ಮಗ ಮದುವೆಯಾಗಬೇಕಿದ್ದ ಯುವತಿ ಜೊತೆ ಓಡಿಹೋಗಿ ವಿವಾಹವಾದ ಅಪ್ಪ!…ಊರಿನಿಂದ ಬಹಿಷ್ಕಾರ ಮಾಡಿದ ಗ್ರಾಮಸ್ಥರು…

ಮಗ ಮದುವೆಯಾಗಬೇಕಾಗಿದ್ದ ಯುವತಿಯನ್ನು ನೋಡಿದ ಆತನ ಅಪ್ಪನಿಗೆ ಆಕೆಯ ಮೇಲೆ ಲವ್ ಎಟ್ ಫಸ್ಟ್ ಸೈಟ್ ಆಗಿತ್ತು! ತನಗೆ ಸೊಸೆಯಾಗಬೇಕಾದವಳನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂದು ಬಯಸಿದ ಆತ ಆಕೆಯ ಜೊತೆ ಓಡಿಹೋಗಿ ತಾನೇ ಮದುವೆಯಾಗಿದ್ದಾನೆ. ಈ ಮೂಲಕ ಆತ ತನ್ನ ಮಗನಿಗೆ ಶಾಕ್ ನೀಡಿದ್ದಾನೆ. ಉತ್ತರ ಪ್ರದೇಶದ ರಾಂಪುರದಲ್ಲಿ ಈ ಘಟನೆ ನಡೆದಿದೆ. ಅವರಿಬ್ಬರನ್ನೂ ಗ್ರಾಮ ಪಂಚಾಯತ್ ನಿಂದ ಗಡೀಪಾರು ಮಾಡಲಾಗಿದೆ.

ತಂದೆಯೊಬ್ಬ ತನ್ನ ಮಗ ಮದುವೆಯಾಗಬೇಕಿದ್ದ ಯುವತಿಯನ್ನು ಮದುವೆಯಾದ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ. ತನ್ನ ಸೊಸೆಯಾಗಬೇಕಿದ್ದ ಯುವತಿಯನ್ನು ಮದುವೆಯಾದ ವ್ಯಕ್ತಿ ಆಕೆಯೊಂದಿಗೆ ಊರಿಗೆ ಹಿಂತಿರುಗಿದಾಗ ಅವ್ಯವಸ್ಥೆ ಭುಗಿಲೆದ್ದಿತು. ಇದು ಅವನ ಮಗನೊಂದಿಗೆ ಜಗಳಕ್ಕೆ ಕಾರಣವಾಯಿತು. ತನ್ನ ಸೊಸೆಯಾಗಬೇಕಾದವಳು ಸವತಿಯಾಗಿ ಬಂದಿದ್ದನ್ನು ಕಂಡ ತಾಯಿ ತನ್ನ ಗಂಡ ಮತ್ತು ಆತನ ಹೊಸ ಹೆಂಡತಿಯ ಜೊತೆ ಜಗಳವಾಡಿ, ಅವರಿಬ್ಬರನ್ನೂ ಮನೆಯಿಂದ ಹೊರಗೆ ಹಾಕಿದರು. ಶಕೀಲ್ ಎಂಬ ಯುವಕ ಮದುವೆಯಾಗಬೇಕಿದ್ದ ಯುವತಿಯನ್ನು ಆತನ 55 ವರ್ಷದ ತಂದೆ ಮದುವೆಯಾಗಿದ್ದಾನೆ. ಇದರಿಂದ ಜಗಳ ಹೆಚ್ಚಾಗಿ, ಕೊನೆಗೆ ಆ ಗ್ರಾಮಸ್ಥರು ಅವರಿಬ್ಬರನ್ನೂ ಗಡಿಪಾರು ಮಾಡಿದ್ದಾರೆ.

ಈ ಮದುವೆ ನವ ವಧು ಮತ್ತು ಅವಳ ಅತ್ತೆಯ ನಡುವೆ ಕೂಡ ತೀವ್ರ ಘರ್ಷಣೆಗೆ ಕಾರಣವಾಯಿತು. ಶಕೀಲ್ ಈ ಬಗ್ಗೆ ಆರೋಪಿಸಿದ್ದು, ನಾನು ಮದುವೆಯಾಗಬೇಕಿದ್ದ ಯುವತಿಯನ್ನು ಅಪ್ಪ ಮದುವೆಯಾಗಬೇಕೆಂದುಕೊಂಡಿರುವುದು ನನ್ನ ಅಜ್ಜಿಗೂ ತಿಳಿದಿತ್ತು. ಅವರೇ ಅಪ್ಪನಿಗೆ ಮದುವೆಯಾಗಲು ಸಹಾಯ ಮಾಡಿದರು ಎಂದು ಆತ ಆರೋಪಿಸಿದ್ದಾನೆ. ಒಂದು ವರ್ಷದ ಹಿಂದೆ ಅಜೀಮ್ ನಗರ ಪೊಲೀಸ್ ಠಾಣೆ ಪ್ರದೇಶದ ಹುಡುಗಿಯ ಜೊತೆ ತನ್ನ ಮಗನ ಮದುವೆ ನಿಶ್ಚಯ ಮಾಡಿದ್ದ 55 ವರ್ಷದ ವ್ಯಕ್ತಿ, ತನ್ನ ಭಾವಿ ಸೊಸೆಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದಾಗ ಕ್ರಮೇಣ ಅವಳ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದರು. ಅವರ ಕುಟುಂಬಗಳಿಗೆ ತಿಳಿಯದೆ ಅವರ ಸಂಬಂಧ ಪ್ರಣಯ ಸಂಬಂಧವಾಗಿ ಮಾರ್ಪಟ್ಟಿತು.ಈ ಹಿಂದೆ ಅಲಿಗಢದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಅಲ್ಲಿ ಒಬ್ಬ ವರ ಮತ್ತು ಅವನ ಭಾವಿ ಅತ್ತೆ ಓಡಿಹೋಗಿದ್ದರು. ಏಪ್ರಿಲ್ ಆರಂಭದಲ್ಲಿ ಬಿಹಾರದ ನೇಪಾಳ ಗಡಿಯ ಬಳಿ ಅವರನ್ನು ಪತ್ತೆಹಚ್ಚಿ ಬಂಧಿಸಲಾಯಿತು.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!