ಶ್ರೇಯಾಂಕ ಪಾಟೀಲ್ ಈಗ ವಿಶ್ವದ ಮೋಸ್ಟ್​ ಸೆಲಬ್ರೇಟೆಡ್​ ವುಮೆನ್​ ಕ್ರಿಕೆಟರ್​.

ಶ್ರೇಯಾಂಕ ಪಾಟೀಲ್​​​! ವುಮೆನ್ಸ್ ಪ್ರೀಮಿಯರ್​ ಲೀಗ್​ನಲ್ಲಿ ಆರ್​​ಸಿಬಿ ಪರ ಮಿಂಚಿದ ಕನ್ನಡತಿ, ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ತನ್ನ​ ಆಟದಿಂದಲೇ ಮೋಡಿ ಮಾಡಿ ಸೆನ್ಸೇಷನ್​ ಸೃಷ್ಟಿಸಿರೋ ಶ್ರೇಯಾಂಕಾ, ಇದೀಗ ಆಫ್​ ದ ಫೀಲ್ಡ್​ನಲ್ಲೂ ಸಖತ್​ ಸದ್ದು ಮಾಡ್ತಿದ್ದಾರೆ. ನೀವು ನಂಬ್ತಿರೋ ಇಲ್ವೋ.. ಶ್ರೇಯಾಂಕ ಈಗ ವಿಶ್ವದ ಮೋಸ್ಟ್​ ಸೆಲಬ್ರೇಟೆಡ್​ ವುಮೆನ್​ ಕ್ರಿಕೆಟರ್​. ಕನ್ನಡತಿಯ ಮುಂದೆ ಟೀಮ್​ ಇಂಡಿಯಾ ಕ್ಯಾಪ್ಟನ್​ ಹರ್ಮನ್​​ಪ್ರೀತ್​ ಕೂಡ ಏನಿಲ್ಲ.. ಏನೇನಿಲ್ಲ.

ಶ್ರೇಯಾಂಕ ಪಾಟೀಲ್​​​​​​​​​​, ಆರ್​ಸಿಬಿಯ ಎಕ್ಸ್​-ಫ್ಯಾಕ್ಟರ್. ವಿಶ್ವ ಕ್ರಿಕೆಟ್​ನ ನಯಾ ಸೆನ್ಸೇಷನ್​. 23 ವರ್ಷದ ಈ ಚೆಲುವೆಯ ಫಿಯರ್​ಲೆಸ್ ಬ್ಯಾಟಿಂಗ್, ವೇರಿಯೇಷನ್​ ಬೌಲಿಂಗ್, ಆತ್ಮವಿಶ್ವಾಸದ ಆಟಕ್ಕೆ ಕ್ರಿಕೆಟ್​ ಲೋಕ ಫಿದಾ ಆಗಿದೆ. ಆನ್​ಫೀಲ್ಡ್​ ಆಟದಲ್ಲಿ ಇನ್ನೂ ಶ್ರೇಯಾಂಕಾಗೆ ಬಿಗ್​ ಸಕ್ಸಸ್​ ಸಿಕ್ಕಿಲ್ಲ. ಆಫ್​ ದ ಫೀಲ್ಡ್​​ನಲ್ಲಿ ಶ್ರೇಯಾಂಕಾಗೆ ಅದಾಗಲೇ ಸಪರೇಟ್​​ ಫ್ಯಾನ್​​​ ಬೇಸ್ ಕ್ರಿಯೇಟ್​ ಆಗಿದೆ. ಸೋಷಿಯಲ್​ ಮೀಡಿಯಾದಲ್ಲಂತೂ ಶ್ರೇಯಾಂಕ ಸೆನ್ಸೇಷನ್​​ ಆಗಿದ್ದಾರೆ.

ಕನ್ನಡತಿಯ ಪೋಸ್ಟ್​ಗೆ​ ಲೈಕ್ಸ್​, ಕಮೆಂಟ್ಸ್​​ ಸುರಿಮಳೆ
ಟೀಮ್ ಇಂಡಿಯಾ ಹಾಗೂ ಆರ್​​ಸಿಬಿ ಪರ ಆಡಿ ಮೋಡಿ ಮಾಡಿರುವ ಶ್ರೇಯಾಂಕ ಪಾಟೀಲ್​ ಕ್ರಿಕೆಟ್​ ಅಭಿಮಾನಿಗಳ ನಯಾ ಕ್ರಶ್​ ಆಗಿದ್ದಾರೆ. ಫ್ಯಾನ್ಸ್​ ಪ್ರೀತಿಯ ಟಗರುಪುಟ್ಟಿ ಒಂದು ಪೋಸ್ಟ್​ ಮಾಡಿದ್ರೆ ಸಾಕು ಸೆನ್ಸೇಷನ್​ ಸೃಷ್ಟಿಯಾಗ್ತಿದೆ. 1 ದಿನದ ಹಿಂದೆ ಪೋಸ್ಟ್​ ಮಾಡಿರೋ ಈ ಒಂದು ಡಾನ್ಸ್​ ವಿಡಿಯೋ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.

ಒಂದು ದಿನದ ಹಿಂದೆ ಇನ್ಸ್​​ಸ್ಟಾಗ್ರಾಂನಲ್ಲಿ ಶ್ರೇಯಾಂಕ ಪಾಟೀಲ್​ ಈ ರೀಲ್ಸ್​ನ ಪೋಸ್ಟ್​ ಮಾಡಿದ್ರು. ಪೋಸ್ಟ್​ ಮಾಡಿದ ಕೇವಲ 2 ಗಂಟೆಯಲ್ಲಿ ಇದಕ್ಕೆ ಲಕ್ಷಗಟ್ಟಲೇ ಲೈಕ್ಸ್​​ ಬಂದಿವೆ. ಕಮೆಂಟ್ಸ್​ಗಳ ಸುರಿಮಳೆಯೇ ಹರಿದಿತ್ತು. ಶ್ರೇಯಾಂಕ ಅಕೌಂಟ್​ನಲ್ಲಿ ಮಾತ್ರವಲ್ಲ. ಅಭಿಮಾನಿಗಳ ಅಕೌಂಟ್​​ಗಳಲ್ಲೂ ಈ ರೀಲ್ಸ್​ ಈಗ ಸದ್ದು ಮಾಡ್ತಿದೆ.

ಟೀಮ್​ ಇಂಡಿಯಾ ನಾಯಕಿಯನ್ನೂ ಹಿಂದಿಕ್ಕಿದ ಶ್ರೇಯಾಂಕಾ
ಶ್ರೇಯಾಂಕ ಪಾಟೀಲ್​ ಇಂಟರ್​​ನ್ಯಾಷನಲ್​ ಕ್ರಿಕೆಟ್​ಗೆ ಡೆಬ್ಯೂ ಮಾಡಿ 2 ವರ್ಷವೂ ತುಂಬಿಲ್ಲ. ಆಡಿದ ಪಂದ್ಯಗಳ ಸಂಖ್ಯೆ 20ರ ಗಡಿಯನ್ನೂ ದಾಟಿಲ್ಲ. ಪ್ರಸಿದ್ಧಿಯಲ್ಲಿ ಶ್ರೇಯಾಂಕ ವಿಶ್ವದ ಲೆಜೆಂಡರಿ ಅಟಗಾರರನ್ನೇ ಹಿಂದಿಕ್ಕಿದ್ದಾರೆ. ಹೆಸರಿಗೆ ತಕ್ಕಂತೆ ಮಹಿಳಾ ಕ್ರಿಕೆಟ್​ಗೆ ಭಾರತದ ಸ್ಮೃತಿ ಮಂದಾನಾನೇ ಕ್ವೀನ್​. ಮಂದಾನ ಬಿಟ್ರೆ 2ನೇ ಸ್ಥಾನದಲ್ಲಿರೋದು,ಶ್ರೇಯಾಂಕ ಪಾಟೀಲ್​​. ಇನ್ಸ್​​ಸ್ಟಾಗ್ರಾಂ ಫಾಲೋವರ್ಸ್​​ಗಳ ಲೆಕ್ಕಾಚಾರದಲ್ಲಿ ಶ್ರೇಯಾಂಕ ಪಾಟೀಲ್​​ ಟೀಮ್​ ಇಂಡಿಯಾ ನಾಯಕಿ ಹರ್ಮನ್​ ಪ್ರೀತಯ್​ ಕೌರ್​ನೂ ಹಿಂದಿಕ್ಕಿದ್ದಾರೆ.

ಇನ್ಸ್​​​ಸ್ಟಾಗ್ರಾಂ ಫಾಲೋವರ್ಸ್​
ಟೀಮ್​ ಇಂಡಿಯಾ ಉಪನಾಯಕಿ ಸ್ಮೃತಿ ಮಂದಾನ ಇನ್ಸ್​​ಸ್ಟಾಗ್ರಾಂನಲ್ಲಿ 12.4 ಮಿಲಿಯನ್​ ಫಾಲೋವರ್ಸ್​ ಹೊಂದಿದ್ರೆ. ಶ್ರೇಯಾಂಕ ಪಾಟೀಲ್​ 4.2 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ಟೀಮ್​ ಇಂಡಿಯಾ ನಾಯಕಿ ಹರ್ಮನ್​ಪ್ರೀತ್​ ಕೌರ್​ಗೆ 2.3 ಮಿಲಿಯನ್​, ಹರ್ಲಿನ್​ ಡಿಯೋಲ್​​ಗೆ 2.1 ಮಿಲಿಯನ್​, ಜೆಮಿಮಾ ರೋಡ್ರಿಗಸ್​ಗೆ​ 1.5 ಮಿಲಿಯನ್​ ಫಾಲೋವರ್ಸ್​ ಇದ್ದಾರೆ.

ಭಾರತದ ಕ್ರಿಕೆಟರ್ಸ್​ ಮಾತ್ರವಲ್ಲ. ವಿದೇಶಿ ಆಟಗಾರ್ತಿಯರನ್ನೂ ಶ್ರೇಯಾಂಕ ಸೈಡ್​ ಹೊಡೆದಿದ್ದಾರೆ. ಆಸ್ಟ್ರೇಲಿಯಾದ ಎಲ್ಲಿಸ್​ ಪೆರ್ರಿ, ಇಂಗ್ಲೆಂಡ್​ನ ಸಾರಾ ಟೇಲರ್​ ಸೇರಿದಂತೆ ಯಾವ ಸ್ಟಾರ್​ ಆಟಗಾರ್ತಿಯರಿಗೂ ಕೂಡ ಶ್ರೇಯಾಂಕಗಿರೋ ಫ್ಯಾನ್​ ಫಾಲೋಯಿಂಗ್ ಇಲ್ಲ.

ಇನ್ಸ್​​ಸ್ಟಾಗ್ರಾಂ ಫಾಲೋವರ್ಸ್​ ಹೆಚ್ಚಾದ್ರೆ ಏನು ಲಾಭ ಅಂತಾ ಕೇಳ್ಬೆಡಿ. ಕೋಟಿ ಕೋಟಿ ದುಡಿಯಬಹುದು. ಫಾಲೋವರ್ಸ್​ ಆಧಾರದಲ್ಲೇ ಟಾಪ್​ ಬ್ರ್ಯಾಂಡ್​​ಗಳು ಪ್ರಮೋಷನ್​ಗೆ ಶ್ರೇಯಾಂಕನ ಹುಡುಕಿಕೊಂಡು ಬಂದಿದೆ. ಅಡಿಡಾಸ್​, ಬ್ಯಾಂಕ್ ಆಫ್​ ಬರೋಡಾ, ಅಮೇಜಾನ್​, ಡಿಎಸ್​​ಸಿಯಂತಾ ಬಿಗ್​​ ಕಂಪನಿಗಳು ಸೇರಿದಂತೆ ಹಲವು ಬ್ರ್ಯಾಂಡ್​​ಗಳಿಗೆ ಶ್ರೇಯಾಂಕ ಪ್ರಮೋಟರ್​ ಆಗಿದ್ದಾರೆ. ಒಟ್ಟಿನಲ್ಲಿ, ಆನ್​​ಫೀಲ್ಡ್​ಗಿಂತ ಮುನ್ನವೇ ಆಫ್​ ದ ಫೀಲ್ಡ್​ನಲ್ಲಿ ಶ್ರೇಯಾಂಕ ಪಾಟೀಲ್​ಗೆ ಬಿಗ್​ ಸಕ್ಸಸ್​ ಅಂತೂ ಸಿಕ್ಕಿದೆ. ಇದೇ ಸಕ್ಸಸ್ ಕನ್ನಡತಿಗೆ​ ಆನ್​ಫೀಲ್ಡ್​ನಲ್ಲೂ ಸಿಗಲಿ.

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಸ್ಟಾರ್ ಅಥ್ಲೀಟ್ ಮೊದಲಿಂದಲೂ RCB ಅಭಿಮಾನಿ….

ವಿಶ್ವದ ಅತಿ ವೇಗದ ಅಥ್ಲೀಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿ ಬಳಗಕ್ಕೆ ಸೇರಿದ್ದಾರೆ. RCB ಜೆರ್ಸಿ ಧರಿಸಿ ಫೋಟೋ ಪೋಸ್ಟ್ ಮಾಡಿ, ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ವಿಶ್ವಾದ್ಯಂತ ಇರುವ RCB ಫ್ಯಾನ್ಸ್ ಸಂತಸಗೊಂಡಿದ್ದು, ಫ್ರಾಂಚೈಸಿಯ ಜನಪ್ರಿಯತೆ ಮತ್ತಷ್ಟು ಹೆಚ್ಚಿಸಿದೆ. ಕೇವಲ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು