ViralVideo Archives - Good News 24x7 https://www.goodnews24x7.com/tag/viralvideo/ Kannada Sat, 11 Jul 2026 11:38:25 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg ViralVideo Archives - Good News 24x7 https://www.goodnews24x7.com/tag/viralvideo/ 32 32 ಅ*ತ್ಯಾಚಾ*ರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ರೇಖಾ ಶ್ರೀನಿವಾಸ್ https://www.goodnews24x7.com/severe-punishment-for-the-rapists-rekha-srinivas/ Sat, 11 Jul 2026 11:38:25 +0000 https://www.goodnews24x7.com/?p=9826 ಮೈಸೂರು: ಅ*ತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್. ಪಶ್ಚಿಮ ಬಂಗಾಳದ ಬಾರುಪುರ್ ಮತ್ತುರಾಜಸ್ಥಾನದ ಶ್ರೀ ಗಂಗಾ ನಗರದಲ್ಲಿ ಅ*ಪ್ರಾಪ್ತ ಮೇಲೆ ನಡೆದ ಅ*ತ್ಯಾಚಾ*ರ ಘಟನೆಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ. ಪ್ರಪಂಚವನ್ನೇ ಅರಿಯದ…

The post ಅ*ತ್ಯಾಚಾ*ರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ರೇಖಾ ಶ್ರೀನಿವಾಸ್ appeared first on Good News 24x7.

]]>

ಮೈಸೂರು: ಅ*ತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್.

ಪಶ್ಚಿಮ ಬಂಗಾಳದ ಬಾರುಪುರ್ ಮತ್ತುರಾಜಸ್ಥಾನದ ಶ್ರೀ ಗಂಗಾ ನಗರದಲ್ಲಿ ಅ*ಪ್ರಾಪ್ತ ಮೇಲೆ ನಡೆದ ಅ*ತ್ಯಾಚಾ*ರ ಘಟನೆಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ. ಪ್ರಪಂಚವನ್ನೇ ಅರಿಯದ 13 ವರ್ಷದ ಒಬ್ಬ ಅಪ್ರಾಪ್ತ ಮೇಲೆ 30 ಜನ ನರರಾಕ್ಷಸರು ಎರಗುತ್ತಾರೆಂದರೆ ಇದೆಂಥ ಸಮಾಜ?. ಇಂತಹ ನೀಚ ಘಟನೆಗಳಲ್ಲಿ ಸರ್ಕಾರದ ಯಾವುದೇ ಕಣ್ಣೂರೆಸುವ ತನಿಖೆಯನ್ನಾಗಲಿ ಅಥವಾ ನಿಧಾನಗತಿಯ ಶಿಕ್ಷೆಯನ್ನಾಗಲಿ ಜನರು ಸಹಿಸುವುದಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆ ಖಾತ್ರಿಪಡಿಸಬೇಕೆಂದು ಪತ್ರಿಕೆ ಹೇಳಿಕೆಯ ಮೂಲಕ ಒತ್ತಾಯಿಸಿದರು.

ಉತ್ತರಪ್ರದೇಶದಲ್ಲಿ ಈಚೆಗೆ 14 ವರ್ಷದ ಅಪ್ರಾಪ್ತ ಅ*ಶ್ಲೀ*ಲ ಸಿನಿಮಾ ಮತ್ತು ಮದ್ಯ, ಮಾದಕ ವಸ್ತುಗಳಿಗೆ ಬಲಿಯಾಗಿ 9 ತಿಂಗಳ ಹಸುಗೂಸಿನ ಮೇಲೆ ಅ*ತ್ಯಾಚಾ*ರ ಎಸಗಿರುವ ಘಟನೆ ನಾಗರಿಕ ಸಮಾಜವನ್ನೇ ತಲೆತಗ್ಗಿಸುಂತೆ ಮಾಡಿದೆ. ವಿಕೃತಿಗಳ ವಿರುದ್ಧ ಪ್ರಜ್ಞಾವಂತ ಜನತೆಯು ಸೇರಿ ಇಡೀ ಮಹಿಳಾ ಸಮುದಾಯ ಬಲಿಷ್ಠವಾದ ಹೋರಾಟ ಕಟ್ಟಲು ಮುಂದೆ ಬರಬೇಕೆಂದು ಪತ್ರಿಕೆಯ ಮೂಲಕ ಆಗ್ರಹಿಸಿದರು.

The post ಅ*ತ್ಯಾಚಾ*ರಿಗಳಿಗೆ ಕಠಿಣ ಶಿಕ್ಷೆ ವಿಧಿಸಿ: ರೇಖಾ ಶ್ರೀನಿವಾಸ್ appeared first on Good News 24x7.

]]>
ಏಕಾಏಕಿ ಚಿರತೆ ದಾಳಿ, ಆದಿವಾಸಿ ಮಹಿಳೆ ಬದುಕಿದ್ದೇ ಪವಾಡ! https://www.goodnews24x7.com/a-tribal-woman-miraculously-survived-a-leopard-attack/ Wed, 24 Jun 2026 07:49:48 +0000 https://www.goodnews24x7.com/?p=9652 ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಹಾಡಿಯಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿದ್ದು ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಜೂನ್​​ 24,ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳ ಉಪಟಳ ಮಿತಿ ಮೀರಿದ್ದು, ಕಾಡಂಚಿನ ಗ್ರಾಮಗಳ ಜನರ…

The post ಏಕಾಏಕಿ ಚಿರತೆ ದಾಳಿ, ಆದಿವಾಸಿ ಮಹಿಳೆ ಬದುಕಿದ್ದೇ ಪವಾಡ! appeared first on Good News 24x7.

]]>

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಹಾಡಿಯಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿದ್ದು ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಜೂನ್​​ 24,ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳ ಉಪಟಳ ಮಿತಿ ಮೀರಿದ್ದು, ಕಾಡಂಚಿನ ಗ್ರಾಮಗಳ ಜನರ ಬದುಕೇ ದುಸ್ತರವಾಗಿ ಮಾರ್ಪಟ್ಟಿದೆ. ಜನವಸತಿ ಪ್ರದೇಶಗಳಿಗೆ ಮೇಲಿಂದ ಮೇಲೆ ವನ್ಯ ಜೀವಿಗಳು ಲಗ್ಗೆ ಇಡುತ್ತಿರವ ಕಾರಣಕ್ಕೆ ಜೀವ ಭಯದಲ್ಲಿಯೇ ಜನ ಬದುಕುವಂತಾಗಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದ ಆನೆಹೊಲ ಹಾಡಿಯಲ್ಲಿ ಏಕಾಏಕಿ ಚಿರತೆ ದಾಳಿ ನಡೆಸಿದ್ದು, ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಪವಾಡ ಎಂಬಂತೆ ಜೀವ ಉಳಿಸಿಕೊಂಡಿದ್ದಾಳೆ.

ಕಳೆದ 6 ತಿಂಗಳಿಂದ ಮಲೆ ಮಹದೇಶ್ವರ ಬೆಟ್ಟದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಚಿರತೆ ದಾಳಿ ಪ್ರಕರಣಗಳು ನಡೆಯುತ್ತಿವೆ. ಘಟನೆಗಳಿಂದ ಹಾಡಿಯ ನಿವಾಸಿಗಳು ಮತ್ತು ಮಾದಪ್ಪನ ಭಕ್ತರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಮಲೆ ಮಹದೇಶ್ವರ ವನ್ಯಜೀವಿಧಾಮ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅರಣ್ಯ ಸಿಬ್ಬಂದಿಗೆ ಚೆಲ್ಲಾಟ ಆದಿವಾಸಿ ಸೋಲಿಗರಿಗೆ ಪ್ರಾಣ ಸಂಕಟ!

ಮಲೆ ಮಹದೇಶ್ವರ ವನ್ಯಜೀವಿಧಾಮ ಅರಣ್ಯ ಸಿಬ್ಬಂದಿ ನಡೆಗೆ ಭಾರಿ ಆಕ್ರೋಶ ಕೂಡ ಕೇಳಿಬಂದಿದೆ. ಬೇರೆಡೆ ಸೆರೆ ಹಿಡಿದ ಚಿರತೆಯನ್ನ ಪಾಲಾರ್ ಕಾಡಿಗೆ ತಂದು ಬಿಡಲಾಗುತ್ತಿದೆ. ಮಾದಪ್ಪನ ಬೆಟ್ಟದಲ್ಲಿ ಪಾದಯಾತ್ರಿಯನ್ನ ಕೊಂದು ಹಾಕಿದ್ದ ನರಭಕ್ಷಕ ಚಿರತೆಯನ್ನು ಸೆರೆ ಹಿಡಿದು ಕಾಲರ್ ಐಡಿ ಅಳವಡಿಸಿದ್ದ ಅರಣ್ಯ ಸಿಬ್ಬಂದಿ ಅದನ್ನು ಮತ್ತೆ ಪಾಲಾರ್ ಹಾಗೂ ಪೊನ್ನಾಚಿ ಕಾಡಿನ ಮಧ್ಯೆ ಬಿಟ್ಟಿದ್ದರು. ಇದೇ ಕಾಡು ಪ್ರದೇಶದಲ್ಲಿ ಹಾಡಿಗಳಿದ್ದು, ಹಸು, ಮೇಕೆ ಹಾಗೂ ಜಾನುವಾರುಗಳ ಮೇಲೆ ಪದೇ ಪದೆ ಚಿರತೆ ದಾಳಿ ನಡೆಯುತ್ತಿದೆ. ಪೊನ್ನಾಚಿ ಬಳಿಯ ಕಕ್ಕೆ ಹೊಲ ಗ್ರಾಮದ ಇಟ್ಟಿದ್ದ ಪಂಜರಕ್ಕೆ ಬಿದ್ದ ಚಿರತೆ ಕತ್ತಿನಲ್ಲಿಯೂ ಕಾಲರ್ ಐಡಿ ಪತ್ತೆಯಾಗಿರೋದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

The post ಏಕಾಏಕಿ ಚಿರತೆ ದಾಳಿ, ಆದಿವಾಸಿ ಮಹಿಳೆ ಬದುಕಿದ್ದೇ ಪವಾಡ! appeared first on Good News 24x7.

]]>
Dolly’s ‘Mother Promise’ release date set https://www.goodnews24x7.com/dollys-mother-promise-release-date-set/ Tue, 23 Jun 2026 10:20:49 +0000 https://www.goodnews24x7.com/?p=9642 ಡಾಲಿಯ ‘ಮದರ್ ಪ್ರಾಮಿಸ್’ ಸಿನಿಮಾದ ‘ವೇನಿ ವೀಡಿ ವೀಚಿ’ ಹಾಡು, ‘ನೀನೇ ಬೇಕು ಅಮ್ಮ’ ಹಾಡು ಇತ್ತೀಚೆಗೆ ಬಿಡುಗಡೆ ಆದ ‘ರಗಸದಅ’ ಹಾಡುಗಳು ಸಖತ್ ವೈರಲ್ ಆಗಿವೆ. ಸಿನಿಮಾದ ಪೋಸ್ಟರ್ ಸಹ ಸಖತ್ ಭಿನ್ನವಾಗಿತ್ತು. ಸಿನಿಮಾನಲ್ಲಿ ಡಾಲಿಯ ಕ್ಯಾರೆಕ್ಟರ್ ಸಹ ಬಹಳ…

The post Dolly’s ‘Mother Promise’ release date set appeared first on Good News 24x7.

]]>

ಡಾಲಿಯ ‘ಮದರ್ ಪ್ರಾಮಿಸ್’ ಸಿನಿಮಾದ ‘ವೇನಿ ವೀಡಿ ವೀಚಿ’ ಹಾಡು, ‘ನೀನೇ ಬೇಕು ಅಮ್ಮ’ ಹಾಡು ಇತ್ತೀಚೆಗೆ ಬಿಡುಗಡೆ ಆದ ‘ರಗಸದಅ’ ಹಾಡುಗಳು ಸಖತ್ ವೈರಲ್ ಆಗಿವೆ. ಸಿನಿಮಾದ ಪೋಸ್ಟರ್ ಸಹ ಸಖತ್ ಭಿನ್ನವಾಗಿತ್ತು. ಸಿನಿಮಾನಲ್ಲಿ ಡಾಲಿಯ ಕ್ಯಾರೆಕ್ಟರ್ ಸಹ ಬಹಳ ಭಿನ್ನವಾಗಿದೆ. ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.

ಡಾಲಿ ಧನಂಜಯ್ ಸಿನಿಮಾ ‘ಮದರ್ ಪ್ರಾಮಿಸ್’ ಬಿಡುಗಡೆಗೆ ದಿನಾಂಕ ನಿಗದಿ

ಡಾಲಿ ಧನಂಜಯ್ ಮತ್ತು ಅವರ ಹಲವು ಗೆಳೆಯರು ಒಟ್ಟಿಗೆ ಸೇರಿ ನಟಿಸಿರುವ ಸಿನಿಮಾ ‘ಮದರ್ ಪ್ರಾಮಿಸ್’ ಪೋಸ್ಟರ್, ಹಾಡು ಮತ್ತು ಹೆಸರಿನಿಂದ ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ. ಸಿನಿಮಾದ ‘ವೇನಿ ವೀಡಿ ವೀಚಿ’ ಹಾಡು, ‘ನೀನೇ ಬೇಕು ಅಮ್ಮ’ ಹಾಡು ಇತ್ತೀಚೆಗೆ ಬಿಡುಗಡೆ ಆದ ‘ರಗಸದಅ’ ಹಾಡುಗಳು ಸಖತ್ ವೈರಲ್ ಆಗಿವೆ. ಸಿನಿಮಾದ ಪೋಸ್ಟರ್ ಸಹ ಸಖತ್ ಭಿನ್ನವಾಗಿತ್ತು. ಸಿನಿಮಾನಲ್ಲಿ ಡಾಲಿಯ ಕ್ಯಾರೆಕ್ಟರ್ ಸಹ ಬಹಳ ಭಿನ್ನವಾಗಿದೆ. ಹೀಗಾಗಿ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.

‘ಮದರ್ ಪ್ರಾಮಿಸ್’ ಸಿನಿಮಾವು ಜುಲೈ 10 ರಂದು ಬಿಡುಗಡೆ ಆಗಲಿದೆ. ಸಿನಿಮಾವು ಹಾಸ್ಯಮಯ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಸೆಂಟಿಮೆಂಟ್ ಅಂಶಗಳು ಸಹ ಇರಲಿವೆ. ಸಿನಿಮಾವನ್ನು ನಟ ಮೈಸೂರು ಪೂರ್ಣ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಸಿನಿಮಾನಲ್ಲಿ ಡಾಲಿ ಧನಂಜಯ್, ಮೈಸೂರು ಪೂರ್ಣ ಸೇರಿದಂತೆ ಹಲವಾರು ಕಲಾವಿದರಿದ್ದಾರೆ. ವಿನಯಾ ಪ್ರಸಾದ್ ಅಮ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಗೀತಾ ಅವರು ಸಹ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಡಾಲಿ ಧನಂಜಯ್, ‘ಡಿಸ್ಟ್ರಿಬ್ಯೂಟರ್ ಲಾಕ್ ಆಗಿದ್ದಾರೆ. ಡೇಟ್ ಫಿಕ್ಸ್ ಆಗಿದೆ. ಹತ್ತಿರದ ಥಿಯೇಟರ್​​ಗಳಲ್ಲಿ ಜುಳೈ 10 ರಿಂದ ಆಟ ಶುರು’ ಎಂದಿದ್ದಾರೆ. ಡಾಲಿ ಅವರ ಪೋಸ್ಟ್​​ಗೆ ಸಾಕಷ್ಟು ಅಭಿಮಾನಿಗಳು ಕಮೆಂಟ್ ಮಾಡಿ ಸಿನಿಮಾಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಪೋಸ್ಟರ್ ಚೆನ್ನಾಗಿದೆ ಎಂದು ಸಹ ಪ್ರಶಂಸಿಸಿದ್ದಾರೆ.

‘ಮದರ್ ಪ್ರಾಮಿಸ್’ ಸಿನಿಮಾ ಹಾಸ್ಯ ಪ್ರಧಾನ ರೌಡಿಗಳ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ‘ರೋಸಿ’, ‘ದೊನ್ನೆ ಬಿರಿಯಾನಿ’, ‘ರ್ಯಾಂಡಿ’, ‘ಕ್ಯಾಂಡಿ’, ‘ಮ್ಯಾಗಿ’, ‘7 ಅಪ್’, ‘ಜಿಲೇಬಿ’, ‘ಬ್ಯಾಂಡೆಡ್’ ಇನ್ನೂ ಹಲವು ಭಿನ್ನ ಹಾಗೂ ವಿಚಿತ್ರ ಹೆಸರುಗಳ ಪಾತ್ರಗಳು ಸಿನಿಮಾನಲ್ಲಿವೆ. ಸೀಮಿತ ಅವಧಿಯಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾ ಬಿಡುಗಡೆ ಆದ ಬಳಿಕವಷ್ಟೆ ಎಲ್ಲದಕ್ಕೂ ಉತ್ತರ ಸಿಗಲಿದೆ. ‘ಮದರ್ ಪ್ರಾಮಿಸ್’ ಸಿನಿಮಾ ಅನ್ನು ಮೈಸೂರು ಪೂರ್ಣ ನಿರ್ದೇಶಿಸಿದ್ದು, ಸಿನಿಮಾಕ್ಕೆ ನವನೀತ್ ಶ್ಯಾಮ್ ಸಂಗೀತ ನೀಡಿದ್ದಾರೆ. ಧನಂಜಯ್ ಜೊತೆಗೆ ಹರ್ಷ್ ಅವರು ಸಹ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಪ್ರದೀಪ್ ರಾವ್ ಸಂಕಲನವಿದೆ.

‘ಹಲಗಲಿ’, ‘ಉತ್ತರಕಾಂಡ’, ‘ಅಣ್ಣಾ ಫ್ರಂ ಮೆಕ್ಸಿಕೊ’ ಸೇರಿದಂತೆ ಒಂದು ಪರಭಾಷೆ ಸಿನಿಮಾನಲ್ಲಿಯೂ ಡಾಲಿ ನಟಿಸುತ್ತಿದ್ದಾರೆ.

The post Dolly’s ‘Mother Promise’ release date set appeared first on Good News 24x7.

]]>
‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ https://www.goodnews24x7.com/dad-save-me-somehow-students-life-ends-with-last-call/ Tue, 23 Jun 2026 07:32:51 +0000 https://www.goodnews24x7.com/?p=9636 ಲಕ್ನೋದಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃ*ತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಾ*ಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳಿಗೂ ತೀವ್ರ ಗಾಯಗಳಾಗಿವೆ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ…

The post ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ appeared first on Good News 24x7.

]]>

ಲಕ್ನೋದಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃ*ತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಾ*ಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳಿಗೂ ತೀವ್ರ ಗಾಯಗಳಾಗಿವೆ

ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂತಾಪ ವ್ಯಕ್ತಪಡಿಸಿದ್ದು, ಮೃ*ತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.

ಇದೇ ವೇಳೆ ಅಗ್ನಿ ದುರಂತದಲ್ಲಿ ಮೃ*ತಪಟ್ಟ ವಿದ್ಯಾರ್ಥಿಗಳ ಕರುಣಾಜನಕ ಕಥೆಗಳು ಬೆಳಕಿಗೆ ಬರುತ್ತಿವೆ.

23 ವರ್ಷದ ವಿದ್ಯಾರ್ಥಿ ಸುಖಮಣಿ ಸಿಂಗ್, ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿದ್ದ ವೇಳೆ ತನ್ನ ತಂದೆ ಪ್ರಭಜೋತ್ ಸಿಂಗ್ ಅವರಿಗೆ ಕರೆ ಮಾಡಿ, “ಅಪ್ಪಾ, ಹೇಗಾದರೂ ಮಾಡಿ ನನ್ನನ್ನು ಕಾಪಾಡಿ. ಸುತ್ತಲೂ ಬೆಂಕಿಯೇ ಕಾಣುತ್ತಿದೆ. ಹೊರಗೆ ಬರಲು ದಾರಿಯೇ ಇಲ್ಲ” ಎಂದು ಅಳುತ್ತಾ ಸಹಾಯ ಕೋರಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ತಂದೆ ಮಗನಿಗೆ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದಂತೆಯೇ ಸಂಪರ್ಕ ಕಡಿತಗೊಂಡಿದೆ

The post ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ appeared first on Good News 24x7.

]]>
3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ? https://www.goodnews24x7.com/why-did-actress-bindiya-apologize-after-3-decades-2/ Sun, 31 May 2026 07:42:37 +0000 https://www.goodnews24x7.com/?p=9585 ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

The post 3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ? appeared first on Good News 24x7.

]]>

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ ಕಂದಕ ಸೃಷ್ಟಿಸಿತ್ತು. ಹಲವು ವರ್ಷಗಳ ನಂತರ ಆ ಕಹಿ ಘಟನೆಯನ್ನು ನೆನೆದು ನಟಿ ಬಿಂದಿಯಾ ಭಾವುಕರಾಗಿದ್ದಾರೆ. ಅಲ್ಲದೆ ರವಿಚಂದ್ರನ್ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಇತ್ತೀಚೆಗೆ ರಘುರಾಮ್ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಿಂದಿಯಾ, ತಪ್ಪು ತಿಳುವಳಿಕೆಯಿಂದ ಈ ರೀತಿ ಆಯಿತು ಎಂದು ಅವರು ಹೇಳಿದ್ದಾರೆ. ‘ಜಾನ್ ತೇರೆ ನಾಮ್’ ಹೆಸರಿನ ಹಿಂದಿ ಸಿನಿಮಾ ಯಶಸ್ಸಿನಲ್ಲಿ ಬಿಂದಿಯಾ ತೇಲುತ್ತಿದ್ದರು. ಇದೇ ಸಮಯದಲ್ಲಿ ಚಿತ್ರಕ್ಕೆ ಹೊಸ ನಾಯಕಿಯ ಹುಡುಕಾಟದಲ್ಲಿದ್ದ ರವಿಚಂದ್ರನ್ ಮತ್ತು ಅವರ ತಂಡ ಮುಂಬೈಗೆ ತೆರಳಿತ್ತು. ಆಗ ಬಿಂದಿಯಾ ಅವರನ್ನು ಭೇಟಿ ಮಾಡಿತ್ತು. ಭಾಷೆಯ ಸಮಸ್ಯೆ ಇದ್ದರೂ, ಉದ್ಯಮದ ಬಗ್ಗೆ ಅಷ್ಟಾಗಿ ತಿಳಿಯದಿದ್ದರೂ ಬಿಂದಿಯಾ ಅವರು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಸಿನಿಮಾ ತೆರೆಕಂಡು ರವಿಚಂದ್ರನ್-ಬಿಂದಿಯಾ ಜೋಡಿಯನ್ನು ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡರು.

ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗಲೇ ಮಾಧ್ಯಮಗಳಲ್ಲಿ ರವಿಚಂದ್ರನ್ ವಿರುದ್ಧ ಕೇಳಿಬಂದ ಗಂಭೀರ ಆರೋಪಗಳು ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದವು. ಮ್ಯಾಗಜಿನ್ ಒಂದರಲ್ಲಿ ರವಿಚಂದ್ರನ್ ವಿರುದ್ಧ ಅತ್ಯಾಚಾರ ಆರೋಪವನ್ನು ನಟಿ ಮಾಡಿದ್ದರು. ‘ನಾನು ಹೇಳಿದ್ದೇ ಒಂದು, ಆದರೆ ಅಂದು ಮ್ಯಾಗಜೀನ್‌ನಲ್ಲಿ ಪ್ರಕಟವಾಗಿದ್ದೇ ಇನ್ನೊಂದು. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಬರೆಯಲಾಗಿತ್ತು’ ಎಂದು ಬಿಂದಿಯಾ ಹೇಳಿದ್ದಾರೆ. ಈ ವಿವಾದ ದೊಡ್ಡದಾಗುತ್ತಿದ್ದಂತೆ ರವಿಚಂದ್ರನ್ ಅವರು ತಮ್ಮ ಗೌರವಕ್ಕೆ ಧಕ್ಕೆ ತಂದಿದ್ದಕ್ಕಾಗಿ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದರು.

‘ಅದು ನನ್ನ ಜೀವನದ ಅತ್ಯಂತ ಕಠಿಣ ಸಮಯ. ವಿಷಯ ಕೋರ್ಟ್‌ ಮೆಟ್ಟಿಲೇರುವಷ್ಟು ದೊಡ್ಡದಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಆಗ ನನಗೆ ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸುವಷ್ಟು ವಯಸ್ಸು ಅಥವಾ ಪ್ರಬುದ್ಧತೆ ಇರಲಿಲ್ಲ’ ಎಂದು ಒಪ್ಪಿಕೊಂಡಿದ್ದಾರೆ. ಕೋರ್ಟ್‌ನಲ್ಲೇ ಬಿಂದಿಯಾ ಕ್ಷಮೆ ಕೇಳಿದ ನಂತರ ರವಿಚಂದ್ರನ್ ಪ್ರಕರಣವನ್ನು ಹಿಂಪಡೆದರು.
ಸಂದರ್ಶನದಲ್ಲಿ ಮಾತನಾಡುತ್ತಾ ಭಾವುಕರಾದ ಬಿಂದಿಯಾ, ‘ರವಿ ಸರ್ ಯಾವುದೇ ತಪ್ಪು ಮಾಡಿರಲಿಲ್ಲ. ನನ್ನಿಂದಾಗಿ ಅಷ್ಟು ದೊಡ್ಡ ಸ್ಟಾರ್ ಕೋರ್ಟ್‌ಗೆ ಬಂದು ನಿಲ್ಲುವಂತಾಗಿದ್ದು ನನಗೆ ಇಂದಿಗೂ ಕಾಡುವ ನೋವು’ ಎಂದು ಕಣ್ಣೀರಿಡುತ್ತಾ ಮತ್ತೊಮ್ಮೆ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.

ಅಲ್ಲದೆ, ರವಿಚಂದ್ರನ್ ಅವರೊಂದಿಗೆ ಮತ್ತೆ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿರುವ ಅವರು, ‘ಮುಂದೆಂದಾದರೂ ರವಿ ಸರ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ, ನಾನು ಯಾವುದೇ ಸಂಭಾವನೆ ಪಡೆಯದೆಯೂ ನಟಿಸಲು ಸಿದ್ಧಳಿದ್ದೇನೆ’ ಎಂದು ತಮ್ಮ ಮನದಾಳದ ಆಸೆಯನ್ನು ಹಂಚಿಕೊಂಡಿದ್ದಾರೆ.

The post 3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ? appeared first on Good News 24x7.

]]>
ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್ ನಿರ್ಲಕ್ಷ್ಯ! ಲಾರಿ ಮಾಲೀಕನಿಗೆ 27 ಲಕ್ಷ ರೂ. ನಷ್ಟ, ಪರಿಹಾರಕ್ಕೆ ಒತ್ತಾಯ! https://www.goodnews24x7.com/ashok-leyland-service-center-negligence-lorry-owner-suffers-rs-27-lakh-loss-demands-compensation/ Tue, 26 May 2026 12:51:38 +0000 https://www.goodnews24x7.com/?p=9555 ಮೈಸೂರು : ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್‌ನಲ್ಲಿ ಒಂದು ಸಣ್ಣ ರಿಪೇರಿಗೆ ನಿಲ್ಲಿಸಿದ್ದ ಲಾರಿಯನ್ನು 9 ತಿಂಗಳಾದರೂ ರಿಪೇರಿ ಮಾಡಿ ನೀಡದ ಕಾರಣ ಲಾರಿ ಮಾಲೀಕನಿಗೆ 27 ಲಕ್ಷ ರೂ. ನಷ್ಟ ಉಂಟಾಗಿರುವ ಘಟನೆ ನಡೆದಿದ್ದು, ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್‌ನವರು…

The post ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್ ನಿರ್ಲಕ್ಷ್ಯ! ಲಾರಿ ಮಾಲೀಕನಿಗೆ 27 ಲಕ್ಷ ರೂ. ನಷ್ಟ, ಪರಿಹಾರಕ್ಕೆ ಒತ್ತಾಯ! appeared first on Good News 24x7.

]]>

ಮೈಸೂರು : ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್‌ನಲ್ಲಿ ಒಂದು ಸಣ್ಣ ರಿಪೇರಿಗೆ ನಿಲ್ಲಿಸಿದ್ದ ಲಾರಿಯನ್ನು 9 ತಿಂಗಳಾದರೂ ರಿಪೇರಿ ಮಾಡಿ ನೀಡದ ಕಾರಣ ಲಾರಿ ಮಾಲೀಕನಿಗೆ 27 ಲಕ್ಷ ರೂ. ನಷ್ಟ ಉಂಟಾಗಿರುವ ಘಟನೆ ನಡೆದಿದ್ದು, ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್‌ನವರು ಪರಿಹಾರ ನೀಡಬೇಕು ಎಂದು ಲಾರಿ ಮಾಲಿಕ ನಂದೀಶ್ ಒತ್ತಾಯಿಸಿದರು.

ನಗರದ ವಿದ್ಯಾರಣ್ಯಪುರಂನಲ್ಲಿರುವ ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದ್ದು, ಲಾರಿ ಮಾಲೀಕ ನಂದೀಶ್ ಅವರು ಕಳೆದ 9 ತಿಂಗಳ ಹಿಂದೆ ತಮ್ಮ 12ಚಕ್ರದ ಅಶೋಕ್ ಲೇಲ್ಯಾಂಡ್ ಟಿಪ್ಪರ್ ಲಾರಿಯನ್ನು ಸಣ್ಣ ರಿಪೇರಿಗಾಗಿ ಸರ್ವಿಸ್ ಸೆಂಟರ್‌ಗೆ ಬಿಟ್ಟಿದ್ದು, ಅಲ್ಲಿನ ಸರ್ವಿಸ್ ಸೆಂಟರ್‌ನವರು ವಿವಿಧ ಕಾರಣಗಳನ್ನು ನೀಡಿ ೯ ತಿಂಗಳಾದರೂ ತಮ್ಮ ಲಾರಿಯನ್ನು ರಿಪೇರಿ ಮಾಡಿ ಕೊಟ್ಟಿಲ್ಲ, ನಾನು ಹಲವು ಬಾರಿ ಸರ್ವಿಸ್ ಸೆಂಟರ್‌ಗೆ ಬಂದು ವಿಚಾರಣೆ ನಡೆಸಿ ಲಾರಿಯನ್ನು ಕೊಡುವಂತೆ ಕೇಳಿದರೂ ವಿವಿಧ ಸಬೂಬುಗಳನ್ನು ಕೊಟ್ಟು ಇವತ್ತು, ನಾಳೆ ಎಂದು ನನಗೆ ಸಾಗ ಹಾಕಿದರು.

ಇತ್ತೀಚೆಗೆ ನಿಮ್ಮ ಲಾರಿ ರಿಪೇರಿ ಆಗಿದೆ 34 ಸಾವಿರ ಬಿಲ್ ಕಟ್ಟಿ ಲಾರಿಯನ್ನು ತೆಗೆದುಕೊಂಡು ಹೋಗಿ ಎಂದು ಬಿಲ್ ಕಳಿಸಿದ್ದಾರೆ. ಆದರೇ ನಾನು ಇದೇ ಅಶೋಕ್ ಲೇಲ್ಯಾಂಡ್ ಶೋರೂಂನಿಂದ ಲಾರಿಯನ್ನು ಸಾಲ ಮಾಡಿ ತೆಗೆದುಕೊಂಡಿದ್ದೇನೆ. ತಿಂಗಳಿಗೆ 1.10 ಲಕ್ಷ ರೂ EMI ಕಟ್ಟುತ್ತಿದ್ದೇನೆ. 9 ತಿಂಗಳ ಕಂತು ಪಾವತಿಸಿದೆ. ಲಾರಿಯ ಇನ್ಸುರೆನ್ಸ್, ಟ್ಯಾಕ್ಸ್ ಮುಂತಾದವೂ ಸಹ ಕಟ್ಟಿದ್ದೇನೆ. ನನ್ನ ಲಾರಿಯಿಂದ ದಿನಕ್ಕೆ ಕನಿಷ್ಠ 10 ಸಾವಿರ ರೂ. ಆದಾಯ ಲೆಕ್ಕ ಹಾಕಿದರೂ ನನಗೆ 9 ತಿಂಗಳು, 5 ದಿನಕ್ಕೆ ಬರೋಬ್ಬರಿ 27 ಲಕ್ಷ ರೂ. ಹಣ ಸಂಪಾದನೆ ಆಗುತ್ತಿತ್ತು, ಒಂದು ಸಣ್ಣ ರಿಪೇರಿಗಾಗಿ ನಾನು ಅಶೋಕ್ ಲೇಲ್ಯಾಂಡ್ ಸರ್ವಿಸ್ ಸೆಂಟರ್‌ಗೆ ಲಾರಿ ಬಿಟ್ಟರೆ, 9 ತಿಂಗಳಾದರೂ ನನಗೆ ನನ್ನ ಲಾರಿ ರಿಪೇರಿ ಮಾಡಿ ಕೊಡದ ಕಾರಣ ನನಗಾಗಿರುವ ನಷ್ಟಕ್ಕೆ ಅಶೋಕ್ ಲೇಲ್ಯಾಂಡ್ ಸರ್ವಿಸ್ ಸೆಂಟರ್ ಅವರೇ ಜವಾಬ್ದಾರರು, ಈ ಬಗ್ಗೆ ನಾನು ಪೊಲೀಸರಿಗೂ ಮತ್ತು ಗ್ರಾಹಕರ ನ್ಯಾಯಾಲಯಕ್ಕೂ ದೂರು ನೀಡುತ್ತಿದ್ದೇನೆ. ನನಗೆ ಪರಿಹಾರ ಕೊಡುವ ತನಕ ನನ್ನ ಲಾರಿಯನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ನಂದೀಶ್ ದೂರಿದರು.

ಸರ್ವಿಸ್ ಸೆಂಟರ್ ಎದುರು ಪ್ರತಿಭಟನೆ ಎಚ್ಚರಿಕೆ!


ಲಾರಿ ಮತ್ತು ಟಿಪ್ಪರ್ ಮಾಲೀಕರ ಕಷ್ಟ ಹೇಳತೀರದು, ಚಕ್ರ ಉರುಳಿದರೆ ಮಾತ್ರ ನಮಗೆ ಬದುಕು, ಇಲ್ಲವಾದರೆ ಇಲ್ಲ, ನಂದೀಶ್ ಅವರು ಸಾಲ ಮಾಡಿ ಟಿಪ್ಪರ್ ಖರೀದಿ ಮಾಡಿದ್ದಾರೆ. ಇದು ಶೋಂರೂಂ ವಾಹನ, ಗ್ಯಾರಂಟಿ ಇದೆ, ಅಂತಹದರಲ್ಲಿ ಇಂತಹ ಪ್ರತಿಷ್ಠಿತ ಅಶೋಕ್ ಲೇಲ್ಯಾಂಡ್ ಸರ್ವಿಸ್ ಸೆಂಟರ್‌ನವರೇ ಒಂದು ಸಣ್ಣ ರಿಪೇರಿಗೆ ೯ ತಿಂಗಳು ಮಾಡಿದರೆ ಹೇಗೆ, ಅವರು ಲಾರಿಯ ಸಂಪೂರ್ಣ ನಷ್ಟವನ್ನು ಭರಿಸಬೇಕು. ಇಲ್ಲವಾದಲ್ಲಿ ಸರ್ವಿಸ್ ಸೆಂಟರ್ ಎದುರು ಲಾರಿ ಮಾಲೀಕರ ಸಂಘದವತಿಯಿಂದ ಪ್ರತಿಭಟನೆ ನಡೆಸುತ್ತೇವೆ.

The post ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್ ನಿರ್ಲಕ್ಷ್ಯ! ಲಾರಿ ಮಾಲೀಕನಿಗೆ 27 ಲಕ್ಷ ರೂ. ನಷ್ಟ, ಪರಿಹಾರಕ್ಕೆ ಒತ್ತಾಯ! appeared first on Good News 24x7.

]]>
ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..! https://www.goodnews24x7.com/rcb-can-reach-the-final-without-playing-the-qualifier/ Tue, 26 May 2026 12:28:44 +0000 https://www.goodnews24x7.com/?p=9547 ಐಪಿಎಲ್ 2026 ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದಲ್ಲಿ ಸೆಣಸಾಡಲಿವೆ. ಈ ಪಂದ್ಯ ಮಳೆಯಿಂದ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೋತ ತಂಡಕ್ಕೆ ಕ್ವಾಲಿಫೈಯರ್ 2 ಆಡಲು ಮತ್ತೊಂದು ಅವಕಾಶವಿದ್ದರೂ,…

The post ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..! appeared first on Good News 24x7.

]]>

ಐಪಿಎಲ್ 2026 ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದಲ್ಲಿ ಸೆಣಸಾಡಲಿವೆ. ಈ ಪಂದ್ಯ ಮಳೆಯಿಂದ ರದ್ದಾದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೋತ ತಂಡಕ್ಕೆ ಕ್ವಾಲಿಫೈಯರ್ 2 ಆಡಲು ಮತ್ತೊಂದು ಅವಕಾಶವಿದ್ದರೂ, ಮಳೆ ನಿಯಮ ಆರ್‌ಸಿಬಿಗೆ ವರದಾನವಾಗಲಿದೆ.

ಐಪಿಎಲ್ ರ ಸೀಸನ್ ಅಂತಿಮ ಹಂತಕ್ಕೆ ತಲುಪಿದೆ. ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಇಂದು ಧರ್ಮಶಾಲಾದಲ್ಲಿ ಮೊದಲ ಕ್ವಾಲಿಫೈಯರ್ ಆಡಲು ಸಿದ್ಧವಾಗಿವೆ. ಪಂದ್ಯ ಸಂಜೆ  7:30 ಕ್ಕೆ ಪ್ರಾರಂಭವಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಇತ್ತ ಸೋತ ತಂಡಕ್ಕೆ ಮತ್ತೊಂದು ಅವಕಾಶವಿದ್ದರೂ (ಕ್ವಾಲಿಫೈಯರ್-2), ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಇರಾದೆಯಲ್ಲಿವೆ. ಆದಾಗ್ಯೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ಕ್ವಾಲಿಫೈಯರ್ ಆಡದೆಯೇ ಫೈನಲ್ ತಲುಪುವ ಅವಕಾಶವನ್ನು ಹೊಂದಿದೆ. ಅದು ಹೇಗೆ ಸಾಧ್ಯ?

ಪಂದ್ಯ ರದ್ದಾದರೆ ಆರ್​ಸಿಬಿ ಫೈನಲ್​ಗೆ

ವಾಸ್ತವವಾಗಿ ಫೈನಲ್ ಹೊರತುಪಡಿಸಿ ಯಾವುದೇ ಪ್ಲೇಆಫ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿಲ್ಲ. ಆದ್ದರಿಂದ, ಕ್ವಾಲಿಫೈಯರ್ 1, ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಪಂದ್ಯಗಳು ಮಳೆಯಿಂದಾಗಿ ರದ್ದಾದರೆ, ಮರುದಿನ ಪಂದ್ಯಗಳನ್ನು ಆಡಲಾಗುವುದಿಲ್ಲ. ಹೀಗಾಗಿ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಲ್ಲಿ ಮಳೆ ಬಂದರೆ, ಅದೇ ದಿನ ಪಂದ್ಯವನ್ನು ಮುಗಿಸಲು ಪ್ರಯತ್ನಿಸಲಾಗುತ್ತದೆ. ಪಂದ್ಯದ ಆರಂಭ ವಿಳಂಬವಾದರೆ, ಕನಿಷ್ಠ ಐದು ಓವರ್‌ಗಳ ಪಂದ್ಯವನ್ನು ಆಡಿಸಲು ಪ್ರಯತ್ನಿಸಲಾಗುತ್ತದೆ. ಇದಕ್ಕಾಗಿ, 120 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಆದರೆ ಹೆಚ್ಚುವರಿ ಸಮಯದ 120 ನಿಮಿಷಗಳಲ್ಲೂ ಪಂದ್ಯ ಮುಗಿಯದಿದ್ದರೆ, ಆಗ ಪಾಯಿಂಟ್‌ ಪಟ್ಟಿ ಪ್ರಮುಖ ಪಾತ್ರವಹಿಸುತ್ತದೆ.

https://www.instagram.com/reel/DYzRfaoE5RV/?utm_source=ig_web_copy_link&igsh=MzRlODBiNWFlZA==ಚಾಮುಂಡಿ ತಾಯಿ ಮುಂದೆ ಕಡೆಗೂ ಕ್ಷಮೆ ಕೇಳಿದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್

ಅಂದರೆ ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇದರರ್ಥ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್​ಸಿಬಿ ಕ್ವಾಲಿಫೈಯರ್ 1 ಆಡದೆಯೇ ನೇರವಾಗಿ ಫೈನಲ್​ಗೆ ಅರ್ಹತೆ ಪಡೆಯುತ್ತದೆ. ಇತ್ತ ಗುಜರಾತ್ ತಂಡ ಕ್ವಾಲಿಫೈಯರ್ 2 ಆಡಬೇಕಾಗುತ್ತದೆ.

ಅಗ್ರಸ್ಥಾನದಲ್ಲಿ ಆರ್​ಸಿಬಿ


ಐಪಿಎಲ್ 2026 ರ ಗುಂಪು ಹಂತ ಮುಗಿದ ಬಳಿಕ ನಾವು ಪಾಯಿಂಟ್ ಪಟ್ಟಿಯನ್ನು ನೋಡುವುದಾದರೆ.. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಆರ್​ಸಿಬಿ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದ್ದು, +0.783 ನೆಟ್ ರನ್​ರೇಟ್ ಹೊಂದಿದೆ. ಇತ್ತ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಕೂಡ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದೆ. ಆದರೆ ಗುಜರಾತ್ ತಂಡದ ನೆಟ್ ರನ್​ರೇಟ್ ಆರ್​ಸಿಬಿಗಿಂತ ಕಡಿಮೆ ಅಂದರೆ +0.695 ಆಗಿರುವ ಕಾರಣ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಧರ್ಮಶಾಲಾದಲ್ಲಿ ಹವಾಮಾನ ಹೇಗಿರಲಿದೆ?


ಧರ್ಮಶಾಲಾ ಮೈದಾನವು ಪರ್ವತಗಳಿಂದ ಸುತ್ತುವರೆದಿದೆ. ಇದರಿಂದಾಗಿ, ಹವಾಮಾನ ಯಾವುದೇ ಸಮಯದಲ್ಲಿ ಬದಲಾಗಬಹುದು. ಆದಾಗ್ಯೂ, ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯದ ದಿನದಂದು ಮಳೆಯಾಗುವ ಸಾಧ್ಯತೆ ಶೇ. 25 ರಷ್ಟು ಇದೆ. ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಹೀಗಾಗಿ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪೂರ್ಣ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ಮಳೆ ಬರುವ ಸಾಧ್ಯತೆ ಇರದ ಕಾರಣ, ಆರ್​ಸಿಬಿ ಈ ಪಂದ್ಯವನ್ನು ಆಡಿ, ಜಯ ಸಾಧಿಸಿಯೇ ಫೈನಲ್​ಗೆ ಟಿಕೆಟ್ ಪಡೆಯಬೇಕಾಗಿದೆ.

The post ಕ್ವಾಲಿಫೈಯರ್ ಆಡದೆಯೇ ಆರ್‌ಸಿಬಿ ಫೈನಲ್ ತಲುಪಬಹುದು..! appeared first on Good News 24x7.

]]>
ಚಾಮುಂಡಿ ತಾಯಿ ಮುಂದೆ ಕಡೆಗೂ ಕ್ಷಮೆ ಕೇಳಿದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್! https://www.goodnews24x7.com/bollywood-star-ranveer-singh-apologizes-to-his-mother-chamundi/ Tue, 26 May 2026 12:10:10 +0000 https://www.goodnews24x7.com/?p=9540 ಮೈಸೂರು : ʻಕಾಂತಾರʼ ಸಿನಿಮಾದಲ್ಲಿರುವ ಚಾಮುಂಡಿ ದೈವದ ಪಾತ್ರಕ್ಕೆ ಅಪಮಾನ ಮಾಡಿದ್ದ ಬಾಲಿವುಡ್‌ ನಟ ರಣವೀರ್ ಸಿಂಗ್ ಇದೀಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ತಾಯಿಯೆದುರು ಕ್ಷಮೆಯಾಚಿಸಿದ್ದಾರೆ. ರಣವೀರ್‌ ಸಿಂಗ್‌ ಯಾರಿಗೂ ತಿಳಿಯದಂತೆ ಮೈಸೂರು ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ,…

The post ಚಾಮುಂಡಿ ತಾಯಿ ಮುಂದೆ ಕಡೆಗೂ ಕ್ಷಮೆ ಕೇಳಿದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್! appeared first on Good News 24x7.

]]>

ಮೈಸೂರು : ʻಕಾಂತಾರʼ ಸಿನಿಮಾದಲ್ಲಿರುವ ಚಾಮುಂಡಿ ದೈವದ ಪಾತ್ರಕ್ಕೆ ಅಪಮಾನ ಮಾಡಿದ್ದ ಬಾಲಿವುಡ್‌ ನಟ ರಣವೀರ್ ಸಿಂಗ್ ಇದೀಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ತಾಯಿಯೆದುರು ಕ್ಷಮೆಯಾಚಿಸಿದ್ದಾರೆ.
ರಣವೀರ್‌ ಸಿಂಗ್‌ ಯಾರಿಗೂ ತಿಳಿಯದಂತೆ ಮೈಸೂರು ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ, ಕ್ಷಮೆಯಾಚಿಸಿದ್ದಾರೆ. ತಾಯಿ ಎದುರು ಕುಳಿತು ತಲೆಬಾಗಿ ಕ್ಷಮೆ ಕೇಳಿರುವ ಕೆಲ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪ್ರಕರಣ ಸಂಬಂಧ ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದಾಗ, ರಣವೀರ್ ಸಿಂಗ್ ಸ್ವತಃ ಎಕ್ಸ್‌ನಲ್ಲಿ ಕ್ಷಮೆ ಕೇಳಿದ್ದರು. ಜೊತೆಗೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ಕ್ಷಮೆ ಕೇಳುವುದಾಗಿ ತಿಳಿಸಿದ್ದರು. ಅದರಂತೆ ಇದೀಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಕ್ಷಮೆಯಾಚಿಸಿದ್ದಾರೆ.
ʼಗೋವಾ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ರಣವೀರ್‌ ಸಿಂಗ್‌ ನಟ ರಿಷಬ್‌ ಶೆಟ್ಟಿ ಮುಂದೆಯೇ ಮಾತನಾಡಿದ್ದರು. ರಿಷಬ್ ಅವರ ಕಾಂತಾರ ಸಿನಿಮಾವನ್ನ ಥಿಯೇಟರ್‌ನಲ್ಲಿ ನಾನು ನೋಡಿದೆ. ಅದ್ಭುತವಾಗಿತ್ತು ನಿಮ್ಮ ನಟನೆ. ಅದರಲ್ಲೂ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅತ್ಯದ್ಭುತವಾಗಿತ್ತು. ಆ ದೃಶ್ಯದಲ್ಲಿ ನಿಮ್ಮ ನಟನೆ ಹಾಗೂ ನಿಮ್ಮ ನೋಟ ಮಜವಾಗಿತ್ತು ಅಂತ ರಣವೀರ್‌ ಸಿಂಗ್‌ ಅನುಕರಣೆ ಮಾಡಿದ್ದರು. ರಣವೀರ್‌ ಮಾಡಿದ ಅಪಹಾಸ್ಯಕ್ಕೆ ದೈವಾರಾಧಕರು ಆಕ್ರೋಶ ಹೊರಹಾಕಿದ್ದರು.

The post ಚಾಮುಂಡಿ ತಾಯಿ ಮುಂದೆ ಕಡೆಗೂ ಕ್ಷಮೆ ಕೇಳಿದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್! appeared first on Good News 24x7.

]]>
ತಮಿಳುನಾಡಲ್ಲಿ 717 ಬಾರ್ ಗಳಿಗೆ ಬೀಗ CM ವಿಜಯ್ ಖಡಕ್ ಆರ್ಡರ್ ! https://www.goodnews24x7.com/cm-vijay-orders-closure-of-717-bars-in-tamil-nadu/ Tue, 12 May 2026 08:59:21 +0000 https://www.goodnews24x7.com/?p=9504 ತಮಿಳುನಾಡಿನಾದ್ಯಂತ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ 717 ಮದ್ಯದಂಗಡಿಗಳನ್ನು ಎರಡು ವಾರಗಳಲ್ಲಿ ಮುಚ್ಚಲು ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಆದೇಶಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಂಗಳವಾರ ತಮ್ಮ ಮೊದಲ…

The post ತಮಿಳುನಾಡಲ್ಲಿ 717 ಬಾರ್ ಗಳಿಗೆ ಬೀಗ CM ವಿಜಯ್ ಖಡಕ್ ಆರ್ಡರ್ ! appeared first on Good News 24x7.

]]>

ತಮಿಳುನಾಡಿನಾದ್ಯಂತ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ 717 ಮದ್ಯದಂಗಡಿಗಳನ್ನು ಎರಡು ವಾರಗಳಲ್ಲಿ ಮುಚ್ಚಲು ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಆದೇಶಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಂಗಳವಾರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ಧಾರದಲ್ಲಿ, ಜೋಸೆಫ್ ವಿಜಯ್ ಈ ಆದೇಶವನ್ನು ಹೊರಡಿಸಿದ್ದಾರೆ.

ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು, ಶಾಲೆಗಳು, ಕಾಲೇಜುಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ (ಟ್ಯಾಸ್ಮ್ಯಾಕ್) ಮಳಿಗೆಗಳನ್ನು ಮುಂದಿನ ಎರಡು ವಾರಗಳಲ್ಲಿ ಮುಚ್ಚಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.ತಮಿಳುನಾಡು ಸರ್ಕಾರದ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ ಒಟ್ಟು 4,765 ಮದ್ಯದಂಗಡಿಗಳಿವೆ. ಮುಚ್ಚಲು ಗುರುತಿಸಲಾದ 717 ರಲ್ಲಿ 276 ಪೂಜಾ ಸ್ಥಳಗಳ ಬಳಿ, 186 ಶಿಕ್ಷಣ ಸಂಸ್ಥೆಗಳ ಬಳಿ ಮತ್ತು 255 ಬಸ್ ನಿಲ್ದಾಣಗಳ ಬಳಿ ಇವೆ.

ಇದನ್ನೂ ನೋಡಿ : https://www.instagram.com/reel/DYL_4HpET3c/?utm_source=ig_web_copy_link&igsh=MzRlODBiNWFlZA==

ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ವಿಜಯ್ ಅವರ ಈ ಕ್ರಮವು ಮೊದಲ ಪ್ರಮುಖ ನೀತಿ ಹಸ್ತಕ್ಷೇಪವಾಗಿದೆ ಮತ್ತು ಸೂಕ್ಷ್ಮ ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯದ ಲಭ್ಯತೆಯ ಕುರಿತಾದ ಕಳವಳಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಪ್ರಮುಖ ಸಾಮಾಜಿಕ ಸುಧಾರಣಾ ಕ್ರಮವಾಗಿ ಹೊಸ ಸರ್ಕಾರವು ಇದನ್ನು ಬಿಂಬಿಸುತ್ತಿದೆ.

ಆದಾಗ್ಯೂ, ಟಾಸ್ಮ್ಯಾಕ್ ರಾಜ್ಯದ ಅತಿದೊಡ್ಡ ಆದಾಯ ಗಳಿಸುವ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಒಂದಾಗಿದೆ ಮತ್ತು ಅದರ ಮಳಿಗೆಗಳನ್ನು ಮುಚ್ಚುವ ನಿರ್ಧಾರವು ತಮಿಳುನಾಡು ಸರ್ಕಾರಕ್ಕೆ ಅದರ ಆರ್ಥಿಕ ಪರಿಣಾಮಗಳು ಮತ್ತು ಕಲ್ಯಾಣ ಭರವಸೆಗಳನ್ನು ಪೂರೈಸುವ ಸಾಮರ್ಥ್ಯದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕುವ ಸಾಧ್ಯತೆಯಿದೆ.ರಾಜಕೀಯ ಪಕ್ಷಗಳು ಮತ್ತು ನಾಯಕರು ಈ ನಿರ್ಧಾರವನ್ನು ಸ್ವಾಗತಿಸಿದ್ದು, ಇದು ದೀರ್ಘಕಾಲದ ಬೇಡಿಕೆಯನ್ನು ಪರಿಹರಿಸುವ ಮತ್ತು ಮದ್ಯ ನಿಯಂತ್ರಣವನ್ನು ಬಲಪಡಿಸುವತ್ತ ಒಂದು ಹೆಜ್ಜೆ ಎಂದು ಬಣ್ಣಿಸಿದ್ದಾರೆ.

The post ತಮಿಳುನಾಡಲ್ಲಿ 717 ಬಾರ್ ಗಳಿಗೆ ಬೀಗ CM ವಿಜಯ್ ಖಡಕ್ ಆರ್ಡರ್ ! appeared first on Good News 24x7.

]]>
ಕಾಂಗ್ರೆಸ್‌ ಸರ್ಕಾರಕ್ಕೆ 2.5 ವರ್ಷ: ಸಿದ್ದು ಸಂಪುಟ ಕಸರತ್ತು ! ನವೆಂಬ‌ರ್ ತಿಂಗಳ ಅಂತ್ಯಕ್ಕೆ ಮೇಜರ್ ಸಂಪುಟ ಸರ್ಜರಿ? https://www.goodnews24x7.com/congress-government-2-5-years-cabinet-reshuffle-major-cabinet-surgery-by-the-end-of-november/ Sat, 11 Oct 2025 13:16:39 +0000 https://www.goodnews24x7.com/?p=7692 ಬೆಂಗಳೂರು :- ಬಿಹಾರ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯುವ ಸಾಧ್ಯತೆ ನಿಚ್ಚಳವಾಗತೊಡಗಿದ್ದು, ನವೆಂಬರ್ ಮಾಸಾಂತ್ಯಕ್ಕೆ ಸುಮಾರು 15ಕ್ಕೂ ಹೆಚ್ಚು ಮಂದಿ ಹಾಲಿ ಸಚಿವರು ಮಾಜಿಗಳಾಗ ಲಿದ್ದಾರೆ. ಇದೇ ವೇಳೆ ಹೊಸ ಮುಖಗಳ ಪಡೆ ಸಿದ್ದರಾಮಯ್ಯ ಅವರ…

The post ಕಾಂಗ್ರೆಸ್‌ ಸರ್ಕಾರಕ್ಕೆ 2.5 ವರ್ಷ: ಸಿದ್ದು ಸಂಪುಟ ಕಸರತ್ತು ! ನವೆಂಬ‌ರ್ ತಿಂಗಳ ಅಂತ್ಯಕ್ಕೆ ಮೇಜರ್ ಸಂಪುಟ ಸರ್ಜರಿ? appeared first on Good News 24x7.

]]>

ಬೆಂಗಳೂರು :- ಬಿಹಾರ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯುವ ಸಾಧ್ಯತೆ ನಿಚ್ಚಳವಾಗತೊಡಗಿದ್ದು, ನವೆಂಬರ್ ಮಾಸಾಂತ್ಯಕ್ಕೆ ಸುಮಾರು 15ಕ್ಕೂ ಹೆಚ್ಚು ಮಂದಿ ಹಾಲಿ ಸಚಿವರು ಮಾಜಿಗಳಾಗ ಲಿದ್ದಾರೆ. ಇದೇ ವೇಳೆ ಹೊಸ ಮುಖಗಳ ಪಡೆ ಸಿದ್ದರಾಮಯ್ಯ ಅವರ ಸಂಪುಟಕ್ಕೆ ಸೇರ್ಪಡೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಮೂಲ ನೀಡುತ್ತಿರುವ ಮಾಹಿತಿ ನಂಬುವುದಾದರೆ ಬಿಹಾರ ಚುನಾವಣೆ ಮುಗಿಯುತ್ತಿದ್ದಂತೆಯೇ ಅಂದರೆ ನವೆಂಬರ್ ಎರಡನೇ ವಾರದಲ್ಲಿ ರಾಜ್ಯ ನಾಯಕತ್ವ ಹೈಕಮಾಂಡ್‌ನೊಂದಿಗೆ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ಮಾತುಕತೆ ನಡೆಸಲಿದ್ದು, ಸಂಪುಟ ವಿಸ್ತರಣೆ ಕಸರತ್ತು ಆರಂಭಿಸಲಿದ್ದು, ಮಾಸಾಂ ತ್ಯದ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳಿ ಸಲಿದ್ದಾರೆ. ತನ್ಮೂಲಕ ಚಳಿಗಾಲದ ಅಧಿವೇಶ ನದಲ್ಲಿ ಹೊಸ ಮುಖಗಳು ಸದನದಲ್ಲಿ ಹುಟ್ಟಿಕೊಳ್ಳಲಿವೆ.

ಈಗ ಬದಲಾವಣೆ ಯಾಕಾಗಿ?

ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕರಿಂದಲೇ ತೀವ್ರ ಆಕ್ಷೇಪ, ಅಸಮಾಧಾನವಿದೆ. ಕೆಲ ಸಚಿವರ ವಿರುದ್ಧ ಆರೋಪಗಳು ಕೇಳಿಬಂದಿವೆ.

ಕೆಲ ಸಚಿವರ ಬಗ್ಗೆ ಹೈಕಮಾಂಡ್ ಮಟ್ಟಕ್ಕೂ ದೂರುಗಳು ಹೋಗಿದ್ದವೇಳೆ ಕೆಲ ಬದಲಾವಣೆ ಮಾಡುವಂತೆ ರಾಜ್ಯ ನಾಯಕತ್ವಕ್ಕೂ ಸೂಚನೆ ನೀಡಿತ್ತು. ಆದರೆ ದೂರು, ಅಸಮಾಧಾನ ವಿಷಯ ಮುಂದಿಟ್ಟುಕೊಂಡೇ ಸಂಪುಟದ ಸಚಿವರಿಗೆ ಕೊಕ್ ನೀಡುವ ಮನಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಇಲ್ಲ

ಹೀಗಾಗಿ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ನೆಪ, ಹೊಸಬರಿಗೆ ಅವಕಾಶದ ಕಾರಣ ನೀಡಿ ಹಲವರಿಗೆ ಸಂಪುಟದಿಂದ ಕೊಕ್ ಸಂಭವ

13ಕ್ಕೆ ಸಿಎಂ ಡಿನ್ನರ್ ಮೀಟಿಂಗ್! ಕುತೂಹಲ ಮೂಡಿಸಿದ ಸಿಎಂ ಸಿದ್ದರಾಮಯ್ಯ ನಡೆ

ಬೆಂಗಳೂರು: ಸಚಿವ ಸಂಪುಟ ಪುನರ್ ರಚನೆ ಊಹಾಪೋಹಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಆ .13 ರ ರಾತ್ರಿ ಕೂಟ ಏರ್ಪಡಿಸ್ಸಿದ್ದುಕುತೂಹಲ ಮೂಡಿಸಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಈ ಔತಣ ಕೂಟ ಆಯೋಜಿಸಿದ್ದು, ಈ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ.

The post ಕಾಂಗ್ರೆಸ್‌ ಸರ್ಕಾರಕ್ಕೆ 2.5 ವರ್ಷ: ಸಿದ್ದು ಸಂಪುಟ ಕಸರತ್ತು ! ನವೆಂಬ‌ರ್ ತಿಂಗಳ ಅಂತ್ಯಕ್ಕೆ ಮೇಜರ್ ಸಂಪುಟ ಸರ್ಜರಿ? appeared first on Good News 24x7.

]]>