ಕೇಂದ್ರ ಸರ್ಕಾರವು ಜನನ ಮತ್ತು ಮ*ರಣ ನೋಂದಣಿ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದ್ದು, ಹೊಸ ತಿದ್ದುಪಡಿ ಕಾಯ್ದೆಯು ಇದೇ ಅಕ್ಟೋಬರ್ 1ರಿಂದ ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬರಲಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದ್ದ ‘ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ-2026’ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈಗಾಗಲೇ ಅಂಕಿತ ಹಾಕಿದ್ದಾರೆ.
ತಡವಾದ ನೋಂದಣಿಗೆ ಕೋರ್ಟ್ ವಿಚಾರಣೆ ಕಡ್ಡಾಯ
ಹೊಸ ಕಾಯ್ದೆಯಡಿ ಜನನ ಅಥವಾ ಮ*ರಣ ನೋಂದಣಿಯನ್ನು ವಿಳಂಬವಾಗಿ ಮಾಡಿಸುವ ನಿಯಮಗಳನ್ನು ಅತ್ಯಂತ ಕಠಿಣಗೊಳಿಸಲಾಗಿದೆ. ಭಾರತದ ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ ಕುಮಾರ್ ನಾರಾಯಣ್ ಅವರು ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, 2026ರ ಅಕ್ಟೋಬರ್ 1ರ ನಂತರ ಅನ್ವಯವಾಗುವ ಪ್ರಮುಖ ಬದಲಾವಣೆಯನ್ನು ಸ್ಪಷ್ಟಪಡಿಸಿದ್ದಾರೆ. ಘಟನೆ ನಡೆದ ಎರಡು ವರ್ಷಗಳ ನಂತರ ಸಲ್ಲಿಸಲಾಗುವ ಯಾವುದೇ ನೋಂದಣಿ ಅರ್ಜಿಗಳ ವಿಚಾರಣೆಯನ್ನು ಇನ್ಮುಂದೆ ನ್ಯಾಯಾಲಯದ (ಕೋರ್ಟ್) ಮೂಲಕವೇ ನಡೆಸುವುದು ಕಡ್ಡಾಯವಾಗಿದೆ.




