ಬೆಂಗಳೂರಿನ ತನ್ನ ಸ್ನೇಹಿತೆಯೊಂದಿಗೆ ಸೇರಿ ಮುದ್ದಾಗಿ ಕನ್ನಡ ಪದ್ಯ ಹಾಡಿದ ರಷ್ಯಾದ ಹುಡುಗಿ.

ಕರ್ನಾಟಕದಲ್ಲಿದ್ದು ಕನ್ನಡ ಮಾತನಾಡದೇ ಇರುವವರ ಮಧ್ಯೆ ರಷ್ಯಾದ ಪುಟ್ಟ ಹುಡುಗಿ ಕನ್ನಡ ಪದ್ಯವನ್ನು ಲೀಲಾಜಾಲವಾಗಿ ಹೇಳಿ ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ. ಕರ್ನಾಟಕದವರಿಗಿಂತ ವಿದೇಶಿಗರಿಗೆ ಕನ್ನಡದ ಮೇಲೆ ಹೆಚ್ಚು ಅಭಿಮಾನ ಇದೆ ಎಂಬುದು ಕೆಲವೊಂದು ವಿಡಿಯೋಗಳ ಮೂಲಕ ಸಾಬೀತು ಆಗುತ್ತಿದೆ. ಕನ್ನಡ ಅಭಿಮಾನಕ್ಕೆ ಹಾಗೂ ಭಾಷೆಯನ್ನು ಕಲಿಯಬೇಕು ಎಂಬ ಹಂಬಲ ವಿದೇಶಿಗರಿಗೆ ಇದೆ ಎಂಬುದನ್ನು ಈ ವಿಡಿಯೋ ಹೇಳುತ್ತದೆ. ಇದೀಗ ರಷ್ಯಾದ ಪುಟ್ಟ ಹುಡುಗಿ ಬೆಂಗಳೂರಿನ ತನ್ನ ಸ್ನೇಹಿತೆ ಜತೆ ಸೇರಿ ಮುದ್ದಾಗಿ ಕನ್ನಡದ ಕವಿತೆಯನ್ನು ಮುದ್ದಾಗಿ ಹಾಡಿದ್ದಾಳೆ. ಈ ಕುರಿತಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗ್ತಾ ಇದೆ.

ಭಾರತಕ್ಕೆ ಬಂದ ಅದೆಷ್ಟೋ ವಿದೇಶಿಗರು ಭಾರತದ ಸಂಸ್ಕೃತಿ, ಆಚಾರ ವಿಚಾರಗಳನ್ನು ಅನುಸರಿಸಿಕೊಂಡು ಹೋಗುವುದರ ಜತೆಗೆ ಭಾಷೆಗಳನ್ನು ಕಲಿಯುತ್ತಾರೆ. ಕರ್ನಾಟಕದಲ್ಲೂ ಇಂತಹ ಘಟನೆಗಳಿಗೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿದೆ. ಕನ್ನಡ ಹಾಡುಗಳನ್ನು ಹಾಡುವುದು, ಕನ್ನಡ ಮಾತನಾಡುವುದು, ಅದನ್ನು ಕಲಿಯುವ ಆಸಕ್ತಿ ತೋರಿಸುವುದು ಹೀಗೆ ಅನೇಕ ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಇದೀಗ ವಿಡಿಯೋವೊಂದು ಭಾರೀ ವೈರಲ್ ಆಗಿದ್ದು, ಕನ್ನಡಿಗರ ಮನಸ್ಸು ಈ ವಿಡಿಯೋ ಗೆದ್ದಿದೆ.
ಬೆಂಗಳೂರಿನಲ್ಲಿ ರಷ್ಯಾದ ಹುಡುಗಿ ಹಾಗೂ ಆಕೆಯ ಭಾರತೀಯ ಸ್ನೇಹಿತ ಜತೆಗೆ ಸೈಕಲ್ ಓಡಿಸುತ್ತ, ಕನ್ನಡ ಕವಿತೆಯನ್ನು ಹಾಡಿದ್ದಾಳೆ. ಇದೀಗ ಕನ್ನಡಿಗರ ಹೃದಯಕ್ಕೆ ಮುಟ್ಟಿದೆ. ಈ ರಷ್ಯಾದ ಹುಡುಗಿಯ ತಾಯಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಕನ್ನಡ ಪದ್ಯಕ್ಕೆ ಮೀಸಲಾಗಿರದೇ, ಅವರ ಅಂತರ್-ಸಾಂಸ್ಕೃತಿಕ ಸ್ನೇಹ ಮತ್ತು ಭಾಷಾ ಬಾಂಧವ್ಯದ ಬಗ್ಗೆ ಹೇಳಿದೆ.

ಈ ವಿಡಿಯೋದಲ್ಲಿ ರಷ್ಯಾದ ಹುಡುಗಿಯ ತಾಯಿ ಹೇಳಿರುವಂತೆ, ಇವರಿಬ್ಬರೂ ಮೂರು ವರ್ಷಗಳಿಂದ ಸಹಪಾಠಿಗಳು ಮತ್ತು ಆಪ್ತ ಸ್ನೇಹಿತರಾಗಿದ್ದಾರೆ. ಸೈಕಲ್ನಲ್ಲಿ ಆಟವಾಡುತ್ತ, ಕನ್ನಡದ ಖ್ಯಾತ ಪದ್ಯ “ಬಣ್ಣದ ಹಕ್ಕಿ” ಎಂಬ ಹಾಡನ್ನು ಇಬ್ಬರು ಒಟ್ಟಿಗೆ ಹಾಡಿದ್ದಾರೆ. ಮಕ್ಕಳ ಕನ್ನಡ ಹಾಡನ್ನು ಕೇಳಿ ನಮಗೆ ಖುಷಿಯಾಗಿದೆ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋದ ಜತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 2022ರಲ್ಲಿ ಹಂಚಿಕೊಂಡ ಫೋಟೋ ಕೂಡ ವೈರಲ್ ಆಗಿದೆ. ರಷ್ಯಾದ ಕುಟುಂಬ ಭಾರತಕ್ಕೆ ಸ್ಥಳಾಂತರಗೊಂಡಾಗಿನಿಂದ ಇವರಿಬ್ಬರ ಸ್ನೇಹ ಬೆಳೆದುಕೊಂಡಿದೆ ಎಂದು ಹೇಳಿದ್ದಾರೆ.

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!