ಮತ್ತಷ್ಟು ಬಿಗಿಯಾಗಲಿದೆ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಕುಣಿಕೆ!

ಬೆಂಗಳೂರು: ಜಾರಿ ನಿರ್ದೇಶನಾಲಯ (ED) ದಾಳಿ ಪ್ರಕರಣ ಸಂಬಂಧ ಸತೀಶ್ ಜಾರಕಿಹೊಳಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಪ್ರಕರಣವನ್ನ ಬೆಂಗಳೂರಿನಿಂದ ದೆಹಲಿಗೆ ಶಿಫ್ಟ್ ಮಾಡಲು ಸಿದ್ದತೆ ನಡೆದಿದ್ದು, ಬೆಂಗಳೂರು ಅಧಿಕಾರಿಗಳ ಬದಲು ದೆಹಲಿ ಅಧಿಕಾರಿಗಳಿಂದ ತನಿಖೆ ನಡೆಯಲಿದೆ. ದಾಳಿ ವೇಳೆ ಸಿಕ್ಕಿರುವ ಸಾಕ್ಷ್ಯಗಳ ಪರಿಶೀಲನೆಯನ್ನು ದೆಹಲಿ ಅಧಿಕಾರಿಗಳು ನಡೆಸಿದ್ದು, ವಿದೇಶಿ ಬಂಡವಾಳ ಮತ್ತು ಮನಿ ಲ್ಯಾಂಡರಿಂಗ್​​ ವಿಚಾರವಾಗಿ ತನಿಖೆ ನಡೆಯಲಿದೆ. ಬೆಂಗಳೂರು ಇಡಿ ಅಧಿಕಾರಿಗಳು ಅನೇಕ ಹೈಫ್ರೋಫೆಲ್ ಕೇಸ್​​ಗಳ ತನಿಖೆ ನಡೆಸುತ್ತಿರುವ ಕಾರಣ, ದೆಹಲಿ ಅಧಿಕಾರಿಳಿಗೆ ಸತೀಶ್ ಜಾರಕಿಹೊಳಿ ಕೇಸ್ ವಹಿಸಲಾಗಿರುವ ಮಾಹಿತಿ ಇದೆ.

ಇಡಿ ದಾಳಿ ವೇಳೆ ಸಿಕ್ಕಿವೆ ಬಲವಾದ ಆಧಾರಗಳು!
ಮತ್ತೊಂದೆಡೆ ದಾಳಿ ವೇಳೆ ಇಡಿ ಅಧಿಕಾರಿಗಳಿಗೆ ಸತೀಶ್​​ ಜಾರಕಿಹೊಳಿ ಅವರ ಮನೆಯಲ್ಲಿ ಬಲವಾದ ಸಾಕ್ಷ್ಯಗಳು ಸಿಕ್ಕಿವೆಯಂತೆ. ಸಂಬಂಧಿಕರು, ಸಹಚರರ ಬಳಿಯೂ ಸಾಕ್ಷ್ಯ ಪತ್ತೆಯಾಗಿದೆ ಕೇಂದ್ರದಿಂದ ಬಂದಂತ ಅನುದಾನದಲ್ಲಿ ಕ್ಯಾಪಿಟಲ್ ಅಸೋಸಿಯಟ್ಸ್ ಸ್ಕೀಮ್ ಅಡಿ ನಡೆದಿರುವ ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ಭಷ್ಟಚಾರ ಪತ್ತೆಯಾಗಿದೆ. ರಸ್ತೆ ಕಾಮಗಾರಿಗಳ ಗುತ್ತಿಗೆಯಲ್ಲಿ ಭಾರಿ ಅಕ್ರಮ ನಡೆದಿರುವ ಸಂಬಂಧ ಆಧಾರಗಳು ಸಿಕ್ಕಿವೆ ಎನ್ನಲಾಗಿದೆ.

ರಾಜ್ಯದಲ್ಲಿ 110 ಕಿ.ಮೀ ಉದ್ದದ ಮೂರು ರಸ್ತೆ ಕಾಮಗಾರಿಗಳ ಸಂಬಂಧ 3,190 ಕೋಟಿ ರೂ. ಅನುಮೋದನೆ ನೀಡಲಾಗಿತ್ತು. ರಾಜ್ಯ ಸರ್ಕಾರದ 40% ಪಾಲು ಬಿಟ್ಟು ಕೇಂದ್ರ ಉಳಿದ ಹಣ ನೀಡಿತ್ತು. ಈ ಅನುದಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಇಡಿಗೆ ಸಾಕ್ಷ್ಯ ಲಭ್ಯವಾಗಿದೆ. ಪಶ್ಚಿಮ ಬಂಗಾಳ ಮೂಲದ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೆವೇಟ್​​ ಲಿಮಿಟೆಡ್​​ ಕಂಪನಿ ಸೇರಿದಂತೆ, ವಿವಿಧ ಕಂಪನಿಗಳಿಂದ ರಸ್ತೆ ಕಾಮಗಾರಿ ಗುತ್ತಿಗೆಗೆ ಲಂಚ ಪಾವತಿ ಪತ್ತೆಯಾಗಿದೆ. ಅಲ್ಲದೆ ವಿದೇಶಿ ಬಂಡವಾಳ ಹೂಡಿಕೆಯಲ್ಲೂ ನಿಯಮ ಮೀರಿದ್ದು ಕಂಡುಬಂದಿದ್ದು, ಆಫ್ರಿಕಾ ಖಂಡದ ಕಾಂಗೋ ದೇಶದ ಗಣಿ ಉದ್ಯಮದಲ್ಲಿ 40% ಪಾಲಿನ ಬಗ್ಗೆ ಮಾಹಿತಿ ಸಿಕ್ಕಿದೆಯಂತೆ. ಹೀಗಾಗಿ ಸಚಿವರಿಗೆ ಮತ್ತಷ್ಟು ಸಂಕಷ್ಟ ಫಿಕ್ಸ್​​ ಎನ್ನಲಾಗ್ತಿದೆ.

Related Posts

ವಿಧಾನಪರಿಷತ್‌ನಲ್ಲಿ ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪ: ಸರ್ಕಾರದ ಮುಂದಿನ ನಿರ್ಧಾರವೇನು?

ರಾಜ್ಯದಲ್ಲಿ ಹಾಲಿನ ದರ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡುವ ಕುರಿತು ವಿಧಾನಪರಿಷತ್‌ನಲ್ಲಿ ಗುರುವಾರ ತೀವ್ರ ಚರ್ಚೆ ನಡೆಯಿತು. ಬರ ಪರಿಸ್ಥಿತಿ ಕುರಿತಾದ ಚರ್ಚೆಯ ವೇಳೆ ಪ್ರಸ್ತಾಪ ಮಾಡಿದ ಕಾಂಗ್ರೆಸ್ ಸದಸ್ಯ ಎಸ್. ರವಿ, ರೈತರಿಗೆ ಆರ್ಥಿಕವಾಗಿ ಅನುಕೂಲ…

ಕರ್ನಾಟಕದ ಹಾಲು ಪರರ ಪಾಲು: ಖಾಸಗಿ ಕಂಪನಿಗಳ ಆಕರ್ಷಕ ಆಫರ್‌ಗೆ ಗಡಿಭಾಗದ ರೈತರು ಫಿದಾ!

ರಾಜ್ಯದ ಗಡಿಭಾಗದ ತಾಲೂಕು ಮತ್ತು ಜಿಲ್ಲೆಗಳ ಹಾಲು ಉತ್ಪಾದಕರು ನೆರೆರಾಜ್ಯಗಳ ಖಾಸಗಿ ಹಾಲು ಕಂಪನಿಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಕರ್ನಾಟಕದ ಹಾಲು ಒಕ್ಕೂಟಗಳಲ್ಲಿ ತೀವ್ರ ಹಾಲಿನ ಅಭಾವ ಎದುರಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸ್ಥಳೀಯ ಹಾಲು…

You Missed

ವಿಧಾನಪರಿಷತ್‌ನಲ್ಲಿ ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪ: ಸರ್ಕಾರದ ಮುಂದಿನ ನಿರ್ಧಾರವೇನು?

ವಿಧಾನಪರಿಷತ್‌ನಲ್ಲಿ ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪ: ಸರ್ಕಾರದ ಮುಂದಿನ ನಿರ್ಧಾರವೇನು?

ಕರ್ನಾಟಕದ ಹಾಲು ಪರರ ಪಾಲು: ಖಾಸಗಿ ಕಂಪನಿಗಳ ಆಕರ್ಷಕ ಆಫರ್‌ಗೆ ಗಡಿಭಾಗದ ರೈತರು ಫಿದಾ!

ಕರ್ನಾಟಕದ ಹಾಲು ಪರರ ಪಾಲು: ಖಾಸಗಿ ಕಂಪನಿಗಳ ಆಕರ್ಷಕ ಆಫರ್‌ಗೆ ಗಡಿಭಾಗದ ರೈತರು ಫಿದಾ!

ಮೈಸೂರು ಅರಮನೆಯ ಬಳಿ 11 ಫಿರಂಗಿ ಗಾಡಿಗಳಿಗೆ ವಿಶೇಷ ಪೂಜೆ.

ಮೈಸೂರು ಅರಮನೆಯ ಬಳಿ 11 ಫಿರಂಗಿ ಗಾಡಿಗಳಿಗೆ ವಿಶೇಷ ಪೂಜೆ.

ನಕಲಿ ಪನೀರ್ ಹಾವಳಿಗೆ ಬ್ರೇಕ್ ಹಾಕಲು FSSAI ಮಹತ್ವದ ಹೆಜ್ಜೆ

ನಕಲಿ ಪನೀರ್ ಹಾವಳಿಗೆ  ಬ್ರೇಕ್ ಹಾಕಲು FSSAI ಮಹತ್ವದ ಹೆಜ್ಜೆ

5 ಗಂಟೆಯ ರೈಲಿನ ಪ್ರಯಾಣ ನರಕ: ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದ!

5 ಗಂಟೆಯ ರೈಲಿನ ಪ್ರಯಾಣ ನರಕ:  ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದ!

ಮತ್ತಷ್ಟು ಬಿಗಿಯಾಗಲಿದೆ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಕುಣಿಕೆ!

ಮತ್ತಷ್ಟು ಬಿಗಿಯಾಗಲಿದೆ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಕುಣಿಕೆ!