ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..!

ಐಪಿಎಲ್ 2026 ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದಲ್ಲಿ ಸೆಣಸಾಡಲಿವೆ. ಈ ಪಂದ್ಯ ಮಳೆಯಿಂದ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೋತ ತಂಡಕ್ಕೆ ಕ್ವಾಲಿಫೈಯರ್ 2 ಆಡಲು ಮತ್ತೊಂದು ಅವಕಾಶವಿದ್ದರೂ, ಮಳೆ ನಿಯಮ ಆರ್‌ಸಿಬಿಗೆ ವರದಾನವಾಗಲಿದೆ.

ಐಪಿಎಲ್ ರ ಸೀಸನ್ ಅಂತಿಮ ಹಂತಕ್ಕೆ ತಲುಪಿದೆ. ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಇಂದು ಧರ್ಮಶಾಲಾದಲ್ಲಿ ಮೊದಲ ಕ್ವಾಲಿಫೈಯರ್ ಆಡಲು ಸಿದ್ಧವಾಗಿವೆ. ಪಂದ್ಯ ಸಂಜೆ  7:30 ಕ್ಕೆ ಪ್ರಾರಂಭವಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಇತ್ತ ಸೋತ ತಂಡಕ್ಕೆ ಮತ್ತೊಂದು ಅವಕಾಶವಿದ್ದರೂ (ಕ್ವಾಲಿಫೈಯರ್-2), ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಇರಾದೆಯಲ್ಲಿವೆ. ಆದಾಗ್ಯೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ಕ್ವಾಲಿಫೈಯರ್ ಆಡದೆಯೇ ಫೈನಲ್ ತಲುಪುವ ಅವಕಾಶವನ್ನು ಹೊಂದಿದೆ. ಅದು ಹೇಗೆ ಸಾಧ್ಯ?

ಪಂದ್ಯ ರದ್ದಾದರೆ ಆರ್​ಸಿಬಿ ಫೈನಲ್​ಗೆ

ವಾಸ್ತವವಾಗಿ ಫೈನಲ್ ಹೊರತುಪಡಿಸಿ ಯಾವುದೇ ಪ್ಲೇಆಫ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿಲ್ಲ. ಆದ್ದರಿಂದ, ಕ್ವಾಲಿಫೈಯರ್ 1, ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಪಂದ್ಯಗಳು ಮಳೆಯಿಂದಾಗಿ ರದ್ದಾದರೆ, ಮರುದಿನ ಪಂದ್ಯಗಳನ್ನು ಆಡಲಾಗುವುದಿಲ್ಲ. ಹೀಗಾಗಿ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಲ್ಲಿ ಮಳೆ ಬಂದರೆ, ಅದೇ ದಿನ ಪಂದ್ಯವನ್ನು ಮುಗಿಸಲು ಪ್ರಯತ್ನಿಸಲಾಗುತ್ತದೆ. ಪಂದ್ಯದ ಆರಂಭ ವಿಳಂಬವಾದರೆ, ಕನಿಷ್ಠ ಐದು ಓವರ್‌ಗಳ ಪಂದ್ಯವನ್ನು ಆಡಿಸಲು ಪ್ರಯತ್ನಿಸಲಾಗುತ್ತದೆ. ಇದಕ್ಕಾಗಿ, 120 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಆದರೆ ಹೆಚ್ಚುವರಿ ಸಮಯದ 120 ನಿಮಿಷಗಳಲ್ಲೂ ಪಂದ್ಯ ಮುಗಿಯದಿದ್ದರೆ, ಆಗ ಪಾಯಿಂಟ್‌ ಪಟ್ಟಿ ಪ್ರಮುಖ ಪಾತ್ರವಹಿಸುತ್ತದೆ.

https://www.instagram.com/reel/DYzRfaoE5RV/?utm_source=ig_web_copy_link&igsh=MzRlODBiNWFlZA==ಚಾಮುಂಡಿ ತಾಯಿ ಮುಂದೆ ಕಡೆಗೂ ಕ್ಷಮೆ ಕೇಳಿದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್

ಅಂದರೆ ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇದರರ್ಥ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್​ಸಿಬಿ ಕ್ವಾಲಿಫೈಯರ್ 1 ಆಡದೆಯೇ ನೇರವಾಗಿ ಫೈನಲ್​ಗೆ ಅರ್ಹತೆ ಪಡೆಯುತ್ತದೆ. ಇತ್ತ ಗುಜರಾತ್ ತಂಡ ಕ್ವಾಲಿಫೈಯರ್ 2 ಆಡಬೇಕಾಗುತ್ತದೆ.

ಅಗ್ರಸ್ಥಾನದಲ್ಲಿ ಆರ್​ಸಿಬಿ


ಐಪಿಎಲ್ 2026 ರ ಗುಂಪು ಹಂತ ಮುಗಿದ ಬಳಿಕ ನಾವು ಪಾಯಿಂಟ್ ಪಟ್ಟಿಯನ್ನು ನೋಡುವುದಾದರೆ.. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಆರ್​ಸಿಬಿ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದ್ದು, +0.783 ನೆಟ್ ರನ್​ರೇಟ್ ಹೊಂದಿದೆ. ಇತ್ತ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಕೂಡ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದೆ. ಆದರೆ ಗುಜರಾತ್ ತಂಡದ ನೆಟ್ ರನ್​ರೇಟ್ ಆರ್​ಸಿಬಿಗಿಂತ ಕಡಿಮೆ ಅಂದರೆ +0.695 ಆಗಿರುವ ಕಾರಣ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಧರ್ಮಶಾಲಾದಲ್ಲಿ ಹವಾಮಾನ ಹೇಗಿರಲಿದೆ?


ಧರ್ಮಶಾಲಾ ಮೈದಾನವು ಪರ್ವತಗಳಿಂದ ಸುತ್ತುವರೆದಿದೆ. ಇದರಿಂದಾಗಿ, ಹವಾಮಾನ ಯಾವುದೇ ಸಮಯದಲ್ಲಿ ಬದಲಾಗಬಹುದು. ಆದಾಗ್ಯೂ, ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯದ ದಿನದಂದು ಮಳೆಯಾಗುವ ಸಾಧ್ಯತೆ ಶೇ. 25 ರಷ್ಟು ಇದೆ. ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಹೀಗಾಗಿ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪೂರ್ಣ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ಮಳೆ ಬರುವ ಸಾಧ್ಯತೆ ಇರದ ಕಾರಣ, ಆರ್​ಸಿಬಿ ಈ ಪಂದ್ಯವನ್ನು ಆಡಿ, ಜಯ ಸಾಧಿಸಿಯೇ ಫೈನಲ್​ಗೆ ಟಿಕೆಟ್ ಪಡೆಯಬೇಕಾಗಿದೆ.

Related Posts

ಅ*ತ್ಯಾಚಾ*ರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ರೇಖಾ ಶ್ರೀನಿವಾಸ್

ಮೈಸೂರು: ಅ*ತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್. ಪಶ್ಚಿಮ ಬಂಗಾಳದ ಬಾರುಪುರ್ ಮತ್ತುರಾಜಸ್ಥಾನದ ಶ್ರೀ ಗಂಗಾ ನಗರದಲ್ಲಿ ಅ*ಪ್ರಾಪ್ತ ಮೇಲೆ ನಡೆದ ಅ*ತ್ಯಾಚಾ*ರ ಘಟನೆಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ. ಪ್ರಪಂಚವನ್ನೇ ಅರಿಯದ…

ದೇಶದ 400ಕ್ಕೂ ಹೆಚ್ಚು ಶಾಲೆಗಳಲ್ಲಿ ‘ರಾಮಾಯಣ’ ಸಿನಿಮಾದ ಭರ್ಜರಿ ಪ್ರಚಾರ

ಒಟ್ಟು ಎರಡು ಭಾಗಗಳಲ್ಲಿ ‘ರಾಮಾಯಣ’ ಸಿನಿಮಾ ಮೂಡಿಬರುತ್ತಿದೆ. ಈ ವರ್ಷದ ದೀಪಾವಳಿಗೆ ಮೊದಲ ಪಾರ್ಟ್ ಬಿಡುಗಡೆ ಆಗಲಿದೆ. ರಿಲೀಸ್​ಗೂ ಮುನ್ನ ದೇಶಾದ್ಯಂತ ವಿವಿಧ ರೀತಿಯ ಪ್ರಚಾರಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಗಳಲ್ಲಿ ಕೂಡ ‘ರಾಮಾಯಣ’ ಚಿತ್ರವನ್ನು ಪ್ರಚಾರ ಮಾಡಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿಭಾರತೀಯ…

You Missed

ಅ*ತ್ಯಾಚಾ*ರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ರೇಖಾ ಶ್ರೀನಿವಾಸ್

ಅ*ತ್ಯಾಚಾ*ರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ರೇಖಾ ಶ್ರೀನಿವಾಸ್

ಚಿತ್ರರಂಗಕ್ಕೆ ಕಾಲಿಟ್ಟ ಲಂಕೇಶ್ ಮೊಮ್ಮಗಳು ಇಶಾ ಲಂಕೇಶ್

ಚಿತ್ರರಂಗಕ್ಕೆ ಕಾಲಿಟ್ಟ ಲಂಕೇಶ್ ಮೊಮ್ಮಗಳು ಇಶಾ ಲಂಕೇಶ್

ದೇಶದ 400ಕ್ಕೂ ಹೆಚ್ಚು ಶಾಲೆಗಳಲ್ಲಿ ‘ರಾಮಾಯಣ’ ಸಿನಿಮಾದ ಭರ್ಜರಿ ಪ್ರಚಾರ

ದೇಶದ 400ಕ್ಕೂ ಹೆಚ್ಚು ಶಾಲೆಗಳಲ್ಲಿ ‘ರಾಮಾಯಣ’ ಸಿನಿಮಾದ ಭರ್ಜರಿ ಪ್ರಚಾರ

ಮೈಸೂರು ಮಹಾನಗರ ಪಾಲಿಕೆಗೆ ಹೊಸ ಆಯುಕ್ತರ ನೇಮಕ

ಮೈಸೂರು ಮಹಾನಗರ ಪಾಲಿಕೆಗೆ ಹೊಸ ಆಯುಕ್ತರ ನೇಮಕ

ಡೀಲ್​ ಕೊಟ್ಟವರಿಗಾಗಿ ಪೊಲೀಸರ ಹುಡುಕಾಟ

ಡೀಲ್​ ಕೊಟ್ಟವರಿಗಾಗಿ ಪೊಲೀಸರ ಹುಡುಕಾಟ

ಸಖತ್ ಬೋಲ್ಡ್ ಅವತಾರದಲ್ಲಿ ಯಶ್​-ಕಿಯಾರಾ ‘ತಬಾಹಿ’

ಸಖತ್ ಬೋಲ್ಡ್ ಅವತಾರದಲ್ಲಿ ಯಶ್​-ಕಿಯಾರಾ ‘ತಬಾಹಿ’