ರೋಹಿತ್​ ಶರ್ಮಾನ ಹೊರಕಳಿಸೋಕೆ ಬಿಸಿಸಿಐ ಹೊಸ ದಾಳ ..!

ಕ್ಯಾಪ್ಟನ್​ ರೋಹಿತ್​ ಶರ್ಮಾನ ಹೊರ ಕಳಿಸೋಕೆ ಬಿಸಿಸಿಐ ಶತಪ್ರಯತ್ನ ಮಾಡ್ತಿದೆ. ರೋಹಿತ್​ ಶರ್ಮಾ ನಾನು ವಿಶ್ವಕಪ್​ ಆಡಿಯೇ ರಿಟೈರ್​ ಆಗೋದು ಎಂದು ಪಟ್ಟು ಹಿಡಿದಿದ್ದಾರೆ. ಸೀನಿಯರ್​​​ ಆಟಗಾರರ ಕೈಬಿಟ್ಟು ಭವಿಷ್ಯದ ತಂಡ ಕಟ್ಟೋ ಪ್ರಯತ್ನ ಜೋರಾಗೆ ನಡೀತಿದೆ. ಸಪೋರ್ಟ್​ ಸ್ಟಾಫ್​ ವಿಚಾರದಲ್ಲೂ ಅಷ್ಟೇ. ಕಳೆದೊಂದು ವರ್ಷದಲ್ಲಿ ಹಲವು ಬದಲಾವಣೆಯಾಗಿದೆ. ಸ್ಟ್ರೆಂಥ್​ ಅಂಡ್ ಕಂಡಿಷನಿಂಗ್​ ಕೋಚ್​ ಬದಲಾವಣೆಯಾಗಿದೆ. ಸುದೀರ್ಘ ಕಾಲ ತಂಡದೊಂದಿಗಿದ್ದ ಸೋಹಮ್​​ ದೇಸಾಯಿಗೆ ಗುಡ್​ ಬೈ ಹೇಳಿರೋ ಬಿಸಿಸಿಐ, ಎಡ್ರೈನ್​ ಲೆ ರೌಕ್ಸ್​​ಗೆ ಮಣೆ ಹಾಕಿದೆ.

ಹೊಸ ಸ್ಟ್ರೆಂಥ್​ ಅಂಡ್ ಕಂಡಿಷನಿಂಗ್​ ಕೋಚ್​ಗೆ ಮಣೆ ಹಾಕಿರೋದು ಮಾತ್ರವಲ್ಲ. ಫಿಟ್​ನೆಸ್​ ಮಾನದಂಡವನ್ನೂ ಬದಲಾಯಿಸಲು ಬಿಸಿಸಿಐ ಮುಂದಾಗಿದೆ. ಈ ಹಿಂದಿದ್ದ ಯೋ ಯೋ ಟೆಸ್ಟ್​ಗೆ ಗೇಟ್​ಪಾಸ್​ ನೀಡಲು ಮುಂದಾಗಿರೋ ಬಾಸ್​​ಗಳು ಬ್ರೊನ್ಕೊ ಟೆಸ್ಟ್​ ಪರಿಚರಿಯಿಸೋಕೆ ಮುಂದಾಗಿದ್ದಾರೆ. ಆಟಗಾರರ ಫಿಟ್ನೆಸ್ ಲೆವೆಲ್​ ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ ಈ ಮಹತ್ವದ ನಿರ್ಧಾರವನ್ನ ಬಿಸಿಸಿಐ ಮಾಡಿದೆ ಅನ್ನೋದು ಮೇಲ್ನೋಟಕ್ಕೆ ಕಾಣ್ತಿರೋ ಸತ್ಯ. ಇದ್ರ ಹಿಂದೆ ಬೇರೆಯದ್ದೇ ಲೆಕ್ಕಾಚಾರವಿದೆ.

ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ನಿವೃತ್ತಿಯ ವಿಚಾರ ಕ್ರಿಕೆಟ್​ ವಲಯದಲ್ಲಿ ತೀವ್ರ ಚರ್ಚೆಯಲ್ಲಿದೆ. 2027ರ ವಿಶ್ವಕಪ್​ ಟಾರ್ಗೆಟ್​ ಮಾಡಿರೋ ಬಿಸಿಸಿಐ ಬಾಸ್​​ಗಳು ಕೊಹ್ಲಿ, ರೋಹಿತ್​​ನ ಕೈ ಬಿಟ್ಟು ಯುವ ತಂಡ ಕಟ್ಟೋ ಲೆಕ್ಕಾಚಾರದಲ್ಲಿದ್ದಾರೆ. ಬಿಸಿಸಿಐಗೆ ಸೆಡ್ಡು ಹೊಡೆದಿರೋ ರೋಹಿತ್​​, ನಾವು ವಿಶ್ವಕಪ್​​ ಆಡಿಯೇ ನಿವೃತ್ತಿ ಹೇಳೋದು ಎಂಬ ಸಂದೇಶ ರವಾನೆ ಮಾಡ್ತಿದ್ದಾರೆ. ಫಾರ್ಮ್​ ಅಂಡ್ ಫಿಟ್​ನೆಸ್​​ ಎರಡರಲ್ಲೂ ಕೊಹ್ಲಿ ಟಾಪ್​​​ನಲ್ಲಿದ್ದಾರೆ. ರೋಹಿತ್​ ಶರ್ಮಾ ಫಾರ್ಮ್​ ಚನ್ನಾಗಿದೆ. ಆದ್ರೆ ಫಿಟ್​ನೆಸ್​​ ಸಮಸ್ಯೆಯಿದೆ. ಈ ಫಿಟ್​​​ನೆಸ್​ ವೀಕ್​ನೆಸ್​​ ಅನ್ನೇ ಲಾಕ್​ ಮಾಡೋಕೆ ಬಿಸಿಸಿಐ ಹೊರಟಿದೆ.

ಬ್ರೊನ್ಕೊ ಟೆಸ್ಟ್​​​ ಪಾಸ್​ ಆಗೋದು ಕಷ್ಟ
ರಗ್ಬಿ ಹಾಗೂ ಫುಟ್ಬಾಲ್​ ತಂಡಗಳ ಸೆಲೆಕ್ಷನ್​ಗೆ ಈ ಬ್ರೊನ್ಕೊ ಟೆಸ್ಟ್​ ಮಾನದಂಡವಾಗಿದೆ. ಈ ಹಿಂದಿದ್ದ ಯೋ ಯೋ ಟೆಸ್ಟ್​ಗಿಂತ ಇದು ಕಠಿಣವಾದ ಪರೀಕ್ಷೆ. ಈ ಟೆಸ್ಟ್​ನಲ್ಲಿ 20 ಮೀಟರ್, 40 ಮೀಟರ್​, 60 ಮೀಟರ್​​​ ರನ್ನಿಂಗ್​ ಇರಲಿದೆ. ಶಟಲ್ ಮಾದರಿಯಲ್ಲಿ ಟೆಸ್ಟ್​ ನಡೆಯಲಿದ್ದು, 1 ಸೆಟ್ ಪೂರ್ಣಗೊಳಿಸಲು 240 ಮೀಟರ್ ದೂರ ಓಡಬೇಕು. ಹೀಗೆ 5 ಬಾರಿ ಆಟಗಾರ ಬ್ರೇಕ್​ ಇಲ್ಲದೇ ರನ್ನಿಂಗ್ ಮಾಡಬೇಕು. 1200 ಮೀಟರ್ ದೂರವನ್ನ 6 ನಿಮಿಷದೊಳಗೆ ಆಟಗಾರ ಪೂರ್ಣಗೊಳಿಸಬೇಕಾಗಿರುತ್ತೆ. ಈ ಕಠಿಣ ಪರೀಕ್ಷೆಯನ್ನ ಫಿಟ್​ನೆಸ್​ ಸಮಸ್ಯೆ ಎದುರಿಸ್ತಿರೋ 36 ವರ್ಷದ ರೋಹಿತ್​ ಗೆಲ್ಲೋದು ಕಷ್ಟ.

‘ರೋಹಿತ್​ ಶರ್ಮಾಗೆ ಇದು ಕಷ್ಟ’
2027 ವಿಶ್ವಕಪ್​ನಿಂದ ವಿರಾಟ್​​ ಕೊಹ್ಲಿಯನ್ನ ಹೊರಗಿಡೋದು ಕಷ್ಟ. ಆದ್ರೆ ರೋಹಿತ್​ ವಿಚಾರದಲ್ಲಿ ಅನುಮಾನವಿದೆ. ನಾನು ಭಾರತೀಯ ಕ್ರಿಕೆಟ್​ನ ಸೂಕ್ಷ್ಮವಾಗಿ ಗಮನಿಸುತ್ತೆನೆ. ಕೆಲ ದಿನಗಳ ಹಿಂದೆ ಬ್ರೊನ್ಕೊ ಟೆಸ್ಟ್​​ ಪರಿಚಯಿಸಲಾಗಿದೆ. ಇದು ರೋಹಿತ್​ ಶರ್ಮಾ ಅಂತಾ ಆಟಗಾರರಿಗೆ ಇದು ಕಷ್ಟ. ರೋಹಿತ್​ ಅವರ ಭವಿಷ್ಯದ ಪ್ಲಾನ್​ನಲ್ಲಿ ಇಲ್ಲ. ಹೀಗಾಗಿಯೇ ಹೊಸ ಟೆಸ್ಟ್​ ಪರಿಚಯಿಸಲಾಗಿದೆ.

ಒಟ್ಟಿನಲ್ಲಿ ಬಿಸಿಸಿಐ ಹೊಸದಾಗಿ ಜಾರಿಗೆ ತರಲು ಮುಂದಾಗಿರೋ ಬ್ರೊನ್ಕೊ ಟೆಸ್ಟ್​ ರೋಹಿತ್​ ಶರ್ಮಾ ಕರಿಯರ್​​ನ ಮತ್ತಷ್ಟು ಅತಂತ್ರಕ್ಕೆ ಸಿಲುಕಿಸಿದೆ. ಈ ಕಠಿಣ ಟೆಸ್ಟ್​ ಗೆದ್ದು ರೋಹಿತ್​ ಶರ್ಮಾ ಟೀಮ್​ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ತಾರಾ? ವಿಶ್ವಕಪ್​ ಆಡೋ ಕನಸು ನನಸು ಮಾಡಿಕೊಳ್ತಾರಾ? ಕಾದು ನೋಡೋಣ.

Related Posts

ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..!

ಐಪಿಎಲ್ 2026 ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದಲ್ಲಿ ಸೆಣಸಾಡಲಿವೆ. ಈ ಪಂದ್ಯ ಮಳೆಯಿಂದ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೋತ ತಂಡಕ್ಕೆ ಕ್ವಾಲಿಫೈಯರ್ 2 ಆಡಲು ಮತ್ತೊಂದು ಅವಕಾಶವಿದ್ದರೂ,…

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ: ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ!

ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ದೆಹಲಿ ತಂಡವನ್ನು ಮಣಿಸಿದ ಆರ್‌ಸಿಬಿ ಭರ್ಜರಿ ಜಯ ದಾಖಲಿಸಿದೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡದ ಅತಿದೊಡ್ಡ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!