ಮೀನಿನ ಹೊಟ್ಟೆಯಲ್ಲಿತ್ತು ನಾಗರಹಾವು ! ಸಾರು ಮಾಡಲು ಹೋಗಿ ಶಾಕ್ ಆದ ಮಹಿಳೆ !..

ಕೇರಳದ ಅಲಪ್ಪುಳ ಜಿಲ್ಲೆಯ ಚಾರುಮ್ಮೂಡ್ ಮೂಲದ ಸನೋಜ್​​ಗೆ ಮೀನುಗಾರಿಕೆ ಎಂದರೆ ಬಾಲ್ಯದಿಂದಲೂ ತುಂಬಾನೇ ಇಷ್ಟ. ಮದ್ವೆಯಾದ ನಂತರವೂ ಅವರು ಮೀನುಗಾರಿಕೆ ನಡೆಸಿಕೊಂಡು ಬಂದಿದ್ದಾರೆ. ಕೇರಳದ ಅಲಪ್ಪುಳ ಜಿಲ್ಲೆಯ ಚಾರುಮ್ಮೂಡ್ ಮೂಲದ ಸನೋಜ್​​ಗೆ ಮೀನುಗಾರಿಕೆ ಎಂದರೆ ಬಾಲ್ಯದಿಂದಲೂ ತುಂಬಾನೇ ಇಷ್ಟ. ಮದ್ವೆಯಾದ ನಂತರವೂ ಅವರು ಮೀನುಗಾರಿಕೆ ನಡೆಸಿಕೊಂಡು ಬಂದಿದ್ದಾರೆ.

ಹೊಟ್ಟೆಯಲ್ಲಿ ಏನಿತ್ತು..?
ಅಂತೆಯೇ ಈಗ ಮಳೆಗಾಲ ಬೇರೆ! ಕೆರೆ, ಹೊಳೆಗಳಿಗೆ ಹೋಗಿ ಮೀನು ಹಿಡಿಯುತ್ತಿದ್ದರು. ನಿನ್ನೆ ಸಂಜೆ ಮನೆಯ ಕೆಲಸಗಳನ್ನು ಮುಗಿಸಿ ಕೊಳದಲ್ಲಿ ಮೀನು ಹಿಡಿಯಲು ಹೋಗಿದ್ದರು. ಗಾಳ ಹಾಕಿ ಕೂತಾಗ ಮೀನೊಂದು ಕಚ್ಚಿತ್ತು. ಗಾಳಕ್ಕೆ ಸಿಲುಕಿರೋದು ಪಕ್ಕಾ ಆಗ್ತಿದ್ದಂತೆಯೇ ಎಳೆದಾಗ ಬರೋಬ್ಬರಿ 900 ಗ್ರಾಂ ತೂಕ ಇರುವ ಮುರ್ರೆ ಮೀನು ಬಲೆಗೆ ಬಿದ್ದಿತ್ತು. ಇವತ್ತು ಮೀನು ಊಟ ಮಾಡಬಹುದು ಅಂತಾ ಸನೋಜ್ ಖುಷಿಯಿಂದ​ ಮನೆಗೆ ತಂದಿದ್ದರು.

ಅಂತೆಯೇ ಸನೋಜ್ ಪತ್ನಿ ಸಂಜೆ ಊಟಕ್ಕೆ ಮೀನು ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದಳು. ಚಾಕುವಿನಿಂದ ಕತ್ತರಿಸುತ್ತಿದ್ದಾಗ ಹೊಟ್ಟೆಯಲ್ಲಿ ಹಾವಿನ ಚರ್ಮದಂಥ ವಸ್ತು ಕಂಡಿದೆ. ಅದು ಏನೆಂದು ನೋಡಲು ಇಡೀ ಹೊಟ್ಟೆ ಬಗೆದಾಗ ಎರಡು ಅಡಿ ಉದ್ದದ ನಾಗರಹಾವು ಸಿಕ್ಕಿದೆ.

ಅದನ್ನು ಹೊರತೆಗೆದು ಎಚ್ಚರಿಕೆಯಿಂದ ನೋಡಿದಾಗ.. ಹಾವಿನ ಚರ್ಮ ಈಗಾಗಲೇ ಕೊಳೆಯುತ್ತಿತ್ತು. ಹಾವಿನ ತಲೆ ಬಹುತೇಕ ಹಾಗೆಯೇ ಇತ್ತು. ತಲೆಯ ಮೇಲಿನ ವಿಶಿಷ್ಟ ಪಟ್ಟೆಗಳನ್ನು ನೋಡಿ.. ಕುಟುಂಬದ ಸದಸ್ಯರು ಅದು ನಾಗರಹಾವು ಎಂದು ಗುರುತಿಸಿದರು. ಈ ದೃಶ್ಯವನ್ನು ನೋಡಿದ ಎಲ್ಲರೂ ಆಘಾತಕ್ಕೊಳಗಾದರು. ಕೊನೆಗೆ ಹೊಲದ ಪಕ್ಕ ಗುಂಡಿ ಅಗೆದು ಹಾವನ್ನು ಹೂಳಿದ್ದಾರೆ. ಮೀನುಗಾರರು ಹೇಳುವಂತೆ, ಮುರ್ರೆ ಮೀನು ಸಣ್ಣ ಹಾವುಗಳನ್ನು ನುಂಗುತ್ತವೆ. ಆದರೆ ನಾಗರಹಾವನ್ನು ತಿಂದಿದ್ದನ್ನು ಇದೇ ಮೊದಲ ಬಾರಿಗೆ ನೋಡಿರೋದು ಎಂದಿದ್ದಾರೆ.

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!