Cricket Archives - Good News 24x7 https://www.goodnews24x7.com/tag/cricket/ Kannada Sat, 22 Aug 2026 12:34:02 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Cricket Archives - Good News 24x7 https://www.goodnews24x7.com/tag/cricket/ 32 32 ಬಿಸಿಸಿಐಗೆ ಸ್ಪಾನ್ಸರ್ ಶಿಪ್ ಬಿಸಿ: ದುಬಾರಿ ಬೆಲೆಯಿಂದ ಹಿಂದೆ ಸರಿದ ಕಂಪನಿಗಳು! https://www.goodnews24x7.com/bcci-sponsorship-bc-companies-back-out-due-to-high-price/ Sat, 22 Aug 2026 12:34:02 +0000 https://www.goodnews24x7.com/?p=9909 ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತ ಕ್ರಿಕೆಟ್ ತಂಡದ ತವರಿನ ಪಂದ್ಯಗಳಿಗೆ ಹೊಸ ಟೈಟಲ್ ಸ್ಪಾನ್ಸರ್ ಹುಡುಕಲು ತೀವ್ರ ಹರಸಾಹಸ ಪಡುತ್ತಿದೆ. ಆಗಸ್ಟ್ 13ರ ಅಂತಿಮ ಗಡುವು ಮುಗಿದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಬಿಡ್‌ಗಳು ಬಾರದಿರುವುದು ಜಗತ್ತಿನ ಅತಿ ಶ್ರೀಮಂತ ಕ್ರಿಕೆಟ್…

The post ಬಿಸಿಸಿಐಗೆ ಸ್ಪಾನ್ಸರ್ ಶಿಪ್ ಬಿಸಿ: ದುಬಾರಿ ಬೆಲೆಯಿಂದ ಹಿಂದೆ ಸರಿದ ಕಂಪನಿಗಳು! appeared first on Good News 24x7.

]]>

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತ ಕ್ರಿಕೆಟ್ ತಂಡದ ತವರಿನ ಪಂದ್ಯಗಳಿಗೆ ಹೊಸ ಟೈಟಲ್ ಸ್ಪಾನ್ಸರ್ ಹುಡುಕಲು ತೀವ್ರ ಹರಸಾಹಸ ಪಡುತ್ತಿದೆ. ಆಗಸ್ಟ್ 13ರ ಅಂತಿಮ ಗಡುವು ಮುಗಿದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಬಿಡ್‌ಗಳು ಬಾರದಿರುವುದು ಜಗತ್ತಿನ ಅತಿ ಶ್ರೀಮಂತ ಕ್ರಿಕೆಟ್ ಮಂಡಳಿಗೆ ದೊಡ್ಡ ಹಿನ್ನಡೆಯಾಗಿದೆ.

ಪ್ರಸ್ತುತ IDFC First Bank ಪ್ರತಿ ಪಂದ್ಯಕ್ಕೆ ₹4.2 ಕೋಟಿ ಪಾವತಿಸುತ್ತಿದ್ದು, ಬಿಸಿಸಿಐ ಹೊಸ ಟೆಂಡರ್‌ನಲ್ಲಿ ಮೂಲ ಬೆಲೆಯನ್ನು (Base Price) ₹4.75 ಕೋಟಿಗೆ ಹೆಚ್ಚಿಸಿರುವುದೇ ಕಂಪನಿಗಳು ಹಿಂದೆ ಸರಿಯಲು ಮುಖ್ಯ ಕಾರಣವಾಗಿದೆ. ಕೇವಲ ಎರಡು ವರ್ಷಗಳ ಅವಧಿಗೆ ಸುಮಾರು 35 ತವರೂರಿನ ಪಂದ್ಯಗಳಿಗೆ ಈ ಆಹ್ವಾನ ನೀಡಲಾಗಿತ್ತು.

ಪ್ರಸ್ತುತ ಬಿಸಿಸಿಐ Google Gemini, Spinny ಮತ್ತು SBI Life ನಂತಹ ಪ್ರಮುಖ ಬ್ರ್ಯಾಂಡ್‌ಗಳೊಂದಿಗೆ ಮಾತುಕತೆ ನಡೆಸುತ್ತಿದೆಯಾದರೂ, ಇನ್ನು ಯಾವುದೇ ಅಂತಿಮ ಒಪ್ಪಂದವಾಗಿಲ್ಲ. ಮತ್ತೊಂದೆಡೆ, ITG ಆಸ್ತಿಗಾಗಿ GroupM, ITW ನಂತಹ ಸಂಸ್ಥೆಗಳು ಆಸಕ್ತಿ ತೋರಿದ್ದು, Associate Partner ಹಕ್ಕುಗಳಿಗಾಗಿ ಆಗಸ್ಟ್ 25ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಟೈಟಲ್ ಸ್ಪಾನ್ಸರ್ ಅಂತಿಮಗೊಂಡ ನಂತರವೇ ಈ ಹಕ್ಕುಗಳನ್ನು ನಿರ್ಧರಿಸಲಾಗುತ್ತದೆ.

The post ಬಿಸಿಸಿಐಗೆ ಸ್ಪಾನ್ಸರ್ ಶಿಪ್ ಬಿಸಿ: ದುಬಾರಿ ಬೆಲೆಯಿಂದ ಹಿಂದೆ ಸರಿದ ಕಂಪನಿಗಳು! appeared first on Good News 24x7.

]]>
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ: ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ! https://www.goodnews24x7.com/virat-kohli-sets-world-record-in-ipl-the-only-cricketer-to-achieve-this-feat%e0%b2%90%e0%b2%aa%e0%b2%bf%e0%b2%8e%e0%b2%b2%e0%b3%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%bf/ Tue, 28 Apr 2026 13:02:02 +0000 https://www.goodnews24x7.com/?p=9472 ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ದೆಹಲಿ ತಂಡವನ್ನು ಮಣಿಸಿದ ಆರ್‌ಸಿಬಿ ಭರ್ಜರಿ ಜಯ ದಾಖಲಿಸಿದೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡದ ಅತಿದೊಡ್ಡ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ…

The post ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ: ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ! appeared first on Good News 24x7.

]]>

ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ದೆಹಲಿ ತಂಡವನ್ನು ಮಣಿಸಿದ ಆರ್‌ಸಿಬಿ ಭರ್ಜರಿ ಜಯ ದಾಖಲಿಸಿದೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡದ ಅತಿದೊಡ್ಡ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 9000 ರನ್‌ಗಳ ಗಡಿ ದಾಟಿದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ವಿಶೇಷವೆಂದರೆ, ತಮ್ಮ ತವರಿನ ಮೈದಾನದಲ್ಲೇ ಈ ಅಮೋಘ ಮೈಲಿಗಲ್ಲು ತಲುಪುವ ಮೂಲಕ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

9 ವಿಕೆಟ್‌ಗಳ ಭರ್ಜರಿ ಜಯ:
ಕೇವಲ 76 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಅಬ್ಬರಿಸಿದರು. ತಮ್ಮ 275ನೇ ಐಪಿಎಲ್ ಪಂದ್ಯದಲ್ಲಿ ಈ ದಾಖಲೆ ಬರೆದ ಕೊಹ್ಲಿ, ಮೈಲಿಗಲ್ಲು ತಲುಪಿದ ಬೆನ್ನಲ್ಲೇ ಸತತ ಸಿಕ್ಸರ್‌ಗಳನ್ನು ಸಿಡಿಸಿ ತಂಡಕ್ಕೆ 9 ವಿಕೆಟ್‌ಗಳ ಸುಲಭ ಜಯ ತಂದುಕೊಟ್ಟರು. ಈ ಮೂಲಕ ಐಪಿಎಲ್‌ನ ‘ರನ್ ಮಷೀನ್’ ಎಂಬ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡರು.

ದಾಖಲೆಗಳ ಸರದಾರ:
ಪ್ರಸ್ತುತ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾಗಿಂತ ಕೊಹ್ಲಿ ಸುಮಾರು 2000 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿರುವುದು ಅವರ ಸ್ಥಿರತೆಗೆ ಸಾಕ್ಷಿ.

ವಿರಾಟ್ ಕೊಹ್ಲಿ ಐಪಿಎಲ್ ಅಂಕಿಅಂಶ:
ಒಟ್ಟು ರನ್: 9000+

ಸರಾಸರಿ: 40ಕ್ಕೂ ಹೆಚ್ಚು

ಸ್ಟ್ರೈಕ್ ರೇಟ್: 130ಕ್ಕೂ ಅಧಿಕ

ಸಾಧನೆ: ಹಲವು ಶತಕ ಹಾಗೂ ಅರ್ಧಶತಕಗಳ ಅಧಿಪತಿ

ವಿಶ್ವದ ಅತ್ಯಂತ ಕಠಿಣ ಟಿ20 ಲೀಗ್‌ನಲ್ಲಿ ಸತತವಾಗಿ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ಕೊಹ್ಲಿ, ಕ್ರಿಕೆಟ್ ಜಗತ್ತಿನ ಅಪ್ರತಿಮ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

The post ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ: ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ! appeared first on Good News 24x7.

]]>
ಭಾರತ- ಇಂಗ್ಲೆಂಡ್ ಸೆಮೀಸ್ ಕಾಳಗ ಯಾವಾಗ ಆರಂಭ? https://www.goodnews24x7.com/when-will-the-india-england-semi-final-clash-start8642-2/ Wed, 04 Mar 2026 14:12:03 +0000 https://www.goodnews24x7.com/?p=8642 ಭಾರತ- ಇಂಗ್ಲೆಂಡ್ ಸೆಮೀಸ್ ಕಾಳಗ ಯಾವಾಗ ಆರಂಭ? 2026ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಫೆಬ್ರವರಿ 5ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಮುಖಾಮುಖಿಯಾಗಲಿವೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪಂದ್ಯದ ನೇರಪ್ರಸಾರ…

The post ಭಾರತ- ಇಂಗ್ಲೆಂಡ್ ಸೆಮೀಸ್ ಕಾಳಗ ಯಾವಾಗ ಆರಂಭ? appeared first on Good News 24x7.

]]>

ಭಾರತ- ಇಂಗ್ಲೆಂಡ್ ಸೆಮೀಸ್ ಕಾಳಗ ಯಾವಾಗ ಆರಂಭ?

2026ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಫೆಬ್ರವರಿ 5ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಮುಖಾಮುಖಿಯಾಗಲಿವೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪಂದ್ಯದ ನೇರಪ್ರಸಾರ ವೀಕ್ಷಿಸಬಹುದು. ಎರಡೂ ತಂಡಗಳ ಬಲಿಷ್ಠ ಸ್ಕ್ವಾಡ್‌ಗಳ ವಿವರ ಇಲ್ಲಿದೆ. ಈ ರೋಚಕ ಕದನಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

2026 ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಗಳು ಇಂದಿನಿಂದ ಆರಂಭವಾಗಲಿವೆ. ಇಂದು ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ. ನಾಳೆ ಆತಿಥೇಯ ಭಾರತ ತಂಡವನ್ನು ಇಂಗ್ಲೆಂಡ್‌ ಎದುರಿಸಲಿದೆ. ಒಂದೆಡೆ ಭಾರತ ತಂಡ ಗುಂಪು ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿತ್ತು. ಇತ್ತ ಇಂಗ್ಲೆಂಡ್‌ ಒಂದು ಪಂದ್ಯದಲ್ಲಿ ಸೋತಿತ್ತಾದರೂ ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟಿತ್ತು. ಸೂಪರ್ 8 ಸುತ್ತಿನಲ್ಲಿ ಭಾರತ 1 ಪಂದ್ಯವನ್ನು ಸೋತು, 2 ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಟಿಕೆಟ್ ಪಡೆದರೆ, ಇತ್ತ ಇಂಗ್ಲೆಂಡ್‌ ಆಡಿದ ಮೂರು ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಹೀಗಾಗಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಕಾಳಗವನ್ನು ನಿರೀಕ್ಷಿಸಲಾಗಿದೆ. ಹೀಗಾಗಿ ಈ ಹೈವೋಲ್ಟೇಜ್ ಕದನದ ಪೂರ್ಣ ವಿವರ ಇಲ್ಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಫೆಬ್ರವರಿ 5 ರಂದು ನಡೆಯಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್​ನ ವಿವಿಧ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಹಾಟ್ ಸ್ಟಾರ್​ನಲ್ಲೂ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

ಟಿ20 ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

ಉಭಯ ತಂಡಗಳು
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್.

ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮೀ ಓವರ್ಟನ್, ಆದಿಲ್ ರಶೀದ್, ಫಿಲಿಪ್ ಸಾಲ್ಟ್, ಜೋಶ್ ಟಂಗ್,

The post ಭಾರತ- ಇಂಗ್ಲೆಂಡ್ ಸೆಮೀಸ್ ಕಾಳಗ ಯಾವಾಗ ಆರಂಭ? appeared first on Good News 24x7.

]]>
ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಶುರು https://www.goodnews24x7.com/womens-premier-league-starts-tomorrow/ Thu, 08 Jan 2026 10:56:34 +0000 https://www.goodnews24x7.com/?p=8301 ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಶುರು ಮಹಿಳಾ ಪ್ರೀಮಿಯರ್ ಲೀಗ್ (WPL) ನಾಳೆಯಿಂದ ಡಿ.ವೈ.ಪಾಟೀಲ್ ಕ್ರೀಡಾಂಗಣ ನವಿ ಮುಂಬೈನಲ್ಲಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಇಂಡಿಯನ್ ಪ್ರೀಮಿಯರ್ ಲೀಗ್ 4ನೇ…

The post ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಶುರು appeared first on Good News 24x7.

]]>

ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಶುರು

ಮಹಿಳಾ ಪ್ರೀಮಿಯರ್ ಲೀಗ್ (WPL) ನಾಳೆಯಿಂದ ಡಿ.ವೈ.ಪಾಟೀಲ್ ಕ್ರೀಡಾಂಗಣ ನವಿ ಮುಂಬೈನಲ್ಲಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ 4ನೇ ಆವೃತ್ತಿಗೆ ನಾಳೆ ಚಾಲನೆ ದೊರೆಯಲಿದೆ. ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿಯಲಿದೆ.

The post ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್ ಶುರು appeared first on Good News 24x7.

]]>
ಆಸ್ಟ್ರೇಲಿಯಾಗೆ 264 ರನ್ ಗುರಿ ನೀಡಿದ ಟೀಮ್ ಇಂಡಿಯಾ, ಸರಣಿ ಗೆಲ್ಲುವ ತವಕದಲ್ಲಿ ಆಸ್ಟ್ರೇಲಿಯಾ https://www.goodnews24x7.com/australia-set-a-target-of-264-runs-for-team-india-australia-is-eager-to-win-the-series/ Thu, 23 Oct 2025 07:43:46 +0000 https://www.goodnews24x7.com/?p=7797 ಆಸ್ಟ್ರೇಲಿಯಾಗೆ 264 ರನ್ ಗುರಿ ನೀಡಿದ ಟೀಮ್ ಇಂಡಿಯಾ, ಸರಣಿ ಗೆಲ್ಲುವ ತವಕದಲ್ಲಿ ಆಸ್ಟ್ರೇಲಿಯಾ ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 264 ರನ್​ಗಳಿಸಿದೆ. ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್…

The post ಆಸ್ಟ್ರೇಲಿಯಾಗೆ 264 ರನ್ ಗುರಿ ನೀಡಿದ ಟೀಮ್ ಇಂಡಿಯಾ, ಸರಣಿ ಗೆಲ್ಲುವ ತವಕದಲ್ಲಿ ಆಸ್ಟ್ರೇಲಿಯಾ appeared first on Good News 24x7.

]]>

ಆಸ್ಟ್ರೇಲಿಯಾಗೆ 264 ರನ್ ಗುರಿ ನೀಡಿದ ಟೀಮ್ ಇಂಡಿಯಾ, ಸರಣಿ ಗೆಲ್ಲುವ ತವಕದಲ್ಲಿ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 264 ರನ್​ಗಳಿಸಿದೆ. ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕನಾಗಿ ಕಣಕ್ಕಿಳಿದ ಶುಭ್​​ಮನ್ ಗಿಲ್ ಕೇವಲ 4 ರನ್​ಗಳಿಸಿ ಔಟಾದರೆ, ಆ ಬಳಿಕ ಬಂದ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. 4ನೇ ವಿಕೆಟ್​ಗೆ ಶತಕದ ಜೊತೆಯಾವಾಟವಾಡುವ ಈ ಮೂಲಕ ಈ ಜೋಡಿ ಭಾರತ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಇದರ ನಡುವೆ ರೋಹಿತ್ ಶರ್ಮಾ 97 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 73 ರನ್ ಬಾರಿಸಿದರು. ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಹಿಟ್​ಮ್ಯಾನ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ (61) ಕೂಡ ಬೌಲ್ಡ್ ಆಗಿ ಹೊರ ನಡೆದರು.ಈ ವೇಳೆಗ ಆಗಮಿಸಿದ ಅಕ್ಷರ್ ಪಟೇಲ್ 41 ರನ್​ಗಳ ಕೊಡುಗೆ ನೀಡಿದರೆ, ಕೆಎಲ್ ರಾಹುಲ್ 11 ರನ್​ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಇನ್ನು ವಾಷಿಂಗ್ಟನ್ ಸುಂದರ್ 12 ರನ್​ಗಳಿಸಿದರೆ, ನಿತೀಶ್ ಕುಮಾರ್ ರೆಡ್ಡಿ 8 ರನ್ ಬಾರಿಸಿ ಪೆವಿಲಿಯನ್​ಗೆ ಹಿಂತಿರುಗಿದರು.

The post ಆಸ್ಟ್ರೇಲಿಯಾಗೆ 264 ರನ್ ಗುರಿ ನೀಡಿದ ಟೀಮ್ ಇಂಡಿಯಾ, ಸರಣಿ ಗೆಲ್ಲುವ ತವಕದಲ್ಲಿ ಆಸ್ಟ್ರೇಲಿಯಾ appeared first on Good News 24x7.

]]>
ವೆಸ್ಟ್​ ವಿಂಡೀಸ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿ ಕ್ಲೀನ್​ ಸ್ವೀಪ್.. ಮ್ಯಾಚ್​ ಗೆಲ್ಲಿಸಿ ಸಂಭ್ರಮಿಸಿದ ರಾಹುಲ್ https://www.goodnews24x7.com/west-indies-clean-sweeps-test-series-against-west-indies-rahul-celebrates-after-winning-the-match/ Tue, 14 Oct 2025 08:21:49 +0000 https://www.goodnews24x7.com/?p=7709 ವೆಸ್ಟ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್​ ಸ್ವೀಪ್ ಮಾಡಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಶುಬ್ಮನ್ ಗಿಲ್ ಪಡೆ ಟೆಸ್ಟ್​ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ. ವೆಸ್ಟ್​ ವಿಂಡೀಸ್​…

The post ವೆಸ್ಟ್​ ವಿಂಡೀಸ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿ ಕ್ಲೀನ್​ ಸ್ವೀಪ್.. ಮ್ಯಾಚ್​ ಗೆಲ್ಲಿಸಿ ಸಂಭ್ರಮಿಸಿದ ರಾಹುಲ್ appeared first on Good News 24x7.

]]>

ವೆಸ್ಟ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್​ ಸ್ವೀಪ್ ಮಾಡಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಶುಬ್ಮನ್ ಗಿಲ್ ಪಡೆ ಟೆಸ್ಟ್​ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ.
ವೆಸ್ಟ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್​ ಸ್ವೀಪ್ ಮಾಡಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಶುಬ್ಮನ್ ಗಿಲ್ ಪಡೆ ಟೆಸ್ಟ್​ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ.

ಮೊದಲ ದಿನ ಟಾಸ್​ ಗೆದ್ದು ಬ್ಯಾಟ್ ಮಾಡಿದ್ದ ಭಾರತ ತಂಡ, ಒಟ್ಟು 518 ರನ್​ಗಳಿಸಿ ಡಿಕ್ಲೇರ್​ ಮಾಡಿಕೊಂಡಿತ್ತು. ಪ್ರತಿಯಾಗಿ ಬ್ಯಾಟಿಂಗ್​​ಗೆ ಇಳಿದ್ದ ವಿಂಡೀಸ್​, ನಿನ್ನೆಯ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 140 ರನ್​ಗಳಿಸಿತ್ತು. ಅಂತೆಯೇ ಬ್ಯಾಟಿಂಗ್​ಗೆ ಇಳಿದ ವಿಂಡೀಸ್ 248 ರನ್​​ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿ, ಫಾಲೋ ಆನ್ ಸುಳಿಗೆ ಸಿಲುಕಿತ್ತು.

270 ರನ್​ಗಳ ಹಿನ್ನಡೆ ಅನುಭವಿಸಿದ ವಿಂಡೀಸ್, ಫಾಲೋ ಆನ್ ಪ್ರಕಾರ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಆರಂಭಿಸಿತು. ಎರಡನೇ ಅವಕಾಶದಲ್ಲಿ ಒಳ್ಳೆಯ ಪೈಪೋಟಿ ಕೊಟ್ಟ ವಿಂಡೀಸ್ ಪಡೆ, 390 ರನ್​ಗಳಿಸಿ ಆಲೌಟ್ ಆಯಿತು. ಆ ಮೂಲಕ ಭಾರತದ ಗೆಲುವಿಗೆ 121 ರನ್​ ಬೇಕಿತ್ತು.

ಈ ಗುರಿಯನ್ನು ನಿನ್ನೆ ಮಧ್ಯಾಹ್ನದಿಂದ ಬೆನ್ನು ಹತ್ತಿದ್ದ ಗಿಲ್ ಪಡೆ ಇಂದು ಬೆಳಗ್ಗೆ ಗೆದ್ದು ಬೀಗಿದೆ. ಜೈಸ್ವಾಲ್, ಸಾಯಿ ಸುದರ್ಶನ್, ಗಿಲ್ ಸೇರಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿದೆ. ತಾಳ್ಮೆಯ ಆಟವನ್ನಾಡಿದ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾದರು. 108 ಬಾಲ್​ಗಳನ್ನು ಎದುರಿಸಿ ಎರಡು ಸಿಕ್ಸರ್, ಆರು ಬೌಂಡರಿಯೊಂದಿಗೆ 58 ರನ್​ಗಳಿಸಿ ಅಜಯರಾಗಿ ಉಳಿದರು. ಇನ್ನು ಮೊದಲ ಇನ್ನಿಂಗ್ಸ್​ನಲ್ಲಿ 38 ರನ್​ಗಳ ಕಾಣಿಕೆ ನೀಡಿದ್ದರು. ಈ ಗೆಲುವಿನೊಂದಿಗೆ ಶುಬ್ಮನ್ ಗಿಲ್ ನಾಯಕತ್ವಕ್ಕೆ ಮತ್ತೊಂದು ಸರಣಿ ಒಲಿದಿದೆ.

The post ವೆಸ್ಟ್​ ವಿಂಡೀಸ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿ ಕ್ಲೀನ್​ ಸ್ವೀಪ್.. ಮ್ಯಾಚ್​ ಗೆಲ್ಲಿಸಿ ಸಂಭ್ರಮಿಸಿದ ರಾಹುಲ್ appeared first on Good News 24x7.

]]>
ಕಾಲ್ತುಳಿತದಲ್ಲಿ ಸಾ*ನ್ನಪ್ಪಿದವರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಿಸಿದ ಆರ್‌ಸಿಬಿ … https://www.goodnews24x7.com/rcb-announces-rs-25-lakh-compensation-to-families-of-those-killed-in-stampede/ Sat, 30 Aug 2025 08:35:37 +0000 https://www.goodnews24x7.com/?p=7017 ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ 17 ವರ್ಷಗಳಿಂದ ಪ್ರಶಸ್ತಿ ವಂಚಿತವಾಗಿದ್ದ RCB…

The post ಕಾಲ್ತುಳಿತದಲ್ಲಿ ಸಾ*ನ್ನಪ್ಪಿದವರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಿಸಿದ ಆರ್‌ಸಿಬಿ … appeared first on Good News 24x7.

]]>

ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ 17 ವರ್ಷಗಳಿಂದ ಪ್ರಶಸ್ತಿ ವಂಚಿತವಾಗಿದ್ದ RCB ತಂಡ, 2025ರ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿತ್ತು. ಜೂನ್ 3ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ ಗಳ ಅಂತರದಿಂದ ಮಣಿಸುವ ಮೂಲಕ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿತ್ತು.

ಹೀಗಾಗಿ, ವಿಶ್ವದಾದ್ಯಂತ RCB ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಮರುದಿನ (ಜೂನ್ 4ರಂದು) ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ನಿರೀಕ್ಷೆಗೂ ಮೀರಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡಿದ್ದರು. ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ತಕ್ಷಣವೇ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದ RCB, ಇದೀಗ ಮೃತರ ಕುಟುಂಬಗಳಿಗೆ ಅದೇ RCB CARES ಮೂಲಕ ತಲಾ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ RCB, “ಜೂನ್ 4, 2025- ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನಷ್ಟೇ ಅಲ್ಲ…ನಮ್ಮ ಕುಟುಂಬ ಸದಸ್ಯರನ್ನು. ಅವರು ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ. ಅವರ (ಮೃತ ಅಭಿಮಾನಿಗಳು) ಜಾಗವನ್ನು ಯಾವ ಸಹಾಯವೂ ತುಂಬಲಾರದು. ಆದರೆ ಮೊದಲನೇ ಮತ್ತು ಗೌರವದ ಸಂಕೇತವಾಗಿ, ಆರ್‌ಸಿಬಿ ಪ್ರತಿ ಕುಟುಂಬಕ್ಕೆ ತಲಾ 25 ಲಕ್ಷ ನೆರವನ್ನು ನೀಡಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ; ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿ ಭರವಸೆ” ಎಂದು ಹೇಳಿದೆ.

ಆರ್‌ಸಿಬಿ ಅಧಿಕೃತ ಪ್ರಕಟಣೆಯಲ್ಲಿ ಏನಿದೆ ?

ಜೂನ್ 4, 2025 – ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ.
ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನ್ನಷ್ಟೇ ಅಲ್ಲ… ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರು, ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ.
ಅವರ ಜಾಗವನ್ನು ಯಾವ ಸಹಾಯವೂ ತುಂಬಲಾರದು. ಆದರೆ ಮೊದಲನೇ ಮತ್ತು ಗೌರವದ ಸಂಕೇತವಾಗಿ, ಆರ್‌ಸಿಬಿ ಪ್ರತಿ ಕುಟುಂಬಕ್ಕೆ ತಲಾ ₹25 ಲಕ್ಷ ನೆರವನ್ನು ನೀಡಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ; ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆ.
ಇದು ಆರ್‌ಸಿಬಿ ಕೇರ್ಸ್‌ನ ಆರಂಭವೂ ಹೌದು. ಅವರ ನೆನಪನ್ನು ಗೌರವಿಸುವ ಮೂಲಕ ಶುರುವಾದ ಈ ಪ್ರಯತ್ನ, ಅಭಿಮಾನಿಗಳ ಭಾವನೆ, ನಂಬಿಕೆ ಮತ್ತು ಸುರಕ್ಷತೆ ಪ್ರತಿಬಿಂಬಿಸುವ ದೀರ್ಘಕಾಲದ ಬದ್ಧತೆ.

The post ಕಾಲ್ತುಳಿತದಲ್ಲಿ ಸಾ*ನ್ನಪ್ಪಿದವರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಿಸಿದ ಆರ್‌ಸಿಬಿ … appeared first on Good News 24x7.

]]>
ವಿರಾಟ್ ನಿವೃತ್ತಿಯ ಬಳಿಕ ಕೋಟಿ ಕೋಟಿ ಲಾಸ್…..ಬಿಸಿಸಿಐನ ಮುಂದಿನ ನಡೆ ಏನು..? https://www.goodnews24x7.com/crores-of-crores-of-losses-after-virats-retirement/ Fri, 29 Aug 2025 10:57:53 +0000 https://www.goodnews24x7.com/?p=6968 ಟೀಂ ಇಂಡಿಯಾದ ಈ ಸಮಸ್ಯೆಗೆ ಪರಿಹಾರ ವಿರಾಟ್ ಕೊಹ್ಲಿ ಒಬ್ಬರೇ.. ಅದು ಏನು ಗೊತ್ತಾ..? ವಿರಾಟ್​​ ಕೊಹ್ಲಿ ಒನ್​ ಡೇ ಫಾರ್ಮೆಟ್​​ಗೂ ಗುಡ್​ ಬೈ ಹೇಳ್ತಾರೆ ಅನ್ನೋ ಸುದ್ದಿಯ ನಡುವೆ ಹೊಸ ಸೂಪರ್​ ಸ್ಟಾರ್​ನ ಹುಟ್ಟು ಹಾಕೋ ಯತ್ನ ಶುರುವಾಗಿದೆ. ಬಿಸಿಸಿಐ…

The post ವಿರಾಟ್ ನಿವೃತ್ತಿಯ ಬಳಿಕ ಕೋಟಿ ಕೋಟಿ ಲಾಸ್…..ಬಿಸಿಸಿಐನ ಮುಂದಿನ ನಡೆ ಏನು..? appeared first on Good News 24x7.

]]>

ಟೀಂ ಇಂಡಿಯಾದ ಈ ಸಮಸ್ಯೆಗೆ ಪರಿಹಾರ ವಿರಾಟ್ ಕೊಹ್ಲಿ ಒಬ್ಬರೇ.. ಅದು ಏನು ಗೊತ್ತಾ..?
ವಿರಾಟ್​​ ಕೊಹ್ಲಿ ಒನ್​ ಡೇ ಫಾರ್ಮೆಟ್​​ಗೂ ಗುಡ್​ ಬೈ ಹೇಳ್ತಾರೆ ಅನ್ನೋ ಸುದ್ದಿಯ ನಡುವೆ ಹೊಸ ಸೂಪರ್​ ಸ್ಟಾರ್​ನ ಹುಟ್ಟು ಹಾಕೋ ಯತ್ನ ಶುರುವಾಗಿದೆ. ಬಿಸಿಸಿಐ ಬಾಸ್​​ಗಳು, ಕೆಲ ಬಿಗ್ಗೆಸ್ಟ್​​ ಬ್ರ್ಯಾಂಡ್​​ಗಳು ಇದೀಗ ಯುವರಾಜನ ಹಿಂದೆ ಬಿದ್ದಿದೆ. ಕಿಂಗ್​ ಕೊಹ್ಲಿ ಪಟ್ಟ ತ್ಯಜಿಸೋಕೆ ಕೌಂಟ್​​ಡೌನ್​ ಶುರುವಾಗಿರೋ ಸಮಯದಲ್ಲಿ ಪ್ರಿನ್ಸ್​​ ಶುಭ್​ಮನ್​ಗೆ ಪಟ್ಟಾಭಿಷೇಕ ನಡೀತಿದೆ.

ಕ್ರಿಕೆಟ್​​ ಲೋಕದ ಸುಲ್ತಾನ ವಿರಾಟ್​ ಕೊಹ್ಲಿ ನಿಧಾನವಾಗಿ ಕ್ರಿಕೆಟ್​ನಿಂದ ದೂರಾಗ್ತಿದ್ದಾರೆ. ಟೆಸ್ಟ್​​, ಟಿ20ಗೆ ಗುಡ್​ ಬೈ ಹೇಳಿರೋ ಕೊಹ್ಲಿ, ಇದೀಗ ಒನ್​ ಡೇ ಫಾರ್ಮೆಟ್​ಗೂ ನಿವೃತ್ತಿ ಘೋಷಿಸ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಕೊಹ್ಲಿಯ ವಿದಾಯದ ಸುದ್ದಿ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಬೇಸರ ತರಿಸಿದೆ. ನೆಚ್ಚಿನ ಸೂಪರ್​​ ಸ್ಟಾರ್​​ ಇನ್ಮೇಲೆ ಐಪಿಎಲ್​ಗೆ ಮಾತ್ರ ಸೀಮಿತವಾಗಿ ಬಿಡುತ್ತಾ? ಮುಂದಿನ ವಿಶ್ವಕಪ್​​ನಲ್ಲಿ ಕೊಹ್ಲಿ ಆಡಲ್ವಾ? ಎಂಬ ಬೇಸರದ ಪ್ರಶ್ನೆಗಳು ಫ್ಯಾನ್ಸ್​ ಮನದಲ್ಲಿವೆ.

ಬಿಸಿಸಿಐಗೆ ಕೊಹ್ಲಿ ನಿವೃತ್ತಿಯದ್ದೇ ದೊಡ್ಡ ಟೆನ್ಶನ್​
ಒಂದೆಡೆ ಬಿಸಿಸಿಐ ಬಾಸ್​ಗಳು ವಿರಾಟ್​ ಕೊಹ್ಲಿಯನ್ನ ಸೈಡ್​​ಲೈನ್​ ಮಾಡೋ ಸಿದ್ಧತೆ ಮಾಡ್ತಿದ್ದಾರೆ. ಇನ್ನೊಂದೆಡೆ ಇದೇ ಬಿಸಿಸಿಐ ಬಾಸ್​​ಗಳಿಗೆ ಕೊಹ್ಲಿ ಹೋದ್ರೆ ಮುಂದೆ ಏನಪ್ಪಾ​ ಗತಿ ಎಂಬ ಚಿಂತೆಯೂ ಕಾಡ್ತಿದೆ. ಬಿಸಿಸಿಐ ವಲಯದಲ್ಲಿ ಮಾತ್ರವಲ್ಲ. ಜಾಹೀರಾತು ಲೋಕಕ್ಕೂ ಕ್ರಿಕೆಟ್​ನಿಂದ ಕಿಂಗ್​ ದೂರ ಸರೀತಾರೆ ಎಂಬ ಸುದ್ದಿಯನ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಕಿಂಗ್​ ಕೊಹ್ಲಿ ಕ್ರಿಕೆಟ್​ ಲೋಕವನ್ನ ಮಾತ್ರ ಆಡಿರಲಿಲ್ಲ. ಜಾಹೀರಾತು ಲೋಕಕ್ಕೂ ವಿರಾಟ್​ ಸುಲ್ತಾನನಾಗಿದ್ರು.

ಪ್ರಿನ್ಸ್​​ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡ್​​
ವಿರಾಟ್​​ ಕೊಹ್ಲಿ ದೂರ ಸರೀತಿದಾರೆ ಎಂದ ಬೆನ್ನಲ್ಲೇ ಜಾಹೀರಾತು ಲೋಕ ಹಾಗೂ ಬಿಸಿಸಿಐ ನೆಕ್ಸ್ಟ್​ ಸೂಪರ್​ ಸ್ಟಾರ್​​ನ ಹುಟ್ಟುಹಾಕೋ ಪ್ರಯತ್ನ ಆರಂಭಿಸಿದೆ. ಕೊಹ್ಲಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಯುವರಾಜ ಶುಭ್​ಮನ್​ ಗಿಲ್​ಗೆ ಪಟ್ಟಾಭಿಷೇಕ ಮಾಡೋ ಯತ್ನಗಳು ನಡೀತಿವೆ. ಟೆಸ್ಟ್​ ನಾಯಕತ್ವ ನೀಡಿರೋ ಬಿಸಿಸಿಐ ಬಾಸ್​ಗಳು, ಏಕದಿನ, ಟಿ20ಯ ಕ್ಯಾಪ್ಟನ್ಸಿಯನ್ನೂ ನೀಡಿ ಗಿಲ್​ನ ಪವರ್​ಫುಲ್​ ಮಾಡೋ ಯತ್ನಕ್ಕೆ ಕೈ ಹಾಕಿದ್ದಾರೆ. ಅತ್ತ ಜಾಹೀರಾತು ಲೋಕ ಕೂಡ ಅಷ್ಟೇ ಗಿಲ್​ ಹಿಂದೆ ಬಿದ್ದಿದೆ.

ಬೆಂಝ್​​​ ಶೂಟ್​ನಲ್ಲಿ ಮಿರಮಿರ ಮಿಂಚಿದ ಗಿಲ್​
ಇಂಗ್ಲೆಂಡ್​ ಪ್ರವಾಸ ಮುಗಿಸಿ ಭಾರತಕ್ಕೆ ವಾಪಾಸ್ಸಾಗಿರೋ ಗಿಲ್, 2 ದಿನದ ಹಿಂದೆ ದೆಹಲಿಯಲ್ಲಿ ಮರ್ಸಿಡೀಸ್​​ ಬೆಂಝ್​​​​ನ ಇವೆಂಟ್​ನಲ್ಲಿ ಭಾಗಿಯಾಗಿದ್ರು. ಬೆಂಝ್​​​ ಪ್ರಮೋಶನ್ ಇವೆಂಟ್​​ನಲ್ಲಿ​ ಅಕ್ಷರಶಃ ಮಿರಮಿರ ಮಿಂಚಿದ್ರು.

ಮೊನ್ನೆಯ ಇವೆಂಟ್​ ನೋಡಿದವರಿಗೆಲ್ಲಾ ನೆನಪಾಗಿದ್ದು ಕೊಹ್ಲಿ. ಈ ಹಿಂದೆ ವಿರಾಟ್​ ಕೊಹ್ಲಿ ಬೆಂಜ್​​ನ ಅಂಬಾಸಿಡರ್ ಆಗಿದ್ರು. ಕೊಹ್ಲಿ ಕ್ರಿಕೆಟ್​​ನಿಂದ ದೂರಾಗ್ತಿದ್ದಾರೆ ಎಂದ ಬೆನ್ನಲ್ಲೇ ಬೆಂಜ್​ ಗಿಲ್​ ಹಿಂದೆ ಬಿದ್ದಿದೆ.

ಕೊಹ್ಲಿ ಬಳಿಕ ಗಿಲ್​ಗೆ ಗಾಳ ಹಾಕಿದ MRF
MRF ಸ್ಟಿಕರ್​ ಅಂಟಿಸಿದ ಬ್ಯಾಟ್​ ಹಿಡಿದವರೆಲ್ಲಾ ಕ್ರಿಕೆಟ್​ ಲೋಕವನ್ನ ಆಳಿದವರೆ ಸಚಿನ್​ ತೆಂಡುಲ್ಕರ್​, ಎಬಿ ಡಿವಿಲಿಯರ್ಸ್​​, ಬ್ರಯನ್​ ಲಾರಾ, ಸ್ಟೀವ್​ ವಾ. ಈಗ ವಿರಾಟ್​ ಕೊಹ್ಲಿ ಎಲ್ರೂ ದಿಗ್ಗಜರೇ. ಇದೀಗ ಕೊಹ್ಲಿ ಬಳಿಕ ಶುಭ್​ಮನ್​ ಗಿಲ್​ಗೆ ಎಮ್​ಆರ್​​ಎಫ್​ ಗಾಳ ಹಾಕಿದೆ.

ಒಂದರ್ಥದಲ್ಲಿ ಕೊಹ್ಲಿ ಬಳಿಕ ಗಿಲ್​ನ ನೆಕ್ಸ್ಟ್​ ಸೂಪರ್​ ಸ್ಟಾರ್​ ಮಾಡೋ ಯತ್ನಕ್ಕೆ ಮೊದಲು ಕೈ ಹಾಕಿದ್ದೇ MRF. ಆಗಿನ್ನೂ ಬಿಸಿಸಿಐ ವಲಯದಲ್ಲಿ ಗಿಲ್​​ಗೆ ಟೆಸ್ಟ್​ ನಾಯಕತ್ವ ಕಟ್ಟೋ ಚರ್ಚೆ ನಡೀತಿತ್ತು. ಆಗಲೇ ಗಿಲ್​ಗೆ ಗಾಳ ಹಾಕಿ ಎಮ್​​ಆರ್​ಎಫ್​ ಅಗ್ರಿಮೆಂಟ್​ ಮಾಡಿಕೊಳ್ತು. ಅದೇನು ಅದೃಷ್ಟವೋ ಏನೋ ಗೊತ್ತಿಲ್ಲ. MRF ಬ್ಯಾಟ್​​ ಕೈ ಬಂದ ಮೊದಲ ಸರಣಿಯಲ್ಲಿ ಗಿಲ್​ ಮೋಡಿ ಮಾಡಿದ್ರು.

ಆನ್​​ ಫೀಲ್ಡ್​ನಲ್ಲಿ ಕೊಹ್ಲಿ ಅಬ್ಬರಿಸ್ತಿದ್ದ ಕೊಹ್ಲಿ ಫ್ಯಾನ್ಸ್​ಗೆ ಜಬರ್ದಸ್ತ್​​​ ಎಂಟರ್​​ಟೈನ್​ಮೆಂಟ್​ ನೀಡುತ್ತಿದ್ದರು. ತಮ್ಮ ಅಮೋಘ ಆಟದಿಂದ ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್​ ಅನಿಸಿದ್ರು. ಬಿಸಿಸಿಐ ಪಾಲಿಗೆ ಅಷ್ಟೇ ಆದಾಯದ ಮೂಲವಾಗಿದ್ರು. ಜಾಹೀರಾತುದಾರರಿಗಂತೂ ನೆಚ್ಚಿನ ಡಾರ್ಲಿಂಗ್​ ಆಗಿದ್ರು. ಇದೀಗ ಕೊಹ್ಲಿ ಕ್ರಿಕೆಟ್​ನಿಂದ ದೂರಾಗ್ತಿರೋದು ಬಿಸಿಸಿಐ ಗಳಿಕೆಗೆ, ಕೆಲ ಬ್ರ್ಯಾಂಡ್​​ಗಳ ಆದಾಯಕ್ಕೆ ಹೊಡೆತ ಕೊಟ್ಟಿದೆ. ಹೀಗಾಗಿ ಇವರೆಲ್ಲರ ಕಣ್ಣು ಗಿಲ್​ ಮೇಲೆ ಬಿದ್ದಿದೆ. ಈ ಹಿಂದೆ ಸಚಿನ್​ ಸ್ಥಾನವನ್ನ ಕೊಹ್ಲಿ ತುಂಬಿದಂತೆ, ಕೊಹ್ಲಿ ಸ್ಥಾನವನ್ನ ಗಿಲ್​ ತುಂಬ್ತಾರಾ? ಕಾದು ನೋಡೋಣ.

The post ವಿರಾಟ್ ನಿವೃತ್ತಿಯ ಬಳಿಕ ಕೋಟಿ ಕೋಟಿ ಲಾಸ್…..ಬಿಸಿಸಿಐನ ಮುಂದಿನ ನಡೆ ಏನು..? appeared first on Good News 24x7.

]]>
4 ವರ್ಷದ ಬಳಿಕ ಕಮ್​ಬ್ಯಾಕ್ ಮಾಡ್ತಾರಾ ABD? https://www.goodnews24x7.com/will-abd-make-a-comeback-after-4-years/ Wed, 27 Aug 2025 10:40:37 +0000 https://www.goodnews24x7.com/?p=6805   ಹೋಗುತ್ವೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಡಿವಿಲಿಯರ್ಸ್​ ಡೆಡ್ಲಿ ಬ್ಯಾಟಿಂಗ್​​​ನಾ, ಕ್ರಿಕೆಟ್ ಫ್ಯಾನ್ಸ್ ಮರೆಯೋಕೆ ಸಾಧ್ಯನೆ ಇಲ್ಲ. ಆರ್​ಸಿಬಿಯ ರಿಯಲ್ ಟ್ರಬಲ್ ಶೂಟರ್ ಆಗಿದ್ದ ಎಬಿ ಡಿವಿಲಿಯರ್ಸ್​, ಸಿಂಗಲ್ ಶೇರ್​ನಂತೆ ಘರ್ಜಿಸುತ್ತಾ ಮ್ಯಾಚ್ ಗೆಲ್ಲಿಸುತ್ತಿದ್ದ ವೀರ. ಈ ಡೆಡ್ಲಿ ಬ್ಯಾಟರ್ ಕ್ರಿಕೆಟ್…

The post 4 ವರ್ಷದ ಬಳಿಕ ಕಮ್​ಬ್ಯಾಕ್ ಮಾಡ್ತಾರಾ ABD? appeared first on Good News 24x7.

]]>

 

ಹೋಗುತ್ವೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಡಿವಿಲಿಯರ್ಸ್​ ಡೆಡ್ಲಿ ಬ್ಯಾಟಿಂಗ್​​​ನಾ, ಕ್ರಿಕೆಟ್ ಫ್ಯಾನ್ಸ್ ಮರೆಯೋಕೆ ಸಾಧ್ಯನೆ ಇಲ್ಲ.

ಆರ್​ಸಿಬಿಯ ರಿಯಲ್ ಟ್ರಬಲ್ ಶೂಟರ್ ಆಗಿದ್ದ ಎಬಿ ಡಿವಿಲಿಯರ್ಸ್​, ಸಿಂಗಲ್ ಶೇರ್​ನಂತೆ ಘರ್ಜಿಸುತ್ತಾ ಮ್ಯಾಚ್ ಗೆಲ್ಲಿಸುತ್ತಿದ್ದ ವೀರ. ಈ ಡೆಡ್ಲಿ ಬ್ಯಾಟರ್ ಕ್ರಿಕೆಟ್ ಮೈದಾನದಿಂದ ದೂರ ಸರಿದು ವರ್ಷಗಳೇ ಉರುಳಿವೆ. ಆದ್ರೀಗ ಇದೇ ಎಬಿ ಡಿವಿಲಿಯರ್ಸ್​, ಅಭಿಮಾನಿಗಳಲ್ಲಿ ಹೊಸ ಭರವಸೆ ಹುಟ್ಟಿಹಾಕಿದ್ದಾರೆ. ಒಂದೇ ಒಂದು ಮಾತಿನಿಂದ ಆರ್​ಸಿಬಿಗೆ ಮರಳುವ ಕನಸು ಬಿಚ್ಚಿಟ್ಟಿದ್ದಾರೆ.

ಭವಿಷ್ಯದಲ್ಲಿ ನಾನು ಬೇರೆ ಯಾವುದಾದರೂ ಪಾತ್ರದಲ್ಲಿ ಐಪಿಎಲ್‌ಗೆ ಸೇರಬಹುದು. ಆದರೆ ಒಬ್ಬ ವೃತ್ತಿಪರ ಆಟಗಾರನಾಗಿ ಇಡೀ ಸೀಸನ್ ಆಡುವುದು ಸ್ವಲ್ಪ ಕಷ್ಟ. ಆ ದಿನಗಳು ಮುಗಿದು ಹೋಗಿವೆ ಎಂದು ಭಾವಿಸುತ್ತೇನೆ. ನನ್ನ ಹೃದಯ ಆರ್‌ಸಿಬಿ ಜೊತೆಗಿದೆ. ಯಾವಾಗಲೂ ಇರುತ್ತದೆ. ಆದ್ದರಿಂದ ಫ್ರಾಂಚೈಸಿ ನನಗೆ ಒಂದು ಪಾತ್ರ ಇದೆ ಎಂದು ಭಾವಿಸಿದರೆ, ಇದಕ್ಕೆ ಪೂರಕವಾಗಿ ಸಮಯ ಕೂಡಿ ಬಂದರೆ ನಾನು ಖಂಡಿತವಾಗಿಯೂ ಆರ್‌ಸಿಬಿಯಲ್ಲಿ ಇರುತ್ತೇನೆ.

ಎಬಿ ಡಿವಿಲಿಯರ್ಸ್, ಮಾಜಿ ಕ್ರಿಕೆಟರ್​

ಐಪಿಎಲ್​ ಆರಂಭದಲ್ಲಿ ಐಪಿಎಲ್​​ಗೆ ಎಂಟ್ರಿ ನೀಡಿದ್ದ ಡಿವಿಲಿಯರ್ಸ್​, ಡೆಲ್ಲಿ ಡೇರ್ ಡೆವಿಲ್ಸ್​ ತಂಡದ ಪರ ಆಡಿದ್ದರು. ಆದ್ರೆ, ಈ ಬಳಿಕ ಆರ್​ಸಿಬಿಗೆ ಎಂಟ್ರಿ ನೀಡಿದ ಎಬಿಡಿಗೆ ಬೆಂಗಳೂರೇ 2ನೇ ತವರಾಗಿತ್ತು. 2011ರಲ್ಲಿ ಆರ್​ಸಿಬಿ ಪಾಲಿನ ಆಪತ್ಬಾಂಧವನಾಗಿ ಬಂದ ಎಬಿ ಡಿವಿಲಿಯರ್ಸ್​, ಬರೋಬ್ಬರಿ 11 ವರ್ಷಗಳ ಕಾಲ ರೆಡ್ ಆರ್ಮಿಯ ರಿಯಲ್ ಮ್ಯಾಚ್ ವಿನ್ನರ್ & ಗೇಮ್ ಚೇಂಜರ್ ಆಗಿದ್ದರು. ಆದ್ರೆ, 2021ರಲ್ಲಿ ಎಲ್ಲಾ ಮಾದರಿಯಿಂದ ದೂರ ಸರಿದಿದ್ದ ಎಬಿಡಿ, ಈಗ ಮತ್ತೆ ಆರ್​ಸಿಬಿಗೆ ಕಮ್​ಬ್ಯಾಕ್ ಮಾಡುವ ಆಸೆ ಬಿಚ್ಚಿಟ್ಟಿದ್ದಾರೆ. ಆದ್ರೆ, ಆಟಗಾರನಾಗಿ ಅಲ್ಲ.

11 ವರ್ಷ ಆರ್​ಸಿಬಿ ಪರ ಆಡಿರುವ ಎಬಿ ಡಿವಿಲಿಯರ್ಸ್​, ಮತ್ತೆ ಆರ್​ಸಿಬಿ ಗ್ಯಾಂಗ್ ಸೇರುವ ಇಚ್ಚೆ ಹೊಂದಿದ್ದಾರೆ. ಆದ್ರೆ, ಬ್ಯಾಟ್ಸ್​ಮನ್​ ಆಗಿ ಅಲ್ಲ. ಹೊಸ ರೋಲ್​ನಲ್ಲಿ ಅನ್ನೋದು ಸ್ವತಃ ಡಿವಿಲಿಯರ್ಸ್ ಹೇಳಿಕೊಂಡಿದ್ದಾರೆ. ಆರ್​ಸಿಬಿ ಯಶಸ್ಸಿನ ಭಾಗವಾಗುವ ಹೆಬ್ಬಯಕೆ ಹೊಂದಿರುವ ಡಿವಿಲಿಯರ್ಸ್​, ಬ್ಯಾಕ್ ಎಂಡ್​​ನಲ್ಲಿ ಕೆಲಸ ಮಾಡುವ ಹಿಂಟ್​ ಸಹ ನೀಡಿದ್ದಾರೆ. ಹೀಗಾಗಿ ಯಾವ ರೋಲ್​​ನಲ್ಲಿ ಮಿಸ್ಟರ್ 360 ಕಾಣಿಸಿಕೊಳ್ತಾರೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಆರ್​ಸಿಬಿ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಎಬಿ ಡಿವಿಲಿಯರ್ಸ್​, ರೆಡ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಕನಸು ಹೊಂದಿದ್ದಾರೆ ನಿಜ. ಆದ್ರೆ, ಆ ಕನಸು ಸಾಕಾರಗೊಳ್ಳಬೇಕಾದ್ರೆ, ಅದಕ್ಕೆ ಸಮಯ, ಸಂದರ್ಭ ಕೂಡಿ ಬರಬೇಕಿದೆ. ಇದಕ್ಕೆ ಮತ್ತಷ್ಟು ದಿನಗಳು ಕಾಯಬೇಕಿದೆ. ಆದ್ರೆ, ಎಬಿ ಡಿವಿಲಿಯರ್ಸ್ ಭವಿಷ್ಯದಲ್ಲಿ​ ಆರ್​ಸಿಬಿ ಸೇರೋದಂತೂ ಸತ್ಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ

The post 4 ವರ್ಷದ ಬಳಿಕ ಕಮ್​ಬ್ಯಾಕ್ ಮಾಡ್ತಾರಾ ABD? appeared first on Good News 24x7.

]]>
IPLಗೆ ಗುಡ್​ಬೈ ಹೇಳಿದ ಆಫ್​ ಸ್ಪಿನ್ನರ್ ಆರ್​.ಅಶ್ವಿನ್ https://www.goodnews24x7.com/off-spinner-r-ashwin-bids-farewell-to-ipl/ Wed, 27 Aug 2025 07:29:01 +0000 https://www.goodnews24x7.com/?p=6794 ಟೀಮ್ ಇಂಡಿಯಾದ ಮಾಜಿ ಆಫ್​ ಸ್ಪಿನ್ನರ್ ಹಾಗೂ ಆಲ್​ರೌಂಡರ್ ರವಿಚಂದ್ರನ್ ಅಶ್ವಿನ್ ಅವರು 2026ರ ಐಪಿಎಲ್​ಗೂ ಮೊದಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆರ್.ಅಶ್ವಿನ್ ಅವರು ಇತ್ತೀಚೆಗಷ್ಟೇ ಭಾರತದ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದರು. ಇದರ ಬೆನ್ನಲ್ಲೇ ಈಗ ಐಪಿಎಲ್​ಗೂ ನಿವೃತ್ತಿ ಘೋಷಿಸಿದ್ದಾರೆ.…

The post IPLಗೆ ಗುಡ್​ಬೈ ಹೇಳಿದ ಆಫ್​ ಸ್ಪಿನ್ನರ್ ಆರ್​.ಅಶ್ವಿನ್ appeared first on Good News 24x7.

]]>

ಟೀಮ್ ಇಂಡಿಯಾದ ಮಾಜಿ ಆಫ್​ ಸ್ಪಿನ್ನರ್ ಹಾಗೂ ಆಲ್​ರೌಂಡರ್ ರವಿಚಂದ್ರನ್ ಅಶ್ವಿನ್ ಅವರು 2026ರ ಐಪಿಎಲ್​ಗೂ ಮೊದಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆರ್.ಅಶ್ವಿನ್ ಅವರು ಇತ್ತೀಚೆಗಷ್ಟೇ ಭಾರತದ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದರು. ಇದರ ಬೆನ್ನಲ್ಲೇ ಈಗ ಐಪಿಎಲ್​ಗೂ ನಿವೃತ್ತಿ ಘೋಷಿಸಿದ್ದಾರೆ.

ಆರ್.ಅಶ್ವಿನ್ ಅವರು ಲಂಡನ್​ನ ನ್ಯೂಲ್ಯಾಂಡ್ಸ್​ನಲ್ಲಿ ನಡೆದ 2009ರ ಐಪಿಎಲ್​ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪರವಾಗಿ ಡೆಬ್ಯು ಮಾಡಿದ್ದರು. ಆದರೆ ಈ ಪಂದ್ಯದಲ್ಲಿ ಎದುರಾಳಿ ಮುಂಬೈ ಇಂಡಿಯನ್ಸ್​ ಗೆಲುವು ಸಾಧಿಸಿತ್ತು. ಟಿ20 ಪಂದ್ಯಗಳಲ್ಲಿ ಅತ್ಯುತ್ತಮ ಸ್ಪಿನ್ನರ್ ಎಂದು ಖ್ಯಾತಿ ಪಡೆದಿದ್ದರು. ಇವರು ಆಡಿದ ಐಪಿಎಲ್​ ಟೂರ್ನಿಗಳಲ್ಲಿ ಇದುವರೆಗೆ 187 ವಿಕೆಟ್​ಗಳನ್ನು ಉರುಳಿಸಿದ್ದಾರೆ. 833 ರನ್​ ಗಳಿಸಿದ್ದು ಇದರಲ್ಲಿ ಒಂದು ಅರ್ಧಶತಕ ಸೇರಿದೆ. ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದವರ ಪೈಕಿ ಆರ್ ಅಶ್ವಿನ್ ಅವರು ಐದನೇ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.

 

ಈವರೆಗೆ ಆರ್ ಅಶ್ವಿನ್ ಅವರು 16 ಸೀಸನ್​ಗಳಲ್ಲಿ 5 ತಂಡಗಳ ಪರ ಆಡಿದ್ದರು. 2025ರ ಮೆಗಾ ಆಕ್ಷನ್​ನಲ್ಲಿ ಅಶ್ವಿನ್ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಭಾಗವಾಗಿದ್ದರು. ಆದರೆ ಕಳೆದ ಋತುವಿನಲ್ಲಿ ಪ್ರದರ್ಶನ ಕಳಪೆಯಾಗಿತ್ತು. ಸಿಎಸ್​ಕೆ ಪರವಾಗಿ ಒಟ್ಟು 7 ಸೀಸನ್​ಗಳನ್ನು ಆಡಿದ್ದ ಅಶ್ವಿನ್ ಉಳಿದವುಗಳನ್ನು ಬೇರೆ ತಂಡಗಳ ಪರವಾಗಿ ಬೌಲಿಂಗ್ ಮಾಡಿದ್ದರು.

ಆರ್ ಅಶ್ವಿನ್ ಆಡಿರುವ ಐಪಿಎಲ್ ತಂಡಗಳು ಎಂದರೆ, ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ವಾರಿಯರ್ಸ್, ಕಿಂಗ್ಸ್​ ಇಲೆವೆನ್ ಪಂಜಾಬ್, ಡೆಲ್ಲಿಕ್ಯಾಪಿಟಲ್ಸ್​ ಹಾಗೂ ರಾಜಸ್ಥಾನ್ ರಾಯಲ್ಸ್​ ತಂಡದ ಪರ ಆಡಿದ್ದರು. ಇವಷ್ಟೇ ಅಲ್ಲದೇ ತಮಿಳುನಾಡು ತಂಡ, ದಿಂಡಿಗಲ್ ಡ್ರ್ಯಾಗನ್ಸ್, ವೋರ್ಸೆಸ್ಟರ್‌ಶೈರ್ (Worcestershire), ನಾಟಿಂಗ್ಹ್ಯಾಮ್ಶೈರ್ (Nottinghamshire) ಹಾಗೂ ಸರ್ರೆ (Surrey) ತಂಡಗಳಲ್ಲಿಯು ಆಡಿದ್ದಾರೆ.

The post IPLಗೆ ಗುಡ್​ಬೈ ಹೇಳಿದ ಆಫ್​ ಸ್ಪಿನ್ನರ್ ಆರ್​.ಅಶ್ವಿನ್ appeared first on Good News 24x7.

]]>