village Archives - Good News 24x7 https://www.goodnews24x7.com/tag/village/ Kannada Mon, 06 Jul 2026 08:46:20 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg village Archives - Good News 24x7 https://www.goodnews24x7.com/tag/village/ 32 32 ಸೊಳ್ಳೆ ಹಿಡಿದು ಕೊಟ್ರೆ ಸಿಗುತ್ತೆ 400 ರೂ ಬಹುಮಾನ! https://www.goodnews24x7.com/catching-a-mosquito-and-getting-a-reward-of-rs-400/ Mon, 06 Jul 2026 08:42:57 +0000 https://www.goodnews24x7.com/?p=9767 ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಹಿವರೆ ಬಜಾರ್ ಗ್ರಾಮ ವಿಶಿಷ್ಟವಾಗಿದೆ. ಇಲ್ಲಿ ಒಂದೇ ಒಂದು ಸೊಳ್ಳೆಯೂ ಇಲ್ಲ, ಸೊಳ್ಳೆ ಹಿಡಿದು ಕೊಟ್ಟರೆ 400 ರೂ. ಬಹುಮಾನ. ಹಿಂದೆ ಬಡತನದಿಂದ ಬಳಲುತ್ತಿದ್ದ ಈ ಗ್ರಾಮ, ಸಮುದಾಯದ ಪ್ರಯತ್ನದಿಂದ ನೀರು ನಿರ್ವಹಣೆ ಹಾಗೂ ಸ್ವಚ್ಛತೆಯಲ್ಲಿ ಮಾದರಿಯಾಗಿದೆ.…

The post ಸೊಳ್ಳೆ ಹಿಡಿದು ಕೊಟ್ರೆ ಸಿಗುತ್ತೆ 400 ರೂ ಬಹುಮಾನ! appeared first on Good News 24x7.

]]>

ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಹಿವರೆ ಬಜಾರ್ ಗ್ರಾಮ ವಿಶಿಷ್ಟವಾಗಿದೆ. ಇಲ್ಲಿ ಒಂದೇ ಒಂದು ಸೊಳ್ಳೆಯೂ ಇಲ್ಲ, ಸೊಳ್ಳೆ ಹಿಡಿದು ಕೊಟ್ಟರೆ 400 ರೂ. ಬಹುಮಾನ. ಹಿಂದೆ ಬಡತನದಿಂದ ಬಳಲುತ್ತಿದ್ದ ಈ ಗ್ರಾಮ, ಸಮುದಾಯದ ಪ್ರಯತ್ನದಿಂದ ನೀರು ನಿರ್ವಹಣೆ ಹಾಗೂ ಸ್ವಚ್ಛತೆಯಲ್ಲಿ ಮಾದರಿಯಾಗಿದೆ. ಇಂದು 80ಕ್ಕೂ ಹೆಚ್ಚು ಕೋಟ್ಯಧಿಪತಿಗಳಿರುವ ಈ ಹಳ್ಳಿಯ ಕಥೆ ದೇಶಕ್ಕೆ ಸ್ಪೂರ್ತಿದಾಯಕ.

ಪುಣೆ, ಜುಲೈ 06: ಭಾರತದಲ್ಲಿ ಪ್ರತಿ ವರ್ಷ ಸೊಳ್ಳೆಕಡಿತ ಮತ್ತು ಅದರಿಂದ ಬರುವ ರೋಗಗಳಿಂದ ಸಾವಿರಾರು ಜನರು ಪರದಾಡುತ್ತಾರೆ. ಆದರೆ, ನಮ್ಮ ದೇಶದಲ್ಲೇ ಒಂದೇ ಒಂದು ಸೊಳ್ಳೆಯೂ ಇಲ್ಲದ ವಿಚಿತ್ರ ಹಾಗೂ ಅದ್ಭುತ ಹಳ್ಳಿಯೊಂದಿದೆ. ಅಷ್ಟೇ ಅಲ್ಲ, ಈ ಗ್ರಾಮದಲ್ಲಿ ನೀವು ಎಲ್ಲಾದರೂ ಒಂದು ಸೊಳ್ಳೆಯನ್ನು ಹುಡುಕಿ ಹಿಡಿದು ಕೊಟ್ಟರೆ ನಿಮಗೆ 400 ರೂಪಾಯಿ ಬಹುಮಾನ ಕೂಡ ಕೊಡ್ತಾರೆ. ಹೌದು, ಇದು ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ‘ಹಿವರೆ ಬಜಾರ್’ ಎಂಬ ಹಳ್ಳಿಯ ಆಸಕ್ತಿದಾಯಕ ಕಥೆ.

ಶೇ.90 ಬಡವರಿದ್ದ ಹಳ್ಳಿಯಲ್ಲಿ ಈಗ 80 ಜನ ಕೋಟ್ಯಧಿಪತಿಗಳು ಇಂದು ಹಿವರೆ ಬಜಾರ್ ಗ್ರಾಮದಲ್ಲಿ ಒಟ್ಟು 305 ಕುಟುಂಬಗಳಿದ್ದು, ಇವರಲ್ಲಿ 80 ಕ್ಕೂ ಹೆಚ್ಚು ಜನ ಕೋಟ್ಯಧಿಪತಿಗಳಿದ್ದಾರೆ . ಆದರೆ, 1990 ರ ದಶಕದ ಮೊದಲು ಈ ಗ್ರಾಮದ ಪರಿಸ್ಥಿತಿ ಹೀಗಿರಲಿಲ್ಲ. ತೀವ್ರ ಬರಗಾಲದಿಂದ ಕಂಗೆಟ್ಟಿದ್ದ ಈ ಊರಿನ ಶೇ. 90 ರಷ್ಟು ಜನರು ಅತ್ಯಂತ ಬಡವರಾಗಿದ್ದರು. ಕುಡಿಯಲು ನೀರಿಲ್ಲದೆ ಗ್ರಾಮಸ್ಥರು ಊರು ಬಿಟ್ಟು ವಲಸೆ ಹೋಗುತ್ತಿದ್ದರು

1990 ರಲ್ಲಿ ಗ್ರಾಮಸ್ಥರೆಲ್ಲಾ ಒಟ್ಟಾಗಿ ‘ಜಂಟಿ ಅರಣ್ಯ ನಿರ್ವಹಣಾ ಸಮಿತಿ’ಯನ್ನು ರಚಿಸಿಕೊಂಡರು. ಊರಿನಲ್ಲೇ ಬಾವಿಗಳನ್ನು ಅಗೆಯಲು ಮತ್ತು ಲಕ್ಷಾಂತರ ಮರಗಳನ್ನು ನೆಡಲು ನಿರ್ಧರಿಸಿದರು.ಶ್ರಮದಾನ ಮತ್ತು ಸರ್ಕಾರದ ನೆರವು: ಗ್ರಾಮಸ್ಥರು ತಾವೇ ಖುದ್ದಾಗಿ ಉಚಿತವಾಗಿ ಶ್ರಮದಾನ ಮಾಡಿದರು. ಇದಕ್ಕೆ ಮಹಾರಾಷ್ಟ್ರ ಸರ್ಕಾರದ ಉದ್ಯೋಗ ಖಾತರಿ ಯೋಜನೆಯ ಬೆಂಬಲವೂ ಸಿಕ್ಕಿತು.ಈ ನಿರಂತರ ಪ್ರಯತ್ನದ ಫಲವಾಗಿ, ಒಂದು ಕಾಲದಲ್ಲಿ ನೀರಿಲ್ಲದಿದ್ದ ಈ ಗ್ರಾಮದಲ್ಲಿ ಇಂದು ಭೂಮಿಯ ಒಳಗಿನ ನೀರಿನ ಮಟ್ಟ ಕೇವಲ 30 ರಿಂದ 35 ಅಡಿಗೆ ತಲುಪಿದೆ.

ನೀರು ಉಳಿಸಲು ಬೆಳೆಗಳ ಬದಲಾವಣೆ ಗ್ರಾಮಸ್ಥರು ಕೇವಲ ನೀರನ್ನು ಸಂಗ್ರಹಿಸಲಿಲ್ಲ, ಅದನ್ನು ಜಾಣ್ಮೆಯಿಂದ ಬಳಸಲು ಕಲಿತರು. ಹೆಚ್ಚು ನೀರು ಬೇಡುವ ಭತ್ತ, ಕಬ್ಬು ಮತ್ತು ಜೋಳದಂತಹ ಬೆಳೆಗಳನ್ನು ಗ್ರಾಮದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಯಿತು. ಬದಲಾಗಿ ಕಡಿಮೆ ನೀರಿನಲ್ಲಿ ಬೆಳೆಯುವ, ಹೆಚ್ಚು ಲಾಭ ನೀಡುವ ಆಲೂಗಡ್ಡೆ ಮತ್ತು ಈರುಳ್ಳಿಗಳನ್ನು ಬೆಳೆಯಲು ಆರಂಭಿಸಿದರು.

ಇಂದು ಹಿವರೆ ಬಜಾರ್‌ನ ರೈತರು ಮಳೆಗಾಗಿ ಕಾಯುತ್ತಾ ಕೂರುವುದಿಲ್ಲ. ಸರಿಯಾದ ಜಲ ನಿರ್ವಹಣೆ ಹಾಗೂ ಸ್ವಚ್ಛತೆಯಿಂದಾಗಿ ಇಡೀ ಗ್ರಾಮ ಹಸಿರಾಗಿದೆ ಮತ್ತು ಸೊಳ್ಳೆ ಮುಕ್ತವಾಗಿದೆ. ಬಡತನದಿಂದ ಕೋಟ್ಯಧಿಪತಿಗಳ ಹಳ್ಳಿಯಾಗಿ ಬದಲಾಗಿರುವ ಹಿವರೆ ಬಜಾರ್ ಇಡೀ ದೇಶಕ್ಕೆ ಮಾದರಿಯಾಗಿದೆ.

The post ಸೊಳ್ಳೆ ಹಿಡಿದು ಕೊಟ್ರೆ ಸಿಗುತ್ತೆ 400 ರೂ ಬಹುಮಾನ! appeared first on Good News 24x7.

]]>
ಬೇಸಿಗೆ ರಜೆಯ ಸಂಭ್ರಮದ ನಡುವೆ ದು*ತ: ಅಳಿಯನನ್ನು ರಕ್ಷಿಸಲು ಹೋಗಿ ಮಾವನೂ ನೀರುಪಾಲು! https://www.goodnews24x7.com/amidst-the-celebration-of-summer-vacation-the-father-in-law-also-drowned/ Mon, 20 Apr 2026 09:56:38 +0000 https://www.goodnews24x7.com/?p=9328 ಶಾಲೆಗೆ ಬೇಸಿಗೆ ರಜೆ ಇದೆ ಎಂದು ಸಂಭ್ರಮದಿಂದ ಮಾವನ ಮನೆಗೆ ಬಂದಿದ್ದ ಬಾಲಕ ಹಾಗೂ ಆತನನ್ನು ರಕ್ಷಿಸಲು ಹೋದ ಮಾವ ಇಬ್ಬರೂ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಎನ್. ಹೊಸಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಘಟನೆಯ ವಿವರ: ಸೋಮನಹಳ್ಳಿ…

The post ಬೇಸಿಗೆ ರಜೆಯ ಸಂಭ್ರಮದ ನಡುವೆ ದು*ತ: ಅಳಿಯನನ್ನು ರಕ್ಷಿಸಲು ಹೋಗಿ ಮಾವನೂ ನೀರುಪಾಲು! appeared first on Good News 24x7.

]]>

ಶಾಲೆಗೆ ಬೇಸಿಗೆ ರಜೆ ಇದೆ ಎಂದು ಸಂಭ್ರಮದಿಂದ ಮಾವನ ಮನೆಗೆ ಬಂದಿದ್ದ ಬಾಲಕ ಹಾಗೂ ಆತನನ್ನು ರಕ್ಷಿಸಲು ಹೋದ ಮಾವ ಇಬ್ಬರೂ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಎನ್. ಹೊಸಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಘಟನೆಯ ವಿವರ:
ಸೋಮನಹಳ್ಳಿ ಗ್ರಾಮದ ಪ್ರತೀಕ್ (12) ಮೃತಪಟ್ಟ ಬಾಲಕ. ಈತ ರಜೆ ಕಳೆಯಲೆಂದು ತನ್ನ ಮಾವ ಪ್ರಭಾಕರ್ (45) ಅವರ ಮನೆಗೆ ಬಂದಿದ್ದ. ಇಂದು ಇಬ್ಬರೂ ಗ್ರಾಮದ ಕೆರೆಯ ದಡದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಆಕಸ್ಮಿಕವಾಗಿ ಪ್ರತೀಕ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ.

ರಕ್ಷಿಸಲು ಹೋದಾಗ ಸಂಭವಿಸಿದ ವಿಧಿಲಿಖಿತ:
ತನ್ನ ಕಣ್ಣೆದುರೇ ಅಳಿಯ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಗಾಬರಿಗೊಂಡ ಪ್ರಭಾಕರ್, ಆತನನ್ನು ಹೇಗಾದರೂ ಮಾಡಿ ಉಳಿಸಬೇಕೆಂದು ತಕ್ಷಣ ಕೆರೆಗೆ ಇಳಿದಿದ್ದಾರೆ. ಆದರೆ, ಪ್ರಭಾಕರ್ ಅವರಿಗೆ ಈಜು ಬರುತ್ತಿರಲಿಲ್ಲ. ಅಳಿಯನನ್ನು ಉಳಿಸುವ ಪ್ರಯತ್ನದಲ್ಲಿ ಅವರು ಕೂಡ ನೀರಿನ ಆಳಕ್ಕೆ ಸಿಲುಕಿದ್ದಾರೆ. ಅಂತಿಮವಾಗಿ ಇಬ್ಬರೂ ಉಸಿರುಗಟ್ಟಿ ಕೆರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ:
ಘಟನೆಯ ಬಗ್ಗೆ ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದರು. ಸದ್ಯ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

The post ಬೇಸಿಗೆ ರಜೆಯ ಸಂಭ್ರಮದ ನಡುವೆ ದು*ತ: ಅಳಿಯನನ್ನು ರಕ್ಷಿಸಲು ಹೋಗಿ ಮಾವನೂ ನೀರುಪಾಲು! appeared first on Good News 24x7.

]]>
ಮೂಡನಹಳ್ಳಿಯಲ್ಲಿ ಅಕ್ರಮ ಮದ್ಯದ ಹಾವಳಿ: ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಿ ಮಹಿಳೆಯರ ಆಕ್ರೋಶ! https://www.goodnews24x7.com/illegal-liquor-in-mudanahalli-women-besiege-excise-office-protest/ Tue, 07 Apr 2026 10:57:29 +0000 https://www.goodnews24x7.com/?p=9140 ಕೆ ಆರ್ ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮೂಡನಹಳ್ಳಿ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಮಹಿಳೆಯರು ಕೆ.ಆರ್.ಪೇಟೆ ತಾಲ್ಲೂಕು ಕೇಂದ್ರದಲ್ಲಿರುವ ಅಬಕಾರಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾಮದ ನೂರಾರು ಮಹಿಳೆಯರು ಹಾಗೂ ಯುವಕರು ಪ್ರತಿಭಟನೆ ನಡೆಸಿ, ನಮ್ಮ…

The post ಮೂಡನಹಳ್ಳಿಯಲ್ಲಿ ಅಕ್ರಮ ಮದ್ಯದ ಹಾವಳಿ: ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಿ ಮಹಿಳೆಯರ ಆಕ್ರೋಶ! appeared first on Good News 24x7.

]]>

ಕೆ ಆರ್ ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮೂಡನಹಳ್ಳಿ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಮಹಿಳೆಯರು ಕೆ.ಆರ್.ಪೇಟೆ ತಾಲ್ಲೂಕು ಕೇಂದ್ರದಲ್ಲಿರುವ ಅಬಕಾರಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮದ ನೂರಾರು ಮಹಿಳೆಯರು ಹಾಗೂ ಯುವಕರು ಪ್ರತಿಭಟನೆ ನಡೆಸಿ, ನಮ್ಮ ಮೂಡನಹಳ್ಳಿ ಗ್ರಾಮದ ಬೀದಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮಧ್ಯ ಮಾರಾಟವನ್ನು ಇಂದಿನಿಂದಲೇ ಬಂದ್ ಮಾಡುವ ಆದೇಶ ಹೊರಡಿಸುವವರೆವಿಗೂ ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

ಮೂಡನಹಳ್ಳಿ ಗ್ರಾಮದಿಂದ ಪ್ರಮುಖ ರಸ್ತೆ ಮೂಲಕ ಕೆ ಆರ್ ಪೇಟೆ ಪಟ್ಟಣದ ಶಾಸಕರಾದ ಹೆಚ್ ಟಿ ಮಂಜು ಅವರ ಮನೆಯವರೆಗೆ ಪಾದಯಾತ್ರೆ ಮೂಲಕ ಆಗಮಿಸಿ ಶಾಸಕರಿಗೆ ಮನವಿ ಸಲ್ಲಿಸಿ ನಂತರ ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರ ಮನವಿ ಆಲಿಸಿದ ಶಾಸಕ ಹೆಚ್ ಟಿ ಮಂಜು ಅವರು ಅಬಕಾರಿ ಡಿಸಿ ಅವರಿಗೆ ವಿಡಿಯೋ ಕರೆ ಮಾಡಿ ಮಾತನಾಡಿ ತಕ್ಷಣವೇ ಮೂಡನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟವನ್ನು ಬಂದ್ ಮಾಡಿಸಬೇಕು. ಜನರ ಭಾವನೆಗೆ ಬೆಲೆ ಕೊಟ್ಟು ಮಧ್ಯ ಮಾರಾಟವನ್ನು‌ ನಿಲ್ಲಿಸಿ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಕಟ್ಟು ನಿಟ್ಟಿನ ಕ್ರಮ ವಹಿಸುವಂತೆ ಖಡಕ್ ಸೂಚನೆ ನೀಡಿದರು.
ಗ್ರಾಮದ ಮುಖಂಡರು ಮಾತನಾಡಿ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸದಿದ್ದರೆ ಉಗ್ರ ಹೋರಾಟವನ್ನು ಮಾಡಲು ಹಿಂಜರಿಯುವುದಿಲ್ಲ ಎಂದು ಗ್ರಾಮಸ್ಥರು ‌ಖಡಕ್ಕಾಗಿ ತಿಳಿಸಿದ್ದಾರೆ.

ಕುಡಿತದ ಚಟದಿಂದ ಯುವಕರು, ಮನೆಯ ಯಜಮಾನರು ಸಹ ಹಾಳಾಗುತ್ತಿದ್ದಾರೆ.ಮಕ್ಕಳ ಮೇಲೆ ಪರಿಣಾಮ ಕೆಟ್ಟ ಬೀರುತ್ತಿದೆ. ಅಕ್ರಮ ಮದ್ಯ ‌ಮಾರಾಟದಿಂದಾಗಿ ಮೂಡನಹಳ್ಳಿ ಗ್ರಾಮದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಗ್ರಾಮದ ನೆಮ್ಮದಿ ಹಾಳಾಗಿದೆ ಎಂದು ಪ್ರತಿಭಟನಾ ನಿರತ ಮಹಿಳೆಯರು ಹಾಗೂ ಗ್ರಾಮಸ್ಥರು ಗಂಭೀರ ಆರೋಪ‌ ಮಾಡಿದರು.

The post ಮೂಡನಹಳ್ಳಿಯಲ್ಲಿ ಅಕ್ರಮ ಮದ್ಯದ ಹಾವಳಿ: ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಿ ಮಹಿಳೆಯರ ಆಕ್ರೋಶ! appeared first on Good News 24x7.

]]>
ಕೆ.ಆರ್.ಪೇಟೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಹೃದಯಾಘಾತ; ದುರ್ಮರಣ. https://www.goodnews24x7.com/engineering-student-dies-of-heart-attack-in-k-r-pete/ Wed, 13 Aug 2025 10:31:52 +0000 https://www.goodnews24x7.com/?p=6041 ಗ್ರಾಮದಲ್ಲಿ ಕೆ.ಆರ್.ಪೇಟೆ, ಆ.12- ಹೃದಯಾಘಾತದಿಂದ ಇಂಜಿನಿಯ ರಿಂಗ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕರೋಟಿ ನಡೆದಿದೆ. ಗ್ರಾಮದ ನಿವಾಸಿ ನವೀನ್ (21) ಸಾವನ್ನಪ್ಪಿದವರು. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ ಈತ ರಜೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ್ದ. ಈ ವೇಳೆ ನವೀನ್‌ಗೆ ಹಠಾತ್ ಹೃದಯಾಘಾತವಾಗಿದ್ದು,…

The post ಕೆ.ಆರ್.ಪೇಟೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಹೃದಯಾಘಾತ; ದುರ್ಮರಣ. appeared first on Good News 24x7.

]]>

ಗ್ರಾಮದಲ್ಲಿ ಕೆ.ಆರ್.ಪೇಟೆ, ಆ.12- ಹೃದಯಾಘಾತದಿಂದ ಇಂಜಿನಿಯ ರಿಂಗ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕರೋಟಿ ನಡೆದಿದೆ.

ಗ್ರಾಮದ ನಿವಾಸಿ ನವೀನ್ (21) ಸಾವನ್ನಪ್ಪಿದವರು. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ ಈತ ರಜೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ್ದ. ಈ ವೇಳೆ ನವೀನ್‌ಗೆ ಹಠಾತ್ ಹೃದಯಾಘಾತವಾಗಿದ್ದು, ಪೋಷಕರು ಕಿಕ್ಕೇರಿ ಸರ್ಕಾರಿ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡದೆ, ಚನ್ನರಾಯಪಟ್ಟಣ ಆಸ್ಪತ್ರೆಗೆ ತೆರಳುವಂತೆ ತಿಳಿಸಿದ್ದಾರೆ. ಚಿಕಿತ್ಸೆಗಾಗಿ ಚನ್ನರಾಯಪಟ್ಟಣಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ನವೀನ್ ಸಾವನ್ನಪ್ಪಿದ್ದಾನೆ.

ಪೋಷಕರ ಆಕ್ರಂದನ: ಮಗನಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕಿಕ್ಕೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರೆ ನನ್ನ ಮಗ ಬದುಕುಳಿಯುತ್ತಿದ್ದ ಎಂದು ನವೀನ್ ಪೋಷಕರು ಆರೋಪಿಸಿದರು.

The post ಕೆ.ಆರ್.ಪೇಟೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಹೃದಯಾಘಾತ; ದುರ್ಮರಣ. appeared first on Good News 24x7.

]]>
ಮೇವು ಹುಡುಕಿ ಬಂದು ಬಾವಿಗೆ ಬಿದ್ದ ಹಸುವಿನ ರಕ್ಷಣೆ https://www.goodnews24x7.com/cow-falls-into-well-after-searching-for-fodder/ Mon, 11 Aug 2025 05:19:13 +0000 https://www.goodnews24x7.com/?p=5730 ಬೆಟ್ಟದಪುರ: ಮೇವನ್ನು ಆರಿಸಿಕೊಂಡು ಹೋಗುತ್ತಿದ್ದ ಹಸುವೊಂದು ಆಕಸ್ಮಿಕ ವಾಗಿ ಬಾವಿಗೆ ಬಿದ್ದು ಒದ್ದಾಡಿದ ಘಟನೆ ಶನಿವಾರ ಸಂಜೆ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳಸೋಗೆ ಗ್ರಾಮದ ಬಳಿ ಸಂಭವಿಸಿದೆ. ಕಾವೇರಿ ನದಿ ತೀರದಿಂದ 150 ಕೆರೆಗೆ ಳಿಗೆ ನೀರು ತುಂಬಿಸುವ ಕಾವೇರಿ ನೀರಾ…

The post ಮೇವು ಹುಡುಕಿ ಬಂದು ಬಾವಿಗೆ ಬಿದ್ದ ಹಸುವಿನ ರಕ್ಷಣೆ appeared first on Good News 24x7.

]]>

ಬೆಟ್ಟದಪುರ: ಮೇವನ್ನು ಆರಿಸಿಕೊಂಡು ಹೋಗುತ್ತಿದ್ದ ಹಸುವೊಂದು ಆಕಸ್ಮಿಕ ವಾಗಿ ಬಾವಿಗೆ ಬಿದ್ದು ಒದ್ದಾಡಿದ ಘಟನೆ ಶನಿವಾರ ಸಂಜೆ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳಸೋಗೆ ಗ್ರಾಮದ ಬಳಿ ಸಂಭವಿಸಿದೆ. ಕಾವೇರಿ ನದಿ ತೀರದಿಂದ 150 ಕೆರೆಗೆ ಳಿಗೆ ನೀರು ತುಂಬಿಸುವ ಕಾವೇರಿ ನೀರಾ ವರಿ ನಿಗಮದ ಏತ ನೀರಾವರಿಯ ಯಂತ್ರ ಗಾರದ ಪಕ್ಕ ಘಟನೆ ನಡೆದಿದ್ದು, ಮೇವು ಹುಡುಕಿಕೊಂಡು ಬಂದ ಹಸು ಆಯತಪ್ಪಿ ಬಾವಿಗೆ ಬಿದ್ದು ಒದ್ದಾಡುತ್ತಿತ್ತು. ಸುದ್ದಿ ತಿಳಿದ ಕುಶಾಲನಗರ ಅಗ್ನಿಶಾ ಮಕ ದಳದ ಠಾಣಾಧಿಕಾರಿ ರಂಜಿತ್ ಹಾಗೂ ಸಿಬ್ಬಂದಿಗಳು ಹಗ್ಗ ಕಟ್ಟಿ ಕ್ರೇನ್
ಮುಖಾಂತರ ಮೇಲೆತ್ತಿ ರಕ್ಷಣೆ ಮಾಡಿ ಹಸು ಮಾಲಿಕ ಚಂದ್ರು ಅವರಿಗೆ ಒಪ್ಪಿಸಿದರು.
ಗ್ರಾಮ ಪಂಚಾಯತಿ ಸದಸ್ಯ ಮುತ್ತಿನ ಮುಳಸೋಗೆ ಶಿವಕುಮಾರ್ ಮಾತನಾಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಸು ವನ್ನು ಕೈನ್ ಯಂತ್ರದ ಮೂಲಕ ಮೇಲೆತ್ತಿ ರಕ್ಷಣೆ ಮಾಡಿ ಮನವೀಯತೆ ಮೆರೆದಿದ್ದಾರೆ ಸಂಬಂ ಧಪಟ್ಟ ಇಲಾಖೆ ಅಧಿಕಾರಿಗಳು ಅದರ ಸುತ್ತ ರಕ್ಷಣಾ ಕವಚ ಅಳವಡಿಸಬೇಕು ಎಂದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಪ್ರವೀಣ್, ವಸಂತ್, ಪ್ರೇಮಾನಂದ್, ಸಂದೀಪ್, ಶಶಿ ಭಾಗವಹಿಸಿದ್ದರು.

The post ಮೇವು ಹುಡುಕಿ ಬಂದು ಬಾವಿಗೆ ಬಿದ್ದ ಹಸುವಿನ ರಕ್ಷಣೆ appeared first on Good News 24x7.

]]>
ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಹಲವು ಮೃ*ತದೇಹಗಳ ರಹಸ್ಯ ವಿಲೇವಾರಿ ದೂರು: ಪ್ರಕರಣ ದಾಖಲು. https://www.goodnews24x7.com/complaint-of-secret-disposal-of-several-dead-bodies-at-dharmasthala-village-police-station-case-registered/ Sat, 05 Jul 2025 11:03:27 +0000 https://www.goodnews24x7.com/?p=4925 ಮಂಗಳೂರು: ತಾನು ರಹಸ್ಯವಾಗಿ ಹಲವು ಮೃತದೇಹಗಳನ್ನು ವಿಲೇವಾರಿ ಮಾಡಿದ್ದೆ ಎಂದು ವ್ಯಕ್ತಿಯೊಬ್ಬರು ವಕೀಲರ ಮೂಲಕ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ದ.ಕ ಜಿಲ್ಲಾ ಪೊಲೀಸ್…

The post ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಹಲವು ಮೃ*ತದೇಹಗಳ ರಹಸ್ಯ ವಿಲೇವಾರಿ ದೂರು: ಪ್ರಕರಣ ದಾಖಲು. appeared first on Good News 24x7.

]]>

ಮಂಗಳೂರು: ತಾನು ರಹಸ್ಯವಾಗಿ ಹಲವು ಮೃತದೇಹಗಳನ್ನು ವಿಲೇವಾರಿ ಮಾಡಿದ್ದೆ ಎಂದು ವ್ಯಕ್ತಿಯೊಬ್ಬರು ವಕೀಲರ ಮೂಲಕ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಪತ್ರಿಕಾ ಪ್ರಕಟಣೆ ನೀಡಲಾಗಿದೆ. ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು, ದೂರುದಾರರಿಗೆ ಜೀವಬೆದರಿಕೆ ಒಡ್ಡಿ, ಸದ್ರಿ ಅಪರಾದ ಕೃತ್ಯಗಳ ಮೃತದೇಹಗಳನ್ನು ದೂರುದಾರರ ಮೂಲಕ ರಹಸ್ಯವಾಗಿ ವಿಲೇವಾರಿ ಮಾಡಿಸಿರುತ್ತಾರೆ. ಈ ಹಿನ್ನೆಲೆ ಹಲವಾರು ಮೃತದೇಹಗಳನ್ನು ದೂರುದಾರರು ವಿಲೇವಾರಿ ಮಾಡಿದ್ದು, ಪ್ರಸ್ತುತ ದೂರುದಾರರಿಗೆ ಪಾಪಪ್ರಜ್ಞೆ ಕಾಡುತ್ತಿರುವುದರಿಂದ, ತನಗೆ ಹಾಗೂ ತನ್ನ ಕುಟುಂಬಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ದೊರೆತ ಕೂಡಲೇ, ಈ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿಯನ್ನು ಹಾಗೂ ತಾನು ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ಸಿದ್ದವಿರುವುದಾಗಿ ಜುಲೈ 3ರಂದು ಪೊಲೀಸ್ ಅಧೀಕ್ಷಕರ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಸದ್ರಿ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿರುತ್ತದೆ.


ಈ ದೂರಿನ ಬಗ್ಗೆ ನ್ಯಾಯಾಲಯದಿಂದ ಅಗತ್ಯ ಅನುಮತಿಯನ್ನು ಪಡೆದುಕೊಂಡು, ದಿನಾಂಕ 04.07.2025 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 39/2025, ಕಲಂ: 211(a) ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರಗಿಸಲಾಗುವುದು. ದೂರುದಾರರು ದೂರಿನಲ್ಲಿ ತನ್ನ ಹೆಸರು ಮತ್ತು ಮಾಹಿತಿಯನ್ನು ಗೌಪ್ಯವಾಗಿ ಇಡುವಂತೆ ವಿನಂತಿಸಿಕೊಂಡ ಮೇರೆಗೆ, ದೂರುದಾರರ ಮಾಹಿತಿಯನ್ನು ಪೊಲೀಸ್ ಮೂಲಗಳಿಂದ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಈ ಬಗ್ಗೆ ನೀಡಿದ ಇನ್ನೊಂದು ಪ್ರಕಟಣೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ: 39/2025 ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ದೂರಿಗೆ ಅನ್ವಯವಾಗುವಂತೆ, ಈವರೆಗೆ ಪೊಲೀಸ್ ಠಾಣೆಗೆ ತಲೆಬುರುಡೆ ಹಾಗೂ ಅವಶೇಷದ ಕೆಲಭಾಗಗಳಿರುವ ಎರಡು ಫೋಟೋಗಳ ಕಲರ್ ಝೆರಾಕ್ಸ್ ಪ್ರತಿಯನ್ನು ಮಾತ್ರ ಸಲ್ಲಿಸಿರುತ್ತಾರೆ. ಇದನ್ನು ಹೊರತುಪಡಿಸಿದಂತೆ ಯಾವುದೇ ಕಳೇಬರವನ್ನು ಈವರೆಗೆ ಪೊಲೀಸ್ ಠಾಣೆಗೆ ನೀಡಿರುವುದಿಲ್ಲ. ದೂರುದಾರರ ಪರವಾಗಿ ವಕೀಲರು ದೂರು ಸಲ್ಲಿಸುವ ವೇಳೆ ಕಳೇಬರವನ್ನು ಮುಂದಿನ ಹಂತದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಲಿಖಿತವಾಗಿ ತಿಳಿಸಿರುತ್ತಾರೆ ಎಂದು ತಿಳಿಸಲಾಗಿದೆ.

 

 

 

The post ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಹಲವು ಮೃ*ತದೇಹಗಳ ರಹಸ್ಯ ವಿಲೇವಾರಿ ದೂರು: ಪ್ರಕರಣ ದಾಖಲು. appeared first on Good News 24x7.

]]>
ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ, 2 ಹಸುಗಳು ಸಾ*ವು. https://www.goodnews24x7.com/farmer-2-cows-die-after-falling-on-electric-wire-in-field/ Mon, 26 May 2025 06:08:22 +0000 https://www.goodnews24x7.com/?p=4077 ಮೈಸೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಓರ್ವ ವ್ಯಕ್ತಿ, ಎರಡು ಹಸು ಸಾವನ್ನಪ್ಪಿರುವ ದುರ್ಘಟನೆ ನಂಜನಗೂಡು ತಾಲೂಕಿನ ಏಚಗಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಸಿದ್ದರಾಜು (52) ಮೃತರು. ಇವರ ಜತೆ ಸುಮಾರು ಒಂದೂವರೆ ಲಕ್ಷ ಬೆಲೆಬಾಳುವ ಎರಡು ಇಲಾತಿ ಹಸುಗಳು…

The post ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ, 2 ಹಸುಗಳು ಸಾ*ವು. appeared first on Good News 24x7.

]]>

ಮೈಸೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಓರ್ವ ವ್ಯಕ್ತಿ, ಎರಡು ಹಸು ಸಾವನ್ನಪ್ಪಿರುವ ದುರ್ಘಟನೆ ನಂಜನಗೂಡು ತಾಲೂಕಿನ ಏಚಗಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಸಿದ್ದರಾಜು (52) ಮೃತರು. ಇವರ ಜತೆ ಸುಮಾರು ಒಂದೂವರೆ ಲಕ್ಷ ಬೆಲೆಬಾಳುವ ಎರಡು ಇಲಾತಿ ಹಸುಗಳು ಸಹ ಮೃತಪಟ್ಟಿವೆ. ಮೃತರ ಕುಟುಂಬದವರ ದುಃಖ ಮುಗಿಲು ಮುಟ್ಟಿದೆ.


ಸಿದ್ದರಾಜುರವರು ಜಮೀನಿನಲ್ಲಿ ತಮ್ಮ ಹಸುಗಳನ್ನು ಮೇಯಿಸುತ್ತಿರುವಾಗ, ಹಸುಗಳು ವಿದ್ಯುತ್ ತಂತಿಯನ್ನು ಸ್ಪರ್ಶಿಸಿದೆ. ಈ ವೇಳೆ ಹಸುಗಳನ್ನು ಕಾಪಾಡಲು ಹೋದಾಗ ಹಸುವಿನ ಮಾಲಿಕ ಸಿದ್ದರಾಜುರವರು ಸಹ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.
ತುಂತುರು ಮಳೆಯಾಗುತ್ತಿದ್ದು, ಸಂಜೆಯಾದರೂ ಸಿದ್ದರಾಜು ಅವರು ಮನೆಗೆ ಬಾರದ ಹಿನ್ನೆಲೆ ಆತನ ಕುಟುಂಬ ಸಂಜೆ ಸಮಯದಲ್ಲಿ ತಮ್ಮ ಜಮೀನಿಗೆ ಹೋಗಿ ನೋಡಿದಾಗ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದು ಹಾಗೂ ಸಿದ್ದರಾಜು ಮತ್ತು ಆತನ ಎರಡು ಹಸುಗಳು ಸಹ ಮೃತಪಟ್ಟಿರುವುದು ಕಂಡುಬಂದಿದೆ.
ಸುದ್ದಿ ತಿಳಿದ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು, ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

The post ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ, 2 ಹಸುಗಳು ಸಾ*ವು. appeared first on Good News 24x7.

]]>