ರಾಮ್‌ಚರಣ್‌, ಕಿಚ್ಚ ಸುದೀಪ್‌ ಬಾಡಿಗಾರ್ಡ್‌ಗಳ ನಂತರ ಈಗ ಯಶ್‌ ಅಂಗರಕ್ಷಕನ ಹವಾ!

ಚಿತ್ರರಂಗದಲ್ಲಿ ನೆಚ್ಚಿನ ನಟರ ಜೊತೆಗೆ ಅವರ ಪರ್ಸನಲ್‌ ಬಾಡಿಗಾರ್ಡ್‌ಗಳೂ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಸಖತ್ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ನಟ ರಾಮ್‌ ಚರಣ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ‘ಪೆದ್ದಿ’ ಪ್ರಚಾರದ ವೇಳೆಯಲ್ಲಿ ಅವರ ಪರ್ಸನಲ್ ಸೆಕ್ಯೂರಿಟಿ ಗಾರ್ಡ್, ಆಫ್ರಿಕಾ ಮೂಲದ ಅಂತರಾಷ್ಟ್ರೀಯ ಮಾರ್ಷಲ್‌ ಆರ್ಟ್ಸ್‌ ಪಟು ಹಾಗೂ ಮಾಡೆಲ್ ಕೆವಿನ್‌ ಕುಂಟಾ ತಮ್ಮ ದೈತ್ಯ ದೇಹಕಟ್ಟು ಮತ್ತು ರಗಡ್ ಲುಕ್‌ನಿಂದಾಗಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದರು. ಅದೇ ರೀತಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ ಅಕ್ಕನ ಮಗ ಸಂಚೀತ್‌ ಸಂಜೀವ್‌ ಅಭಿನಯದ ‘ಮ್ಯಾಂಗೋ ಪಚ್ಚ’ ಚಿತ್ರದ ಪ್ರಚಾರ ಸಂದರ್ಭದಲ್ಲಿ, ಸುದೀಪ್‌ ಅವರ ಕೆಂಪು-ಬಿಳಿ ಮೈಬಣ್ಣದ ಇಟಲಿ ಮೂಲದ ಬಾಡಿಗಾರ್ಡ್‌ ಸರ್ಗಿಯುಝ್‌ ವೋಲಾಕ್‌ ನೆಟ್ಟಿಗರ ಗಮನ ಸೆಳೆದು ಭಾರಿ ಸ್ಪಾಟ್‌ಲೈಟ್ ಪಡೆದುಕೊಂಡಿದ್ದರು. ಇದೀಗ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾದ ಪ್ರಚಾರ ಕಾರ್ಯಗಳು ನಡೆಯುತ್ತಿದ್ದು, ಅವರ ಹಿಂದಿನ ಶಕ್ತಿಯಾಗಿ ನಿಂತಿರುವ ಪಕ್ಕಾ ದೇಸಿ ದೈತ್ಯ ಶ್ರೀನಿವಾಸ್‌ ಅಲಿಯಾಸ್ ‘ಸೀನ’ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಸೃಷ್ಟಿಸುತ್ತಿದ್ದಾರೆ. ಯಶ್, ರಾಧಿಕಾ ಪಂಡಿತ್ ಹಾಗೂ ಅವರ ಕುಟುಂಬಕ್ಕೆ ಬಂಡೆಯಂತೆ ರಕ್ಷಣೆ ನೀಡುತ್ತಿರುವ ಈ ಯಶ್ ಶ್ರೀನಿವಾಸ್, ಕಟ್ಟುಮಸ್ತಾದ ದೇಹ ಮತ್ತು ತೀಕ್ಷ್ಣವಾದ ಲುಕ್ ಹೊಂದಿದ್ದು ಸಾವಿರಾರು ಫಾಲೋವರ್ಸ್‌ಗಳನ್ನು ಸಂಪಾದಿಸಿದ್ದಾರೆ. ಈ ಹಿಂದೆ ಯಶ್‌ ಅವರಿಗೆ ಬರೋಬ್ಬರಿ 12 ವರ್ಷಗಳ ಕಾಲ ಅಂಗರಕ್ಷಕರಾಗಿದ್ದ ರಾಮಚಂದ್ರ ರಾಜು ಅವರನ್ನು ನಿರ್ದೇಶಕ ಪ್ರಶಾಂತ್‌ ನೀಲ್‌ ಗುರುತಿಸಿ ‘ಕೆಜಿಎಫ್‌’ ಸಿನಿಮಾದ ‘ಗರುಡ’ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಆ ಒಂದು ಪಾತ್ರದ ಮೂಲಕ ಗರುಡ ರಾಮ್‌ ಅವರು ದಕ್ಷಿಣ ಭಾರತದಾದ್ಯಂತ ಬಹುಭಾಷಾ ಖಳನಟನಾಗಿ ಹೊರಹೊಮ್ಮಿ ಹೊಸ ಇತಿಹಾಸವನ್ನೇ ಸೃಷ್ಟಿಸಿದರು. ಪ್ರಸ್ತುತ ಲಕ್ಷ ಲಕ್ಷ ಸಂಬಳ ಪಡೆಯುತ್ತಿರುವ ಶ್ರೀನಿವಾಸ್ ಅವರಿಗೂ ಅಂತಹದ್ದೇ ಸುವರ್ಣ ಅವಕಾಶ ಸಿಗಲಿ ಎಂಬುದು ಅಭಿಮಾನಿಗಳ ಆಶಯವಾಗಿದ್ದು, ಇವರ ರಗಡ್ ಅವತಾರಕ್ಕೆ ವಿಲನ್ ಪಾತ್ರಗಳು ಪಕ್ಕಾ ಸೂಟ್ ಆಗುವುದರಿಂದ ಮುಂದಿನ ದಿನಗಳಲ್ಲಿ ಇವರೂ ಕೂಡ ಬೆಳ್ಳಿತೆರೆಯಲ್ಲಿ ದೊಡ್ಡ ಮಟ್ಟದ ಖಳನಟನಾಗಿ ಮಿಂಚಿದರೂ ಆಶ್ಚರ್ಯವಿಲ್ಲ.

Related Posts

ಕೇಂದ್ರ ಸಚಿವ ಸಂಪುಟ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಪುನರ್‌ರಚನೆ: ಫಡ್ನವೀಸ್ ಸೇರಿದಂತೆ ನಾಲ್ವರು ಸಿಎಂಗಳಿಗೆ ಉನ್ನತ ಸ್ಥಾನ ಸಾಧ್ಯತೆ

ಮುಂಬರುವ 2027-28ರ ರಾಜ್ಯ ವಿಧಾನಸಭಾ ಚುನಾವಣೆಗಳು ಹಾಗೂ 2029ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸಚಿವ ಸಂಪುಟ ಮತ್ತು ಬಿಜೆಪಿಯ 12 ಸದಸ್ಯರ ಸಂಸದೀಯ ಮಂಡಳಿಯನ್ನು ಶೀಘ್ರದಲ್ಲೇ ಪುನರ್‌ರಚಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಈ ಉನ್ನತ ಮಟ್ಟದ ಬದಲಾವಣೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ…

ನೈಸ್ ಯೋಜನೆಯ ವಿರುದ್ಧ ಜೆಡಿಎಸ್ ಸಮರ: ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆಗಳು

ವಿಧಾನಮಂಡಲ ಅಧಿವೇಶನದಲ್ಲಿ ನೈಸ್ (NICE) ಯೋಜನೆಯ ಅಕ್ರಮಗಳ ಕುರಿತು ಚರ್ಚಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಜೆಡಿಎಸ್ ಮುಖಂಡರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರ ನೇತೃತ್ವದ ನಿಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ…

You Missed

ರಾಮ್‌ಚರಣ್‌, ಕಿಚ್ಚ ಸುದೀಪ್‌ ಬಾಡಿಗಾರ್ಡ್‌ಗಳ ನಂತರ ಈಗ ಯಶ್‌ ಅಂಗರಕ್ಷಕನ ಹವಾ!

ರಾಮ್‌ಚರಣ್‌, ಕಿಚ್ಚ ಸುದೀಪ್‌ ಬಾಡಿಗಾರ್ಡ್‌ಗಳ ನಂತರ ಈಗ ಯಶ್‌ ಅಂಗರಕ್ಷಕನ ಹವಾ!

ಕೇಂದ್ರ ಸಚಿವ ಸಂಪುಟ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಪುನರ್‌ರಚನೆ: ಫಡ್ನವೀಸ್ ಸೇರಿದಂತೆ ನಾಲ್ವರು ಸಿಎಂಗಳಿಗೆ ಉನ್ನತ ಸ್ಥಾನ ಸಾಧ್ಯತೆ

ಕೇಂದ್ರ ಸಚಿವ ಸಂಪುಟ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಪುನರ್‌ರಚನೆ: ಫಡ್ನವೀಸ್ ಸೇರಿದಂತೆ ನಾಲ್ವರು ಸಿಎಂಗಳಿಗೆ ಉನ್ನತ ಸ್ಥಾನ ಸಾಧ್ಯತೆ

ನೈಸ್ ಯೋಜನೆಯ ವಿರುದ್ಧ ಜೆಡಿಎಸ್ ಸಮರ: ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆಗಳು

ನೈಸ್ ಯೋಜನೆಯ ವಿರುದ್ಧ ಜೆಡಿಎಸ್ ಸಮರ: ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆಗಳು

ಸನಾತನ ಧರ್ಮದ ಶ್ರೇಷ್ಠತೆ ಮತ್ತು ಪಾರದರ್ಶಕತೆಗೆ ಮಂತ್ರಾಲಯ ಶ್ರೀಗಳ ಕರೆ

ಸನಾತನ ಧರ್ಮದ ಶ್ರೇಷ್ಠತೆ ಮತ್ತು ಪಾರದರ್ಶಕತೆಗೆ ಮಂತ್ರಾಲಯ ಶ್ರೀಗಳ ಕರೆ

ಬಿಸಿಸಿಐಗೆ ಸ್ಪಾನ್ಸರ್ ಶಿಪ್ ಬಿಸಿ: ದುಬಾರಿ ಬೆಲೆಯಿಂದ ಹಿಂದೆ ಸರಿದ ಕಂಪನಿಗಳು!

ಬಿಸಿಸಿಐಗೆ ಸ್ಪಾನ್ಸರ್ ಶಿಪ್ ಬಿಸಿ: ದುಬಾರಿ ಬೆಲೆಯಿಂದ ಹಿಂದೆ ಸರಿದ ಕಂಪನಿಗಳು!

ಕರ್ನಾಟಕದಲ್ಲಿ ನಕಲಿ ‘ಪನೀರ್’ ಮಾರಾಟಕ್ಕೆ ಒಂದು ವರ್ಷ ಬ್ರೇಕ್: ಸರ್ಕಾರದ ದಿಟ್ಟ ಕ್ರಮ

ಕರ್ನಾಟಕದಲ್ಲಿ ನಕಲಿ ‘ಪನೀರ್’ ಮಾರಾಟಕ್ಕೆ ಒಂದು ವರ್ಷ ಬ್ರೇಕ್: ಸರ್ಕಾರದ ದಿಟ್ಟ ಕ್ರಮ