ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆಯ ಆನೆ ಬಾಗಿಲಿನ ಬಳಿ 11 ಫಿರಂಗಿ ಗಾಡಿಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ವಿಜಯದಶಮಿ ಜಂಬೂಸವಾರಿ ದಿನ ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾಗುವ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಮಾಡುವ ವೇಳೆ 21 ಬಾರಿ ಕುಶಾಲತೋಪು ಸಿಡಿಸುವ ಸಂಪ್ರದಾಯವಿದೆ.
7 ಫಿರಂಗಿ ಗಾಡಿಗಳ ಮೂಲಕ ತಲಾ 3 ಬಾರಿ ಒಟ್ಟು 21 ಬಾರಿ ಕುಶಾಲತೋಪು ಸಿಡಿಸಲಾಗುತ್ತದೆ. ರಾಷ್ಟ್ರಗೀತೆ ಮುಕ್ತಾಯವಾಗುವ ವೇಳೆಗೆ 21 ಕುಶಾಲತೋಪುಗಳ ಸಿಡಿತ ಪೂರ್ಣಗೊಳ್ಳುವಂತೆ ತಾಲೀಮು ನಡೆಸಲಾಗುತ್ತದೆ.




