರು. ವಿಶ್ವವಿಖ್ಯಾತ 161 ಅಡಿ ಎತ್ತರದ ಬೃಹತ್ ಪಂಚಮುಖಿ ಆಂಜನೇಯ ವಿಗ್ರಹ ಸ್ಥಾಪಿಸಲ್ಪಟ್ಟ ಪುಣ್ಯಭೂಮಿ. ಇಲ್ಲಿ ನೆಲೆಸಿರುವ ಶ್ರೀ ಶನೇಶ್ವರಸ್ವಾಮಿ ಸ್ವಾಮಿಯ ದರ್ಶನಕ್ಕೆ ಹಾಗೂ ನವಗ್ರಹ ದಂಪತಿಗಳ ದರ್ಶನಕ್ಕೆ ರಾಜ್ಯ, ಹೊರರಾಜ್ಯ ಮಾತ್ರವಲ್ಲದೇ ವಿದೇಶಗಳಿಂದಲೂ ಅಸಂಖ್ಯಾತ ಭಕ್ತರು ಬರುತ್ತಿರುವುದು ಈ ಕ್ಷೇತ್ರದ ಮಹಿಮೆ ಮತ್ತು ಜನಪ್ರಿಯತೆಗೆ ಸಾಕ್ಷಿ. ಈ ಕಾರಣಕ್ಕೆ ಈ ಕ್ಷೇತ್ರವು ‘ಕರ್ನಾಟಕದ ಶನಿಸಿಂಗ್ಲಾಪುರ’ ಎಂದು ಪ್ರಸಿದ್ದಿ ಪಡೆದಿದೆ. ಈ ಕ್ಷೇತ್ರ ಇಂದು ವಿಶ್ವಮಟ್ಟದಲ್ಲಿ ಜನಪ್ರಿಯತೆ ಪಡೆಯುವ ಮೂಲಕ ಕರ್ನಾಟಕದ ಹೆಗ್ಗುರುತಾಗಿದೆ. ಶ್ರೀ ಶನೇಶ್ವರ ಸ್ವಾಮಿಯ ವಾಹನ ಕಾಕವಾಹನ.

ಬಿದನಗೆರೆ ದೇಗುಲದ ಗೋಪುರದ ಮುಂಭಾಗದಲ್ಲಿ 50 ಅಡಿ ಎತ್ತರದ ಬೃಹತ್ ಜೋಡಿ ಕಾಕವಾಹನ ವಿಗ್ರಹವನ್ನು ನಿರ್ಮಿಸಿದ್ದು, ಇದು ಎಲ್ಲರ ಆಕರ್ಷಣೆಯ #ಕೇಂದ್ರ ಬಿಂದುವಾಗಿದೆ. ಈ ರೀತಿಯ ಬೃಹತ್ ಕಾಕವಾಹನ ವಿಗ್ರಹ ಇಲ್ಲಿ ಮಾತ್ರ ಭಕ್ತರಿಗೆ ಕಾಣಸಿಗಲಿದೆ. ಇದು ಶನೇಶ್ವರ ಸ್ವಾಮಿಯ ಮೂಲ ಕ್ಷೇತ್ರವಾಗಿದೆ. ಬಿದನಗೆರೆಯಲ್ಲಿ ಮೊದಲು ಸ್ಥಾಪಿತವಾಗಿದ್ದೆ ಶ್ರೀ ಶನೇಶ್ವರ ಸ್ವಾಮಿ. ಇಲ್ಲಿ ಸುವರ್ಣಲೇಪಿತ ಬಂಗಾರದ ಶನೇಶ್ವರನಿಗೆ ಎಳ್ಳೆಣ್ಣೆ ಅಭಿಷೇಕ ಮಾಡುವುದರಿಂದ ಭಕ್ತರ ಗ್ರಹದೋಷ ನಿವಾರಣೆಯಾಗುತ್ತದೆಂಬ ಪ್ರತೀತಿಯಿದೆ. ಕ್ಷೇತ್ರಕ್ಕೆ ಬಂದ ಕೂಡಲೇ ವಿಘ್ನನಿವಾರಕ ಪ್ರಥಮವಂದಿತ ಗಣೇಶನ ದರ್ಶನ ಪಡೆಯಬಹುದು. ನಂತರ ನವಗ್ರಹ ದಂಪತಿಗಳ ದರ್ಶನ ಪಡೆಯಬಹುದು.

ಪತ್ನಿಯೊಂದಿಗೆ ಹನುಮಂತನ ದೇವಸ್ಥಾನ:
ವಾಸ್ತವವಾಗಿ, ಬಿದನಗೆರೆಯ ಶ್ರೀ ಬಸವೇಶ್ವರ ಮಠದಲ್ಲಿ ಹನುಮಂತನು ತನ್ನ ಪತ್ನಿಯೊಂದಿಗೆ ನೆಲೆಸಿರುವ ದೇವಾಲಯವಿದೆ. ಅಂದರೆ, ಹನುಮಂತನೊಂದಿಗೆ ಅವನ ಹೆಂಡತಿಗೂ ದೇವಾಲಯವಿದೆ. ಈ ದೇವಾಲಯದ ಬಗ್ಗೆ ಕೆಲವೇ ಜನರಿಗೆ ಮಾತ್ರ ತಿಳಿದಿದೆ. ಇಲ್ಲಿ ಹನುಮಂತನ ಪತ್ನಿಯ ದರ್ಶನ ಪಡೆಯಲು ದೂರದೂರುಗಳಿಂದ ಜನರು ಬರುತ್ತಾರೆ. ಈ ದೇವಾಲಯಕ್ಕೆ ಬಂದು ಹನುಮಂತನ ದರ್ಶನ ಪಡೆಯುವುದರಿಂದ ಪತಿ – ಪತ್ನಿಯರ ನಡುವಿನ ಅದೆಷ್ಟೋ ಸಮಸ್ಯೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಸೂರ್ಯ ದೇವನ ಮಗಳೇ ಹನುಮಂತನ ಪತ್ನಿ ಎಂದು ಹೇಳಲಾಗಿದೆ.

ಹನುಮಂತನ ಪತ್ನಿ
ಈ ದೇವಾಲಯದಲ್ಲಿ, ಹನುಮಂತನು ತನ್ನ ಬ್ರಹ್ಮಚರ್ಯದ ರೂಪದಲ್ಲಿ ಅಲ್ಲ, ತನ್ನ ಪತ್ನಿ ಸುವರ್ಚಲಾ ಜೊತೆ ಗೃಹಸ್ಥನ ರೂಪದಲ್ಲಿ ಕುಳಿತಿದ್ದಾನೆ. ಹನುಮಂತನ ಪತ್ನಿಯ ಹೆಸರು ಸುವರ್ಚಲಾ. ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಲಿತದಲ್ಲಿರುವ ಮಾಹಿತಿಯ ಆಧಾರದ ಮೇಲೆ, ಪರಾಶರ ಸಂಹಿತೆಯಲ್ಲಿ ಹನುಮಂತನ ವಿವಾಹದ ಬಗ್ಗೆ ಉಲ್ಲೇಖವಿದೆ ಎಂದು ಹೇಳಲಾಗುತ್ತದೆ.


ಹನುಮಂತನ ಪತ್ನಿ ಸುವರ್ಚಲಾ ಯಾರು?
ಹನುಮಂತನ ಪತ್ನಿ ಸುವರ್ಚಲಾ ಸೂರ್ಯನ ಮಗಳು. ಕೆಲವು ವಿಶೇಷ ಸನ್ನಿವೇಶಗಳಿಂದಾಗಿ ಬಜರಂಗಬಲಿ ಸುವರ್ಚಲಾಳನ್ನು ಮದುವೆಯಾಗಬೇಕಾಯಿತು. ಹನುಮಂತನ ಎಲ್ಲಾ ಭಕ್ತರು ಹನುಮಂತನನ್ನು ಬಾಲ ಬ್ರಹ್ಮಚಾರಿ ಎಂದು ನಂಬುತ್ತಾರೆ ಮತ್ತು ಬಾಲ ಹನುಮಂತನ ಈ ರೂಪವನ್ನು ವಾಲ್ಮೀಕಿ, ಕಂಭ ಸೇರಿದಂತೆ ರಾಮಾಯಣ ಮತ್ತು ರಾಮಚರಿತ ಮಾನಸದಲ್ಲಿ ವಿವರಿಸಲಾಗಿದೆ.

ಹನುಮಂತನು ಸುವರ್ಚಲಾಳನ್ನು ಏಕೆ ಮದುವೆಯಾದನು?
ವಾಸ್ತವವಾಗಿ ಹನುಮಂತನು ಸೂರ್ಯನನ್ನು ತನ್ನ ಗುರುವನ್ನಾಗಿ ಮಾಡಿಕೊಂಡಿದ್ದನು. ಹನುಮಂತನು ಸೂರ್ಯನಿಂದ ಶಿಕ್ಷಣ ಪಡೆಯುತ್ತಿದ್ದನು. ಸೂರ್ಯ ದೇವನಿಗೆ ಒಂದೆಡೆ ನಿಂತು ಹನುಮಂತನಿಗೆ ಶಿಕ್ಷಣವನ್ನು ನೀಡಲು ಸಾಧ್ಯವಾಗಲಿಲ್ಲ. ಸೂರ್ಯದೇವ ಎಲ್ಲೆಲ್ಲಿ ಚಲಿಸುತ್ತಾನೋ ಅಲ್ಲೆಲ್ಲಾ ಹನುಮಂತನು ಅವನನ್ನು ಹಿಂಬಾಲಿಸುತ್ತಾನೆ. ಹನುಮಂತನಿಗೆ ಜ್ಞಾನವನ್ನು ನೀಡುವಾಗ, ಒಂದು ದಿನ ಸೂರ್ಯನ ಮುಂದೆ ಧಾರ್ಮಿಕ ಬಿಕ್ಕಟ್ಟು ಉದ್ಭವಿಸಿತು. ಒಟ್ಟು 9 ವಿಧದ ಶಿಕ್ಷಣದಲ್ಲಿ, ಹನುಮಂತನು 5 ವಿವಿಧ ಶಿಕ್ಷಣವನ್ನು ಪಡೆದುಕೊಂಡನು. ಆದರೆ ಉಳಿದ 4 ವಿಧದ ಶಿಕ್ಷಣ ಮತ್ತು ಜ್ಞಾನವು ವಿವಾಹಿತ ವ್ಯಕ್ತಿಗೆ ಮಾತ್ರ ಕಲಿಸಲು ಸೀಮಿತವಾಗಿತ್ತು. ಹನುಮಂತನು ಸಂಪೂರ್ಣ ಶಿಕ್ಷಣ ಪಡೆಯಲು ಪ್ರತಿಜ್ಞೆ ಮಾಡಿದ್ದನು ಮತ್ತು ತನ್ನ ಪ್ರತಿಜ್ಞೆಗಿಂತ ಕಡಿಮೆ ಏನನ್ನೂ ಸ್ವೀಕರಿಸಲು ಸಿದ್ಧರಿರಲಿಲ್ಲ.
https://youtu.be/UCs0fBWwHUo?si=TrK04J1kmLYJ-NLp
ಹೀಗಿರುವಾಗ ಸೂರ್ಯದೇವನು ಹನುಮಂತನಿಗೆ ವಿವಾಹವಾಗುವಂತೆ ಸಲಹೆ ನೀಡಿದನು ಮತ್ತು ತನ್ನ ಪ್ರತಿಜ್ಞೆಯನ್ನು ಪೂರೈಸಲು ಹನುಮಂತನು ವಿವಾಹ ಸೂತ್ರದಲ್ಲಿ ಕಟ್ಟುಬಿದ್ದು ಶಿಕ್ಷಣವನ್ನು ತೆಗೆದುಕೊಳ್ಳಲು ಸಿದ್ಧನಾದನು. ಆದರೆ ಹನುಮಂತನಿಗೆ ವಧು ಯಾರು ಎನ್ನುವ ಚಿಂತೆ ಎಲ್ಲರನ್ನೂ ಕಾಡತೊಡಗಿತು. ಅಂತಹ ಪರಿಸ್ಥಿತಿಯಲ್ಲಿ, ಸೂರ್ಯದೇವನು ತನ್ನ ಶಿಷ್ಯ ಹನುಮಂತನಿಗೆ ದಾರಿ ತೋರಿಸಿದನು. ಸೂರ್ಯದೇವನು ತನ್ನ ಪರಮ ತಪಸ್ವಿ ಮತ್ತು ಬೆರಗುಗೊಳಿಸುವ ಸೌಂದರ್ಯವನ್ನು ಹೊಂದಿರು ತನ್ನ ಮಗಳು ಸುವರ್ಚಲಾಳನ್ನು ಹನುಮಂತನಿಗೆ ಕೊಟ್ಟು ಮದುವೆ ಮಾಡಿಸಿದನು. ಇದಾದ ನಂತರ ಹನುಮಂತನು ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದನು ಮತ್ತು ಸುವರ್ಚಲಾ ತನ್ನ ತಪಸ್ಸಿನಲ್ಲಿ ಶಾಶ್ವತವಾಗಿ ಮುಳುಗಿದಳು.

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು