
ಭಾರತಕ್ಕೆ ಬಂದ ಅದೆಷ್ಟೋ ವಿದೇಶಿಗರು ಭಾರತದ ಸಂಸ್ಕೃತಿ, ಆಚಾರ ವಿಚಾರಗಳನ್ನು ಅನುಸರಿಸಿಕೊಂಡು ಹೋಗುವುದರ ಜತೆಗೆ ಭಾಷೆಗಳನ್ನು ಕಲಿಯುತ್ತಾರೆ. ಕರ್ನಾಟಕದಲ್ಲೂ ಇಂತಹ ಘಟನೆಗಳಿಗೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿದೆ. ಕನ್ನಡ ಹಾಡುಗಳನ್ನು ಹಾಡುವುದು, ಕನ್ನಡ ಮಾತನಾಡುವುದು, ಅದನ್ನು ಕಲಿಯುವ ಆಸಕ್ತಿ ತೋರಿಸುವುದು ಹೀಗೆ ಅನೇಕ ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಇದೀಗ ವಿಡಿಯೋವೊಂದು ಭಾರೀ ವೈರಲ್ ಆಗಿದ್ದು, ಕನ್ನಡಿಗರ ಮನಸ್ಸು ಈ ವಿಡಿಯೋ ಗೆದ್ದಿದೆ.
ಬೆಂಗಳೂರಿನಲ್ಲಿ ರಷ್ಯಾದ ಹುಡುಗಿ ಹಾಗೂ ಆಕೆಯ ಭಾರತೀಯ ಸ್ನೇಹಿತ ಜತೆಗೆ ಸೈಕಲ್ ಓಡಿಸುತ್ತ, ಕನ್ನಡ ಕವಿತೆಯನ್ನು ಹಾಡಿದ್ದಾಳೆ. ಇದೀಗ ಕನ್ನಡಿಗರ ಹೃದಯಕ್ಕೆ ಮುಟ್ಟಿದೆ. ಈ ರಷ್ಯಾದ ಹುಡುಗಿಯ ತಾಯಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಕನ್ನಡ ಪದ್ಯಕ್ಕೆ ಮೀಸಲಾಗಿರದೇ, ಅವರ ಅಂತರ್-ಸಾಂಸ್ಕೃತಿಕ ಸ್ನೇಹ ಮತ್ತು ಭಾಷಾ ಬಾಂಧವ್ಯದ ಬಗ್ಗೆ ಹೇಳಿದೆ.

ಈ ವಿಡಿಯೋದಲ್ಲಿ ರಷ್ಯಾದ ಹುಡುಗಿಯ ತಾಯಿ ಹೇಳಿರುವಂತೆ, ಇವರಿಬ್ಬರೂ ಮೂರು ವರ್ಷಗಳಿಂದ ಸಹಪಾಠಿಗಳು ಮತ್ತು ಆಪ್ತ ಸ್ನೇಹಿತರಾಗಿದ್ದಾರೆ. ಸೈಕಲ್ನಲ್ಲಿ ಆಟವಾಡುತ್ತ, ಕನ್ನಡದ ಖ್ಯಾತ ಪದ್ಯ “ಬಣ್ಣದ ಹಕ್ಕಿ” ಎಂಬ ಹಾಡನ್ನು ಇಬ್ಬರು ಒಟ್ಟಿಗೆ ಹಾಡಿದ್ದಾರೆ. ಮಕ್ಕಳ ಕನ್ನಡ ಹಾಡನ್ನು ಕೇಳಿ ನಮಗೆ ಖುಷಿಯಾಗಿದೆ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋದ ಜತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 2022ರಲ್ಲಿ ಹಂಚಿಕೊಂಡ ಫೋಟೋ ಕೂಡ ವೈರಲ್ ಆಗಿದೆ. ರಷ್ಯಾದ ಕುಟುಂಬ ಭಾರತಕ್ಕೆ ಸ್ಥಳಾಂತರಗೊಂಡಾಗಿನಿಂದ ಇವರಿಬ್ಬರ ಸ್ನೇಹ ಬೆಳೆದುಕೊಂಡಿದೆ ಎಂದು ಹೇಳಿದ್ದಾರೆ.





