ನಕಲಿ ಪನೀರ್ ಹಾವಳಿಗೆ ಬ್ರೇಕ್ ಹಾಕಲು FSSAI ಮಹತ್ವದ ಹೆಜ್ಜೆ

ಬೆಂಗಳೂರು : ನಕಲಿ ಪನೀರ್ ಹಾವಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಹತ್ವದ ಹೆಜ್ಜೆ ಇಟ್ಟಿದೆ. ಹಾಲಿನಿಂದ ತಯಾರಿಸದ ಅನಲಾಗ್ ಪನೀರ್ ಉತ್ಪನ್ನಗಳ ಮಾರಾಟಕ್ಕೆ ಹೊಸ ನಿಯಮಗಳನ್ನು ಜಾರಿಗೊಳಿಸಲು ಪ್ರಾಧಿಕಾರವು ಕರಡು ಪ್ರಸ್ತಾಪವನ್ನು ಸಿದ್ಧಪಡಿಸಿದೆ. ಈ ಕರಡು ನಿಯಮಗಳ ಪ್ರಕಾರ, ಹಾಲಿನಿಂದ ತಯಾರಿಸದ ಯಾವುದೇ ಉತ್ಪನ್ನಕ್ಕೆ ಪನೀರ್ ಎಂಬ ಹೆಸರನ್ನು ಬಳಸುವಂತಿಲ್ಲ. ಲೇಬಲ್ ಮತ್ತು ಮಾರ್ಕೆಟಿಂಗ್‌ಗಳಲ್ಲಿ ಪನೀರ್ ಪದವನ್ನು ಬಳಸುವುದಕ್ಕೆ ನಿರ್ಬಂಧ ವಿಧಿಸಲಾಗುವುದು.

ಉತ್ಪನ್ನದ ಸ್ವರೂಪದ ಬಗ್ಗೆ ಗ್ರಾಹಕರಲ್ಲಿ ಉಂಟಾಗುವ ಗೊಂದಲವನ್ನು ತಪ್ಪಿಸಲು ಮತ್ತು ಅವರಿಗೆ ತಪ್ಪು ಮಾಹಿತಿ ನೀಡದಂತೆ ತಡೆಯಲು FSSAI ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅನಲಾಗ್ ಡೈರಿ ಕಾಂಟ್ಯಾಕ್ಟ್ ಉತ್ಪನ್ನಗಳಿಗೂ ಹೊಸ ನಿಯಮಗಳನ್ನು ತರಲು ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಪ್ರಕಟಗೊಂಡಿರುವ ಈ ಕರಡು ನಿಯಮಗಳ ಬಗ್ಗೆ ಸಾರ್ವಜನಿಕರು 60 ದಿನಗಳ ಕಾಲ ತಮ್ಮ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಲು ಅವಕಾಶವಿದೆ. ಸಲಹೆ ಮತ್ತು ಆಕ್ಷೇಪಣೆಗಳ ಪರಿಶೀಲನೆಯ ನಂತರ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು. ಈ ಮೂಲಕ ಗುಣಮಟ್ಟದ ಪನೀರ್ ಅನ್ನು ಮಾತ್ರ ಗ್ರಾಹಕರು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು FSSAI ಮುಂದಾಗಿದೆ.

Related Posts

ವಿಧಾನಪರಿಷತ್‌ನಲ್ಲಿ ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪ: ಸರ್ಕಾರದ ಮುಂದಿನ ನಿರ್ಧಾರವೇನು?

ರಾಜ್ಯದಲ್ಲಿ ಹಾಲಿನ ದರ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡುವ ಕುರಿತು ವಿಧಾನಪರಿಷತ್‌ನಲ್ಲಿ ಗುರುವಾರ ತೀವ್ರ ಚರ್ಚೆ ನಡೆಯಿತು. ಬರ ಪರಿಸ್ಥಿತಿ ಕುರಿತಾದ ಚರ್ಚೆಯ ವೇಳೆ ಪ್ರಸ್ತಾಪ ಮಾಡಿದ ಕಾಂಗ್ರೆಸ್ ಸದಸ್ಯ ಎಸ್. ರವಿ, ರೈತರಿಗೆ ಆರ್ಥಿಕವಾಗಿ ಅನುಕೂಲ…

ಕರ್ನಾಟಕದ ಹಾಲು ಪರರ ಪಾಲು: ಖಾಸಗಿ ಕಂಪನಿಗಳ ಆಕರ್ಷಕ ಆಫರ್‌ಗೆ ಗಡಿಭಾಗದ ರೈತರು ಫಿದಾ!

ರಾಜ್ಯದ ಗಡಿಭಾಗದ ತಾಲೂಕು ಮತ್ತು ಜಿಲ್ಲೆಗಳ ಹಾಲು ಉತ್ಪಾದಕರು ನೆರೆರಾಜ್ಯಗಳ ಖಾಸಗಿ ಹಾಲು ಕಂಪನಿಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಕರ್ನಾಟಕದ ಹಾಲು ಒಕ್ಕೂಟಗಳಲ್ಲಿ ತೀವ್ರ ಹಾಲಿನ ಅಭಾವ ಎದುರಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸ್ಥಳೀಯ ಹಾಲು…

You Missed

ವಿಧಾನಪರಿಷತ್‌ನಲ್ಲಿ ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪ: ಸರ್ಕಾರದ ಮುಂದಿನ ನಿರ್ಧಾರವೇನು?

ವಿಧಾನಪರಿಷತ್‌ನಲ್ಲಿ ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪ: ಸರ್ಕಾರದ ಮುಂದಿನ ನಿರ್ಧಾರವೇನು?

ಕರ್ನಾಟಕದ ಹಾಲು ಪರರ ಪಾಲು: ಖಾಸಗಿ ಕಂಪನಿಗಳ ಆಕರ್ಷಕ ಆಫರ್‌ಗೆ ಗಡಿಭಾಗದ ರೈತರು ಫಿದಾ!

ಕರ್ನಾಟಕದ ಹಾಲು ಪರರ ಪಾಲು: ಖಾಸಗಿ ಕಂಪನಿಗಳ ಆಕರ್ಷಕ ಆಫರ್‌ಗೆ ಗಡಿಭಾಗದ ರೈತರು ಫಿದಾ!

ಮೈಸೂರು ಅರಮನೆಯ ಬಳಿ 11 ಫಿರಂಗಿ ಗಾಡಿಗಳಿಗೆ ವಿಶೇಷ ಪೂಜೆ.

ಮೈಸೂರು ಅರಮನೆಯ ಬಳಿ 11 ಫಿರಂಗಿ ಗಾಡಿಗಳಿಗೆ ವಿಶೇಷ ಪೂಜೆ.

ನಕಲಿ ಪನೀರ್ ಹಾವಳಿಗೆ ಬ್ರೇಕ್ ಹಾಕಲು FSSAI ಮಹತ್ವದ ಹೆಜ್ಜೆ

ನಕಲಿ ಪನೀರ್ ಹಾವಳಿಗೆ  ಬ್ರೇಕ್ ಹಾಕಲು FSSAI ಮಹತ್ವದ ಹೆಜ್ಜೆ

5 ಗಂಟೆಯ ರೈಲಿನ ಪ್ರಯಾಣ ನರಕ: ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದ!

5 ಗಂಟೆಯ ರೈಲಿನ ಪ್ರಯಾಣ ನರಕ:  ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದ!

ಮತ್ತಷ್ಟು ಬಿಗಿಯಾಗಲಿದೆ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಕುಣಿಕೆ!

ಮತ್ತಷ್ಟು ಬಿಗಿಯಾಗಲಿದೆ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಕುಣಿಕೆ!