ಹೊಸ ದಾಖಲೆಯೊಂದಿಗೆ ಉಳಿದವರು ಕಂಡಂತೆ ಸಿನಿಮಾಗೆ 12 ವರ್ಷ; ನೆನಪು ಹಂಚಿಕೊಂಡ ರಕ್ಷಿತ್ ಶೆಟ್ಟಿ

Ulidavaru Kandanathe: ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು. ರಕ್ಷಿತ್ ಶೆಟ್ಟಿಯ ನಿರ್ದೇಶನ ಪ್ರತಿಭೆಯನ್ನು ಭಾರತೀಯ ಚಿತ್ರರಂಗಕ್ಕೆ ತೋರಿಸಿದ ಸಿನಿಮಾ ಅದು. ‘ಉಳಿದವರು ಕಂಡಂತೆ’ ಬಿಡುಗಡೆ ಆಗಿ ಇಂದಿಗೆ ಬರೋಬ್ಬರಿ 12 ವರ್ಷ. ರಕ್ಷಿತ್ ಶೆಟ್ಟಿ, ‘ಉಳಿದವರು ಕಂಡಂತೆ’ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದು, ಸಿನಿಮಾವನ್ನು ನೆನಪು ಮಾಡಿಕೊಳ್ಳಲು ಏನೇನೋ ಹೊಸ ಕಾರಣಗಳು ಸಿಗುತ್ತಲೇ ಇರುತ್ತವೆ ಎಂದಿದ್ದಾರೆ. ಜೊತೆಗೆ ಒಂದು ಲಿಂಕ್ ಸಹ ಹಂಚಿಕೊಂಡಿದ್ದಾರೆ.

‘ಉಳಿದವರು ಕಂಡಂತೆ’ ರಕ್ಷಿತ್ ಶೆಟ್ಟಿಯ ಮೊದಲ ನಿರ್ದೇಶನದ ಸಿನಿಮಾ. ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು. ರಕ್ಷಿತ್ ಶೆಟ್ಟಿಯ ನಿರ್ದೇಶನ ಪ್ರತಿಭೆಯನ್ನು ಭಾರತೀಯ ಚಿತ್ರರಂಗಕ್ಕೆ ತೋರಿಸಿದ ಸಿನಿಮಾ ಅದು. ‘ಉಳಿದವರು ಕಂಡಂತೆ’ ಬಿಡುಗಡೆ ಆಗಿ ಬರೋಬ್ಬರಿ 12 ವರ್ಷ.
‘ಉಳಿದವರು ಕಂಡಂತೆ’ ಸಿನಿಮಾ 2014 ರ ಮಾರ್ಚ್ 28ಕ್ಕೆ ಬಿಡುಗಡೆ ಆಗಿತ್ತು. ಲೈವ್ ಸೌಂಡ್,ಭಿನ್ನ ರೀತಿಯ ಸ್ಟೋರಿ ಟೆಲ್ಲಿಂಗ್ ಸೇರಿದಂತೆ ಹಲವು ಪ್ರಯೋಗಗಳನ್ನು ರಕ್ಷಿತ್ ಶೆಟ್ಟಿ ಮಾಡಿದ್ದರು. ಬಹುತೇಕ ವಿಮರ್ಶಕರು ಸಿನಿಮಾ ಚೆನ್ನಾಗಿಲ್ಲ ಎಂದೇ ಬರೆದರು. ಪ್ರೇಕ್ಷಕರಿಗೂ ಸಹ ಸಿನಿಮಾ ಆರಂಭದಲ್ಲಿ ಅರ್ಥವಾಗಲಿಲ್ಲ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಎನಿಸಿಕೊಂಡಿತು. ಆದರೆ ಸಿನಿಮಾಕ್ಕೆ ಒಂದು ಕಲ್ಟ್ ಅಭಿಮಾನಿ ವರ್ಗ ಹುಟ್ಟಿಕೊಳ್ತು, ಸಿನಿಮಾವನ್ನು ಪೈರಸಿ ಡೌನ್​​ಲೋಡ್ ಮಾಡಿ ಹೆಚ್ಚು ಮಂದಿ ನೋಡಿದರು. ಹಾಗೆ ನೋಡುತ್ತಾ-ನೋಡುತ್ತಾ ಸಿನಿಮಾ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿತು. ಇದೀಗ 21ನೇ ಶತಮಾನದ ಈ ವರೆಗಿನ ಅತ್ಯುತ್ತಮ 25 ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಜನಪ್ರಿಯ ಸಿನಿಮಾ ಮ್ಯಾಗಜೈನ್ ‘ದಿ ಹಾಲಿವುಡ್ ರಿಪೋರ್ಟರ್’ 2000ರ ಶತಕದಲ್ಲಿ ಅಥವಾ 21ನೇ ಶತಮಾನದ ಈ ವರೆಗಿನ ಅತ್ಯುತ್ತಮ 25 ಭಾರತೀಯ ಸಿನಿಮಾಗಳ ಪಟ್ಟಿ ಪ್ರಕಟಿಸಿದ್ದು, ಆ ಪಟ್ಟಿಯಲ್ಲಿ ‘ಉಳಿದವರು ಕಂಡಂತೆ’ ಸಿನಿಮಾ ಸ್ಥಾನ ಪಡೆದುಕೊಂಡಿದೆ. ‘ಲಗಾನ್’, ‘ಗ್ಯಾಂಗ್ಸ್ ಆಫ್ ವಸೇಪುರ್’ ಸೇರಿದಂತೆ ಹಲವು ಅತ್ಯುತ್ತಮ ಸಿನಿಮಾಗಳಿರುವ ಪಟ್ಟಿಯಲ್ಲಿ ‘ಉಳಿದವರು ಕಂಡಂತೆ’ ಸಹ ಸ್ಥಾನ ಪಡೆದುಕೊಂಡಿರುವುದು ಮಾತ್ರವೇ ಅಲ್ಲದೆ, ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡ ಸಿನಿಮಾ ಇದಾಗಿದೆ.

ಈ ಪಟ್ಟಿಯಲ್ಲಿ ಮಲಯಾಳಂನ ‘ಕುಂಬಳಂಗಿ ನೈಟ್ಸ್’, ‘ಮಹೇಶಿಂಟೆ ಪ್ರತಿಕಾರಂ’, ‘ಅಂಗಮಲೈ ಡೈರೀಸ್’, ‘ದೃಶ್ಯಂ’, ‘ದಿ ಗ್ರೇಟ್ ಇಂಡಿಯನ್ ಕಿಚನ್’ ಇನ್ನೂ ಹಲವು ಸಿನಿಮಾಗಳಿವೆ. ಹಿಂದಿಯ ‘ಲಗಾನ್’, ‘ಗ್ಯಾಂಗ್ಸ್ ಆಫ್ ವಸೇಪುರ್’, ‘ಚಕ್ ದೇ ಇಂಡಿಯಾ’, ‘ದಿಲ್ ಚಾಹ್ತಾ ಹೈ’, ‘ಓಂಕಾರ’ ಇನ್ನೂ ಹಲವು ಸಿನಿಮಾಗಳಿವೆ. ತಮಿಳಿನ ‘ಅಲೈಪಾಯುತೆ’, ‘ಅನ್ಬೆ ಶಿವಂ’, ‘ಆಡುಕುಳಂ’, ‘ಪರಿಯೇರುಂ ಪೆರುಮಾಲ್’ ಇನ್ನೂ ಹಲವು ಸಿನಿಮಾಗಳಿವೆ. ಮರಾಠಿಯ ‘ಕೋರ್ಟ್’, ‘ಸೈರಾಟ್’ ಇನ್ನೂ ಕೆಲ ಸಿನಿಮಾಗಳಿವೆ. ತೆಲುಗಿನ ‘ಈಗ’ ಇದೆ. ಕನ್ನಡದ ‘ಉಳಿದವರು ಕಂಡಂತೆ’ ಸಿನಿಮಾ ಇದೆ. ‘ಉಳಿದವರು ಕಂಡಂತೆ’ ಹೊರತಾಗಿ ಇನ್ಯಾವ ಕನ್ನಡ ಸಿನಿಮಾ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ರಕ್ಷಿತ್ ಶೆಟ್ಟಿ ಅವರು ‘ಉಳಿದವರು ಕಂಡಂತೆ’ ಸಿನಿಮಾದ ಸ್ಪಿನ್ ಆಫ್ ಆಗಿರುವ ‘ರಿಚರ್ಡ್ ಆಂಟೊನಿ’ ಸಿನಿಮಾ ಘೋಷಿಸಿದ್ದು, ಸಿನಿಮಾ ಘೋಷಿಸಿಯೇ ವರ್ಷಗಳು ಕಳೆದಿವೆ. ಇತ್ತೀಚೆಗಷ್ಟೆ ಮಾಧ್ಯಮಗಳೊಟ್ಟಿಗೆ ಮಾತನಾಡಿ, ‘ರಿಚರ್ಡ್ ಆಂಟೊನಿ’ ಸಿನಿಮಾದ ಚಿತ್ರೀಕರಣ ಶುರು ಮಾಡಿರುವುದಾಗಿ ಹೇಳಿದ್ದರು. ಮುಂದೇನಾಗುತ್ತದೆ ನೋಡಬೇಕಿದೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!