ಕರ್ನಾಟಕದ ಹಾಲು ಪರರ ಪಾಲು: ಖಾಸಗಿ ಕಂಪನಿಗಳ ಆಕರ್ಷಕ ಆಫರ್‌ಗೆ ಗಡಿಭಾಗದ ರೈತರು ಫಿದಾ!

ರಾಜ್ಯದ ಗಡಿಭಾಗದ ತಾಲೂಕು ಮತ್ತು ಜಿಲ್ಲೆಗಳ ಹಾಲು ಉತ್ಪಾದಕರು ನೆರೆರಾಜ್ಯಗಳ ಖಾಸಗಿ ಹಾಲು ಕಂಪನಿಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಕರ್ನಾಟಕದ ಹಾಲು ಒಕ್ಕೂಟಗಳಲ್ಲಿ ತೀವ್ರ ಹಾಲಿನ ಅಭಾವ ಎದುರಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸ್ಥಳೀಯ ಹಾಲು ಒಕ್ಕೂಟಗಳಿಗೆ ಪೂರೈಕೆಯಾಗಬೇಕಿದ್ದ ಹಾಲು ನೆರೆರಾಜ್ಯಗಳ ಪಾಲಾಗುತ್ತಿದೆ. ಹಸುಗಳ ನಿರ್ವಹಣೆಗೆ ಅಗತ್ಯವಿರುವ ಹಿಂಡಿ, ಬೂಸಾ ಬೆಲೆ ಏರಿಕೆಯಾಗಿದ್ದು, ತೀವ್ರ ಬರಗಾಲದಿಂದಾಗಿ ಮೇವು ಮತ್ತು ನೀರಿಗೂ ಅಭಾವ ಸೃಷ್ಟಿಯಾಗಿದೆ. ಈ ಸವಾಲುಗಳ ನಡುವೆ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ರಾಜ್ಯದ ಒಕ್ಕೂಟಗಳು ನೀಡುತ್ತಿರುವ ದರ ತೀರಾ ಕಡಿಮೆಯಾಗಿದೆ ಎಂಬುದು ರೈತರ ಮುಖ್ಯ ದೂರು.

ಸದ್ಯ ರಾಜ್ಯದ ಹಾಲು ಉತ್ಪಾದಕರ ಸಂಘಗಳು ಕಟ್ಟುನಿಟ್ಟಿನ ಗುಣಮಟ್ಟ ಮತ್ತು ಕಬ್ಬಿನಾಂಶದ (ಫ್ಯಾಟ್) ಪರೀಕ್ಷೆಗಳನ್ನು ನಡೆಸಿ, ಲೀಟರ್‌ಗೆ ಕೇವಲ 31 ರಿಂದ 34 ರೂ. ಪಾವತಿಸುತ್ತಿವೆ. ಆದರೆ ನೆರೆರಾಜ್ಯಗಳ ಖಾಸಗಿ ಕಂಪನಿಗಳು ಯಾವುದೇ ನೂರೆಂಟು ಷರತ್ತುಗಳಿಲ್ಲದೆ, ಸ್ಥಳದಲ್ಲೇ ಲೀಟರ್‌ಗೆ 42 ರಿಂದ 44 ರೂ.ವರೆಗಿನ ಬಂಪರ್ ಬೆಲೆ ನೀಡಿ ಹಾಲು ಖರೀದಿಸುತ್ತಿವೆ. ವಿಪರ್ಯಾಸವೆಂದರೆ, ರಾಜ್ಯದ ಒಕ್ಕೂಟಗಳು ಗುಣಮಟ್ಟದ ಕೊರತೆಯ ನೆಪವೊಡ್ಡಿ ತಿರಸ್ಕರಿಸುವ ಹಾಲನ್ನೂ ಸಹ ಖಾಸಗಿ ಕಂಪನಿಗಳು ಹೆಚ್ಚಿನ ದರ ಕೊಟ್ಟು ಪಡೆದುಕೊಳ್ಳುತ್ತಿವೆ. ಪರಿಣಾಮವಾಗಿ, ಅನಿವಾರ್ಯ ಪರಿಸ್ಥಿತಿಯಲ್ಲಿ ರೈತರು ಹೆಚ್ಚಿನ ಲಾಭ ತಂದುಕೊಡುವ ಖಾಸಗಿ ಸಂಸ್ಥೆಗಳತ್ತ ಮುಖ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಮತ್ತು ಹಾಲು ಒಕ್ಕೂಟಗಳು ತಕ್ಷಣವೇ ಖರೀದಿ ದರವನ್ನು ಹೆಚ್ಚಿಸದೇ ಹೋದಲ್ಲಿ ಗಡಿಭಾಗದ ಹಾಲು ಒಕ್ಕೂಟಗಳ ನಿರ್ವಹಣೆ ಸಂಪೂರ್ಣ ಕಷ್ಟಸಾಧ್ಯವಾಗಲಿದೆ.

Related Posts

ವಿಧಾನಪರಿಷತ್‌ನಲ್ಲಿ ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪ: ಸರ್ಕಾರದ ಮುಂದಿನ ನಿರ್ಧಾರವೇನು?

ರಾಜ್ಯದಲ್ಲಿ ಹಾಲಿನ ದರ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡುವ ಕುರಿತು ವಿಧಾನಪರಿಷತ್‌ನಲ್ಲಿ ಗುರುವಾರ ತೀವ್ರ ಚರ್ಚೆ ನಡೆಯಿತು. ಬರ ಪರಿಸ್ಥಿತಿ ಕುರಿತಾದ ಚರ್ಚೆಯ ವೇಳೆ ಪ್ರಸ್ತಾಪ ಮಾಡಿದ ಕಾಂಗ್ರೆಸ್ ಸದಸ್ಯ ಎಸ್. ರವಿ, ರೈತರಿಗೆ ಆರ್ಥಿಕವಾಗಿ ಅನುಕೂಲ…

ಮೈಸೂರು ಅರಮನೆಯ ಬಳಿ 11 ಫಿರಂಗಿ ಗಾಡಿಗಳಿಗೆ ವಿಶೇಷ ಪೂಜೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆಯ ಆನೆ ಬಾಗಿಲಿನ ಬಳಿ 11 ಫಿರಂಗಿ ಗಾಡಿಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ವಿಜಯದಶಮಿ ಜಂಬೂಸವಾರಿ ದಿನ ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾಗುವ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಮಾಡುವ…

You Missed

ವಿಧಾನಪರಿಷತ್‌ನಲ್ಲಿ ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪ: ಸರ್ಕಾರದ ಮುಂದಿನ ನಿರ್ಧಾರವೇನು?

ವಿಧಾನಪರಿಷತ್‌ನಲ್ಲಿ ಹಾಲಿನ ದರ ಹಾಗೂ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪ: ಸರ್ಕಾರದ ಮುಂದಿನ ನಿರ್ಧಾರವೇನು?

ಕರ್ನಾಟಕದ ಹಾಲು ಪರರ ಪಾಲು: ಖಾಸಗಿ ಕಂಪನಿಗಳ ಆಕರ್ಷಕ ಆಫರ್‌ಗೆ ಗಡಿಭಾಗದ ರೈತರು ಫಿದಾ!

ಕರ್ನಾಟಕದ ಹಾಲು ಪರರ ಪಾಲು: ಖಾಸಗಿ ಕಂಪನಿಗಳ ಆಕರ್ಷಕ ಆಫರ್‌ಗೆ ಗಡಿಭಾಗದ ರೈತರು ಫಿದಾ!

ಮೈಸೂರು ಅರಮನೆಯ ಬಳಿ 11 ಫಿರಂಗಿ ಗಾಡಿಗಳಿಗೆ ವಿಶೇಷ ಪೂಜೆ.

ಮೈಸೂರು ಅರಮನೆಯ ಬಳಿ 11 ಫಿರಂಗಿ ಗಾಡಿಗಳಿಗೆ ವಿಶೇಷ ಪೂಜೆ.

ನಕಲಿ ಪನೀರ್ ಹಾವಳಿಗೆ ಬ್ರೇಕ್ ಹಾಕಲು FSSAI ಮಹತ್ವದ ಹೆಜ್ಜೆ

ನಕಲಿ ಪನೀರ್ ಹಾವಳಿಗೆ  ಬ್ರೇಕ್ ಹಾಕಲು FSSAI ಮಹತ್ವದ ಹೆಜ್ಜೆ

5 ಗಂಟೆಯ ರೈಲಿನ ಪ್ರಯಾಣ ನರಕ: ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದ!

5 ಗಂಟೆಯ ರೈಲಿನ ಪ್ರಯಾಣ ನರಕ:  ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದ!

ಮತ್ತಷ್ಟು ಬಿಗಿಯಾಗಲಿದೆ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಕುಣಿಕೆ!

ಮತ್ತಷ್ಟು ಬಿಗಿಯಾಗಲಿದೆ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಕುಣಿಕೆ!