ಮಧ್ಯಪ್ರದೇಶ :- 45 ವರ್ಷಗಳಿಂದ ಬಗೆಹರಿಯದೆ ಉಳಿದಿದ್ದ ಕಳ್ಳತನ ಪ್ರಕರಣಕ್ಕೆ ಕೊನೆಗೂ ಅಂತ್ಯ ಸಿಕ್ಕಿದೆ, ಅಂತ್ಯ ಸಿಕ್ಕಿದ್ದು ವಿಧಿ -ವಿಜ್ಞಾನ, ಅಥವಾ ಸುಳಿವುಗಳಿಂದಲ್ಲ, ಬದಲಾಗಿ ಸಾಮಾಜಿಕ ಮಾಧ್ಯಮ ಪ್ರವೃತ್ತಿ ಮತ್ತು ಕೇವಲ ಮೋಜಿಗಾಗಿ ಬಳಸಲಾದ AI ಉಪಕರಣದಿಂದ!
ಮಧ್ಯಪ್ರದೇಶದ ಉಜ್ಜಯಿನಿಯ ಆಭರಣ ವ್ಯಾಪಾರಿಯ ಅಂಗಡಿಯಿಂದ 1981ರಲ್ಲಿ ನಡೆದ ಚಿನ್ನದ ಸರ ಕಳ್ಳತನ ಪ್ರಕರಣವೊಂದು ಬರೋಬ್ಬರಿ 45 ವರ್ಷಗಳ ಬಳಿಕ ಮತ್ತೆ ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ಚಿನ್ನದ ಸರ ಕಳ್ಳತನದ ಆರೋಪ ಎದುರಿಸಿದ್ದ ಮಹಿಳೆ ಹೆಸರು ಮತ್ತು ಗುರುತು ಬದಲಿಸಿಕೊಂಡು ಹಲವು ದಶಕಗಳ ಕಾಲ ಪೊಲೀಸರಿಗೆ ಸಿಗದೆ ಜೀವನ ನಡೆಸಿದ್ದಳು.
ಆದರೆ 2026ರಲ್ಲಿ ವೈರಲ್ ಆದ 80ರ ದಶಕದ AI ಫೋಟೋ ಟ್ರೆಂಡ್ ಆಕೆಯನ್ನೇ ಮತ್ತೆ ಪೊಲೀಸರ ಮುಂದೆ ತರುವಂತಾಗಿದೆ! ವೃದ್ಧೆಯಾಗಿರುವ ಮಹಿಳೆ ತನ್ನ 1980ರ ದಶಕದ ಲುಕ್ನ AI ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು, ಆ ಫೋಟೋವನ್ನು ಕಂಡ ಜ್ಯುವೆಲ್ಲರಿ ಅಂಗಡಿಯ ಮಾಲೀಕರು, 45 ವರ್ಷಗಳ ಹಿಂದೆ ಕಳ್ಳತನ ಮಾಡಿದ್ದ ಯುವತಿಯ ಮುಖವನ್ನು ಗುರುತಿಸಿದ್ದಾರೆ.
ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, 45 ವರ್ಷಗಳ ಹಿಂದಿನ ಪ್ರಕರಣವನ್ನು ಮರು ತೆರೆದು ತನಿಖೆ ನಡೆಸಿದ್ದಾರೆ. ಮಹಿಳೆಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಕಳ್ಳತನದ ಬಗ್ಗೆ ಮಹಿಳೆ ತಪ್ಪೊಪ್ಪಿಕೊಂಡ್ಡಿದ್ದಾಳೆ.



