Good New Kannada Desk 1, Author at Good News 24x7 https://www.goodnews24x7.com/author/goodnews-kannada-desk/ Kannada Tue, 19 Aug 2025 07:56:18 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Good New Kannada Desk 1, Author at Good News 24x7 https://www.goodnews24x7.com/author/goodnews-kannada-desk/ 32 32 ತಮಿಳಿಗೆ ರಿಮೇಕ್ ಆಗಲಿದೆ ‘ಸು ಫ್ರಮ್ ಸೋ’ ! ಪುನೀತ್ ಚಿತ್ರದ ನಿರ್ಮಾಪಕನಿಂದ ರಿಮೇಕ್ ಹಕ್ಕು ಖರೀದಿ. https://www.goodnews24x7.com/tami%e1%b8%b7ige-rimek-agalide-su-phram-so-punit-citrada-nirmapakaninda-rimek-hakku-kharidi-sufromsonsrajkumarfilmkannada-kanna%e1%b8%8dada-supar-hi%e1%b9%ad-citravada/ Tue, 19 Aug 2025 07:56:18 +0000 https://www.goodnews24x7.com/?p=6394 ಕನ್ನಡದ ಸೂಪರ್ ಹಿಟ್ ಚಿತ್ರವಾದ ‘ಸು ಫ್ರಮ್ ಸೋ’ ತಮಿಳು ರಿಮೇಕ್ ಹಕ್ಕುಗಳನ್ನು ಪ್ರಸಿದ್ಧ ನಿರ್ಮಾಪಕ ಎನ್.ಎಸ್. ರಾಜಕುಮಾರ್ ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ. ಮೂಲತಃ ಕನ್ನಡದಲ್ಲಿ ಬಿಡುಗಡೆಯಾಗಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಯಶಸ್ವಿಯಾಗಿರುವ ಈ ಚಿತ್ರ ತಮಿಳು ಪ್ರೇಕ್ಷಕರನ್ನೂ ರಂಜಿಸಲಿದೆ…

The post ತಮಿಳಿಗೆ ರಿಮೇಕ್ ಆಗಲಿದೆ ‘ಸು ಫ್ರಮ್ ಸೋ’ ! ಪುನೀತ್ ಚಿತ್ರದ ನಿರ್ಮಾಪಕನಿಂದ ರಿಮೇಕ್ ಹಕ್ಕು ಖರೀದಿ. appeared first on Good News 24x7.

]]>

ಕನ್ನಡದ ಸೂಪರ್ ಹಿಟ್ ಚಿತ್ರವಾದ ‘ಸು ಫ್ರಮ್ ಸೋ’ ತಮಿಳು ರಿಮೇಕ್ ಹಕ್ಕುಗಳನ್ನು ಪ್ರಸಿದ್ಧ ನಿರ್ಮಾಪಕ ಎನ್.ಎಸ್. ರಾಜಕುಮಾರ್ ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ. ಮೂಲತಃ ಕನ್ನಡದಲ್ಲಿ ಬಿಡುಗಡೆಯಾಗಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಯಶಸ್ವಿಯಾಗಿರುವ ಈ ಚಿತ್ರ ತಮಿಳು ಪ್ರೇಕ್ಷಕರನ್ನೂ ರಂಜಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಚಿತ್ರದ ತಾರಾಬಳಗ ಮತ್ತು ತಾಂತ್ರಿಕ ತಂಡದ ಬಗ್ಗೆ ಶೀಘ್ರದಲ್ಲೇ ಘೋಷಣೆ ಆಗಲಿದೆ.

‘ಸು ಫ್ರಮ್ ಸೋ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿದೆ. ಈ ಚಿತ್ರ ಸೂಪರ್ ಹಿಟ್ ಆಗಿದೆ. ಕನ್ನಡ ಮಾತ್ರವಲ್ಲದೆ, ತೆಲುಗು ಹಾಗೂ ಮಲಯಾಳಂನಲ್ಲೂ ಸಿನಿಮಾ ಮೆಚ್ಚುಗೆ ಪಡೆದಿದೆ. ಈ ಚಿತ್ರ ತಮಿಳಿಗೆ ರಿಮೇಕ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಈಗ ಆ ಮಾತುಕತೆ ಫೈನಲ್ ಆಗಿದೆ. ದೊಡ್ಡ ಮೊತ್ತಕ್ಕೆ ಎನ್​ಎಸ್ ರಾಜ್​ಕುಮಾರ್ ಅವರು ‘ಸು ಫ್ರಮ್ ಸೋ’ (Su From So) ಚಿತ್ರದ ತಮಿಳು ರಿಮೇಕ್ ಹಕ್ಕನ್ನು ಪಡೆದಿದ್ದಾರೆ.

‘ಸು ಫ್ರಮ್ ಸೋ’ ಚಿತ್ರವನ್ನು ರಾಜ್​ ಬಿ ಶೆಟ್ಟಿ ಅವರ ‘ಲೈಟರ್ ಬುದ್ಧ ಫಿಲ್ಮ್ಸ್’ ಮೂಲಕ ನಿರ್ಮಾಣ ಮಾಡಲಾಗಿದೆ. ಈ ಚಿತ್ರ ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ರಿಲೀಸ್ ಆಯಿತು. ಆ ಬಳಿಕ ಚಿತ್ರ ಮಲಯಾಳಂನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ತೆಲುಗು ಮಂದಿ ಕೂಡ ಚಿತ್ರವನ್ನು ಇಷ್ಟಪಟ್ಟರು. ಈ ಸಿನಿಮಗೆ ಜೆಪಿ ತುಮಿನಾಡ್ ನಿರ್ದೇಶನ ಇದೆ. ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಶನೀಲ್ ಗೌತಮ್, ಸಂಧ್ರ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ ನಟಿಸಿದ್ದಾರೆ.

ಸದ್ಯ ಎನ್​ಎಸ್ ರಾಜ್​ಕುಮಾರ್ ಅವರು ‘ಸು ಫ್ರಮ್ ಸೋ’ ತಮಿಳು ಹಕ್ಕನ್ನು ಪಡೆದಿದ್ದಾರೆ. ಅವರು ಕನ್ನಡದಲ್ಲಿ ‘ಮೈನಾ’, ‘ಮೈತ್ರಿ’, ‘ಪೃಥ್ವಿ’ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. 60ಕ್ಕೂ ಹೆಚ್ಚು ಚಿತ್ರಗಳನ್ನು ಅವರು ಹಂಚಿಕೆ ಮಾಡಿದ್ದಾರೆ. ಅವರು ದೊಡ್ಡ ಮೊತ್ತಕ್ಕೆ ‘ಸು ಫ್ರಮ್ ಸೋ’ ಹಕ್ಕನ್ನು ಖರೀದಿ ಮಾಡಿದ್ದಾರೆ.

‘ಸು ಫ್ರಮ್ ಸೋ’ ಸಿನಿಮಾನ ತಮಿಳಿಗೆ ಡಬ್ ಮಾಡುವ ಬದಲು ಆ ಭಾಷೆಗೆ ರಿಮೇಕ್ ಮಾಡಿದರೆ ಹೆಚ್ಚು ಸೂಕ್ತ ಎಂದು ತಂಡದವರು ನಿರ್ಧರಿಸಿತ್ತು. ಈಗ ಸೂಕ್ತ ಎನಿಸಿದವರಿಗೆ ಹಕ್ಕನ್ನು ಮಾರಲಾಗಿದೆ. ಸಿನಿಮಾದ ಪಾತ್ರವರ್ಗ, ತಾಂತ್ರಿಕ ತಂಡದ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆ. ‘ಸು ಫ್ರಮ್ ಸೋ’ ಸಿನಿಮಾದಲ್ಲಿ ಹಾಸ್ಯದ ಜೊತೆಗೆ ಒಂದು ಸ್ಟ್ರಾಂಗ್ ಮೆಸೇಜ್ ಇದೆ. ಇದು ತಮಿಳು ನಾಡು ಜನತೆಗೂ ಇಷ್ಟ ಆಗಲಿದೆ ಎಂಬ ನಂಬಿಕೆ ರಾಜ್​ಕುಮಾರ್ ಅವರದ್ದು.

The post ತಮಿಳಿಗೆ ರಿಮೇಕ್ ಆಗಲಿದೆ ‘ಸು ಫ್ರಮ್ ಸೋ’ ! ಪುನೀತ್ ಚಿತ್ರದ ನಿರ್ಮಾಪಕನಿಂದ ರಿಮೇಕ್ ಹಕ್ಕು ಖರೀದಿ. appeared first on Good News 24x7.

]]>
ವಿಶ್ವ ದಾಖಲೆಯಾದ ‘ಶಕ್ತಿ’! https://www.goodnews24x7.com/world-record-shakti/ Tue, 19 Aug 2025 06:07:02 +0000 https://www.goodnews24x7.com/?p=6388 ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಗಳಲ್ಲಿ ಒಂದಾದ ಶಕ್ತಿ ಯೋಜನೆ ‘ಗೋಲ್ಡನ್ ಬುಕ್…

The post ವಿಶ್ವ ದಾಖಲೆಯಾದ ‘ಶಕ್ತಿ’! appeared first on Good News 24x7.

]]>

ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಗಳಲ್ಲಿ ಒಂದಾದ ಶಕ್ತಿ ಯೋಜನೆ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ಸೇರ್ಪಡೆಯಾಗಿದೆ. 2023ರ ಜೂನ್ 11 ರಿಂದ 2025 ಜುಲೈ 25ರ ಅವಧಿಯಲ್ಲಿ ನಾಲ್ಕೂ ನಿಗಮದ ಸಾರಿಗೆ ಬಸ್‌ಗಳಲ್ಲಿ

ಮಹಿಳೆಯರು (500 ಕೋಟಿ) ಉಚಿತ ಟಿಕೇಟ್ ಪಡೆದು ಪ್ರಯಾಣ ಮಾಡಿದ್ದಾರೆ. ಈ ಕಾರಣ ದಿಂದ ಶಕ್ತಿ ಯೋಜನೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ. ಶಕ್ತಿ ಯೋಜನೆ ಗೊಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿರು ವುದು ಅತೀವ ಸಂತಸ ಮತ್ತು ಹೆಮ್ಮೆಯ ಕ್ಷಣ ವಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಹಾಗೂ ಮಹಿಳಾ ಸಬಲೀಕರಣದ ದಿಟ್ಟ ಯೋಜನೆಯಾದ ಶಕ್ತಿ ಯೋಜನೆಯು Golden Book of World Record ನಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದ್ದಾರೆ. Beyond Free Rides ಎಂಬ ಹೆಸರಿನಲ್ಲಿ Sustainable Mobility Network ದೇಶದ 10 ನಗರಗಳಲ್ಲಿ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಬಗ್ಗೆ ಅಧ್ಯಯನ ನಡೆಸಿತು. ಬೆಂಗಳೂರಿನಲ್ಲಿ ಶೇ.23 ರಷ್ಟು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಶೇ.21 ರಷ್ಟು ಹೆಚ್ಚು ಮಹಿಳಾ ಉದ್ಯೋಗಿಗಳು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

The post ವಿಶ್ವ ದಾಖಲೆಯಾದ ‘ಶಕ್ತಿ’! appeared first on Good News 24x7.

]]>
ಬೆಂಗಳೂರು ನಗರದಲ್ಲಿ ಸತತ ಮಳೆಯ ಪರಿಣಾಮ ವೈರಲ್ ಜ್ವರ ಪ್ರಕರಣಗಳಲ್ಲಿ ಹೆಚ್ಚಳ. https://www.goodnews24x7.com/viral-fever-cases-increase-in-bengaluru-city-due-to-continuous-rains/ Tue, 19 Aug 2025 05:39:41 +0000 https://www.goodnews24x7.com/?p=6384 ಬೆಂಗಳೂರು : ನಗರದ ಹವಾಮಾನದಲ್ಲಿ ನಡೆಯುತ್ತಿರುವ ಅನಿಯಮಿತ ಬದಲಾವಣೆಯ ಹಿನ್ನೆಲೆ, ಕಳೆದ ಒಂದು ವಾರದಿಂದ ಸಂಭವಿಸುತ್ತಿರುವ ನಿರಂತರ ಮಳೆಯು ವೈರಲ್ ಜ್ವರ ಪ್ರಕರಣಗಳಲ್ಲಿ ಏರಿಕೆ ತರಿಸಿದೆ. ವೈದ್ಯಕೀಯ ವರದಿಗಳ ಪ್ರಕಾರ, ಮಕ್ಕಳಲ್ಲಿ ಶೇ.5 ರಿಂದ 10 ರಷ್ಟು ಮತ್ತು ಒಟ್ಟು ಒಪಿಡಿ…

The post ಬೆಂಗಳೂರು ನಗರದಲ್ಲಿ ಸತತ ಮಳೆಯ ಪರಿಣಾಮ ವೈರಲ್ ಜ್ವರ ಪ್ರಕರಣಗಳಲ್ಲಿ ಹೆಚ್ಚಳ. appeared first on Good News 24x7.

]]>

ಬೆಂಗಳೂರು : ನಗರದ ಹವಾಮಾನದಲ್ಲಿ ನಡೆಯುತ್ತಿರುವ ಅನಿಯಮಿತ ಬದಲಾವಣೆಯ ಹಿನ್ನೆಲೆ, ಕಳೆದ ಒಂದು ವಾರದಿಂದ ಸಂಭವಿಸುತ್ತಿರುವ ನಿರಂತರ ಮಳೆಯು ವೈರಲ್ ಜ್ವರ ಪ್ರಕರಣಗಳಲ್ಲಿ ಏರಿಕೆ ತರಿಸಿದೆ. ವೈದ್ಯಕೀಯ ವರದಿಗಳ ಪ್ರಕಾರ, ಮಕ್ಕಳಲ್ಲಿ ಶೇ.5 ರಿಂದ 10 ರಷ್ಟು ಮತ್ತು ಒಟ್ಟು ಒಪಿಡಿ ರೋಗಿಗಳಲ್ಲಿ ಶೇ.15-20 ರಷ್ಟು ವೈರಲ್‌ ಫೀವರ್‌ ಪ್ರಕರಣಗಳು ಹೆಚ್ಚಾಗಿವೆ.

ಹವಾಮಾನ ಬದಲಾವಣೆಯಿಂದಾಗಿ ಜ್ವರ, ಕೆಮ್ಮು, ಶೀತ, ಗಂಟಲು ನೋವು, ವಾಂತಿ, ಅತಿಸಾರ ಮುಂತಾದ ಲಕ್ಷಣಗಳೊಂದಿಗೆ ಬಾಲಕರು ಹಾಗೂ ದೊಡ್ಡವರು ಆಸ್ಪತ್ರೆಗಳ ಒಪಿಡಿಗೆ ಬರ್ತಿದ್ದಾರೆ. ಜೊತೆಗೆ ಡೆಂಗ್ಯೂ ಮತ್ತು ಟೈಫಾಯ್ಡ್ ಪ್ರಕರಣಗಳೂ ಸಹ ಕಾಣಿಸಿಕೊಂಡಿವೆ.

ವೈದ್ಯರ ಅಭಿಪ್ರಾಯ
ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಹೇಳುವಂತೆ, “ಮಕ್ಕಳಲ್ಲಿಯಷ್ಟೇ ಅಲ್ಲದೆ, ದೊಡ್ಡವರಲ್ಲೂ ವೈರಲ್ ಜ್ವರ ಪ್ರಕರಣಗಳು ಹೆಚ್ಚಾಗಿವೆ. ಬಹುಪಾಲು ಪ್ರಕರಣಗಳು ಮೂರು ನಾಲ್ಕು ದಿನಗಳಲ್ಲಿ ಚೇತರಿಸಿಕೊಳ್ಳುತ್ತವೆ.”

ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಸಿ. ಅವರು, “ಚಳಿಯ ವಾತಾವರಣದಿಂದಾಗಿ ಗರ್ಭಿಣಿಯರಲ್ಲಿಯೂ ಜ್ವರ, ನೆಗಡಿಯಂತಹ ಲಕ್ಷಣಗಳ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ. ಇದು ಸಾಮಾನ್ಯವಾಗಿ ರೆಸ್ಪಿರೇಟರಿ ವೈರಸ್‌ನಿಂದ ಉಂಟಾಗುವ ಅಸ್ವಸ್ಥತೆ” ಎಂದರು.

ಆರೋಗ್ಯ ಕಾಳಜಿ ಅಗತ್ಯ
ಕೆ.ಸಿ. ಜನರಲ್, ವಿಕ್ಟೋರಿಯಾ, ಸಿ.ವಿ. ರಾಮನ್ ನಗರ, ವಾಣಿವಿಲಾಸ್ ಸೇರಿ ಬಹುತೇಕ ಸರ್ಕಾರಿ ಆಸ್ಪತ್ರೆಗಳ ಒಪಿಡಿಯಲ್ಲಿ ಅರ್ಧಕ್ಕಿಂತ ಹೆಚ್ಚು ರೋಗಿಗಳು ವೈರಲ್ ಜ್ವರದಿಂದ ಬಳಲುತ್ತಿರುವುದಾಗಿ ವರದಿಯಾಗಿದೆ.

ವೈದ್ಯರ ಸಲಹೆ:

  • ಮಕ್ಕಳನ್ನು ಬೆಚ್ಚಗಿರಿಸಲು ಯತ್ನಿಸಿ
  • ಮಳೆ ಅಥವಾ ಚಳಿಯಲ್ಲಿ ಹೊರಗೆ ಹೋಗದಂತೆ ತಡೆಗಟ್ಟಿರಿ
  • ಜ್ವರ ಕಾಣಿಸಿಕೊಂಡರೆ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
  • ಆರೋಗ್ಯಕರ ಆಹಾರ ಮತ್ತು ನಿದ್ರೆ ಕಾಪಾಡಿಕೊಳ್ಳಿ

ಬೆಂಗಳೂರು ನಿವಾಸಿಗಳು ಹವಾಮಾನದ ಬದಲಾವಣೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ನಿಜವಾಗಿಯೂ ಅಗತ್ಯವಾಗಿದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.

 

The post ಬೆಂಗಳೂರು ನಗರದಲ್ಲಿ ಸತತ ಮಳೆಯ ಪರಿಣಾಮ ವೈರಲ್ ಜ್ವರ ಪ್ರಕರಣಗಳಲ್ಲಿ ಹೆಚ್ಚಳ. appeared first on Good News 24x7.

]]>
ಧಾರವಾಡದಲ್ಲಿ ದುರಂತ: ಥಿನ್ನರ್ ಬಾಟಲಿ ಸ್ಪೋಟದಿಂದ ಮೃತಪಟ್ಟ ಮಗನ ನಂತರ ಇದೀಗ ತಂದೆಯೂ ಸಾವು. https://www.goodnews24x7.com/tragedy-in-dharwad-after-son-dies-in-thinner-bottle-explosion-now-father-also-dies/ Tue, 19 Aug 2025 05:26:02 +0000 https://www.goodnews24x7.com/?p=6381 ಧಾರವಾಡ : ಥಿನ್ನರ್ ಬಾಟಲಿ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಮೃತಪಟ್ಟ ನಾಲ್ಕು ವರ್ಷದ ಮಗನ ನಂತರ, ಗಂಭೀರ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆಯೂ ಇಂದು ಮೃತಪಟ್ಟಿದ್ದಾರೆ. ಈ ಘಟನೆ ಧಾರವಾಡದ ಸಂತೋಷ್ ನಗರದಲ್ಲಿ ನಡೆದಿದೆ. ಮೃತರಾದವರು ಚಂದ್ರಕಾಂತ್…

The post ಧಾರವಾಡದಲ್ಲಿ ದುರಂತ: ಥಿನ್ನರ್ ಬಾಟಲಿ ಸ್ಪೋಟದಿಂದ ಮೃತಪಟ್ಟ ಮಗನ ನಂತರ ಇದೀಗ ತಂದೆಯೂ ಸಾವು. appeared first on Good News 24x7.

]]>

ಧಾರವಾಡ : ಥಿನ್ನರ್ ಬಾಟಲಿ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಮೃತಪಟ್ಟ ನಾಲ್ಕು ವರ್ಷದ ಮಗನ ನಂತರ, ಗಂಭೀರ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆಯೂ ಇಂದು ಮೃತಪಟ್ಟಿದ್ದಾರೆ. ಈ ಘಟನೆ ಧಾರವಾಡದ ಸಂತೋಷ್ ನಗರದಲ್ಲಿ ನಡೆದಿದೆ.

ಮೃತರಾದವರು ಚಂದ್ರಕಾಂತ್ ಮಾಶ್ಯಾಳ. ಕಳೆದ ಶುಕ್ರವಾರ (ಆಗಸ್ಟ್ 15), ಮನೆಯೊಳಗೆ ಶೀತದಿಂದ ರಕ್ಷಣೆಗಾಗಿ ಕಡುಪು (ಕುಪ್ಪಡಿ) ಇಡಲಾಗಿತ್ತು. ಈ ಸಮಯದಲ್ಲಿ ಆಟವಾಡುತ್ತಿದ್ದ ಮಗ ಅಗಸ್ತ್ಯ (4) ತಪ್ಪಿತಸ್ಥವಾಗಿ ಥಿನ್ನರ್ ಬಾಟಲಿಯನ್ನು ಕೆಡವಿದ್ದನು. ಬಾಟಲಿಯಿಂದ ಹೊರಬಂದ ದ್ರವ ಬೆಂಕಿಗೆ ತಗುಲಿ ತಕ್ಷಣವೇ ಅಗ್ನಿ ಹರಡಿತ್ತು.

ಅಗ್ನಿಯ ಕೆನ್ನಾಲಿಗೆ ಬಾಲಕನ ದೇಹವನ್ನು ಹೊತ್ತಿಕೊಂಡು ಭೀಕರ ಗಾಯಗಳನ್ನುಂಟುಮಾಡಿತು. ಮಗನನ್ನು ರಕ್ಷಿಸಲು ಮುಂದಾದ ತಂದೆ ಚಂದ್ರಕಾಂತ್‌ಗೂ ತೀವ್ರ ಸುಟ್ಟ ಗಾಯಗಳಾದವು. ತಕ್ಷಣವೇ ಇಬ್ಬರನ್ನೂ ಧಾರವಾಡದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಗಷ್ಟೇ ಬಾಲಕ ಅಗಸ್ತ್ಯ ಮೃತಪಟ್ಟಿದ್ದ. ಇಂದು, ತೀವ್ರ ನಿಗಾ ಘಟಕದಲ್ಲಿ ಸಾವಿನ ಹೋರಾಟ ನಡೆಸುತ್ತಿದ್ದ ತಂದೆ ಚಂದ್ರಕಾಂತ್ ಮಾಶ್ಯಾಳರೂ ಕೊನೆಯುಸಿರೆಳೆದರು.

ಈ ದ್ವಿತೀಯ ದುಃಖವಾರ್ತೆಯೊಂದಿಗೆ ಕುಟುಂಬದ ದುಃಖ ಮತ್ತಷ್ಟು ಆಳವಾಯಿತು. ತಂದೆ ಮತ್ತು ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ದಾರಿಯವರೆಗೆ ಹರಡಿದಂತಾಗಿದೆ.

The post ಧಾರವಾಡದಲ್ಲಿ ದುರಂತ: ಥಿನ್ನರ್ ಬಾಟಲಿ ಸ್ಪೋಟದಿಂದ ಮೃತಪಟ್ಟ ಮಗನ ನಂತರ ಇದೀಗ ತಂದೆಯೂ ಸಾವು. appeared first on Good News 24x7.

]]>
ಶತಾಯುಷಿ ತಾಯಿಗೆ ಪಾಂಡುರಂಗನ ದರ್ಶನ ಮಾಡಿಸಿದ ಮಗ: ಚಳಿ, ಗಾಳಿ, ಮಳೆ ಎನ್ನದೆ 220 ಕಿಮೀ ಪಾದಯಾತ್ರೆ ಕೈಗೊಂಡ ಆಧುನಿಕ ಶ್ರವಣಕುಮಾರ. https://www.goodnews24x7.com/son-gives-centenarian-mother-a-glimpse-of-panduranga-a-modern-shravankumara-who-braved-cold-wind-and-rain-to-undertake-a-220-km-trek/ Tue, 19 Aug 2025 05:10:58 +0000 https://www.goodnews24x7.com/?p=6378 ಬಾವನಸೌಂದತ್ತಿ: ದೇವರ ಮೇಲಿನ ನಂಬಿಕೆಯು ಅಸಾಧ್ಯವನ್ನೂ ಸಾಧ್ಯವಾಗಿಸಬಲ್ಲದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿ ನಿಂತಿದ್ದಾರೆ ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ ಸದಾಶಿವ ಬಾನೆ. ಪಂಢರಪುರ ವಿಠ್ಠಲನ ಭಕ್ತರಾದ ಸದಾಶಿವರು ತಾಯಿಯ ಮಹದಾಸೆ ಈಡೇರಿಸಲು ಮಾಡಿದ ಸಾಹಸ ಎಲ್ಲರ ಮನಗೆದ್ದಿದೆ. ರಾಮಾಯಣದಲ್ಲಿ ಕಾಣುವ ಶ್ರವಣಕುಮಾರನ…

The post ಶತಾಯುಷಿ ತಾಯಿಗೆ ಪಾಂಡುರಂಗನ ದರ್ಶನ ಮಾಡಿಸಿದ ಮಗ: ಚಳಿ, ಗಾಳಿ, ಮಳೆ ಎನ್ನದೆ 220 ಕಿಮೀ ಪಾದಯಾತ್ರೆ ಕೈಗೊಂಡ ಆಧುನಿಕ ಶ್ರವಣಕುಮಾರ. appeared first on Good News 24x7.

]]>

ಬಾವನಸೌಂದತ್ತಿ: ದೇವರ ಮೇಲಿನ ನಂಬಿಕೆಯು ಅಸಾಧ್ಯವನ್ನೂ ಸಾಧ್ಯವಾಗಿಸಬಲ್ಲದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿ ನಿಂತಿದ್ದಾರೆ ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ ಸದಾಶಿವ ಬಾನೆ. ಪಂಢರಪುರ ವಿಠ್ಠಲನ ಭಕ್ತರಾದ ಸದಾಶಿವರು ತಾಯಿಯ ಮಹದಾಸೆ ಈಡೇರಿಸಲು ಮಾಡಿದ ಸಾಹಸ ಎಲ್ಲರ ಮನಗೆದ್ದಿದೆ.

ರಾಮಾಯಣದಲ್ಲಿ ಕಾಣುವ ಶ್ರವಣಕುಮಾರನ ಕಥೆ ನಮಗೆ ತಿಳಿದಿದೆ—ತಮ್ಮ ದೃಷ್ಟಿಹೀನ ತಾಯ್ತಂದೆಗಳನ್ನು ಕಾವಡದಲ್ಲಿ ಕೂರಿಸಿ ತೀರ್ಥಯಾತ್ರೆಗೆ ಕರೆದೊಯ್ಯುತ್ತಿದ್ದನು. ಈ ಪವಿತ್ರ ಕಥೆಯ ಪ್ರತಿಬಿಂಬವನ್ನು ನಾವಿಂದು 21ನೇ ಶತಮಾನದಲ್ಲೂ ನೋಡಿ ಬೆರಗಾಗುತ್ತಿದ್ದೇವೆ.

ತಾಯಿಯ ಆಶಯಕ್ಕೆ ಜೀವಿತರೂಪ ಕೊಟ್ಟ ಮಗ:

55 ವರ್ಷದ ಸದಾಶಿವ ಬಾನೆ ಅವರು ತಮ್ಮ ಶತಾಯುಷಿ ತಾಯಿ ಸತ್ಯವ್ವ ಲಕ್ಷ್ಮಣ ಬಾನೆ ಅವರ ಏಕೈಕ ಆಸೆ ಈಡೇರಿಸಿದ್ದಾರೆ. ತಾಯಿಯನ್ನು ತಮ್ಮ ಹೆಗಲ ಮೇಲೆ ಹೊತ್ತು, 220 ಕಿಮೀ ದೂರ ಪಾದಯಾತ್ರೆ ಮೂಲಕ ಪಂಢರಪುರದ ಪಾಂಡುರಂಗನ ದರ್ಶನ ಮಾಡಿಸಿದ್ದಾರೆ.

ಸತತ 15 ವರ್ಷಗಳಿಂದ ವಿಠ್ಠಲ ಭಕ್ತಿಯಾಗಿ ಪಂಢರಪುರಕ್ಕೆ ಹೋಗುತ್ತಿರುವ ಸದಾಶಿವರು, ಈ ಬಾರಿ ತಾಯಿಯ ಕನಸನ್ನು ಈಡೇರಿಸಬೇಕು ಎಂಬ ಉದ್ದೇಶದಿಂದ ದಿಂಡಿಯಾತ್ರೆಯಲ್ಲಿ ಭಾಗವಹಿಸಿ, ತಾಯಿ ಸತ್ಯವ್ವರನ್ನು ಎಳೆಯುತ್ತಾ ಹೆಗಲ ಮೇಲೆ ಹೊತ್ತು ತೀವ್ರ ಮಳೆ, ಚಳಿ, ಗಾಳಿ ಮಧ್ಯೆಯೂ 9 ದಿನಗಳ ಕಾಲ ಪಾದಯಾತ್ರೆ ನಡೆಸಿ ಗಮ್ಯಕ್ಕೆ ತಲುಪಿದ್ದಾರೆ.

ಜನಮನದಲ್ಲಿ ‘ಆಧುನಿಕ ಶ್ರವಣಕುಮಾರ’ ಎಂಬ ಖ್ಯಾತಿಗೆ ಪಾತ್ರರಾದ ಸದಾಶಿವ, ಭಕ್ತಿಯ ಶಕ್ತಿ ಮತ್ತು ತಾಯಿಗೆ ತೋರಿದ ಪ್ರೀತಿಯ ಜೊತೆಗೆ, ಸಮಾಜದ ಮುಂದೆ ನಿಜವಾದ ಗೌರವದ ಪಾಠವನ್ನು ಬೋಧಿಸಿದ್ದಾರೆ.

The post ಶತಾಯುಷಿ ತಾಯಿಗೆ ಪಾಂಡುರಂಗನ ದರ್ಶನ ಮಾಡಿಸಿದ ಮಗ: ಚಳಿ, ಗಾಳಿ, ಮಳೆ ಎನ್ನದೆ 220 ಕಿಮೀ ಪಾದಯಾತ್ರೆ ಕೈಗೊಂಡ ಆಧುನಿಕ ಶ್ರವಣಕುಮಾರ. appeared first on Good News 24x7.

]]>
ಧರ್ಮಸ್ಥಳ ಪ್ರಕರಣ: ತಮಿಳುನಾಡಿನಲ್ಲಿ ಗುಂಪೊಂದು ಸಂಪರ್ಕಿಸಿತ್ತೆಂದು ದೂರುದಾರ ಹೇಳಿಲ್ಲ – ಎಸ್‌ಐಟಿ ಸ್ಪಷ್ಟನೆ. https://www.goodnews24x7.com/dharmasthala-case-complainant-did-not-say-that-a-group-contacted-him-in-tamil-nadu-sit-clarifies/ Tue, 19 Aug 2025 04:54:46 +0000 https://www.goodnews24x7.com/?p=6373 ಮಂಗಳೂರು : ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ತಮಿಳುನಾಡಿನಲ್ಲಿ ಗುಂಪೊಂದು ದೂರುದಾರನನ್ನು ಸಂಪರ್ಕಿಸಿತ್ತೆಂಬ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದೆ. ತನಿಖೆಯ ವೇಳೆ ದೂರುದಾರನು ಯಾವುದೇ ಇಂತಹ ಹೇಳಿಕೆ ನೀಡಿಲ್ಲ ಎಂದು ಅಧಿಕಾರಿಗಳು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.…

The post ಧರ್ಮಸ್ಥಳ ಪ್ರಕರಣ: ತಮಿಳುನಾಡಿನಲ್ಲಿ ಗುಂಪೊಂದು ಸಂಪರ್ಕಿಸಿತ್ತೆಂದು ದೂರುದಾರ ಹೇಳಿಲ್ಲ – ಎಸ್‌ಐಟಿ ಸ್ಪಷ್ಟನೆ. appeared first on Good News 24x7.

]]>

ಮಂಗಳೂರು : ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ತಮಿಳುನಾಡಿನಲ್ಲಿ ಗುಂಪೊಂದು ದೂರುದಾರನನ್ನು ಸಂಪರ್ಕಿಸಿತ್ತೆಂಬ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದೆ. ತನಿಖೆಯ ವೇಳೆ ದೂರುದಾರನು ಯಾವುದೇ ಇಂತಹ ಹೇಳಿಕೆ ನೀಡಿಲ್ಲ ಎಂದು ಅಧಿಕಾರಿಗಳು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.

ಹಿಂದೆ ಕೆಲ ಮಾಧ್ಯಮ ವರದಿಗಳ ಪ್ರಕಾರ, “2014ರ ನಂತರ ತಮಿಳುನಾಡಿನಲ್ಲಿ ಇದ್ದಾಗ 2023ರಲ್ಲಿ ಒಂದು ಗುಂಪು ನನ್ನನ್ನು ಸಂಪರ್ಕಿಸಿತ್ತು. ಧರ್ಮಸ್ಥಳದಲ್ಲಿ ಶವ ಹೂತಿರುವ ಬಗ್ಗೆ ಕೇಳಿದ್ದರು. ನಾನು ಕಾನೂನುಬದ್ಧವಾಗಿ ಶವ ಹೂತಿದ್ದೆನೆಂದು ತಿಳಿಸಿದ್ದೆ. ಆದರೆ ಅವರು ತಪ್ಪು ಹೇಳಿಕೆ ನೀಡುವಂತೆ ಒತ್ತಡ ಹೇರಿದ್ದರು,” ಎಂಬುವಾಗಿ ದೂರುದಾರ ಹೇಳಿಕೆ ನೀಡಿದ್ದಾನೆಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ವಿವಾದಗಳು ಹೆಚ್ಚಾಗಿದ್ದವು.

ಆದರೆ, ಎಸ್‌ಐಟಿ ಈ ವರದಿಗಳನ್ನು ನಿರಾಕರಿಸಿದ್ದು, “ವಿಚಾರಣೆಯಲ್ಲಿ ದೂರುದಾರನು ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ಅವರು ಸೆಕ್ಷನ್ 164ರಡಿಯಲ್ಲಿ ನೀಡಿರುವ ಹೇಳಿಕೆಯನ್ನು ನಾವು ದಾಖಲಿಸುತ್ತಿದ್ದೇವೆ,” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅದಷ್ಟೇ ಅಲ್ಲದೆ, ಮೊದಲು ದೂರುದಾರ ನೀಡಿರುವ ಹೇಳಿಕೆಗಳ ನಿಖರತೆಯನ್ನು ಪರಿಶೀಲಿಸಲಾಗುವುದು. ದೂರುದಾರರೊಂದಿಗೆ ಕೆಲಸ ಮಾಡಿದ ಗ್ರಾಪಂ ಅಧಿಕಾರಿಗಳು, ಸೇವೆಯಲ್ಲಿದ್ದ ಪೊಲೀಸರು ಹಾಗೂ ಇತರ ಸಿಬ್ಬಂದಿಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

ಈ ನಡುವೆ, ಎಸ್‌ಐಟಿ ಯೂಟ್ಯೂಬರ್‌ಗಳಿಗೆ ನೋಟಿಸ್ ನೀಡಿದೆಯೆಂಬ ಸುದ್ದಿಗಳನ್ನೂ ಅಧಿಕಾರಿಗಳು ಖಂಡಿಸಿದ್ದಾರೆ. “ಯಾವುದೇ ನೋಟಿಸ್ ನೀಡಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

1994ರಿಂದ 2014ರವರೆಗೆ ಕೆಲಸ ಮಾಡಿದ ಕೆಲ ಸಿಬ್ಬಂದಿಗೆ ಸಮನ್ಸ್ ನೀಡಲಾಗಿದ್ದು, ಅವರಿಂದ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ.

ಇನ್ನೊಂದು ಮೂಲದ ಪ್ರಕಾರ, ಮಂಗಳವಾರ ಸಾಕ್ಷಿ-ದೂರುದಾರರೊಂದಿಗೆ ಸೇರಿದಂತೆ ಇತರ ಪ್ರಮುಖ ವ್ಯಕ್ತಿಗಳನ್ನೂ ಎಸ್‌ಐಟಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ದೂರುದಾರರು ಉಲ್ಲೇಖಿಸಿರುವ ತಲೆಬುರುಡೆ ಹಾಗೂ ಇತರ ಸ್ಥಳಗಳ ಬಗ್ಗೆ ಮುಂದಿನ ಹಂತದಲ್ಲಿ ಪ್ರಶ್ನೆಗಳನ್ನು ಕೇಳಲಾಗುವುದು ಎಂದು ಮೂಲಗಳು ತಿಳಿಸಿವೆ.

The post ಧರ್ಮಸ್ಥಳ ಪ್ರಕರಣ: ತಮಿಳುನಾಡಿನಲ್ಲಿ ಗುಂಪೊಂದು ಸಂಪರ್ಕಿಸಿತ್ತೆಂದು ದೂರುದಾರ ಹೇಳಿಲ್ಲ – ಎಸ್‌ಐಟಿ ಸ್ಪಷ್ಟನೆ. appeared first on Good News 24x7.

]]>
ಲೇಹ್‌ನಲ್ಲಿ ಶಾಕ್! ‘ಧುರಂಧರ್’ ಚಿತ್ರದ ಶೂಟಿಂಗ್ ಸ್ಥಗಿತ – 100ಕ್ಕೂ ಹೆಚ್ಚು ಸಿಬ್ಬಂದಿ ಏಕಾಏಕಿ ಅಸ್ವಸ್ಥ. https://www.goodnews24x7.com/shock-in-leh-shooting-of-dhurandhar-halted-more-than-100-crew-members-fall-ill/ Tue, 19 Aug 2025 04:38:46 +0000 https://www.goodnews24x7.com/?p=6370 ಬಾಲಿವುಡ್‌ನ ಬಹು ನಿರೀಕ್ಷಿತ ಚಲನಚಿತ್ರ ‘ಧುರಂಧರ್’ ಲೇಹ್‌ನ ಸುಂದರ ಪ್ರದೆಶಗಳಲ್ಲಿ ಚಿತ್ರೀಕರಣದ ಹಂತದಲ್ಲಿತ್ತು. ರಣ್‌ವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರ, ಎಲ್ಲವೂ ಸಜ್ಜಾಗಿದ್ದರೂ, ಅನಾಹುತದ ಸನ್ನಿವೇಶ ಎದುರಾಗಿದೆ. ಶೂಟಿಂಗ್ ವೇಳೆ ಚಿತ್ರತಂಡದ 100ಕ್ಕೂ ಅಧಿಕ ಸದಸ್ಯರು ಏಕಾಏಕಿ ಅಸ್ವಸ್ಥರಾಗಿದ್ದು,…

The post ಲೇಹ್‌ನಲ್ಲಿ ಶಾಕ್! ‘ಧುರಂಧರ್’ ಚಿತ್ರದ ಶೂಟಿಂಗ್ ಸ್ಥಗಿತ – 100ಕ್ಕೂ ಹೆಚ್ಚು ಸಿಬ್ಬಂದಿ ಏಕಾಏಕಿ ಅಸ್ವಸ್ಥ. appeared first on Good News 24x7.

]]>

ಬಾಲಿವುಡ್‌ನ ಬಹು ನಿರೀಕ್ಷಿತ ಚಲನಚಿತ್ರ ‘ಧುರಂಧರ್’ ಲೇಹ್‌ನ ಸುಂದರ ಪ್ರದೆಶಗಳಲ್ಲಿ ಚಿತ್ರೀಕರಣದ ಹಂತದಲ್ಲಿತ್ತು. ರಣ್‌ವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರ, ಎಲ್ಲವೂ ಸಜ್ಜಾಗಿದ್ದರೂ, ಅನಾಹುತದ ಸನ್ನಿವೇಶ ಎದುರಾಗಿದೆ. ಶೂಟಿಂಗ್ ವೇಳೆ ಚಿತ್ರತಂಡದ 100ಕ್ಕೂ ಅಧಿಕ ಸದಸ್ಯರು ಏಕಾಏಕಿ ಅಸ್ವಸ್ಥರಾಗಿದ್ದು, ತುರ್ತು ಚಿಕಿತ್ಸೆಗೆ ಒಳಗಾಗಿದ್ದಾರೆ.

ಏನು ನಡೆದಿದೆ?
ಆಗಸ್ಟ್ 17, ಭಾನುವಾರ ಸಂಜೆ ವೇಳೆ ಈ ಅಸ್ವಸ್ಥತೆ ಪ್ರಾರಂಭವಾಯಿತು. ಚಿತ್ರತಂಡದ ಸದಸ್ಯರಿಗೆ ತೀವ್ರ ಹೊಟ್ಟೆನೋವು, ವಾಂತಿ ಮತ್ತು ತಲೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಲೇಹ್‌ನ ಎಸ್‌ಎನ್‌ಎಂ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಈ ಬಗ್ಗೆ ಸ್ಪಷ್ಟಪಡಿಸಿದ್ದು, ಇದು “ಮಾಸ್ ಫುಡ್ ಪಾಯ್ಸನಿಂಗ್” ಪ್ರಕರಣವಾಗಿದೆ ಎಂದು ಘೋಷಿಸಿದ್ದಾರೆ.

ವೈದ್ಯರ ಹೇಳಿಕೆ:
ಎಸ್‌ಎನ್‌ಎಂ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಹೇಳಿದ್ದು:
“ಇದು ಗುಂಪು ಆಹಾರ ವಿಷಕಾರಿತನದ ಪ್ರಕರಣ. ಎಲ್ಲರಿಗೂ ತ್ವರಿತ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ತುಂಬಿಬಿಟ್ಟಿದ್ದರೂ, ನಾವು ಪರಿಸ್ಥಿತಿಯನ್ನು ನಿಭಾಯಿಸಲು ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರು ಸಹ ಕಾರ್ಯ ನಿರ್ವಹಿಸಿದರು.”

ಚಿತ್ರೀಕರಣ ಸ್ಥಗಿತ:
ಚಿತ್ರದ ಶೂಟಿಂಗ್ ಸ್ಥಳದಲ್ಲಿ ಎಚ್ಚರಿಕೆಯ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅನಾಹುತವಾಗದಂತೆ ತಕ್ಷಣ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಅನಾರೋಗ್ಯದ ಕಾರಣದಿಂದಾಗಿ ಆಪತ್ತಿನ ಪರಿಸ್ಥಿತಿಯಲ್ಲಿ ವೈದ್ಯರು ಹಾಗೂ ಪೊಲೀಸರು ‘ಧುರಂಧರ್’ ತಂಡದ ಸಹಾಯಕ್ಕೆ ಧಾವಿಸಿದ್ದಾರೆ. ಯಾವುದೇ ಜೀವಹಾನಿ ಸಂಭವಿಸದಿರುವುದು ನೆಮ್ಮದಿಯ ವಿಚಾರ.

ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಇಲ್ಲ:
ದಿಗ್ದರ್ಶಕ ಆದಿತ್ಯ ಧರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರ ಡಿಸೆಂಬರ್ 5, 2025 ರಂದು ಬಿಡುಗಡೆಗೆ ನಿಗದಿಯಾಗಿದೆ. ರಣ್‌ವೀರ್ ಸಿಂಗ್ ಜೊತೆ ಆರ್. ಮಾಧವನ್, ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್ ಮತ್ತು ಸಾರಾ ಅರ್ಜುನ್ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

The post ಲೇಹ್‌ನಲ್ಲಿ ಶಾಕ್! ‘ಧುರಂಧರ್’ ಚಿತ್ರದ ಶೂಟಿಂಗ್ ಸ್ಥಗಿತ – 100ಕ್ಕೂ ಹೆಚ್ಚು ಸಿಬ್ಬಂದಿ ಏಕಾಏಕಿ ಅಸ್ವಸ್ಥ. appeared first on Good News 24x7.

]]>
ಅಮೆರಿಕದ ಕಣ್ಣಲ್ಲಿ ಭಾರತ-ಪಾಕಿಸ್ತಾನ ಮಾತ್ರ? ಯುಎಸ್‌ ಸಂಭಾಳಿಸುವ ಜವಾಬ್ದಾರಿ ಯಾರದ್ದು? https://www.goodnews24x7.com/in-americas-eyes-only-india-pakistan-whose-responsibility-is-it-to-manage-the-us/ Mon, 18 Aug 2025 09:43:42 +0000 https://www.goodnews24x7.com/?p=6363 ವಾಷಿಂಗ್ಟನ್‌ ಡಿಸಿ : ಅಮೆರಿಕವನ್ನು ವಿಶ್ವದ ದೊಡ್ಡಣ್ಣ ಅಂತಾರೆ. ತನ್ನ ಅಗಾಧ ಆರ್ಥಿಕ ಮತ್ತು ಸಾಮರಿಕ ಶಕ್ತಿಯಿಂದ ಅಮೆರಿಕ ಈ ಪದವಿಯನ್ನು ಗಳಿಸಿಕೊಂಡಿದೆ. ಹಾಗಂತ ಅಮೆರಿಕ ಅಮೆರಿಕವನ್ನು ನೋಡಿಕೊಳ್ಳುವುದನ್ನು ಮರೆತರೆ, ಈ ದೊಡ್ಡಣ್ಣನ ಪದವಿ ಬಹಳ ದಿನ ಇರಲಾರದು. ಅಮೆರಿಕ ಅಧ್ಯಕ್ಷ…

The post ಅಮೆರಿಕದ ಕಣ್ಣಲ್ಲಿ ಭಾರತ-ಪಾಕಿಸ್ತಾನ ಮಾತ್ರ? ಯುಎಸ್‌ ಸಂಭಾಳಿಸುವ ಜವಾಬ್ದಾರಿ ಯಾರದ್ದು? appeared first on Good News 24x7.

]]>

ವಾಷಿಂಗ್ಟನ್‌ ಡಿಸಿ : ಅಮೆರಿಕವನ್ನು ವಿಶ್ವದ ದೊಡ್ಡಣ್ಣ ಅಂತಾರೆ. ತನ್ನ ಅಗಾಧ ಆರ್ಥಿಕ ಮತ್ತು ಸಾಮರಿಕ ಶಕ್ತಿಯಿಂದ ಅಮೆರಿಕ ಈ ಪದವಿಯನ್ನು ಗಳಿಸಿಕೊಂಡಿದೆ. ಹಾಗಂತ ಅಮೆರಿಕ ಅಮೆರಿಕವನ್ನು ನೋಡಿಕೊಳ್ಳುವುದನ್ನು ಮರೆತರೆ, ಈ ದೊಡ್ಡಣ್ಣನ ಪದವಿ ಬಹಳ ದಿನ ಇರಲಾರದು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತ ಬಹುಶಃ ಇಂತದ್ದೊಂದು ತಪ್ಪು ಮಾಡುತ್ತಿದೆ. ಅಮೆರಿಕದ ಬಗ್ಗೆ ಕೊಡಬೇಕಾದ ಗಮನ ಕೊಡದಿರುವುದು ಮತ್ತು ವಿಶ್ವದ ಇತರ ಭಾಗಗಳಲ್ಲಿ ಆಗುತ್ತಿರುವ ಬೆಳವಣಿಗೆಗಳ ಮೇಲೆ ಬೇಡದ ಗಮನ ಕೊಡುತ್ತಿರುವುದು ಟ್ರಂಪ್‌ ಆಡಳಿತ್‌ ನೀತಿಯಾಗಿದೆ.

ಇದಕ್ಕೆ ಪುಷ್ಠಿ ಎಂಬಂತೆ, “ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿಯನ್ನು ಅಮೆರಿಕ ಪ್ರತಿದಿನವೂ ಮೇಲ್ವಿಚಾರಣೆ ಮಾಡುತ್ತದೆ” ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ. ಈ ಮೂಲಕ ಟ್ರಂಪ್‌ ಆಡಳಿತಕ್ಕೆ ಅಮೆರಿಕಕ್ಕಿಂತ ಭಾರತ ಮತ್ತು
ಪಾಕಿಸ್ತಾನವೇ ಮುಖ್ಯ ಎಂಬುದು ಸಾಬೀತಾಗಿದೆ. ಡೊನಾಲ್ಡ್‌ ಟ್ರಂಪ್‌ ಮತ್ತೆ ಕದನ ವಿರಾಮ ಒಪ್ಪಂದದ ಕ್ರೆಡಿಟ್‌ ಪಡೆಯಲು ಪ್ರಯತ್ನಿಸುತ್ತಿರುವುದು ಸಾಬೀತಾಗಿದೆ.

ರೂಬಿಯೊ ಹೇಳಿದ್ದೇನು? : ಎನ್‌ಬಿಸಿ ನ್ಯೂಸ್‌ನೊಂದಿಗೆ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, “ಏಷ್ಯಾದ ಎರಡು ನೆರೆಹೊರೆ ರಾಷ್ಟ್ರಗಳ ನಡುವಿನ ಪರಮಾಣು ಉಲ್ಬಣವನ್ನು ತಪ್ಪಿಸಲು, ಅಮೆರಿಕ ನಿತ್ಯವೂ ಕೆಲಸ ಮಾಡುತ್ತದೆ. ಕದನ ವಿರಾಮ ಒಪ್ಪಂದಗಳನ್ನು ನಿರ್ವಹಿಸುವುದು ಒಂದು ಸವಾಲಾಗಿರುವುದರಿಂದ, ಅವು ಬೇಗನೆ ಮುರಿದು ಬೀಳಬಹುದು. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಸಂಘರ್ಷದ ದಾರಿ ಹಿಡಿಬಾರದು ಎಂಬ ಉದ್ದೇಶದಿಂದ, ಅಮೆರಿಕ ನಿತ್ಯವೂ ಈ ಎರಡೂ ದೇಶಗಳ ಚಟುವಟಿಕೆಗಳ ಮೇಲೆ ಕಣ್ಣಟ್ಟಿದೆ” ಎಂದು ಹೇಳಿದ್ಧಾರೆ.

“ಕದನ ವಿರಾಮದ ಒಂದು ಮುಖ್ಯ ತೊಡಕು ಎಂದರೆ ಅವುಗಳನ್ನು ಕಾಯ್ದುಕೊಳ್ಳುವುದು. ಅದು ತುಂಬಾ ಕಷ್ಟದ ಕೆಲಸವಾಗಿದ್ದು, ಪ್ರತಿದಿನ
ಪಾಕಿಸ್ತಾನ ಮತ್ತು ಭಾರತದ ನಡುವೆ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುವ ಮೂಲಕ, ಈ ಕಷ್ಟದ ಜವಾಬ್ದಾರಿಯನ್ನು ಅಮೆರಿಕ ನಿರ್ವಹಿಸುತ್ತಿದೆ” ಎಂದು ಮಾರ್ಕೊ ರೂಬಿಯೊ ಹೇಳಿದ್ದಾರೆ.

ರಷ್ಯಾ-ಉಕ್ರೇನ್‌ ಕದನ ವಿರಾಮ: ಇನ್ನು ಅಲಾಸ್ಕಾ ಸಭೆಯಲ್ಲಿ ರಷ್ಯಾ-ಉಕ್ರೇನ್‌ ಕದನ ವಿರಾಮ ಒಪ್ಪಂದ ಜಾರಿ ಸಾಧ್ಯವಾಗದ ಬಗ್ಗೆ ಮಾತನಾಡಿದ ಮಾರ್ಕೊ ರೂಬಿಯೊ, “ಕದನ ವಿರಾಮ ಒಪ್ಪಂದ ಜಾರಿಯಾಗಬೇಕಾದರೆ ಎರಡೂ ಕಡೆಯವರು ಗುಂಡು ಹಾರಿಸುವುದನ್ನು ನಿಲ್ಲಿಸಬೇಕು. ಆದರೆ ರಷ್ಯಾ ಆ ಕೆಲಸವನ್ನು ಮಾಡುತ್ತಿಲ್ಲ” ಎಂದು ಮಾರ್ಕೊ ರೂಬಿಯೊ ಹೇಳಿದ್ದಾರೆ.

ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು “ಜಾಗತಿಕ ಶಾಂತಿಯ ಧೂತ” ಎಂದು ಕರೆದಿರುವ ಮಾರ್ಕೊ ರೂಬಿಯೊ, ಶಾಂತಿಯ ಸಾಧನೆಯನ್ನು ತಮ್ಮ ಆಡಳಿತದ ಆದ್ಯತೆಯನ್ನಾಗಿ ಮಾಡಿಕೊಂಡ ಅಧ್ಯಕ್ಷರನ್ನು ಹೊಂದಿರುವುದಕ್ಕೆ, ಅಮೆರಿಕನ್ನರು ತಮ್ಮನ್ನು ಅದೃಷ್ಟವಂತರು ಎಂದು ಕರೆದುಕೊಳ್ಳಬೇಕು” ಎಂದು ಮಾರ್ಕೊ ರೂಬಿಯೊ ಅಭಿಪ್ರಾಯಪಟ್ಟಿದ್ದಾರೆ.

“ಭಾರತ-ಪಾಕಿಸ್ತಾನ, ಕಾಂಬೋಡಿಯಾ-ಥೈಲ್ಯಾಂಡ್‌, ರುವಾಂಡಾ-ಡಿಆರ್‌ಸಿ, ಹೀಗೆ ಜಗತ್ತಿನಲ್ಲಿ ಎಲ್ಲೆಲ್ಲಿ ಶಾಂತಿ ಸ್ಥಾಪನೆಗೆ ಅವಕಾಶ ಸಿಕ್ಕಿದೆಯೋ, ಅಲ್ಲಲ್ಲಿ ಡೊನಾಲ್ಡ್‌ ಟ್ರಂಪ್‌ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ” ಎಂದು ಮಾರ್ಕೊ ರೂಬಿಯೊ ಬಹುಪರಾಕ್‌ ಹಾಕಿದ್ದಾರೆ.

ಭಾರತದ ಸ್ಪಷ್ಟ ನಿರಾಕರಣೆ: ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದಲ್ಲಿ ಅಮೆರಿಕದ ಪಾತ್ರವನ್ನು ಸ್ಪಷ್ಟವಾಗಿ ನಿರಾಕರಿಸಿರುವ ಭಾರತ, ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ” ಎಂದು ಸ್ಪಷ್ಟಪಡಿಸಿದೆ. ಭಾರತದ ಈ ನಿಲುವಿನಿಂದ ಸಿಟ್ಟಾಗಿರುವ ಡೊನಾಲ್ಡ್‌ ಟ್ರಂಪ್‌, ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ಹೇರಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

The post ಅಮೆರಿಕದ ಕಣ್ಣಲ್ಲಿ ಭಾರತ-ಪಾಕಿಸ್ತಾನ ಮಾತ್ರ? ಯುಎಸ್‌ ಸಂಭಾಳಿಸುವ ಜವಾಬ್ದಾರಿ ಯಾರದ್ದು? appeared first on Good News 24x7.

]]>
ಅಮೆರಿಕ ನಡುಗಿಸಿದ ಮೊಲ! https://www.goodnews24x7.com/the-rabbit-that-shook-america/ Mon, 18 Aug 2025 09:19:30 +0000 https://www.goodnews24x7.com/?p=6355 ಟ್ರಂಪಣ್ಣ ವಿಶ್ವವನ್ನೇ ನಡುಗಿಸುವ ಕೆಲಸದಲ್ಲಿ ತೊಡಗಿದ್ದರೆ, ಇನ್ನೊಂದು ಪುಟ್ಟ ಪ್ರಾಣಿ ಅಮೆರಿಕವನ್ನೇ ನಡುಗಿಸಿಬಿಟ್ಟಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ ಒಂದು ವಿಚಿತ್ರ ಮೊಲದ ಫೋಟೋ ಸಾಕಷ್ಟು ಗದ್ದಲ ಉಂಟುಮಾಡಿತು. ಕೊಲರಾಡೋದಲ್ಲಿ ಕಂಡುಬಂದ ಆ ಮೊಲದ ಮುಖದ ಮೇಲೆ ಉದ್ದ ಉದ್ದ…

The post ಅಮೆರಿಕ ನಡುಗಿಸಿದ ಮೊಲ! appeared first on Good News 24x7.

]]>

ಟ್ರಂಪಣ್ಣ ವಿಶ್ವವನ್ನೇ ನಡುಗಿಸುವ ಕೆಲಸದಲ್ಲಿ ತೊಡಗಿದ್ದರೆ,
ಇನ್ನೊಂದು ಪುಟ್ಟ ಪ್ರಾಣಿ ಅಮೆರಿಕವನ್ನೇ ನಡುಗಿಸಿಬಿಟ್ಟಿದೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ ಒಂದು ವಿಚಿತ್ರ ಮೊಲದ ಫೋಟೋ ಸಾಕಷ್ಟು ಗದ್ದಲ ಉಂಟುಮಾಡಿತು. ಕೊಲರಾಡೋದಲ್ಲಿ ಕಂಡುಬಂದ ಆ ಮೊಲದ ಮುಖದ ಮೇಲೆ ಉದ್ದ ಉದ್ದ ಕೊಂಬುಗಳಂತೆಯೇ ಕಾಣುವ ಮಾಂಸದ ರಚನೆಗಳು ಬೆಳೆದುಕೊಂಡಿದವು.

“ಝಾಂಬಿ ವೈರಸ್ ಶುರುವಾಯಿತೇನು?”
ಎನ್ನುತ್ತಾ ಜನರಲ್ಲಿ ಆತಂಕ ಮೂಡಿದ್ರೆ,
ಇನ್ನೊಂದೆಡೆ ಕೆಲವರು “ಇದು ಎಐ ಕ್ರಿಯೇಷನ್, ಸುಳ್ಳು ಫೋಟೋ” ಎಂದು ತಿರಸ್ಕರಿಸಿದರು.

ಆದರೆ ನಿಜವಾದ ಸತ್ಯ ಮುಂದೆ ಬರುವವರೆಗೂ, ಈ ಚಿತ್ರವು ದೊಡ್ಡಚರ್ಚೆಗೆ ಕಾರಣವಾಯಿತು. ನಂತರ ನಡೆದ ತಜ್ಞರ ಪರೀಕ್ಷೆಯಲ್ಲಿ ಗೊತ್ತಾಯಿತು – ಈ ಮೊಲವು AI ಉತ್ಪನ್ನವಲ್ಲ, ನಕಲಿ ಫೋಟೋ ಕೂಡ ಅಲ್ಲ. ಅದರ ಮುಖದ ಮೇಲೆ ಬೆಳೆಯುತ್ತಿದ್ದವು ‘ಶೋಪ್ ಪ್ಯಾಪಿಲ್ಲೋಮಾ’ ಎಂಬ ವೈರಸ್‌ನಿಂದ ಉಂಟಾಗುವ ಮಾಂಸ ಖಂಡಗಳು. ಎಂದು

ಹಾಗೆಯೆ ಈ ವೈರಸ್ ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲಿ ಹೆಚ್ಚು ಸಕ್ರಿಯವಾಗುವ ಉಣ್ಣೆಗಳ ಮೂಲಕ ಹರಡುತ್ತದೆ. ಇದು ಮೊಲಗಳ ನಡುವೆ ಮಾತ್ರ ಹರಡುತ್ತದೆ – ಬೆಕ್ಕು, ನಾಯಿ ಅಥವಾ ಮನುಷ್ಯರಿಗೆ ಯಾವುದೇ ಅಪಾಯವಿಲ್ಲ. ಎಂದು ಹೇಳಿದ್ರು

ಆದರೆ, ಇಂದಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ಎಲ್ಲವೂ “ಇದೊಂದು ಹೊಸ ಅಪಾಯ!” ಎನಿಸುತ್ತದೆ. ಅದರ ಫಲಿತಾಂಶವೇನು ಅಂದರೆ – ಪೂರ್ಣವಾಗಿ ನಿರಪಾಯವಾಗಿರುವ ಈ ಪುಟ್ಟ ಮೊಲ, ಕೆಲ ದಿನಗಳ ಕಾಲ ಅಮೆರಿಕದ ‘ಹಾರರ್ ಸ್ಟಾರ್’ ಆಗಿ ಬೆಳೆದಿತ್ತು!

The post ಅಮೆರಿಕ ನಡುಗಿಸಿದ ಮೊಲ! appeared first on Good News 24x7.

]]>
ಮುಧೋಳ್ ಚಿತ್ರದ ಅಪ್‌ಡೇಟ್ ನೀಡಿದ ವಿಕ್ರಂ ರವಿಚಂದ್ರನ್! https://www.goodnews24x7.com/vikram-ravichandran-gives-an-update-on-the-film-mudhol/ Mon, 18 Aug 2025 08:15:38 +0000 https://www.goodnews24x7.com/?p=6351 ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ, ನಟ ವಿಕ್ರಂ ರವಿಚಂದ್ರನ್ ತಮ್ಮ ಹುಟ್ಟುಹಬ್ಬದಂದೇ ವಿಶೇಷವಾದ ಘೋಷಣೆಯೊಂದನ್ನು ಮಾಡಿ ಚಿತ್ರೋದ್ಯಮದ ಗಮನ ಸೆಳೆದಿದ್ದಾರೆ. ಅವರ ಡ್ರೀಮ್ ಪ್ರಾಜೆಕ್ಟ್ ಆಗಿರುವ ‘ಮುಧೋಳ್’ ಚಿತ್ರಕ್ಕೆ now ಹೊಸ ಶಕ್ತಿ ಸಿಕ್ಕಿದ್ದು ಖ್ಯಾತ ಉದ್ಯಮಿ ಹಾಗೂ ನಿರ್ಮಾಪಕ…

The post ಮುಧೋಳ್ ಚಿತ್ರದ ಅಪ್‌ಡೇಟ್ ನೀಡಿದ ವಿಕ್ರಂ ರವಿಚಂದ್ರನ್! appeared first on Good News 24x7.

]]>

ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ, ನಟ ವಿಕ್ರಂ ರವಿಚಂದ್ರನ್ ತಮ್ಮ ಹುಟ್ಟುಹಬ್ಬದಂದೇ ವಿಶೇಷವಾದ ಘೋಷಣೆಯೊಂದನ್ನು ಮಾಡಿ ಚಿತ್ರೋದ್ಯಮದ ಗಮನ ಸೆಳೆದಿದ್ದಾರೆ.

ಅವರ ಡ್ರೀಮ್ ಪ್ರಾಜೆಕ್ಟ್ ಆಗಿರುವ ‘ಮುಧೋಳ್’ ಚಿತ್ರಕ್ಕೆ now ಹೊಸ ಶಕ್ತಿ ಸಿಕ್ಕಿದ್ದು ಖ್ಯಾತ ಉದ್ಯಮಿ ಹಾಗೂ ನಿರ್ಮಾಪಕ ವಿಜಯ್ ಟಾಟಾ ಅವರ *ಅಮೃತ ಸಿನಿ ಕ್ರಾಫ್ಟ್* ಕಂಪನಿಯ ಮೂಲಕ. ಈ ಪ್ರೊಡಕ್ಷನ್ ಹೌಸ್ ಚಿತ್ರ ನಿರ್ಮಾಣದ ಜೊತೆಗೆ ವಿತರಣೆ, ಮಾರ್ಕೆಟಿಂಗ್ ಹಾಗೂ ಇತರ ಚಿತ್ರಗಳ ಜೊತೆಗೆ ಸಹಕಾರಿಯೂ ಮುಂದಾಗುತ್ತಿದೆ ಎಂಬುದು ಒಂದು ದೊಡ್ಡ ಬೆಳವಣಿಗೆ.

ಪತ್ರಿಕಾಗೋಷ್ಠಿಯಲ್ಲಿ ವಿಶೇಷ ಘೋಷಣೆ : ಈ ವಿಷಯ ತಿಳಿಸಲು ವಿಶೇಷವಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಟ ವಿಕ್ರಂ ರವಿಚಂದ್ರನ್, ನಿರ್ಮಾಪಕಿ ರಕ್ಷಾ ಹಾಗೂ ವಿಜಯ್ ಟಾಟಾ ಉಪಸ್ಥಿತರಿದ್ದರು. ಈ ಸಂದರ್ಭ ಮಾತನಾಡಿದ ವಿಕ್ರಂ,“ನನ್ನ ಹುಟ್ಟುಹಬ್ಬವನ್ನು ಸಾಮಾನ್ಯವಾಗಿ ನಾನು ಆಚರಿಸೋಲ್ಲ. ಆದರೆ ಈ ಬಾರಿ ವಿಜಯ್ ಸರ್ ವಿಶಿಷ್ಟವಾದ ಘೋಷಣೆ ಮಾಡೋಣ ಎಂದು ಸಲಹೆ ನೀಡಿದರು. ನಾನು ರವಿಚಂದ್ರನ್ ಸರ್ ಮಗ ಎಂಬುದು ಎಲ್ಲರಿಗೂ ಗೊತ್ತು. ನನ್ನ ಎರಡನೇ ಸಿನಿಮಾದಾಗಿನಿಂದಲೇ ನಿರ್ಮಾಪಕಿ ರಕ್ಷಾ ಮೇಡಂ ಬೆಂಬಲ ನೀಡುತ್ತಿದ್ದಾರೆ.”

“ನನ್ನ ಡ್ರೀಮ್ ಪ್ರಾಜೆಕ್ಟ್‌ಗೆ ಸಪೋರ್ಟ್ ಬೇಕಿತ್ತು. ಆ ಸಮಯದಲ್ಲಿ ಟ್ಯಾಲೆಂಟ್‌ಡ್ ಡೈರೆಕ್ಟರ್ ಕಾರ್ತಿಕ್ ರಾಜು ಸಿಕ್ಕರು. ನಾನು, ಕಾರ್ತಿಕ್ ಮತ್ತು ನಿರ್ಮಾಪಕರು ಸೇರಿ ಚರ್ಚೆ ನಡೆಸಿದಾಗ ‘ಮುಧೋಳ್’ ಮೂಡಿಬಂತು. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ನಂತರ ನಿರ್ಮಾಪಕಿ ರಕ್ಷಾ ಮೇಡಂ ಈ ಯೋಜನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.”

ವಿಜಯ್ ಟಾಟಾ ಜೊತೆ ಕೊಲಾಬ್ರೇಶನ್ ಹೇಗೆ ಶುರುವಾಯ್ತು?
ವಿಕ್ರಂ ಅವರಲ್ಲಿ ಉತ್ತಮ ಗೆಳೆಯನಾಗಿರುವ ದಿಲ್ ಸೆ ದಿಲೀಪ್ ಅವರು ಡೈರೆಕ್ಟರ್ ಋಷಿ ಅವರ ಕಥೆಯನ್ನು ಪರಿಚಯಿಸಿದರು. ಆ ಕಥೆ ಇಷ್ಟವಾದ ವಿಕ್ರಂ, ಚಿತ್ರ ನಿರ್ಮಾಪಕರಾದ ವಿಜಯ್ ಟಾಟಾ ಅವರ ಜೊತೆಗೆ ಕೆಲಸ ಮಾಡಬೇಕು ಎಂದು ನಿರ್ಧರಿಸಿದರು.

“ಒಮ್ಮೆ ಭೇಟಿಯಾದ ನಂತರ, ‘ಮುಧೋಳ್’ ಚಿತ್ರವನ್ನೂ ವಿಜಯ್ ಸರ್‌ಗೆ ತೋರಿಸಿದ್ದೆವು. ಅವರಿಗೆ ಇಷ್ಟವಾಯಿತು. ನಂತರ ನಿರ್ಮಾಪಕಿ ರಕ್ಷಾ ಮೇಡಂ ಹಾಗೂ ವಿಜಯ್ ಸರ್ ನಡುವೆ ಚರ್ಚೆ ನಡೆಯಿತು. ಅಂತಿಮವಾಗಿ ‘ಅಮೃತ ಸಿನಿ ಕ್ರಾಫ್ಟ್’ ಈ ಚಿತ್ರದ ಸಹ ನಿರ್ಮಾಪಕರಾಗಿ ಸೇರಿದ್ದು, ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತಲುಪಿಸಲು ಕೈಜೋಡಿಸಿದ್ದಾರೆ.”

ಹೊಸ ಶಕ್ತಿಯ ಜೊತೆ ಮುಂದೆ ಸಾಗುತ್ತಿರುವ ‘ಮುಧೋಳ್’ ಟೀಮ್ : ಈ ಕೊಲಾಬ್ರೇಶನ್ ಮೂಲಕ ‘ಮುಧೋಳ್’ ಚಿತ್ರ ತಂಡ ಈಗ ಲಿಷ್ಠವಾಗಿದ್ದು, ಸಿನಿಮಾಗೆ ತಕ್ಕ ಮಟ್ಟದ ಪ್ಲಾಟ್‌ಫಾರ್ಮ್ ಸಿಗಲಿದೆ ಎನ್ನುವ ವಿಶ್ವಾಸವಿದೆ. ಚಿತ್ರದ ಬಹುತೇಕ ವಿಭಾಗಗಳಲ್ಲಿ ಹೊಸ ಪ್ರತಿಭೆಗಳಿದ್ದು, ಈ ಚಿತ್ರ ಎಲ್ಲರಿಗೂ ಸ್ಫೂರ್ತಿದಾಯಕವಾಗಬೇಕು ಎಂಬ ಆಶಯವನ್ನು ವಿಕ್ರಂ ವ್ಯಕ್ತಪಡಿಸಿದ್ದಾರೆ.

The post ಮುಧೋಳ್ ಚಿತ್ರದ ಅಪ್‌ಡೇಟ್ ನೀಡಿದ ವಿಕ್ರಂ ರವಿಚಂದ್ರನ್! appeared first on Good News 24x7.

]]>